POLICE BHAVAN KALABURAGI

POLICE BHAVAN KALABURAGI

04 October 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-10-2017 ರಂದು ರಾಷ್ಟ್ರೀಯ ಹೆದ್ದಾರಿ 218ರ ಮಹ್ಮದಿ ಬಿ,ಎಡ ಕಾಲೇಜ ಎದುರುಗಡೆ ರೋಡಿನ ಮೇಲೆ ಕಾರ ನಂ ಕೆಎ-32 ಎನ್-5873 ನೆದ್ದರ ಚಾಲಕನು ತನ್ನ ಕಾರ ನ್ನು ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರನು ಚಲಾಯಿಸು ತ್ತಿದ್ದ ಲಾರಿ ನಂ ಕೆಎ-38/9369 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿರುತ್ತಾನೆ ಅಂತಾ  ಶ್ರೀ ಬೆಂಜಮೇನ್ ತಂದೆ ವಸಂತ ಟೇಲರ ಸಾಃ ಹೀಲಾಲಪುರ ತಾಃ ಹುಮನಾಬಾದ ಜಿಃ ಬೀದರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:02-10-2017 ರಂದು ರಾತ್ರಿ 9-00 ಗಂಟೆಯಿಂದ 10-30 ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಲಾಡಮುಗಳಿ ಗ್ರಾಮದಲ್ಲಿರುವ ವಿರೂಪಾಕ್ಷೇಶ್ವರ ಮಠದ ಗರ್ಭಗುಡಿಯ ಬೀಗ ಮುರಿದು ಒಳಗಡೆಯಿದ್ದ ವಿರೂಪಾಕ್ಷೇಶ್ವರ ದೇವರ ಪೂರಾತನ ಕಾಲದ ಪಂಚಲೋಹದ ಮೂರ್ತಿ ಅಂದಾಜು 30 ಕೆ.ಜಿಯ ಪಂಚಲೋಹದ ಸುಮಾರು 70000/- ರೂ ಮೌಲ್ಯದ ಹಾಗೂ ಇತ್ತಿಚಿಗೆ ಮಾಡಿಸಿದ 15 ಕೆ.ಜಿಯ ಪಂಚಲೋಹದ ಉತ್ಸವ ಮೂರ್ತಿ ಸುಮಾರು 22000/- ರೂ ಮೌಲ್ಯದ ಮೂರ್ತಿಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ರಾಚಯ್ಯ ತಂದೆ ಮಡಯ್ಯ ಮಠಪತಿ) ಸಾ:ಲಾಡಮುಗಳಿ ತಾ:ಆಳಂದ ಜಿಲ್ಲೆ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಧರೇಪ್ಪ ತಂದೆ ಚನ್ನಪ್ಪ ದೇವಣಗಾಂವ  ಉಃ ಪೊಲೀಸ ಪೆದೆ ನಂ 448 ಜೇವರಗಿ ಪೊಲೀಸ್ ಠಾಣೆ ಇದ್ದು, ಸರಕಾರಿ ತರ್ಪೆಯಿಂದ  ಪೀರ್ಯಾದಿ ವರದಿ ಸಲ್ಲಿಸುವುದೆನೆಂದರೆ, ನನಗೆ ಜೇವರಗಿ ಪೊಲೀಸ್ ಠಾಣೆಯ ಸುದಾರಿತ ಗಸ್ತು ಸಂಖ್ಯೆ 11 ರ ಬೀಟ್ ಸಿಬ್ಬಂದಿ ಅಂತಾ  ನೇಮಕ  ಮಾಡಿದ್ದು ಇರುತ್ತದೆ. ನಾನು ತಮ್ಮ ಆಧೇಶದಂತೆ ಇಂದು ದಿ 02.10.2017 ರಂದು ಮುಂಜಾನೆ 9.00 ಗಂಟೆಗೆ  ಬೀಟ್ ಕರ್ತವ್ಯಕ್ಕೆ ಕುರಿತು ನನಗೆ ನೇಮಿಸಿದ ಬೀಟ್ ನಂ 11 ರ  ಓಂ ನಗರ ಏರಿಯಾಕ್ಕೆ ಹೋಗಿ  ಮುಂಜಾನೆ 10.00 ಗಂಟೆಯ ಸುಮಾರಿಗೆ ಏರಿಯಾದಲ್ಲಿ ಇದ್ದಾಗ, ಬಾತ್ಮಿಯಿಂದ ತಿಳಿದು ಬಂದಿರುವುದೆನೆಂದರೆ ಓಂ ನಗರ ಏರಿಯಾದಲ್ಲಿ ಈಗ 8-10 ದಿವಸಗಳ ಹಿಂದೆ ಯಾರೋ ಅಪರಿಚಿತರು ಶಿವಕುಮಾರ @ ಶಿವರಾಜಕುಮಾರ ಎಂಬ ಹುಡುಗನಿಗೆ ಮನಬಂದಂತೆ ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಟಿ.