POLICE BHAVAN KALABURAGI

POLICE BHAVAN KALABURAGI

04 September 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕ ಅಫಜಲಪೂರ ರವರು ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಆದೇಶದಂತೆ  ದಿನಾಂಕ 02/09/2017 ರಂದು ಅಫಜಲಪೂರ ದಿಂದ ಬಳೂರ್ಗಿಗೆ ಹೋಗುವ ರೋಡಿಗೆ ಅಫಜಲಪೂರ ದಿಂದ ಅಂದಾಜ 2.ಕೀ ಮಿ ಅಂತರದಲ್ಲಿ ಅಕ್ರಮವಾಗಿ ಕಳ್ಳತದಿಂದ ಮರಳು ಸಾಗಾಣಿಕೆ ಮಾಡುತಿದ್ದ ಟ್ರ್ಯಾಕ್ಟರ SL NO NNHY03784 K E ನೇದ್ದರ ಮೇಲೆ ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕ ಓಡಿಹೋಗಿದ್ದು ಸದರಿ ಟ್ರ್ಯಾಕ್ಟರ ಚಕ ಮಾಡಿದಾಗ ಅದರ ಟ್ರೈಲಿಯಲ್ಲಿ ಅಂದಾಜ 3000/-ರೂ ಕಿಮ್ಮತ್ತಿನ ಮರಳು ತುಂಬಿದ್ದು ಇದ್ದು ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಅಫಜಲಪೂರ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ  :
ಫರತಾಬಾದ ಠಾಣೆ : ಶ್ರೀ ಅಪ್ಪಸಾಬ ತಂದೆ ಮಲ್ಲಿಕಾರ್ಜುನ ಬಿರಾದಾರ ಇವರು ದಿನಾಂಕ 02/09/2017 ರಂದು ಮುಂಜಾನೆ ತನ್ನ  ಮೋಟಾರ ಸೈಕಲ ನಂ ಕೆಎ-32 ಆರ್- 8128 ನೆದ್ದರ ಮೇಲೆ ತಮ್ಮೂರಾದ ಕೌವಲಗಾ(ಕೆ) ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಮೋಟಾರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿರುವಾಗ ರಾಷ್ಟ್ರಿಯ ಹೇದ್ದಾರಿ 218 ರ ನಂದಿಕೂರ ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಆಟೋ ರೀಕ್ಷಾ ಚಾಲಕನು ತನ್ನ ಆಟೋ ರೀಕ್ಷಾವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಆರ್-8128 ನೇದ್ದಕ್ಕೆ ಡಿಕ್ಕಿಪಡಿಸಿದ ಪರಿಣಾಮ ತಾನು ರೋಡಿನ ಮೇಲೆ ಬಿದಿದ್ದು, ಇದ್ದರಿಂದ ಬಲಭಾಗದ ತಲೆಗೆ ಭಾರಿ ರಕ್ತಗಾಯ, ಬಲ ಹುಬ್ಬಿನ ಹತ್ತಿರ ರಕ್ತಗಾಯ, ಮೇಲ್ತುಟಿಗೆ ರಕ್ತಗಾಯ, ಗದ್ದಕ್ಕೆ ರಕ್ತಗಾಯಗಳಾಗಿರುತ್ತವೆ.  