POLICE BHAVAN KALABURAGI

POLICE BHAVAN KALABURAGI

23 November 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 22-11-2017 ರಂದು ಶಿರವಾಳ ಗ್ರಾಮದ ಶ್ರೀ ಅಂಬೀಗರ  ಚೌಡಯ್ಯನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿರವಾಳ ಗ್ರಾಮದ ಅಂಬಿಗರ ಚೌಡಯ್ಯನ ಗುಡಿಯ ಹತ್ತಿರ ಸ್ವಲ್ಪ ದೂರು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಣ್ಣಾರಾಯ ತಂದೆ ಶಂಕರ ಅಂಜುಟಗಿ ಸಾ|| ಶಿರವಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 960/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ :ದಿನಾಂಕ 22-11-2017 ರಂದು ಸೇಡಂ ಪಟ್ಟಣದ ಉಡಗಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಪಿ.ಎಸ್.ಐ. ಸೇಡಂ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ಮತ್ತು ಅಂಗ ಶೋಧನೆ ಮಾಡಲಾಗಿ 1) ಚಂದರ್ ತಂದೆ ಕೃಷ್ಣಜೀ ಮರಾಠ 2) ಭಾಗಣ್ಣ ತಂದೆ ಚಂದ್ರರೆಡ್ಡಿ ಬೆನಕನಳ್ಳಿ, ಸಾ: ಇಬ್ಬರು ಅಡಕಿ ಗ್ರಾಮ ತಾ: ಸೇಡಂ ಅಂತಾ ತಿಳಿಸಿದ್ದು ಆರೋಪಿತರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 6020/- ರೂ, ಮಟಕಾ ಚೀಟಿ ಮತ್ತು ಪೆನ್ನ ವಶಪಡಿಸಿಕೊಂಡು ಸದರಿಯವರೊಂದಿಗೆ ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ :ದಿನಾಂಕ 22-11-2017 ರಂದು ಸೇಡಂ ಪಟ್ಟಣದ ಚಿಂಚೋಳಿ  ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಪಿ.ಎಸ್.ಐ. ಸೇಡಂ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಅವರ ಹೆಸರು ಮತ್ತು ಅಂಗ ಶೋಧನೆ ಮಾಡಲಾಗಿ ಸಿದ್ದರಾಮ ತಂದೆ ಶ್ಯಾಮರಾಯ ಪಪ್ಪಾಣಿ  ಸಾ : ಯಡ್ಡಳ್ಳಿ ತಾ : ಸೇಡಂ. ಅಂತಾ ತಿಳಿಸಿದ್ದು ಆರೋಪಿತನಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4000/- ರೂ, ಮಟಕಾ ಚೀಟಿ ಮತ್ತು ಪೆನ್ನ ವಶಪಡಿಸಿಕೊಂಡು ಸದರಿಯವರೊಂದಿಗೆ ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 22-11-2017 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಧನಗರಗಲ್ಲಿ ಬಡಾವಣೆಯ ಲೌ ಚೌಕ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ನೋಡಲು ಲೌ ಚೌಕ ಪಕ್ಕದಲ್ಲಿರುವ ಒಂದು ಮನೆ ಮುಂದೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟು ಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯ ದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಸೋಮಶೇಖರ ತಂದೆ ಹಣಮಂತಪ್ಪ ವಾಗದ್ದರಗಿ ಸಾ: ಲೌ ಚೌಕ ಹತ್ತಿರ ಧನಗರಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1710/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 180 ಎಮ್.ಎಲ್.ದ 8 ಓಲ್ಡ ಟವರಿನ್(ಓಟಿ) ವಿಸ್ಕಿ ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 68.ರೂ 56 ಪೈಸೆ. ಒಟ್ಟು 548 ರೂ.48 ಪೈಸೆ. ಮತ್ತು ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 80 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 2,250/-.ರೂ 40 ಪೈಸೆ. ಹೀಗೆ ಒಟ್ಟು 2798/- ರೂ 88 ಪೈಸೆ ಕಿಮ್ಮತ್ತಿನ ಮಾಲು ಮತ್ತು ನಗದು ಹಣ 1710/- ರೂ ಇದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಶಿವಪ್ಪ ತಂದೆ ಹುಚ್ಚಪ್ಪ ಆಲಮೇಲಕರ್ ಸಾ|| ಗೌರ (ಬಿ) ತಾ|| ಅಫಜಲಪೂರ ರವರು ಮಲ್ಲಾಬಾದ ಗ್ರಾಮದಲ್ಲಿ ತಮ್ಮ ತಾಯಿಯ ತಮ್ಮನಾದ ರಮೇಶ ತಂದೆ ಭೀಮಶಾ ದೋಡ್ಡಮನಿ ಎಂಬಾತನಿದ್ದು, ಅವನು ವಕೀಲ ವೃತ್ತಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 22-11-2017 ರಂದು ಬೆಳಿಗ್ಗೆ ನಾನು ನನ್ನ ಹೊಸ ಮೋಟರ ಸೈಕಲ ಹೀರೊ ಸ್ಪೇಂಡರ್ ನೇದ್ದರ ಮೇಲೆ ನನ್ನ ವಯಕ್ತಿಕ ಕೆಲಸದ ಸಲುವಾಗಿ ಕಲಬುರಗಿಗೆ ಹೋಗಿದ್ದೆನು. ಕಲಬುರಗಿಯಲ್ಲಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ಮದ್ಯಾಹ್ನ ಕಲಬುರಗಿ ಅಫಜಲಪೂರ ರೋಡಿನ ಮೇಲೆ ವರ್ದಮಾನ ರವರ ಹೊಲದ ಹತ್ತಿರದಿಂದ ಹೋಗುತ್ತಿದ್ದೆನು. ಅದೆ ಸಮಯಕ್ಕೆ ನನಗಿಂತ ಮುಂಚೆ ಎರಡು ಟ್ರೈಲಿಗಳಲ್ಲಿ ಕಬ್ಬು ತುಂಬಿದ ಟ್ಯಾಕ್ಟರ ಅಫಜಲಪೂರದ ಕಡೆಗೆ ಹೊರಟಿತ್ತು. ಆಗ ಕಲಬುರಗಿ ಕಡೆಯಿಂದ ಅಫಜಲಪೂರದ ಕಡೆಗೆ ಒಂದು ಕಾರ ನಂ ಕೆಎ-32 ಎಮ್-7903 ನೇದ್ದು ನನ್ನ ಮೋಟರ ಸೈಕಲ ದಾಟಿ ಸ್ವಲ್ಪ ಮುಂದೆ ಹೋದಾಗ, ಕಬ್ಬು ತುಂಬಿಕೊಂಡು ಹೊರಟಿದ್ದ ಟ್ಯಾಕ್ಟರ ಚಾಲಕನು ರೋಡಿನ ಮದ್ಯದಿಂದ ತನ್ನ ಟ್ಯಾಕ್ಟರ ನಡೆಸಿಕೊಂಡು ಹೊರಟಿದ್ದು ಒಮ್ಮೆಲೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿದಾಗ ಟ್ಯಾಕ್ಟರ ಹಿಂದೆ ಹೊರಟಿದ್ದ ಕಾರು ಹೋಗಿ ಟ್ಯಾಕ್ಟರ ಹಿಂದಿನ ಟ್ರೈಲಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿತು. ಆಗ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರ ಅಫಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊದನು. ನಂತರ ನಾನು ಕಾರಿನಲ್ಲಿ ಇದ್ದವರನ್ನು ನೋಡಲು ನನ್ನ ಸೋದರಮಾವನಾದ ರಮೇಶ ತಂದೆ ಭೀಮಶಾ ದೋಡ್ದಮನಿ ಮು|| ಮಲ್ಲಾಬಾದ ಮತ್ತು ಕಲಬುರಗಿಯ ವಕೀಲರಾದ ಶ್ರೀರಂಗಾ ಖೇಡಗಿಕರ್ ಹಾಗೂ ಕಾರಿನ ಚಾಲಕ ಮತ್ತು ಇನ್ನು ಒಬ್ಬ ವ್ಯೆಕ್ತಿ ಇದ್ದು, ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶ್ರೀರಂಗಾ ಎಂಬುವವರ ಹಣೆಯ ಮದ್ಯಭಾಗದಲ್ಲಿ ಭಾರಿ ರಕ್ತಗಾಯವಾಗಿ ಕುತ್ತಿಗೆ ಕಾರಿನ ಮುಂದಿನ ಡ್ಯಾಸ ಬೋರ್ಡ ಮತ್ತು ಸೀಟಗಳ ಮದ್ಯದಲ್ಲಿ ಸಿಕ್ಕು ಸ್ಥಳದಲ್ಲಿಯೆ ಮೃತಪಟ್ಟಿದ್ದನು. ನನ್ನ ಸೋದರಮಾವ ಶ್ರೀರಂಗಾ ರವರ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ಅವನ ತಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯವಾಗಿ ಎದೆಗೆ ಒಳಪೆಟ್ಟುಗಳಾಗಿ ಅವರು ಸಹ ಸ್ಥಳದಲ್ಲಿ ಕಾರಿನಲ್ಲಿಯೆ ಮೃತಪಟ್ಟಿದ್ದನು. ಕಾರಿನ ಚಾಲಕನಿಗೂ ಮತ್ತು ಚಾಲಕನ ಹಿಂಬಾಗದಲ್ಲಿ ಕುಳಿತಿದ್ದವನಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದಂತೆ ಕಂಡು ಬಂದಿರುತ್ತದೆ. ಅಷ್ಟರಲ್ಲಿ ರೋಡಿಗೆ ಹೋಗುವವರು ಯಾರೊ ಒಬ್ಬರು ಅಂಬ್ಯುಲೆನ್ಸ ವಾಹನಕ್ಕೆ ಪೋನ್ ಮಾಡಿದ್ದರಿಂದ ಸ್ಥಳಕ್ಕೆ ಅಂಬ್ಯೂಲೆನ್ಸ ವಾಹನದವರು ಬಂದಾಗ, ನಾನು ಮತ್ತು ಅಂಬ್ಯೂಲೆನ್ಸದವರು ಗಾಯಹೊಂದಿದ ಇಬ್ಬರಿಗೂ ಅಂಬ್ಯೂಲೆನ್ಸದಲ್ಲಿ ಹಾಕಿ ಚಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು ದಿನಾಂಕ 22-11-2017 ರಂದು ಮದ್ಯಾಹ್ನ ಕಲಬುರಗಿ ಅಫಜಲಪೂರ ರೋಡಿನ ಮೇಲೆ ವರ್ದಮಾನ ರವರ ಹೊಲದ ಹತ್ತಿರ ಟ್ಯಾಕ್ಟರ ನಂ ಕೆಎ-32 ಟಿಎ-3503 ನೇದ್ದರ ಚಾಲಕನು ರೋಡಿನ ಮದ್ಯದಲ್ಲಿ ನಡೆಸಿಕೊಂಡು ಹೊರಟು, ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಕಾರು ಟ್ಯಾಕ್ಟರ ಹಿಂಬಾಗದ ಎರಡನೆ ಟ್ರೈಲಿಗೆ ಹಿಂದೆ ಜೋರಾಗಿ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿರುತ್ತದೆ. ಈ ಅಫಘಾತಕ್ಕೆಕಾರಣನಾದ ಟ್ಯಾಕ್ಟರ ಚಾಲಕನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರೂಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡ ಆರೋಪಿತರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ಶ್ರೀ ರುದ್ರಪ್ಪ ಹೆಚ್.ಸಿ- 545 ಅಫಜಲಪೂರ ಠಾಣೆ  ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರು ನಮ್ಮ ಠಾಣೆಯ ಪ್ರಕರಣಗಳಲ್ಲಿ ಹೊರಡಿಸುವ ವಾರೆಂಟಗಳನ್ನು ಜಾರಿ ಮಾಡಿ, ಆರೋಪಿತರನ್ನು / ಸಾಕ್ಷೀದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು  ಅಫಜಲಪೂರ ಠಾಣೆಯ ಗುನ್ನೆ ನಂ 221/2016 ಕಲಂ 379 ಐಪಿಸಿ ಸಿಸಿ ನಂ 225/17 ನೇದ್ದರಲ್ಲಿ ಆರೋಪಿತರಾದ 1) ಗಂಗಾಧರ ತಂದೆ ಭೀಮಶಾ ಭಜಂತ್ರಿ ಸಾ|| ದುಧನಿ ಹಾ|| || ಅಫಜಲಪೂರ 2) ಶಿವರಾಜ @ ಸುರೇಶ ತಂದೆ ರೇವಣಸಿದ್ದಪ್ಪ ಹಿರೆಕುರುಬರ ಸಾ|| ನಾಗೂರ  ಹಾ:ವ ಅಫಜಲಪೂರ ಇವರು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ,.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರದಲ್ಲಿ ಹಾಜರಾಗದ ಕಾರಣ ಸದರಿ ಆರೋಪಿತರನ್ನು ಹಾಜರುಪಡಿಸುವಂತೆ ಆದೇಶಿಸಿ ದಿನಾಂಕ 24-04-2017, 27-05-2017, 23-06-2017, 26-07-2017,13-09-2017, 15-11-2017 ರಂದು ದಸ್ತಗಿರಿ ವಾರೆಂಟ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ನಾನು ಆರೋಪಿತರ ಸ್ವ ಗ್ರಾಮಕ್ಕೆ ಹಾಗೂ ಆರೋಪಿತರ ಸಂಭಂದಿಕರ ಗ್ರಾಮಗಳಿಗೆ ಹೋಗಿ ಆರೋಪಿತರ ಮನೆಗೆ ಹೋಗಿ ಆರೋಪಿತರ ಬಗ್ಗೆ ವಿಚಾರಿಸಿದ್ದು, ಆರೋಪಿತರು ತಲೆ ಮರೆಸಿಕೊಂಡಿದ್ದು ತಿಳಿದು ಬಂದಿರುತ್ತದೆ. ನಂತರ ಗ್ರಾಮದ ಬಾತ್ಮಿದಾರರಿಗೂ ವಿಚಾರಿಸಿದ್ದು, ಆರೋಪಿತರು ಎಲ್ಲಿ ಇರುತ್ತಾರೊ ಎನೊ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಸದರಿ ಆರೋಪಿತರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜಾ ಬಂಧಿ ಮೃತಪಟ್ಟ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 22-11-2017 ರಂದು ಕೇಂದ್ರ ಕಾರಾಗೃಹದ ಸಜಾ ಬಂಧಿ ಸಂಖ್ಯೆ 108 ಬೀರಪ್ಪ ತಂದೆ ಹಣಮಂತಪ್ಪ ವಃ 27 ವರ್ಷ ಜಾಃ ಕುರುಬ ಸಾಃ ಅಲಬನೂರ ತಾಃ ಸಿಂಧನೂರ ಜಿಃ ರಾಯಚೂರ ಈತನು ಗೌರವಾನ್ವಿತ ಅಪರ ಜಿಲ್ಲಾ ಸತ್ರ ನ್ಯಾಯಾಲಯ ರಾಯಚೂರ ಇವರ ಸ್ಪೇಷಲ್.