POLICE BHAVAN KALABURAGI

POLICE BHAVAN KALABURAGI

30 November 2016

KALABURAGI DISTRICT REPORTED CRIMES

ಕಳವು ಯತ್ನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ದಿನಾಂಕ 26-11-2016 ರಂದು ಶ್ರೀ ಸಿದ್ದಣ್ಣ ತಂ ಹುಲಿಕಂಟರಾಯ ಮಂದ್ರವಾಡಕರ ಬಿಳವಾರ ಪ್ರಗತಿ ಕೃಷ್ಣಾ ಬ್ಯಾಂಕಿನ ವ್ಯವಸ್ಥಾಪಕರು ಠಾಣೆಗೆ ಹಾಜರಾಗಿ ದಿನಾಂಕ:25-11-16 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 26-11-16 ರಂದು ಬೆಳ್ಳಗ್ಗೆ 4 ಗಂಟೆಯ ಮಧ್ಯದಲ್ಲಿ ಬಿಳವಾರಗ್ರಾಮದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ನೇದ್ದರ ಶೆಟರ್ ಕೀಲಿಯನ್ನು ಯಾರೋ ಕಳ್ಳರು ಗ್ಯಾಸ ಕಟರ್ ದಿಂದ ಕಟ್ ಮಾಡಿ ಕಳ್ಳತನ ಮಾಡಲು ಪ್ರಯತ್ನಪಟ್ಟಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ 28.11.2016 ರಂದು ಶ್ರೀ  ರತನ್‌ಸಿಂಗ್ ತಂದೆ ಪ್ರತಾಪ್‌ ಸಿಂಗ್ ಸಾ: ವಿಧ್ಯಾ ನಗರ ಜೇವರಗಿ ಠಾಣೆಗೆ ಹಾಜರಾಗಿ ವಿದ್ಯಾನಗರದಲ್ಲಿ ನಮ್ಮದೊಂದು ಕಿರಾಣಿ ಅಂಗಡಿ ಇದ್ದು ದಿ. 27.11.2016 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅಜಯಸಿಂಗ್ ಇಬ್ಬರೂ ಅಂಗಡಿಯಲ್ಲಿದ್ದಾಗ ಮಹ್ಮದ್ ರಫೀಕ್ ತಂದೆ ಚಾಂದಪಾಸಾ ಜಮಾದಾರ ಸಾಃ ವಿದ್ಯಾನಗರ ಜೇವರಗಿ ಇತನು ನಮ್ಮ ಕಿರಾಣಿ ಅಂಗಡಿಗೆ ಬಂದು  20 ರೂಪಾಯಿ ಸೆಂಗಾ ಬೀಜ ಕೊಡು ಅಂತಾ ಅಂದಾಗ ನನ್ನ ತಮ್ಮ ಅಜಯಸಿಂಗ್ ಇತನು ಅವನಿಗೆ 20 ರೂ ಸೇಂಗಾ ಬರುವುದಿಲ್ಲಾ 25 ರೂ ಕೊಟ್ಟರೆ ಪಾವ ಕೆ.ಜಿ. ಸೇಂಗಾ ಕೊಡುತ್ತೆನೆ ಅಂತಾ ಅಂದಾಗ ಅವನು ಅವಾಚ್ಯ ಶಬ್ದಗಳಿಂದ ಬಯ್ದು 20 ರೂಪಾಯಿ ಸೇಂಗಾ ಕೊಡು ಅಂದರೆ ಬರುವುದಿಲ್ಲಾ ಅಂತಾ ಹೇಳುತಿ ಅಂತಾ ಅಂದು ನಮ್ಮ ಅಂಗಡಿಯೊಳಗೆ ಬಂದು ಅಲ್ಲಿಯೇ ಇದ್ದ  ತಕ್ಕಡಿ ತೆಗೆದುಕೊಂಡು ನನ್ನ ತಮ್ಮ ಅಜಯಸಿಂಗ್ ಇತನ ತಲೆಗೆ ಕಿವಿಯ ಹತ್ತಿರಕುತ್ತಿ ಹತ್ತಿರಮತ್ತು ಎಡ ಭುಜದ ಮೇಲೆ ಹೊಡೆದನು, ಆಗ ನಾನು ಬಿಡಿಸಲು ಹೊದಾಗ ನನ್ನ ಎಡಕೈ ಹೆಬ್ಬರಳಿನ ಹತ್ತಿರ ಕಚ್ಚಿರುತ್ತಾನೆಮತ್ತು ಬಡಿಗೆಯಿಂದ ತಲೆಯ ಮೇಲೆ ಹೊಡೆದಿದ್ದು.  ನನ್ನ ತಂದೆ ತಾಯಿಯವರು ಬಿಡಿಸಲು ಬಂದಾಗ ಅವರಿಗೊ ಸಹ ಬಡಿಗೆಯಿಂದ ಹೊಡೆದು. ಇವತ್ತು ನೀಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು. ಅಷ್ಟರಲ್ಲಿ ದಶರಥಸಿಂಗ್ ರಜಪೂತ, ಶೇಖರ ಉಡುಪಿ ಇವರು ಬಂದು ಬಿಡಿಸಿದ್ದು. ನಮ್ಮ ಅಂಗಡಿಯೊಳಗೆ ಬಂದು ಜಗಳ ಮಾಡಿ ಅವಾಚ್ಯವಾಗಿ ಬೈದು ತಕ್ಕಡಿಯಿಂದ ಹೊಡೆದು ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ದಿನಾಂಕ:29/11/2016 ರಂದು ಶ್ರೀಮತಿ ಆಸಿಯಾ ಬೇಗಂ ಗಂಡ ಶಬ್ಬಿರ ಪತೇಖಾನ ವ ಸಾ:ರಾವೂರ   ಇವರು ಫಿಯಾದಿಸಲ್ಲಿಸಿದ್ದೇನೆಂದರೆ   ತಾನು ತನ್ನ ಶಬ್ಬಿರ ತಂದೆ ಮಹ್ಮದ ಗೌಂಡಿ ಸಾ:ರಾವೂರ ಇತನೊಂದಿಗೆ ಮೊ/ಸೈ ನಂ: ಕೆ.ಎ-32/ಎಕ್ಸ್ 9469 ನೇದ್ದರ ಮೇಲೆ ಡು ಲಾಡ್ಲಾಪೂರ ಕ್ಕೆ ಹೋಗುವ ಸಲುವಾಗಿ ಬಲರಾಮ ಚೌಕ ಹತ್ತಿರ ಬಂದಾಗ ಎದರುಗಡೆಯಿಂದ ಟ್ಯಾಂಕರ ಲಾರಿ ನಂ: ಕೆ.ಎ-32/ಸಿ-4816 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮೊ/ಸೈ ಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ತನಗೆ ತರಚಿದ ಗಾಯವಾಗಿ ಶಬ್ಬಿರ ಇತನ ಬಲಗಾಲ ತೊಡೆಯ ಹತ್ತಿರ ಮತ್ತು ಎಡಗಾಲ ಮೊಳಕಾಲ ಕೆಳಗೆ ಮುರಿದು ಭಾರಿ ರಕ್ತಗಾಯವಾಗಿ ಅಲ್ಲದೇ ಎರಡು ಕಾಲುಗಳಿಗೆ ಮತ್ತು ಪಾದಗಳಿಗೆ ತರಚಿದ ರಕ್ತಗಾಯವಾಗಿದ್ದು ಉಪಚಾರ ಕುರಿತು ಕಲಬರುಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದು. ಅಪಘಾತದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:ದಿನಾಂಕ 28-11-2016 ರಂದು ಶ್ರೀ ಮಲ್ಲಿಕಾರ್ಜುನ ಮನ್ನಾಪೂರ ಸಾ: ಕಲಬುರಗಿ ರವರು ಜೇವರ್ಗಿ ರಸ್ತೆ ಮೂಲಕ ಸುರಪೂರಕ್ಕೆ ತನ್ನ ಕಾರ ನಂ ಕೆಎ32-ಎನ್7130 ನೇದ್ದರಲ್ಲಿ ಹೋಗುತ್ತಿರುವಾಗ ಹಸನಾಪೂರ ಕ್ರಾಸ್ನಲ್ಲಿ ಜೇವರ್ಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಎಪಿ15-ವಿ0909 ನೇದ್ದರ ಚಾಲನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂಧ ಚಲಾಯಿಸುತ್ತಾ ನಮ್ಮ ಕಾರಿಗೆ ಅಪಘಾತಪಡಿಸಿ ನಮ್ಮ ಕಾರಿಗೆ ಜಖಂ ಪಡಿಸಿದ್ದು. ಸದರಿ ಲಾರಿ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

