POLICE BHAVAN KALABURAGI

POLICE BHAVAN KALABURAGI

07 August 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಶ್ವಂತರಾಯ ತಂದೆ ಹಣಮಂತರಾಯ ಬಿಸಗೊಂಡ ಸಾ : ಪಟ್ಟಣ ರವರು  ದಿನಾಂಕ:-06-08-2017 ರಂದು ನಮ್ಮ ಹುಣಸಿಗಿಡದ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಸದಿ ಹೊಡೆಯುವ ಸಲುವಾಗಿ ಕೂಲಿ ಆಳುಗಳಿಗೆ ಹಚ್ಚಿದ್ದು, ಅದಕ್ಕೆ ನಮ್ಮ ಹೊಲಕ್ಕೆ ಹೋಗಿ ನೋಡಿಕೊಂಡು ಬರುವ ಸಲುವಾಗಿ ಸಾಯಾಂಕಾಲ 04.30 ಗಂಟೆ ಸುಮಾರಿಗೆ  ನಾನು ಮತ್ತು ಭೀಮಶ್ಯಾ ಇಬ್ಬರು ನಮ್ಮ ಗ್ರಾಮದಿಂದ ನನ್ನ ಟಿವಿಎಸ್ ಎಕ್ಷೆಲ್ ಮೋಟರ್  ಸೈಕಲ್ ನಂ.ಕೆಎ-32-ಇಎಪ್-5572 ನೇದ್ದರ ಮೇಲೆ  ಇಬ್ಬರೂ ಕೂಡಿ ನಮ್ಮ ಹೊಲಕ್ಕೆ ಹೊರಟೇವು . ಸದರಿ ಮೋಟರ್ ಸೈಕಲ್ ನಾನು ಚಲಾಯಿಸುತ್ತಿದ್ದೇನು. ಹಿಂದುಗಡೆ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನು ಕುಳಿತುಕೊಂಡಿದ್ದನು. ನಾವಿಬ್ಬರೂ ಕೂಡಿಕೊಂಡು ಸಾಯಾಂಕಾಲ್ 05.30 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ್ ಇನ್ನು ಮುಂದೆ ಇರುವಾಗಲೇ ನಮ್ಮ ಗ್ರಾಮದ ಶರಣಪ್ಪ ಬಸಗೊಂಡರ ಸೈಕಲ್ ಮೇಲೆ ಹೊರಟಾಗ, ಅದೇ ವೇಳೇಗೆ ಎದುರುಗಡೆಯಿಂದ ಅಂದರೇ, ಆಳಂದ ರೋಡ ಕಡೆಯಿಂದ ಒಬ್ಬ ಲಾರಿ ಕೆಎ 32 ಎ 5085 ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅಡ್ಡಾ-ದಿಡ್ಡಿಯಾಗಿ ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವಿಬ್ಬರೂ ಕುಳಿತುಕೊಂಡು ಬರುತ್ತಿದ್ದ ಮೋಟರ್ ಸೈಕಲ್ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ಲಾರಿಯನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದನು.ಆಗ ಈ ವಿಷಯವನ್ನು ನೋಡಿ ಅಲ್ಲಿಯೇ ಹೊಲದಲ್ಲಿ ಕೆಲಸ್ ಮಾಡುತ್ತಿದ್ದ ನಮ್ಮ ಗ್ರಾಮದ ಭೀಮಾಶಂಕರ ಕಲಶಟ್ಟಿ ಹಾಗೂ ನಮ್ಮ ಹಿಂದೆ ಮೋಟರ್ ಸೈಕಲ್ ಮೇಲೆ ಬುರತ್ತಿದ್ದ ನಮ್ಮ ಗ್ರಾಮದ ಮಲ್ಲೇಶಪ್ಪ ಬಸಗೊಂಡ, ಭೀಮಣ್ಣ ದೇವಗೊಂಡ ಇವರೆಲ್ಲರೂ ಬಂದು ನನಗೆ ಎಬ್ಬಿಸಿದರು.  