POLICE BHAVAN KALABURAGI

POLICE BHAVAN KALABURAGI

06 October 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05-10-2017 ರಂದು ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಡಬರಬಾದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ  ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್ ರಾಘವೆಂದ್ರ ನಗರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇವರದಾಸಿಮಯ್ಯ ಬಡಾವಣೆಯ ಒಳಗಡೆಯಿಂದ ಹೋಗಿ ಒಂದು ಸಿಮೆಂಟ ಅಂಗಡಿಯ ಮರೆಯಲ್ಲಿ ನಿಂತು ನೋಡಲು ಡಬರಬಾದ ಕ್ರಾಸ್ನಿಂದ ರಿಂಗ್ ರೋಡಿನ ಪಕ್ಕದಲ್ಲಿ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಮಟಕಾ ನಂಬರಕ್ಕೆ ಒಂದು ರೂ ಗೆ 80 ರೂ ಕೊಡುತ್ತೇವೆ ಅಂತಾ ಹೇಳುತ್ತಾ  ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು, ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದಿದ್ದು ಜನರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲು 1)ಮಹ್ಮದ ಅಜೀಮ ತಂದೆ ಮಹ್ಮದ ಇಬ್ರಾಹಿಂ ಸಾ:ಜಾಮೀಯಾ ಮಜೀದ ಹತ್ತಿರ ಮೌಲಾಲಿ ಕಟ್ಟಾ ಎಂ.ಎಸ್‌‌.ಕೆ ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1840=00 ರೂ ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು.2)ಸೈಯದ ದಾವುದ ತಂದೆ ಸೈಯದ ನೂರ ಮಹ್ಮದ ಸಾ:ಸಿ..ಬಿ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಇತನಿಗೆ ಅಂಗಶೋಧನೆ ಮಾಡಲು ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ 1500/-ರೂ ಒಂದು ಮಟಕಾ ಚೀಟಿ ಒಂದು ಬಾಲಪೆನ್ನು ಸಿಕ್ಕಿದ್ದು, ಒಟ್ಟು ಹೀಗೆ ನಗದು ಹಣ 3340/-ರೂಗಳು, ಎರಡು ಮಟಕಾ ಚೀಟಿಗಳು ಎರಡು ಬಾಲಪೆನ್ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಉಮೇಶ ತಂದೆ ಖೀರು ರಾಠೋಡ ಸಾ|| ಯಡ್ರಾಮಿ ತಾಂಡಾ ರವರು ಗೌರಮ್ಮ ಮುಳ್ಳೊಳ್ಳಿ ರವರ ಹೊಲ ಪಾಲಿಗೆ ಮಾಡಿದ್ದು ದಿನಾಂಕ 05-10-2017 ರಂದು ನಮ್ಮ ಅಕ್ಕ ಲೀಲಾಬಾಯಿ ಗಂಡ ಉಮೇಶ ಪವಾರ ಇವರು ಮನೆಗೆ ಬಂದು ನನ್ನ ಮುಂದೆ ಹೇಳಿದ್ದೇನೆಂದರೆ, ಮದ್ಯಾಹ್ನ ನಾನು ಹೊಲದಲ್ಲಿ ಇದ್ದಾಗ ನಮ್ಮೂರ ಸುನೀಲ ತಂದೆ ಮಲ್ಲಿನಾಥ ಯಲಗೋಡ, ಅನೀಲ ತಂದೆ ಮಲ್ಲಿನಾಥ ಯಲಗೋಡ ರವರು ತಮ್ಮು ಎಮ್ಮೆಗಳನ್ನು ನಾವು ಪಾಲಿಗೆ ಮಾಡಿದ ಹೊಲದಲ್ಲಿ ಬಿಟ್ಟಿದ್ದರು, ನಂತರ ನಾನು ನೋಡಿ ಅವರಿಗೆ ನಿಮ್ಮು ಎಮ್ಮೆಗಳನ್ನು ಹೊಡೆದುಕೊಂಡು ಹೋಗರಿ ಅಂತಾ ಅಂದಾಗ ನನ್ನೊಂದಿಗೆ ತಕರಾರು ಮಾಡಿಕೊಂಡಿರುತ್ತಾರೆ ಅಂತಾ ಹೇಳಿದ್ದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಬಾಬು ತಂದೆ ದಿಲೀಪ ಜಾಧವ ಹಾಗು ನಮ್ಮ ಅಕ್ಕ ಲೀಲಾಬಾಯಿ ರವರು ಕೂಡಿ ಹೋಗುತ್ತಿದ್ದಾಗ ಸಿಂಡಿಕೇಟ ಬ್ಯಾಂಕ ಹತ್ತಿರ ನಮ್ಮೂರ 1] ಆನಂದ ತಂದೆ ಬಸಣ್ಣ ಕುಸ್ತಿ, 2] ರಗು ತಂದೆ ಬಸಣ್ಣ ಕುಸ್ತಿ, 3] ರಮೇಶ ತಂದೆ ಯಂಕಪ್ಪ, 4] ಸುನೀಲ ತಂದೆ ಮಲ್ಲಿನಾಥ ಯಲಗೋಡ, 5] ಅನೀಲ ತಂದೆ ಮಲ್ಲಿನಾಥ ಯಲಗೋಡ, 6] ಈಸು ತಂದೆ ಸೂರ್ಯಕಾಂತ, 7] ದಿನೇಶ ತಂದೆ ಶಿವಕಾಂತ, 8] ಗಣೇಶ ತಂದೆ ಶಿವಕಾಂತ, 9] ಅಂಬರೀಶ ತಂದೆ ಬಸಣ್ಣ, 10] ಶಿವಕಾಂತ ತಂದೆ ಯಂಕಪ್ಪ, 11] ಅವಿನಾಶ ತಂದೆ ಶಿವಕಾಂತ, 12] ಜಗು ತಂದೆ ಸಿದ್ದು, 13] ಸಂತೋಷ ತಂದೆ ಚಂದ್ರಕಾಂತ ಕುಸ್ತಿ  ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿದರು, ನಂತರ ಆನಂದ ಕುಸ್ತಿ ಈತನು ನಮಗೆ ಸೂಳಿ ಮಕ್ಕಳ್ಯಾ ಹೊಲದಲ್ಲಿ ನಮ್ಮೊಂದಿಗೆ ತಕರಾರು ಮಾಡಿಕೊಂಡು ನಮ್ಮ ಮೇಲೆ ಕೇಸ ಮಾಡಲಾಕ ಹೊಂಟೀರಿ ಅಂತಾ ಅಂದು ಅಲ್ಲೆ ಬಿದ್ದಿದ ಕಲ್ಲನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಮೇಲೆ ಹೊಡೆದನು, ನಂತರ ರಗು ಈತನು ನನ್ನ ಮುಖಕ್ಕೆ ಮುಷ್ಠಿ ಮಾಡಿ ಹೊಡೆದನು, ರಮೇಶ, ಸುನೀಲ, ಅನೀಲ ರವರು ಕೈಯಿಂದ ನನ್ನ ತಲೆಗೆ ಮುಖಕ್ಕೆ ಎದೆಗೆ ಹೊಡೆ ಬಡೆ ಮಾಡಿರುತ್ತಾರೆ, ಆಗ ನಮ್ಮ ಮಾವ ಬಾಬು ಜಾಧವ ರವರು ಬಿಡಿಸಲು ಬಂದಾಗ ಅವರಿಗೆ ಈಸು, ದಿನೇಶ ಇವರು ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ, ನಂತರ ಗಣೇಶ ಮತ್ತು ಅಂಬರೀಶ ರವರು ನಮ್ಮ ಅಕ್ಕಳಿಗೆ ಕೈ ಹಿಡಿದು ಎಳೆದಾಡಿ ರಂಡಿಗಿ ಹಾಕಿ ಹೊಡಿರೋ ಅಂತಾ ಅಂದರು, ನಂತರ ಶಿವಕಾಂತ, ಅವಿನಾಶ, ಜಗು, ಸಂತೋಷ ರವರು ಇವತ್ತ ಸೂಳಿ ಮಕ್ಕಳಗಿ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅಂದು ಕೈಯಿಂದ ಕಾಲಿನಿಂದ ನನ್ನ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 October 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಾಬುರಾವ ತಂದೆ ಗುರುನಾಥ ಜಮಾದಾರ ಸಾಃ ಮಳ್ಳಿ ಗ್ರಾಮ ಇವರು ದಿನಾಂಕ 03/10/2017 ರಂದು 5.30 ಪಿ.ಎಮಕ್ಕೆ ಮಳ್ಳಿ ಗ್ರಾಮದ ಕ್ರಾಸ ಹತ್ತಿರ ರೋಡಿನ ಮೇಲೆ ಟಂಟಂ ನಂ ಕೆಎ-32 ಸಿ-6514 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೃತ ನಾಗಪ್ಪಾ ಹಾಗೂ ಫಿರ್ಯಾದಿದಾರರು ಕುಳಿತುಕೊಂಡು ಮೋಟಾರ ಸೈಕಲ ನಂ ಕೆಎ-32 ಇಬಿ-4665 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲಿನಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯ ಹಾಗೂ ನಾಗಪ್ಪಾ ಈತನಿಗೆ ಬಲಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು, ಮತ್ತು ಬಲಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಉಪಚಾರ ಕುರಿತು 108 ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ನಾಗಪ್ಪಾ ತಂದೆ ಭೀಮಣ್ಣ ಜಮದಾರ ಈತನು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಗದೇವಿ ಗಂಡ ಮಹಾದೇವಪ್ಪಾ ಸಿರಗಾಪೂರ ಸಾ:ನರೋಣ ಹಾ:ವ:ಪ್ಲಾಟ ನಂ 142 ಶಿವಲಿಂಗ ನಗರ ಆಳಂದ ರೋಡ ಕಲಬುರಗಿ ರವರ ಮಗನಾದ ಸಂಜೀವಕುಮಾರ ಇತನಿಗೆ ಈಗ ಸುಮಾರು 6 ವರ್ಷಗಳ ಹಿಂದೆ ಓಕಳಿ ಗ್ರಾಮದ ಅಶ್ವಿನಿ ತಂದೆ ಮಹಾದೇವಪ್ಪ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಆದರೆ ಅಶ್ವಿನಿ ಇವಳು ನಮ್ಮ ಮನೆಯಲ್ಲಿ ನಡೆಯದೆ ಮದುವೆಯಾದ 3 ತಿಂಗಳಲ್ಲಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ನಂತರ ಅಶ್ವಿನಿ ಮತ್ತು ಅವರ ಮನೆಯವರು ನಮ್ಮ ಮೇಲೆ ವರದಕ್ಷಿಣೆ ಕಿರುಕುಳ ಕೇಸು ಮಾಡಿರುತ್ತಾರೆ. ಆ ಕೇಸು ಸದ್ಯ ಕೊರ್ಟನಲ್ಲಿ ನಡೆದಿರುತ್ತದೆ. ಅಶ್ವಿನಿಯವರ ತಂದೆಯಾದ ಮಹಾದೇವಪ್ಪಾ, ಅವರ ಸಂಬಂದಿಕರಾದ ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕ:03-10-2017  ರಂದು ಮದ್ಯಾಹ್ನ ಮನೆಗೆ ಬಂದು ನಮ್ಮ ಮಗಳಿಗೆ 20 ಲಕ್ಷ ರೂಪಾಯಿ ಕೊಡಬೇಕು ಆ ಮೇಲೆ ನಾವು ಹಾಕಿದ ಕೇಸನ್ನು ವಾಪಸ್‌ ತೆಗೆದುಕೊಳ್ಳುತ್ತೆವೆ ನಂತರ ಡೈವರ್ಸ ಕೊಡಬೇಕು ಇಲ್ಲ ಅಂದ್ರೆ ನಿಮಗೆ ಬಿಡುವದಿಲ್ಲ ಅಂತ ಹೇಳಿ ದಮಕಿ ಹಾಕಿ ಹೋಗಿರುತ್ತಾರೆ. ನಂತರ ನಿನ್ನೆ ರಾತ್ರಿ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾದ ಮಹಾದೇವಪ್ಪಾ ಓಕಳಿ, ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯೊಳಗೆ ಪ್ರವೇಶ ಮಾಡಿ ಮಹಾದೆವಪ್ಪಾ ಇವನು ರಂಡಿ ನಿನ್ನ ಮಗ ಛೆಕ್ಕಾ ಹನ ನಮ್ಮ ಮಗಳಿಗೆ ಡೈವರ್ಸ ಕೊಡಬೇಕು, 20 ಲಕ್ಷ ರೂಪಾಯಿ ಕೋಡಬೇಕು ಅಂತ ಅಂದಾಗ ನಾನು ನಿಮಗೆ ಯಾಕ ರೊಕ್ಕ ಕೊಡಬೇಕು ಅಂತ ಕೇಳಿದಕ್ಕೆ ನಿನ್ನ ಬೊಸಡಾನ ಹಡಾ ನಿಂದೆ ಎಲ್ಲಾ ಅಂತ ಬೈಯುತ್ತಿದ್ದಾಗ, ರಾಜಕುಮಾರ ಇವನು ಕೈ ಹಿಡಿದು ಎಳೆದು ಬಗ್ಗಿಸಿ ಹೆಡಕಿನ ಮೇಲೆ  ಹೊಡೆದಿರುತ್ತಾನೆ, ಸಿದ್ದಾರೂಡ ಇವನು ಬೆನ್ನಿನ ಮೇಲೆ ಕೈಯಿಂದ ಹೊಡೆದಿರುತ್ತಾನೆ. ಮಲ್ಲಪ್ಪಾ ಮತ್ತು ಶರಣಗೌಡ ಇವರು ಇವರೌನ ತುಲ್ಲಾ ಇವಳಿಗೆ ಬಿಡಬ್ಯಾಡ್ರಿ ಖಲಾಸ ಮಾಡ್ರಿ ಅಂತ ಜೀವದ ಭಯ ಹಾಕುತ್ತಿದ್ದಾಗ ನಾನು ಅಂಜಿ ಚೀರಾಡುತ್ತಿದ್ದಾಗ ನನಗೆ ಹೊಡೆಯುದನ್ನು ಬಿಟ್ಟು ಅವರೆಲ್ಲರೂ ಓಡಿ ಹೋಗಿರುತ್ತಾರೆ. ನಂತರ ನನ್ನ ಮಗ ನರೇಂದ್ರಕುಮಾರ ಇತನಿಗೆ ವಿಷಯ ಗೊತ್ತಾಗಿ ಮನೆಗೆ ಬಂದು ನನಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಶೈಲ್ ತಂದೆ ಗಿರಿಮಲ್ಲಪ್ಪಾ ಹುಗ್ಗಿ ಸಾ:ತೋನಸನಳ್ಳಿ (ಎಸ್) ಇವರು ದಿನಾಂಕ:04.10.2017 ರಂದು ತೋನಸನಳ್ಳಿ (ಎಸ್‌) ರಸ್ತೆಯ ಕಟಿಂಗ್ ಶಾಪ್ ಹತ್ತಿರ ನಿಂತಾಗ ಸತೀಶ ತಂದೆ ರಾಜು ಹುಗ್ಗಿ ಹಾಗೂ ಇತರರು ಗುಂಪು ಕಟ್ಟಿಕೊಂಡು ಬಂದು ಸತೀಶ ನನಗೆ "ನಿಂದ್ರಲೇ ಬೋಸಡಿಮಗನೆ ಎಲ್ಲಗೆ ಹೊಂಟಿದಿ, ಮೊನ್ನೆ ಸರಕಾರದ ಮನೆ ಹಂಚಿಕೆ ಮಾಡುವಾಗ ನನಗೆ ಬೈದಿದ್ದಿ ನಿನ್ನ ತಿಂಡಿ ಜಾಸ್ತಯಾಗಿದೆ ,ಅಂತಾ ಬೈಯುತ್ತಾ ಅವರಲ್ಲಿ ಶರಣು ಮತ್ತು ಬಸವರಾಜ ಇಬ್ಬರು ತಡೆದು ನಿಲ್ಲಿಸಿ ಹಿಡಿದುಕೊಂಡಾಗ ಸತೀಶ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಎಡ ರಟ್ಟೆಗೆ ಹೊಡೆದು ರಕ್ತಗಾಯ ಮಾಡಿದಾಗ ಘಾಬರಿಯಿಂದ ಚೀರಾಡುವಾಗ ಶಿವಬಸಪ್ಪಾ ಮತ್ತು ರಮೇಶ ಇವರು ನನ್ನ ಹೆಡಕಿಗೆ ಕೈಹಾಕಿ ನೆಲಕ್ಕೆ ಹಾಕಿದಾಗ ಪ್ರೀತಮ್ ಇತನು ಕಾಲಿನಿಂದ ಬೆನ್ನಿಗೆ ಹೊಡೆಯುತಿದ್ದಾಗ ತಲೆ ಸುತ್ತು ಬಂದು ಬಿದ್ದಾಗ ಎಲ್ಲರೂ ಕೂಡಿ "ನಡೆಯಿರಿ ಸೂಳೆ ಮಗ ಸತ್ತಿರುತ್ತಾನೆ" ಹೋದರು ನಂತರ ನಮ್ಮ ಅಣ್ಣನಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಬಾದ ತಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರೇವೂರ ಠಾಣೆ : ಶ್ರೀ ಸುನಿಲ ತಂದೆ ರೂಪಸಿಂಗ ರಾಠೋಡ ಸಾ:ಅರ್ಜುಣಗಿ ತಾಂಡಾ ಇವರು ದಿನಾಂಕ:02/10/2017 ರಂದು ಮುಂಜಾನೆ ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ನಮ್ಮ ಮನೆಯ ಮುಂದೆ ಇರುವ ಗಲ್ಲಿ ಇಂದ ರಸ್ತೆಯ ಮುಖಾಂತರ ಹೊಗುವಾಗ ಚನ್ನಪ್ಪ ತಂದೆ ಸೊಮಸಿಂಗ ರಾಠೋಡ ನಮ್ಮ ಮನೆಯ ಪಕ್ಕದವನಾಗಿದ್ದು ಎಲೈಯ ಸುಳಿಯಾಮಗನೆ ನಮ್ಮ ಮನೆಯ ಸಂದಿಯಾಗಿಂದು ಎಕಿ ಮಾಡಲಿಕೆ ಬಂದಿದ್ದಿಯಾ ಸುಳಿಯಾಮಗನೆ ಇನ್ನು ಮ್ಯಾಗ ನಮ್ಮ ಗಲ್ಲಿಯ ರಸ್ತೆ ಯಿಂದ ಬರಲಾರದಂಗ ನಿನ್ನ ಕಾಲಕಡಿಯುತ್ತೆನೆ.