POLICE BHAVAN KALABURAGI

POLICE BHAVAN KALABURAGI

20 June 2017

Kalaburagi District Reported Crimes

ಹೆಣ್ಣುಮಕ್ಕಳು  ಕಾಣೆಯಾದ ಪ್ರಕರಣಗಳು  :
ಅಫಜಲಪೂರ ಠಾಣೆ : ಶ್ರೀ ಹುಸೇನಸಾಬ ತಂದೆ ಇಮಾಮಸಾಬ ಶೇಖ ಸಾ||ಅಳ್ಳಗಿ(ಬಿ) ಹಾ||ವ|| ಉಸ್ಮಾನಿಯಾ ಕಾಲೋನಿ ಅಫಜಲಪೂರ  ಇವರು ದಿನಾಂಕ 18/05/2017 ರಂದು ನಮ್ಮ ಪರಿಚಯಸ್ಥರ ಮದುವೆ ಅಫಜಲಪೂರ ಪಟ್ಟಣದ ಸಿದ್ದರಾಮೆಶ್ವರ ಗುಡಿಯಲ್ಲಿ ಇದ್ದಿದ್ದರಿಂದ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಹಿರಿಯ ಮಗಳಾದ ಕುಮಾರಿ ಸನಾ  ಇವಳಿಗೆ ಮನೆಯಲ್ಲಿಯೇ ಬಿಟ್ಟು ಉಳಿದ 4 ಜನ ಮಕ್ಕಳಿಗೆ ನಮ್ಮ ಜೋತೆ ಕರೆದುಕೊಂಡು ಮದುವೆಗೆ ಹೋಗಿ ಮರಳಿ ಮನೆಗೆ 1.00 ಪಿಎಮ್ ಕ್ಕೆ ಬಂದು ನೋಡಲಾಗಿ ನಮ್ಮ ಮನೆಯಲ್ಲಿ ನನ್ನ ಮಗಳಾದ ಸನಾ ಇವಳು ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಓಣಿಯಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ನಂತರ ನಮ್ಮ ಓಣಿಯ ಮೋಸಿನ್ ತಂದೆ ಹಬೀಬ ಪಠಾಣ, ಫಾರುಕ ತಂದೆ ಇಲಾಯಿ ಶೇಖ ಮೂರು ಜನರು ಕೂಡಿ ನಮ್ಮ ಸ್ವಂತ ಗ್ರಾಮವಾದ ಅಳ್ಳಗಿ(ಬಿ) ಹಾಗು ನಮ್ಮ ಸಂಬಂಧಿಕರ ಊರಗಳಾದ ಸೇಡಂ ತಾಲೂಕಿನ ಸೋಮಪಲ್ಲಿ, ಇಂಡಿ, ಸೋಲಾಪೂರ, ಬಾಂಬೆಗಳಿಗೆ ಹೋಗಿ ನನ್ನ ಮಗಳಾದ ಸನಾಳ ಬಗ್ಗೆ ವಿಚಾರಿಸಿರುತ್ತೇವೆ. ಹಾಗೂ ನಮ್ಮ ಪರಿಚಯಸ್ಥರಿಗೆ ಪೋನ ಮಾಡಿ ವಿಚಾರಿಸಿರುತ್ತೇವೆ. ನಮ್ಮ ಮಗಳು ಎಲ್ಲಿಯೂ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ,ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ಚಂದ್ರಶಾ ತಂದೆ ಶಾಂತಪ್ಪಾ ಬಿರಾದಾರ ಸಾ:ಮಿಣಜಗಿ ತಾ:ಜಿ:ಕಲಬುರಗಿ ಇವರ ಮೊಮ್ಮಗಳಾದ ಶಿವಲಿಲಾ ಇವಳಿಗೆ ಹುನುಗುಂಟಾದ ಶಿವಪ್ಪಾ ಎಂಬುವರೊಂದಿಗೆ ಈಗ ಒಂದು ತಿಂಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತೇವೆ. ನಮ್ಮೂರಿನಲ್ಲಿ ಸಂಬದಿಕರ ಮದುವೆ ಇದ್ದ ಕಾರಣ ಮೋಮ್ಮಗಳಿಗೆ ಗಂಡನ  ಮನೆಯಿಂದ ಕರೆದು ಕೊಂಡುಬಂದಿರುತ್ತೇವೆ  ಹೀಗಿದ್ದು ದಿನಾಂಕ 16/06/2017 ರಂದು ಸಂಬಂದಿಕರ ಮದುವೆ ಫರತಾಬಾದದ ಶರಣಬಸವೇಶ್ವ ದೇವಸ್ಥಾನದಲ್ಲಿದ ಕಾರಣ ನಾನು ಮೋಮ್ಮಗಳಾದ ಶಿವಲಿಲಾ ಹಾಗು ಮಗ ಅಪ್ಪಾಸಾಬ ,ಸೋಸೆ ಲಲಿತಾಬಾಯಿ ಎಲ್ಲರೂ ಫರತಾಬಾದಕ್ಕೆ ಬಂದು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸಾಯಾಂಕಾಲ ಮನೆಗೆ ಬಂದು ರಾತ್ರಿ ಊಟಮಾಡಿ ಮಲಗಿಕೊಂಡೆವು ನಂತರ ನಾನು ರಾತ್ರಿ 10 ಗಂಟೆಗೆ  ಮೂತ್ರ ವಿರ್ಸಜನೆಗೆ ಎದ್ದಾಗ ಮೋಮ್ಮಗಳಾದ ಶಿವಲಿಲಾ ಇವಳು ಮನೆಯಲ್ಲಿ ಕಾಣಲಿಲ್ಲಾ ನಾನು ಗಾಭರಿಗೊಂಡು ಮಗ ಅಪ್ಪಾಸಾಬ ಸೊಸೆಗೆ ಎಬ್ಬಿಸಿ ಎಲ್ಲರೂ ಕೊಡಿ ಹುಡುಕಾಡಿದರು ಮೋಮ್ಮಗಳ ಪತ್ತೆಯಾಗಿರುವುದಿಲ್ಲಾ ಇಸ್ಟು ದಿವಸ ನಮ್ಮ ಎಲ್ಲಾ ಸಂಭದಿಕರ ಹತ್ತಿರ ಹೋಗಿ ವಿಚಾರಿಸಲಾಗಿ ಅವಳ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 June 2017

Kalaburagi District Reported Crimes

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ. ಗೌಶಿಯಾಬೇಗಂ ಗಂಡ ಮಹ್ಮದ ಸತ್ತರ ಸ್ಟೋವಾಲೆ ಸಾ|| ಅಕ್ಬರ ಬಾಗ್ ಟಿಪ್ಪು ಚೌಕ ರಿಂಗ್ ರೋಡ ಕಲಬುರಗಿ ರವರು ಮತ್ತು ತಾಯಿಯಾದ ಬಾನುಬೇಗಂ ಗಂಡ ಮಹ್ಮದ ಸಲೀಂ ಬಂಗಡೆವಾಲೆ ಹಾಗೂ ನನ್ನ ತಂಗಿಯಾದ ತಯಾಬಬೇಗಂ ಇವಳ ಮದುವೆಯು ಇರುವುದರಿಂದ ನಾವೇಲ್ಲ ಕೂಡಿಕೊಂಡು ಬಂಗಾರ ಖರೀದಿಸುವ ಸಲುವಾಗಿ ನಮ್ಮ ಮನೆಯಿಂದ 90000/- ರೂಪಾಯಿಗಳನ್ನುನನ್ನ ತಾಯಿ ನನ್ನ ಹತ್ತಿರ ಕೊಟ್ಟಿದ್ದು ಅವುಗಳನ್ನು ನನ್ನ ವೆನೆಟಿ ಬ್ಯಾಗದಲ್ಲಿ ಇಟ್ಟಿಕೊಂಡಿದ್ದು, ಹಾಗೂ ನನ್ನ ತಾಯಿ ತನ್ನ ಹತ್ತಿರ 10000/- ರೂ ಗಳನ್ನು ಇಟ್ಟುಕೊಂಡಿದ್ದಳು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಸುಪರ ಮಾರ್ಕೆಟಗೆ ಬಂದು ಕೆಲವು ಸಾಮಾನುಗಳನ್ನು ನನ್ನ ತಾಯಿಯ ಹತ್ತಿರವಿದ್ದ ಹಣದಿಂದ ಖರೀದಿಸಿ ನಂತರ ಚಪ್ಪಲಬಜಾರದಲ್ಲಿ ಹೋಗಿ ಅಲ್ಲಿ ಚಪ್ಪಲಗಳನ್ನು ಖರೀದಿ ಮಾಡಿ ಅಂದಾಜು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಚಪ್ಪಲಬಜಾರದಿಂದ ಸ್ವಲ್ಪ ಮುಂದೆ ಸರಾಫ ಬಜಾರ ಕಡೆಗೆ ಬಂಗಾರ ಖರೀದಿ ಮಾಡಲು ಹೋಗುವಾಗ ಯಾರೋ ಒಬ್ಬ ಬುರಕದಾರಿ ಮಹಿಳೆ ನನ್ನ ವೆನೆಟಿ ಬ್ಯಾಗ ಚೈನ್ ಉಚ್ಚಿದೆ ಅಂತಾ ಅಂದಾಗ ನಾನು ಸದರಿ ಬ್ಯಾಗನ್ನು ಪರಿಶೀಲಿಸಲಾಗಿ ಅದರಲ್ಲಿದ್ದ 90000/- ರೂಪಾಯಿಗಳು ಇದ್ದಿರಲಿಲ್ಲ, ನಂತರ ಅಲ್ಲಿ ಇಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ನಾವು ಚಪ್ಪಲ ಖರೀದಿ ಮಾಡಲು ಚಪ್ಪಲ ಬಜಾರದಲ್ಲಿ ಹೋದಾಗ ಚಪ್ಪಲ ಬಜಾರದಿಂದ ಸ್ವಲ್ಪ ಮುಂದೆ ಸರಾಫ ಬಜಾರ ಕಡೆಗೆ ಹೋಗುವಾಗ ನನ್ನ ಹಿಂದೆ ಹಾಕಿಕೊಂಡ ವೆನೆಟಿ ಬ್ಯಾಗದಲ್ಲಿದ್ದ ಹಣವನ್ನು ಹಿಂದಿನಿಂದ ಯಾರೋ ಕಳ್ಳರು ಅದರ ಚೈನ್ ಬಿಚ್ಚಿ ಸುಮಾರು 90000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಭಯಕುಮಾರ ತಂದೆ ಪರಶ್ಮರಾಮ  ಜಾಧವ ಸಾ: ಖಣದಾಳ ತಾ: ಜಿ: ಕಲಬುರಗಿ ರವರು ದಿನಾಂಕ  14/06/16 ರಂದು ತನ್ನ ಮನೆಯ ಮುಂದೆ  ನಿಂತಾಗ ಶ್ರೀ ಸುನೀಲ ತಂದೆ ಗಣಪತಿ ರಾಠೋಡ ಇನ್ನೂ 25 ಜನರು ಸಾ: ಎಲ್ಲರು ಇಟಗಾ (ಕೆ) ತಾಂಡಾ & ಸಣ್ಣೂರ ತಾಂಡಾ ಗ್ರಾಮದವರು  ಕುಡಿಕೊಂಡು ಗುಂಪು ಕಟ್ಟಿ ಕೊಂಡು ಬಂದು ತಮ್ಮ ಅತ್ತೆ ಅನೂಸುಬಾಯಿಯೊಂದಿಗೆ ಯಾಕೇ ಜಗಳ ಮಾಡಿದ್ದಿ ಅಂತಾ ಅವ್ಯಾಚ್ಛ ವಾಗಿ ಬೈದು ಚಾಕುವಿನಿಂದ ಪಿರ್ಯಾದಿಗೆ ಬೆನ್ನ ಹಿಂದೆ ಚುಚ್ಚಿದ್ದು  ಹಾಗೂ ದೀರು ಚವ್ಹಾಣ ಇತನಿಗೂ   ಮೇಲಿನಿಂದ ಎತ್ತಿ ಒಗೆದು ಭಾರಿ ಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

