POLICE BHAVAN KALABURAGI

POLICE BHAVAN KALABURAGI

23 November 2015

KALABURAGI DISTRICT REPORTED CRIMES

ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ: ದಿನಾಂಕ 19/11/2015 ರಂದು ಮನೆ ಗೋಡೆ ವಿಷಯದಲ್ಲಿ 1) ಸಿದ್ದರಾಮಪ್ಪ, 2) ಸುಂದರಾಬಾಯಿ, 3) ವೀರಪ್ಪಾ , 4) ಭಾಗೀರತಿ ಇವರೆಲ್ಲರೂ ಶ್ರೀ ಸಿದ್ರಾಮಯ್ಯ ತಂದೆ ರೇವಣಯ್ಯ ಮಠಪತಿ  ಸಾ: ನಿಂಬರ್ಗಾ ಮತ್ತು ಆತನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೇ ಮಾಡಿ ಜೀವ ಭಯ ಪಡೆಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳ ಜಪ್ತಿ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ:22/11/2015 ರಂದು ಸಿ.ಪಿ.ಐ ಎಮ್.ಬಿ.ನಗರ ರವರು ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಜೇವರ್ಗಿ ಕಡೆಯಿಂದ ಅನದೀಕೃತವಾಗಿ ಕಳ್ಳತನದಿಂದ ಮರಳು ತುಂಬಿದ ಲಾರಿಗಳು ಬರುತ್ತಿವೆ ಅಂತಾ ಭಾತ್ಮಿ ಬಂದಿದ್ದರಿಂದ ಪಂಚರಾದ 1) ಶ್ರೀ ಖಾಜಾಸಾಬ ತಂದೆ ಖಾಸಿಂಸಾಬ ಸಾ: ಫರಹತಾಬಾದ ತಾ:ಜಿ:ಕಲಬುರಗಿ 2) ಶ್ರೀ ಅಕ್ಬರ  ತಂದೆ ಹೈದರಸಾಬ ನಧಾಫ ಸಾಃ ಫರಹತಾಬಾದ ಮತ್ತು ಫರಹತಾಬಾದ ಠಾಣೆಯ ನಾಗಬೂಷಣ ಎಎಸ್‌ಐ, ಪ್ರಭು ಸಿಪಿಸಿ 366, ಮತ್ತು ಜೀಪ ಚಾಲಕ ಅರ್ಜುನ ಸಿಹೆಚ್ ಸಿ 61 ರವರೊಂದಿಗೆ ಶಹಾಬಾದ ಕ್ರಾಸ ಹತ್ತಿರ ಹೋಗಿ ದಾಳಿ ಮಾಡಿ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿ 1) ಕೆಎ-32 ಸಿ-4434 ಮತ್ತು 2) ಕೆಎ-33 ಎ-4738 ಜಪ್ತಿ ಮಾಡಿ ಲಾರಿ ಚಾಲಕರಾದ 1)ಸೈಯಾದ ತಂದೆ ಗುಡುಸಾಬ್ ಸೇಡಂ ಸಾ:ಗಂವ್ಹಾರ ತಾ:ಜೇವರ್ಗಿ  2) ಜಾವೀದ ಪಾಶಾ ತಂದೆ ಮಸ್ತಾನಸಾಬ ಸಾ: ಜಿಲಾನಾಬಾದ ಕಲಬುರಗಿ ಇವರುಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಚೌಕ ಪೊಲೀಸ್ ಠಾಣೆ: ದಿನಾಂಕ 22/11/2015  ರಂದು ಪಿಎಸ್‌ಐ ಚೌಕ ಪೊಲೀಸ್ ಠಾಣೆ  ರವರು ಸಿಟಿ ಬಸ್ಸ್ ನಿಲ್ದಾಣ ಎದುರಗಡೆ ಇರುವ ಪಾಲ್‌ ಕಾಂಪ್ಲೇಕ್ಸ್‌ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ದೀಪದ ಬೆಳಕಿನ ಖುಲ್ಲಾ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 15 ಜನರನ್ನು ಠಾಣೆಯ ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಅವರನ್ನು ದಸ್ತಗೀರ ಮಾಡಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ನಗರದು ರೂ 14,570 ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿ ಜೂಜಾಟದಲ್ಲಿ ತೊಡಗಿದ್ದವರ ವಿರುದ್ದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಶಹಾಬಾದ ನಗರ ಠಾಣೆ: ದಿಃ 22.11.2015 ರಂದು  ಪಿಐ ಶಹಾಬಾದ ರವರು ಶಹಾಬಾದ ನಗರದ ಬಸವೆಶ್ವರ ನಗರದ ರಂಗನಾಥ  ಪಾಲೀಶ  ಮಶೀನ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದ  ಜೂಜುಕೋರರ ಮೇಲೆ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ  14 ಜನರನ್ನು ದಸ್ತಗೀರ ಮಾಡಿ ಜೂಜಾಟದಲ್ಲಿ ತೊಡಗಿಸಿದ್ದ ನಗದು ರೂ 15,110/-  ಹಾಗೂ  52 ಇಸ್ಪೆಟ ಎಲೆಗಳು ಜಪ್ತಿ ಪಡಿಸಿಕೊಂಡು ಆರೋಪಿತರ ವಿರುದ್ದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಂಡಿರುತ್ತಾರೆ.


21 November 2015

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಭೀಮರಾಯ ತಂದೆ ಶಿವಪ್ಪ ಭೋರಟ್ಟಿ ಸಾ|| ಕರಜಗಿ ಇವರ ಹೊಲ ಕರಜಗಿ ಸೀಮಾಂತರದಲ್ಲಿ ಸರ್ವೆ ನಂಬರ 484 ಇದ್ದು, 6 ಎಕರೆ 10 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ ಬೋರ ಹಾಕಿಸಿ ನೀರಾವರಿ ಮಾಡಿರುತ್ತೇನೆ. ನಮ್ಮ ಹೊಲದಲ್ಲಿ ಇದ್ದ ಬೋರಿಗೆ ಕರೆಂಟ ಸಲುವಾಗಿ ನಾನು ಮತ್ತು ನಮ್ಮ ಸುತ್ತ ಮುತ್ತಲಿನ ಹೊಲದವರಾದ ವಿದ್ಯಾಧರ ಕೋಣುರ, ಮೌಲಾಸಾಬ ಚೌದರಿ, ಬಾಬುರಾಯ ಅಳ್ಳಗಿ ಇನ್ನು ಕೆಲವು ಜನರು ಕೂಡಿಕೊಂಡು ಕರೆಂಟ ಸಂಭಂದ ಎಲ್ಲರು ಮದ್ಯದಲ್ಲಿ ಒಂದು ಹೊಸದಾಗಿ ಟಿಸಿ ಕೂಡಿಸಿರುತ್ತೇವೆ. ಎಲ್ಲರೂ ಸದರಿ ಟಿಸಿಗೆ ಒಂದೊಂದೆ ಕರೆಂಟ ಮೋಟಾರ ಕೂಡಿಸಬೇಕು ಅಂತಾ ಮಾತುಕತೆಯಾಗಿರುತ್ತದೆ. ಈಗ 2 ವರ್ಷಗಳ ಹಿಂದೆ ನಮ್ಮ ಎರಡನೆ ಅಣ್ಣ ತಮ್ಮಕಿಯ ಶ್ರೀಶಲ ತಂದೆ ಸಾಯಬಣ್ಣ ಬೋರಟ್ಟಿ ಈತನು ಸದರಿ ಟಿಸಿಯಿಂದ ನನಗೂ ಸಹ ಕರೆಂಟ ಕೊಡಿರಿ ಅಂತಾ ಕೇಳಿಕೊಂಡಿದ್ದರಿಂದ ನಾವೆಲ್ಲರೂ ಕೂಡಿ ಶ್ರೀಶೈಲನಿಗೆ ಒಂದೆ ಕರೆಂಟ ಮೋಟಾರ ಹಚ್ಚಬೇಕು ಅಂತಾ ಹೇಳಿ ಟಿಸಿಯಿಂದ ಕರೆಂಟ ಕೊಟ್ಟಿರುತ್ತೇವೆ. ಆದರೆ ಸದರಿ ಶ್ರೀಶೈಲನು ಈಗ ಕೆಲವು ತಿಂಗಳಿಂದ ಟಿಸಿಗೆ ಒಂದು ಕರೆಂಟ ಮೋಟರ ಹಚ್ಚದೆ 2 ಕರೆಂಟ ಮೋಟರ ಹಚ್ಚುತ್ತಿದ್ದರಿಂದ, ಉಳಿದ ನಮ್ಮೇಲ್ಲರ ಮೋಟರಗಳು ಬಂದ ಬೀಳುತ್ತಿರುತ್ತವೆ. ಅದೆ ವಿಷಯವಾಗಿ ನಾನು ಶ್ರೀಶೈಲನಿಗೆ ಒಂದೆ ಕರೆಂಟ ಮೋಟಾರ ಹಚ್ಚು ಅಂತಾ ಹೇಳಿದರು ಸಹ ನನ್ನ ಮಾತಿಗೆ ಕಿವಿಗೊಡದೆ 2 ಮೊಟರ ಹಚ್ಚುತ್ತಿದ್ದನು.   ಹಿಗಿದ್ದು ದಿನಾಂಕ 06-11-2015 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ನಾನು ಕರಜಗಿ ಸಿಮಾಂತರದ ಹೊಲ ಸರ್ವೆ ನಂಬರ 484 ರಲ್ಲಿ ಕೆಲಸ ಮಾಡುತ್ತಿದ್ದೇನು. ನಾನು ಕೆಲಸ ಮಾಡುತ್ತಾ ಬಾಂದಾರಿ ಹತ್ತಿರ ಹೋದಾಗ ನಮ್ಮ ಬಾಜು ಹೊಲದವನಾದ ಶ್ರೀಶೈಲ ಭೋರಟ್ಟಿ ಈತನ ಮಗ ಸಿದ್ದಪ್ಪ ಹಾಗೂ ಶ್ರೀಶೈಲನ ಹೆಂಡತಿ ಶಾಂತಾಬಾಯಿ ಇವರಲ್ಲೆರು ಇದ್ದರು, ಆಗ ನಾನು ಸದರಿ ಶ್ರೀಶೈಲನಿಗೆ ಏನೊ ಶ್ರೀಶೈಲ ಟಿಸಿಗಿ ಒಂದೆ ಕರೆಂಟ ಮೋಟರ ಹಚ್ಚು ಅಂತಾ ಹೇಳಿನಿ, ನೀನು ಎರಡು ಕರೆಂಟ ಮೋಟರ ಹಚ್ಚಿದರ ಉಳಿದವರ ಮೋಟರಗಳು ಜಗ್ಗೊದಿಲ್ಲ ಯಾಕ ಹಿಂಗ ಮಾಡ್ತಿ ಅಂತಾ ಕೇಳಿದೆನು. ಅದಕ್ಕೆ ಅಲ್ಲೆ ಇದ್ದ ಶ್ರೀಶೈಲನ ಮಗ ಸಿದ್ದಪ್ಪ ಈತನು ಏನೊ ಸೂಳೆ ಮಗನೆ ಎಲ್ಲಾರೊ ಸುಮ್ಮ ಕುತ್ತಾರ ನಿಂದೆ ತಿಂಡಿ ಜಾಸ್ತಿ ಆಗಿ ಕೇಳ್ತಾ ಇದಿ ಮಗನೆ ಅಂತಾ ಕೈಯಲ್ಲಿ ಕೊಡಲಿ ಹಿಡಿದುಕೊಂಡು ನನ್ನ ಹತ್ತಿರ ಬಂದು ನನಗೆ ಏಕಾ ಏಕಿ ಕೊಡಲಿಯಿಂದ ನನ್ನ ಏಡಕಾಲು ಮೊಣಕಾಲಿನ ಮೇಲೆ ಹಾಗೂ ತೊಡೆಯ ಮೇಲೆ ಹೊಡೆದನು. ಶ್ರೀಶೈಲನು ಬಂದು ಕಲ್ಲಿನಿಂದ ನನಗೆ ಹೊಡೆದನು, ಶ್ರೀಶೈಲನ ಹೆಂಡತಿ ಶಾಂತಾಬಾಯಿ ಇವಳು ಈ ಹಾಟ್ಯಾನ ಮಗಂದು ಸೊಕ್ಕ ಜಾಸ್ತಿ ಆಗ್ಯಾದ ಅದಕ ಕಾಲ ಕೆದರಿ ಜಗಳ ತಗಿತಾನ ಅಂತಾ ನನಗೆ ಬೈಯುತ್ತಿದ್ದಳು, ಸಿದ್ದಪ್ಪ ಮತ್ತು ಶ್ರೀಶೈಲ ಇಬ್ಬರು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುವುದು, ಸಿದ್ದಪ್ಪನು ಕೊಡಲಿಯಿಂದ ಹೊಡೆಯುತ್ತಿದ್ದನು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನಮ್ಮ ಹೊಲದಲ್ಲಿಯೆ ಇನ್ನೊಂದು ಕಡೆ ಕೆಲಸ ಮಾಡುತ್ತಿದ್ದ ನನ್ನ ಹೆಂಡತಿ ಸುಗಲಾಬಾಯಿ ಹಾಗೂ ನಮ್ಮ ಸಂಭಂದಿಕ ಸಂಗಪ್ಪ ಇವರು ಓಡಿ ಬಂದು ನನಗೆ ಹೊಡೆಯುದನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 November 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪೂಜಾ ಗಂಡ ಪರಶುರಾಮ ಸಾ: ಮಾಶ್ಯಾಳ ತಾ: ಅಫ್ಜಲಪೂರ ಜಿ;ಕಲಬುರಗಿ ಹಾ;ವ: ಮದರಿ ತಾ:ಅಫ್ಜಲಪೂರ  ಇವರನ್ನು ಸುಮಾರು 6 ವರ್ಷಗಳ ಹಿಂದೆ ಮಾಶ್ಯಾಳ ಗ್ರಾಮದ ಪರಶುರಾಮ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಆಗಿರುತ್ತದೆ. ಮದುವೆಯಲ್ಲಿ ನನ್ನ ಗಂಡನಿಗೆ 1 ತೊಲೆ ಬಂಗಾರ ಕೊಟ್ಟಿರುತ್ತೇವೆ. ಮದುವೆ ಆದ ನಂತರ ನಾನು ನನ್ನ ಗಂಡನ ಮನೆಯಾದ ಮಾಶ್ಯಾಳ ಗ್ರಾಮದಲ್ಲಿದ್ದು, ಸುಮಾರು 5 ತಿಂಗಳವರೆಗೆ ನನ್ನೊಂದಿಗೆ ಚೆನ್ನಾಗಿ ಇದ್ದನು. ನಂತರ ನನ್ನ ಗಂಡ ಪರಶುರಾಮ ಅತ್ತೆ ಚೆನ್ನಮ್ಮ ಭಾವ ನಾಗಪ್ಪ ಇವರೆಲ್ಲರೂ ಕೂಡಿ ವಿನಾಕಾರಣ ನನ್ನೊಂದಿಗೆ ಜಗಳ ತೆಗೆಯುವುದು ರಂಡಿ,ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುವುದು ವಗೈರೆ ಮಾಡುತ್ತಿದ್ದರು. ನಾನು ಅವರು ಕೊಡುವ ಹಿಂಸೆಯನ್ನು ತಾಳಿಕೊಂಡು ಬಂದಿರುತ್ತೇನೆ. ನನಗೆ ಈಗ ಎರಡು ಗಂಡು  ಮಕ್ಕಳು ಇರುತ್ತಾರೆ. ಮತ್ತು ಸದ್ಯ 7 ತಿಂಗಳ ಗಭರ್ಣಿ ಇರುತ್ತೇನೆ. ಮತ್ತು ಅವರೆಲ್ಲರೂ ಕೂಡಿ ನನಗೆ ತವರು ಮನೆಯಿಂದ 50 ಸಾವಿರ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಡುತ್ತಿದ್ದರು. ನನ್ನ ಗಂಡ ಅತ್ತೆ,ಭಾವ ಕೊಡುವ ಹಿಂಸೆಯನ್ನು ತಾಳಲಾರದೇ ನಮ್ಮ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ಅವರು ಬಂದು ನಾವು ಬಡವರಿದ್ದೇನೆ ನಮ್ಮಿಂದ ಅಷ್ಟೊಂದು ದುಡ್ಡು ಕೊಡುವುದು ಆಗುವದಿಲ್ಲ ಅಂತಾ ಕೇಳಿಕೊಂಡರು ಕೂಡ ಅವರು ತಮ್ಮ ಚಟವನ್ನೆ ಮುಂದುವರೆಸಿಕೊಂಡು ಬಂದಿರುತ್ತಾರೆ. ರಂಡಿ ಹಣ ತೆಗೆದುಕೊಂಡು ಬಾ ಅಂದರೆ ಬರೆ ನಿಮ್ಮ ತಂದೆ ತಾಯಿಗೆ ಕರೆಯಿಸಿ ನಮಗೆ ತಿಳುವಳೀಗೆ ಹೇಳುತ್ತಿಯಾ ನಿನಗೆ ಖಲಾಸ ಮಾಡಿ ಬಿಡುತ್ತೇವೆ ಅಂತಾ ನನ್ನ ಗಂಡ ನನಗೆ ಜೀವದ ಬೆದರಿಕೆ ಹಾಕುತ್ತಿದ್ದಾನೆ. ದಿನಾಲು ಕುಡಿದು ಬಂದು ನಿನ್ನ ಅಣ್ಣ ಮತ್ತು ನಿನ್ನ ತಂದೆಗೂ ಕೂಡ ಖಲಾಸ ಮಾಡುತ್ತೇನೆ ಅಂತಾ ಹೆದರಿಸುತ್ತಾನೆ. ನಾನು ಅವರು ಕೊಡುವ ಹಿಂಸೆಯನ್ನು ತಾಳಲಾರದೇ ನನ್ನ ಎರಡು ಮಕ್ಕಳೊಂದಿಗೆ ನನ್ನ ತವರು ಮನೆಯಲ್ಲಿ ಬಂದು ಉಳಿದುಕೊಂಡಿರುತ್ತೇನೆ. ದಿನಾಂಕ: 02.05.2015 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನನ್ನ ಗಂಡ ಪರಶುರಾಮ,ಅತ್ತೆ ಚೆನ್ನಮ್ಮಾ ಮತ್ತು ಭಾವ ನಾಗಪ್ಪ ಇವರೆಲ್ಲರೂ ನಮ್ಮ ತವರು ಮನೆಯಾದ ಮದರಿ ಗ್ರಾಮಕ್ಕೆ ಬಂದು ರಂಡಿ, 50 ಸಾವಿರ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ನೀನು ಇಲ್ಲೆ ಕುಳಿತಿರುವಿಯಾ ನೀನು ನನ್ನ ಜೊತೆ ಸಂಸಾರ ಮಾಡುವುದು ಸಾಕು ನನ್ನ ಮಕ್ಕಳಿಗೆ ಕೊಡು ನಾನು ನಿನಗೆ (ಡೈವಸ್) ಫಾರಿಖತ್ ಕೊಡು ಅಂತಾ ನನ್ನ ಗಂಡ ನನಗೆ ಕೈಯಿಂದ ಹೊಡೆದನು. ಆಗ ನನ್ನ ಅತ್ತೆ ಚೆನ್ನಮ್ಮ ನನ್ನ ಕೂದಲು ಹಿಡಿದು ಜಗ್ಗಾಡಿ ರಂಡಿ ತಾಳಿ ಕೊಡು ನಾನು ನನ್ನ ಮಗನಿಗೆ ಬೇರೆ ಮದುವೆ  ಮಾಡುತ್ತೇನೆ ಅಂತಾ ಬೈದಳು. ಆಗ ನನ್ನ ಅಣ್ಣ  ಮಾಂತಪ್ಪ  ಬಿಡಿಸಲು ಬಂದಾಗ ಆಗ ನನ್ನ ಭಾವ ನಾಗಪ್ಪ ಅವನಿಗೆ ಹಿಡಿದು ಎಳದಾಡಿ ಕೈಯಿಂದ ಹೊಡೆದು ಕೆಳಗೆ ನೂಕಿ ಕೊಟ್ಟೆನು. ಮದುವೆ ಆದಾಗಿನಿಂದ ತವರು ಮನೆಯಿಂದ 50 ಸಾವಿರ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ  ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂದನೆ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಹಣಮಂತ ಜಿ. ಯಳಸಂಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ನ್ಯಾಯವಾದಿಗಳು ಕಲಬುರಗಿ ಇವರು ದಿನಾಂಕ 16-11-2015 ರಂದು 6 ಪಿ.ಎಮ್ ದಿಂದ 7 ಪಿ.ಎಮ್ ದ ವರೆಗೆ ನಾನು ಮನೆಯಲ್ಲಿ ಟಿ.ವಿ ನೋಡುತ್ತಿದ್ದಾಗ ಡಾ|| ಬಾಬಾ ಸಾಹೇಬ ರವರು ಈ ದೇಶದ ಸಂವಿಧಾನ ಬರೆದ ಪಿತಾಮಹಾ ಮತ್ತು ಮಹಾ ಮೇಧಾವಿ ರವರ ವಿರುದ್ಧ ಅತ್ಯಂತ ಹಗುರವಾಗಿ ಬಿ.ಟಿ.ವಿ ಯಲ್ಲಿ ಅವಮಾನಿಸಿ ಮಾತನಾಡಿ ಸಮಸ್ತ ನಾಡಿನ ಜನತೆಯ ಭಾವನೆಗಳಿಗೆ ಧಕ್ಕೆ ತಂದ ಹುಚ್ಚ ವೆಂಕಟ ಬಾಬಾ ಸಾಹೇಬ ನನ್ನ ಎಕ್ಕಡ ಎಂದು ದಿನಾಂಕ 16-11-2015 ರಂದು ಸಾಯಂಕಾಲ ಹಿಯಾಳಿಸಿರುವುದು ಸಮಾಜದಲ್ಲಿನ ಶಾಂತಿಗೆ ಭಂಗ ತರುವ ಹುನ್ನಾರು ಆಗಿದೆ ಹುಚ್ಚ ವೆಂಕಟನ ಬಾಯಿಯಿಂದ ಡಾ|| ಬಾಬಾ ಸಾಹೇಬ ಅಂಬೇಡ್ಕರ ರವರಿಗೆ ಅವಮಾನ ಆಗುವಂತೆ ಮಾಡಿದ ಬಿ.ಟಿ.ವಿಯ ಚಂದನ ಶರ್ಮಾ ಎಂಬ ಸಮಾಜ ಘಾತುಕ ಯಾವುದೇ ಭಯವಿಲ್ಲದೆ ತಮ್ಮ ಬಿ.ಟಿ.ವಿ ಯಲ್ಲಿ ಪ್ರಸಾರ ಮಾಡಿದ್ದರಿಂದ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.