ಅಂದನು ನಾನು ಎಕಿ ಮಾಡಲ್ಯಾಕ ಬಂದಿಲ ನನ್ನ ವೈಯಕ್ತಿಕ ಕೆಲಸದ ಸಲುವಾಗಿ ಹೊಗುತ್ತಾ ಇದ್ದೆನೆ. ಅಂತಾ ಚನ್ನಪ್ಪನಿಗೆ ನಾನು ಹೇಳಿದೆನು. ಲೆ ಭೋಸಡಿಮಗನೆ ನನಗೆ ಎನು ಬುದ್ದಿ ಹೇಳುತಿಯಾ ಸುಳೆ ಮಗನೆ ಅಂದವನೆ ಅವನ ಅಣ್ಣನಿಗೆ ಎ ಯಶವಂತ ಮನೆಯಿಂದ ಕೊಡಲಿತೆಗೆದುಕೊಂಡು ಜಲ್ದಿಬಾ ಅಂದನು ಅಣ್ಣ ತಮ್ಮ ಇಬ್ಬರು ಕುಡಿಕೊಂಡು ನನ್ನ ಎದೆಯ ಮೇಲಿನ ಅಂಗಿ ಹಿಡಿದ್ದು ಚನ್ನಪ್ಪ ನೆಲಕೆ ಹಾಕಿದನು ಯಶವಂತ ಎ ಸಚೀನ ಅಂಜನಾ ಎ ಬಾರೋ ಈ ಸುಳಿಯಾಮಗನಿಗೆ ಖಲಾಸಮಾಡಿ  ಮುಗಿಸಿ ಬಿಡೊಣ ಅಂದು ನನಗೆ ಕೊಡಲಿಯತ್ತಿ ಯಶವಂತ ನನ ಎಡಕಿವಿಯ ಮಡ್ಡಿಯ ಪಕ್ಕದಲ್ಲಿ ಹೊಡೆದನು ನನಗೆ ಹೊಡೆದತಕ್ಷಣ ಎ ಯವ್ವಾ ಸತ್ತೆನೊ ಎಂದು ದೊಡದ್ವನಿಯಿಂದ ಚಿರಿದ್ದನ್ನು ಅಷ್ಟರಲ್ಲಿ ನನ್ನ ಶಬ್ದಕೆಳಿ ನನ್ನ ತಾಯಿಯವರಾದ ಶಿತಾಬಾಯಿ ಗಂಡ ರೂಪಸಿಂಗ ಮತ್ತು ಬಳಿರಾಮ ತಂದೆ ಸೆವು ಚವ್ಹಾಣ ಪ್ರೇಮಕುಮಾರ ತಂದೆ ನಾಮು ಚವ್ಹಾಣ ಇವರೆಲ್ಲರು ನನ್ನ ಹೊಡೆದ ರಕ್ತ ಗಾಯಗಳನ್ನು ನೋಡಿ ನಮ್ಮ ತಾಯಿ ಮತ್ತು ಇವರೆಲ್ಲರು ಕುಡಿಕೊಂಡು ಜಗಳಬಿಡಿಸುವಾಗ ನನ್ನ ತಾಯಿಯ ಕೊರಳಲ್ಲಿಯಿದ್ದ ಎರಡು ತಾಳಿಯ ಬಟ್ಟಲು ಮತ್ತು ಬಂಗಾರದ 8 ಗುಂಡುಗಳು ಯಶವಂತ,ಚನ್ನಪ್ಪ,ಸಚೀನ,ಅಂಜನಾ ಇವರೆಲ್ಲರು ಕುಡಿಕೊಂಡು ನನ್ನ ತಾಯಿಯ ಸಿರೆ,ಸೆರಗ ಮತ್ತು ಕುಬಸ ಎಳೆದು ಹೊಡೆಯುವಾಗ ಐದು ಜನರಲ್ಲಿ ನನ್ನ ತಾಯಿಯ ಬಂಗಾರದ ಒಡವೆಗಳು ಜಗಳ ನಡೆಯುವಾಗ ಬಿಡಿಸಲಕ್ಕೆ ಬಂದಾಗ ಈ ಮೇಲ್ಕಂಡವರು ಕೊರಳಿನಿಂದ ಬಂಗಾರದ ಒಡವೆಗಳು ಕಿತ್ತಿಕೊಂಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 October 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-10-2017 ರಂದು ರಾಷ್ಟ್ರೀಯ ಹೆದ್ದಾರಿ 218ರ ಮಹ್ಮದಿ ಬಿ,ಎಡ ಕಾಲೇಜ ಎದುರುಗಡೆ ರೋಡಿನ ಮೇಲೆ ಕಾರ ನಂ ಕೆಎ-32 ಎನ್-5873 ನೆದ್ದರ ಚಾಲಕನು ತನ್ನ ಕಾರ ನ್ನು ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರನು ಚಲಾಯಿಸು ತ್ತಿದ್ದ ಲಾರಿ ನಂ ಕೆಎ-38/9369 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿರುತ್ತಾನೆ ಅಂತಾ  ಶ್ರೀ ಬೆಂಜಮೇನ್ ತಂದೆ ವಸಂತ ಟೇಲರ ಸಾಃ ಹೀಲಾಲಪುರ ತಾಃ ಹುಮನಾಬಾದ ಜಿಃ ಬೀದರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:02-10-2017 ರಂದು ರಾತ್ರಿ 9-00 ಗಂಟೆಯಿಂದ 10-30 ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಲಾಡಮುಗಳಿ ಗ್ರಾಮದಲ್ಲಿರುವ ವಿರೂಪಾಕ್ಷೇಶ್ವರ ಮಠದ ಗರ್ಭಗುಡಿಯ ಬೀಗ ಮುರಿದು ಒಳಗಡೆಯಿದ್ದ ವಿರೂಪಾಕ್ಷೇಶ್ವರ ದೇವರ ಪೂರಾತನ ಕಾಲದ ಪಂಚಲೋಹದ ಮೂರ್ತಿ ಅಂದಾಜು 30 ಕೆ.ಜಿಯ ಪಂಚಲೋಹದ ಸುಮಾರು 70000/- ರೂ ಮೌಲ್ಯದ ಹಾಗೂ ಇತ್ತಿಚಿಗೆ ಮಾಡಿಸಿದ 15 ಕೆ.ಜಿಯ ಪಂಚಲೋಹದ ಉತ್ಸವ ಮೂರ್ತಿ ಸುಮಾರು 22000/- ರೂ ಮೌಲ್ಯದ ಮೂರ್ತಿಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ರಾಚಯ್ಯ ತಂದೆ ಮಡಯ್ಯ ಮಠಪತಿ) ಸಾ:ಲಾಡಮುಗಳಿ ತಾ:ಆಳಂದ ಜಿಲ್ಲೆ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಧರೇಪ್ಪ ತಂದೆ ಚನ್ನಪ್ಪ ದೇವಣಗಾಂವ  ಉಃ ಪೊಲೀಸ ಪೆದೆ ನಂ 448 ಜೇವರಗಿ ಪೊಲೀಸ್ ಠಾಣೆ ಇದ್ದು, ಸರಕಾರಿ ತರ್ಪೆಯಿಂದ  ಪೀರ್ಯಾದಿ ವರದಿ ಸಲ್ಲಿಸುವುದೆನೆಂದರೆ, ನನಗೆ ಜೇವರಗಿ ಪೊಲೀಸ್ ಠಾಣೆಯ ಸುದಾರಿತ ಗಸ್ತು ಸಂಖ್ಯೆ 11 ರ ಬೀಟ್ ಸಿಬ್ಬಂದಿ ಅಂತಾ  ನೇಮಕ  ಮಾಡಿದ್ದು ಇರುತ್ತದೆ. ನಾನು ತಮ್ಮ ಆಧೇಶದಂತೆ ಇಂದು ದಿ 02.10.2017 ರಂದು ಮುಂಜಾನೆ 9.00 ಗಂಟೆಗೆ  ಬೀಟ್ ಕರ್ತವ್ಯಕ್ಕೆ ಕುರಿತು ನನಗೆ ನೇಮಿಸಿದ ಬೀಟ್ ನಂ 11 ರ  ಓಂ ನಗರ ಏರಿಯಾಕ್ಕೆ ಹೋಗಿ  ಮುಂಜಾನೆ 10.00 ಗಂಟೆಯ ಸುಮಾರಿಗೆ ಏರಿಯಾದಲ್ಲಿ ಇದ್ದಾಗ, ಬಾತ್ಮಿಯಿಂದ ತಿಳಿದು ಬಂದಿರುವುದೆನೆಂದರೆ ಓಂ ನಗರ ಏರಿಯಾದಲ್ಲಿ ಈಗ 8-10 ದಿವಸಗಳ ಹಿಂದೆ ಯಾರೋ ಅಪರಿಚಿತರು ಶಿವಕುಮಾರ @ ಶಿವರಾಜಕುಮಾರ ಎಂಬ ಹುಡುಗನಿಗೆ ಮನಬಂದಂತೆ ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಟಿ.ವಿ. ಮಾದ್ಯಮಗಳಲ್ಲಿ ಮತ್ತು ಮೊಬೈಲ ಜಾಲ ತಾಣಗಳಲ್ಲಿ ಪ್ರಸಾರ ಆಗಿದೆ ಅಂತಾ ಬಾತ್ಮಿಯಿಂದ ಗೊತ್ತಾಗಿರುತ್ತದೆ. ನಾನು  ಸದರಿ ಘಟನೆಯ ಬಗ್ಗೆ ಏರಿಯಾದಲ್ಲಿ ಮಾಹಿತಿ ಕಲೆ ಹಾಕಲು ಮೊಬೈಲ್ ಜಾಲ ತಾಣದಲ್ಲಿ ಘಟನೆಯ ಬಗ್ಗೆ ಪ್ರಸಾರವಾದ ಘಟನೆ ದೃಶ್ಯಾವಳಿಗಳು ನೋಡಿ ಪರೀಶೀಲಿಸಲಾಗಿ ಸುಮಾರು 5-6 ಜನ ಯಾರೋ ಅಪರಿಚಿತರು ಒಬ್ಬ ಹುಡುಗನಿಗೆ ಹಿಡಿದುಕೊಂಡು ಅವನಿಗೆ ಯಾವುದೋ ಒಂದು ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಮನಬಂದಂತೆ ಅವನಿಗೆ ಹೊಡೆದಿದ್ದು, ಮತ್ತು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಮುಂದಕ್ಕೆ ಹೋಗದಂತೆ ತಡೆದು ಹೊಡೆ ಬಡೆ ಮಾಡಿ ಮಾರಂಣಾಂತಿಕ ಹಲ್ಲೆ ಮಾಡಿದ್ದು ಕಂಡು ಬಂದಿರುತ್ತದೆ. ಮತ್ತು ಈ ಘಟನೆಯ ಚಿತ್ರಿಕರಣವು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿರುತ್ತದೆ. ನಂತರ ನಾನು ನೊಂದ ಹುಡುಗನ ಹೆಸರು ವಿಳಾಸ ಬಗ್ಗೆ ಪತ್ತೆ ಮಾಡಲಾಗಿ ನೊಂದವನು ಶಿವಕುಮಾರ @ ಶಿವರಾಜಕುಮಾರ ತಂದೆ ರಾಜೇಂದ್ರ ಭಜಂತ್ರಿ ಸಾಃ ಜನತಾ ಕಾಲೊನಿ ಜೇವರಗಿ ಅಂತಾ ಗೊತ್ತಾಗಿದ್ದು, ನಾನು ಸದರಿ ಹುಡುಗನ ಮನೆಗೆ ಹೋಗಿ ವಿಚಾರಿಸಲು ಶಿವಕುಮಾರ ಇತನು ಮನೆಯಲ್ಲಿ ಇರಲಿಲ್ಲಾ ಅವನ ತಂದೆ ತಾಯಿ ಮತ್ತು ಅವನ ಸಂಭಂದಿಕರು ಸಹ ಯಾರು ಇರುವುದಿಲ್ಲಾ ಮತ್ತು ಘಟನೆಗೆ ಸಂಭಂದಿಸಿದಂತೆ ಯಾರು ಪಿರ್ಯಾದಿ ನೀಡಲು ಲಬ್ಯೆ ಇರುವುದಿಲ್ಲಾ, ಮತ್ತು ಶಿವಕುಮಾರನ ಮೇಲೆ ಹಲ್ಲೆ ಮಾಡಿದವರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರಿ ಘಟನೆಯೂ ಜೇವರಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸುದಾರಿತ ಬೀಟ್ ನಂ 11 ರ ಜೇವರಗಿ ಪಟ್ಟಣದ ಓಂ ನಗರ ಏರಿಯಾದ ನನ್ನ ಬೀಟನಲ್ಲಿ ಆಗಿರುವುದರಿಂದ ಇದು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿದ್ದರಿಂದ ಆ ದುಷ್ಕರ್ಮಿಗಳನ್ನು ಹಾಗೇ ಬಿಟ್ಟಲ್ಲಿ ಮತ್ತೆ ಇಂಥಹ ಘಟನೆ ಮಾಡಲು ಹಿಂಜರಿವುದಿಲ್ಲಾ, ಮತ್ತು ಸದ್ಯಕೆ ಪೀರ್ಯಾದಿ ನೀಡುವವರು ಯಾರು ಲಬ್ಯೆ ಇರಲಾರದ ಕಾರಣ ನಾನು ಸದರಿ ಎರಿಯಾದ ಸುದಾರಿತ ಬೀಟ್ ಸಿಬ್ಬಂದಿಯಾಗಿ ಇಂತಹ ಘಟನೆಗಳ ಬಗ್ಗೆ ಕ್ರಮ ಕೈಕೊಳುವುದು ಸೂಕ್ತ ಅಂತಾ ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.