14 June 2017

Kalaburagi District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 12/06/2017 ರಂದು ಮದ್ಯಾಹ್ನ ಶ್ರೀ ರಾಮಚಂದ್ರ ತಂದೆ ಲುಂಬು ಜಾಧವ ಸಾ: ಸಂತೋಷ ಕಾಲೋನಿ ಕಲಬುರಗಿ ರವರು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ಇ ಎನ್. 1107 ನೇದ್ದರ ಮೇಲೆ ತನ್ನ ಹೆಂಡತಿ ಸರೋಜಾಬಾಯಿ ಮತ್ತು ಮಗನಾದ ಧೀರಜಕುಮಾರ ವಯಾ: 11 ವರ್ಷ ಇತನಿಗೆ ಕೂಡಿಸಿಕೊಂಡು ಕಲಬುರಗಿಯಿಂದ ನಾಲವಾರ ಹತ್ತಿರ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಶಹಾಬಾದ ಮಾರ್ಗವಾಗಿ ಹೋಗುತ್ತಿದ್ದಾಗ ದಿನಾಂಕ: 12/06/2017 ರಂದು ಮದ್ಯಾಹ್ನ ಮಾಲಗತ್ತಿ ಗ್ರಾಮದ ಕ್ರಾಸ ಹತ್ತಿರ ರೋಡಿನಲ್ಲಿ  ಶಹಾಬಾದ ಕಡೆಯಿಂದ ಒಬ್ಬ ಕಾರ ನಂಬರ ಕೆ.ಎ 44 7329 ನೇದ್ದರ ಚಾಲಕ ತನ್ನ ಕಾರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ನನ್ನ ಹೆಂಡತಿಗೆ ಮತ್ತು ಮಗನಿಗೆ ರಕ್ತಗಾಯಾ ಮತ್ತು ಗುಪ್ತಗಾಯಾಗಳಾಗಿರುತ್ತದೆ. ಸದರಿ ಕಾರ ಚಾಲಕ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ. ನಾವು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.