ಸಿ ಪೋಸ್ಕೋ ನಂ 07/2015( ಸಿಂದನೂರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ) ರಲ್ಲಿ ದಿನಾಂಕ 01/06/2017 ರಂದು ಸಾದಾ ಶಿಕ್ಷೆ ಹಾಗೂ ದಂಡ ರೂ 11000/-ರೂ ದಂಡ ಕಟ್ಟಲು ತಪ್ಪಿದಲ್ಲಿ 01 ವರ್ಷ 05 ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂದಿಯು ರಾಯಚೂರ ಜಿಲ್ಲಾ ಕಾರಾಗೃಹದಿಂದ ವರ್ಗಾವಣೆಯಾಗಿ ದಿನಾಂಕ 28/06/2017 ರಂದು ಈ ಸಂಸ್ಥೆಯಲ್ಲಿ ದಾಖಲಾಗಿ ಶಿಕ್ಷೆ ಅನುಭವಿಸುತ್ತಿದ್ದನು. ಸದರಿ ಬಂದಿಯು ದಿನಾಂಕ 22/11/2017 ರಂದು ಕೋಠಾ ಸಃ 06 ರಲ್ಲಿ ಬೆಳಗಿನ ಜಾವ 5.30ರ ಸಮಯದಲ್ಲಿ ತನಗೆ ತೀವ್ರ ದೆ ನೊವಾಗುತ್ತಿದೆ ಅಂತಾ ಸಹ ಬಂದಿಗಳಿಗೆ ತಿಳಿಸಿದ ಮೇರೆಗೆ ಪಹರೆ ಸಿಬ್ಬಂದಿಯವರು ಕರ್ತವ್ಯ ನಿರತ ಜೈಲರರವರಿಗೆ ವಾಕಿಟಾಕಿ ಮೂಲಕ  ಕುರಿತು ವರದಿ ಮಾಡಿರುತ್ತಾರೆ. ಸದರಿ ವಿಷಯವನ್ನು ವಾಕಿಟಾಕಿ ಮೂಲಕ ಆಲಿಸಿದ ಮುಖ್ಯ ಅಧಿಕ್ಷಕರು ಸದರಿ ಬಂದಿಗೆ ತಕ್ಷಣವೇ ಹೊರ ಆಸ್ಪತ್ರೆಗೆ ಕಳುಹಿಸುವಂತೆ ಜೈಲರ ರವರಿಗೆ ಆದೇಶಿದ ಮೇರೆಗೆ ತಕ್ಷಣವೇ ಹೆಚ್ಚಿನ ಉಪಚಾರ ಕುರಿತುಜೈಲು ಸಿಬ್ಬಂದಿ ಬೆಂಗಾವಲು ಮೂಲಕ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ. ಸದರಿ ಬಂದಿಗೆ ತಪಾಸಣೆ ಮಾಡಿರುವ ಜಯದೇವ ಆಸ್ಪತ್ರೆಯ ವೈದ್ಯಾಧಿಕಾರಿಗಳು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಸದರಿ ಬಂದಿಯು ಚಿಕಿತ್ಸೆಗೆ ಸ್ಪಂದಿಸದೆ ಸಮಯ 8.30 ಕ್ಕೆ ಮೃತಪಟ್ಟಿರುತ್ತಾನೆಂದು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಎಂದು ಬೆಂಗಾವಲು ಸಿಬ್ಬಂದಿಯವರು ಸಮಯ 8.35 ಕ್ಕೆ ಈ ಸಂಸ್ಥೆಯ ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಸಿಂದನೂರ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಶವ ತನಿಖೆಯನ್ನು ವಿಡಿಯೋ ಚಿತ್ರಿಕರಣದೊಂದಿಗೆ ಗೌರವಾನ್ವಿತ 2 ನೇ ಅಪರ ಜೆಎಮ್ ಎಫ್ ಸಿ ನ್ಯಾಯಾಲಯ ಕಲಬುರಗಿ ರವರ ಸಮ್ಮುಖದಲ್ಲಿ ಮಾಡಿಸಲು ಹಾಗೂ ಮೆಜೆಸ್ಟ್ರೀಯಲ್ ತನಿಖೆಯನ್ನು ಮಾಡಿಸಿಕೊಡಲು ಸಹ ಕೋರಿದೆ. ಬಂದಿಯ ಹೆಸರಿನ ವಿವರಣಾ ಪಟ್ಟಿ ಈ ಪತ್ರದೊಂದಿಗೆ ಲಗತ್ತಿಸಿದೆ.  ಘನ ಸರ್ಕಾರದ ಪತ್ರ ಸಂಖ್ಯೆ 4ಡಿ/249/ಪಿಆರ್.ಎ/2009 ದಿನಾಂಕ: 09-01-2009 ರ ಹಾಗೂ ಡೈರೆಕ್ಟರ ಜನರಲ್ ಮತ್ತು ಇನ್ಸಪೆಕ್ಟರ ಜನರಲ್ ಆಫ್ ಪೊಲೀಸ ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಕಾ ಮತ್ತು ಸು-ಮಿಶ್ರ/01/2008 ದಿನಾಂಕ:25-09-2009 ರಂತೆ  ಸದರಿ ಮೃತ ಬಂದಿಗೆ ಸಂಬಂಧಿಸಿದಂತೆ ವರದಿಗಳಾದ ಶವಪಂಚನಾಮೆ, ಮರಣೋತ್ತರ ಪರೀಕ್ಷೆ ವರದಿ, ಮರಣೊತ್ತರ ಪರೀಕ್ಷೆ ಸಂಧರ್ಭದಲ್ಲಿ ಚಿತ್ರಿಕರಿಸಿದ ವಿಡಿಯೋ, ಚಿತ್ರಿಕರಣದ ಸಿಡಿ ಯನ್ನು  ಹಾಗೂ ಮ್ಯಾಜೆಸ್ಟ್ರೀಯಲ್ ವಿಚಾರಣಾ ವರದಿಯಗಳನ್ನು ನೇರವಾಗಿ ಗೌರವಾನ್ವಿತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರಿಗೆ ಒಪ್ಪಿಸಿ ಸದರಿ ಮಾಹಿತಿಯನ್ನು ಈ ಕಛೇರಿಗೆ ಕಳುಹಿಸಿಕೊಡಲು ಕೋರಿದೆ ಅಂತಾ ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 November 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ  ಪ್ರಕಾಶ ತಂದೆ ದಗಡು ಮೇನಕುದುಳೆ ಸಾ; ವೈರಾಗ  ತಾ;ಬಾರ್ಸಿ ಜಿ;ಸೋಲಾಪೂರ ಮಹಾರಾಷ್ಟ್ರ  ಮ್ಮ ಗ್ರಾಮದ ನಮ್ಮ ಸಂಭಂದಿಕರಾದ ಈಶ್ವರ ತಂದೆ ಶಾಂತಪ್ಪಾ  ಶೀಲವಂತ ಇವರ ಮದುವೆ ಕಾರ್ಯಕ್ರಮವು ಕಲಬುರಗಿ ಜಿಲ್ಲೆ ರಟಕಲ್ ಗುಡ್ಡಾದಲ್ಲಿ ಇರುವದರಿಂದ ಮದುವೆಗಾಗಿ ಇಂದು ದಿನಾಂಕ. 21-11-2017 ರಂದು ಬೆಳಗಿನ ಜಾವಾದಲ್ಲಿ ನಮ್ಮ ಗ್ರಾಮದಿಂದ ಒಂದು ಕ್ರೋಜರ ನಂ.ಎಂ.