POLICE BHAVAN KALABURAGI

POLICE BHAVAN KALABURAGI

30 December 2015

Kalaburagi District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಭಾಕರ ತಂದೆ ಶಂಭು ಸಿಂಧೆ ಸಾ : ಸುಲ್ತಾನಪೂರ ತಾ : ಅಕ್ಕಲಕೊಟ ಜಿ : ಸೊಲ್ಲಾಪೂರ  ರವರ ಮಗಳಾದ ಸೋನಾಲಿ ಇವಳಿಗೆ ಚಿಂಚೋಳಿ ಗ್ರಾಮದ ಶ್ರೀಶೈಲ ತಂದೆ ದೌಲಪ್ಪ ಹೋಟಕರ ಈತನೋಂದಿಗೆ ಮದುವೆ ಮಾಡಿ ಕೊಟ್ಟಿರುತ್ತೆವೆ ನನ್ನ ಮಗಳಿಗೆ ಮದುವೆಯಾದ 1ವರ್ಷದ ನಂತರ ನನ್ನ ಮಗಳಿಗೆ ಒಂದು ಗಂಡು ಮಗು ವಾಗಿರುತ್ತದೆ ನನ್ನ ಮಗಳಿಗೆ ಇಬ್ಬರು ಅತ್ತೆಯರಿದ್ದು 1)ಭಾಗಮ್ಮ 2) ಜ್ಯೋತಿ ಅಂತ ಇರುತ್ತಾರೆ ನನ್ನ ಮಗಳ ಗಂಡನ ಹೆಸರು ಶ್ರೀಶೈಲ ತಂದೆ ದೌಲಪ್ಪ ಹೋಟಕರ,ಶ್ರೀಶೈಲನ ತಂದೆಯ ಹೆಸರು ದೌಲಪ್ಪ ಹೋಟಕರ ಶ್ರೀಶೈಲನ ತಮ್ಮನ ಹೆಸರು ವಿಠ್ಠಲ ತಂದೆ ದೌಲಪ್ಪ ಹೋಟಕರ  ನನ್ನ ಮಗಳ ನಾದನಿಯರ ಹೆಸರು  ಪುತಳಾಬಾಯಿ ಗಂಡ ರಾಜು ಸದಾಪೂಲೆ ಸಾ|| ಸೋಲಾಪೂರ ಇನ್ನೋಬ್ಬ ನಾಧನಿಯ ಹೆಸರು ಪಾರು ಈ ಮೇಲಿನ ಏಲ್ಲರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನಿಡುತ್ತಿದ್ದರು ನಿನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಹೇಳುತ್ತಿದ್ದರು ನಂತರ ದಿನಾಂಕ 29-12-2015ರಂದು ಸಾಯಂಕಾಲ 18:00ಗಂಟೆಗೆ ನನ್ನ ಮಗಳ ಮಾವ ನನ್ನ ಮೋಬಾಯಿಲಗೆ ಪೋನಮಾಡಿ ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಸತ್ತಿರುತ್ತಾಳೆ ಹೀಗೆ ಪೋನಮಾಡಿ ಹೇಳಿದ ನಂತರ ನಾವೇಲ್ಲರು ಚಿಂತೆಯಲ್ಲಿ ಕುಳಿತೇವು 15 ನಿಮೀಷಗಳ ನಂತರ ಚಿಂಚೋಳ್ಳಿ ಗ್ರಾಮದ ಪೊಲೀಸ ಪಾಟಿಲರ ಪೋನ್ ನಂಬರಿಗೆ ಪೋನಮಾಡಿ ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ನೀವು ಬನ್ನಿ ನೀವೂ ಬರೋವರೇಗೂ ಬಾವಿಯಲ್ಲಿಯ ಹೆಣ ತೆಗೆಯಲು ಆಗುವುದಿಲ್ಲ ಅಂತ ತಿಳಿಸಿದರು ಈ ರೀತಿ ಪೋನ ಬಂದ ನಂತರ ನಾವೇಲ್ಲರೂ ವಾಹನವನ್ನು ಮಾಡಿಕೊಂಡು ಚಿಂಚೋಳ್ಳಿ ಗ್ರಾಮಕ್ಕೆ ರಾತ್ರಿ 11:00ಗಂಟೆ ಸುಮಾರಿಗೆ ನನ್ನ ಮಗಳು ವಾಸವಿದ್ದ ಹೋಲಕ್ಕೆ ಬಂದೇವು  ಹೊಲಕ್ಕೆ ಬಂದು ನೋಡಲಾಗಿ ನನ್ನ ಮಗಳ ಶವವು ಹೋಲದಲ್ಲಿ ವಾಸವಾಗಿದ್ದ ಅವರ ಮನೆಯ ಮುಂದೆ ಮಲಗಿಸಿದ್ದು ಇತ್ತು ಅವಳ ಮಾವ ಮತ್ತು ಗಂಡ ಪರಾರಿ ಇದ್ದರು ಗ್ರಾಮದ ಜನರು ನಾವು ಗ್ರಾಮಸ್ಥರನ್ನು ಕೇಳಿದೇವು ನಿಮ್ಮ ಗ್ರಾಮದ ಪೊಲೀಸ್ ಪಾಟಿಲರ ಪೋನ್ ಬಂಧಿತ್ತು ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಮೃತ ಹೊಂದಿದಾಳೆ ನೀವು ಬರೋವರೆಗು ಬಾವಿಯಲ್ಲಿ ಬಿದ್ದ ನಿಮ್ಮ  ಮಗಳ ಶವವನ್ನು ತೆಗೆಯುವುದಿಲ್ಲ ನೀವು ಬಂದ ನಂತರ ತೆಗೆಯೋಣಾ ಅಂತ ಹೇಳಿ ಪೋನ್ ಬಂದಿತ್ತು ಆದರೆ ನನ್ನ ಮಗಳ ಮೃತದೇಹವು ಬಾವಿಯಲ್ಲಿರದೆ ಅವರ ಮನೆಯ ಮುಂದೆ ವರಾಂಡದಲ್ಲಿತ್ತು ನಂತರ ನನ್ನ ಮಗಳ ಶವವನ್ನು ನಾವೇಲ್ಲರೂ ವಿಚಾರಿಸಿಕೊಂಡು ಅಫಜಲಪೂರ ಸರಕಾರಿ ಆಸ್ತತ್ರೆಯ ಶವಗಾರ ಕೋಣೆಯಲ್ಲಿ ಹಾಕಿ ಇಗ ತಡವಾಗಿ ಠಾಣೆಗೆ ಬಂಧಿರುತ್ತೆವೆ.ಕಾರಣ ನನ್ನ ಮಗಳು ಬಾವಿಯಲ್ಲಿ ಬಿದ್ದಿಲ್ಲ ನನ್ನ ಮಗಳಿಗೆ ಮೇಲೆ ತಿಳಿಸಿದ ಅವಳ ಗಂಡ ಮತ್ತು ಗಂಡನ ಮನೆಯವರು ಕೂಡಿಕೊಂಡು ನನ್ನ ಮಗಳು ವರದಕ್ಷೀಣೆ ಹಣ ಮತ್ತು ಬಂಗಾರ ತರಲಾರದ್ದಕ್ಕೆ ಎಲ್ಲರೂ ಕೂಡಿ ವರದಕ್ಷಣೆ ಕಿರುಕುಳ ನೀಡಿ ಹೋಡೆದು ಕೋಲೆಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತನ್ನು ಹಾಳು ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಂಜೂಳಾ ಎಸ್. ಬಾಣಿ ಉ: ಸುಂಟನೂರ ಗ್ರಾಮ ಪಂಚಾಯತ ಪಿ.ಡಿ.ಓ ಸಾ: ಶಿರಶಾಡ ತಾ: ಇಂಡಿ ಇವರು ದಿನಾಂಕ 29-12-2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 30-12-2015 ಬೆಳಿಗ್ಗೆ 06:00 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ದುಷ್ಕರ್ಮಿಗಳು ಗ್ರಾಮ ಪಂಚಾತಯ ಸುಂಟನೂರ ಬಿಲ್ ಕಲೇಕ್ಟರ ಕೋಣೆಯ ಕಿಟಕಿಯಿಂದ ಸಿಮೇ ಎಣ್ಣೆ ಕಾಗದ ಮತ್ತು ಪ್ಲಾಸ್ಟಿಕ್ ಚುರುಗಳನ್ನು ಎಸರು ಬೆಂಕಿ ಹಚ್ಚಿದ್ದರಿಂದ  ಕೊಣೆಯಲ್ಲಿರುವ  ಎರಡು ಪ್ಲಾಸ್ಟಿಕ ಕುರ್ಚಿ, ಎರಡು ವೀಲ್ ಚೇರ ಒಟ್ಟು ಅಂದಾಜು ಕಿಮ್ಮತ್ತು 3000/- ರೂಪಾಯಿ ಮೌಲ್ಯದ ಸರಕಾರಿ ಸ್ವತ್ತನ್ನು ನಾಶ ಪಡಿಸಿರುತ್ತಾರೆ  ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಅಂದಾಜು 40 ರಿಂದ 45 ವರ್ಷ ವಯಸ್ಸಿನ ಅಪರಿಚಿ ಗಂಡು ಮನುಷ್ಯನು ಈಗ ಒಂದು ತಿಂಗಳ ಹಿಂದೆ ಎಲ್ಲಿಂದಲೋ ಕಟ್ಟಿ ಸಂಗಾವಿ ಭಿಮಾ ಬ್ರೀಡ್ಜ ಹತ್ತಿರ ಬಂದು ತಿರುಗಾಡುತ್ತಿದ್ದನು ಅವನು ಈಗ 3-4 ದಿನಗಳ ಹಿಂದೆ ಭೀಮಾ ನದಿಯ ನೀರಿನಲ್ಲಿ ಕೈ ಕಾಲು ಮುಖ ತೊಳೆಯಲು ಅಥವಾ ಸ್ನಾನ ಮಾಡಲು ಹೋಗಿ ಬ್ರೀಡ್ಜ ಪಕ್ಕದ ನದಿಯ ನೀರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಸತ್ತಿದ್ದು ಅವನ ಹೆಣ ಇಂದು ದಿನಾಂಕ 29.12.2015 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ನೋಡಿದ್ದು ಇರುತ್ತದೆ ಅಂತಾ ಶ್ರೀ ಮಾಳಪ್ಪ ತಂದೆ ಚಂದ್ರಾಮಪ್ಪ ಸಾತಿಹಾಳ ಸಾ : ಹಸನಾಪುರ ಹಾ|||| ಭೀಮಾ ಬ್ರೀಡ್ಜ ಕಟ್ಟಿ ಸಂಗಾವಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ: 28.12.2015 ರಂದು ಸಾಯಾಂಕಾಲ 6.00 ಗಂಟೆಗೆ ಆಂದೋಲಾ- ಬಿರಾಳ ರೋಡ ಆಂದೋಲಾ ದಾಟಿ ಸ್ವಲ್ಪ ಮುಂದೆ ರೋಡಿನಲ್ಲಿ ನಮ್ಮೂರ ಬೀರಪ್ಪ ತಂದೆ ಅಯ್ಯಪ್ಪ ಪೂಜಾರಿ ಇತನು ನಡೆಯಿಸುವ ಟಂಟಂ ವಾಹನ ನಂ ಕೆಎ-32,ಸಿ-2783 ನೇದ್ದರಲ್ಲಿ ನನ್ನ ಗಂಡ ದೇವಪ್ಪ @ ದ್ಯಾವಪ್ಪ ಮತ್ತು ನಮ್ಮೂರ ಹಣಮಂತ ತಂದೆ ತಿಪ್ಪಣ್ಣ ನೈಕೊಡಿ ಇವರಿಗೆ ಟಂಟಂ ವಾಹನದಲ್ಲಿ ಕೂಡಿಸಿಕೊಂಡು ಬರುತ್ತಿದ್ದಾಗ ಟಂಟಂ ವಾಹನ ಚಾಲಕನು ಟಂಟಂ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೇ ಕಟ್ಟ ಹೊಡೆದು ರೋಡಿನಲ್ಲಿ ಟಂಟಂ ಪಲ್ಟಿ ಮಾಡಿ ಅಪಘಾತ ನಂತರ ಟಂಟಂ ಚಾಲಕನು ಓಡಿ ಹೋಗಿರುತ್ತಾನೆ  ಅಪಘಾತದಲ್ಲಿ  ನನ್ನ ಗಂಡನಿಗೆ ಮತ್ತು ಹಣಮಂತ ನಾಯಿಕೊಡಿ ಇವರಿಗೆ ಭಾರಿ ಗಾಯಗಳಾಗಿದ್ದು ಅವರಿಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಅಲ್ಲಿ ವೈದ್ಯರು ಅವರಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರಕ್ಕೆ ಹೋಗಲು ಹೇಳಿದ್ದರಿಂದ ದಿನಾಂಕ: 29.12.2015 ರಂದು ರಾತ್ರಿ ನನ್ನ ಗಂಡನಿಗೆ ಮತ್ತು ಹಣಮಂತ ನೈಕೊಡಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರಕ್ಕೆ ಹೋಗುತ್ತಿದ್ದಾಗ, ಸೋಲಾಪೂರ ಸಮೀಪ ರೋಡಿನಲ್ಲಿ ರಾತ್ರಿ 11.45 ಗಂಟೆಗೆ ನನ್ನ ಗಂಡ ದೇವಪ್ಪನು ಮೃತಪಟ್ಟಿರುತ್ತಾನೆ. ನಂತರ ಹಣಮಂತ ನೈಕೊಡಿ ಇತನಿಗೆ ಸೊಲಾಪೂರದ ಯಶೋದಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಮರಳಿ ನನ್ನ ಗಂಡನ ಶವವನ್ನು ಅದೇ ಅಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ನನ್ನ ಅಳಿಯ ಶಿವಪ್ಪ ಇಬ್ಬರು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಹಾಕಿರುತ್ತೇವೆ. ಅಂತಾ ಶ್ರೀಮತಿ ದೇವಕೆಮ್ಮ ಗಂಡ ದೇವಪ್ಪ @ ದ್ಯಾವಪ್ಪ ರೇವನೂರ ಸಾ: ಮಲ್ಲಾ (ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥ ತಂದೆ ಗುರುಲಿಂಗಪ್ಪ ನಾಯಿಕೊಂಡಿ ಸಾ : ಹಂಗನಳ್ಳಿ ರವರು  ದಿನಾಂಕ : 18-05-2015 ರಂದು ತರನಳ್ಳಿ ಗ್ರಾಮದಲ್ಲಿ ನನ್ನ ಗೆಳೆಯ ದಶರತ ಇತನ ತಾಯಿ ತಿರಿಕೊಂಡಿದ್ದರಿಂದ ಅಂತ್ಯಕ್ರಿಯೆಗೆ ನಾನು ಮತ್ತು ನನ್ನ ಅಳಿಯ ಶಿವಪ್ಪ ಜಮಾದಾರ ಇಬ್ಬರು ಮೊಟಾರ ಸೈಕಲ ನಂ ಕೆಎ-39 ಜೆ-2055 ನೇದ್ದರ ಮೇಲೆ ಹೋಗಿ ಅಂತ್ಯಕ್ರಿಯೆ ಮುಗಿಸಿಕೊಂಡು ಸಾಯಂಕಾಲ ಅಂದಾಜ 5-15 ಪಿ.ಎಂಕ್ಕೆ ಬಿಟ್ಟು ನಮ್ಮೂರ ಹಂಗನಳ್ಳಿ ಗ್ರಾಮಕ್ಕೆ ಸದರ ಮೊಟಾರ ಸೈಕಲ ಮೇಲೆ ಹೊಗುತ್ತಿದ್ದೆವು ಮೊಟಾರ ಸೈಕಲ ಶಿವಪ್ಪ ಜಮಾದಾರ ನಡೆಸುತ್ತಿದ್ದನು ತರನಳ್ಳಿ ಗ್ರಾಮ ದಾಟಿ ಸುಮಾರು 1 ವರೆ ಕಿ.ಮಿ ಬಂದು ಮಹೆಬೂಬ ಸುಬಾನಿ ದರ್ಗಾ ಹತ್ತಿರ ಮುಂದೆ ಹೊಗುತ್ತಿದ್ದಂತೆ ಶಿವಪ್ಪ ಇತನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗವಾಗಿ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಎಡಭಾಗದ ತಗ್ಗಿನಲ್ಲಿ ಮೊಟಾರ ಸೈಕಲ ಪಲ್ಟಿಮಾಡಿರುತ್ತಾನೆ ಇದರಿಂದ ನನಗೆ ಬಲಗಣ್ಣಿನ ಹತ್ತಿರ ರಕ್ತಗಾಯ, ಬಲಗಾಲ ಇಮ್ಮಡಿಗೆ ರಕ್ತಗಾಯ ಎಡಗೈ ಮೊಣಕಟ್ಟಿಗೆ ಗುಪ್ತಗಾಯವಾಗಿದ್ದು ಮತ್ತು ನನ್ನ ಅಳಿಯ ಶಿವಪ್ಪ ಜಮಾದಾರ ಇತನಿಗೆ ಬಲಭಾಗದ ಗದ್ದಕ್ಕೆ ಭಾರಿ ರಕ್ತಗಾಯ, ಮೇಲ್ಭಾಗದ ಎಡಭಾಗದ ತುಟಿಗೆ ರಕ್ತಗಾಯ ಎಡಭಾಗದ ಹಣೆಗೆ ತರಚಿದ ಗಾಯ ಎಡಗೈ ಮೊಣಕೈ ಹತ್ತಿರ ತರಚಿದ ಗಾಯ ಆಗಿರುತ್ತದೆ. ಈ ಘಟನೆ ಆಗಿದ್ದು ಹಣಮಂತ ಜಮಾದಾರ ಸಾ : ತರನಳ್ಳಿ, ಶಿವಕುಮಾರ ನಾಯಿಕೊಡಿ ಸಾ : ತರನಳ್ಳಿ ಇವರು ನೋಡಿ 108 ಅಂಬುಲೇನ್ಸದಲ್ಲಿ ತಂದು ಇಲ್ಲಿಗೆ ಸೇರಿಕೆ ಮಾಡಿದ್ದು  ದಿನಾಂಕ:30-12-2015 ರಂದು ಸುಬ್ಬಣ್ಣ ತಂದೆ ಶರಣಪ್ಪ ಜಮಾದಾರ, ಸಾ:ಹಂಗನಳ್ಳಿ ಗ್ರಾಮ, ತಾ:ಸೇಡಂ. ಜಿಲ್ಲೆ:ಕಲಬುರಗಿ. ಇವರು ನನ್ನ ಅಣ್ಣನಾದ ಶಿವಪ್ಪ ತಂದೆ ಶರಣಪ್ಪ ಜಮಾದಾರ ವಯ:28 ವರ್ಷ, ಈತ ಮೋಟಾರು ಸೈಕಲ್ ಅಪಘಾತದಲ್ಲಿ ಭಾರಿಗಾಯಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು, ನಂತರ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:30-12-2015 ರಂದು ನಮ್ಮ ಮನೆಯಲ್ಲಿ ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಶ್ರೀಮತಿ ಸಂಗಮ್ಮಾ ಗಂಡ ಚಂದಣ್ಣಾ ಝಳಕಿ ಸಾ:ಅಲ್ಲಾಪುರ (ಜೆ) ತಾ: ಆಳಂದ ರವರ ಮಗ ಸಿದ್ದಾರಾಮ ಈತನು ದೊಡ್ಡವನು ವಿದ್ಯಾಬ್ಯಾಸ ಹಾಗು ನನ್ನ ಗಂಡ ಅರೆ ಹುಚ್ಚನಾಗಿದ್ದರಿಂದ 5ಏಕರೆ ಜಮಿನನ್ನು ನನ್ನ ಮಗ ಸಿದ್ದಾರಾಮ ಈತನೆ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಒಕ್ಕಲುತನ ಸಲುವಾಗಿ ಸುಮಾರು 2.50 ಲಕ್ಷ ರೂಪಾಯಿ ಕೈಗಡ ರೂಪದಲ್ಲಿ ಮತ್ತು ಸಂಘ ಸಂಸ್ಥೆಗಳಿಂದ ಸಾಲ ಮಾಡಿ ವ್ಯವಸಾಯ ಮಾಡಿದ್ದು ಈ ವರ್ಷ ಮಳೆ ಬಾರದೆ ಬೆಳೆಯದ ಕಾರಣ ಸಾಲ ನನ್ನ ಮುಖಾಂತರ ಮಾಡಿದ್ದು ಈ ವರ್ಷ ಬೆಳೆ ಬೆಳೆದಿಲ್ಲಾ ಸಾಲ ಹೇಗೆ ಮುಟ್ಟಿಸಲಿ ನನ್ನ ತಂದೆ ಅರೆ ಹುಚ್ಚನಾಗಿದ್ದಾನೆ. ನಾನು ಸಾಲ ಹೇಗೆ ಮುಟ್ಟಿಸಲಿ. ನಾನು ಸತ್ತರೆ ಚನ್ನಾಗಿರುತ್ತದೆ. ಅಂತಾ ಮನನೊಂದು ನಮ್ಮ ಮನೆಯಲ್ಲಿ ನಾನು ನನ್ನ ಭಾವನಾದ ಶಿವಲಿಂಗಪ್ಪಾ ಸಾಯುದು ಪರಿಹಾರವಲ್ಲಾ ಅಂತಾ ದೈರ್ಯ ಹೇಳಿದ್ದು. ದಿನಾಂಕ:28/12/2015 ರಂದು ಸಾಯಂಕಾಲ 5 ಗಂಟೆಗೆ ನಾವೂ ನಮ್ಮ ಮನೆಯಲ್ಲಿ ಇದ್ದಾಗ ನನ್ನ ಭಾವನಾದ ಶಿವಲಿಂಗಪ್ಪಾ ಇವರು ನನಗೆ ಫೋನ ಮಾಡಿ ಸಿದ್ದಾರಾಮ ಈತನು ನಿಮ್ಮ ಹೊಲದಲ್ಲಿ ಮಾವಿನ ಗಿಡಕ್ಕ ಊರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನೀವೂ ಬೇಗ ಬರೀ ಅಂತಾ ಅಂದಿದಕ್ಕೆ ನಾವೂ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗ ಊರುಲು ಹಾಕಿಕೊಂಡು ಮೃತಪಟ್ಟಿದ್ದು ನೀಜವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಗಲಾ ಗಂಡ ಗೊಪಾಲ ಹೊತಗಲ್ ಸಾ : ತೆಲ್ಕೂರ ಗ್ರಾಮ ಇವರನ್ನು  ತೆಲ್ಕೂರ ಗ್ರಾಮದ ಗೊಪಾಲ ಹೊತಗಲ್ ಇವರಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದಾಗಿನಿಂದ ಗಂಡನ ಮನೆಯಲ್ಲಿ ಗಂಡ ಮತ್ತು ಅತ್ತೆ ಇಬ್ಬರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಡುತ್ತಿದ್ದು ನಾನು ಈ ವಿಷಯದಲ್ಲಿ ನನ್ನ ತವರು ಮನೆಯಲ್ಲಿ ತಿಳಿಸಿದ್ದು ಅವರು ಬಂದು ಸಮಾದಾರ ಪಡಿಸಿರುತ್ತಾರೆ ಆದರು ನನ್ನ ಗಂಡ ನನಗೆ ನಿನು ಚೆನ್ನಾಗಿಲ್ಲ ಅಡುಗೆ ಮಾಡಲು ಬರುವದಿಲ್ಲ ಅಂತಾ ಬೈಯುವದು ಮಾಡಿ ನಿನಗೆ ಕೊಲೆ ಮಾಡುತ್ತೆನೆ ಅಂತಾ ಅನ್ನುತ್ತಿದ್ದನು ನಂತರ ಇಂದು ದಿನಾಂಕ : 27-12-2015 ರಂದು ಮಧ್ಯಾಹ್ನ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನು ಒಮ್ಮೆಲೆ ಮನೆಗೆ ಬಂದು ರಂಡಿ ನೀನು ನನ್ನ ತಾಯಿಗೆ ಮತ್ತು ನನಗೆ ನೀನು ಚೆನ್ನಾಗಿ ನೊಡಿಕೊಳ್ಳುತ್ತಿಲ್ಲ ಇವತ್ತು ನಿನಗೆ ಕೊಲೆ ಮಾಡಿಯೇ ಬಿಡುತ್ತೆನೆ ಅಂತಾ ಮನೆಯಲ್ಲಿದ್ದ ಸಿಮೆಎಣ್ಣೆ ತೆಗೆದುಕೊಂಡು ನನ್ನ ಮೈಮೇಲೆ ಸುರುವಿ ಬೆಂಕಿ ಕಡ್ಡಿ ಕೊರೆದು ನನ್ನ ಮೈಗೆ ಬೆಂಕಿ ಹಚ್ಚಿ ಮನೆಹೊರಗೆ ಹೋದನು ಆಗ ನನ್ನ ಮೈಗೆ ಬೆಂಕಿ ಹತ್ತಿಕೊಂಡಿತ್ತು. ಆಗ ನಾನು ಮನೆಯಿಂದ ಹಾಗೆಯೇ ಹೊರಗೆ ಓಡಿಬಂದು ನಮ್ಮ ಮನೆಯ ಮುಂದೆ ಇದ್ದ ಕೇಲನಲ್ಲಿಯ ನೀರು ಹಾಕಿಕೊಂಡು ಬೆಂಕಿ ಆರಿಸಿಕೊಂಡೆನು ನನ್ನ ಮೈಗೆ ಬೆಂಕಿ ಹಚ್ಚಿದ್ದರಿಂದ ನನ್ನ ಎದೆ ಹೊಟ್ಟೆ ಬೆನ್ನಿಗೆ, ಎರಡು ಕೈಗಳಿಗೆ ಸುಟ್ಟ ಗಾಯಗಳಾದವು ನಂತರ ನಾನು ದವಾಖಾನೆಗೆ ಬಂದು ಸೇರಿಕೆ ಆಗಿ ಉಪಚಾರ ಪಡೆಯುತ್ತಿದ್ದೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ. 

