POLICE BHAVAN KALABURAGI

POLICE BHAVAN KALABURAGI

24 June 2015

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 23/06/2015 ರಂದು ಯಳಸಂಗಿ ಗ್ರಾಮದ ಕಮಾನ ಹತ್ತಿರ ಮಾಡಿಯಾಳದಿಂದ ನಿಂಬರ್ಗಾಕ್ಕೆ  ಹೋಗುವ ಮುಖ್ಯ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಯಳಸಂಗಿ ಗ್ರಾಮದ ಕಮಾನ ಹತ್ತಿರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದುದದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು  ರಾಜು ತಂದೆ ಮಾಹಾದೇವ ಗುತ್ತೇದಾರ ಸಾ: ಬೆಣ್ಣೆಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 1200/- ಒಂದು ಬಾಲ ಪೆನ್ನ, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ:
ಚೌಕ ಪೊಲೀಸ್ ಠಾಣೆ :ಶ್ರೀ ಶತ್ರುಘನ್‌ ತಂದೆ ವಾಸುದೇವರಾವ ಬೋರಳಕರ ಸಾಃ ರೇವಣಸಿದ್ದೇಶ್ವರ ಕಾಲೋನಿ ಹುಮನಾಬಾದ ರೋಡ ಕಲಬುರಗಿ ರವರು ತಮ್ಮ ಹೀರೊ ಹೊಂಡಾ ಸ್ಪೆಲಂಡರ್‌ ಪ್ಲಸ್‌ ಮೊಟಾರ ಸೈಕಲ ನಂ ಕೆಎ 32  ಆರ್‌ 4072  ನೇದ್ದನ್ನು ದಿನಾಂಕಃ 13.05.2015 ರಂದು ರಾತ್ರಿ ಸಿಟಿ ಬಸನಿಲ್ದಾಣದ ಎದುರಗಡೆ ಇರುವ ಪಾಲ್‌  ಕಾಂಪ್ಲೇಕ್ಸ್‌ ಹತ್ತಿರ ನಮ್ಮ ಮೋಟಾರ ಸೈಕಿಲ್‌‌ ನಿಲ್ಲಿಸಿ  ಎಲ್‌ಜಿ ಡಿಸ್ಟ್ರೀಬ್ಯೂಟರ ಎಲ್ಕ್‌ಟ್ರಾನಿಕ್ಸ್‌ಗೆ ಸಂಬಂದಪಟ್ಟ ಆರ್ಡರಗಳನ್ನು ಪಡೆಯುವ ಕುರಿತು ಪಾಲ್‌‌ ಕಾಂಪ್ಲೇಕ್ಸ್‌ನಲ್ಲಿರುವ ಪಟಣ್ಣಶೇಟ್ಟಿ  ಎಲ್ಕ್‌ಟ್ರಾನಿಕ್ಸ್‌, ನೀಡ್ಸ್‌ ಮೀಜುಕ್‌ ಪಾಯಿಂಟ್‌, ಶ್ರೀ ಲಕ್ಷ್ಮಿ ಅಪ್ಲೇಯಿನ್ಸ್‌, ರವರ ಹತ್ತಿರ  ಆರ್ಡರಗಳನ್ನು  ತೆಗೆದು ಕೊಂಡು ಮರಳಿ ಬಂದು ನೋಡಲಾಗಿ ತಾನು ನಿಲ್ಲಿಸಿರುವ ಮೋಟಾರ ಸೈಕಿಲ್‌‌  ಇರಲ್ಲಿಲ. ಅಲ್ಲಿದ್ದ ಜನರಿಗೆ ವಿಚಾರಿಸಿ ಕೂಡಾ ಎಲ್ಲ ಕಡೆ ಹುಡಕಾಡಿದ್ದು ಮೋ.ಸೈಕಕಲ ಸಿಕ್ಕರಿವದಿಲ್ಲ.  ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 10-06-2015 ರಂದು ಸಾಯಂಕಾಲ 4:00 ಗಂಟೆ ಶ್ರೀ ಜ್ಞಾನೇಶ್ವರ @ ನಾನಾಸಾಬ ಇವರು ಅಫಜಲಪೂರಕ್ಕೆ ಹೋಗಿ ಬಾಂಡೆ ಸಾಮಾನುಗಳನ್ನು ಕರಿದಿ ಮಾಡಿಕೊಂಡು ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು. ಮನೆಯಿಂದ ಹೋದ ಜ್ಞಾನೇಶ್ವರ ಎಷ್ಟೊತ್ತಾದರು ಮರಳಿ ಮನೆಗೆ ಬರದ ಕಾರಣ ಅವರ ಪತ್ನಿ ಜಮುನಾಬಾಯಿ, ಅವರ ತಮ್ಮ ಶ್ರಾವಣ, ಸಂಜಯ ಹಾಗೂ ಅವರ ತಂದೆ  ಸಿದ್ರಾಮ, ನಮ್ಮ ಸಂಭಂದಿಕ ಶ್ರೀಶೈಲ ಎಲ್ಲರೂ ಕೂಡಿ ಅಫಜಲಪೂರ, ಗುಲಬರ್ಗಾ, ಶಹಬಾದ, ವಾಡಿ, ಗಾಣಗಾಪೂರ, ಚೌಡಾಪೂರ, ದುಧನಿ, ಅಕ್ಕಲಕೋಟ, ಸೋಲ್ಲಾಪೂರ, ಹೊಟ್ಟಗಿ, ಪೂನಾ, ಬಿಜಾಪೂರ, ಇಂಡಿ, ಆಲಮೇಲ, ಸಿಂದಗಿ ಕಡೆಗಳಲ್ಲಿ ಹುಡುಕಾಡಿದರೊ ಜ್ಞಾನೇಶ್ವರನ ಪತ್ತೆ ಆಗದ ಕಾರಣ ಅವರ ಪತ್ನಿ ಜಮುನಾಬಾಯಿ ಗಂ. ಜ್ಞಾನೇಶ್ವರ ಇವರು ದಿ: 23-06-2015 ರಂದು ಅಫಜಲಪೂರ ಠಾಣೆಗೆ ಹಾಜರಾಗಿ ತಮ್ಮ ಪತಿ ಜ್ಞಾನೇಶ್ವರ ರವರು ದಿನಾಂಕ 10-06-2015  ರಿಂದ ಕಾಣೆಯಾಗಿದ್ದು ನನ್ನ ಗಂಡನ ಚಹರಾಪಟ್ಟಿ ಹೆಸರು:ಜ್ಞಾನೇಶ್ವರ@ನಾನಾಸಾಬ ತಂ ಸಿದ್ರಾಮ ವಾಗ್ಮೋರೆ ವಯ:34 ವರ್ಷ  ಎತ್ತರ :- 5 ಪೀಟ್ 5 ಇಂಚು ಜಾತಿ:ಗೊಂದಳಿ ಸಾ:ಮಲ್ಲಾಬಾದ ತಾ:ಅಫಜಲಪೂರ ಇವರನ್ನು ಪತ್ತೆ ಮಾಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

23 June 2015

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ರಾಜು ಚವ್ಹಾಣ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಶಹಾ ಬಜಾರ ತಾಂಡಾ ಕಲಬುರಗಿ ಇವರ ಗಂಡ ರಾಜು ಇವನು  ದಿನಾಂಕ 21/06/2015 ರಂದು ಮದ್ಯಾಹ್ನ 1 ಗಂಟೆಗೆ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದನು. ಇದೆ ವೇಳೆಗೆ ನನ್ನ ಅಕ್ಕ ಸುನೀತಾ ಇವಳು ಕೂಡಾ ನಮಗೆ ಮಾತನಾಡಲು ಮನೆಗೆ ಬಂದಿದ್ದರು ನಾನು ಇಬ್ಬರಿಗೂ ಚಹಾ ಮಾಡಿಕೊಟ್ಟೇನು ನನ್ನ ಗಂಡ ರಾಜು ಇತನು ಚಹಾ ಕುಡಿಯುತ್ತಾ ಇದ್ದನು. ಅದೇ ಸಮಯಕ್ಕೆ ನಮ್ಮ ಓಣಿಯ 1) ಅಮರ ಹರಿಜನ 2) ವಿನೋದ ಹರಿಜನ 3) ಪ್ರಕಾಶ ಹರಿಜನ 4) ಸಂದೀಪ @ ವಿಶಾಲ @ ಹರೀ 5) ಸಚೀನ 6) ರಾಹುಲ ಎಲ್ಲರೂ ನಮ್ಮ ಓಣಿಯವರೆಯಾಗಿದ್ದು ಸದರಿಯವರು ನನ್ನ ಗಂಡ ರಾಜು ಇತನು ಚಹಾ ಕುಡಿಯುತ್ತಾ ಕುಳಿತ್ತಿದ್ದಾಗ ಮೇಲಿನ ಎಲ್ಲಾ ಜನರು ಒಮ್ಮೇಲೆ ನಮ್ಮ ಮನೆಯಲ್ಲಿ ಹೋಕ್ಕು ಏ ಮಗನೇ ನೀನು ಯಾವುದೂ ಊರಿನಿಂದ ಬಂದು ನಮಗೆ ಬೈಯುತ್ತಿ ಅಂತಾ ನನ್ನ ಗಂಡ ರಾಜು ಇತನ ಕೈ ಕಾಲು ಹಿಡಿದು ಎಳೆದುಕೊಂಡು ಹೊರಗಡೆ ತಂದು ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿದರು ಬೀಡಬೇಡಿರಿ ಈ ಮಗನಿಗೆ ಅನ್ನುತ್ತಿದ್ದರು ಆಗ ನನ್ನ ಅಕ್ಕ ಸುನೀತಾ ಮತ್ತು ನಾನು ನನ್ನ ಗಂಡನಿಗೆ ಹೊಡೆಯದಂತೆ ಅಡ್ಡ ನಿಂತೇವು ಆಗ ಬಡಿಗೆ, ಕಲ್ಲು, ರಾಡಿನಿಂದ ಹೊಡೆಬಡೆ ಮಾಡುತ್ತಾ ಅಮರ ಹರಿಜನ ಇವನು ತನ್ನ ಇನ್ನೋಳಿದ ಗೆಳೆಯರಿಗೆ ಇವನಿಗೆ ಇಲ್ಲಿ ಮುಗಿಸುವುದು ಬೇಡಾ ತಮ್ಮ ಮೋಟಾರ ಸೈಕಿಲ ಮೇಲೆ ಹಾಕಿರಿ ಅನ್ನುತ್ತಾ ತಮ್ಮ ವಾಹನದ ಮೇಲೆ ನನ್ನ ಗಂಡ ರಾಜು ಇತನಿಗೆ ಎತ್ತಿ ಹಾಕಿಕೊಂಡು ಒತ್ತಾಯದಿಂದ ಗಾಡಿಯ ಮೇಲೆ ಕೂಡಿಸಿಕೊಂಡಿದ್ದು ಹಿಂದೆ ಸಂದೀಪ ಇತನು ಕುಳಿತ್ತಿದ್ದನು. ನಾನು ಮತ್ತು ನನ್ನ ಅಕ್ಕ ಸುನೀತಾ ಒಯ್ಯ ಬೇಡಿರಿ ಅಂತಾ ಹೇಳಿದರು ಸಹ ನಮ್ಮ ಮಾತು ಕೇಳದೇ ಇವನಿಗೆ ದವಾಖಾನೆಗೆ ತೊರಿಸುತ್ತೇವೆ ಅಂತಾ ರಾಜು ಇತನಿಗೆ ಕುಡಿಸಿಕೊಂಡು ಹೋದರು. ಇವರು ನಮ್ಮ ಓಣಿಯವರೆ ಇರುವುದರಿಂದ ನಂತರ ಬಿಡಬಹುದೆಂದು ತಿಳಿದು ಪೋಲಿಸರಿಗೆ ದೂರು ಕೊಟ್ಟಿಲ್ಲಾ. ಬೆಳಿಗ್ಗೆ 9 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಓಣಿಯ ಹುಡುಗರು ರಾಜು ( ಉತ್ತರ ಪ್ರದೇಶ) ಇತನನ್ನು ಕೊಲೆ ಮಾಡಿ ಖತ್ತರಿ ಸಮಾಜದ ಶಹಾಬಜಾರದ ಸ್ಮಶಾನ ಜಾಗೆಯಲ್ಲಿ ಒಗೆದು ಹೋಗಿರುತ್ತಾರೆ. ಎನ್ನುವ ವಿಷಯ ಗೊತ್ತಾಗಿದ್ದು ಮಾನ್ಯರೆ ನನ್ನ ಪತಿಯವರಾದ ರಾಜು ಉತ್ತರ ಪ್ರದೇಶ ಇತನಿಗೆ ನನ್ನ ಮನೆಯಿಂದ ಹೊಡೆದು ಎಳೆದುಕೊಂಡು ಹೋದ ನಮ್ಮ ಓಣಿಯವರಾದ 1) ಅಮರ ಹರಿಜನ 2) ವಿನೋದ ಹರಿಜನ 3) ಪ್ರಕಾಶ ಹರಿಜನ 4) ಸಂದೀಪ @ ವಿಶಾಲ @ ಹರೀ 5) ಸಚೀನ 6) ರಾಹುಲ ಮತ್ತು ಇತರೆ ಜನರು ಎಲ್ಲರೂ ಸೇರಿಕೊಂಡು ಕೊಲೆ ಮಾಡಿರುತ್ತಾರೆಂದು ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 21-06-2015 ರಂದು ರಾತ್ರಿ ನಮ್ಮ ತಮ್ಮ ಹಣಮಂತ ಇವನು ನಮ್ಮ ಮೋಟರ ಸೈಕಲ್ ನಂ  ಕೆ.ಎ-32/ಇ.ಬಿ-2859 ನೇದ್ದನ್ನು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿರುತ್ತಾನೆ. ಅಂದಾಜ 10;15 ಪಿ.ಎಂ ಸುಮಾರಿಗೆ ನಮ್ಮೂರ ಯಲ್ಲಪ್ಪ ತಂದೆ ನಿಂಗಪ್ಪಾ ತಳವಾರ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ಮಹಾದೇವ ಸುತಾರ ರವರು ಕೂಡಿ ನಮ್ಮ ಮೋಟಾರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮೂರ ಬಲಭೀಮ ಬಳೂಂಡಗಿ ರವರ ಹೊಲದ ಹತ್ತಿರ ಇದ್ದಾಗ ನಮ್ಮ ಮುಂದೆ ಒಂದು ಟ್ರ್ಯಾಕ್ಟರ್ ಹೋಗುತ್ತಿತ್ತು, ಅದರ ಚಾಲಕನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ರಸ್ತೆ ಪೂರ್ತಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದನು. ಅದೇ ಸಮಯಕ್ಕೆ ಆನೂರ ಗ್ರಾಮ ಕಡೆಯಿಂದ ಒಂದು ಮೋಟರ ಸೈಕಲ ಬರುತ್ತಿದ್ದು, ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಎದುರು ಬರುತ್ತಿದ್ದ ಮೋಟರ ಸೈಕಲಗೆ ಒಮ್ಮೇಲೆ ಜೋರಾಗಿ ಡಿಕ್ಕಿ ಹೊಡೆದನು. ಆಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನಿಂದ ಇಳಿದು ಓಡಿ ಹೋದನು. ನಂತರ ನಾನು ಮತ್ತು ನನ್ನೊಂದಿಗೆ ಇದ್ದ ಮಹಾದೇವ ಸುತಾರ ರವರು ಕೂಡಿ ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ನೋಡಿದಾಗ ಅವನು ನಿಮ್ಮ ತಮ್ಮ ಹಣಮಂತ ಇದ್ದನು, ಅವನಿಗೆ ಬಲಗಡೆ ಮೊಳಕಾಲ ಮೇಲೆ ಭಾರಿ ಒಳಪೆಟ್ಟಾಗಿರುತ್ತದೆ, ಮತ್ತು ಬಲಗಾಲ ಬಟ್ಟಗಳಿಗೆ ಹಾಗು ಬಲಗೈ ಬಟ್ಟಗಳಿಗೆ ಮತ್ತು ಬಲ ಭುಜದ ಮೇಲೆ ತರಚಿದ ಗಾಯಗಳು ಆಗಿರುತ್ತವೆ. ಅಂತಾ ತಿಳಿಸಿರುತ್ತಾರೆ ಅಂತಾ ²æÃ ಗುರುದೇವ ತಂದೆ ಚನ್ನಪ್ಪ ಬಳೂಂಡಗಿ  ಸಾ|| ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ:21/06/2015 ರಂದು ಬೆಳಗ್ಗಿನ ಜಾವ 06-00 ಗಂಟೆ ಸುಮಾರಿಗೆ ನಮ್ಮೂರಿನಲ್ಲಿ ಜನರು ಶಿವಲಿಂಗೇಶ್ವರ ದೇವರ ಮೂರ್ತಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮಾತಾಡುವುದನ್ನು ಕೇಳಿ ನಾನು ಹಾಗೂ ಗ್ರಾಮದ ಕೆಲವು ಜನರು ಕೂಡಿ ಶಿವಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ನೋಡಲಾಗಿ ದೇವಸ್ಥಾನದ ಗರ್ಭಗುಡಿಯ ಬಾಗಿಲ ಮುರಿದು ಶಿವಲಿಂಗೇಶ್ವರ ಮೂರ್ತಿ ಕಳ್ಳತನವಾಗಿದ್ದು ಕಂಡು ಬಂದಿರುತ್ತದೆ. ದಿನಾಂಕ:21/06/2015 ರ ರಾತ್ರಿ 12-30 ಗಂಟೆಯಿಂದ ಬೆಳಗಿನ ಜಾವ 04-00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುರಿದು ಹಿತ್ತಾಳೆಯಲ್ಲಿ ಪಂಚಧಾತು ಮಿಶ್ರಿತ ಶಿವಲಿಂಗೇಶ್ವರ ಮೂರ್ತಿಯನ್ನು ಕಳ್ಳತನ ಮಾಡಿಕೊಮಡು ಹೋಗಿರುತ್ತಾರೆ.  