POLICE BHAVAN KALABURAGI

POLICE BHAVAN KALABURAGI

05 June 2016

Kalaburagi District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ. ಫಾಕೀಯಾ ತಬಸ್ಸುಂ  ಗಂಡ  ಮಂಜುನಾಥ ವಾಡಿ  ಸಾ: ದತ್ತ ನಿಲಯ ಬನಶಂಕರಿ ಲೇಔಟ ದೇವಾ ನಗರ ಕಲಬುರಗಿ ರವರು ದಿನಾಂಕ 12/05/2014 ರಂದು ಸಬ್‌ ರಜಿಸ್ಟಾರ ಆಫೀಸನಲ್ಲಿ ನಾವಿಬ್ಬರು ಮದುವೆಯಾಗಿದ್ದು  ನನ್ನ ಪತಿ ಮಂಜುನಾಥ ವಾಡಿ  ಸ.ಪ.ಪೂ ಕಾಲೇಜು ಬಿ.ಗುಡಿ ನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದಾರೆ.  ದಿನಾಂಕ 04/07/2015 ರಂದು ಪ್ಯಾರಲೈಸಿಸ್‌ ಆಗಿದ್ದು ಒಂದು ವರ್ಷದಿಂದ ಚಿಕಿತ್ಸೆ ಜರುಗುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು.  ಚಿಕಿತ್ಸೆಯ 4 ತಿಂಗಳು ಪೂರ್ಣಗೊಂಡು ನಂತರ ನೌಕರಿಗೆ ಹಾಜರಾಗಿದ್ದು ದಿನಾಲು ಅವರ ತಂದೆಯವರ ಜೋತೆ ಹೋಗುತ್ತಿದ್ದರು. ಇವತ್ತು ದಿನಾಂಕ 03/06/2016 ರಂದು ಯಥಾವತ್ತಾಗಿ  ಕಾಲೇಜಿಗೆ ಹೊಗಲು ಎದ್ದು 7:30 ಎಎಂ ಸುಮಾರಿಗೆ ಅಟೊ ಅಂಕಲ ಜೋತೆ ನನ್ನ ಎ.ಟಿ.ಎಂ ಹಾಗು ಅವರ ಎ.ಟಿ.ಎಂ ಎರಡನ್ನು ತೆಗೆದುಕೊಂಡು ಹೊದರು. ಇತ್ತಿಚ್ಚಿಗೆ ಅವರು ಕಾಯಿಲೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ನಾನು ನಿನ್ನ ಮೇಲೆ ಭಾರವಾಗಿದ್ದೆನೆ ಎನ್ನುವ ಮಾತನ್ನು ಹೇಳಿದರು. ಬೆಳಿಗ್ಗೆ ಕಾಲೇಜಿಗೆಂದು ಹೊದವರು ಕಾಲೇಜಿಗೂ ಮುಟ್ಟದೇ ಮನೆಗೂ ಬಂದಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀಪಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 04-06-2016 ರಂದು ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಎರಡು ಕ್ರೂಜರ ವಾಹನಗಳು ಮತ್ತು ಒಂದು ಕಮಾಂಡ ಜೀಪ ವಾಹನಗಳ ಚಾಲಕರು ತಮ್ಮ ತಮ್ಮ ವಾಹನಗಳನ್ನು ಬಸ್ ನಿಲ್ದಾಣದ ಎದರುಗಡೆ ಇರುವ ರಸ್ತೆಯ ಮದ್ಯದಲ್ಲಿ ನಿಲ್ಲಿಸಿಕೊಂಡಿದ್ದರು ಇದರಿಂದ ಬಸ್ ನಿಲ್ದಾಣದಲ್ಲಿ ಹೋಗಿ ಬರುವ ಕೆ.ಎಸ್.ಆರ್.ಟಿ.ಸಿ ಬಸಗಳಿಗೂ, ಸಂಚಾರಕ್ಕು ಮತ್ತು ಹೋಗಿ ಬರುವ ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರಿಗೂ ತೊಂದರೆ ಯಾಗುತ್ತಿತ್ತು.ಸದರಿ ವಾಹನಗಳಿಂದ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿದ್ದರಿಂದ ಸದರಿ ವಾಹನಗಳನ್ನು ವಶಪಡಿಸಿಕೊಳ್ಳುವ ಕುರಿತು ಸದರಿ ವಾಹನಗಳನ್ನು ನೊಡಲಾಗಿ ಒಂದು ಕ್ರೂಜರ ವಾಹನ ನಂಬರ ಕೆಎ-22 ಎನ್-6037 ಅಂತಾ ಇದ್ದು ಸದರಿ ವಾಹನದಲ್ಲಿದ್ದ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ 1) ಮುತ್ತಪ್ಪ ತಂದೆ ಭಾಗಪ್ಪ ತೇಲಕರ ಉ: ಕ್ರೂಜರ ನಂ ಕೆಎ-22 ಎನ್-6037 ನೆದ್ದರ ಚಾಲಕ ಸಾ: ಗುಡ್ಡೆವಾಡಿ (ಗುಡ್ಡಡಗಿ) ತಾ: ಅಫಜಲಪೂರ ಅಂತಾ ತಿಳಿಸಿದ್ದು, ಹಾಗೂ ಇನ್ನೊಂದು ಕ್ರೂಜರ ವಾಹನ ನಂಬರ ನೋಡಿದ್ದು ಅದರ ನಂಬರ ಕೆಎ-32 ಎಮ್-4368 ಅಂತಾ ಇದ್ದು, ಸದರಿ ವಾಹನದಲ್ಲಿದ್ದ ಸದರ ವಾಹನದ ಚಾಲಕನ ಹೆಸರು 2) ಖಾಜಾಬಾಯ ತಂದೆ ಚಾಂದಸಾಬ ಸೌದರಿ ಉ: ಕ್ರೂಜರ ಚಾಲಕ ಸಾ: ಕರಜಗಿ ಅಂತಾ ತಿಳಿಸಿದ್ದು, ಮತ್ತೊಂದು ಕಮಾಂಡರ ಜೀಪ ಇದ್ದು ಅದರ ನಂ ಕೆಎ-29 ಎಮ್ 2326 ಅಂತಾ ಇದ್ದು, ಸದರಿ ವಾಹನದಲ್ಲಿದ್ದ ಸದರ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 3) ಸಿದ್ದಪ್ಪ ತಂದೆ ಶಿವರಾಯ ನಾವಿ ಉ: ಕಮಾಂಡರ ಜೀಪ ನಂಬರ ಕೆಎ-29 ಎಮ್-2326 ನೇದ್ದರ ಚಾಲಕ ಸಾ : ಘತ್ತರಗಾ ತಾ : ಅಫಜಲಪೂರ ಅಂತಾ ತಿಳಿಸಿದನು. ಸದರಿ ವಾಹನಗಳ ಜನರು ತಮ್ಮ ತಮ್ಮ ವಾಹನಗಳನ್ನು ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರಸ್ತೆಯ ಮದ್ಯದಲ್ಲಿ  ನಿಲ್ಲಿಸಿ ಸಂಚಾರಕ್ಕೆ ಹಾಗೂ ಹೋಗಿ ಬರುವ ಜನರಿಗೆ ತೊಂದರೆ ಕೊಡುತ್ತಿದ್ದರಿಂದ ಸದರಿ ವಾಹನಗಳನ್ನು ಹಾಗೂ ಸದರಿ ವಾಹನಗಳ ಚಾಲಕರನ್ನು ವಶಕ್ಕೆ ಪಡೆದುಕೊಂಡು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 04.06.2016  ರಂದು ಮುಂಜಾನೆ ಜೇವರಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಮ್.ಸಿ  ತರಕಾರಿ ಮಾರ್ಕೆಟ್ ಯಾರ್ಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಅಖಂಡೆಶ್ವರ್ ಎ.ಪಿ.ಎಮ್.ಸಿ. ಮಾರ್ಕೇಟ್  ಕಡೆಗೆ ಹೊರಟು ಮಾರ್ಕೆಟ್ ತರಕಾರಿ ಮಾರ್ಕೆಟ್ ಯಾರ್ಡ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಅಡತ ಅಂಗಡಿಯ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ತರಕಾರಿ ಮಾರ್ಕೆಟ್  ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಹಾರ ಇಸ್ಪೆಟ ಜುಜಾಟ ಆಡುತ್ತಿರುವದನ್ನು ನೋಡಿ ಖಚಿತಪಡೆಸಿಕೊಂಡ ದಾಳಿ ಮಾಡಿ ಹಿಡಿದು ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ 1) ಮಹ್ಮದ್ ಗೌಸ್ ತಂದೆ ಅಲೀ ಪಟೇಲ  2) ರಾಘವೇಂದ್ರ ತಂದೆ ಹೂವಣ್ಣಾ ಹನ್ನೂರ  3)   ಬಾವಾಸಾಬ ತಂದೆ ಮಶಾಖಸಾಬ ಕಾಸರಬೊಸಗಾ  ಅಂಥಾ ತಿಳಿಸಿದ್ದು ಸದದರಿಯವರಿಂದ 2300/- ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಾರುತಿ ತಂದೆ ನರಸಿಂಗರಾವ ಬದಾಮಿ ಸಾ: ಮನೆ ನಂ.4-82 ಕಬೀರ ರೋಡ ಬಾವರ್ಚಿ ಗಲ್ಲಿ ಬೀದರ ಹಾ:: ಮಾಸ್ಟರ ಶಿವಶಂಕರ ಹರಸೂರ ಮನೆಯಲ್ಲಿ ಕಿರಾಯಿ ಅರ್.ಎಸ್. ಕಾಲನಿ ಕಲಬುರಗಿ ರವರು ದಿನಾಂಕ 03/06/16 ರಂದು ಮಧ್ಯಾಹ್ನ ನಮ್ಮ ಸಂಬಂಧಿಕರಾದ ಕೊಪ್ಪಣ್ಣಾ ಇವರ ಬಾಬರ ಅಂಗಡಿಗೆ ಹೋಗಿ ಅವರೊಂದಿಗೆ ಸಂಜೆ 07-30 ಗಂಟೆಯವರೆಗೆ ಮಾತಾಡಿದ ನಂತರ ಅಲ್ಲಿಂದ ಒಬ್ಬನೇ ಅಲ್ಲೇ ಪಕ್ಕದಲ್ಲಿ ಇರುವ ರಾಮಕೃಷ್ಣ ಹೋಟಲಕ್ಕೆ ಹೋಗಿ  ಊಟ ಮಾಡಿಕೊಂಡು ಮನೆಗೆ ಹೋಗುವ ಕುರಿತು ಸಿಟಿ ಬಸ್ಟು ಹಿಡಿದುಕೊಂಡು ಹುಮನಾಬಾದ ರಿಂಗ ರೋಡ ಕಲಬುರಗಿ  ವರೆಗೆ ಬಂದು ಸಿಟಿ ಬಸ್ಸಿನಿಂದ ಇಳಿದುಅಲ್ಲಿಂದ ಒಬ್ಬನೇ ನಡೆದುಕೊಂಡು ಅರ್.ಎಸ್. ಕಾಲನಿ ಕಡೆ ಹೊರಟಿದ್ದು. ರಾತ್ರಿ 08-30  ಗಂಟೆ ಸುಮಾರಿಗೆ ಟಿ.ವಿ.ಸ್ಟೇಷನ ಕ್ವಾರ್ಟರ್ಸ  ಹತ್ತಿರ ಬಂದಾಗ ಆಗ ನನ್ನ ಹಿಂದಿನಿಂದ ಒಂದು ಆಟೋದಲ್ಲಿ ಮೂರು ಜನರು ಹುಡುಗುರು ಕುಳಿತುಕೊಂಡು ಬಂದು ನನ್ನ  ಎದುರುಗಡೆ ಆಟೋ ತೆಗೆದುಕೊಂಡು ಬಂದು ಆಟೋದಿಂದ ನನಗೆ ಅಡ್ಡಗಟ್ಟಿ ನಿಲ್ಲಿಸಿ, ಮೂವರು ಆಟೋದಿಂದ ಇಳಿದು ಬಂದವರೇ ನನಗೆ ಸ್ವಲ್ಪ ಮುಂದೆ ಕತ್ತಲಿಲ್ಲಿ ಕರೆದುಕೊಂಡು ಹೋಗಿ, ಅವರಲ್ಲಿ ಒಬ್ಬನು ಹಿಂದಿ ಭಾಷೆಯಲ್ಲಿ ನನಗೆ ನಮ್ಮ ತಮ್ಮನ ಹಣ ಯಾಕೇ ಕಸಿದುಕೊಂಡಿದ್ದೀ ಅಂತಾ ಕೇಳಿದನು. ಅದಕ್ಕೆ ನಾನು ನನಗೇನು ಗೊತ್ತಿಲ್ಲಾ ಅಂತಾ ಹೇಳಿದಾಗ ಅವರಲ್ಲಿ ಇಬ್ಬರು ನನಗೆ ಒತ್ತಿಯಾಗಿ ಹಿಡಿಯಲು ಹಿಂದಿ ಭಾಷೆಯಲ್ಲಿ ಮಾತನಾಡಿದವನು ನನ್ನ ಎದೆಯ ಮೇಲಿನ ಕಿಸೆ ಚಕ್ಕ ಮಾಡಲು ಕಿಸೆಯಲ್ಲಿದ್ದ ನೋಕಿಯಾ ಮೋಬಾಯಿಲ :ಕಿ:  2000/- ರೂ. ಜಬರದಸ್ತಿಯಿಂದ ಕಸಿದುಕೊಂಡನು. ಮತ್ತು ಪ್ಯಾಂಟಿನ ಜೇಬಿನ ಎರಡು ಕಿಸೆಗಳನ್ನು ಚಕ್ಕ ಮಾಡಲಾಗಿ ಎನೋ  ಸಿಗಲಿಲ್ಲಾ. ತದನಂತರ ನನ್ನ ವಾಚ ಪಾಕೇಟದಲ್ಲಿದ್ದ ನಗದು ಹಣ 3500/- ರೂ.ಜಬರದಸ್ತಿಯಿಂದ ಕಸಿದುಕೊಂಡು ನನ್ನ ಪ್ಯಾಂಟು ಹರಿದು ತಾವು ತಂದಿದ್ದ ಆಟೋದಲ್ಲಿ ಮೂರು ಜನರು ಕುಳಿತುಕೊಂಡು ಅಲ್ಲಿಂದ ಹುಮನಾಬಾದ ರೋಡ ಕಡೆ ಓಡಿ ಹೋದರು. ಕತ್ತಲಿಲ್ಲಿ ಆಟೋ ನಂಬರ ನೋಡಲು ಆಗಿರುವುದಿಲ್ಲಾ. ಸದರಿ ಮೂರು  ಜನರು 18-24 ವರ್ಷ ವಯಸ್ಸಿನವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

03 June 2016

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಾಂತಪ್ಪ ತಂದೆ ತುಕ್ಕಪ್ಪ ಡಾಲೇರ ಸಾ:ಯಡ್ರಾಮಿ ತಾಂಡಾ ಇವರು ದಿನಾಂಕ 27-05-2016 ರಂದು ನನ್ನ ತಮ್ಮ ಮಾನಸಿಂಗ ಈತನು ದಿನಾಂಕ 26-05-2016 ರಂದು ಕುರಿ ಕಾಯಲು ಹೋಗಿದ್ದು, ಅಂದೆ 12;00 ಗಂಟೆಯಿಂದ 4;00 ಗಂಟೆ ಮದ್ಯಧಲ್ಲಿ ನಮ್ಮ ತಮ್ಮ ನಮ್ಮೂರ ರುಕುಮ ಪಟೇಲ ಚಿಂಚೋಳಿ ರವರ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಬಾವಿ ನೀರಲ್ಲಿ ಬಿದ್ದು ಪೃತ ಪಟ್ಟಿರಬಹುದು ಅಂತಾ ಸಂಶಯದ ಮೇಲೆ ಅರ್ಜಿ ಕೊಟ್ಟ ಮೇರೆಗೆ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ. ನಮ್ಮು 15 ಕುರಿಗಳು ಹಾಗು ಇನ್ನಿತರರ 25 ಕುರಿಗಳನ್ನು ನಾವು ಕಾಯುತ್ತಾ ಬಂದಿರುತ್ತೇವೆ. ಇಂದು ನಮ್ಮೂಣಿಯ ಸುಸಲಾಬಾಯಿ ಗಂಡ ಧರ್ಮು ಡಾಲೇರ ಮತ್ತು ರೇಣುಕಾ ಗಂಡ ಅನೀಲ ಡಾಲೇರ ರವರು ತಿಳಿಸಿದ್ದೇನೆಂದರೆ, ದಿನಾಂಕ 26-05-2016 ರಂದು ಮದ್ಯಾಹ್ನ 2;00 ಗಂಟೆ ಸುಮಾರಿಗೆ ನಾವು ರುಕುಮ ಪಟೇಲ ಚಿಂಚೋಳಿ ರವರ ಹೊಲದಲ್ಲಿ ಬಾವಿಯಿಂದ ಸ್ವಲ್ಪ ದೂರದಲ್ಲಿ ಕಟ್ಟಿಗೆ ಕಡಿಯುತ್ತಿದ್ದಾಗ ನಿಮ್ಮ ತಮ್ಮ ಮಾನಸಿಂಗನು ಸಹ ತನ್ನ ಕುರಿಗಳನ್ನು ಅಲ್ಲೆ ಬಾವಿ ಹತ್ತಿರ ಕಾಯುತ್ತಿದ್ದನು. ಆಗ ಅದೇ ಸಮಯಕ್ಕೆ ನಮ್ಮ ತಾಂಡಾದ ಲಕ್ಷ್ಮಣ@ಲಚ್ಯಾ ತಂದೆ ದೀಪಲು ರಾಠೋಡ ಹಾಗು ಅವನೊಂದಿಗೆ ಇನ್ನು 3 ಜನರಿದ್ದರು ಅವರು ಯಾರು ಅಂತಾ ಗೊತ್ತಿರುವುದಿಲ್ಲ, ನಂತರ ಅವರೆಲ್ಲರು ನಿಮ್ಮ ತಮ್ಮನ ಹತ್ತಿರ ಹೋಗಿ ಅವನಿಗೆ ಕೈಯಿಂದ ಹೊಡೆ ಬಡೆ ಮಾಡಿ ಬಾವಿ ನೀರಲ್ಲಿ ನೂಕಿ ಕೊಟ್ಟರು, ಆಗ ನಿಮ್ಮ ತಮ್ಮ ಚಿರಾಡುತ್ತಿದ್ದನು, ನಾವು ಹೆದರಿಕೊಂಡು ಅಲ್ಲೆ ಕಂಟಿಯಲ್ಲಿ ಅಡಗಿಕೊಂಡಿದೇವು. ನಂತರ ಅವರೆಲ್ಲರು ಎಲ್ಲಾ ಕುರಿಗಳನ್ನು ಹೊಡೆದುಕೊಂಡು ಸುಂಬಡ ಗ್ರಾಮದ ಕಡೆಗೆ ಹೋದರು. ಲಕ್ಷ್ಮಣ@ಲಚ್ಯಾ ಈತನ ಜೊತೆಗಿದ್ದ ಇನ್ನು 3 ಜನರನ್ನು ನೋಡಿದರೆ ಗುರುತಿಸುತ್ತೇವೆ. ನಾವು ಅವರನ್ನು ಹೆದರಿಕೊಂಡು ಮೊನ್ನೆಯಾದ ಘಟನೆಯನ್ನು ಹೇಳಿರುವುದಿಲ್ಲ. ಅಥಾ ತಿಳಿಸಿದ ಮೇರೆಗೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 01.06.2016 ರಂದು ಮದ್ಯಾಹ್ನ ಜೇವರಗಿ ಹೊರ ವಲಯದ ಗಡ್ಡಿ ಫೂಲ್‌ ಹತ್ತಿರ ರೋಡಿನಲ್ಲಿ ನಾನು ಮತ್ತು ಭಗವಂತ್ರಾಯ ತಂದೆ ಗುಂಡಪ್ಪ ಶಿವಣ್ಣನವರ್ ಈತನ ಮೊಟಾರು ಸೈಕಲ್‌ ನಂ ಕೆ.ಎ 32 ಇಹೆಚ್‌ 3406 ನೇದ್ದರ ಮೇಲೆ ಹೋಗುತ್ತಿದ್ದಾಗ ಭಗವಂತ್ರಾಯ ಈತನು ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರೋಡಿನ ಪಕ್ಕದಲ್ಲಿ ಸತ್ತು ಬಿದ್ದ ಎಮ್ಮೆಗೆ ಡಿಕ್ಕಿ ಪಡಿಸಿದ್ದರಿಂದ ನಾವುಗಳು ಮೊಟಾರು ಸೈಕಲ್‌ದಿಂದ ಕೆಳಗೆ ಬಿದ್ದು ಗಾಯಪೆಟ್ಟುಗಳಾಗಿರುತ್ತವೆ ಅಂತಾ ಶ್ರೀ ವಿಶ್ವನಾಥ ತಂದೆ ಅಖಂಡೆಪ್ಪ ಕಲ್ಲಾ ಸಾ : ಲಕ್ಷ್ಮಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ದಿನಾಂಕ 01.06.2016 ರಂದು ಮದ್ಯಾಹ್ನ ಕೃಷಿ ಸಂಶೋಧನಾ ಕೇಂದ್ರದ ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಪಕ್ಕದಲ್ಲಿ ನಾನು ಮತ್ತು ನನ್ನ ತಾಯಿ ಸಕ್ಕಮ್ಮ ಹೆಂಡತಿ ಮಹಾನಂದ ಹಾಗು ಜೇವರಗಿ ಪಟ್ಟಣದ ಲಕ್ಷ್ಮಿ ಪುಜಾರಿ ನಾಗಮ್ಮ ಪುಜಾರಿ ಎಲ್ಲರು ಕೂಡಿಕೊಂಡು ನಡೆದುಕೊಂಡು ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ಕಲಬುರಗಿ ಕಡೆಯಿಂದ ಮೋಟಾರು ಸೈಕಲ್‌ ನಂ ಕೆ.ಎ 32 ವಿ 2853 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಮ್ಮ ತಾಯಿಗೆ ಡಿಕ್ಕಿ ಹೊಡೆದು ಗಾಯ ಗೊಳಿಸಿ ತನ್ನ ಮೋಟಾರು ಸೈಕಲ್‌ದೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಶ್ರೀ ರವಿ ತಂದೆ ಶಂಕ್ರೆಪ್ಪ ಸಿರೂರ ಸಾ : ಶಾಸ್ತ್ರಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ ೦1.06.2016 ರಂದು ಸಾಯಂಕಾಲದ ನಾನು ನನ್ನ ಖಾಸಗಿ ಕೆಲಸದ ಸಲುವಾಗಿ ಮೋಟಾರು ಸೈಕಲ್‌ ನಂ ಕೆಎ 36 ಜೆ 2759 ನೇದ್ದನ್ನು ತೆಗೆದುಕೊಂಡು ಜೇವರಗಿಗೆ ಬರುತ್ತಿದ್ದೆನು ಸಾಯಂಕಾಲ 05:15 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ಸತ್ತರ್‌ ಸಾಬ್‌ ಪೆಟ್ರೋಲ್‌ ಪಂಪ್ ಹತ್ತಿರ ಶಹಾಪುರ ಜೇವರಗಿ ರೋಡಿನಲ್ಲಿ ರೋಡಿನ ಸೈಡಿನಿಂದ ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಹಿಂದಿನಿಂದ ಒಬ್ಬ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರು ಸೈಕಲ್‌ಗೆ ಮತ್ತು ನನ್ನ ಬಲಗಾಲಿಗೆ ಬಲವಾಗಿ ಡಿಕ್ಕಿಪಡಿಸಿದನು ಆಗ ನಾನು ಮೋಟಾರು ಸೈಕಲ್‌ದೊಂದಿಗೆ ಕೆಳಗೆ ಬಿದ್ದಾಗ ಅಲ್ಲೆ ರೋಡಿನಲ್ಲಿ ಬರುತ್ತಿದ್ದ ಲಕ್ಷ್ಮಿ ಗಂಡ ಆನಂದ ಬಾರಿಗಿಡ ಇವಳು ಬಂದು ನನಗೆ ಎಬ್ಬಿಸಿ ಕೂಡಿಸಿದಳು ಅಫಘಾತದಲ್ಲಿ ನನಗೆ ಬಲಗಾಲ ಮೋಳಕಾಲ ಕೆಳಗೆ ಭಾರಿ ರಕ್ತ ಗಾಯವಾಗಿದ್ದು. ನನಗೆ ಡಿಕ್ಕಿ ಪಡಿಸಿದ ಮೊಟಾರು ಸೈಕಲ್‌ ನಂ ನೋಡಲು ಅದು ಕೆ.ಎ 33 ಎಸ್ 7649 ನೇದ್ದು ಇದ್ದು ಅದರ ಸವಾರನಿಗೆ ಹೆಸರು ಕೇಳುತ್ತಿದ್ದಂತೆ ಅವನು ತನ್ನ ಮೋಟಾರು ಸೈಕಲ್‌ ದೊಂದಿಗೆ ಓಡಿ ಹೋರುತ್ತಾನೆ ಅಂತಾ ಶ್ರೀ ಅರ್ಜುನ್ ತಂದೆ ಯಮನಪ್ಪ ಕೊಂಬಿನ್‌ ಸಾ : ಯಾಳವಾರ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ವೆಂಕಟರಾವ ತಂದೆ ಚಂದ್ರಶೇಖರ ವಾಕೂಡೆ ಸಾ; ಜೀವಣಗಿ ತಾ;ಜಿ ಕಲಬುರಗಿ ಇವರು ದಿನಾಂಕ 29-05-2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ತನ್ನ  ಟಿ.ವಿ.ಎಸ್ ಮೋಟಾರ ಸೈಕಲ್ ನಂ ಕೆಎ-32-ಇಜೆ-9625 ನೇದ್ದು ಜೀವಣಗಿ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಟಿ .ವಿ.ಎಸ್ ಮೋಟಾರ ಸೈಕಲ್ ನಂ ಕೆಎ-32-ಇಜೆ-9625 ಇರಲಿಲ್ಲ,  ಸದರಿ ಮೋಟಾರ ಸೈಕಲ್ ಪತ್ತೆ ಕುರಿತು  ಪರಿಚಯಸ್ಥರಲ್ಲಿ  ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ29-05-2016 ರಂದು ರಾತ್ರಿ 10 ಗಂಟೆಯಯಿಂದ  ದಿನಾಂಕ 30-05-2016 ರಂದು ಬೆಳಗ್ಗೆ 3 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಟಿ.ವಿ.