ಆಗ ನಾನು ನೋಡಿಕೊಳ್ಳಲು ನನಗೆ ಎಡ ಎದೆಗೆ ಎಡ ಸೊಂಟಕ್ಕೆ ಗುಪ್ತಗಾಯಗಳಾಗಿದ್ದವು. ನನ್ನ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನಿಗೆ ನೋಡಲಾಗಿ, ತಲೆಯ ಹಿಂದುಗಡೆ, ಎಡಗಾಲು ಮುಂಗಾಲಿಗೆ, ಎಡ ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಮಾಣಿಕೇಶ್ವರಿ ಗಂಡ ಮಹೇಶ ನಾವದಗಿ ಸಾಃ ಸಾಯಿರಾಮ ನಗರ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ 12-02-2014 ರಂದು ಮಹೇಶ ತಂದೆ ಶಿವರಾಯ ನಾವದಗಿ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಆಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ  5 ಲಕ್ಷ ಹಣ, 10 ತೋಲೆ ಬಂಗಾರ , ಮನೆ ಬಳಕೆ ಸಾಮಾನುಗಳ ಸಲುವಾಗಿ 1 ಲಕ್ಷ 80 ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದೆವೆ ಹೀಗಿದ್ದು ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ಮಹೇಶ ,ಅತ್ತೆ ಮಹಾದೇವಿ , ಮಾವ ಶಿವರಾಯ , ನಾದನಿಯರಾದ  ಸವಿತಾ ಮತ್ತು ಮಾಣಿಕೇಶ್ವರಿ @ ಮಧು ಇವರೆಲ್ಲರೂ ಸೇರಿ ನನಗೆ ವಿನಾ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಬಂದಿದ್ದು ಹಾಗೂ ಎಲ್ಲರೂ ಸೇರಿ 3 ಲಕ್ಷ ರೂಪಾಯಿ ಹಣ ತವರು ಮನೆಯಿಂದ ತರುವಂತೆ ಕಿರಿಕುಳ ನೀಡಲು ಪ್ರಾರಂಭಿಸಿದರು ಹಣ ತಂದರೆ ಮಾತ್ರ ಬಾ ಅಂತಾ ಹೇಳಿದರು ಇದನ್ನು ನಾನು ನನ್ನ ತಂದೆಯವರಿಗೆ ತಿಳಿಸಿದ್ದು ನನ್ನ ತಂದೆಯವರು ಮನೆಯಲ್ಲಿ ಇದ್ದ ಬಂಗಾರ ಹಾಗೂ ತಮ್ಮ ಮನೆ ಅಡವಿಟ್ಟು 3 ಲಕ್ಷ ರೂಪಾಯಿ ಹೊಂದಿಸಿ ನನ್ನ ಗಂಡನಿಗೆ ಕೊಟ್ಟಿದ್ದು ನನ್ನ ಗಂಡ ಇನ್ನೂ 2 ಲಕ್ಷ ಹಣ ತೆಗೆದುಕೊಂಡು ಬರಬೇಕು ಅಂತಾ ನನಗೆ ನನ್ನ ತವರು ಮನೆಯಲ್ಲಿಯೆ ಬಿಟ್ಟಿದ್ದರು ನಂತರ ನನ್ನ ತಂದೆ-ತಾಯಿಯವರು ದಿನಾಂಕ 29-05-2017 ರಂದು ಬೆಳ್ಳಿಗೆ 11 ಗಂಟೆಗೆ ನನಗೆ ಕಲಬುರಗಿಯ ಶಹಬಜಾರದಲ್ಲಿ ಇರುವ ನನ್ನ ಗಂಡನ ಮನೆಯಲ್ಲಿ ಬಿಡಬೇಕು ಅಂತಾ ಕರೆದುಕೊಂಡು ಹೋದಾಗ ನನ್ನ ಗಂಡ,ಅತ್ತೆ, ಮಾವ, ನಾದಿನಿಯರು ಎಲ್ಲರೂ ಸೇರಿ ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಿನು 5 ಲಕ್ಷ ಹಣ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೆವೆ ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೆವೆಂದು ನನ್ನ ಗಂಡ ನನಗೆ ಕೈಯಿಂದ ಹೊಡೆದನು ಉಳಿದವರೆಲ್ಲರೂ ಕೂಡಿ ಜೀವದ ಬೇದರಿಕೆ ಹಾಕಿ ಮನೆಯಿಂದ ಹೊರಗೆ ಹಾಕಿದರು ಆದ ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

06 August 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಗಂಡ ಅಬ್ದುಲ್ ಪಟೇಲ ಮದ್ದರಕಿ ಸಾಃ ಮಾರಡಗಿ (ಎ.ಎಸ್.) ತಾಃ ಜೇವರಗಿ ರವರನ್ನು   ಸುಮಾರು 5 ವರ್ಷಗಳ ಹಿಂದೆ ಮಾರಡಗಿ (ಎಸ್.ಎ) ಗ್ರಾಮದ ಅಬ್ದುಲ್ ಪಟೇಲ ಇತನ್ನೊಂದಿಗೆ ನನ್ನ ಮದುವೆಯಾಗಿರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಗಂಡನ ಮನೆಯಲ್ಲಿಯೇ ಇದ್ದು ಸಂಸಾರ ಮಾಡುತ್ತಾ ಬಂದಿರುತ್ತೆನೆ ನಮಗೆ ಲಾಲಬೀ ಎಂಬುವ ಒಂದು ಹೆಣ್ಣು ಮಗು ಇರುತ್ತದೆ. ಮದುವೆಯ ಕಾಲಕ್ಕೆ ನನ್ನ ತವರು ಮನೆಯರು ನನ್ನ ಗಂಡನಿಗೆ ಬೆಲೆ ಬಾಳುವ 1) ಮಂಚ, ಗಾದಿ, 2) ಏರಕೂಲರ್, 3) ಪ್ರೀಜ 4) ಅಲಮಾರಿ ( ಟಿಜೋರಿ) 5) ಎರಡು ಹಾಂಡೆಗಳು 6) ಎರಡು ನಳ ಪಾತ್ರೆಗಳು, 7) ಎರಡು ತಾಮ್ರದ ಕೊಡಗಳು, ಹಾಗೂ ಮನೆಯ ಬಳಕೆ ಇತರೆ ಸಾಮಾನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 3 ವರ್ಷಗಳವರೆಗೆ ನನ್ನ ಗಂಡನು ನನಗೆ ಸರಿಯಾಗಿಯೇ ನೊಡಿಕೊಂಡಿರುತ್ತಾನೆನಂತರ ನನ್ನ ಗಂಡನು ಮದುವೆಯಲ್ಲಿ ನನಗೆ ವರದಕ್ಷೀಣೆ ಹಣ ಕೊಟ್ಟಿರುವುದಿಲ್ಲಾ ನೀನು ತವರು ಮನೆಯಿಂದ 5,00,000/- ( ಐದು ಲಕ್ಷ) ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ  ದಿನಾಲು ಮನೆಯಲ್ಲಿ  ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆಅಲ್ಲದೆ ನನ್ನ ಮಾವ ಅಮೀರಪಟೇಲ  ಅತ್ತೆ ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ ಜಾಪರ್ ಅಲಿ ಇವರೆಲ್ಲರೂ ಕೂಡಿ ನನಗೆ ವರದಕ್ಷಣೆ ಹಣ ತೆಗೆದುಕೊಂಡು ಬರುವಂತೆ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾರೆಅವರು ಕೊಡುವ ತ್ರಾಸ್ ತಾಳಲಾರದೆ  ನಾನು ನನ್ನ ತವರು ಮನೆಯವರಿಗೆ ಹೇಳಿದಾಗ  ನನ್ನ ತಂದೆ ಮತ್ತು ತಾಯಿ ಹಾಗೂ  ನಮ್ಮೂರ ಪ್ರಮುಖರು ಕೂಡಿಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಗಂಡನಿಗೆ 50 ಗ್ರಾಮ ಚಿನ್ನದ ಆಭರಣಗಳು, ಮತ್ತು 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು) ನನ್ನ ತಂದೆ  ಕೊಟ್ಟಿರುತ್ತಾರೆಆದರೂ ಸಹ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ನನಗೆ ಬಹಳ ತ್ರಾಸ್ ಕೊಡುತ್ತಿದ್ದರುನಾನು ಮನೆಯ ಮರ್ಯಾದೆಗೆ ಅಂಜಿ ಮತ್ತು ನನ್ನ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸುಮ್ಮನಿದ್ದೆನು, ಆದರೂ ಅವರು ನನಗೆ ಹಣ ತವರುಂತೆ ಬಹಳ ತ್ರಾಸ್ ಕೊಡುತ್ತಿದ್ದಾಗ ನಾನು ಈಗ 6 ತಿಂಗಳ ಹಿಂದೆ ನನ್ನ ಮಗಳೊಂದಿಗೆ ನನ್ನ ತವರು ಮನೆ ಯಲಗೊಡ ಗ್ರಾಮಕ್ಕೆ ಬಂದು ನನ್ನ ತಂದೆ ತಾಯಿಯವರ ಹತ್ತಿರ ಇದ್ದೆನು. ನನ್ನ ಗಂಡನು ಮತ್ತು ಅವರ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನಾನು ದಿ.  01-08-2017 ರಂದು ಮುಂಜಾನೆ ನನ್ನ ತಂದೆ ಹಾಗೂ ನನ್ನ ಅಣ್ಣನಾದ ಮೈಹಿಬೂಬ ಪಟೇಲ ಮತ್ತು ನಮ್ಮೂರ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರೊಂದಿಗೆ ನನ್ನ ಗಂಡನ ಮನೆಗೆ ಮುಂಜಾನೆ 11.00 ಗಂಟೆಯ ಸುಮಾರಿಗೆ ಹೋದಾಗ, ಅಲ್ಲಿ ನನ್ನ ಗಂಡನಾದ 1) ಅಬ್ದುಲ್ ಪಟೇಲ ತಂದೆ ಅಮೀರ ಪಟೇಲ ಮಾವ 2) ಅಮೀರಪಟೇಲ  ಅತ್ತೆಯಾದ 3) ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ 4) ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ 5) ಜಾಪರ್ ಅಲಿ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವರಿಗೆ ನನಗೆ ಯಾಕೇ ಬೈಯುವುತ್ತಿದ್ದಿರಿ ಎಂದು ಕೇಳಿದಕ್ಕೆ ನನ್ನ ಗಂಡನು ನನಗೆ ಏ ರಂಡಿ ಇಷ್ಟು ದಿವಸ ತವರು ಮನೆಯಲ್ಲಿ ಇದ್ದು ಇವತ್ತು ಬಂದಿದಿ ನಿನಗೆ ಐದು ಲಕ್ಷ ವರದಕ್ಷಣಿ ಹಣ ತೆಗೆದುಕೊಂಡು ಬಾ ಎಂದು ಹೇಳಿದರೆ ತವರು ಮನೆಗೆ ಹೋಗಿದ್ದಿ ಬೊಸಡಿ ಎಂದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ, ಅತ್ತೆಯಾದ ಜೈನಾಬೀ ಇವಳು ಈ ರಂಡಿಗೆ ಹೊಡೆದು ಸಾಯಿಸಿ ಬಿಡು ನಿನಗೆ ಬೇರೆ ಮದುವೆ ಮಾಡಿಸುತ್ತೆನೆ ಎಂದು ಬೈಯ್ದು ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾಳೆ, ಮಾಬಣ್ಣಿ ಇವಳು ಈ ರಂಡಿ ವರದಕ್ಷಿಣೆ ಹಣ ತರುವವರೆಗೆ ಅವಳು ತವರು ಮನೆಯಲ್ಲಿಯೇ ಬಿಡು ಎಂದು ನನ್ನ ಗಂಡನಿಗೆ ಹೇಳುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿರುತ್ತಾಳೆ, ಜಾಫರ ಅಲಿ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿ ಕಾಲಿನಿಂದ ಸೊಂಟದ ಮೇಲೆ ಒದ್ದಿರುತ್ತಾನೆನಾನು ಚೀರಾಡುತ್ತಿದ್ದಾಗ ನನ್ನ ಮಾವ ಅಮೀರ ಪಟೇಲ ಇತನು ಇವಳಿಗೆ ಮನೆಯಲ್ಲಿ ಹಾಕಿರಿ ಒಂದು ಗತಿ ಕಾಣಿಸೊಣ ಎಂದು ಹೇಳಿದಾಗ ನನ್ನ ತಂದೆ ಹಾಗೂ ನನ್ನ ಅಣ್ಣ ಮತ್ತು ನನ್ನ ಜೊತೆ ಬಂದ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರು ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ, ಮತ್ತು ಅವರೆಲ್ಲರೂ ವರದಕ್ಷಣೆ ಹಣ ತೆಗೆದುಕೊಂಡು ಬರದಿದ್ದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಕೀನಾ ಪಟೆಲ ಗಂಡ ದಾದಾ ಪಟೆಲ್ಸಾ:ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ಇವರ ಹತ್ತಿರ ಸುಮಾರು ದಿನಗಳ ಹಿಂದೆ ಹಣದ ಅಡಚಣೆ ಇದ್ದಾಗ ತಮಗೆ ಪರಿಚಯದವರಾದ 1) ಉಸ್ಮಾನ ಡಾಂಗೆ 2) ಸಾದೀಕ್ಫರೀದ ಇವರು ತಲಾ 10,00,000/- ರೂಗಳು ಪಡೆದುಕೊಂಡಿದ್ದು, ಅದನ್ನು ಕೇಳಲು ಹೋದಾಗ ಅವರಿಬ್ಬರು ತಮಗೆ ಪರಿಚಯದವನಾದ ಚಿದಾನಂದ ತಂದೆ ದೌಲಪ್ಪಾ ಕೊಳ್ಳಿ ಇವರ ಹತ್ತಿರ ಕರೆದುಕೊಂಡು ಹೋಗಿ ನನಗೆ 15,42,000/-ರೂಗಳು ಕೊಡಿಸಿರುತ್ತಾರೆ. ನಂತರ ನನಗೆ, ನೀವು ನಿಮ್ಮ ಮನೆಯನ್ನು ಚಿದಾನಂದ ಇವರಿಗೆ ಮಾರ್ಟಗೆಜ ಮಾಡಿಸಿಕೊಡು ನಿಮ್ಮ 20,00,000/- ರೂಗಳು ನಮ್ಮ ಹತ್ತಿರ ಇರುತ್ತವೆಯಲ್ಲ ನಾವು ಬಿಡಿಸಿ ಕೊಡುತ್ತೆವೆ ಅಂತ ಹೇಳಿ ನನ್ನ ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ನೇದ್ದನು ಮಾರ್ಟಗೇಜ ಮಾಡಿಕೊಟ್ಟಿದ್ದು ಇರುತ್ತದೆ. ಆದ್ದರಿಂದ ಕಲಬುರಗಿಯ ಸಬ್ರಜೀಸ್ಟರರ ಕಛೆರಿಯಲ್ಲಿ ಮಾರ್ಟಗೇಜ ಮಾಡಿಕೊಟ್ಟಿರುತ್ತನೆ. ಉಸ್ಮಾನ ಡಾಂಗೆ ಇವರು ನನಗೆ ನಿಮಗೆ ಕೊಡಬೇಕಾದ ಹಣವನ್ನು ಚಿದಾನಂದ ಇವರಿಗೆ ಕೊಟ್ಟು ನಿಮ್ಮ ಮನೆಯ ಸೆಲ್ಡೀಡ್ನ್ನು ಕ್ಯಾನ್ಸಲ್ಮಾಡಿಕೊಡುತ್ತೆವೆ ಅಂತ ಹೇಳಿರುತ್ತಾರೆ.