ವಿ. ಮಾದ್ಯಮಗಳಲ್ಲಿ ಮತ್ತು ಮೊಬೈಲ ಜಾಲ ತಾಣಗಳಲ್ಲಿ ಪ್ರಸಾರ ಆಗಿದೆ ಅಂತಾ ಬಾತ್ಮಿಯಿಂದ ಗೊತ್ತಾಗಿರುತ್ತದೆ. ನಾನು  ಸದರಿ ಘಟನೆಯ ಬಗ್ಗೆ ಏರಿಯಾದಲ್ಲಿ ಮಾಹಿತಿ ಕಲೆ ಹಾಕಲು ಮೊಬೈಲ್ ಜಾಲ ತಾಣದಲ್ಲಿ ಘಟನೆಯ ಬಗ್ಗೆ ಪ್ರಸಾರವಾದ ಘಟನೆ ದೃಶ್ಯಾವಳಿಗಳು ನೋಡಿ ಪರೀಶೀಲಿಸಲಾಗಿ ಸುಮಾರು 5-6 ಜನ ಯಾರೋ ಅಪರಿಚಿತರು ಒಬ್ಬ ಹುಡುಗನಿಗೆ ಹಿಡಿದುಕೊಂಡು ಅವನಿಗೆ ಯಾವುದೋ ಒಂದು ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಮನಬಂದಂತೆ ಅವನಿಗೆ ಹೊಡೆದಿದ್ದು, ಮತ್ತು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಮುಂದಕ್ಕೆ ಹೋಗದಂತೆ ತಡೆದು ಹೊಡೆ ಬಡೆ ಮಾಡಿ ಮಾರಂಣಾಂತಿಕ ಹಲ್ಲೆ ಮಾಡಿದ್ದು ಕಂಡು ಬಂದಿರುತ್ತದೆ. ಮತ್ತು ಈ ಘಟನೆಯ ಚಿತ್ರಿಕರಣವು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿರುತ್ತದೆ. ನಂತರ ನಾನು ನೊಂದ ಹುಡುಗನ ಹೆಸರು ವಿಳಾಸ ಬಗ್ಗೆ ಪತ್ತೆ ಮಾಡಲಾಗಿ ನೊಂದವನು ಶಿವಕುಮಾರ @ ಶಿವರಾಜಕುಮಾರ ತಂದೆ ರಾಜೇಂದ್ರ ಭಜಂತ್ರಿ ಸಾಃ ಜನತಾ ಕಾಲೊನಿ ಜೇವರಗಿ ಅಂತಾ ಗೊತ್ತಾಗಿದ್ದು, ನಾನು ಸದರಿ ಹುಡುಗನ ಮನೆಗೆ ಹೋಗಿ ವಿಚಾರಿಸಲು ಶಿವಕುಮಾರ ಇತನು ಮನೆಯಲ್ಲಿ ಇರಲಿಲ್ಲಾ ಅವನ ತಂದೆ ತಾಯಿ ಮತ್ತು ಅವನ ಸಂಭಂದಿಕರು ಸಹ ಯಾರು ಇರುವುದಿಲ್ಲಾ ಮತ್ತು ಘಟನೆಗೆ ಸಂಭಂದಿಸಿದಂತೆ ಯಾರು ಪಿರ್ಯಾದಿ ನೀಡಲು ಲಬ್ಯೆ ಇರುವುದಿಲ್ಲಾ, ಮತ್ತು ಶಿವಕುಮಾರನ ಮೇಲೆ ಹಲ್ಲೆ ಮಾಡಿದವರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರಿ ಘಟನೆಯೂ ಜೇವರಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸುದಾರಿತ ಬೀಟ್ ನಂ 11 ರ ಜೇವರಗಿ ಪಟ್ಟಣದ ಓಂ ನಗರ ಏರಿಯಾದ ನನ್ನ ಬೀಟನಲ್ಲಿ ಆಗಿರುವುದರಿಂದ ಇದು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿದ್ದರಿಂದ ಆ ದುಷ್ಕರ್ಮಿಗಳನ್ನು ಹಾಗೇ ಬಿಟ್ಟಲ್ಲಿ ಮತ್ತೆ ಇಂಥಹ ಘಟನೆ ಮಾಡಲು ಹಿಂಜರಿವುದಿಲ್ಲಾ, ಮತ್ತು ಸದ್ಯಕೆ ಪೀರ್ಯಾದಿ ನೀಡುವವರು ಯಾರು ಲಬ್ಯೆ ಇರಲಾರದ ಕಾರಣ ನಾನು ಸದರಿ ಎರಿಯಾದ ಸುದಾರಿತ ಬೀಟ್ ಸಿಬ್ಬಂದಿಯಾಗಿ ಇಂತಹ ಘಟನೆಗಳ ಬಗ್ಗೆ ಕ್ರಮ ಕೈಕೊಳುವುದು ಸೂಕ್ತ ಅಂತಾ ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

01 October 2017

KALABURAGI DISTRICT REPORTED CRIMES

ಫರಹತಾಬಾದ
ಅಪಘಾತ ಪ್ರಕರಣ:- ದಿನಾಂಕ 23/09/2017 ರಂದು 8.30 ಪಿ.ಎಮಕ್ಕೆ ಹುಣಸಿ ಹಡಗಿಲ- ಕಲಬುರಗಿ ರೋಡಿನ ಮಾರ್ಗ ಮದ್ಯದಲ್ಲಿರುವ ಪ್ರಭು ದುದ್ದಗಿ ಇವರ ಹೊಲದ ಪಕ್ಕದ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದರ ಚಾಲಕ ಮಲ್ಲಿಕಾಜರ್ುನ ಧನ್ನೂರ ಸಾಃ ಹುಣಸಿ ಹಡಗಿಲ ತನ್ನ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕೀಡಾಗಿ ಬಿದಿದ್ದು, ಶ್ರೀ ಶ್ಯಾಮಸುಂದರ ತಂದೆ ಪ್ರಭುಲಿಂಗ ಮಾಲಿ ಪಾಟೀಲ ವಃ 24 ವರ್ಷ ಜಾಃ ಲಿಂಗಾಯತ ಉಃ ಖಾಸಗಿ ಚಾಲಕ ಸಾಃ ಹುಣಸಿ ಹಡಗಿಲ ತಾ.ಜಿಃ ಕಲಬುರಗಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಮುಧೋಳ ಪೊಲೀಸ ಠಾಣೆ:

ಅಪಘಾತ ಪ್ರಕರಣ: ದಿನಾಂಕ: 28-09-2017 ರಂದು ಮಹ್ಮದ ಮೌಲಾನಾ ತಂದೆ ಶೇಖ ಅಹೇಮದ ಸಾಬ ಹಾಜಿವಲೆ ಸಾ: ಕೊಂತನಪಲ್ಲಿ ಗ್ರಾಮ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರಲ್ಲಿ ದಿ: 28-09-17 ರಂದು ನಾನು ಹಾಗು ನಮ್ಮ ತಮ್ಮನಾದ ಚಾಂದಪಾಶಾ ತಂದೆ ಶೇಖ ಅಹೇಮದ ಸಾಬ ಹಾಜಿವಾಲೆ ಮತ್ತು ಲೇಬರ ಜನರಾದ ಚುಕ್ಕುಬೆಗಂ, ವೆಂಕಟಮ್ಮ & ನಾಗಪ್ಪ ಇಂಟನಕಿ ಸಾ: ಎಲ್ಲರೂ ಕೊಂತನಪಲ್ಲಿ ಗ್ರಾಮ ಹೀಗೆ ಎಲ್ಲರೂ ಕೂಡಿ ನಮ್ಮ ಟ್ಯಾಕ್ಟರ ನಂ ಕೆಎ32ಟಿಎ1351-52 ನೇದ್ದರಲ್ಲಿ ಖಣಿಯಿಂದ ನಮ್ಮ ಹೊಲದಲ್ಲಿ ಏತ್ತಿನ ಕೊಟ್ಟಿಗೆ ಕಟ್ಟುವ ಸಲುವಾಗಿ ಕಲ್ಲುಗಳು ತುಂಬಿಕೊಂಡು ಬರಲು ಹೋಗಿದ್ದು, ಅಲ್ಲಿ ಖಣಿಯಲ್ಲಿ ಟ್ಯಾಕ್ಟರಲ್ಲಿ ಟ್ರಾಲಿಯಲ್ಲಿ ಫರ್ಸಿ ಕಲ್ಲುಗಳು ತುಂಬಿಕೊಂಡು ವಾಸಪ ಖಣಿಯಿಂದ ನಮ್ಮ ಹೊಲಕ್ಕೆ ಬರುತ್ತಿದ್ದಾಗ ಸದರಿ ಟ್ಯಾಕ್ಟರದಲ್ಲಿ ಮುಂದುಗಡೆ ಡ್ರೈವರ್ ಹತ್ತಿರ ನಮ್ಮ ತಮ್ಮ ಚಾಂದಪಾಶಾ ಕುಳಿತುಕೊಂಡಿದ್ದು, ನಾನು ಹಾಗು ಲೇಬರ ಜನರು ಕೆಳಗಡೆ ಇದ್ದು, ಸದರಿ ಟ್ಯಾಕ್ಟರ ಚಾಲಕನಾದ ಮಹ್ಮದ ಏಕ್ಬಲ್ ತಂದೆ ಅಬ್ದುಲ ಮಜೀದ ಇನಾಮ್ದಾರ ಇತನು ಟ್ಯಾಕ್ಟರನ್ನು ಅತಿವೇಗ ಹಾಗು ನಿಷ್ಳಾಜಿತನಿಂದ ನಡೆಯಿಸುತ್ತಾ ರಸ್ತೆಯ ಎಡ ಬದಿಯ ತೆಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇದರಿಂದ ಟ್ಯಾಕ್ಟರದಲ್ಲಿ ಕುಳಿತಿದ್ದ ನಮ್ಮ ತಮ್ಮ ಚಾಂದಪಾಶ ಇತನು ಕೆಳಗೆ ಬಿದ್ದು, ಆತನ ಮೇಲೆ ಟ್ಯಾಕ್ಟರದಲ್ಲಿದ್ದ ಫರ್ಸಿಕಲ್ಲುಗಳು ಬಿದಿದ್ದರಿಂದ ಇತನು ತಲೆಗೆ ಭಾರಿ ಗಾಯಹೊಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಟ್ಯಾಕ್ಟರ ಚಾಲಕನು ಅಪಘಾತ ಪಡಿಸಿ ಓಡಿ ಹೋಗಿದ್ದು, ಈ ಬಗ್ಗೆ ಟ್ಯಾಕ್ಟರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

27 September 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಕಾಶಿನಾಥ ತಂದೆ ಮಾನಸಿಂಗ್ ಪವಾರ ಇವರ ತಮ್ಮನಾದ ಶಿವಾಜಿ ಇತನು ತನ್ನ ಉಪಯೋಗಕ್ಕಾಗಿ ಎರಡು ವರ್ಷಗಳ ಹಿಂದೆ ಹೀರೋ ಕಂಪನಿಯ ಮೋಟಾರ ಸೈಕಲ್ ನಂಬರ: ಕೆ.ಎ.32.ಇಸಿ.6831 ಖರೀದಿ ಮಾಡಿದ್ದು ದಿನಾಂಕ 26-09-2017 ರಂದು ಸಾಯಂಕಾಲ ನನ್ನ ತಮ್ಮನಾದ ಶಿವಾಜಿಯು ತನ್ನ ಮೋಟಾರ ಸೈಕಲ್ ನಂಬರ: ಕೆ.ಎ.32.ಇಸಿ.6831 ನೇದ್ದನ್ನು ತೆಗೆದುಕೊಂಡು ಕಲಬುರಗಿಯಲ್ಲಿ ಇರುವ ತನ್ನ ಮಕ್ಕಳಾದ ನೇಹಾ ವ: 08 ವರ್ಷ, ಹಾಗೂ ಚಂದ್ರಶೇಖರ ವ: 06 ವರ್ಷ, ಇವರುಗಳನ್ನು ಭೇಟಿಯಾಗಿ ಬರುತ್ತೇನೆ ಎಂದು ಹೇಳಿ ನಮ್ಮ ತಾಂಡಾದಿಂದ ಹೋಗಿರುತ್ತಾನೆ. ನಂತರ ಸಂಜೆ 7 ಗಂಟೆ 10 ನಿಮಿಷಕ್ಕೆ ಗುಳ್ಳೊಳ್ಳಿ ಗ್ರಾಮದ ಸಿದ್ದು ತಂದೆ ಕಾಶಿನಾಥ ಪಾಟೀಲ ಇವರು ನನಗೆ ಫೋನ ಮಾಡಿ ನನ್ನ ತಮ್ಮನಾದ ಶಿವಾಜಿಯು ಮೋಟಾರ ಸೈಕಲ್ ಮೇಲೆ ಕಲಬುರಗಿ ಕಡೆಗೆ ಹೋಗುವಾಗ ಲಾಡಚಿಂಚೋಳಿ ತಾಂಡಾ ಕ್ರಾಸ ದಾಟಿ ಲಾಡ ಚಿಂಚೋಳಿ ಕ್ರಾಸದ ಕಡೆಗೆ ಹೋಗುವಾಗ ತನ್ನ ಮೋಟಾರ ಸೈಕಲ್ ನಂ. ಕೆ.ಎ.32.ಇಸಿ.6831 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಅವನ ಎಡಗೈ ಮುಂಗೈಗೆ ಭಾರಿ ಪೆಟ್ಟಾಗಿ ಮತ್ತು ತೆಲೆಗೆ ಹಾಗೂ ಎದೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಎಂದು ತಿಳಿಸಿದ್ದ ಮೇರೆಗೆ ನಾನು ಮತ್ತು ನಮ್ಮ ತಾಂಡಾದ ವಿಜಯ ತಂದೆ ದೇಶು ಪವಾರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ತಮ್ಮನ್ನು ಭಾರಿ ಗಾಯಹೊಂದಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ:26/09/2017 ರಂದು ಕಲ್ಲು ಒಡೆಯುವ ಕೆಲಸಕ್ಕಾಗಿ  ಜಿಡಗಾ ಗ್ರಾಮಕ್ಕೆ ಹೋಗಬೇಕೆಂದು ಶ್ರೀ ನಾಗೇಶ ತಂದೆ ಕುಲಪ್ಪಾ ವಡ್ಡರ  ಸಾ: ವಡ್ಡರ ಗಲ್ಲಿ ಆಳಂದ ಮತ್ತು ಸುಭಾಷ ಇಬ್ಬರೂ ಕೂಡಿಕೊಂಡು ಸುಭಾಷ ಇತನ ಹೊಸ ನಂಬರ್ ಇಲ್ಲದ TVS XL  ಮೋಟರ್ ಸೈಕಲ ಮೇಲೆ ಹೋಗುವಾಗ ಮೋಟರ್ ಸೈಕಲವನ್ನು ಸುಭಾಷ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತಿದ್ದು ಮೋಟರ್ ಸೈಕಲ ಶಕಾಪೂರ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಸಮೀಪ ಬಂದಾಗ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಟವರಸ್ ಲಾರಿ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದರಿಂದ ಹಿಂದೆ ಕುಳಿತ ನಾನು ಕೆಳಗಡೆ ಬಿದ್ದಾಗ ನನಗೆ ಬಲಗಾಲಿನ ಪಾದದ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಹತ್ತಿರ ಗಾಯವಾಗಿದ್ದು ಮೋಟರ್ ಸೈಕಲ ಚಲಾಯಿಸುತ್ತಿದ್ದ ಸುಭಾಷ ಇತನಿಗೆ ಬಲಗಾಲಿನ ಛಪ್ಪೆಗೆ ತೊಡೆಗೆ ಭಾರಿಗಾಯವಾಗಿದ್ದು ಮತ್ತು ಎಡಗಾಲಿನ ಮೊಳಲಾಲ ಹತ್ತಿರ ಮುರಿದು ಭಾರಿಗಾಯವಾಗಿ ರಕ್ತ ಬಂದಿದ್ದು ಇರುತ್ತದೆ. ನಮಗೆ ಡಿಕ್ಕಿಪಡಿಸಿದ ಟವರಸ್ ಲಾರಿ ನಂಬರ್ ನೋಡಲಾಗಿ MH-12 LT-9620 ಇದ್ದು ಅದರ ಚಾಲಕನ ಹೆಷರು ವಿಚಾರಿಸಿಲಾಗಿ ಶಿವಾಜಿ ತಂದೆ ವಿಲಾಸ ವಾಮಂಗ ಸಾ:ವಾಗ್ದರ್ಗಿ ತಾ|| ಅಕ್ಕಲಕೋಟ ಅಂತಾ ಗೊತ್ತಾಗಿದ್ದು. ಲಾರಿ ಚಾಲಕ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮಗೆ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಆಳಂದದ ಸರ್ಕಾರಿ ಆಸ್ಪತ್ರೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಇಬ್ಬರಿಗೂ ಚಿಕಿತ್ಸೆ ನೀಡಿ ಸುಭಾಷನಿಗೆ ಭಾರಿಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ದೆ ಕುರಿತು ತಗೆದುಕೊಂಡು ಹೋಗಲು ತಿಳಿಸಿದಾಗ ಸುಭಾಷ ಇತನಿಗೆ ಅವರ ಮನೆಯವರು 108 ಅಂಬುಲೆನ್ಸ್ ನಲ್ಲಿ ಉಮರ್ಗಾದ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ರಾತ್ರಿ ಖಜೂರಿ ಹತ್ತಿರ ಇದ್ದಾಗ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.