ಮೂರ್ತಿಯು ಅಂದಾಜು 10 ರಿಂದ 12 ಸಾವಿರ ರೂಪಾಯಿಯ ಮೌಲ್ಯ ಹೊಂದಿರುತ್ತದೆ. ಅಂತಾ ಶ್ರೀ ಯೂನುಸ ಪಟೇಲ ತಂದೆ ಅಲ್ಲಾಭಕ್ಷ ಮಾಲಿ ಪಟೇಲ ಸಾ:ಕುರಿಕೋಟಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 June 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 21.06.2015 ರಂದು ಶ್ರೀಮತಿ ಬಾಗಮ್ಮ ಗಂಡ ಹೊನ್ನಪ್ಪ ಬಾಗಲಿ ಸಾಃನಂದಳ್ಳಿ ತಾಃ ಶಹಾಪೂರ ಹಾಃವಃ ಸುರಪೂರ. ರವರು ಮತ್ತು ನನ್ನ ಗಂಡ ಹೊನ್ನಪ್ಪ ತಂದೆ ಹಣಮಂತ ಬಾಗಲಿ, ತಾಯಿ ಚಂದಮ್ಮ ಗಂಡ ಯಂಕಪ್ಪ ಮೇಲಿನಮನಿ. ನಮ್ಮ ಅಣ್ಣ-ತಮ್ಮಕೀಯ ಅಂಬಮ್ಮ ಗಂಡ ಪರಶುರಾಮ ಬೊವಿ ಎಲ್ಲರೂ ಕೂಡಿಕೊಂಡು ನನಗೆ ಮಕ್ಕಳ ಸಂಭಂದವಾಗಿ ದೇವರು ಕೇಳಲು ಸುರಪೂರದಿಂದ ಜೇವರಗಿ ತಾಲೂಕಿನ ಮದರಿ ಗ್ರಾಮಕ್ಕೆ ಬಂದಿರುತ್ತೆವೆ. ಮದರಿ ಗ್ರಾಮದಲ್ಲಿ ಪೂಜಾರಿ ಹತ್ತಿರ ದೇವರು ಕೇಳಿಕೊಂಡು ಮರಳಿ ಸುರಪೂರಕ್ಕೆ ಹೋಗಲು ಮದರಿಯಿಂದ ಒಂದು ಟಂಟಂ ವಾಹನದಲ್ಲಿ ನಾವು ಮತ್ತು ಲಾಲಬೀ ಗಂಡ ಮೈಹಿಬೂಬಸಾಬ ಹರಕಾರಿ ಎಲ್ಲರೂ ಕುಳಿತುಕೊಂಡು ಜೇವರಗಿ ಕಡೆಗೆ ಹೊರಟಿದ್ದೆವು. ಮದ್ಯಾನ ಮದರಿ-ಕಟ್ಟಿ ಸಂಗಾವಿ ರೋಡ, ಕಟ್ಟಿ ಸಂಗಾವಿ ಗ್ರಾಮದ ಸಮೀಪ ರೊಡಿನಲ್ಲಿ  ಟಂಟಂ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಯತನದಿಂದ ನಡೆಸಿಕೊಂಡು ಒಮ್ಮಲೆ ಬ್ರೇಕ್ ಹಾಕಿದರಿಂದ ಟಂಟಂ ರೋಡಿನಲ್ಲಿ ಪಲ್ಟಿಯಾಗಿ ಬಿತ್ತು ಈ ಅಪಘಾತದಲ್ಲಿ ನನಗೆ ಎಡಗಡೆಯ ಕಿವಿಯ ಹತ್ತಿರ ರಕ್ತ ಗಾಯವಾಗಿದ್ದು ನನ್ನ ಗಂಡನಿಗೆ ಬೆನ್ನು ಮೇಲೆ, ಬಲಕಾಲಿನ ಮೊಳಕಾಲಿನ ಹತ್ತಿರ ತರಚಿದ ರಕ್ತಗಯವಾಗಿದ್ದು ಮತ್ತು ಎಡಕಾಲು ಮೊಳಕಾಲು ಹತ್ತಿರ ಮುರಿದಿರುತ್ತದೆ. ಮತ್ತು ತಲೆಗೆ ಬಾರಿ ಗುಪ್ತ ಪೆಟ್ಟಾಗಿದ್ದು ನನ್ನ ತಾಯಿಗೆ ಮತ್ತು ಅಂಬಮ್ಮ ಇವಳಿಗೆ ಹಾಗೂ ಲಾಲಬೀ ಇವಳಿಗೆ ಸಾದಾ ಮತ್ತು ಬಾರಿ ಪೆಟಾಗಿರುತ್ತವೆ. ನಂತರ ಟಂಟಂ ನಂ ನೋಡಲಾಗಿ ಕೆ.