ದಿನಾಂಕ:31/07/2017 ರಂದು ಸಾಯಂಕಾಲ 7:30 ಗಂಟೆಗೆ ನಾನು ಮನೆಯಲ್ಲಿದ್ದಾಗ ಚಿದಾನಂದ ಕೊಳ್ಳಿ , ಉಸ್ಮಾನ ಡಾಂಗೆ, ಸಾದೀಕ ಫರೀದ ಸುಂಬಡ, ಮಹಾರಾಜ ಜಮಾದಾರ, ಮಹ್ಮದ ಇಕ್ಬಾಲ್‌, ಮಾರುತಿ ತಂದೆ ಅಂಬಾಜಿ ಸಂಗಡ 15 ಜನರು ಕೂಡಿಕೊಂಡು ಬಂದು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಸಾಮಾನುಗಳನ್ನು ಬಿಸಾಕುತ್ತಿದ್ದಾಗ ನಾನು ಅವರಿಗೆ ಇದು ನೀವು ಮಾಡುವದು ಸರಿಯಲ್ಲ ಅಂತ ಹೇಳುತ್ತಿದಾಗ ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈಯುತ್ತಾ ಅವರಲ್ಲಿ ಉಸ್ಮಾನ ಡಾಂಗೆ, ಚಿದಾನಂದ, ಮಹಾರಾಜ ಜಮಾದಾರ ಇವರು ನನ್ನ ಕೈಹಿಡಿದು ಕಪಾಳ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ನಂತರ ಅವರೆಲ್ಲರೂ ನನಗೆ ನೀನು ನಮಗೆ ಹಣ ಕೊಡದೆಯಿದ್ದರೆ ನಿನ್ನ ಮನೆಯನ್ನು ಕಬ್ಜಾ ಮಾಡಿತ್ತೆವೆ. ಇಲ್ಲವಾದರೆ ಇತ್ತಿಚೆಗೆ ಆದ ಮುದಾಸ್ಸಿರ ಇತನ ಕೊಲೆ ಆದ ಹಾಗೆ ನಿನಗೆ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ. ಇಲ್ಲ ನಮ್ಮ ಹಣ ಕೊಡು ಅಂತ ಹೇಳಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :.
ಅಫಜಲಪೂರ ಠಾಣೆ : ದಿನಾಂಕ 28-07-2017 ರಂದು ರಾತ್ರಿ 12:30 ಗಂಟೆಗೆ ನಾನು ಶೌಚಕ್ಕೆಹೋದಾಗ ಮೋಹನ ತಂದೆ ನಾಗು ಜಾಧವ ಹಾಗೂ ವಿಜಯತಂದೆ ನಾಮದೇವ ರಾಠೋಡ ಇಬ್ಬರು ಕರಜಗಿ ತಾಂಡಾ ಇದ್ದು, ನನ್ನನ್ನು ಅನಾಮತ್ತಾಗಿ ಎತ್ತಿ ಟಾಟಾ ಇಂಡಿಕಾ ವಾಹನದಲ್ಲಿ ತೂರಿ ಹಾಕಿ ಅಫರಿಚಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನನಗೆ ಕೈ ಹಿಡಿದು ಏಳೆದು ನಮ್ಮ  ಜೋತೆ ಸಹಕರಿಸು ಇಲ್ಲದಿದ್ದರೆ ನಿನಗೆ ಜೀವಸಹಿತ ಬಿಡುವುದಿಲ್ಲ ಎಂದು ಹಾಗೂ ವಿಷುಯ ಎಲ್ಲಿಯೂ ಯಾರಿಗೂ ಹೇಳಬೇಡ ಒಂದು ವೇಳೆ ಹೇಳೀದರೆ ನಿನ್ನನ್ನು ಹೊಡೆದು ಎಸೆದು ಹೋಗುವುದಾಗಿ ಬೇದರಿಸಿದ್ದಾರೆ. ನೀನು ನಿನ್ನ ತಂದೆ ತಾಯಿಗೆ ತಿಳಿಸಬೇಡ, ತಿಳಿಸಿದರೆ ನಿನ್ನ ಸ್ಥೀತಿ ಕೇಡುತ್ತದೆ ಎಂದು ಹಾಗೂ ಪೊಲೀಸರೇದರೂ ಕೂಡಾ ಏನು ಹೇಳಬೇಡ ಎಂದು. ಒಂದು ವೇಳೆ ಹೇಳೀದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೇದರಿಸಿರುತ್ತಾರೆ.  ಅಂತಾ  ಶ್ರೀಮತಿ ಗೀತಾ ಗಂಡ ಸುನೀಲ ರಾಠೋಡ ಸಾ|| ಕರಜಗಿ ತಾಂಡಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