29 November 2016

KALABURAGI DIST REPORTED CRIMES

ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ : ದಿನಾಂಕ 28.11.2016 ರಂದು ಶ್ರೀ. ಮಹ್ಮದ್ ರಫೀಕ್‌ ಈತನು ತನ್ನ ಹೇಳಿಕೆ ಫಿರ್ಯಾದಿಯಲ್ಲಿ ದಿನಾಂಕ 27.11.2016 ರಂದು ಮುಂಜಾನೆ ತನಗೆ  ಮತ್ತು ಪ್ರತಾಪ್‌ಸಿಂಗ್ ನ ಮಕ್ಕಳ ಮಧ್ಯ 20 ರೂಪಾಯಿ ಸೆಂಗಾ ಕೊಡುವ ವಿಷಯದಲ್ಲಿ ಜಗಳ ಆಗಿದ್ದು ಅದೇ ವಿಷಯಕ್ಕೆ ನಾನು ಮನೆಯಲ್ಲಿ ಇರುವಾಗ ಪ್ರತಾಪ್‌ ಸಿಂಗ್ ಮತ್ತು ಆತನ ಹೆಂಡತಿ ಮತ್ತು ಮಕ್ಕಳು ಕೂಡಿಕೊಂಡು ನನ್ನ ಮನೆಗೆ ಬಂದು ನನಗೆ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ, ರಾಡಿನಿಂದ ನನಗೆ ಹೊಡೆದು ರಕ್ತಗಾಯ ಗೊಳಿಸಿ ಜೀವದ ಬೆದರಿಕೆ ಹಾಕಿದ ಬ್ಗಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ:28/11/2016 ರಂದು ಶ್ರೀ ರಾವುತಪ್ಪ ತಂದೆ ನಿಂಗಪ್ಪ ಮುಗಳಿ ಸಾ: ಕವಲಗಾ(ಕೆ) ರವರು ಠಾಣೆಗೆ ಹಾಜರಾಗಿ ದಿನಾಂಕ 27/11/2016 ರಂದು ಸಾಯಂಕಾಲ ತನ್ನ ಮನೆಯಲ್ಲಿರುವಾಗ ಈ ಮೊದಲು ನಮ್ಮ ಮೇಲೆ ವೈಮನಸ್ಸು ಹೊಂದಿದ್ದ 1] ಸಿದ್ದಪ್ಪ ಗೋಟುರು 2) ಸಾಯಬಣ್ಣ ತಂದೆ ಶರಣಪ್ಪ ಗೋಟುರ 3) ಕಲ್ಲಪ್ಪ ತಂದೆ ಶರಣಪ್ಪ ಗೋಟುರ 4] ಶರಣಪ್ಪ ತಂದೆ ಸಾಯಬಣ್ಣ ಗೋಟುರ 5] ಸಿದ್ದಪ್ಪ ತಂದೆ ಅಯ್ಯಪ್ಪ ಹರವಾಳ 6] ಲಕ್ಷ್ಮಿ ಬಾಯಿ ಗಂಡ ಕಲ್ಲಪ್ಪ 7] ಭೀಮಬಾಯಿ ಗಂಡ ಸಾಯಬಣ್ಣ 8] ಮಲ್ಲಮ್ಮ ಗಂಡ ಯಲ್ಲಪ್ಪ 9] ಕಾವೇರಿ ಗಂಡ ಶರಣಪ್ಪ 10] ಯಲ್ಲಪ್ಪ ತಂದೆ ಸಾಯಬಣ್ಣ ಎಲ್ಲರೊ ಕೂಡಿಕೊಂಡು ದು ವಿನಾಳ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಹೋಡೆಯುತ್ತಿರುವಾಗ ಬಿಡಿಸಲು ಬಂದ ನನ್ನ ತಾಯಿ ತಾಯಿ ಭಾಗಮ್ಮಳಿಗೆ ಒದ್ದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಬಡಿಗೆಯಿಂದ ನನಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡಿದಕ್ಕೆ ನಮ್ಮ ತಾಯಿಯ ಬಲಗಾಲು ತೋಡೆಗೆ ಬಡಿಗೆ ಏಟು ಬಿದ್ದಿರುತ್ತದೆ. ನಮ್ಮ ಅಣ್ಣದಿರಾದ ಶಂಕರ ಮಾಳಪ್ಪ ನನ್ನ ಹೆಂಡತಿ ಲಕ್ಷ್ಮಿಬಾಯಿ ನಮ್ಮ ಅತ್ತಿಗೆ ನೀಲಮ್ಮ ಗಂಡ ಮಾಳಪ್ಪ ಬಿಡಿಸಲು ಬಂದಾಗ ಅವರಿಗೆ ಸಹ ಕೈಯಿಂದ ಮುಷ್ಠಿ ಮಾಡಿ ಹೋಡೆದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ಅಲ್ಲಿಯೆ ಇದ್ದ ಹ್ರಾಮದ ಜನರು ಬಿಡಿಸಿದ್ದು ಇನ್ನೂ ಮುಂದೆ ನೀವು ಎಲ್ಲಿ ಸಿಕ್ಕರೂ ಜೀವ ಸಹಿತ ಇಡುವುದಿಲ್ಲಾ ಅಂತಾ ಹೆದರಿಸಿದ್ದು ಕಾರಣ ಸದರಿ ನನಗೆ ಕೊಲೆಗೆ ಯತ್ನಿಸಿ  ಬಡಿಗೆಯಿಂದ ಹೋಡೆದು ಬೈದು ರಕ್ತ ಗಾಯ, ಗುಪ್ತಗಾಯಗೊಳಿಸಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮಹತ್ಯೆ :-

ಆಳಂದ ಪೊಲೀಸ್ ಠಾಣೆ: ದಿನಾಂಕ: 28/11/2016 ರಂದು ಶ್ರೀಮತಿ. ಹಿರಾಬಾಯಿ ಗಂಡ ಮಲ್ಲಿನಾಥ ಕೋರೆ ಮು:ನಿರಗುಡಿ ಇವರು ಠಾಣೆಗೆ ಹಾಜರಾಗಿ ತನಗೆ ನಾಲ್ಕು ಜನ ಮಕ್ಕಳಿದ್ದು ನಿರಗುಡಿ ಸೀಮಾಂತರದಲ್ಲಿ ನನ್ನ ಗಂಡನ ಹೆಸರಿನಲ್ಲಿ 5 ಎಕರೆ ಜಮೀನು ಇದ್ದು ಅದನ್ನು ನನ್ನ ಗಂಡ ಒಕ್ಕಲುತನ ಮಾಡುತ್ತಾ ಉಪಜೀವಿಸುತ್ತಿದ್ದೆವು ಆ ಹೊಲದ ಮೇಲೆ SBH ಬ್ಯಾಂಕ ನಿರಗುಡಿಯಲ್ಲಿ 80,000/- ಸಾವಿರ ಸಾಲ ಪಡೆದಿದ್ದು ಕಳೆದ ವರ್ಷ ಮಳೆ ಬರದಿದ್ದರಿಂದ ಬರಗಾಲ ಬಿದ್ದು ಬಿತ್ತನೆ ಮಾಡಿದ ಬೆಳೆ ಹಾನಿಯಾಗಿದ್ದರಿಂದ ಗ್ರಾಮದಲ್ಲಿ ಜನರಿಂದ ಕೈಗಡವಾಗಿ 04-05 ಲಕ್ಷ ರೂಪಾಯಿ ತಗೆದುಕೊಂಡಿದ್ದು ಇದನ್ನು ಹೇಗೆ ತಿರಿಸುವದು ಅಂತಾ ಆಗಾಗ ವಿಚಾರ ಮಾಡುತ್ತಾ ಕುಳಿತುಕೊಳ್ಳುತ್ತಿದ್ದರು ಹೇಗಾದರು ಮಾಡಿ ತಿರಿಸಿದರಾಯಿತು ಅಂತಾ ಅವರಿಗೆ ಸಮಾಧಾನದ ಮಾತು ಹೇಳುತ್ತಾ ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ:28/11/2016 ರಂದು ಮದ್ಯಾಹ್ನ 02 ಗಂಟೆ ಸುಮಾರಿಗೆ ನನ್ನ ಗಂಡ ಮಲ್ಲಿನಾಥನು ಬೇಜಾರದಿಂದಲೆ ಹೊಲಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೋಗಿದ್ದು. ಮಧ್ಯಾನ್ನ 3 ಗಂಟೆ ಸುಮಾರಿಗೆ ಸಿದ್ರಾಮಪ್ಪಾ ತಂದೆ ಶಿವರುದ್ರ ಕೋರೆ ಅವರು