ಎ-32, ಬಿ-9353 ನೇದ್ದು ಇತ್ತು. ಅದರ ಚಾಲಕನಿಗೆ ಹೆಸರು ಕೆಳಲಾಗಿ ಅವನು ತನ್ನ ಹೆಸರು ಸಾಯಿಬಣ್ಣಾ ತಂದೆ ಶರಣಪ್ಪ ಸುಬೇದಾರ ಅಂತಾ ಹೇಳಿ ನಮಗಾದ ಗಾಯ ನೋಡಿ ತನ್ನ ಟಂಟಂನ್ನು ಚಾಲು ಮಾಡಿಕೊಂಡು ಟಂಟಂ ಸಮೇತ ಓಡಿ ಹೊದನು. ನಂತರ ನಾವು ಎಲ್ಲರೂ ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರಕ್ಕೆ ಸೇರಿಕೆಯಾಗಿರುತ್ತವೆ. ನಂತರ ನಾನು ಮತ್ತು ನನ್ನ ತಾಯಿ ಹಾಗೂ ಅಂಬಮ್ಮ ಕೂಡಿಕೊಂಡು ನನ್ನ ಗಂಡನಿಗೆ ಭಾರಿ ಪೆಟ್ಟಾಗಿದ್ದರಿಂದ ಅವನಿಗೆ ಹೆಚ್ಚಿನ ಉಪಚಾರಕ್ಕಾಗಿ ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೊಗುತ್ತಿದ್ದಾಗ ಮಾರ್ಗಮದ್ಯ ಕಟ್ಟಿ ಸಂಗಾವಿ ಬ್ರೀಡ್ಜ್ ಹತ್ತಿರ ರೊಡಿನಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 21.06.2015 ರಂದು ರಾತ್ರಿ ಜೇವರಗಿ ಪಟ್ಟಣದ ಸತ್ತರ್‌ಸಾಬ್ ಪೆಟ್ರೋಲ್‌ ಪಂಪ್ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ಕಾರ್ ನಂ ಕೆ.ಎ28ಎಮ್9242ನೇದ್ದರ ಚಾಲಕನು ತನ್ನ ಕಾರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾನು ನಡೆಸುತ್ತಿದ್ದು ಕಾರ್‌ ನಂ ಕೆ.ಎ32ಎನ್1344 ನೇದ್ದಕ್ಕೆ ಎದುರುಗಡೆಯಿಂದ ಡಿಕ್ಕಿಪಡಿಸಿ ಸೊಮನಗೌಡ ಮತ್ತು ಮರೆಪ್ಪ ಇವರಿಗೆ ಗಾಯಗೊಳಿಸಿ ತನ್ನ ಕಾರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಶ್ರೀ ಸಂತೋಷ ತಂದೆ ನಾನಾಗೌಡ ಮಾಲಿ ಪಾಟೀಲ ಸಾ : ಹಾಲಗಡ್ಲಾ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಶಿವಶರಣಪ್ಪ  ತಂದೆ ನೀಲಕಂಠಪ್ಪ ಸಾಹುಕಾರ ಸಾ:ತೆಲ್ಕೂರ ಹಾವ:ಟಂಗಳಿ ಇವರು ದಿನಾಂಕ: 21-06-2015 ರಂದು  ಗುಂಡೆರಾವ ಸಲಗಾರ  ಮತ್ತು ಅಯ್ಯಪ್ಪ ತಂದೆ ಶರಣಪ್ಪ ಸಾಹುಕಾರ ಇವರೊಂದಿಗೆ ತೆಲ್ಕೂರ ಗ್ರಾಮಕ್ಕೆ ನಮ್ಮ ಹೊಲ ತೋರಿಸಲು ನನ್ನ ಮೋಟಾರು ಸೈಕಲ್ ನಂ ಕೆಎ-04ನ   ಎಸ್- 7572 ಕವಾಸ್ಕಿ ಬಜಾಜ ಮೇಲೆ ಟೆಂಗಳಿ ಗ್ರಾಮದಿಂದ ತೆಲ್ಕೂರ ಗ್ರಾಮಕ್ಕೆ ಹೊರಟಿದೇವು .