ಅಪಘಾತ ಪಡಿಸಿದ ಆಟೋ ರೀಕ್ಷಾ ಚಾಲಕನು ತನ್ನ ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ. ಅಪಘಾತಪಡಿಸಿದ ಆಟೋ ರೀಕ್ಷಾ ನಂ ಕೆಎ-32 ಬಿ-4105 ನೇದ್ದರ ಚಾಲಕನು ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಕ್ರಿಮಿನಾಶಕ ಬೆರೆಸಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮರೆಮ್ಮ ಗಂಡ ದೇವಪ್ಪ ಹಾಲಗಡ್ಲಾ ಸಾಃ ಚನ್ನೂರ ತಾಃ ಜೇವರಗಿ ಇವರು ಆಂದೊಲಾ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದ ನಮ್ಮೂರ ಅಮಲಪ್ಪ ಇವರ ಹೊಲದಲ್ಲಿ ರೋಡಿನ ಪಕ್ಕದಲ್ಲಿಯೇ  ಒಂದು ಸಾರ್ವಜನಿಕ ಸರಕಾರಿ ಬಾವಿ ಇರುತ್ತದೆ ಹಿಂದಿನಿಂದಲೂ ಆ ಬಾವಿಯ ನೀರು ನಾವು ಓಣಿಯವರೆಲ್ಲರೂ ಕುಡಿಯಲು ಬಳಸುತ್ತಾ ಬಂದಿರುತ್ತವೆ. 2014 ನೇ ವರ್ಷದಲ್ಲಿ ಈ ಬಾವಿಯಲ್ಲಿ ಯಾರೊ ಕಿಡಿಗೇಡಿಗಳು ಸತ್ತ ನಾಯಿ, ಸತ್ತ ಹಾವು  ಹಾಕಿದ್ದರು, ಮತ್ತು ಚಪ್ಪಲಿ,ಸಹ ಹಾಕಿ ನೀರು ಕಲೂಷಿತ ಮಾಡಿದ್ದರು. ಬಾವಿ ಇದ್ದ ಹೊಲ ನಮ್ಮೂರಿನ ಗೊಲ್ಲಾಳಪ್ಪಗೌಡ ಇತನು ಪಾಲಿಗೆ ಮಾಡಿದ್ದಾಗಿನಿಂದ ಈತನು ನಮ್ಮ ಜಾತಿಯವರಿಗೆ ಈ ಬಾವಿಯ ನೀರು ಕುಡಿಯಲು ತೆಗೆದುಕೊಂಡು ಹೋಗಬಾರದೆಂದು ನಮ್ಮ ಸಂಗಡ ತಕರಾರು ಮಾಡಿದ್ದನು.  ಒಂದು ದಿವಸ  ನಮ್ಮ ಜಾತಿಯವರೆ ಆದ  ಮಹಾಂತಮ್ಮ ಗಂಡ ಭೀಮಾಶಂಕರ ಮತ್ತು ಬಸ್ಸಮ್ಮ ಗಂಡ ಮರೆಪ್ಪ ಹೊಸಮನಿ ಇವರು ಬಾವಿಗೆ ನೀರು ತರಲು ಹೋದಾಗ ಅವರ ಕೊಡ ಮತ್ತು ಹಗ್ಗ ಬಾವಿ ನೀರಿನಲ್ಲಿ ಹಾಕಿರುತ್ತಾನೆ, ಏ ಹೊಲೆಯ ಸೂಳೆ ಮಕ್ಕಳೆ ನೀರಿಗೆ ಬರಬೇಡವೆಂದು ಎಷ್ಟು ಸಲ ಹೇಳಬೇಕು ಎಂದು ಹೊಲಸು ರೀತಿಯಲ್ಲಿ ಬೈದಿರುತ್ತಾನೆ ಅಲ್ಲದೆ ಬಾವಿಯ ಸುತ್ತಲು ಹಾಕಿದ  ಬೇಡ್ ಕೂಡಾ ಕಿತ್ತಿರುತ್ತಾನೆ. ನಮ್ಮ ಜಾತಿಯವರಿಗೆ ನೀರು ಒಂದೆ ಮೂಲ ಇರುವುದರಿಂದ  ತೊಂದರೆಯಾಗಿರುತ್ತದೆ.  ದಿ. 30.08.2017 ರಂದು ಮುಂಜಾನೆ 6.30 ಗಂಟೆಯ ಸುಮಾರಿಗೆ ನಾನು ಮತ್ತು ಮಹಾಂತಮ್ಮ ಗಂಡ ಭೀಮಾಶಂಕರ ಇಬ್ಬರೂ ಕೂಡಿಕೊಂಡು ಬಾವಿಗೆ ನೀರು ತರಲು ಹೋಗಿದ್ದೆವುಬಾವಿಯಿಂದ ಕೊಡದಲ್ಲಿ ನೀರು ತುಂಬಿಕೊಂಡಾಗ ನೀರಿನಲ್ಲಿ ಕೆಟ್ಟ ಎಣ್ಣೆ ವಾಸನೆ ಬರುತ್ತಿತು. ಅದನ್ನು  ನೊಡಲಾಗಿ ನೀರಿನಲ್ಲಿ  ಎಂಡೊಸಲ್ಫಾನ ಅಥವಾ ಯಾವುದೊ ಕ್ರೀಮಿನಶಕ ವಿಷದ ಎಣ್ಣೆ ಹಾಕಿರುವುದು ಕಂಡು ಬಂದಿರುತ್ತದೆ, ಅಷ್ಟರಲ್ಲಿಯೇ ನಮ್ಮೂರ ಮರೆಪ್ಪ ಹೊಸಮನಿ ಇವರು ಸಹ ಬಂದು ನೋಡಿ ಊರಲ್ಲಿ ತಿಳಿಸಿದರು. ಊರಿನವರಾದ ಮರೆಪ್ಪ ಕೊಟಗಿ, ನಾಗಪ್ಪ ಗುಬಚಿ,ಮಾನಪ್ಪ ಕಟ್ಟಿಮನಿ, ಭೀಮರಾಯ ಕಟ್ಟಿಮನಿ ತಿಪ್ಪಣ್ಣ ಜಾನಕರ, ಶಂಕರೇಪ್ಪ ಜಾನಕರ, ರವರು ಬಂದು ನೋಡಿರುತ್ತಾರೆಈ ಬಾವಿ ನೀರು ಕೂಡಿದವರು ಸಾಯಿತ್ತಾರೆ ಎಂದು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ದಿ 29.08.2017 ರ & 30.09.2017 ರ ರಾತ್ರಿ ವೇಳೆಯಲ್ಲಿ  ಎಂಡೊಸಲ್ಫಾನ ಅಥವಾ ಯಾವುದೋ ಕ್ರೀಮಿನಶಕ  ಎಣ್ಣ ಔಷದ ಹಾಕಿದ್ದು  ಇರುತ್ತದೆ. ನಮ್ಮೂರಿನಲ್ಲಿ ನಾವು ಕುಡಿಯಲು ನೀರು ಬಳಸುವ ಬಾವಿ ಇದ ಹೊಲ ಲೀಜಿಗೆ ಹಾಕಿಕೊಂಡ ಗೊಲ್ಲಾಳಪ್ಪಗೌಡ ತಂದೆ ಕಲ್ಲಪ್ಪಗೌಡ ಕೂಕನೂರ ಈ ಹಿಂದೆಯೂ ನಮಗೆ ತೊಂದರೆ ಕೊಟ್ಟಿದ್ದು, ಅವನೇ  ಈಗ ಕೂಡಾ ಈ ಕೃತ್ಯ ಮಾಡಿರುತ್ತಾನೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ರಾಜು ತಂದೆ ಲಕ್ಷ್ಮಣ ಗೋಟೆಕರ ಸಾ: ಮೇಸ್ತ್ರಿ ನಗರ ಶಹಾಬಾದ ಇವರು ದಿನಾಂಕ: 02/09/2017 ರಂದು ಮುಂಜಾನೆ ತನ್ನ ಮನೆಯಿಂದ ಹೊರಗೆ ನಡೆದಾಗ ಅದೇ ವೇಳೆಗೆ ಅರೋಪಿತರಾದ ಗೊವಿಂದ ತಂದೆ ಹಣಮಂತ , ರಾಜು ತಂದೆ ಹಣಮಂತ , ಹಣಮಂತ ತಂದೆ ತಿಮ್ಮಣ್ಣ ಮತ್ತು ಅಸಾಓಕ ತಂದೆ ಯಲ್ಲಪ್ಪ ಇವರೆಲ್ಲಾರೂ ನಮ್ಮ ಮನೆಯ ಮುಂದೆ ಬಂದು ನನಗೆ ಎಲೇ ರಾಜ ಎಲ್ಲಗೆ ನಡೆದಿದ್ದಿ ನಿಂದ್ರಲೇ ಅಂತಾ ಆಕ್ರಮ ತಡೆದು ನಿಲ್ಲಿಸಿ ಅಂಗಿ ಹಿಡಿದು ಕಳೆದಾಡಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ನಳದ ಪೈಪಿನಿಂದ ತಲೆಗೆ ಹೊಡೆದು ರಕ್ತಗಾಯಾ ಪಡಿಸಿ ಇನ್ನೋಂದು ಸಲ ಗೋಡೆಯ ವಿಷಯದಲ್ಲಿ ಮಾತೆತ್ತಿದ್ದರೆ ಸುಮ್ಮನೆಗೆ ಬಿಡುವುದಿಲ್ಲಾ ಅಂತಾ ಕಬ್ಬಿಣದ ರಾಡು ತೋರಿಸಿ ಜೀವದ ಭಯ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

03 September 2017

Kalaburagi District Reported Crimes

ಸಾಕ್ಷಿ ಹೇಳಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ತಂದೆ ಶಿವಪ್ಪ ಪೂಜಾರಿ ಸಾ||ಹಾವಳಗಾ  ತಾ||ಅಫಜಲಪೂರ ರವರು ಸುಮಾರು 10 ವರ್ಷದ ಹಿಂದೆ ನಮ್ಮ ಗ್ರಾಮದ ಗುರಪ್ಪ ತಂದೆ ಶಿವರಾಯ ನಾಟೀಕರ ಹಾಗು ಘತ್ತರಗಾ ಗ್ರಾಮದ ಭಗವಂತ ತಂದೆ ಮಲ್ಲಪ್ಪ ಹಂಚನಾಳ  ಇವರ ಮೇಲೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ ದಾಖಲಾಗಿದ್ದು, ನಾನು ಸದರಿ ಕೇಸದಲ್ಲಿ ಸಾಕ್ಷಿ ನುಡಿದಿರುತ್ತೇನೆ ಸದರಿಯವರು ಕೇಸಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸಿ ಈಗ ಜೈಲಿನಿಂದ ಬಿಡುಗಡೆಯಾಗಿ ಬಂದಿರುತ್ತಾರೆ. ದಿನಾಂಕ 01/09/2017 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಸಕ್ಕರೆ ಕಾರ್ಖಾನೆ ಹತ್ತಿರ  ಹವಳಾಗಾ ಕ್ರಾಸಿನಿಂದ ನಾನು ಹಾಗು ನಮ್ಮ ಗ್ರಾಮದ ನಿಂಗಪ್ಪ ತಂದೆ ಬುದ್ದಪ್ಪ ಪೂಜಾರಿ ಮಾತನಾಡುತ್ತಾ ನಡೆದುಕಕೊಂಡು ನಮ್ಮ ಊರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ  ಸಾತಪ್ಪ ತಂದೆ ಮಾಹದೇವಪ್ಪ ಕುಂಬಾರ ಇತನ ಮೋಟಾರ್ ಸೈಕಲ್ ಮೇಲೆ ಸಾತಪ್ಪನೊಂದಿಗೆ ಭಗವಂತ ತಂದೆ ಮಲ್ಲಪ್ಪ ಹಂಚನಾಳ ಹಾಗು ಗುರಪ್ಪ ತಂದೆ ಶಿವರಾಯ ನಾಟೀಕರ ಇಬ್ಬರು ಬಂದು ಮೋಟಾರ ಸೈಕಲ್ ಮೇಲಿಂದ ಕೆಳಗೆ ಇಳಿದು ನನ್ನ ಹತ್ತಿರ ಬಂದು ಭಗವಂತ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ರಂಡಿ ಮಗನೇ ನೀನು ನಮ್ಮ ವಿರುದ್ದವಾಗಿ ಕೊರ್ಟದಾಗ ಸಾಕ್ಷಿ ಹೇಳಿದಕ್ಕೆ ನಾವು ಇಷ್ಟುದಿನ ಜೈಲಿನಲ್ಲಿ ಇದ್ದಿವಿ ಅಂತ ಅನ್ನುತಿದ್ದಾಗ ಗುರಪ್ಪ ಇತನು ತನ್ನ ಕೈ ಮುಷ್ಠಿ ಮಾಡಿ ಈ ಬೋಸಗಿ ಮಗನಿಗೆ ಇಲ್ಲೆ ಖಲಾಸ ಮಾಡೋಣ ಅಂತ ಅಂದು ನನ್ನ ಹೊಟ್ಟೆಗೆ ಬೇನ್ನಿಗೆ ಹೊಡೆದು ನೆಲಕ್ಕೆ ಕೆಡವಿದಾಗ ಭಗವಂತ ಹಾಗು ಗುರಪ್ಪ ಇಬ್ಬರು ಕೂಡಿ ತಮ್ಮ ಕಾಲಿನಿಂದ ಒದ್ದಿರುತ್ತಾರೆ ಆಗ ಅಲ್ಲೆ ಇದ್ದ ನಿಂಗಪ್ಪ ಪೂಜಾರಿ, ಸಾತಪ್ಪ ಕುಂಬಾರ ಇಬ್ಬರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಘತ್ತರಗಾ ಗ್ರಾಮದ ಭಗವಂತ ತಂದೆ ಮಲ್ಲಪ್ಪ ಹಂಚನಾಳ ಹಾಗು ನಮ್ಮ ಗ್ರಾಮದ ಗುರಪ್ಪ ತಂದೆ ಶಿವರಾಯ ನಾಟೀಕರ ಇಬ್ಬರ ವಿರುದ್ದ ನಾನು ಕೊರ್ಟದಲ್ಲಿ ಸಾಕ್ಷಿ ನುಡಿದಿದಕ್ಕೆ ಇಬ್ಬರು ಕೂಡಿ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರೂಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

02 September 2017

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಕ್ಷಯ ತಂದೆ ಮಹಾದೇವ ಅಂಬರಖಾನಿ ಸಾ; ಗಾಜೀಪೂರ ಕಲಬುರಗಿ ರವರು ಕಲಬುರಗಿಯ ಏಷ್ಯನ ಮಹಲ್‌‌ದಲ್ಲಿರುವ ಓಪ್ಪೊ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ. ನನ್ನದೊಂದು ಹಿರೋ ಹೊಂಡಾ ಸ್ಪ್ಲೇಂಡರ್‌ ನಂಬರ ಕೆಎ 32 ಇಹೆಚ್‌‌ 6487 ಇದ್ದು ನನ್ನ ಕೆಲಸಕ್ಕೆ ಉಪಯೋಗಿಸುತ್ತಾ ಬಂದಿರುತ್ತೇನೆ. ಹೀಗಿದ್ದು ದಿನಾಂಕ 01/09/2017 ರಂದು ಬೆಳ್ಳಿಗ್ಗೆ 10:30 ಗಂಟೆಯ ಸುಮಾರಿಗೆ ಜೇವರ್ಗಿ ತಾಲ್ಲೂಕಿನಲ್ಲಿ ಎಕ್ಟೀವಿಟಿಜ್‌‌ ಕಾರ್ಯಕ್ಕಾಗಿ ನಾನು ನನ್ನ ಮೋಟಾರ ಸೈಕಲ ಮೇಲೆ ನನ್ನ ಹಿಂದೆ ನನ್ನ ಗೆಳೆಯ ಅಂಬರೀಶ ಮಠಗೆ ಕೂಡಿಸಿಕೊಂಡು ರೋಡಿನ ಎಡಬದಿಯಿಂದ ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೋಗುವಾಗ ಎನ್‌ಹೆಚ್‌ 218 ರೋಡಿನ ಶಾಹಾಬಾದ ಕ್ರಾಸದಲ್ಲಿ ಹೋಗುತ್ತಿದ್ದಂತೆ ಎದುರಿನಿಂದ ಅಂದರೆ ಜೇವರ್ಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಅಲಕ್ಷತನದಿಂದ ಓಡಿಸುತ್ತಾ ಬಂದು ಶಹಾಬಾದ ಕ್ರಾಸದಲ್ಲಿ ನಮ್ಮ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಪಡೆಯಿಸಿ ಅಫಘಾತ ಮಾಡಿದಾಗ ನಾವಿಬ್ಬರೂ ರೋಡಿನ ಮೇಲೆ ಬಿದ್ದೇವು ನಾವು ಬಿದ್ದಿರುವುದು ನೋಡಿ ಕ್ರಾಸದಲ್ಲಿದ್ದವರು ನಮಗೆ ಎಬ್ಬಿಸಿದ್ದು ನನಗೆ ಏಳಲು ಬರಲಿಲ್ಲಾ ಅಫಘಾತದಿಂದ ನನ್ನ ಎಡಗಾಲ ಕಫಗಂಡ ಭಾಗದಲ್ಲಿ ಮುರಿದಿದ್ದು. ನನ್ನ ಎದೆಗೆ, ಎಡಕಿವಿಗೆ ಎಡಗೈ ಮೊಣಕೈಗೆ ಹಣೆಗೆ ರಕ್ತಗಾಯವಾಗಿದ್ದು ಅಂಬರೀಶನಿಗೆ, ತಲೆಗೆ ಎಡ ತೊಡೆಯ ಸಂಧಿಗೆ ಬಲಗಾಲ ಕಫಗಂಡಕ್ಕೆ ಎಡಗಾಲಿಗೆ ಗುಪ್ತಗಾಯವಾಗಿದ್ದು ಅಫಘಾತ ಪಡಿಸಿದ ಲಾರಿ ಚಾಲಕನು ಲಾರಿ ಸ್ವಲ್ಪ ನಿಲ್ಲಿಸಿದಂತೆ ಮಾಡಿ ವಾಹನ ಸಮೇತ ಓಡಿ ಹೋಗಿದ್ದು. ಲಾರಿ ನಂಬರ ಕೆಎ-22 ಬಿ-9114 ಇದ್ದು ಮುಂದೆ ನೋಡಿದರೆ ಗುರುತಿಸುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 27/08/2017 ರಂದು ಸಾಯಂಕಾಲ 04:00 ಗಂಟೆಯ ಸುಮಾರಿಗೆ ಇಟಗಾ (ಕೆ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪಿರ್ಯಾದಿ ಮತ್ತು ಮೃತ ಕಾಳಯ್ಯ ಇಬ್ಬರು ತಮ್ಮ ಸಂಬಂಧಿಕ ರಿಗೆ ಬಸ್ಸಿಗೆ ಬಿಡುವ ಸಂಭಂಧ ಬಂದು ನಿಂತಾಗ ಅದೇ ಸಮಯಕ್ಕೆ ತಿಪ್ಪಣ್ಣಾ ಪೂಜಾರಿ ಇವರ ಆಕಳು ಹಗ್ಗದಿಂದ ಸೈಕಲಿಗೆ ಕಟ್ಟಿದ್ದು. ಒಮ್ಮೇಲೆ ಸೈಕಲ ಬಿದಿದ್ದರಿಂದ ಆಕಳು ಗಾಬರಿಯಿಂದ ಒಮ್ಮೇಲೆ ಸೈಕಲ ಸಮೇತ ದಿಕ್ಕು ಪಾಲಾಗಿ ಓಡುತ್ತಾ ಬಂದು ಕಾಳಯ್ಯ ಈತನ ಮೇಲೆ ಹಾಯ್ದಿದ್ದರಿಂದ ಕಾಳಯ್ಯ ಈತನು ರೋಡಿನ ಮೇಲೆ ಬಿದಿದ್ದು ಇದರಿಂದ ಆತನ ತಲೆಗೆ ಮತ್ತು ಎಡಗಾಲಿಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾ ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 01/09/17 ರಂದು 6:30 ಎಎಮಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ರಾಜಕುಮಾರ ತಂದೆ ಕಾಳಯ್ಯ ವಡ್ಡರ  ಸಾ : ಇಟಗಾ (ಕೆ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುವಿತ್ರಾ ಗಂಡ ಶಾಂತಪ್ಪ ತೋಟನೇಕರ ಸಾ||ಬಡದಾಳ ತಾ||ಅಫಜಲಪೂರ ರವರ ಹಿರಿಯ ಮಗಳಾದ ರೂಪಾ ಇವಳು ಮನೆ ಕೆಲಸ ಮಾಡಿಕೊಂಡು ಮನೆಯಲ್ಲಿ ಇರುತ್ತಾಳೆ ನಾನು ನನ್ನ ಗಂಡ ಇಬ್ಬರು ಕೂಲಿಕೆಲಸಕ್ಕೆ ಹೋಗುತ್ತೇವೆ ಉಳಿದ ನನ್ನ 3 ಜನ ಮಕ್ಕಳು ಶಾಲೆ ಹೋಗುತ್ತಾರೆ ನಮ್ಮ ಮನೆಯ ಹತ್ತಿರ ಮನೆಯವರಾದ ಪ್ರಕಾಶ ತಂದೆ ಚಂದಪ್ಪ ಸಾಲೋಟಗಿ ಇವರು ನಮ್ಮ ಮನೆಗೆ ಆಗಾಗ ಬಂದು ಹೋಗುವದು ಮಾಡುತಿದ್ದನು. ದಿನಾಂಕ 26/07/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಇಬ್ಬರು ಎಂದಿನಂತೆ ನಮ್ಮ ಮನೆಯಲ್ಲಿ ನಮ್ಮ ಮಗಳಾದ ರೂಪಾ ಒಬ್ಬಳಿಗೆ ಬಿಟ್ಟು ಕೂಲಿಕೆಲಸಕ್ಕೆ ಹೋಗಿರುತ್ತೇವೆ. ಮರಳಿ ಸಾಯಂಕಾಲ 6.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಮನೆಗೆ ಬಂದಾಗ ನನ್ನ ಮಗಳಾದ ರೂಪಾ ಮನೆಯಲ್ಲಿ ಇರಲಿಲ್ಲ ನಾನು ನನ್ನ ಗಂಡ ಹಾಗು ನಮ್ಮ ಗ್ರಾಮದ ದವಲಪ್ಪ ತಂದೆ ಮಾಯಪ್ಪ ತೋಟನೆಕರ, ಶಿವು ಗೊಬ್ಬುರ ನಾಲ್ಕು ಜನರು ಕೂಡಿಕೊಂಡು ಅಂದಿನಿಂದ ಇಲ್ಲಿಯವರೆಗೆ  ನನ್ನ ಮಗಳಿಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ನಮ್ಮ ಮನೆಗೆ ಬಂದು ಹೋಗಿ ಮಾಡುತಿದ್ದ ಪ್ರಕಾಶ ತಂದೆ ಚಂದಪ್ಪ ಸಾಲೋಟಗಿ ಇತನು  ಅವರ ತಂದೆ ಚಂದಪ್ಪ, ತಾಯಿ ಚನ್ನಮ್ಮಾ ಹಾಗು ಪ್ರಕಾಶನ ತಮ್ಮನಾದ ಕುಮಾರ ಇವರ ಕುಮ್ಮಕ್ಕಿನಿಂದ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ರೂಪಾ ಇವಳಿಗೆ ಪ್ರಕಾಶ ಇತನು ಅಫಹರಿಸಿಕೊಂಡು ಹೋಗಿರಬಹುದು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾಸ ಠಾಣೆ : ಶ್ರೀಮತಿ ತಾರಾಬಾಯಿ ಗಂಡ ಹೀರಾಸಿಂಗ ಸಾಃ ಮಿಣಜಗಿ ತಾಂಡಾ ಇವರು ವಾಸವಾಗಿರುವ ಮನೆಯ ಮುಖಾಂತರ ದೇವಾಸ್ಥಾನಕ್ಕೆ ದಾರಿ ಹೊಗುತ್ತದೆ ನೀವು ಮನೆಯನ್ನು ಖಾಲಿ ಮಾಡುವಂತೆ ಸದರಿ ತಾಂಡಾದ ರಾಮಜಿ @ ಡಬು, ಜಯರಾಮ, ಹಿರೆಮಾನ್, ರಾಜಕುಮಾರ, ಅಶೋಕ ಚಿನ್ನು ಇತರರು ತಂಟೆ ತಕರಾರು ಮಾಡುತ್ತಿದ್ದು, ದಿನಾಂಕ 31/08/2017 ರಂದು ಮುಂಜಾನೆ ಫಿರ್ಯಾದಿದಾರರು ತಮ್ಮ ಮನೆಯ ಮುಂದೆ ಸ್ನಾನದ ಸಲುವಾಗಿ ಚಪ್ಪರ ಹಾಕಿದ್ದು, ರಾತ್ರಿ 10.30 ಪಿ.ಎಮ್ ಸುಮಾರಿಗೆ ಆರೋಪಿತರಾದ 1) ರಾಮು @ ಡಬು ತಂದೆ ಶೆಹೂ, 2) ಜಯರಾಮ ಮೇಘು ರಾಠೋಡ 3) ಚಿನ್ನು ತಂದೆ ರಾಮು ರಾಠೋಡ 4) ಹಿರೇಮಾನ್ ತಂದೆ  ಮೇಘು ರಾಠೋಡ 5) ರಾಜಕುಮಾರ ತಂದೆ ಜಯರಾಮ 6) ಅಶೋಕ ತಂದೆ ಜಯರಾಮ 7) ಶ್ರೀಮಂತ @ ಶೀರೂ ತಂದೆ ಸುಭಾಷ 8)ಶೇಹೂ ತಂದೆ ತೇಜು 9) ಲಿಂಬು ತಂದೆ ದೇಸು ಚವ್ಹಾಣ 10) ರಾಮು ತಂದೆ ಚಂದು ಕಾರಭಾರಿ 11) ಶಿವಾಜಿ ತಂದೆ ಬಾಬು ಚವ್ಹಾಣ 12) ರಾಮು ತಂದೆ ರೂಪೂಲು ರಾಠೋಡ 13) ಹರಿಶ್ವಂದ್ರ ತಂದೆ ತೇಜು 14) ಶಂಕರ ತಂದೆ ಮಾನು ರಾಠೋಡ 15) ಪ್ರಕಾಸ ತಂದೆ ಲಾಲು ಚವ್ಹಾಣ 16) ಸಂತೋಷ ತಂದೆ ರಾಮು ಚವ್ಹಾಣ 17) ಸುಧಾಕರ ತಂದೆ ರಾಮು ರಾಠೋಡ 18) ವಿಠಲ ತಂದೆ ಲಚಮು ರಾಠೋಡ,19) ಅನೀಲ ತಂದೆ ಸುಭಾಷ ರಾಠೋಡ 20) ರಾಜಕುಮಾರ ತಂದೆ ತುಕರಾಮ ರಾಠೋಡ 21) ರಾಜು ತಂದೆ ದೇಗೂಲು ರಾಠೋಡ 22) ಗೋಪಾಲ ತಂದೆ ಶೇಹೂ ರಾಠೋಡ 23) ಆನಂದ ತಂದೆ ಶೇಹೂ ರಾಠೋಡ 24) ಅಣ್ಣರಾವ ತಂದೆ ರಾಮು ಚವ್ಹಾಣ ಇವರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾಧಿದಾರರಿಗೆ ನಿನಗೆ ಎಷ್ಟು ಸಲಾ ಹೇಳೊದು ರಂಡಿ ಮನೆ ಖಾಲಿ ಮಾಡು ದಾರಿ ಮಾಡಿಕೊಡು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಮಾಡಿ, ಕೈ ಹಿಡಿದು ಎಳೆದಾಡಿ ಅವಮಾನ ಮಾಡಿದಲ್ಲದೆ ಫಿರ್ಯಾದಿದಾರರ ಮನೆ ಒಡೆದು ಹಾನಿ ಪಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಶೈಲ ತಂದೆ ಸಿದ್ದಪ್ಪ ಸಣ್ಣದಾನಿ ಸಾ||ಮಾಶಾಳ ತಾ||ಅಫಜಲಪೂರ ಇವರು ಯುಗಾದಿಯ ಸಮಯದಲ್ಲಿ ಮಾಶಾಳ ಗ್ರಾಮದ ಸೋಸೈಟಿಯ ಗೋದಾಮಿನಲ್ಲಿ ನಾನು ಹಾಗು ನಮ್ಮ ಗ್ರಾಮದ ರಮೇಶ ತಂದೆ ಮಲ್ಲಪ್ಪ ಪ್ರಧಾನಿ, ದವಲಪ್ಪ ತಂದೆ ಶಿವಲಪ್ಪಗೌಡ ಹಾಗು ಇತರರು ಕೂಡಿ ಕೂಲಿ(ಹಮಾಲಿ)ಕೆಲಸ ಮಾಡಿದ್ದು ಇರುತ್ತದೆ. ಕೂಲಿ ಮೇಸ್ತ್ರಿಯಾದ ಮಲ್ಕಪ್ಪ ತಂದೆ ಈಶ್ವರಪ್ಪ ರಾಜಾ ಇವರು ಎಲ್ಲಾ ಕೂಲಿಗಾರರಿಗೆ ಪಗಾರರ(ಹಣ) ಕೊಡುತ್ತಾರೆ ನನಗೆ ಬರುವ 6000/-ರೂಪಾಯಿನಲ್ಲಿ 5000/-ರೂಪಾಯಿ ಕೊಟ್ಟಿದ್ದು ಇನ್ನೂಳಿದ 1,000/-ರೂಪಾಯಿ ಕೊಡುವದು ಬಾಕಿ ಇರುತ್ತದೆ. ದಿನಾಂಕ 31/08/2017 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಮಲ್ಕಪ್ಪ ರಾಜಾ ಇತನು ನಮ್ಮ ಗ್ರಾಮದ ಚೌಡಪ್ಪ ತಂದೆ ಚಂದ್ರಕಾಂತ ರಾಜಾ, ಮಡೇಪ್ಪ ತಂದೆ ಅರ್ಜುನ ಭೋಸಲಗಿ ಹಾಗು ಗೌಡಪ್ಪ ರಾಜಾ ರವರೊಂದಿಗೆ ಮಾತನಾಡುತ್ತಾ ನಮ್ಮ ಗ್ರಾಮದ ಬಜಾರದ ಕಟ್ಟಿ ಹತ್ತಿರ ಮಾತನಾಡುತ್ತಾ ನಿಂತಾಗ ನಾನು ಮಲ್ಕಪ್ಪ ರವರಿಗೆ ನನಗೆ ಕೊಡಬೇಕಾದ 1000/-ರೂಪಾಯಿ ಕೊಡು ಅಂತ ಕೇಳಿದಕ್ಕೆ ಮಲ್ಕಪ್ಪ ಇತನು ನನಗೆ ರಂಡಿಮಗನೆ ಎಲ್ಲಿಬೇಕಂದಲ್ಲಿ ರೊಕ್ಕಾ ಕೇಳ್ತಿ ಭೋಸಡಿಕೆ ಅಂತ  ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಕಪಾಳದ ಮೇಲೆ ಕೈಯಿಂದ ಹೊಡೆದು ನನಗೆ ಕೆಳಗೆ ಕೆಡವಿ ನನ್ನ ಎಡಗೈ ಹಿಡಿದು ತಿರುವಿ ಭಾರಿ ಭಾರಿ ಗುಪ್ತಗಾಯ ಪಡಿಸಿರುತ್ತಾನೆ ಆಗ ಅಲ್ಲೆ ಇದ್ದ ಚೌಡಪ್ಪ ರಾಜಾ, ಮಡೇಪ್ಪ ಭೋಸಲಗಿ ಹಾಗು ಗೌಡಪ್ಪ ರಾಜಾ ಇವರು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವನು ಅಲ್ಲಿಂದ ಹೋಗುವಾಗ ರಂಡಿಮಗನೆ ಇನ್ನೊಮ್ಮೆ ರೊಕ್ಕಾ ಅಂದಿ, ನಿನಗ ಖಲಾಸ ಮಾಡ್ತಿನಿ ಅಂತ ಅಂದು ಅಲ್ಲಿಂದ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.