POLICE BHAVAN KALABURAGI

POLICE BHAVAN KALABURAGI

17 June 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ: 16.062015 ರಂದು ಠಾಣಾ ವ್ಯಾಪ್ತಿಯ ಗಂಜ ಬಸ್ ಸ್ಟ್ಯಾಂಡದ ಜಗದಂಭಾ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಶ್ರೀ ಮೋಹನ ಮಾನೆ ಪಿ.ಎಸ್.ಐ (ಅ.ವಿ) ಚೌಕ ಪೊಲೀಸ್ ಠಾಣೆ ಕಲಬುರಗಿ ರವರು  ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿದ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಪಿ.ಐ ಸಾಹೇಬರಾದ ಉಮಾಶಂಕರ ಬಿ. ರವರಿಗೆ ಸ್ಥಳಕ್ಕೆ ಬರುವಂತೆ ವಿನಂತಿಸಿಕೊಂಡು ಅವರ ನೇತೃತ್ವದಲ್ಲಿ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಗಂಜ ಬಸ್ ಸ್ಟ್ಯಾಂಡದ ಜಗದಂಭಾ ಹೊಟೇಲ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ಆರೀಫ್ ತಂದೆ ರಾಜಾ ಪಟೇಲ ಸಾ: ಬನ್ನೂರು (ಔರಾದ (ಬಿ) ತಾ:ಜಿ: ಕಲಬುರಗಿ ಹಾ.ವ: ಖಧೀರ ಬೈ ಇವರ ಮನೆಯಲ್ಲಿ ಬಾಡಿಗೆ ಮಿಜಗುರಿ ಕಲಬುರಗಿ  ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿಮಾಡಲಾಗಿ ಅವನ ಹತ್ತಿರ ನಗದು ಹಣ 3040/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್, ಒಂದು ಮೋಬಾಯಿಲ್ ಕರಿಯ ಬಣ್ಣದ್ದು ಅ.ಕಿ. 500/- ರೂ, ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲನ್ನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ನರೋಣಾ ಠಾಣೆ : ಶ್ರೀ. ವಿಶ್ವನಾಥ ತಂದೆ ಸಿದ್ದಪ್ಪ  ಮರಾಠ  ಸಾ;ಲಾಡಚಿಂಚೋಳಿ ಹಾ:ವ:ಮುನ್ನಳ್ಳಿ ಇವರು ದಿನಾಂಕ 13/06/2015 ರಂದು ಮುಂಜಾನೆ ಅವರ ಮಗನಾದ ಸಿದ್ದರಾಮ ವಯಸ್ಸು 03 ವರ್ಷ ಇತನಿಗೆ ಗ್ರಾಮದ ಸಂತೆ ಸೇರುವ ಸ್ಥಳದಲ್ಲಿ ಬಿಟ್ಟಿರುವಾಗ ಯಾರೋ ಸಂತೆಗೆ ಬಂದಿರುವ  ಜನರಲ್ಲಿ ಯಾರೋ ಯಾವದೋ ಉದ್ದೇಶದಿಂದ ಸಿದ್ದರಾಮನನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು  :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 16-06-2015 ರಂದು ರಾತ್ರಿ ಶ್ರೀ ರಮೇಶ ತಂದೆ ಮಲ್ಲೇಶಪ್ಪ ಚಿತ್ತಾಪೂರ  ಸಾ: ಸುಂದರ ನಗರ    ಕಲಬುರಗಿ ರವರು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ ಇಬ್ಬರೂ ಕೂಡಿಕೊಂಡು ಆತನ ಮೊಟಾರ ಸೈಕಲ ನಂ ಕೆಎ-32-ಕೆ-7332 ನೇದ್ದರ ಮೇಲೆ ಶ್ರೀ  ಶರಣ ಬಸವೆಶ್ವರ ದೆವಸ್ಥಾನಕ್ಕೆ ಹೋಗುವ ಕುರಿತು ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಲ್ಲಿನಾಥ ಇತನು ಹಿಂದೆ ಕುಳಿತಿಕೊಂಡು ಜಿ.ಜಿ. ಹೆಚ್ ಸರ್ಕಲ, ಜಗತ ಸರ್ಕಲ ಮುಖಾಂತರವಾಗಿ ಶ್ರೀ ಶರಣ ಬಸವೇಶ್ವರ ದಾವಸ್ಥಾನಕ್ಕೆ ಹೋಗುವಾಗ ದಾರಿ ಮದ್ಯ ಯಲ್ಲಮ್ಮ ಟೆಂಪಲ ಎದುರು ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಇಡಿ-9124 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ  ನನಗೆ ಬಲಗಾಲು ಮೊಳಕಾಲಿಗೆ ಭಾರಿ ರಕ್ತಗಾಯ, ಎಡಗಾಲು ಪಾದದ ಮೆಲ್ಬಾಗದಲ್ಲಿ ರಕ್ತಗಾಯ, ಎಡ ಕಿವಿಗೆ ರಕ್ತಗಾಯ ಬಲಗೈ ಕಿರುಬೆರಳಿಗೆ ಗುಪ್ತಪೆಟ್ಟು, ಭಲ ಬುಜಕ್ಕೆ ತರಚಿದ ಗಾಯಗೊಳಿಸಿದ್ದು  ಮಲ್ಲಿನಾಥ ಇತನಿಗೆ ಯಾವುದೆ ಗಾಯಗಳಾಗಿರುವದಿಲ್ಲಅಪಘಾತಗೊಳಿಸಿದ  ಮೋಟಾರ ಸೈಕಲ ಸಾವರನು ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀಮತಿ  ಸಂಗೀತಾ ಗಂಡ ನೀಲು ರಾಠೋಡ ಸಾ|| ಮುದಬಾಳ ಬಿ ತಾಂಡಾ ದಿನಾಂಕ 16.06.2015 ರಂದು ಸಾಯಂಕಾಲ ತಾನು ಮತ್ತು ನಮ್ಮೂರ ಸಂಗೀತಾ ಗಂಡ ನೀಲು ರಾಠೋಡ, ಬಾಬು ತಂದೆ ಬೋಜು ನಾಯಕ ರಾಠೋಡ ,ರೇಣುಕಾ ಗಂಡ ಭೀಮು ರಾಠೋಡ ಎಲ್ಲರು ಕುಳಿತುಕೊಂಡು ಆರೋಪಿತನು ನಡೆಸುತ್ತಿದ್ದ ಟಂಟಂ ನಂ ಕೆ.ಎ33-9983 ನೇದ್ದರಲ್ಲಿ ಕೂಳಿತುಕೊಂಡು ಹೋಗುತ್ತಿದ್ದಾಗ ಸಂಗಮೇಶ ಬಿರಾದಾರ ಸಾ|| ಅವರಾದ್ ಇವರ ಹೊಲದ ಹತ್ತಿರ ಜೇವರಗಿ ಶಹಾಪುರ ಮೇನ್‌ ರೋಡ್‌ ಮೇಲೆ ಹೋಗುತ್ತಿದ್ದಾಗ ನಾವು ಕುಳಿತ ಟಂಟಂ ಚಾಲಕನು ಮುಂದೆ ಹೋಗುತ್ತಿದ್ದ ಬಸ್‌ಗೆ ಕಟ್ ಹೋಡೆಯಲು ಹೋಗಿ ಟಂಟಂ ಅನ್ನು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟಂಟಂ ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಶಿವಾನಂದ ತಂದೆ ಶಿವಶರಣಪ್ಪ ಸಂಗೋಳಗಿ ಸಾ: ಜಿಡಿಎ ಕಾಲೋನಿ ಶಹಾಬಜಾರ  ಕಲಬುರಗಿ ಇವರು  ಖಾಸಗಿಯಾಗಿ ಗಾರ್ಡನ ಕೆಲಸ ಗುತ್ತಿಗೆ ಪಡೆದು ಕೆಲಸ ಮಾಡಿಕೊಂಡು ತಾಯಿಯವರೊಂದಿಗೆ ವಾಸವಾಗಿರುತ್ತೇನೆ. ನನಗೆ ಇನ್ನೂ ಮದುವೆ ಆಗಿರುವುದಿಲ್ಲಾ. ಮನೆಯಲ್ಲಿ ನಮ್ಮ ತಾಯಿ ಇವರು ಒಬ್ಬರೆ ಇರುತ್ತಾರೆ. ನನ್ನಂತೆ ಸಹ ನಮ್ಮ ಓಣಿಯಲ್ಲಿ ಶ್ರೀಕಾಂತ ಮತ್ತು ಸುನೀಲ ಅನ್ನುವವರು ವಾಸವಿದ್ದು ಅವರ ಪರಿಚಯ ಇರುತ್ತದೆ. ಇಬ್ಬರು ಗೆಳೆಯರು ದಿನಾಂಕ 16.06.2015 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ನಾನು ಸುನೀಲ ಇಬ್ಬರೂ ಸಿನಿಮಾ ನೋಡಿಕೊಂಡು ಸರಾಯಿ ಕುಡಿದು ಮನೆಗೆ ಹೋಗುವ ಕುರಿತು ದರ್ಬಾರ ಹೊಟೇಲದ ಹಿಂದೆ ಇರುವ ರೋಡಿಗೆ ನಡೆದುಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಶ್ರೀಕಾಂತ ನನ್ನ ಗೆಳೆಯ ಸಿಕ್ಕಿದ್ದು ನನಗೆ ನೋಡಿ ನನಗೆ ಕುಡಿಯಲಿಕ್ಕೆ ಸ್ವಲ್ಪ ಹಣ ಕೂಡು ಅಂತಾ ಕೇಳಿದಕ್ಕೆ ನಾನು ನನ್ನ ಹತ್ತಿರ ಸದ್ಯ ಹಣ ಇಲ್ಲಾ ಎಲ್ಲಾ ಹಣ ಈಗ ನಾನು ಖರ್ಚು ಮಾಡಿರುತ್ತೆನೆ. ಅಂತಾ ಹೇಳಿದಕ್ಕೆ ಶ್ರೀಕಾಂತ ಇತನು ನನ್ನೊಂದಿಗೆ ಜಗಳಕ್ಕೆ ಬಿದ್ದು ರಂಡಿ ಮಗನೇ ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಹೇಳಿದರೆ ಇಲ್ಲಾ ಅನ್ನುತ್ತಿಯಾ ಬೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದನು. ಇದರಿಂದ ನಾನು ಕೂಡಾ ಸಿಟ್ಟಿನಲ್ಲಿ ಅವನಿಗೆ ಕೈಯಿಂದ 2-3 ಏಟು ಹೊಡೆಯಲು ಅವನು ನನಗೆ ಅಲ್ಲಿಯೆ ಬಿದ್ದ ಒಂದು ಹಿಡಿಗಾತ್ರದ ದಪ್ಪ ಕಲ್ಲಿನಿಂದ ತಲೆಗೆ ಜೋರಾಗಿ ಹೊಡೆದಿದ್ದು ಇದರಿಂದ ನನ್ನ ತಲೆಗೆ ಬಡಿದು ಒಮ್ಮೇಲೆ ರಕ್ತ ಸೊರಲಾರಬಿಂಸಿತ್ತು ಇದರಿಂದ ನಾನು ಚಿರಾಡಲು ದರ್ಬಾರ ಹೊಟೇಲ ರೋಡಿನ ಬದಿಯಿಂದ ಬರುತ್ತಿದ್ದ ಕೆಲವು ಜನರು ಓಡಿ ಬರಲು ಸದರಿ ಶ್ರೀಕಾಂತ ಇತನು ನನಗೆ ಹೊಡೆದು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 June 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 15-06-2015 ರಂದು ಮೃತ ಅಬ್ದುಲ್ ಬಾಶಾ ಇತನು ಏತ ನಿರಾವರಿ ಕಾಲುವೆ ನಿರ್ಮಿಸುವ ಕೆಲಸದಲ್ಲಿದ್ದಾಗ ಹಿಟಾಚಿಯ ಮಾಲಿಕ ತನ್ನ ಬುಲೇರೋ ಗಾಡಿಯಲ್ಲಿ ಡೀಸಲ್ ಕೊಟ್ಟು ವಾಪಸ್ ಬರುತ್ತಿದ್ದಾಗ ಅಬ್ದುಲ್ ಬಾಶಾ ಇತನು ಹಿಟಾಚಿ ನಿಲ್ಲಿಸಿ ಮೇಲುಗಡೆ ಕೆನಾಲ್ ರೋಡಿನ ಮೇಲೆ ಬರುತ್ತಿದ್ದಂತೆ ಬುಲೆರೋ ವಾಹನ ಸಂಖ್ಯೆ ಕೆ ಎ 28 ಎನ್ 6491 