POLICE BHAVAN KALABURAGI

POLICE BHAVAN KALABURAGI

07 August 2015

Kalaburagi District Reported Crimes

ಅಂತರಾಜ್ಯ ಮೊಬೈಲ್ ಕಳ್ಳರ ಬಂಧನ :
ಯಡ್ರಾಮಿ ಠಾಣೆ : ಶ್ರೀ ಮಡಿವಾಳಪ್ಪಾ ತಂದೆ ಈರಣ್ಣಾ ಗುರುಶೇಟ್ಟಿ ಸಾ : ಯಡ್ರಾಮಿ ರವರು ದಿನಾಂಕ: 03-08-2015 ರಂದು ನಾನು ಬೆಳ್ಳಗ್ಗೆ 9:00 ಗಂಟೆ ಸುಮಾರಿಗೆ ನಾನು ಪ್ರತಿ ವಾರದಂತೆ ಮನೆಯಿಂದ ಕಾಯಿಪಲ್ಲೆ ಕರಿದಿ ಮಾಡಲು ಸಂತೆಗೆ ಬಂದೆನು. ನನ್ನ ಹತ್ತಿರ ಇದ್ದ ಸಮ್ ಸಾಂಗ ಗೆಲಕ್ಸಿ ಕೋರ್ 2 ಕಪ್ಪು ಬಣ್ಣದ ಮೊಬೈಲ ಶರ್ಟಿನ ಜೇಬಿನಲ್ಲಿ ಇಟ್ಟುಕೊಂಡು ಸಿಂಡಿಕೇಟ ಬ್ಯಾಂಕ ಎದುರುಗಡೆ ಕಾಯಿಪಲ್ಲೆ  ಮಾಡಿಕೊಂಡು ಹಣ ಕೊಡಲು ಶರ್ಟಿನ ಮೇಲಿನ ಜೇಬಿನಲ್ಲಿ ಕೈ ಹಾಕಿದಾಗ ನನ್ನ ಮೊಬೈಲ ಜೇಬಿನಲ್ಲಿ ಇರಲಿಲ್ಲ. ಆಗ ನಾನು ಗಾಬರಿಯಾಗಿ ಯಾರೋ ಕಳ್ಳರು ನನ್ನ ಜೇಬಿನಿಂದ ಮೊಬೈಲ ಕಳುವು ಮಾಡಿಕೊಂಡಿರುತ್ತಾರೆ ಅಂತಾ ಅಕ್ಕ ಪಕ್ಕ ಜನರಿಗೆ ಹೇಳುತ್ತಿದ್ದಾಗ ಅಲ್ಲೆ ಸ್ವಲ್ಪ ದೂರದಲ್ಲಿ 5 ಜನರು ನಿಂತು ತೆಲಗು ಭಾಷೆ ಮಾತನಾಡುತ್ತಿದ್ದರು, ನನಗೆ ನೋಡಿ ಆ 5 ಜನರು ಅವಸರದಿಂದ ತಮ್ಮ ಸೈಕಲ್ ಮೊಟಾರ ತೆಗೆದುಕೊಂಡು ಎರಡು ಸೈಕಲ್ ಮೊಟಾರ ಮೆಲೆ ಇಬ್ಬಿಬ್ಬರಂತೆ ಒಂದು ಮೊಟಾರ ಸೈಕಲ್ ಮೇ ಒಬ್ಬನು ಹೀಗೆ 3 ಮೊಟಾರ ಸೈಕಲ್ ಮೇಲೆ  ಒಂದು ಕುಳಿತುಕೊಂಡು ವೇಗವಾಗಿ ಬಸ್ಸ ಸ್ಟ್ಯಾಂಡ ಕಡೆಗೆ ಹೋದರು. ಆಗ ನಾನು ಸೈಕಲ್ ಮೊಟಾರಗಳ ನಂಬರ ನೋಡಿರುವದಿಲ್ಲ. ನಾನು ಮತ್ತು ಗೆಳೆಯನಾದ ಮಹೇಶ ತಂದೆ ಸುಭಾಷ ಅಂಕಲಕೋಟಿ ಇವನೊಂದಿಗೆ ನಾನು ಮೊಟಾರ ಸೈಇಕಲ್ ತೆಗೆದುಕೊಂಡು ಬೆನ್ನ ಹತ್ತಿದೆವು. ಆದರೆ ಅವರು ಯಾವ ರಸ್ತೆಯಿಂದ ಹೋದರು ಅಂತಾ ನಮಗೆ ಗೊತ್ತಾಗಲಿಲ್ಲ. ಕಾರಣ ನನ್ನ ಮೊಬೈಲ್ ಸಮ್ ಸಂಗ ಕೋರ 2 ಕಪ್ಪು ಬಣ್ಣದ್ದು ಇದರ ಕಿಮ್ಮತ್ತು 8200=00 ಇದ್ದು, ನನ್ನ ಮೊಬೈಲ ಕಳುವು ಮಾಡಿದವರಿಗೆ ಪತ್ತೆ ಹಚ್ಚಬೇಕು ಮತ್ತು ಅವರಿಗೆ ನಾನು ನೋಡಿದರೆ ಗುರುತಿಸುತ್ತೇನೆ. ನನ್ನ ಮೊಬೈಲ ಕಳುವಾದಾಗ ಬೆಳ್ಳಗ್ಗೆ 10 ಗಂಟೆಯಾಗಿರಬೇಕು ನನ್ನ ಮೊಬೈಲ ನಂಬರ 9632716288 ಮತ್ತು ಐ.ಎಂ.ಇ.ಐ ನಂಬರ 1] 357926/06/574524/7 2]357927/06/574524/5 ಇದ್ದು ನನ್ನ ಮೊಬೈಲ್ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ಹಾಗು ಆರೋಪಿತರ ಪತ್ತೆಗಾಗಿ ಹೋಗಿ ದಿನಾಂಕ 06-08-2015 ರಂದು ಬೇಳಗಿನ ಜಾವ 4 ಗಂಟೆಯ ಸುಮಾರಿಗೆ ಜೇವರ್ಗಿಯ ಬಸ್ ಸ್ಟ್ಯಾಂಡ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುವ 5 ಜನರನ್ನು ಹಿಡಿಯಲು ಹೋದಾಗ ಇಬ್ಬರು ಓಡಿ ಹೋಗಿದ್ದು ಮೂವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಚಿನ್ನ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) 2) ಗೋಪಿ @ ಪಾಸು ಪ್ಲೆಟ್ ತಂದೆ ವೆಂಕಟೇಶ ಸಾ|| ಶ್ರೀರಾಮ ನಗರ ತಾಂಡೂರು (ತೆಲಾಂಗಣ )  3) ಸಾಯಿರಾಮ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) ಇವರನ್ನು ಹಿಡಿಕೊಂಡು ವಿಚಾರಣೆ ಮಾಡಿದಾಗ ಯಡ್ರಾಮಿ ಠಾಣೆಯ ಗುನ್ನೆ ನಂ 113/15, 114/15, 115/15, 25/15128/14 ಅಲ್ಲದೆ ಜೆವರ್ಗಿ ಠಾಣೆಯ ಗುನ್ನೆ ನಂ 74/15, ನೆದ್ದರಲ್ಲಿ ಒಟ್ಟು 2 ಮೋಬೈಲ್ ಹಾಗು 45 ಸಾವಿರ ರೂಗಳು ಜಪ್ತ ಪಡಿಸಿಕೊಂಡಿದ್ದಲ್ಲದೆ ಇನ್ನು 60 ಮೊಬೈಲಗಳು ಹಾಗು 3 ಮೋಟರ್ ಸೈಕಲ್ಗಳು ಹಿಗೆ ಒಟ್ಟು 10,45,000/- ರೂಪಯಿಗಳು ಬೆಲೆ ಬಾಳುವ ವಸ್ತುಗಳನ್ನು ಜಪ್ತ ಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮೊಹ್ಮದ್ ಮುಬೀನ ತಂದೆ ಅಬ್ದುಲ್ ಕರೀಮ್ ಸಿಗ್ನಿಫರೋಶ್ ಸಾ: ಸಿಟಿ ಸ್ಕೂಲ್ ಹಿಂಬಾಗ ಜಮ್ ಜಮ್ ಕಾಲನಿ ಕಲಬುರಗಿ ಇವರು ದಿನಾಂಕ; 06/08/2015 ರಂದು ಎ.ಎಮ್.ಬೆಂಕಾಟ ಫಂಕ್ಷನಹಾಲನಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವ ಪ್ರಯುಕ್ತ ನಾವು ಕುಟುಂಬ ಸಮೇತರಾಗಿ ದಿನಾಂಕ: 06/08/2015 ರಂದು ರಾತ್ರಿ 9-30 ಪಿಎಮ್ ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಮದುವೆ ಕಾರ್ಯ ಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ: 07/08/2015 ರಂದು ರಾತ್ರಿ 2-30 ಎಎಮ್ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ವಾಪಸ್ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಆಗ ನಾನು ಗಾಬರಿಯಿಂದ ಮನೆಯ ಒಳಗಡೆ ಹೋಗಿ ನೋಡಲು ಮನೆಯ ಬೆಡರೂಮನಲ್ಲಿನ ಅಲಮಾರದ ಬಾಗಿಲು ತೆರೆದಿದ್ದು ಅಲಮಾರದಲ್ಲಿದ್ದ ಬಟ್ಟೆ ಬರೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಾನು ಗಾಬರಿಯಿಂದ ಒಳಗೆ ನೋಡಲು ಅಲಮಾರಾದಲ್ಲಿಟ್ಟಿದ್ದ  ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 1,68,100/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಹೆಣ್ಣುಮಗಳು ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗೋವಿಂದರೆಡ್ಡಿ ತಂದೆ ಹಣಮಂತರೆಡ್ಡಿ  ಸಾ: ದಣ್ಣೂರ ತಾ:ಆಳಂದ  ಹಾಲಿ ವಸತಿ, ಗಣೇಶ ಮಂದಿರದ ಹತ್ತಿರ ಮುಕ್ತಂಪೂರ ಕಲಬುರಗಿ ಇವರು ದಿನಾಂಕ 06.08.2015  ರಂದು ಬೆಳ್ಳಿಗ್ಗೆ 10 ಗಂಟೆಗೆ ನಮ್ಮ ವೆಲ್ಡಿಂಗ ಅಂಗಡಿಗೆ ಬಂದು ಕೆಲಸ ಮಾಡುತ್ತಿರುವಾಗ ಒಬ್ಬ ವಯಸ್ಸಾದ ಹೆಣ್ಣು ಮಗಳು ಅಂದಾಜು 35-45 ವಯಸ್ಸು ಅವಳು ದಿನಾಲು ನವಜೀವನ ಕಲ್ಯಾಣ ಮಂಟಪದ ಹತ್ತಿರ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ  ಭಿಕ್ಷೆ ಬೇಡಿ ಉಟ ಮಾಡುವುದು ಅಲ್ಲದೆ ನಮ್ಮ ಅಂಗಡಿಯ ಎದುರುಗಡೆಯಿಂದ  ಹೋಗಿ ಬರುವ ಜನರಿಗೆ ಭಿಕ್ಷೆ ಬೇಡುತ್ತಾ ಇರುತ್ತಿದ್ದಳು. ಬಿಸಿಲಿನ ತಾಪಕ್ಕೆ ತಾಳಲಾರದೇ ಅಲ್ಲಿಯೇ ರಸ್ತೆಯ ಪಕ್ಕದ ಬೇವಿನ ಗಿಡದ ನೆರಳಿಗೆ ಮಲಗುತ್ತಿದ್ದಳು. ಇಂದು ದಿನಾಂಕ: 07.08.2015 ರಂದು ಬೆಳೆಗ್ಗೆ 10.00 ಗಂಟೆಗೆ ನಾನು ಎಂದಿನಂತೆ ನನ್ನ ವೆಲ್ಡಿಂಗ್ ಅಂಗಡಿಗೆ ಬಂದು ಅಂಗಡಿ ತೆಗೆದು ನಂತರ ಮೂರ್ತ ವಿಸರ್ಜನೆಗಾಗಿ ನವಜೀವನ ಕಲ್ಯಾಣ ಮಂಟಪದ ಪಕ್ಕದಲ್ಲಿ ಹೋದಾಗ ಅಲ್ಲಿಯೇ ಮುಳ್ಳು ಕಂಟೆಯ ಮರೆಯಲ್ಲಿ ಮೇಲೆ ತಿಳಿಸಿದ ಅಪರಿಚಿತ ಭಿಕ್ಷುಕಿ ಹೆಣ್ಣು ಮಗಳು ಅಂಗಾತಾಗಿ ಬಿದ್ದಿದ್ದು,  ಹತ್ತಿರ ಹೋಗಿ ನೋಡಲಾಗಿ ಅವಳ ಮುಖದ ಮೇಲೆ ದೇಹದ ಮೇಲೆ ನೋಣಗಳು, ಹುಳುಗಳು ಮೆತ್ತಿಕೊಂಡಿದ್ದವು. ಆಗ ನಾನು ನಮ್ಮ ಸ್ನೇಹಿತರಾದ ಏಜಾಜ ತಂದೆ ಇಮಾಮ ಪಟೇಲ ಮತ್ತು ರಮೇಶ ತಂದೆ ಅಂಬೋಜಿರಾವ ನಾಗೂರಕರ ಇವರಿಗೆ ಕರೆಯಿಸಿ ನಂತರ ಎಲ್ಲರೂ ಕೂಡಿಕೊಂಡು   ನಾವು ಸದರಿಯವಳಿಗೆ ಹೊರಳಾಡಿಸಿ ನೋಡಲು ಸದರಿಯವಳು ಮೃತ ಪಟ್ಟಿದ್ದು ಕಂಡು ಬರುತ್ತದೆ. ಸದರಿಯವಳು ತನಗೆ ಇದ್ದ ಯಾವುದೂ ಒಂದು ಕಾಯಿಲೆಯಿಂದ  ನರಳುತ್ತಾ  ಮತ್ತು ಬಿಸಿಲಿನ ತಾಪತಾಳದೇ ಮೃತ ಪಟ್ಟಿರಬಹುದು. ಸದರಿಯವಳ ಹತ್ತಿರ ಯಾವುದೆ ಕುರಹುಗಳು ಪತ್ತೆಯಾಗಿರುವದಿಲ್ಲ. ಸದರಿಯವಳ ವಯಸ್ಸು 35-45 ವರ್ಷಗಳಿರಬಹುದು. ಸದರಿಯವಳ ಮೈ ಮೇಲೆ ಒಂದು ಕೆಂಪು ಬಣ್ಣದ ನೈಟಿ ಇದ್ದು ಅದರಲ್ಲಿ ಹಸಿರು ಬಣ್ಣದ ಹೂವಿನ ಚಿತ್ರಗಳಿರುತ್ತವೆ. ಉದ್ದನೇಯ ಮುಖ, ನೇರ ಮೂಗು, ತೆಲೆಯಲ್ಲಿ  ಕಪ್ಪನೆಯ ಕೂದಲು, ಸಾದಾಕಪ್ಪು ಬಣ್ಣ, ಗದ್ದದ ಮೇಲೆ ಸ್ವಲ್ಪ ದಾಡಿ ಬಂದಂತೆ ಕಂಡುಬರುತ್ತಿದ್ದು, ಅಂದಾಜು 5 ಫೂಟ 5 ಇಂಚ ಎತ್ತರ ಇರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ. ಕಾಂಚನಾ  ಗಂಡ ವರದರಾಜ ಪರವರ್ತಿಕರ  ಸಾ: ಪ್ಲಾಟ ನಂ.10 ಮಾಕಾ ಲೇಔಟ ಕಲಬುರಗಿ ರವರು ದಿನಾಂಕ 06/08/2015 ರಂದು ಮದ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹತ್ತಿರದಲ್ಲಿದ್ದ ನನ್ನ ತಂಗಿ ಅರ್ಚನಾಳ ಮನೆಗೆ ಹೊಗಿದ್ದು ಸಂಜೆ 5-30 ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯವರಾದ ಪ್ರಾಣೇಶರವರು ಫೋನ ಮಾಡಿ ಮನೆ ಕಳ್ಳತನವಾಗಿರುವ ವಿಷಯ ತಿಳಿಸಿದಾಗ  ಬಂದು ನೊಡಲು ಮನೆಯ ಮುಖ್ಯ ಬಾಗಿಲು  ಕೊಂಡಿ ಮುರಿದಿದ್ದು  ಸೀಟ್‌ಔಟದಲ್ಲಿಟ್ಟಿದ್ದ 2 ಲ್ಯಾಪಟಾಪ ಮತ್ತು ಬೇಡರೂಮಿನಲ್ಲಿದ್ದ ಎರಡು ಅಲಮಾರಗಳು ತೆರೆದಿದ್ದು