ಎಸ್ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಹಸೀನಾ ಬೇಗಂ ಗಂಡ ಅಬ್ದುಲ್‌ ಕಂಕರ್‌ ಸಾ :ಗುಡುರ ಎಸ್.ಎ ಇವರ ಗಂಡ ಅಬ್ದುಲ್‌ ರಹೀಮ್ ಈತನು ಮೃತಪಟ್ಟಿದ್ದರಿಂದ ನನ್ನ ಗಂಡನ ಆಸ್ತಿಯಲ್ಲಿ ಪಾಲು ಪಡೆಯುವ ಸಲುವಾಗಿ ನನ್ನ ಮೈದುನರ ಮತ್ತು ಮಾವನವರ ವಿರುದ್ಧ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಾಕಿದ್ದು ಅದರಂತೆ ನನ್ನ ಗಂಡನ ಆಸ್ತಿಯಲ್ಲಿ ನನಗೆ 20 ಎಕರೆ ಜಮೀನು ಬಂದಿದ್ದು ಇರುತ್ತದೆ. ನಮ್ಮೂರ ಪ್ರಮುಖರು ನನ್ನ ಗಂಡನ ಮೈದುನವರಿಗೆ ಅನ್ಯಾಯವಾಗುತ್ತದೆ ನೀನು 10 ಎಕರೆ ಜಮೀನು ಇಟ್ಟುಕೊಂಡು ಉಳಿದ 10 ಎಕರೆ ಜಮೀನನ್ನು ನಿನ್ನ ಮೈದುನರಿಗೆ ಬಿಟ್ಟು ಕೊಡು ಅಂತ ನ್ಯಾಯ ಪಂಚಾಯತಿ ಮಾಡಿದ್ದರಿಂದ ಅದಕ್ಕೆ ನಾನು ಒಪ್ಪಿಕೊಂಡಿದ್ದು ಅಲ್ಲದೆ ಕೊರ್ಟನಲ್ಲಿ ಹಾಕಿದ ಕೇಸು ಹಿಂಪಡೆಯುವಂತೆ ಹೇಳಿದ್ದರಿಂದ ಅದಕ್ಕುಕೂಡ ಒಪ್ಪಿಕೊಂಡಿರುತ್ತೆನೆ. ದಿನಾಂಕ 31.೦5.2016 ರಂದು ಮಧ್ಯಾಹ್ನ ಸಮಯದಲ್ಲಿ ನಾನು ಕಲಬುರಗಿಯಿಂದ ಜೇವರಗಿಗೆ ಬಂದು ಜೇವರಗಿಯ ನ್ಯಾಯಾಲಯದಲ್ಲಿ ಹಾಕಿದ ಕೇಸು ವಾಪಸ್‌ ಪಡೆಯುವ ಸಲುವಾಗಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಜೆ.ಎಮ್.ಎಫ್.ಸಿ ಕೋರ್ಟಎದುರುಗಡೆ ರೋಡಿನಲ್ಲಿ ಬರುತ್ತಿದ್ದಾಗ ಅದೇ ವೇಳೆಗೆ ನಮ್ಮೂರ ನಾಗಣ್ಣ ತಂದೆ ಸಿದ್ದಣ್ಣ ಹೆಗ್ಗಣಿ ಈತನು ತನ್ನ ಬುಲೇರೋ ವಾಹನದೊಂದಿಗೆ ಬಂದು ರೋಡಿನಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ ನೀನು ಕೋರ್ಟ ನಲ್ಲಿನ ಕೇಸ ವಾಪಸ್‌ ತೆಗೆದುಕೊಳ್ಳುವದು ಬೇಡ ನಿನಗೆ ನಿನ್ನ ಗಂಡನ ಆಸ್ತಿ ಪೂರ್ತಿ ಬರುವಂತೆ ಮಾಡುತ್ತೆನೆ. ಆಮೇಲೆ ನಾವಿಬ್ಬರು ಮದುವೆ ಮಾಡಿಕೊಂಡಿದ್ದರಾಯಿತು ಅಂತ ಅಂದಾಗ ನಾನು ಮುಸ್ಲೀಂ ಜಾತಿಯವಳು ಇರುತ್ತೆನೆ. ಅಲ್ಲದೆ ನನಗೆ ಮದುವೆ ಕೂಡ ಆಗಿರುತ್ತದೆ ಹೀಗೆ ನನಗೆ ಮಾತನಾಡುವದು ಸರಿ ಅಲ್ಲ ಅಂತ ಅಂದಾಗ ರಂಡಿ ನಾನೇ ನಿನಗೆ ಕೋರ್ಟನಲ್ಲಿ ಕೇಸ್‌ ಹಾಕಿ ಕೇಸ್‌ ಗೆದಿಸಿ ಕೊಟ್ಟಿರುತ್ತೆನೆ ಮತ್ತು ತಹಶೀಲ ಆಫೀಸಿನಲ್ಲಿ ನಿನ್ನ ಹೆಸರಿಗೆ ಬರುವಂತೆ ಪಹಣಿ ಮಾಡಿಸಿರುತ್ತೆನೆ ಅಂತ ಅಂದಾಗ ನಾನು ಅವನಿಗೆ ನೀನು ಹೀಗೆ ಮಾಡಿದರೆ ನಿನ್ನ ಮೇಲೆ ಕೇಸ್‌ ಮಾಡಿಸುತ್ತೆನೆ ಅಂತ ಅಂದಾಗ ಅವನು ನಿನ್ನ ಬುಲೇರೋ ವಾಹನದಲ್ಲಿನ ರಾಡ್‌ ತೆಗೆದುಕೊಂಡು ಬಂದು ನನಗೆ ಕೂದಲು ಹಿಡಿದು ಜಗ್ಗಾಡಿ ಸೀರೆ ಹಿಡಿದು ಜಗ್ಗಾಡಿ ಮಾನಭಂಗ್ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ನಾನು ತಪ್ಪಿಸಿಕೊಳ್ಳುತ್ತಿದ್ದಾಗ ತನ್ನ ಹತ್ತಿರ ಇದ್ದ ರಾಡಿನಿಂದ ನನ್ನ ಬೆನ್ನು ಮೇಲೆ ಭುಜದ ಮೇಲೆ ಬೆನ್ನ ಮೇಲೆ ಎರಡು ಹಸ್ತದ ಮೇಲೆ ರಾಡಿನಿಂದ ಜೋರಾಗಿ ಹೊಡೆದನು. ಅಸ್ಟರಲ್ಲಿ ಜೇವರಗಿ ಕಡೆಯಿಂದ ನಮ್ಮ ಮೈದುನರಾದ ಸಿಲಾರೋದ್ದಿನ್ ಕಂಕರ್‌, ಬಾಬಾ ಕಂಕರ್‌ ಹಾಗು ನೂರೋದ್ದಿನ್ ತಂದೆ ನಬಿಸಾಬ್‌ ತೇಲಿ ಇವರು ಬಂದು ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ನಂತರ ಅವನು ರಂಡಿ ಇವತ್ತು ನೀನು ಉಳಿದಿದ್ದಿ, ಇನ್ನೊಮ್ಮೆ ನೀನು ಸಿಕ್ಕರೆ ನಿನಗೆ ಜೀವದ ಸಮೇತ ಬಿಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿ ತನ್ನ ವಾಹನದೊಂದಿಗೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 June 2016

Kalaburagi District Reported Crimes

ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಅಶೋಕ ತಂದೆ ಮಲ್ಲಿಕಾರ್ಜುನ ಸಾ:ಮಳಖೇಡ ಇವರು ದಿನಾಂಕ: 31-05-2016 ರಂದು ಕಲಬುರಗಿಗೆ ಹೋಗಿ ಬರೋಣ ಅಂತ ಮನೆಯಿಂದ ಕಲಬುರಗಿಗೆ ಹೋಗಿ ಕಲಬುರಗಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗೋಣ ಅಂತ ಮಧ್ಯಾಹ್ನ 2-30 ಪಿಎಂ ಸುಮಾರಿಗೆ ಖರ್ಗೆ ಪೆಟ್ರೋಲ ಪಂಪ ಹತ್ತಿರ ಬಂದು ನಿಂತಾಗ ಅಲ್ಲಿ ಸೇಡಂಕ್ಕೆ ಹೋಗುವ ಸಲುವಾಗಿ ಸಮ್ಮೂರಿನ ಪರಿಚಯದವನಾದ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಮತ್ತಿಮೂಡ ಇತನೂ ಕೆಎ-32 ಸಿ-2912 ನೇದ್ದರ ಕ್ರೂಜರನ್ನು ನಿಲ್ಲಿಸಿದ್ದು ಅದರಲ್ಲಿ ಊರಿಗೆ ಹೋಗುವ ಸಲುವಾಗಿ ನಾನು ಕುಳಿತುಕೊಂಡೆ ನನ್ನಂತೆ ಸುಮಾರು 8 ಜನರೂ ಕುಳಿತುಕೊಂಡರು. ನಾವು ಕುಳಿತುಕೊಂಡು ಹೊರಟ ಕ್ರೂಜರನ್ನು ಮಲ್ಲಿಕಾರ್ಜುನ ತಂದೆ ಶರಣಪ್ಪಾ ಮತ್ತಿಮೂಡ ಇತನೂ ಚಲಾಯಿಸುತ್ತಿದ್ದು  ನಾವು ಕುಳಿತುಕೊಂಡ ಕ್ರೂಜರ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ರೋಡಿನ ಮುಖಾಂತರ ಹೊರಟು ಗುಂಡಗುರ್ತಿ ಗ್ರಾಮ ಕ್ರಾಸ ದಾಟಿ ಮುಂದಿರುವ ತಾಂಡಾದ ಸಮೀಪ ಹೋಗುತ್ತಿದಂತೆ ನಮ್ಮ ಎದುರುಗಡೆಯಿಂದ ಅಂದರೆ ಸೇಡಂ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಾವು ಕುಳಿತುಕೊಂಡು ಹೊರಟ ಕ್ರೂಜರಕ್ಕೆ ಒಮ್ಮೇಲೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಕ್ರೂಜರನ್ನು ರೋಡಿನ ಪಕ್ಕದಲ್ಲಿನ ಗಿಡಗಳಿಗೆ ಹೋಗಿ ಡಿಕ್ಕಿ ಪಡಿಸಿ ನಿಂತಿತು. ಈ ಅಪಘಾತದಲ್ಲಿ ನನಗೆ ಬಲಗಾಲಿಗೆ ಗುಪ್ತಗಾಯ ಹಾಗೂ ರಕ್ತಗಾಯವಾಗಿದ್ದು ಇತರೆ ಕಡೆ ತೆರಚಿದ ಗಾಯಗಳಾಗಿದ್ದು ಕ್ರೂಜರನಲ್ಲಿ ನನ್ನಂತೆ ಕುಳಿತು ಹೊರಟ  ಪ್ಯಾಸೆಂಜರಗಳಿಗೆ ಅವರ ಹೆಸರು ಕೇಳಿ ತಿಳಿಯಲು 1) ಶಿವುಕುಮಾರ ತಂದೆ ನಾಗಯ್ಯಾ ಸ್ವಾಮಿ ಸಾ:ಕಲಬುರಗಿ ಇತನಿಗೆ ಎದೆಯ ಮೇಲೆ ಹಾಗೂ ಡಕಿನ ಮೇಲೆ ಭಾರಿ ಗುಪ್ತ ಒಳಪೆಟ್ಟಾಗೊರುತ್ತದೆ. 2) ಎಂ.ಡಿ ಸೈದೊದ್ದೀನ ತಂದೆ ಸಿರಾಜೋದ್ದೀನ ಸಾ:ಪೂಜಾ ಕಾಲೋನಿ ಕಲಬುರಗಿ ಇತನಿಗೆ ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು ಬಲ ಎದೆಯ ಪಕ್ಕದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ. 3) ಪ್ರವೀಣ ತಂದೆ ಹರಿದೇವ ಚಾಳಿ ಸಾ:ಟೆಂಗಳಿ ಇತನಿಗೆ ಮೂಗಿನ ಮೇಲೆ ರಕ್ತಗಾಯ ಹಾಗೂ ಇತರೆ ಕಡೆ ತೆರಚಿದ ಗಾಯಗಳಾಗಿರುತ್ತವೆ. 4) ಸೈಬಣ್ಣಾ ತಂದೆ ನಾಗಪ್ಪ ಸಾ:ಗುಂಡಗುರ್ತಿ ಇತನಿಗೆ ಎಡಗಣ್ಣಿನ ಮೇಲೆ ಗುಪ್ತಗಾಯ ಹಾಗೂ ಬಲಗಣ್ಣಿನ ಪಕ್ಕದಲ್ಲಿ ತೆರಚಿದ ಗಾಯ ಮೂಗಿನ ಹತ್ತಿರ ರಕ್ತಗಾಯ ಎದೆಯ ಬಲ ಪಕ್ಕದಲ್ಲಿ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ತಲೆಯಲ್ಲಿ ಭಾರಿ ಗುಪ್ತಗಾಯವಾಗಿದ್ದು ಬೆಹೋಶಾಗಿರುತ್ತಾನೆ. ನಂತರ ಕ್ರೂಜರ ಚಾಲಕನಿಗೆ ನೋಡಲಾಗಿ ಬಲಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಂತಾಗಿರುತ್ತದೆ. ಬಾಯಿಯಲ್ಲಿನ ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ಎಡಗೈಗೆ ತೆರಚಿದ ಗಾಯವಾಗಿದ್ದು ತಲೆಗೆ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಇನ್ನೊಬ ನಮ್ಮ ಕ್ರೂಜರನಲ್ಲಿನ ವ್ಯಕ್ತಿಗೆ ನೋಡಲಾಗಿ ಬಲ ತಲೆಯಲ್ಲಿ ಭಾರಿ ರಕ್ತಗಾಯ ಬಲಗಣ್ಣಿನ ಹತ್ತಿರ ಭಾರಿ ಗುಪ್ತಗಾಯಗಳಾಗಿದ್ದು ಬಲಗೈ ಮುರಿದಂತಾಗಿರುತ್ತದೆ. ಎಡಗೈಗೆ ಗುಪ್ತಗಾಯ ಹಾಗೂ ತೆರಚಿದ ಗಾಯಗಳಾಗಿದ್ದು ಎದೆಯ ಎಡಭಾಗದ ಮೇಲೆ ಭಾರಿ ರಕ್ತಗಾಯವಾಗಿದ್ದು ಹಾಗೂ ಬಲಗಾಲಿನ ಮಂಡಿಯ ಹತ್ತಿರ ರಕ್ತಗಾಯ ಎಡಗಾಲಿಗೆ ತೆರಚಿದ ಗಾಯಗಳಾಗಿ ಬೆಹೋಶಾಗಿರುತ್ತಾನೆ. ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದಕ್ಕೆ ರೋಡಿನ ಮೇಲೆ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಲಾರಿ ನಂಬರ ನೋಡಲಾಗಿ ಎಪಿ-26 ಟಿಎ-3139 ಅಂತ ಇದ್ದು ನಾನು ಈ ಅಪಘಾತದ ಬಗ್ಗೆ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇವರಿಗೆ ಫೋನ ಮಾಡಿ ವಿಷಯ ತಿಳಿಸಿ ಜಿಜಿಎಚ ಆಸ್ಪತ್ರೆಗೆ ಬರಲು ತಿಳಿಸಿ  ನಂತರ ಅಂಬುಲೇನ್ಸಕ್ಕೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿ ಅದರಲ್ಲಿ ನಮ್ಮೆಲ್ಲರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಕಲಬುರಗಿಯ ಜಿಜಿಎಚ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಮತ್ತಿಮೂಡ ವ:25 ಉ:ಕ್ರೂಜರ ಚಾಲಕ ಇತನೂ ಮೃತಪಟ್ಟಿರುತ್ತಾನೆ. ನನಗೆ ಹಾಗೂ ಇನ್ನೊಬ್ಬ ವ್ಯಕ್ತಿ ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ ನಾವು ಜಿಜಿಎಚ ಆಸ್ಪತ್ರೆಯಲ್ಲಿ ಇನ್ನುಳಿದವರಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ವಶ :
ಜೇವರಗಿ ಠಾಣೆ : ದಿನಾಂಕ 01.06.2016 ರಂದು ರಾತ್ರಿ ಕೊಳಕೂರ ಗ್ರಾಮದ ಸಿಮಾಂತರದಲ್ಲಿ ಭೀಮಾ ನದಿಯ ದಡದಲ್ಲಿ ಟ್ರ್ಯಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟಕ್ಕಾಗಿ ಸಾಗಿಸುತ್ತಿದ್ದಾರೆ ಅಂತ ಬಾತ್ಮಿ ತಿಳಿದು ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಳಕೂರ ಗ್ರಾಮದ ಭೀಮಾ ನದಿಯ ದಡದ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ನಮ್ಮ ಹತ್ತಿರ ಇದ್ದ ಬ್ಯಾಟರಿ ಬೆಳಕಿನಲ್ಲಿ ನೊಡಲಾಗಿ ಟ್ರ್ಯಾಕ್ಟರ್ಗಳಲ್ಲಿ ಭೀಮಾ ನದಿಯಿಂದ ಮರಳು ತುಂಬುತ್ತಿದ್ದರು ನಾವು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಲು ಹೋದಾಗ ಅಲ್ಲಿದ್ದ ಟ್ರ್ಯಾಕ್ಟರ್ ಚಾಲಕರು  ಓಡಿ ಹೋಗ ಹತ್ತಿದರು ನಾವು ಬೆನ್ನಟ್ಟಿ ಹಿಡಿಯಲು ಪ್ರಯತ್ನ ಮಾಡಿದರು ಅವರು ಕತ್ತಲ್ಲಿ ಓಡಿ ಹೋದರು ಸಿಕ್ಕಿರುವದಿಲ್ಲಾ. ನಂತರ ಸ್ಥಳದಲ್ಲಿ ಇದ್ದ ಟ್ರ್ಯಾಕ್ಟರ್ ಪರಿಶೀಲಿಸಲು 1. ಟ್ರ್ಯಾಕ್ಟರ್ ನಂ ಕೆ.ಎ-32-ಟಿಎ-5001 ನೇದ್ದು ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ.ಕಿ 1000=00, ಟ್ರ್ಯಾಕ್ಟರ ಅ.ಕಿ. 2,00,000/- ಆಗಬಹುದು 2. ಜಾನಡೀರ್ ಕಂಪನಿಯ ಒಂದು ಹಸಿರು ಬಣ್ಣದ ಟ್ರ್ಯಾಕ್ಟರ್ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಮೇಲೆ ಇಂಜೀನ್ ನಂ py3029d346328  ಚೆಸ್ಸಿ ನಂ 1py5045dada015684, ನೇದ್ದು ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ.ಕಿ 1000=00 ಆಗಬಹುದು ಟ್ರ್ಯಾಕ್ಟರ ಅ.ಕಿ. 2,00,000/- ಆಗಬಹುದು. ನೋಡಿದರೆ ಸದರಿ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಎರಡು ಟ್ರ್ಯಾಕ್ಟರ್ ಗಳನ್ನು  ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-05-2016 ರಂದು ಮಣೂರ ಗ್ರಾಮದ ಭಿಮಾ ನದಿಯ ಹತ್ತಿರ ಇರುವ ಯಲ್ಲಮ್ಮನ ಗುಡಿಯ ಹತ್ತಿರ ಕೆಲವು ಜನರು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ಮಾರ್ಗದರ್ಶನದಲ್ಲಿ ಮಣೂರ ಗ್ರಾಮದಲ್ಲಿ ನದಿಯಲ್ಲಿರುವ ಯಲ್ಲಮ್ಮ ದೇವಿಯ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಹತ್ತಿರ ಇರುವ ನದಿಯ ಬಾಜು ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ಕುಳಿತುಕೊಂಡು ತಮ್ಮ ತಮ್ಮ ಮುಂದೆ ಒಂದು ಪೇಪರನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದರು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ಸಂತೋಷ ತಂದೆ ಗೋವಿಂದ ನಾವಡೆ ಸಾ : ಮಣೂರ ಗ್ರಾಮ 2) ಮೌಲಾ ತಂದೆ ಮಹಿಬೂಬ ಶೇಖ್ ಸಾ|| ಹಿರೆ ಬೇನೂರ ಹಾ|| | ಹೈದ್ರಾ ತಾ|| ಅಕ್ಕಲಕೋಟ.3) ಶಿವು ತಂದೆ ಗಡ್ಡೆಪ್ಪ ಪೂಜಾರಿ ಸಾ|| ಮಣೂರ ಗ್ರಾಮ ಅಂತಾ ತಿಳಿಸಿದ್ದು, ಸದರಿಯವರ ವಶದಿಂದ ನಗದು ಹಣ ಒಟ್ಟು 810/- ರೂಪಾಯಿ ನಗದು ಹಣ ಹಾಗೂ 03 ಜೂಜಾಟದ ಪಪ್ಪು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಪೇಪರಗಳು ದೊರೆತಿರುತ್ತವೆ. ಸದರಿಯವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಚಂದ್ರಪ್ರಭಾ ಗಂಡ ಅವಿನಾಶ ನಾಗರಾಳೆ ಸಾ: ಪಿ&ಟಿ ಕಾಲನಿ ಜೆವರ್ಗಿ  ರಸ್ತೆ ಕಲಬುರಗಿ ಇವರನ್ನು  ದಿನಾಂಕ 18.02.2013 ರಂದು ನಮ್ಮ ತಂದೆ ತಾಯಿಯವರು ಬಸವಕಲ್ಯಾಣ ಗ್ರಾಮದ ಅವಿನಾಶ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ ವರನಿಗೆ ವರೋಪಚಾರ ಅಂತಾ 1 ವರೆ ಲಕ್ಷ ರೂಪಾಯಿ 15 ತೊಲೆ ಬಂಗಾರ ಹಾಗೂ ಗೃಹಪಯೋಗಿ ಸಾಮಾನುಗಳು ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಮದುವೆ ಆದ ಎರಡೇ ದಿವಸದಲ್ಲಿ ನನ್ನ ಗಂಡ ಅತ್ತೆ ಮಾವ ಎಲ್ಲರೂ ಕೂಡಿ ನೀನು ಬೆಳ್ಳಿ ಸಾಮಾನುಗಳು ತಂದಿರುವದಿಲ್ಲ ಕಡಿಮೆ ವರದಕ್ಷಿಣೆ ಹಣ ತಂದಿರುತ್ತೀ ಅಂತಾ ಹಿಂಸೆ ಕೊಟ್ಟಿರುವದರಿಂದ ನಾನು ನನ್ನ ತಂದೆ ತಾಯಿಗೆ ಹೇಳಿ ಮತ್ತೆ ತವರು ಮನೆಯಿಂದ 50 ಸಾವಿರ ರೂಪಾಯಿ ಕೊಡಿಸಿರುತ್ತೇನೆ.. ದಿನಾಂಕ 28.05.2016 ರಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ನನ್ನ ಗಂಡ ರಂಡಿ ನೀನು ನಿನ್ನ ತವರು ಮನೆಯಿಂದ 50 ಸಾವಿರ ರೂಪಾಯಿ ಮತ್ತು 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂದರ ತರುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಅಂದವನೇ ಮನೆಯಲ್ಲಿರುವ ಚಾಕುವನ್ನು ತೆಗೆದುಕೊಂಡು ನನ್ನ ಗದ್ದದ ಕೆಳಗಡೆ ಎಡ ಎದೆಯ ಮೇಲ್ಬಾಗಕ್ಕೆ ಮತ್ತು ಕೆಳಗಡೆ ಹಾಗೂ ಬೆನ್ನಿಗೆ ಮತ್ತು ತಲೆಯ ಹಿಂಬಾಗಕ್ಕೆ ಹೊಡೆದಿರುತ್ತಾನೆ ಆಗ ನಾನು ಚೀರಾಡುವದನ್ನು ಕಂಡು ನಮ್ಮ ಅಕ್ಕಪಕ್ಕದ ಮನೆಯವರು ಬಂದು ಅವನಿಂದ ನನಗೆ ಬಿಡಿಸಿಕೊಂಡು ನನಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ.  ಕಾರಣ ನನಗೆ ಮದುವೆ ಆದಾಗಿನಿಂದಲೂ ತವರು ಮನೆಯಿಂದ 50 ಸಾವಿರ ರೂಪಾಯಿ 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟ ನನ್ನ ಅತ್ತೆ ಮಾವ ಹಾಗೂ ಚಾಕುವಿನಿಂದ ನನ್ನ ದೇಹದ ಎಲ್ಲಾ ಭಾಗಕ್ಕೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿದ ನನ್ನ ಗಂಡ ಅವಿನಾಶ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.