ನಮ್ಮ ಮೋ.ಸೈಕಲ್ ಗುಂಡೆರಾವ ಸಲಗಾರ ಇತನು ನಡೆಸುತ್ತಿದ್ದನು ಮದ್ಯಾಹ್ನ  ಸೇಡಂ ದಾಟಿ ಬಿಬ್ಬಳಿ ಕ್ರಾಸ್  ಹತ್ತಿರ  ನಾವು ಹೋಗುತ್ತಿದ್ದಾಗ ನಮ್ಮ ಸೈಡಿಗೆ ಇನ್ನೊಂದು ಲಾರಿ ನಂ ಎಮ್-ಹೆಚ್- 48- ಜೆ 0372 ನ್ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದವನೇ ನಮ್ಮ ಮಗ್ಗಲಲ್ಲಿ ರೋಡಿನ ಮೇಲೆ ಹೋಗುತ್ತಿದ್ದನು ಬಿಬ್ಬಳಿ ಕ್ರಾಸ್ ಎಡ ತಿರುವಿನಲ್ಲಿ  ಯಾವುದೇ ಸೂಚನೆ ನಿಡದೆ ಒಮ್ಮಲೇ ಎಡ ತಿರುವಿದಾಗ ನೇವರಾಗಿ ಹೋಗುತ್ತಿದ್ದ ನಮ್ಮ ಮೋ ಸೈಕಲಿಗೆ ಡಿಕ್ಕಿ ಹೊಡೆದು  ಅಪಘಾತ ಪಡಿಸಿದ್ದರಿಂದ ಲಾರಿಯ ಎಡಗಡೆ ಮುಂದಿನ ಗಾಲಿಯಲ್ಲಿ ಗುಂಡೆರಾವ ಇವರು ಸಿಕ್ಕು  ಲಾರಿ ಗಾಲಿ ಅವರ ಎಡ ಎದೆಗೆ ಹತ್ತಿದ್ದರಿಂದ ಪಕ್ಕೆಲಬು ಮುರಿದಿದ್ದು ,ಒಳಪೆಟ್ಟು ಆದದಂತೆ ಕಾಣುತ್ತದೆ , ಬಲಗಾಲಿನ ಪಾದಕ್ಕೆ, ಎಡಗೈ ಮೊಳಕೈಗೆ ಎಡಗಾಲು ತೊಡೆಗೆ ಮತ್ತು ಶಿಸ್ನಕ್ಕೆ  ಹಾಗು ಎದೆಗೆ ಅಲ್ಲಲ್ಲಿ ತರಚಿದ ಗಾಯಗಳಲಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ನನಗೂ ಎಡಗಾಲು ಮೊಳಕಾಲಿಗೆ, ಮತ್ತು ಎಡಗಾಲಿನ ಪಾದಕ್ಕೆ ರಕ್ತ ಗಾಯವಾಗಿರುತ್ತದೆ. ಅಯ್ಯಪ್ಪ ಸಾಹುಕಾರ ಇವರಿಗೂ ಕೂಡ ಬಲಗಾಲಿನ ಮೊಳಕಾಲಿಗೆ ಪಾದಕ್ಕೆ ಗುಪ್ತ ಗಾಯ ಹಾಗು ರಕ್ತ ಗಾಯವಾಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬೋಜಿ ತಂದೆ ನಾಗಪ್ಪ ಖಡಕೆ ಸಾ: ನಾಡರ ದಾಲಮೀಲ್ ಹಿಂದುಗಡೆ ಮತ್ತು ಮು: ದರಬಾರ ಹೊಟೇಲ ಹಿಂದುಗಡೆ ಶಿವಾಜಿ ನಗರ ಕಲಬುರಗಿ ರವರ ಮಗನಾದ ವಿಠಲ ತಂದೆ ಅಂಭೋಜಿ ರವರು ದಿನಾಂಕ 14.06.2015 ರಂದು ಸಾಯಂಕಾಲ 6 ಗಂಟೆಗೆ ಮನೆಯಿಂದ ಹೊರ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಿ ಇಲ್ಲಿ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.