ಬಟ್ಟೆ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಯಾರೋ ಕಳ್ಳರು ಮದ್ಯಾಹ್ನ 2:00 ರಿಂದ 5 ಗಂಟೆ ಅವಧ್ಇಯಲ್ಲಿ ಮನೆ ಬೀಗ ಮುರಿದು ಅತಿಕ್ರಮ ಪ್ರವೇಶ ಮಾಡಿ 2 ಲ್ಯಾಪಟಾಪಗಳು, ದೇವರ ಮೂರ್ತಿಗಳು, ನಗದು ಹಣ ಹಾಗು ಬಂಗಾರದ ಮತ್ತು ಬೆಳ್ಳಿ ಆಭರಣಗಳು ಒಟ್ಟು 2,17,000/- ರೂ ಕಿಮ್ಮತ್ಇನವುಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 06.08.2015 ರಂದು ಠಾಣಾ ವ್ಯಾಪ್ತಿಯ ಶಿವಾಜಿ ನಗರ ಫೀರ ಕಟ್ಟೆಯ (ಮಸೀಧಿ) ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಐ. ಚೌಕ ಠಾಣೆ ಹಾಗು ಪಿ.ಎಸ್.ಐ (ಕಾ.ಸು) ಹಸೇನ ಬಾಷಾ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಶಿವಾಜಿ ನಗರ ಫೀರ ಕಟ್ಟೆಯ (ಮಸೀಧಿ) ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಶಿವಾಜಿ ನಗರ ಫೀರ ಕಟ್ಟೆಯ (ಮಸೀಧಿ) ಹತ್ತಿರ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 7 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಇಸ್ಟೇಟ ಜೂಜಾಟ ನಿರತರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಮಾಣಿಕಪ್ಪ ತಂದೆ ಫೀರಪ್ಪ ಪೂಜಾರಿ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 2) ನಾಗೇಂದ್ರಪ್ಪ ತಂದೆ ಶಿವಾಜಿರಾವ ಕಾಜಳೆ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 3) ರಘು ತಂದೆ ಮೋಹನರಾವ ಸಾಬಳೆ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 4) ಈರಣ್ಣ ತಂದೆ ಶಿವಶರಣಪ್ಪ ಗೊಳೆದ  ಸಾ: ಕಾಶಿರಾಯ ತಲಾಟಿ ರವರ ಮನೆಯಲ್ಲಿ ಬಾಡಿಗೆ ಬಸವಣ ದೇವರ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 5) ಸುನೀಲ ತಂದೆ ನಿಂಬಾಜಿರಾವ ಜಾಡೆ ಸಾ: ಯಲ್ಲಾಲಿಂಗ ಗುಡಿಯ ಹಿಂದುಗಡೆ ಶಿವಾಜಿ ನಗರ ಕಲಬುರಗಿ 6) ದೇವಿಂದ್ರಪ್ಪ ತಂದೆ ಭೀಮಶಾ ದುತ್ತರಗಾಂವ ಸಾ: ಮಸುತಿ ಹತ್ತಿರ ಶಿವಾಜಿ ನಗರ ಕಲಬುರಗಿ 7) ಪ್ರಭಾಕರ ತಂದೆ ಧರ್ಮರಾಯ ಜಮಾದಾರ ವ: 54 ಉ: ಬಟ್ಟೆ ಅಂಗಡಿಯಲ್ಲಿ ಕೆಲಸ ಜಾತಿ: ಕಬ್ಬಲೀಗ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ ಅಂತ ತಿಳಿಸಿದ್ದು  ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಅಂಗ ಶೋಧನೆ ಮಾಡಲು ನಗದು ಹಣ 10,190 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅರುಣಕುಮಾರ ತಂದೆ ಭಿಮರಾವ ಕೊರಳ್ಳಿ ಸಾ : ಸ್ಟೆಷನ್ ಗಾಣಗಾಪೂರ ತಾ : ಅಫಜಲಪೂರ ಜಿಲ್ಲಾ : ಕಲಬುರಗಿ ಹಾ.ವ,|  ಐವಾನ ಇ ಶಾಹಿ ಎರಿಯಾ ಕಲಬುರಗಿ ರವರು ದಿನಾಂಕ. 05.08.2015 ರಂದು ರಾತ್ರಿ 10.00 ಗಂಟೆಗೆ ತನ್ನ ಮೊಟಾರ್ ಸೈಕಲ ಹಿರೊಹೊಂಡ ಸ್ಪ್ಲೇಂಡರ್ ಪ್ಲಸ್  ನಂ. ಕೆಎ-32-ಎಕ್ಷ್-1804 ಚಾರ್ಸಿ ನಂ. MBLHA10EZAHG14067, ಇಂಜಿನ್ ನಂ.HA10EFAHG23095 .ಅಕಿ. 25000/-ರೂ ನೆದ್ದು ಐವನ್ ಇ ಶಾಹಿ ಏರಿಯಾದ ಕಸ್ತೂರಬಾಯಿ ನಿವಾಸದ ಎದುರುಗಡೆ ನಿಲುಗಡೆ ಮಾಡಿ ರೂಮ್ ನಲ್ಲಿ ಮಲಗಿಕೊಂಡು ನಂತರ ದಿನಾಂಕ: 06/08/2015 ರಂದು ಬೆಳಿಗ್ಗೆ 7:00 ಎಎಮ್ ಸುಮಾರಿಗೆ ನೋಡಲಾಗಿ ನನ್ನ ಸೈಕಲ್ ಮೋಟರ ಇರಲಿಲ್ಲ ಎಲ್ಲಾ ಕಡೆ ಹುಡಿಕಿದರು ಸಹ ಸಿಕ್ಕಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

06 August 2015

Kalaburagi District Press Note

ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
          ದಿನಾಂಕ: 02-08-2015 ರಂದು ರಾತ್ರಿ 9:00 ಗಂಟೆಗೆ ಶ್ರೀ ವಾಹಾಜ್ಬಾಬಾ ಅದ್ಯಕ್ಷರು ತಾಮಿರ್-ಎ-ಮಿಲ್ಲತ್ರವರು ಚೌಕ್ ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿಯ ಮೇಲಿಂದ ಚೌಕ್ ಪೊಲೀಸ್ ಠಾಣೆಯ ಗುನ್ನೆ ನಂ: 126/2015 ಕಲಂ 295 (ಎ) ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ಸಂಪಾದಕರು ವಿಜಯವಾಣಿ ದಿನ ಪತ್ರಿಕೆಯ ವಿರುದ್ಧ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಇಂದು ದಿನಾಂಕ: 06-08-2015 ರಂದು ಬೆಳಿಗ್ಗೆ 11:15 ಗಂಟೆಗೆ ಸುಮಾರು 60-80 ಮುಸ್ಲಿಂ ಸುಮುದಾಯದ ಜನರು ಶ್ರೀ ವಾಹಾಜ್ಬಾಬಾ ರವರ ನೇತೃತ್ವದಲ್ಲಿ ಕೂಡಲೇ ಮೇಲ್ಕಂಡ ಪ್ರಕರಣದ ಆರೋಪಿತರಿಗೆ ದಸ್ತಗಿರಿ ಮಾಡುವಂತೆ ಪೊಲೀಸ್ ಭವನ ಕಲಬುರಗಿ ಎದುರುಗಡೆ ಪ್ರತಿಭಟನೆ ಮಾಡಿದ್ದುಅಪರ ಪೊಲೀಸ್ ಅಧೀಕ್ಷಕರು ಕಲಬುರಗಿರವರು ಪ್ರತಿಭಟನಾಕಾರರಿಗೆ ಭೇಟಿಯಾಗಿ ಮನವಿ ಪತ್ರ ಸ್ವೀಕರಿಸಿ ಇಂದು ಸಾಯಂಕಾಲ 5:00 ಗಂಟೆಯೊಳಗಾಗಿ ನಿಮ್ಮ ಬೇಡಿಕೆಯು ಬಗ್ಗೆ ಇತ್ಯರ್ಥಪಡಿಸಿ ನ್ಯಾಯ ಒದಗಿಸಲಾಗುವುದು ಎಂದು ಕೊಟ್ಟ ಭರವಸೆಯ ಮೇರೆಗೆ ಪ್ರತಿಭಟನಾಕಾರರು ಮದ್ಯಾಹ್ನ 12:15 ಗಂಟೆಗೆ ಶಾಂತರೀತಿಯಾಗಿ ಹೊರಟು ಹೋಗಿರುತ್ತಾರೆ.
ನಂತರ ಇಂದು ಸಾಯಂಕಾಲ 4:30 ಗಂಟೆಗೆ 1) ಶ್ರೀ ವಾಹಾಜ್ಬಾಬಾ ಅದ್ಯಕ್ಷರು ತಾಮಿರ-ಎ-ಮಿಲ್ಲತ್, 2) ಶ್ರೀ ಅಬ್ದುಲ್ ರಹಿಮ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರು, 3) ಶ್ರೀ ಶೇಖ ಸಿರಾಜುದ್ದಿನ್ ಮಾಜಿ ಅದ್ಯಕ್ಷರು ಎಸ್.ಡಿ.ಪಿ.ಐ.ರವರನ್ನು ಪೊಲೀಸ್ ಭವನ ಕಲಬುರಗಿಗೆ ಕರೆಯಿಸಿ ಮಾನ್ಯ ಐ.ಜಿ.ಪಿ. ಸಾಹೇಬರ ಕಾರ್ಯಾಲಯದಲ್ಲಿ  ಸಭೆ ನಡೆಸಿ ಮಾನ್ಯ ಐ.ಜಿ.ಪಿ. ಸಾಹೇಬರು ಭರವಸೆಕೊಟ್ಟು ಈ ವಿಷಯದ ಬಗ್ಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಮೇಲಾಧಿಕಾರಿಯವರಿಗೆ ಮಾಹಿತಿ ಕೊಡಲಾಗಿದೆ. ಈ ವಿಷಯವನ್ನು ಅತೀ ಗಂಭೀರ ಎಂದು ಪರಿಗಣಿಸಿದ್ದು ಇರುತ್ತದೆ ಎಂದು ಸಭೆಯಲ್ಲಿ ತಿಳುವಳಿಕೆ ಹೇಳಿದ್ದರಿಂದ ಮೇಲ್ಕಂಡ ಮುಖಂಡರು ಅದಕ್ಕೆ ಒಪ್ಪಿಕೊಂಡು ಹೊರಟು ಹೋಗಿರುತ್ತಾರೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 06-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಬೀಲೂ ಎಎಸ್ಐ ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನೂರ ರೋಡ ಡಿಗ್ರಿ ಕಾಲೇಜ ಹತ್ತಿರ ಇದ್ದಾಗ ಎದುರುಗಡಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು , ಸದರಿ ಟ್ರಾಕ್ಟರ  ಚಾಲಕನು ನಮ್ಮ ಜೀಪನ್ನು  ನೋಡಿ ತನ್ನ  ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟ್ರಾಕ್ಟರ ಚಕ್ಕ ಮಾಡಲು ಸದರಿ ಟ್ರಾಕ್ಟರದಲ್ಲಿ  ಮರಳು ಇತ್ತು, ಸದರಿ ಟ್ರಾಕ್ಟರ ನೋಡಲಾಗಿ ಅರ್ಜುನ ಮಹೇಂದ್ರ ಕಂಪನಿಯ  ಟ್ರಾಕ್ಟರ ಇದ್ದು ಅದರ  ಇಂಜಿನ ನಂಬರ NNHY06807 ಅಂತ ಇದ್ದು ಸದರಿ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 3,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅತ್ಯಾಚಾರ ಮಾಡಿ ಜೀವದ ಭಯ ಪಡಿಸಿದ್ದರಿಂದ ಆತ್ಮ ಹತ್ಯ ಮಾಡಿಕೊಂಡ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 05/08/2015 ರಂದು ಮದ್ಯಾಹ್ನ 3-30 ಗಂಟೆಗೆ ನಮ್ಮ ಮನೆಯಲ್ಲಿ ನನ್ನ ಮಗಳು ವಯಾ: 16 ವರ್ಷ ಇವಳು ಮನೆಯಲ್ಲಿದ್ದಾಗ ಅದೆ  ಸಮಯಕ್ಕೆ ನಮ್ಮೂರ ರಾಮಪ್ಪ ತಂದೆ ಚಂದಪ್ಪ ಖಂಡಪ್ಪಗೋಳ ಇತನು ನಮ್ಮ ಮಗಳಿಗೆ ಜಬರದಸ್ತಿತಿಂದ ಸಂಭೋಗಾ ಮಾಡಿರುತ್ತಾನೆ.  ಅದೆ ವೇಳೆಗೆ ವಿಷಯ ಗೊತ್ತಾಗಿ ರಾಮಪ್ಪನ ತಂದೆ ಚಂದಪ್ಪ ,ತಾಯಿ ಬಸಮ್ಮ ಅಣ್ಣ ಸಿದ್ದಪ್ಪ ಇವರು ನಮ್ಮ ಮನೆಗೆ ಬಂದು ನನ್ನ ಮಗ ನಿಮ್ಮ  ಮಗಳಿಗೆ ಕೆಡಸಿದರೆನಾಯಿತು ಇದ್ದರೆ ಇರಲಿ ಈ ಸುಳಿ ಸಾಯಿಲಿ ಅಂತಾ ನಮಗೆ ಸಿಕ್ಕ ಪಟ್ಟೆ ಬೈದು ಜೀವದ ಬಯಾ ಹಾಕುತ್ತಿದ್ದಾಗ ನಮ್ಮ  ಮಗಳು ಈರಮ್ಮ ಇವಳು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನನೊಂದು ಇನ್ನೊಂದು  ರೂಮಿನ ಒಳಗೆ ಹೋಗಿ ಕ್ರೀಮಿನಾಶಕ  ಎಣ್ಣೆ ಕುಡಿದಿರುತ್ತಾಳೆ ಅವಳಿಗೆ ಉಪಚಾರ ಕುರಿತು ಜೇವರ್ಗಿ ಸರಕಾರಿ ಆಸ್ಪತ್ರೆಗೆ ತಂದಾಗ ಸಾಯಂಕಾಲ 4-15 ಗಂಟೆಗೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಈಶ್ವರಪ್ಪ ತಂದೆ ಲಕ್ಷ್ಮಣ ಟಣಕೇದಾರ ಸಾ: ಕೊಡಚಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.