ನಮ್ಮ ಮನೆಗೆ ಬಂದು ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಿನಾಥ ಇವರು ನೇಣುಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ತಿಳಿಸಿದಾಗ ನಾನು ಹಾಗೂ ಗ್ರಾಮದ ಜನರು ಹೊಲಕ್ಕೆ ಹೋಗಿ ನೋಡಲು ನನ್ನ ಗಂಡನು ತನಗಾದ ಸಾಲ ಹೇಗೆ ತಿರಿಸುವದು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನಮ್ಮ ಹೊಲದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು. ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

28 November 2016

KALABURAGI DISTRICT REPORTED CRIME

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :- ದಿನಾಂಕ 27/11/2016 ರಂದು ಶ್ರೀಮತಿ ಫಾಕಿಜಾ ಬೇಗಂ ಗಂಡ ಅಲಿಮುರ್ತುಜಾ ಮುಲ್ಲಾ ಸಾ:ಟಾಕಳಿ ಇವರು ಠಾಣೆಗೆ ಹಾಜರಾಗಿ ತನ್ನ ಗಂಡನ ಹೆಸರಿಗೆ 13.5 ಎಕರೆ ಜಮೀನು ಇದ್ದು ಗಂಡ ಅಲಿಮುರ್ತುಜಾರವರು  ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು  ನನ್ನ ಗಂಡನ ಅಣ್ಣ ತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ  ಇವರು ನನ್ನ ಗಂಡ ಹೆಸರಿನಲಿದ್ದ ಹೊಲದಲ್ಲಿ ತಮಗೊ ಪಾಲು ಬೇಕೆಂದು ನನ್ನ ಸಂಗಡ ಜಗಳ ಮಾಡುತ್ತಾ ಬಂದಿದ್ದು. ದಿನಾಂಕ 25/11/2016 ರಂದು ಬೆಳಿಗ್ಗೆ ನಾನು ಅಫಜಲಪೂರ ತಹಸೀಲ ಕಾರ್ಯಾಲಯ ಕ್ಕೆ ಬಂದು  ನನ್ನ ಗಂಡನ ಹೆಸರಿನಲಿದ್ದ ಹೊಲ ನನ್ನ ಹೆಸರಿಗೆ ಮಾಡಿಕೊಳ್ಳುವ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ  ಊರಿಗೆ ಹೋಗುವ ಸಲುವಾಗಿ ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ಬರುತಿದ್ದಾಗ ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ಎದುರಿಗೆ ಬಂದು ನನಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಹೊಲದಲ್ಲಿ ನಮಗೂ ಪಾಲ ಬರುತ್ತೆ ನಿನಗ ಖಲಾಸ ಮಾಡ್ತಿವಿ ಅನ್ನುತ್ತಾ ಮಿಟ್ಟುಸಾಬ , ಶಮಿಶೋದ್ದೀನ, ಅಬ್ದುಲಗನಿ ಇವರು