ಹೆಚ. 45 ಎನ್-7878 ನೆದ್ದರಲ್ಲಿ ನಾನು ಮತ್ತು ನಮ್ಮ ಗ್ರಾಮದ 2) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ 3)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ 4) ಉಜ್ವಲ ತಂದೆ ಭೀಮಾಶಂಕರ ಶೀಲವಂತ 5) ಆನಂದ  ತಂದೆ ಬಾಬುರಾವ ಶೀಲವಂತ 6) ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ 7) ರೋಹಿತ ತಂದೆ ನೀಲಕಂಠ ಶೀಲವಂತ 8) ನಾಗರಾಜ ತಂದೆ ಮನಗೋಳಪ್ಪಾ ಶೀಲವಂತ 9) ಮಹಾಂತೇಶ ತಂದೆ ಗಂಗಾದರ ಶೀಲವಂತ 10) ಸಿದ್ದೇಶ್ವರ ತಂದೆ ಶರಣಪ್ಪಾ ಣಳಗೆ 11) ಗಣೇಶ ತಂದೆ ಶಿವರಾಜ ಶೀಲವಂತ ಸಾ;ಎಲ್ಲರೂ ವೈರಾಗ ತಾ;ಬಾರ್ಸಿ ಜಿ;ಸೋಲಾಪೂರ  ಎಲ್ಲರೂ ಕ್ರೋಜರದಲ್ಲಿ ಕುಳಿತಿದ್ದು ಸದರಿ ನಾವು ಕುಳಿತು ಕ್ರೋಜರನ್ನು ಬಾಲಾಜಿ ತಂದೆ ರಾಮ ಕಾಗೆಇತನು ನಡೆಯಿಸುತಿದ್ದನು, ನಾನು ಮತ್ತು ಸಿದ್ದೇಶ್ವರ ಡ್ರೈವರ ಪಕ್ಕದ ಶೀಟನಲ್ಲಿ ಕುಳಿತಿದ್ದು ಉಳಿದವರು ಹಿಂದಿನ ಶೀಟಗಳ ಮೇಲೆ ಕುಳಿತಿದ್ದರು  ಹಾಗೂ ನಮ್ಮಂತೆ ಇನ್ನೋಂದು ಕ್ರೋಜರದಲ್ಲಿ ಕೇವಲ ಹೆಣ್ಣು ಮಕ್ಕಳು  ಇಬ್ಬರು ಗಂಡಸು ಮಕ್ಕಳಿದ್ದರು  ರಟಕಲ್ ಹೋಗುವಾಗ ಮುಂಜಾನೆ  8-30 ಗಂಟೆಯ ಸುಮಾರಿಗೆ  ಕಲಬುರಗಿ ನಂತರ ಅವರಾಧ (ಬಿ) ಗ್ರಾಮದ ದಾಟಿ ಮುಂದೆ 2 ಕೀ ಮೀ ಅಂತರದಲ್ಲಿ ನಮ್ಮ ಕ್ರೋಜರ ರೋಡಿನ ಎಡಬದಿಗೆ ಹೋಗುತ್ತಿದ್ದಾಗ  ಅದೇ ವೇಳೆ ಗೆ ಹುಮನಾಬಾದ ಕಡೆಯಿಂದ ಒಂದು ಟ್ಯಾಂಕರ ಲಾರಿ ನೆದ್ದರ ಚಾಲಕನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀವೇಗ ಮತ್ತು  ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬರುತ್ತಾ ಒಂದು ವಾಹನ್ನಕ್ಕೆ ಓವರ ಟೇಕ ಮಾಡಿ ಬಂದು ನಮ್ಮ ಕ್ರೋಜರಕ್ಕೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನಮ್ಮ  ಕ್ರೋಜರ ಟಾಪ ಕಿತ್ತು ಹೋಗಿದ್ದು  ಸದರಿ ನಮ್ಮ ಕ್ರೋಜರದಲ್ಲಿ ಕುಳಿತಿದ್ದ ನನಗೆ ಹಣೆಯ ಮೇಲ್ಭಾಗದಲ್ಲಿ ರಕ್ತಗಾಯ , ಬಲಗಾಲು ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ. 2) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ ಇತನಿಗೆ ಮುಖ ಪೂತಿ ಜಜ್ಜದಿದ್ದು ತಲೆಯ ಬಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು  3)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ  ಇತನಿಗೆ ಮುಖ ಪೂರ್ಜಿ ಜಜ್ಜಿದ್ದು ತಲೆಭಾರಿ ಪೆಟ್ಟಾಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದನು 4) ಉಜ್ವಲ ತಂದೆ ಭೀಮಾಶಂಕರ ಶೀಲವಂತ  ಇತನಿಗೆ ತಲೆಗೆ ಭಾರಿ ಪೆಟ್ಟಾಗಿ ಮುಖಕ್ಕೆ ಭಾರಿಗಾಯವಾಗಿರುತ್ತದೆ  ಇತನು ಕೂಡಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು   5) ಆನಂದ  ತಂದೆ ಬಾಬುರಾವ ಶೀಲವಂತ  ಇತನಿಗೆ ತಲೆಗೆ ಮುಖಕ್ಕೆ ಭಾರಿ ಪೆಟ್ಟಾಗಿ ರಕ್ತಾಯವಾಗಿರುತ್ತದೆ  , 6) ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ  ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ , ಮುಖಕ್ಕೆ ಭಾರಿ ಪೆಟ್ಟಾಗಿ  7) ರೋಹಿತ ತಂದೆ ನೀಲಕಂಠ ಶೀಲವಂತ ಇತನಿಗೆ ಹಣೆ ಬಲಭಾಗದಲ್ಲಿ ರಕ್ತಗಾಯ,8) ನಾಗರಾಜ ತಂದೆ ಮನಗೋಳಪ್ಪಾ ಶೀಲವಂತ ಇತನಿಗೆ ತಲೆಯ ಮುಂಬಾಗದಲ್ಲಿ ತಲೆಯ ಪಕ್ಕದಲ್ಲಿ ಭಾರಿ ರಕ್ತಗಾಯ 9) ಮಹಾಂತೇಶ ತಂದೆ ಗಂಗಾದರ ಶೀಲವಂತ ಇತನಿಗೆ ಹಣೆಯ ಮೇಲ್ಭಾಗದಲ್ಲಿ ತಲೆಗೆ ಭಾರಿ ರಕ್ತಗಾಯ , ಎಡಮೆಲಕಿಗೆ ,ಎಡಗಣ್ಣಿ ಪಕ್ಕದಲ್ಲಿ ರಕ್ತಗಾಯವಾಗಿರುತ್ತದೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ.  10) ಸಿದ್ದೇಶ್ವರ ತಂದೆ ಶರಣಪ್ಪಾ ನೇಳಗೆ ಇತನಿಗೆ ಹೆಣೆ ಮೇಲ್ಬಾಗದಲ್ಲಿ , ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯವ , ತಲೆಯ ಮೇಲೆ ರಕ್ತಗಾಯ ಹಿಂದುಗಡೆ , ಮುಖಕ್ಕೆ  ರಕ್ತಗಾಯ ವಾಗಿರುತ್ತದೆ  11) ಗಣೇಶ ತಂದೆ ಶಿವರಾಜ ಶೀಲವಂತ ಇತನಿಗೆ ಬಲಕಿವಿಯ ಕೆಳಗೆ ಭಾರಿ ರಕ್ತಗಾಯವಾ ಬಾಯಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ. 12) ಕ್ರೋಜರ ಚಾಲಕ ಬಾಲಾಜಿಗೆ ಬಲಭುಜಕ್ಕೆ ರಕ್ತಗಾಯ ಮತ್ತು ತಲೆಗೆ ಗುಪ್ತ ಪೆಟ್ಟಾಗಿರುತ್ತದೆ. ನಮ್ಮಗೆ ಡಿಕ್ಕಿ ಹೊಡೆದು ಟ್ಯಾಂಕರ ನಂಬರ ನೋಡಲಾಗಿ ಕೆ.