05 August 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/08/2017 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಓಂಕಾರೇಶ್ವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗುಡಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ಗುಡಿಯ ಹಿಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಗುಡಿಯ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿಯುತ್ತಿದ್ದಂತೆ ಸಾರ್ವಜನಿಕರು ಓಡಿ ಹೋಗಿದ್ದು, ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸೈಯದ ಇಸ್ಮಾಯಿಲ್‌ ತಂದೆ ಸೈಯದ ರುಕ್ಮೊದ್ದಿನ್‌ ಸಾ: ಶೇಖ ರೋಜಾ ಜೂನೈದಿ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1500/-, ಒಂದು ಬಾಲ್‌ ಪೆನ್‌, 1 ಮಟಕಾ ಬರೆದ ಚೀಟಿಗಳು ದೊರಕಿದ್ದು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಕುಮಾರ ತಂದೆ ಚಂದ್ರಶೇಖರ ಬಿರಾದಾರ ಸಾ: ಮನೆ ನಂ. 8-1179 ನೇತಾಜಿ ನಗರ ಕಲಬುರಗಿ ರವರು ದಿನಾಂಕ. 15/04/2017 ರಂದು 8-15 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟಾರ ಸೈಕಲ್ ನಂ. KA-32 EB- 3187 ಚೆಸ್ಸಿನಂ. MBLHA10AMCHD54698, ಇ.ನಂ. HA10EJCHD54052 ,ಕಿ|| 30,000/- ರೂ ನೇದ್ದು ರೇಲ್ವೆ ಸ್ಟೇಷನ ಹತ್ತಿರ ರೋಡಿನ ಬದಿಯಲ್ಲಿ ನಿಲ್ಲಿಸಿ ನಂತರ 8-45 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಲೆಂಡರ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭೀಮರಾಯ ತಂದೆ ಸಿದ್ರಾಮಪ್ಪಾ ಬನ್ನುರ ಸಾ:ರಾಮ ನಗರ ಎಸ್‌ಬಿ ಕಾಲೇಜು ಎದರುಗಡೆ ಕಲಬುರಗಿ ಇವರು ಕೈಲಾಸ ನಗರದಲ್ಲಿರುವ ವಿರೇಂದ್ರ ತಂದೆ ಬಾಬಾ ಸಾಹೇಬ ದೆಶಮುಖ ಮು:ಕೈಲಾಸ ನಗರ ಇವರು ಸುಮಾರು 15 ವರ್ಷಗಳಿಂದ ಪರಿಚಯವಿದ್ದು, ನಮ್ಮಲ್ಲಿ ಸಂಸಾರದಲ್ಲಿ ಅಡಚಣೆ ಆದಾಗ ಅವರು ನನಗೆ ಸಹಾಯ ಮಾಡುವದು ಮತ್ತು ನಾನು ಅವರಿಗೆ ಸಹಾಯ ಮಾಡುತ್ತಾ ಬಂದಿರುತ್ತೆನೆ. ಅದರಂತೆ ಸುಮಾರು 2 ವರ್ಷಗಳ ಹಿಂದೆ ವಿರೇಂದ್ರ ದೇಶಮುಖ ಇವರಿಗೆ ಅಡಚಣೆ ಇದ್ದಾಗ ನನ್ನ ಹತ್ತಿರ ಬಂದು 2 ಲಕ್ಷ ರೂಪಾಯಿ ಕೇಳಿದ್ದರಿಂದ ನಾನು ಅವರಿಗೆ ನನ್ನ ಹತ್ತಿರ ದುಡ್ಡು ಇಲ್ಲದೆ ಇದ್ದರಿಂದ ನಮ್ಮ ತಂದೆಯಾದ ಸಿದ್ರಾಮಪ್ಪಾ ಬನ್ನುರ ಇವರ ಹತ್ತಿರದಿಂದ 2 ಲಕ್ಷ ರೂಪಾಯಿಯನ್ನು ಕೈಗಡವಾಗಿ ಕೊಡಿಸಿರುತ್ತೆನೆ. ಅದಕ್ಕೆ ವಿರೇಂದ್ರನು 2 ವರ್ಷಗಳ ಸಮಯ ತೆಗೆದುಕೊಂಡಿದ್ದು ಇರುತ್ತದೆ. ಈಗ 31/07/2017 ರಂದು ನಮ್ಮ ತಂದೆ ವಿರೇಂದ್ರ ದೆಶಮುಖ ಇವರ ಮನೆಗೆ ಹೋಗಿ ದುಡ್ಡು ಕೇಳಿದಾಗ ವಿರೇಂದ್ರ ಇವನು ನಿನಗೆ ಯಾವ ದುಡ್ಡು ಕೊಡುವದಿದೆ ಕೊಡಲ್ಲ ಏನು ಮಾಡಿಕೊಳ್ಳುತ್ತಿ ಮಾಡಿಕೊ ಹೋಗು ನಿನ್ನ ಮಗ ಭಿಮ್ಯಾ ಎಲ್ಲಿ ಹನ ಅಂವ ಸಿಗಲಿ ಅವನಿಗೆ ನೊಡಿಕೊಳ್ಳುತ್ತೆನೆ ಅಂತ ಹೇಳಿ ಕಳಿಸಿರುತ್ತಾನೆ. ನಂತರ ನಮ್ಮ ತಂದೆ ಬಂದು ನನಗೆ ಹೇಳಿದಾಗ. ನಾನು ನಮ್ಮ ತಂದೆ ನೀನು ಈಗ ಸುಮ್ಮ ಊರಿಗೆ ಹೋಗು ಆಮೇಲೆ ಕೇಳೊಣ ಅಂತ ಹೇಳಿ ಕಳಿಸಿರುತ್ತೆನೆ. ಇಂದು ದಿನಾಂಕ:03/08/2017 ಬೆಳಗ್ಗೆ 10:30 ಗಂಟೆಗೆ ಶರಣಬಸವೇಶ್ವರ ಗುಡಿಯ ದರ್ಶನಕ್ಕೆ ಹೋಗಿ ದರ್ಶನದ ಸಲುವಾಗಿ 11:30 ಗಂಟೆಯ ಸುಮಾರಿಗೆ ಪಾಳಿಯಲ್ಲಿ ನಿಂತು ದರ್ಶನ ಮಾಡಿ ಥೇರು ಎಳೆದುಕೊಂಡು ಹೋಗಿ ನಿಲ್ಲುವ ಪಾದಗಟ್ಟಿ ಹತ್ತಿರ ನಾನು ಮತ್ತು ನನ್ನ ಗೆಳೆಯ ಭಿಮಾಶಂಕರ ಕೊಟನೂರ ಇಬ್ಬರು ಮಾತನಾಡುತ್ತಾ ಕುಳಿತಾಗ ವಿರೇಂದ್ರ ದೇಶಮುಖ ಇವನು ಬಂದು ನಿಮ್ಮ ತಂದೆಯ ರೊಕ್ಕ ಕೊಡಲ್ಲ ಏನು ಮಾಡಿಕೊತಿ ಮಾಡ್ಕೊ ರಂಡಿ ಮಗನೆ ಅಂತ ಬೈದು ಕೈಯಿಂದ ಕಪಾಳ ಮೇಲೆ ಹೊಡೆಯುತ್ತಿದಾಗ ನಾನು ಎದ್ದು ಓಡಿ ಹೋಗುವಾಗ ತನ್ನ ಕಿಸೆಯಲ್ಲಿಂದ ಒಂದು ಸಣ್ಣ ಚಾಕು ತೆಗೆದು ನನ್ನ ಬಲಾಗಲಿನ ಹಿಮ್ಮಡಿ ಮೇಲೆ ಚುಚ್ಚಿ ರಕ್ತಗಾಯ ಮಾಡಿರುತ್ತಾನೆ ನಂತರ ನನ್ನ ಸಂಗಡ ಇದ್ದ ಭಿಮರಾಯ ಇತನು ಬಿಡಿಸಿದಾಗ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.