26 December 2015

Kalaburagi District Reported Crimes

 ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ. ವೀರುಪಾಕ್ಷಪ್ಪಾ ತಂದೆ ಶಂಕರೆಪ್ಪಾ ಹಣಮಶೆಟ್ಟಿ ಸಾ: ಜಿಡಗಾ ತಾ:ಆಳಂದ ರವರ ಹಿರಿಯ ಅಣ್ಣನಾದ ಶರಣಬಸಪ್ಪಾ ತಂದೆ ಶಂಕರೆಪ್ಪಾ ಹಣಮಶೆಟ್ಟಿ ಈತನು ಗುಲಬರ್ಗಾದ ಸಾಯಿನಾಥ ಫಟ್ರೀಲೈಜರರಲ್ಲಿ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತಿದ್ದು ದಿನಾಂಕ:24/12/2015 ರಂದು ರಾತ್ರಿ 11:45 ಗಂಟೆ ಸುಮಾರಿಗೆ ನನಗೆ ನನ್ನ ಅಣ್ಣನ ಮೊಬೈಲದಿಂದ ಯಾರೋ ಪೋನ್ ಮಾಡಿ ಆಳಂದ ಚೆಕ್ಕಪೋಸ್ಟ್ ದಾಟಿ ಒಂದು ಕೀ.ಮಿ.ಅಂತರದ ಹಿರೋಳಿ ರೋಡಿನ ಮೇಲೆ ರಸ್ತೆ ಅಪಘಾತವಾಗಿ ಈ ಮೊಬೈಲಿನ ಮನುಷ್ಯ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲು ನನ್ನ ಅಣ್ಣನಾದ ಶರಣಬಸಪ್ಪಾನೆ ಇದ್ದು ಆತನ ಶವವೂ ಮುಖ್ಯ ರಸ್ತೆಯ ಮೇಲೆ ಅಂಗಾತವಾಗಿ ಬಿದ್ದು ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ನನ್ನ ಅಣ್ಣನು ಚಲಾಯಿಸುತ್ತಿದ ಮೋಟರ್ ಸೈಕಲ ಸಹ ಬಿದಿದ್ದು, ಅದಕ್ಕೆ ಡಿಕ್ಕಿ ಪಡಿಸಿದ ಟ್ರಾಕ್ಟರ್ ಇಂಜಿನ್ ನಂ: MH-26 V-7247 ಇದ್ದು ಅದಕ್ಕೆ ಎರಡು ಟ್ರೈಲಿಗಳಿದ್ದು ಆ ಟ್ರೈಲಿಗಳಿಗೆ ನಂಬರ್ ಇರುವುದಿಲ್ಲಾ. ನನ್ನ ಅಣ್ಣನು ಆಳಂದ ಚೆಕಪೋಸ್ಟ್ ಮುಖಾಂತರ ನಮ್ಮ ಗ್ರಾಮವಾದ ಜಿಡಗಾ ಗ್ರಾಮಕ್ಕೆ ಹೋಗುವಾಗ ಅವನ ಹಿಂದಿನಿಂದ ಅಂದರೆ ಆಳಂದ ಚೆಕಪೋಸ್ಟ್ ಕಡೆಯಿಂದ ಟ್ರಾಕ್ಟರ್ ಚಾಲಕನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನನ್ನ ಅಣ್ಣ ಚಲಾಯಿಸುತ್ತಿದ್ದ ಮೋಟರ್ ಸೈಕಲಕ್ಕೆ ಡಿಕ್ಕಿ ಪಡಿಸಿ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಘಟನೆಯು ಅಂದಾಜು ದಿನಾಂಕ:24/12/2015 ರ ರಾತ್ರಿ 11 ಗಂಟೆಯಿಂದ 11-30 ರ ಮಧ್ಯದ ಅವಧಿಯಲ್ಲಿ ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:-20/12/2015 ರಂದು ನನ್ನ ತಂದೆ ಸಾಯಿಬಣ್ಣಾ ಇವರಿಗೆ ರಸ್ತೆ ಅಪಘಾತವಾದ ಬಗ್ಗೆ ಈಗಾಗಲೆ ದಿನಾಂಕ.21-12-2015 ರಂದು ದೂರು ದಾಖಲಿಸಿದ್ದು  ಕ್ರೋಜರ ನಂ.ಕೆ.ಎ.25 ಬಿ-3375 ನೆದ್ದರ ಚಾಲಕ ಶರಣಯ್ಯಾ ತಂದೆ ಮಾಣಿಕಯ್ಯಾ ಗುತ್ತೇದಾರ ಸಾ;ನವನಿಹಾಳ ತಾ;ಜಿ;ಕಲಬುರಗಿ ಈತನು ತನ್ನ ಕ್ರೋಜರನ್ನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊಗುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಪಡಿಸಿದರಿಂದ ಆದ ಗಾಯಗಳಿಂದಾಗಿ ನಮ್ಮ ತಂದೆ ಸಾಯಿಬಣ್ಣಾ ತಂದೆ ಹಿರಿಗೆಪ್ಪಾ ಇವರು ದಿನಾಂಕ.20-12-2015 ರಿಂದ ದಿನಾಂಕ. 24-12-2015 ರವರಂದು ಬೆಳೆಗ್ಗೆ 6-30 ಗಂಟೆಯವರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡಿಸಿದರೂ ಸಹಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ. 