POLICE BHAVAN KALABURAGI

POLICE BHAVAN KALABURAGI

05 April 2015

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-04/04/2015 ರಂದು ಮುಂಜಾನೆ ರಮೇಶ ಇತನ ಚಾಲನೆಯಲ್ಲಿ ಮೋಟಾರ ಸೈಕಲ್ ನಂ ಎಂ.ಎಚ್-13 ಎವಾಯ್-3962 ನೇದ್ದರ ಮೇಲೆ ತಮ್ಮೂರಿನಿಂದ ಶ್ರೀ ಬಾಳು ತಂದೆ ಭಜರಂಗ ಡುಬಲ್ ಸಾ:ಅಜನ್ ಸೊಂಡಾ ತಾ:ಪಂಡರಪುರ ಜಿ;ಸೋಲಾಪುರ  ಕರ್ನಾಟಕ ರಾಜ್ಯದ ಹುಮನಾಬಾದಕ್ಕೆ ಹೋಗಿ ವೀರಭದ್ರಶ್ವರ ದೇವರ ದರ್ಶನ ಮುಗಿಸಿಕೊಂಡು ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಹೋಗುವಾಗ ಮೃತ ರಮೇಶ ಇತನು ಫಿರ್ಯಾದಿಗೆ ಹಿಂದೆ ಕೂಡಿಸಿಕೊಂಡು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ಚಲಾಯಿಸಿ ಅವರಾದ ದಾಟಿ ಸ್ವಾಮಿ ಸಮರ್ಥ ಆಶ್ರಮದ ಹತ್ತಿರ ರೋಡಿನ ಬದಿಗೆ ಇದ್ದ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೃತನಿಗೆ ಒಳಪೆಟ್ಟು ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟಿದ್ದು ಫಿರ್ಯಾದಿಗೂ ಸಹಾ ಭಾರಿ ಗಾಯಗಳಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಘಾ ಠಾಣೆ : ಶ್ರೀಮತಿ ಸಕ್ಕುಬಾಯಿ ಗಂಡ ರಮೇಶ ರಾಠೋಡ ಸಾ: ಕೋರಳ್ಳಿ ತಾಂಡಾ ಹಾ:ವ ನಿಂಬರ್ಗಾ ಇವರ ಪಾಲಿಗೆ ಬರಬೇಕಾದ ಹೊಲ ಮನೆ ಕೇಳಿದಕ್ಕೆ ಮೋಹನ ತಂದೆ ಧನಸಿಂಗ್ ರಾಠೋಡ ಸಂಗಡ 02 ಜನರು ಸಾ : ಎಲ್ಲರೂ ಕೋರಳ್ಳಿ ತಾಂಡಾ  ಸೇರಿ ದಿನಾಂಕ 03-04-2015 ರಂದು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಮಾನ ಭಂಗಕ್ಕೆ ಯತ್ನಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಗೌರಮ್ಮ ಗಂಡ ಬಸವರಾಜ ನಾವಿ ಸಾ|| ಘತ್ತರಗಾ ಇವರು ದಿನಾಂಕ 04-04-2015 ರಂದು ನನ್ನ ಅಣ್ಣನ ಹೊಲದಲ್ಲಿರುವ ಶ್ರೀ ಲಕ್ಷ್ಮಿ ದೇವಿಗೆ ಪೂಜೆ ಮಾಡಲು ಹೋಗಿದ್ದು ಪೂಜೆ ಮಾಡಿಕೊಂಡು ಮರಳಿ ಬರುವಾಗ ನಮ್ಮ ಗ್ರಾಮದವರಾದ ಶ್ರೀ ಮುದಕಪ್ಪ (ಅವ್ವಪ್ಪ ತಂದೆ ಕಾಂತಪ್ಪ ಬಂಟನೂರ ಎನ್ನುವ ವ್ಯಕ್ತಿ ಆಜು ಬಾಜು ಯಾರು ಇಲ್ಲದನ್ನು ನೋಡಿಕೊಂಡು ಮಹಿಳೆಯಾದ ನನಗೆ ಅಡ್ಡಗಟ್ಟಿ ಕೈಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದು, ನಾನು ಎದುರು ಮಾತನಾಡಿದಾಗ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ನನ್ನ ಕೈಯಲ್ಲಿರುವ ಬಳೆಗಳು ಒಡೆದು ರಕ್ತ ಸ್ರಾವವಾಗಿದೆ ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ರೋಜಾ ಠಾಣೆ : ರೋಜಾ ಪೊಲೀಸ್ ಠಾಣೆಯ 1] ಗುನ್ನೆ ನಂ.90/2011, 2] ಗುನ್ನೆ ನಂ. 84/2011, 3] ಗುನ್ನೆ ನಂ. 70/2012, ನೇದ್ದರ ಕೇಸುಗಳಲ್ಲಿ ಬಹಳ ದಿನಗಳಿಂದ ತಲೆಮರೆಸಿಕೊಂಡಿರುವ ವಾರೆಂಟ ಆರೋಪಿ ಮಿರ್ಜಾ ಅಕ್ಬರ ಕಲಿಮ ಬೇಗ @ ಕಲಿಮ @ ಮಿರ್ಜಾ ಅನ್ವರ ಕಲಿಮ ಬೇಗ @ ಕಲಿಮ ಡಾನ ತಂದೆ ಮಿರ್ಜಾ ಮಹೆಬೂಬ ಬೇಗ ಸಾ: ಮನೆ ನಂ. 7-22/1202 ಮದೀನಾ ಮಂಜಿಲ್ ಕೆ.ಬಿ.ಎನ್ ಇಂಜಿನಿಯರಿಂಗ ಕಾಲೇಜ ಎದುರುಗೆಡ ಬಿಲಾಲಾಬಾದ ಕಾಲೋನಿ ಕಲಬುರಗಿ ಹಾ:ವಾ: ಹೈದ್ರಾಬಾದ ಈತನಿಗೆ ಇಂದು ದಿನಾಂಕ: 04/04/2015 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಕಳುಹಿಸಿಲಾಗಿದೆ.

04 April 2015

Kalaburagi District Reported Crimes

ಅನಧೀಕೃತ ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ:03/04/2015 ರಂದು ಸ್ಟೇಷನ ಏರಿಯಾದ ಘಾಬರೆ ಲೇಔಟ್ ಹನುಮಾನ ಮಂದಿರ ಹಿಂದುಗಡೆ ಒಬ್ಬನು ಅನಧಿಕೃತವಾಗಿ ಲೈಸೆನ್ಸ್ ಇಲ್ಲದೇ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಶ್ರೀ ಮಹಾನಿಂಗ ನಂದಗಾವಿ ಡಿ,ಎಸ್.ಪಿ ಸಾಹೇಬರು ಉಪ ವಿಭಾಗ  ಕಲಬುರಗಿ  ಹಾಗು ಸ್ಟೇಷನ್ ಬಜಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಎಸ್,ಎಸ್ ದೊಡಮನಿ ಪಿ.ಎಸ್ಐ(ಕಾಸು), ಮಲ್ಲನಗೌಡ ಪಿ.ಸಿ-619, ರಾಜಕುಮಾರ ಪಿ.ಸಿ-1100, ಶಿವಾನಂದ ಪಿ.ಸಿ-1240, ಬಸವರಾಜ ಪಿ.ಸಿ-612, ಸಿದ್ದು ಪಿ.ಸಿ-500 ರವರು ಮತ್ತು ಪಂಚರೊಂದಿಗೆ ಸ್ಟೇಷನ ಏರಿಯಾದ ಘಾಬರೇ ಲೇಔಟ್ ಹನುಮಾನ ಮಂದಿರ ಎದುರುಗಡೆ ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬ ಮನುಷ್ಯನು ತನ್ನ ಮನೆಯ ಮುಂದೆ ಕುಳಿತು ಹೋಗಿ ಬರುವ ಸಾರ್ವಜನರಿಗೆ 50/- ರೂಪಾಯಿಗೆ ಒಂದು ಚೀಟಿ ಅಂತಾ ಗಾಂಜಾವನ್ನು ಮಾರಾಟ ಮಾಡುತ್ತಿದ್ದದ್ದು ನೋಡಿ ಖಚಿತಪಡಿಸಿಕೊಂಡು ಡಿ.ಎಸ್.ಪಿ ಸಾಹೇಬರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ದೀಪಕ ತಂದೆ ಧರೆಪ್ಪ ಭೋಸಗೆ ಸಾ:ಮಾದನಹಿಪ್ಪರಗಾ ತಾ:ಅಳಂದ ಹಾ.ವ:ಪ್ಲಾಟ್ ನಂ:67ಎ ಘಾಬರೆ ಲೇಔಟ್ ಕಲಬುರಗಿ ಅಂತಾ ಹೇಳಿದನು.  