ನೆದ್ದರ ಚಾಲಕನಾದ ಯಲ್ಲಪ್ಪ ಇತನು ತನ್ನ ವಾಹನ ನಿರ್ಲಕ್ಷತನದಿಂದ ನೆಡೆಸಿಕೊಂಡು ಬಂದು ಮೃತ ಅಬ್ದುಲಬಾಶಾ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಆತನು ಕೆಲಸಕ್ಕೆ ನಿಂತ ಹಿಟಾಚಿಯ ಚೈನಿನ ಮೇಲೆ ಬಿದ್ದಾಗ ಅವನ ಎಡಗಾಲ ಮೊಳಕಾಲಿನ ಮೇಲ್ಭಗಾದಲ್ಲಿ ಎರಡು ಕಡೆ  ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರ ಒಯ್ದು ಸೇರಿಕೆ ಮಾಡಿದಾಗ ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಡಾ|| ವಿನೋದಕುಮಾರ ಇವರು ಠಾಣೆಗೆ ದಿನಾಂಕ 15-06-2015 ರಂದು ಸಾಯಂಕಾಲ ತಮ್ಮ  ಕಾರ ಟಿಪಿ ನಂ ಕೆಎ-25-ಟಿಎ-007437 ಚೆಸ್ಸಿ ನಂ MDHHSNAW5E8-014755  ನೇದ್ದರಲ್ಲಿ ನನ್ನ ಸಂಬಂದಿಕರಿಗೆ ರೈಲ್ವೇ ಸ್ಟಷನಕ್ಕೆ ಬಿಟ್ಟು ವಾಪಸ್ಸ ಮನೆಗೆ ಬರುವ ಕುರಿತು ಐವಾನ-ಈ-ಷಾಹಿ , ಗುಲ್ಲಾಬಾವಾಡಿ, ಏಷಿಯನ್ ಮಹಲ,ಮುಖಾಂತರ ಡಿ.ಎ.ಆರ್ ಮೇನ ಗೆಟ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ಹಳೆ ಡಿಪಿಓ ಕ್ರಾಸ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-36-ಕೆ-6424 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿಗೆ ಹಿಂದಿನಿಂದ ಬಂದು ಕಾರಿನ ಬಲಗಡೆ ಹಿಂದಿನ ಡೋರಿಗೆ ಡಿಕ್ಕಿಪಡಿಸಿ ಹಾಗೆ ಎಡಗಡೆ ಹಿಂದಿನ ಬಂಪರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ  ಕಾರ ಡ್ಯಾಮೇಜ ಮಾಡಿ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಮಲಕಾಜಪ್ಪ ಸುತಾರ ಸಾ|| ಭೂಸನೂರ ರವರು ತನ್ನ ಮನೆಯ ಜಾಗೆಯ ಸಂಭಂಧ ತನ್ನ ನಗೇಣಿಯ ಸೊಸೆಯಾದ ಅನಿತಾ ಗಂಡ ಗುರುನಾಥ ಸುತಾರ ಇವಳು ದಿನಾಂಕ 14-06-2015 ರಂದು ಸಾಯಂಕಾಲ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿ ನೂಕಿಸಿಕೊಟ್ಟು ಜೀವ ಭಯ ಪಡಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 June 2015

Kalaburagi District Reported Crimes

            ಗ್ರಾಮೀಣ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ 03 ವರ್ಷಗಳ ಹಿಂದೆ ನಡೆದ ಕೊಲೆ ಕೇಸಿನ ಮೂರು ಜನ ಆರೋಪಿತರ ಬಂಧನ.