24-12-2015 ರಂದು ಬೆಳಗ್ಗೆ 6-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ. ಪ್ರಕಾಶ ತಂದೆ ಸಾಯಿಬಣ್ಣಾ ಕೋರವಾರ ಸಾ:ಕಪನೂರ ತಾ:ಜಿ:ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಯೊ ಇಂಜಕ್ಷನನಿಂದ ಮಗು ಮೃತಪಟ್ಟ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.23-12-2015 ರಂದು ಬೆಳಗ್ಗೆ 9-30 ಗಂಟೆಗೆ ನಮ್ಮೂರ ಅಂಗನವಾಡಿ ಕೇಂದ್ರದಲ್ಲಿ ಸಣ್ಣ ಮಕ್ಕಳಿಗೆ ಪೊಲೀಯೋ ಇಂಚೆಕ್ಸನ ಕೊಡುತ್ತಿದ್ದಾರೆ  ಅಂತಾ ನಮ್ಮೂರಿನ ಅಂಗನವಾಡಿಯ ಕಾರ್ಯ ಕರ್ತೆಯಾದ ಶೈಲಾಜ ಇವರು ನನ್ನ ಮಗಳು ಭವಾನಿ ಇವಳಿಗೆ ಕರೆದುಕೊಂಡು ಬಾ ಅಂತಾ ತಿಳಿಸಿದಾಗ ನಾನು ನನ್ನ ಮಗಳು ಭವಾನಿ ಇವಳಿಗೆ ಕರೆದುಕೊಂಡು ಅಂಗನವಾಡಿ ಕೇಂದ್ರಕ್ಕೆ ಹೋದಾಗ ನನಗೆ ನಮ್ಮ ಗ್ರಾಮದ ಶಶಿಕಲಾ ನಡಗೇರಿ ಹಾಗೂ ಅಂಬಿಕಾ ಜಮದಾರ ಮತ್ತು ಇತರರು ಸಹಾ  ತಮ್ಮ ತಮ್ಮ ಮಕ್ಕಳಿಗೆ ಪೊಲೀಯೋ ಇಂಜಕ್ಸನ ಹಾಕಿಸಲು ಬಂದಿದ್ದರು . ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪದ್ಮಣಿ ಸಿಸ್ಟರ ಪೊಲಿಯೋ ಇಂಜೆಕ್ಸನ ಮಾಡುತಿದ್ದರು. ಸರದಿಯಂತೆ ಬೆಳಗ್ಗೆ 10-30 ಗಂಟೆಗೆ  ನನ್ನ ಸರದಿ ಬರಲು ನನ್ನ ಮಗಳು ಭವಾನಿಗೆ ಆರೋಗ್ಯ ತಪಾಸಣೆ ಮಾಡದೆ ಪೊಲಿಯೋ ಇಂಜಕ್ಸನ ಪದ್ಮಣಿ ಸಿಸ್ಟರ ರವರು  ಭವಾನಿಗೆ ಮಾಡಿರುತ್ತಾರೆ , ನಂತರ ನನ್ನ ಮಗಳು ಭವಾನಿಗೆ ಮನೆಗೆ ಕರೆದುಕೊಂಡು ಹೋಗಿರುತ್ತೇವೆ. ಇಂಜೆಕ್ಸನ ಮಾಡಿದ ನಂತರ ನನ್ನ ಮಗಳು ಸುಸ್ತಾಗಿದ್ದು . ದಿನಾಂಕ. 24-12-2015 ರಂದು ಬೆಳಗಿನ ಜಾವ 6-00 ಗಂಟೆಗೆ ಮನೆಯಲ್ಲಿ ಮೃತ ಪಟ್ಟಿರುತ್ತಾಳೆ ನಮ್ಮ ಮನೆಯಲ್ಲಿ ಮತ್ತು ಅಕ್ಕ ಪಕ್ಕದವರನ್ನು ವಿಚಾರಿಸಿ ತಡವಾಗಿ ನನ್ನ ಮಗಳು ಭವಾನಿಯ ಶವವನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೇನೆ .ಕಾರಣ ನನ್ನ ಮಗಳು ಭವಾನಿಯ ಸಾವಿನ ಕಾರಣರಾದ ಪದ್ಮಣಿ ಸಿಸ್ಟರ  ಇವರ ಮೇಲೆ ಸೂಕ್ತ  ಕಾನೂನು ಕ್ರಮಕೈಕೊಳ್ಳಬೇಕು ಅಂತಾ ಶ್ರೀಮತಿ ರುಕ್ಮಣಿ ಗಂಡ ಪ್ರಕಾಶ ಎಡಗೇರಿ ಸಾ :: ಪಂಡಿತ ದಿನದಯಾಳ ಉಪಧ್ಯಾಯ ನಗರ ಜಾಫರಬಾದ ತಾ;ಜಿ;ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.