ಎ.32 ಸಿ.4546 ನೆದ್ದು ಇತ್ತು ಅದರ ಚಾಲಕನು ಜನರು ಸೇರುವಷ್ಟರಲ್ಲಿ ತನ್ನ ಟ್ಯಾಂಕರ ಅಲ್ಲಿಯೇ ಬಿಟ್ಟು ಓಡಿ ಹೋದನು ಸದರಿ ಚಾಲಕನಿಗೆ ನೋಡಿದಲ್ಲಿ ಗುರ್ತಿಸುತ್ತೇವೆ ,ಅಷ್ಟರಲ್ಲಿ ನಮ್ಮ ಹಿಂದೆ ಬರುತಿದ್ದ ನಮ್ಮ ಇನ್ನೊಂದು ಕ್ರೋಜರದಲ್ಲಿ ಇದ್ದ ಘಟನೆಯನ್ನು ನೋಡಿ ಬಂದ  ಅಶೋಕ ಶೀಲವಂತ , ಜಗದೀಶ ಶೀಲವಂತ , ಅನುರಾಧ ತಳವಾಡಿ ಇತರರು ಬಂದು ನಗೆ ಎಬ್ಬಿಸಿದರು ನಂತರ ಒಂದು ಖಾಸಗಿ ವಾಹನದಲ್ಲಿ ಮತ್ತು ಅಂಬಲೆನದಲ್ಲಿ ಕೂಡಿಸಿಕೊಂಡು ಕಲಬುರಗಿ ಯುನೈಟೆಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು  ಅದರಲ್ಲಿ ಅಂಬುಲೆನ್ಸದಲ್ಲಿ ತರುವಾಗ ಮಾರ್ಗಮದ್ಯದಲ್ಲಿ ಆನಂದ ತಂದೆ ಬಾಬುರಾವ ಶೀಲವಂತ ಮತ್ತು ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ   ಇವರು ಮೃತ ಪಟ್ಟಿರುತ್ತಾರೆ ಮತ್ತು ಸ್ಥಳದಲ್ಲಿಯೇಮೃತಪಟ್ಟ1) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ 2)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ 3) ಉಜ್ವಲ ತಂದೆ ಭೀಮಾಶಂಕರ ಶೀಲವಂತ  ಇವರ ಶವವು ಕಲಬುರಗಿ  ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ನಮ್ಮ ಕ್ರೋಜರಕ್ಕೆ  ಅಪಘಾತ ಪಡಿಸಿದ್ದ ಟ್ಯಾಂಕರ ಲಾರಿ ನಂ.ಕೆ.ಎ.32. ಸಿ 4546 ನೆದ್ದರ ಚಾಲಕನು ತನ್ನ ಟ್ಯಾಂಕರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ಒಂದು ವಾಹನಕ್ಕೆ ಓವರ ಟೇಕ ಮಾಡಿ ಬಂದು ಎದರುಗಡೆ ರೋಡಿನ ಎಡಬದಿಗೆ ಹೋಗುತಿದ್ದ ನಮ್ಮ ಕ್ರೋಜರಕ್ಕೆ ಡಿಕ್ಕಿ ಹೊಡೆದರೆ ಅದರಲ್ಲಿದ್ದ  ಪ್ರಯಾಣಿಕರ ಸಾವು ಸಂಭವಿಸಬಹುದು ಅಂತಾ ಗೊತ್ತಿದ್ದು ಕೂಡಾ ತನ್ನ ಟ್ಯಾಂಕರ ಲಾರಿ ಅತೀವೇಗವಾಗಿ ನಡೆಯಿಸಿಕೊಂಡು ಬಂದು ನಿಸ್ಕಾಳಜಿಂದ ನಮ್ಮ ಕ್ರೋಜರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದ್ದು ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಬಾಳಾಸಾಹೇಬ ತಂದೆ ಶಿವಾಜಿ ಪವಾರ ಸಾ|| ರಾಜೇವಾಡಿ ಕೋರಿ ತಾಂಡಾ ತಾ|| ಮಾಜಲಗಾಂವ ಜಿ|| ಬೀಡ್ (ಮಹಾರಾಷ್ಟ್ರ) ಇವರು ತಮ್ಮ ತಾಂಡಾದ ಸಂತೋಷ ತಂದೆ ವಿಠ್ಠಲ ಪವಾರ ಇವರ ಟ್ಯಾಕ್ಟರ ನಂ ಎಮ್.ಹೆಚ್-44 ಡಿ-2005 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡಿಕೊಂಡು ಜಿವನ ಸಾಗಿಸುತ್ತಿರುತ್ತೇನೆ. ನಾವು ಪ್ರತಿ ವರ್ಷ ವಿಜಯಪೂರ ಜಿಲ್ಲೆಯ ಕೆ,.ಪಿ.ಆರ್ ಸಕ್ಕರೆ ಕಾರ್ಖಾನೆಗೆ, ಕಬ್ಬು ಕಟಾವು ಮಾಡಿ ಟ್ಯಾಕ್ಟರದಲ್ಲಿ ಸಾಗಾಣಿಕೆ ಮಾಡುತ್ತೇವೆ. ನಾವು ಕಬ್ಬನ್ನು ಕಾರ್ಖಾನೆಯ ಸುತ್ತ ಮುತ್ತ ಅಂದರೆ, ಅಫಜಲಪೂರ ತಾಲೂಕಿನಲ್ಲಿ, ಸಿಂದಗಿ ತಾಲೂಕಿನಲ್ಲಿ, ಇಂಡಿ ತಾಲೂಕಿನಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಾಟ ಮಾಡುತ್ತೇವೆ. ಅದರಂತೆ ದಿನಾಂಕ 16-11-2017 ರಂದು ಅಫಜಲಪೂರ ತಾಲೂಕಿನ ಬಂದರವಾಡ ಗ್ರಾಮದ ಭೀರಪ್ಪ ತಂದೆ ನಾಗಪ್ಪ ಪೂಜಾರಿ ರವರ ಹೊಲದಲ್ಲಿ ಕಬ್ಬು ಕಟಾವು ಮಾಡಿದ್ದು, ಸಂಜೆ 7:45 ಗಂಟೆಗೆ ಸದರಿ ಮೇಲೆ ತಿಳಿಸಿದ ಟ್ಯಾಕ್ಟರ ನಂ ಎಮ್.ಹೆಚ್-44 ಡಿ-2005 ನೇದ್ದರಲ್ಲಿ ಕಬ್ಬು ತುಂಬಿಕೊಂಡು ಅಫಜಲಪೂರ ಮಾರ್ಗವಾಗಿ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ತಗೆದುಕೊಂಡು ಹೊರಟಿರುತ್ತೇನೆ. ಟ್ಯಾಕ್ಟರನಲ್ಲಿ ನನ್ನ ಜೋತೆಗೆ ಕಬ್ಬು ಕಟಾವು ಮಾಡುವ ನಮ್ಮ ತಾಂಡಾದ ಬಾಳಾಸಾಹೇಬ ತಂದೆ ಮಹಾದೇವ ಪವಾರ ಈತನು ಸಹ ಹೊರಟಿದ್ದನು, ರಾತ್ರಿ ಅಂದಾಜು 9:30 ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರ ಇರುವಾಗ ನಮ್ಮ ಟ್ಯಾಕ್ಟರ ಹಿಂದೆ ಒಬ್ಬ ಬೋಲ್ಲೆರೊ ವಾಹನದ ಚಾಲಕನು ತನ್ನ ಬೋಲ್ಲೆರೊ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಾಲಾಯಿಸಿಕೊಂಡು ಬಂದು ನಮ್ಮ ಟ್ಯಾಕ್ಟರ ಹಿಂದೆ ಡಿಕ್ಕಿ ಹೊಡೆದನು. ಆಗ ನಾವು ಟ್ಯಾಕ್ಟರ ನಿಲ್ಲಿಸಿ ಇಳಿದು ನೋಡಲಾಗಿ ಬೋಲ್ಲೆರೋ ವಾಹನ ಜಕಂ ಆಗಿದ್ದು, ಅದರ ಚಾಲಕನಿಗೆ ಭಾರಿ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಸದರಿ ಬೋಲ್ಲೆರೊ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಿದ್ದು, ವಿಶ್ವನಾಥ ತಂದೆ ಸುಬಾಷ ಕುರನಳ್ಳಿ ಸಾ|| ಬಗಲೂರ ತಾ|| ಸಿಂದಗಿ ನಂತರ ನಾವು ರಸ್ತೆಗೆ ಹೋಗಿ ಬರುವು ವಾಹನಗಳನ್ನು ನಿಲ್ಲಿಸಿದ್ದು, ನಾವು ಮತ್ತು ರೋಡಿಗೆ ಹೋಗಿ ಬರುವ ವಾಹನಗಳಲ್ಲಿನ ಜನರು ಸದರಿ ಬೋಲ್ಲೆರೊ ಚಾಲಕನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿ ಅಫಜಲಪೂರಕ್ಕೆ ಕಳುಹಿಸಿಕೊಟ್ಟಿರುತ್ತೇವೆ. ಸದರಿ ಡಿಕ್ಕಿಯಾದ ನಂಬರ ನೋಡಲಾಗಿ ಅದರ ಮೇಲೆ ಯಾವುದೆ ನಂಬರ ಇರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ದೇಸಾಯಿ ಕಲ್ಲೂರ ತಾಂಡಾದ ಸೇವಾಲಾಲ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ದೇಸಾಯಿ ಕಲ್ಲೂರ ತಾಂಡಾದ ಸೇವಾಲಾಲ ಗುಡಿ  ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಸೇವಾಲಾಲ ಗುಡಿ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 07 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜಾಜಾಡುತಿದ್ದ 07 ಜನರಲ್ಲಿ 04 ಜನರು ಸಿಕ್ಕಿದ್ದು 03 ಜನರು ಓಡಿ ಹೋಗಿರುತ್ತಾರೆ ಸಿಕ್ಕ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಬಾಬು ತಂದೆ ಮಾದು ರಾಠೋಡ  2) ಪರಶುರಾಮ ತಂದೆ ಢಾಕು ರಾಠೋಡ 3) ಮೋಹನ@ಮಹಾದೇವ ತಂದೆ ಢಾಕು ರಾಠೋಡ 4) ಪವನ ತಂದೆ ಅಶೋಕ ರಾಠೋಡ ಸಾ||ಎಲ್ಲರು ದೇಸಾಯಿ ಕಲ್ಲೂರ  ಅಂತಾ ತಿಳಿಸಿದ್ದು ನಂತರ  ಸದರಿಯವರಿಗೆ  ಓಡಿ  ಹೋದವರ ಬಗ್ಗೆ ವಿಚಾರಿಸಲಾಗಿ ಅವರ ಹೆಸರು ವಿಳಾಸ 5) ಅಶೋಕ ತಂದೆ ನಾಮು ರಾಠೋಡ 6) ಹಣಮಂತ ತಂದೆ ಸ್ವಾಮು ರಾಠೋಡ 7) ಸುನಿಲ ತಂದೆ ದಾಮ್ಲು ಚವ್ಹಾಣ ಸಾ||ಎಲ್ಲರು ದೇಸಾಯಿ ಕಲ್ಲೂರ ತಾಂಡಾ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 3060/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ವಿದ್ಯಾರ್ಥಿನಿಯರಿಗೆ ಕಿಟಲೆ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಅಫಜಲಪೂರ ಠಾಣೆಯ ಶ್ರೀ  ಸುರೇಶ ಹೆಚ್.ಸಿ-394 ರವರು ಒಬ್ಬ ಆರೋಪಿತನನ್ನು ಹಾಜರು ಪಡಿಸಿ ವರದಿ ನೀಡಿದ್ದು, ದಿನಾಂಕ 21-11-2017 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮಾನ್ಯ ರವರು ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಮಹಾಂತೇಶ್ವರ ಕಾಲೇಜ ಹತ್ತಿರ ಬಂದಾಗ, ಕಾಲೇಜ ಮುಂದೆ ಒಬ್ಬ ವ್ಯೆಕ್ತಿ ನಿಂತುಕೊಂಡು ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಸದರಿ ವ್ಯೆಕ್ತಿಯನ್ನು ಹಿಡಿಯುವ ಸಂಭಂದ ಬಸವೇಶ್ವರ ಸರ್ಕಲ ಕರ್ತವ್ಯದಲ್ಲಿ ಗಿರೇಪ್ಪ ಪಿಸಿ-207 ರವರನ್ನು ಬರಮಾಡಿಕೊಂಡು ವಿಷಯ ತಿಳಿಸಿದೆನು, ಸದರಿ ಕಾಲೇಜ ಮುಂದೆ ನಿಂತಿದ್ದ ವ್ಯೆಕ್ತಿ ಪುನ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ನಾನು ಮತ್ತು ಗಿರೆಪ್ಪ ಪಿಸಿ-207 ಇಬ್ಬರು ಕೂಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಾಡಸಿದ್ದ @ ಸಿದ್ದು ತಂದೆ ಶಿವರಾಯ ಬಿರಾದಾರ ಸಾ|| ಕಾರ ಭೋಸಗಾ ಹಾ|| || ಡಿಗ್ರಿ ಕಾಲೇಜ ಹತ್ತಿರ ಅಫಜಲಪೂರ ಅಂತ ಏರು ದ್ವನಿಯಲ್ಲಿ ತಿಳಿಸಿದನು. ಸದರಿಯವನು ಕಾಲೇಜ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ಹಿಡಿದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಸುಧಾರಿತ ಬೀಟ್ ನಂ 21 ಮಾಶಾಳ ಗ್ರಾಮದ ಬೀಟ್ ಕರ್ತವ್ಯದ ಪಿಸಿ-881 ಶರಣಪ್ಪ ರವರು ಬಾತ್ಮಿದಾರರಿಂದ ಮಾಹಿತಿ ಸಂಗ್ರಯಿಸಿ ತಿಳಿಸಿದ್ದೆನೆಂದರೆ, ಮಾಶಾಳ ಗ್ರಾಮದ ಚವಡೇಶ್ವರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಚವಡೇಶ್ವರಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಚವಢೇಶ್ವರಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಡೇಪ್ಪ ತಂದೆ ಯಲ್ಲಪ್ಪ ಕುಂಬಾರ ಸಾ||ಚವಡೇಶ್ವರಿ ಗುಡಿ ಹತ್ತಿರ ಮಾಶಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1260/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮುಂಜಾಗ್ರತ ಕ್ರಮ :
ಅಫಜಲಪೂರ ಠಾಣೆ : ಶ್ರೀ ದರೇಶ ಪಿಸಿ-1111 ಅಫಜಲಪೂರ ಠಾಣೆ ರವರು ದಿನಾಂಕ 21-11-2017 ರಂದು ಬೆಳಿಗ್ಗೆ ಠಾಣಾಧಿಕಾರಿಯವರ  ಆದೇಶದಂತೆ ಸುದಾರಿತ ಗ್ರಾಮ ಗಸ್ತು ಕರ್ತವ್ಯ ಕುರಿತು ಗೌರ (ಕೆ) ಗ್ರಾಮಕ್ಕೆ ಹೋದಾಗ ಗ್ರಾಮದ ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ ಹಾಗೂ ರಮೇಶ ತಂದೆ ಕಾಂತಪ್ಪ ಹೊಸಮನಿ ಇವರುಗಳ ಮದ್ಯ ಹೊಲದ ಹೊಲದ ಪಾಲಿನ ವಿಚಾರವಾಗಿ ಒಬ್ಬರಿಗೊಬ್ಬರು ಬಾರಿ ದ್ವೇಷ ಮಾಡಿಕೊಂಡು ವೈಮನಸ್ಸು ಮಾಡಿಕೊಂಡು ಗ್ರಾಮದಲ್ಲಿ ಇಬ್ಬರು ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ, ಸದರಿಯವರು ಅವರ ಮನೆಯ ಮುಂದೆ ಇವರು ಹೋಗಿ ಕೂಗಾಡುವುದು ಹಾಗೂ ಇವರ ಮನೆಯ ಮುಂದೆ ಅವರು ಬಂದು ಕೂಗಾಡುವುದು ಮಾಡುತ್ತಿದ್ದಾರೆ, ಸದರಿಯವರು ಗ್ರಾಮಕ್ಕೆ ಪೊಲೀಸರು ಬಂದಾಗ ಸುಮ್ಮನಿದ್ದು ನಂತರ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ, ಸದರಿಯವರಿಂದ ಗ್ರಾಮದ ಜನರು ಭಯಭಿತರಾಗಿದ್ದಾರೆ, ಹಾಗೂ ಸದರಿಯವರಿಂದ ಗ್ರಾಮದಲ್ಲಿ ಶಾಂತತಾ ಭಂಗ ಉಂಟಾಗುತ್ತಿದೆ ಎಂದು ಗ್ರಾಮದ ಬಾತ್ಮಿದಾರರು ತಿಳಿಸಿದ ಮೇರೆಗೆ, 1) ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ 2) ಹೋನ್ನಪ್ಪ ತಂದೆ ಮಾಳ್ಪಪ ಹೊಸಮನಿ 3) ಲಕ್ಕಪ್ಪ ತಂದೆ ಮಾಳಪ್ಪ ಹೊಸಮನಿ 4) ನಾಗು @ ನಾಗಪ್ಪ ತಂದೆ ಮಾಳಪ್ಪ ಹೊಸಮನಿ ಸಾ|| ಎಲ್ಲರು ಗೌರ (ಕೆ) ಮತ್ತು 1) ರಮೇಶ ತಂದೆ ಕಾಂತಪ್ಪ ಹೊಸಮನಿ ಸಾ|| ಗೌರ (ಕೆ) 2). ಕಾಂತಪ್ಪ ತಂದೆ ಭೂತಾಳಿ ಹೊಸಮನಿ ಸಾ ಗೌರ (ಕೆ) ಇವರೆಲ್ಲರು ಒಬ್ಬರಿಗೋಬ್ಬರು ಬಾರಿ ದ್ವೇಷ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುತ್ತಿದ್ದು, ಸದರಿಯವರು ಇದೆ ರೀತಿ ದ್ವೇಷ ಸಾದಿಸುತ್ತಾ ತಿರುಗಾಡುತ್ತಿದ್ದರಿಂದ ಪ್ರಾಣ ಹಾನಿಯಾಗುವ ಸಂಭವ ಇರುವ ಕಾರಣ ಸದರಿಯವರನ್ನು ಠಾಣೆಗೆ ಕರೆದುಕೊಂಡು ಬಂದಿರುತ್ತೇನೆ. ಸದರಿಯವರಿಂದ ಗ್ರಾಮದಲ್ಲಿ ಶಾಂತಿ ಸುವ್ಯೆವಸ್ಥೆ ಕದಡುವ ಸಂಭವ ಇರುತ್ತದೆ ಎಂದು ತಿಳಿದು ಬಂದ ಮೇರೆಗೆ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ 
ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರಿಸಿಕೊಂಡ ಆರೋಪಿತರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಅಫಜಲಪೂರ ಠಾಣೆಯ ರುದ್ರಪ್ಪ ಹೆಚ್.ಸಿ-545 ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ ನಾನು ಈಗ 03 ತಿಂಗಳಿಂದ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರು ನಮ್ಮ ಠಾಣೆಯ ಪ್ರಕರಣಗಳಲ್ಲಿ ಹೊರಡಿಸುವ ವಾರೆಂಟಗಳನ್ನು ಜಾರಿ ಮಾಡಿ, ಆರೋಪಿತರನ್ನು/ಸಾಕ್ಷೀದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು ನಮ್ಮ ಠಾಣೆಯ ಗುನ್ನೆ ನಂ 02/2014 ಕಲಂ 341. 323. 504. 506 ಸಂ 34 ಐಪಿಸಿ ಸಿಸಿ ನಂ 351/14 ನೇದ್ದರಲ್ಲಿ ಆರೋಪಿತರಾದ 1) ಹೋನ್ನಪ್ಪ ತಂದೆ ಹಣಮಂತ ಕಾಳೆ 2) ಶಿವು ನತಂದೆ ಭೀಮು @ ಭೀಮಾಶಂಕರ ಸಲಗರ 3) ಸುರೇಶ ತಂದೆ ಆನಂದ @ ಅಂದು ಕಾಳೆ 4) ಖಂಡು ತಂದೆ ನಾಮದೇವ ಸಿಂದೆ ಸಾ|| ಎಲ್ಲರೂ ಉಡಚಾಣ ಹಟ್ಟಿ ಇವರು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ,.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರದಲ್ಲಿ ಹಾಜರಾಗದ ಕಾರಣ ಸದರಿ ಆರೋಪಿತರನ್ನು ಹಾಜರುಪಡಿಸುವಂತೆ ಆದೇಶಿಸಿ ದಿನಾಂಕ 25-08-2016, 05-10-2016, 21-11-2016, 15-02-2017, 19-04-2017, 15-05-2017, 16-06-2017, 15-07-2017, 26-08-2017, 22-09-2017, 11-10-2017, 26-10-2017,14-11-2017 ರಂದು ದಸ್ತಗಿರಿ ವಾರೆಂಟ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ನಾನು ಆರೋಪಿತರ ಸ್ವ ಗ್ರಾಮಕ್ಕೆ ಹಾಗೂ ಆರೋಪಿತರ ಸಂಭಂದಿಕರ ಗ್ರಾಮಗಳಿಗೆ ಹೋಗಿ ಆರೋಪಿತರ ಮನೆಗೆ ಹೋಗಿ ಆರೋಪಿತರ ಬಗ್ಗೆ ವಿಚಾರಿಸಿದ್ದು, ಆರೋಪಿತರು ತಲೆ ಮರೆಸಿಕೊಂಡಿದ್ದು ತಿಳಿದು ಬಂದಿರುತ್ತದೆ. ನಂತರ ಗ್ರಾಮದ ಬಾತ್ಮಿದಾರರಿಗೂ ವಿಚಾರಿಸಿದ್ದು, ಆರೋಪಿತರು ಎಲ್ಲಿ ಇರುತ್ತಾರೊ ಎನೊ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈಗ ಸದರಿ ಆರೋಪಿತರನ್ನು ದಿನಾಂಕ 16-12-2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಮಾನ್ಯ ನ್ಯಾಯಾದೀಶರು ದಸ್ತಗಿರಿ ವಾರೆಂಟನ್ನು ಹೊರಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಆದಾರದ ಮೇಲೆ ಬಿಡುಗಡೆಯಾಗಿ ವಿಚಾರಣೆ ಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿಚಾರಣೆ ಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿರುತ್ತಾರೆ. ಕಾರಣ ಸದರಿ ಮೇಲೆ ತಿಳಿಸಿದ ಆರೋಪಿತರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

21 November 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ಆಕಾಶ ತಂದೆ ನಾಗಪ್ಪಾ ಧಮ್ಮೂರಕರ್ ಸಾಃ ಬೆಳಕೋಟಾ (ಆರ್.ಸಿ) ಕಮಲಾಪೂರ ತಾಃಜಿಃ ಕಲಬುರಗಿ ಇವರ ಗೆಳೆಯ ಜಗದೀಶ ತಂದೆ ಪ್ರಕಾಶ ಕುಲಕರ್ಣಿ ಇಬ್ಬರು ಮನೆಯಲ್ಲಿ ದಿನಾಂಕ 18.11.2017 ರಂದು ಶನಿವಾರ ರಾತ್ರಿ ಸುಮಾರು 11.00 ಗಂಟೆ ಸುಮಾರಿಗೆಗೆ ಮಲಗಿಕೊಂಡ ವೇಳೆಯಲ್ಲಿ ಬೆಳಕೋಟಾ ಗ್ರಾಮದವರೆ ಆದ ವಿವೇಕ ಪಾಟೀಲ್ ಅವರು ನನ್ನ ಗೆಳೆಯ ಜಗದೀಶ ಈತನಿಗೆ ಫೋನ ಮಾಡಿದನುನಿಮ್ಮ ಜೊತೆ 02 ನಿಮಿಷ ಮಾತಾಡುವುದಿದೆ ಎಂದರು. ಆವಾಗ ನನ್ನ ಗೆಳೆಯ ಜಗದೀಶ ಇವರು 'ನಾವು ಬೇಳಿಗ್ಗೆ ಮಾತಾಡೋಣಾ ಅಂತಾಹೇಳಿದರು. ಇದಾದ ಸ್ವಲ್ಪ ಸಮಯದ ನಂತರ 15-20 ನಿಮಿಷ ನಂತರ ಅವರೆ ನಮ್ಮ ರೂಂಗೆ ಬಂದರು. 