ಗ್ರಾಮೀಣ ಠಾಣೆ :  ದಿನಾಂಕ 23/04/2012 ರಂದು ರಾತ್ರಿ 9:00 ಸುಮಾರಿಗೆ ತಾವರಗೇರಾ ಗ್ರಾಮದ ಅಡವಯ್ಯ ತಂದೆ ವೀರಯ್ಯ ಮಠಪತಿ ಈತನು ಬಹರ್ಿದೆಸೆಗೆಂದು ಹೋದಾಗ, ಮಹಾಂತಯ್ಯ ಮಠಪತಿ ಎಂಬುವವರಿಗೆ ಸೇರಿದ ಜಮೀನಿನ ಪಶ್ಚಿಮದ ಮೂಲೆಯಲ್ಲಿ ಯಾರು ದುಷ್ಕಮರ್ಿಗಳು ಯಾವುದೋ ಉದ್ದೇಶಕ್ಕಾಗಿ ರಾತ್ರಿ ವೇಳೆಯಲ್ಲಿ ಅಡವಯ್ಯನಿಗೆ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು, ಮಮರ್ಾಂಗವನ್ನು ಹಿಸುಕಿ ಕೊಲೆ ಮಾಡಿದ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆತನ ಹೆಂಡತಿ ಅನ್ನಪೂರ್ಣ @ ಅರೂಣಾ ಇವರು ಕೊಟ್ಟ ಫಿಯರ್ಾದಿ ಮೇಲಿಂದ ಮೊಕದ್ದಮೆ ಸಂ. 127/2012 ಕಲಂ 302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.    
            ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಮೂರು ವರ್ಷದಿಂದ ಮೊದಲಿನ ಅಧಿಕಾರಿಗಳು ಮತ್ತು ಸಿಬ್ಬಂದಿರವರು ಸತತವಾಗಿ ಪತ್ತೆ ಕಾರ್ಯ ಕೈಕೊಂಡಿರುತ್ತಾರೆ. 