ನನ್ನ ತೆಲೆ ಕೂದಲು ಹಿಡಿದು ಎಳೆದಾಡಿ ಕೇಳಗೆ ಕೆಡವಿ ತಮ್ಮ ಕಾಲಿನಿಂದ ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದು, ನಂತರ ಅಲ್ಲಿಯ ಜನ ಬಿಡಿಸಿರುತ್ತಾರೆ. ಸದರಿಯವರು ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು.  ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ನನ್ನ ಗಂಡನ ಆಸ್ತಿಯಲ್ಲಿ ಪಾಲ ಬೇಕೆಂದು ನನ್ನೊಂದಿಗೆ ಜಗಳ ತಗೆದು ನನಗೆ ತಡೆದು ನಿಲ್ಲಿಸಿ ಕುದಲು ಹಿಡಿದು ಜಗ್ಗಿ ಕಾಲಿನಿಂದ ಒದ್ದು ಅವಮಾನ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಟ ಪ್ರಕರಣ :
ಶಹಾಬಾದ ಪೊಲೀಸ್ ಠಾಣೆ: ದಿನಾಂಕಃ27.11.2016 ರಂದು ಪಿ.ಐ ಶಹಾಬಾದ ರವರು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮದ ಕಾಗಿಣಾ ನದಿ ಹತ್ತಿರ ದಾಳಿ ಮಾಡಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಟಿಪ್ಪರ  ನಂ ಎಮ್.ಹೆಚ್.-06 ಎಕ್ಯೂ-546,  ಟಿಪ್ಪರ್ ಲಾರಿ ನಂಬರ್ - ಕೆ ಎ 32 ಸಿ 4533 , ಟಿಪ್ಪರ ನಂಬರ ಕೆ.ಎ. 32 ಸಿ 3331 ನೇದ್ದರಲ್ಲಿದ್ದ ಮರಳನ್ನು ಜಪ್ತಿ ಮಾಡಿ ಲಾರಿ  ಚಾಲಕ ಮತ್ತು ಮಾಲೀಕರ ಮೇಲೆ ಶಹಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ :    ದಿನಾಂಕ: 27/11/2016 ರಂದು ಶ್ರೀಮತಿ ಗಾಯತ್ರಿ ಗಂ. ಈರಬಸಪ್ಪ ಪತ್ತಾರ ಸಾ:ನೆಲೋಗಿ ಇವರು ಠಾಣೆಗೆ ಹಾಜರಾಗಿ ನ್ನ ಗಂಡ ಈರಬಸಪ್ಪ ಈತನು ಸೋನ್ನ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿ ಅಂತ ಕೆಲಸ ಮಾಡುತ್ತಿದ್ದು ಇಂದು ದಿನಾಂಕ: 27/11/2016 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಮನೆಯಿಂದ ಅವರು ಕೆಲಸ ಮಾಡುತ್ತಿದ್ದ ಸೊನ್ನ ಗ್ರಾಮಕ್ಕೆ ಹೋಗಿ ನಂತರ ಜೇವರ್ಗಿ ಆಸ್ಪತ್ರೆಗೆ ಹೋಗಿ ಔಷಧ ತಗೆದುಕೊಂಡು ಜೇವರ್ಗಿ ಕಡೆಯಿಂದ ತನ್ನ ಸೈಕಲ ಮೋಟರ ನಂ: ಕೆಎ 32-ಎಸ್-4196 ಮೇಲೆ ಬರುತ್ತಿದ್ದಾಗ ಹರವಾಳ ಕ್ರಾಸ ಹತ್ತಿರ ಸಿಂದಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಕೆಎ 32- ಸಿ-5260 ನೇದ್ದರ ಚಾಲಕನು ತನ್ನ ಲಾರಿವನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಸೈಕಲ ಮೋಟರಕ್ಕೆ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ  ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮಥಪಟ್ಟಿದ್ದು ಸದರಿ ಲಾರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ 27.11.2016 ರಂದು ಶ್ರೀ ಅಬ್ದುಲ ರಜಾಕ ತಂದೆ ಲಾಲಅಹ್ಮದಿನ್ ಗಾಣಿಗೆರ ಸಾ: ಕಟ್ಟಿಸಂಗಾವಿ ಬೀಮಾ ಬ್ರಡ್ಜ ಠಾಣೆಗೆ ಹಾಜರಾಗಿ. ದಿ: 21.11.16 ರಂದು ಮದ್ಯಾಹ್ನ ನಾನು ಮತ್ತು ನನ್ನ ಮಗ ರಹಿಮಾನ ಇಬ್ಬರು ಹೊಟೆಲದಲ್ಲಿ ಕೆಲಸ ಮಾಡುತ್ತಿರುವಾಗ. ನನ್ನ ಮಗ ರಹಿಮಾನನು ಕಿರಾಣಿ ಸಾಮಾನುಗಳು ತೆಗೆದುಕೊಂಡು ಬರುವ ಕುರಿತು ನಮ್ಮ ಮೋಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಆತನ ಸ್ನೇಹಿತ ನಾಗರಾಜನ ನೊಂದಿಗೆ ಮೇಲೆ ಜೇವರ್ಗಿಗೆ ಹೋಗುವಾಗ ನಾಗರಾಜನು ಮೋ.ಸೈಕಲ್ ಚಲಾಯಿಸುತ್ತಾ  ಮಹ್ಮದಿಯ ದಾರೂಲಮ ಶಾಲೆ ಹತ್ತಿರ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಯತ್ತಾ ಒಮ್ಮಲೇ ಕಟ್ ಹೊಡೆದಾಗ ನನ್ನ ಮಗ ಮೋಟಾರ ಸೈಕಲ್ ಮೇಲಿಂದ ಕೆಳಗೆ ಬಿದ್ದು ಎಡಗಾಲ ಮತ್ತು ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ, ಬಲಗೈ ರಟ್ಟಿ ಹತ್ತಿರ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಈಗ ನನ್ನ ಮಗನು ಸ್ವಲ್ಪ ಚೇತರಿಸಿಕೊಂಡಿದ್ದು ಈಗ ನಾನು ತಡವಾಗಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು. ಮೇಲೆ ನಮೂದಿಸಿದ ನಾಗರಾಜನು ಮೊಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಹಿಂದೆ ನನ್ನ ಮಗನಿಗೆ ಕೂಡಿಸಿಕೊಂಡು ಮೊಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಲೇ ಕಟ್ಟು ಹೊಡೆದುದಕ್ಕೆ ಈ ಘಟನೆ ಸಂಬವಿಸಿದ್ದು ಅವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.