'ನಮಗೆ ನೀವು ಬೈದಿರುವಿರಿ' ಅಂತಾ ಅಂದಾಗ, ನಾವು ಬೈದಿಲ್ಲಾ ಅಂತಾ ಹೇಳಿದೆವು. ಆವಾಗ ಅವರು ನಮ್ಮ ಹತ್ತೀರ ಸಾಕ್ಷಿಗಳು ಇವೆ ಅಂತಾ ಹೇಳಿ ನಮಗೆ ಒತ್ತಾಯಪೂರ್ವಕ ನಮ್ಮ ಮನೆಯಿಂದ ಹಳೆ ಬೇಳಕೋಟ ರೋಡಿಗೆ ರೇಲ್ವೆ ಬ್ರೀಜ್ ಹತ್ತೀರ ಕರೆದುಕೊಂಡು ಬಂದು ಆಮೇಲೆ ವಿವೇಕ ಪಾಟೀಲ ಈತನು ' ಆಕಾಶ ನಿನ್ನವನ ತುಲ್ ಬೋಸಡಿ ಮಗನೆ' ಬೈದು ಹಾಗೆ ಮುಖದ ಮೇಲೆ ನನಗೆ ಹೊಡೆದರು. ಆಮೇಲೆ ನನ್ನ ಗೆಳೆಯ ಜಗದೀಶ ಬಿಡಿಸಲು ಬಂದಾಗ ಅವನಿಗೂ ಹೊಡೆಯಲು ಶುರು ಮಾಡಿದರು. ನನಗೆ ಇಬ್ಬರು ಮೂರು ಜನ ಹಿಡಿದಿದ್ದರು. ಅವನಿಗೆ ಬಿರ್ ಬಾಟಲಿಯಿಂದ ಹೊಡೆದರು. ಅವನಿಗೆ ವಿವೇಕ ಪಾಟೀಲ್ ಹಾಗೂ ಅವನ ಜೊತೆಗೆ ಇದ್ದವರು ಮುಖದ ಮೇಲೆ ಹೊಡೆದರು. ನನಗೆ 'ನಿನು ಕೀಳು ಜ್ಯಾತಿಯವ ಗೌಡ್ರ ಸಮನಾ ಎನು' ಎಂದು ಬೈದ್ರು.. 'ನೀವು ಬೇಳಿಗ್ಗೆ ಹಾಕಿದ ಅಂಗಿ ರಾತ್ರಿ ಒಗೆದು ಹಾಕುತ್ತೀರಿ' ನಾವು ಗೌಡ್ರು ಅಂದ್ರೆ ನಮ್ಮ ಹಾಗೆ ಇರುತ್ತಾರೆ ಅಂತಾ ಬೈದು ಇಬ್ಬರಿಗೂ ಹೊಡೆದು ಕೂಡಿಸಿದರು. ನಾವು ಸಮಯ ನೋಡಿ ಅವರಿಗೆ ಸಿಗಲಾರದೆ ಮನೆಗೆ ಬಂದು ಸೇರಿದೇವು. ಮತ್ತೆ ಅವರು ನಮಗೆ ಹುಡುಕುತ್ತಾ ಉರೋಳಗೆ ಬಂದ್ರು, ನಾವು ಅವರಿಗೆ ಸಿಗಲಿಲ್ಲಾ ಅವರು ಹುಡುಕಾಡುತ್ತಾ ಹೋದರು. ನಂತರ ನಾವು ಮನೆಗೆ ಬಂದು ಮಲಗಿದೆವು. ದಿಃ 19.11.2017 ರಂದು ಬೇಳಿಗ್ಗೆ 8.30 ಎದ್ದು ಆಸ್ಪತ್ರೆಗೆ ಬರಲು 120 ಗಂಟೆಗೆ ಊರಿಂದ ಕಲಬುರ್ಗಿಗೆ ಬರಲು ರಡಿಯಾಗಿದ್ದೇವು. ನಾವು ಕಲಬುರ್ಗಿಗೆ ದಿಃ 19.11.2017 ರಂದು ಅಂದಾಜು 3.00 ಪಿ.ಎಂಕ್ಕೆ ಬಂದು ಜಗದೀಶ ಅವರ ಅತ್ತೇಯ ಮನೆಗೆ ಹೋಗುವ ಕುರಿತು ಲಂಗೋಟಿಫೀರ ದರ್ಗಾ ಹತ್ತೀರ 03 ಬೈಕಗಳು ಬಂದವು. ಒಂದು ಬೈಕ್ ನಮ್ಮ ಗಾಡಿಗೆ ಅಡ್ಡ ಹಚ್ಚಿದರು. ಯಾರು ಅಂತಾ ಕೇಳುವ ಸಮಯದಲ್ಲಿ ಇನ್ನು 02 ಬೈಕ ಮೇಲಿದ್ದ ಜನರು ಕೆಳಗಿಳಿದು ಜಗದೀಶಗೆ ಎಳೆದು ಹೊಡೆಯಲು ಶುರು ಮಾಡಿದರು. ಆವಾಗ ಜಗದೀಶಗೆ ತೆಲೆಗೆ ರಾಡದಿಂದ ಹೊಡೆದರು. ಅವನು ಬೈಕನಿಂದ ಕೆಳಗೆ  ಬಿದ್ದಿನು. ಆವಾಗ ನನಗೂ ತೆಲೆಗೆ ಹೊಡೆದರು. ಮತ್ತೆ ಅವರು ' ವಿವೇಕ ಗೌಡ್ರಿಗೆ ಎದುರಾಗಿ ಬದುಕುತ್ತೀರಿ ಎನು' ಅಂತಾ ಅವಾಚ್ಯ ಶಬ್ದಗಳಿಂದ ಬೈದರು. ಜೀವಂತ ಇರಬೇಕೆಂದರೆ ಸುಮ್ನೆ ಇರಬೇಕು ಅಂತಾ ಹೇಳಿದರು. ನಂತರ ಅವರು ಅಲ್ಲಿಂದ ಹೋದರು. ನಂತರ ನಾನು ನನ್ನ ಗೆಳೆಯನಿಗೆ ಫೋನ ಮಾಡಿದೆ ಅವನು ಬಂದನು ಅವನು ಆಸ್ಪತ್ರೆಗೆ ಸೇರಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಟರ ಬಡ್ಡಿ ವ್ಯವಾಹರ ಮಾಡುತ್ತಿದ್ದವನ ವಿರುದ್ಧ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 20.11.2017 ರಂದು ಅಂಬರೀಶ @ ಅಂಬು ತಂದೆ ರಾಯಪ್ಪ ಮಸ್ಕಿ ಸಾ: ಯಲ್ಲಮನ ಗುಡಿ ಹತ್ತಿರ ಗಂಗಾ ನಗರ ಬ್ರಹ್ಮಪೂರ ಕಲಬುರಗಿ ಇತನು ಸರಕಾರ ದಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಹಣಕಾಸಿನ ವ್ಯವಹಾರ ಮಾಡುತ್ತಿದ್ದು ಸದರಿಯವನು ಸರಕಾರ ಮತ್ತು ರಿಜರ್ವ ಬ್ಯಾಂಕ ನಿಗದಿ ಮಾಡಿದ ಬಡ್ಡಿ ದರಕಿಂತಲು ಹೆಚ್ಚಿನ ಬಡ್ಡಿದರಲ್ಲಿ ಮೀಟರ ಬಡ್ಡಿ ವ್ಯವಹಾರ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದಿದ್ದು. ಸದರಿಯವನ ಮನೆ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳಲು ಮಾನ್ಯ ಸಹಾಯಕ ಅಧಿಕ್ಷಕರು (ಎ) ಉಪ ವಿಭಾಗ ಕಲಬುರಗಿ ರವರು ಪರವಾನಿಗೆ ನೀಡಿದ್ದು ಅದರಂತೆ ಮಾನ್ಯ ಎ.ಎಸ್.ಪಿ. ಸಾಹೇಬರು (ಎ) ಉಪ ವಿಭಾಗ ಕಲಬುರಗಿ ಇವರ ಮಾರ್ಗದರ್ಶನದಲ್ಲಿ, ಪ[ಇ.ಎಸ್.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಗಂಗಾ ನಗರದಲ್ಲಿರುವ ಅಂಬರೀಶ ತಂದೆ ರಾಯಪ್ಪ ಮಸ್ಕಿ ಇತನ ಮನೆಯ ಮೇಲೆ ಮಧ್ಯಾನ ದಾಳಿ ಮಾಡಿದ್ದು ಮನೆಯಲ್ಲಿ ಅಂಬರೀಶ ಇತನು ಹಾಜರ ಇದ್ದಿರುವದಿಲ್ಲ ನಂತರ ಸದರಿಯವನ ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿ ಲೆಕ್ಕ ಪತ್ರ ಬರೆದ ಲಕ್ಷ್ಮಿ ದೇವರ ಭಾವ ಚಿತ್ರ ಉಳ್ಳ 3 ನೋಟ ಪುಸ್ತಕಗಳು ದೊರೆತಿದ್ದು ಮತ್ತು ನಗದು ಹಣ 80,550/- ರೂ (ಎಂಬತ್ತು ಸಾವೀರ ಐದು ನೂರಾ ಐವತ್ತು ರೂಪಾಯಿ) ದೊರೆತಿದ್ದು ಸದರಿ ಹಣದ ಬಗ್ಗೆ ಮನೆಯಲ್ಲಿದ್ದು ಅಂಬರೇಶನ ಹೆಂಡತಿಯಾದ ಗೀತಾ ಇವಳಿಗೆ ವಿಚಾರಿಸಲು ಸದರಿಯವಳು ಹಣದ ಬಗ್ಗೆ ಯಾವುದೆ ಮಾಹಿತಿಯನ್ನು ನೀಡಿರುವದಿಲ್ಲ. ಸದರಿ ಹಣ ಮತ್ತು ನೋಟ ಪುಸ್ತಕಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಜಪ್ತಿ ಮಾಡಿದ ಮುದ್ದೆ ಮಾಲಿನೊಂದಿಗೆ ಠಾಣೆಗೆ ಹಾಜರಾಗಿದ್ದು ಸದರಿ ಅಂಬರೀಶ ತಂದೆ ರಾಯಪ್ಪ ಮಸ್ಕಿ ಇತನ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.