            ಪಕರಣದಲ್ಲಿ ಪತ್ತೆಗಾಗಿ ಮಾನ್ಯ ಎಸ್.ಪಿ ಕಲಬುರಗಿ, ಮಾನ್ಯ ಅಪರ ಎಸ್.ಪಿ ಕಲಬುರಗಿ ಹಾಗೂ ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ, ಇವರ ಮಾರ್ಗದರ್ಶನದಲ್ಲಿ ಕಲಬುರಗಿ ಗ್ರಾಮೀಣ ವೃತ್ತದ ಸಿಪಿಐರವರಾದ ಶ್ರೀ ಎ. ವಾಜೀದ ಪಟೇಲ್ ರವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಶರಣಬಸಪ್ಪ ಕೋಡ್ಲಾ, ಶ್ರೀ ಉದ್ದಂಡಪ್ಪ ಮಣ್ಣೂರಕರ ಪಿಎಸ್ಐ(ಅ.ವಿ) ಸಿಬ್ಬಂದಿ ಜನರಾದ ಸಲಿಮೋದ್ದಿನ ಹೆಚ್.ಸಿ 130, ಶಿವಕುಮಾರ ಹೆಚ್,ಸಿ: 304, ಪಿಸಿಗಳಾದ ಹುಸೇನಬಾಷಾ ಪಿಸಿ: 678, ಕೇಸುರಾಯ ಪಿಸಿ: 1211, ಅಂಬಾಜಿ ಪಿಸಿ: 954, ರಾಜಕುಮಾರ ಪಿಸಿ: 550, ಶರಣಗೌಡ ಪಿಸಿ: 1215, ಮತ್ತು ಕಂಠೆಪ್ಪ ಸಿಪಿಸಿ 289 ಇವರೊಂದಿಗೆ ತಂಡವನ್ನು ರಚಿಸಿಕೊಂಡು ಆರೋಪಿತರ ಪತ್ತೆ ಮತ್ತು ಶೋದದಲ್ಲಿರುವಾಗ, ದಿನಾಂಕ 15/06/2015 ರಂದು ಖಚಿತವಾದ ಬಾತ್ಮಿ ಮೇಲಿಂದ ಅನೀಲ ತಂದೆ ಅಪ್ಪಾರಾವ ಮಠಪತಿ, ಸಾ: ತಾವರಗೇರಾ ಈತನು ತನ್ನ ಸ್ವಂತ ಚಿಕ್ಕಪ್ಪನಾದ ಅಡವಯ್ಯ ಈತನಿಗೆ ಸಂಭಂದಪಟ್ಟ ಹೊಲವು ಹಿರಿಯರ ಅಸ್ತಿಯ ವಿಷಯದಲ್ಲಿ ವಿವಾದವಿದ್ದು, ಅನೀಲ ಮಠಪತಿ ಈತನಿಗೆ ವಿಚಾರಣೆಗೆ ಒಳಪಡಿಸಿದಾಗ, ಆತನು ಇದೆ ಆಸ್ತಿಯ ವಿಷಯದಲ್ಲಿ ತನ್ನ ಸಹಚರರಾದ ಕಾಶಿರಾಯ ತಂದೆ ಭಗವಂತರಾಯ ಮಡಿವಾಳ್, ಸಾ: ತಾವರಗೇರಾ ಮತ್ತು ಮಡೆಪ್ಪ ತಂದೆ ಪೀರಪ್ಪ ಮಡಿವಾಳ್, ಸಾ: ತಾವರಗೇರಾ ಇವರೊಂದಿಗೆ 03 ವರ್ಷಗಳ ಹಿಂದೆ  ದಿನಾಂಕ:23/04/2012 ರಂದು ರಾತ್ರಿ 9:30 ಗಂಟೆ ಸುಮಾರಿಗೆ ತಾವೆ ಕೊಲೆ ಮಾಡಿರುವದಾಗಿ ತನಿಖೆಯಲ್ಲಿ ತಿಳಿದುಬಂದಿದ್ದಕ್ಕೆ ಈ ಮೂರು ಜನರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಂಗ ಬಂಧನ ಕುರಿತು ಕಳುಹಿಸಿಕೊಡಲಾಗಿದೆ. ಈ ವಿಷಯದಲ್ಲಿ ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ರವರು ತನಿಖಾ ತಂಡಕ್ಕೆ ಶ್ಲಾಘನೆ ಮಾಡಿರುತ್ತಾರೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಹಮೀದಾಬಾನು ಗಂಡ ರಾಜಾಸಾಬ ಹಿರಿಯಾಳ ಸಾ|| ಉಡಚಾಣ ಗ್ರಾಮ ರವದದೊಂದು ಹೊಲ ಇದ್ದು ಅದರ ಸರ್ವೆ ನಂ 145/4 ಇರುತ್ತದೆ. ನಮ್ಮ ಹೊಲಕ್ಕೆ ಹೊಂದಿಕೊಂಡು ನಮ್ಮೂರ ನೆಹರು ತಂದೆ ದೋಂಡಿಬಾ ಹೋರತಿ ರವರ ಹೊಲ ಇರುತ್ತದೆ. ನೇಹರು ಇವರು ತಮ್ಮ ಹೊಲ ನಮ್ಮ ಹೊಲದಲ್ಲಿ ಹೆಚ್ಚಿಗೆ ಬಂದಿದೆ ಅಂತಾ ಸೂಮಾರು ಸಲ ತಕರಾರು ಮಾಡಿದ್ದು ಇರುತ್ತದೆ. 3-4 ಸಲ ಸರ್ವೆದವರಿಗೆ ಕರೆಯಿಸಿ ಭೂ ಮಾಪನ ಮಾಡಿಸಿದ್ದು ಇರುತ್ತದೆ. ಆದರು ಸಹ ನೇಹರು ರವರು ಕೇಳದೆ ನಮ್ಮೋಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ 14-06-2015 ರಂದು ಮದ್ಯಹ್ನ ನಮ್ಮ ಹೊಲದಲ್ಲಿ ನಮ್ಮೂರ ಪರಶುರಾಮ ತಂದೆ ಮಹಾದೇವಪ್ಪಾ ಹಲಸಗಿ ರವರ ಟ್ರ್ಯಾಕ್ಟ್ರದಿಂದ ನೆಗಲ ಹೊಡೆಯುತ್ತಿದ್ದೆವು. ಆಗ ನಾನು ಮತ್ತು ನಮ್ಮ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪಾ ತಂದೆ ಹುಚ್ಚಪ್ಪಾ ದೊಡಮನಿ ಮತ್ತು ಮಹಾದೇವ ತಂದೆ ಹುಚ್ಚಪ್ಪಾ ದೊಡಮನಿ ರವರು ಇದ್ದೇವು, ಅದೇ ಸಮಯಕ್ಕೆ ನಮ್ಮ ಬಾಜು ಹೊಲದವರಾದ ನೆಹರು ತಂದೆ ದೋಂಡಿಬಾ ಹೊರತಿ ಮತ್ತು ಅವರ ಹೆಂಡತಿ ಜಯಶ್ರೀ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನೆಹರು ಇವರು ನಿಮಗ ಎಷ್ಟು ಸಲ ಹೇಳಬೇಕು ನಮ್ಮ ಹೊಲ ನಿಮ್ಮ ಹೊಲದಲ್ಲಿ ಬಂದಿದೆ ಅಂತಾ, ಆದರು ಕೇಳುತ್ತಿಲ್ಲಾ, ನಮಗೆ ನಮ್ಮ ಹೊಲ ಬಿಟ್ಟು ಕೊಡಿ ಇಲ್ಲದಿದ್ದರೆ ನಿಮಗ ಸಾಗುವಳಿ ಮಾಡಲು ಬಿಡುವುದಿಲ್ಲಾ ಅಂತಾ ಅಂದನು. ಆಗ ನಾನು ಈ ವಿಷಯವನ್ನು ನಮ್ಮ ಮನೆಯವರೊಂದಿಗೆ ಮಾತಾಡು ಅಂತಾ ಅಂದಾಗ ಜಯಶ್ರೀ ಇವಳು ಏ ರಂಡಿ ನಮ್ಮ ಹೊಲ ನಮಗೆ ಬಿಟ್ಟು ಕೊಟ್ಟರೆ ಸರಿ ಇಲ್ಲದಿದ್ದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದರು, ನಂತರ ನಾವು ಕೆಲಸವನ್ನು ಅಷ್ಟಕ್ಕೆ ಬಿಟ್ಟು ಮನೆಗೆ ಬಂದಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.