ಮತ್ತು ಅವನ ಹತ್ತಿರ ಇದ್ದ ಎರಡು ಪ್ಲಾಸ್ಟೀಕ ಚೀಲದಲ್ಲಿ ಗಾಂಜಾ ಇದ್ದು ಮತ್ತು ಸಣ್ಣ ಪ್ಲಾಸ್ಟೀಕ್ ಪ್ಯಾಕೇಟಗಳಲ್ಲಿ ಗಾಂಜಾ ಹಾಕಿದ್ದು ಸದರಿ ಪ್ಯಾಕೇಟಗಳು 50 ರೂಪಾಯಿಗೆ ಒಂದು ಮಾರಾಟ ಮಾಡುತ್ತೇನೆ ಅಂತಾ ಒಪ್ಪಿಕೊಂಡನು. ಈ ಬಗ್ಗೆ ಲೈಸೆನ್ಸ್ ವಗೈರೆ ವಿಚಾರಿಸಲು ಯಾವುದೇ ಲೈಸೆನ್ಸ್ ವಗೈರೆ ಇರುವುದಿಲ್ಲ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದೇನೆ ಅಂತಾ ಒಪ್ಪಿಕೊಂಡನು. ಸದರಿ ಒಂದು ಪ್ಲಾಸ್ಟೀಕ ಚೀಲದಲ್ಲಿ ಅಂದಾಜು 1 ಕೆ.ಜಿಯಷ್ಟು ಗಾಂಜಾ ಇದ್ದು ಎರಡು ಪ್ಲಾಸ್ಟೀಕ ಚೀಲದಲ್ಲಿದ್ದ 2 ಕೆ.ಜಿ ಯಷ್ಟು ಇದ್ದ ಗಾಂಜಾ ಅ.ಕಿ|| 6,000/- ರೂಪಾಯಿ ನೇದ್ದನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 03/04/2015 ರಂದು ದುತ್ತರಗಾಂವ ಗ್ರಾಮದಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಮುಂದೆ ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಧುತ್ತರಗಾಂವ ಗ್ರಾಮಕ್ಕೆ ಹೋಗಿ ಶಂಭುಲಿಂಗ ತಂದೆ ಭೀಮಶಾ ಮಸರೆ ಇತನ ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಂದು ರಟ್ಟಿನ ಡಬ್ಬಿಯಲ್ಲಿ ಮಧ್ಯದ ಬಾಟಲಿ ಮತ್ತು ಡಬ್ಬಿಗಳನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ವ್ಯಕ್ತಿಯನ್ನು ಮತ್ತು ಮಾಲನ್ನು ವಶಕ್ಕೆ ತೆಗೆದುಕೊಂಡು ವ್ಯಕ್ತಿಗೆ ಹೆಸರು ವಿಚಾರಿಸಲು ಅವನು ತನ್ನ ಹೆಸರು ಶಂಭುಲಿಂಗ ತಂದೆ ಭೀಮಶಾ ಮಸರೆ ಸಾ|| ಧುತ್ತರಗಾಂವ  ಅಂತ ತಿಳಿಸಿದನು, ಅವನಿಗೆ ಈ ಮಧ್ಯದ ಮಾರಾಟದ ಬಗ್ಗೆ ಲೈಸನ್ಸ ವಗೈರೆ ಕೇಳಿದ್ದು ಅದಕ್ಕೆ ಆತನು ತನ್ನ ಹತ್ತಿರ ಯಾವುದೆ ಲೈಸನ್ಸ ವಗೈರೆ ಇರುವದಿಲ್ಲ ಅಂತ ತಿಳಿಸಿದನು, ಅವನ ವಶದಲ್ಲಿದ್ದ ಒಟ್ಟು ಮಧ್ಯದ ಬಾಟಲಿ ಮತ್ತು ಡಬ್ಬಿಗಳನ್ನು ಪರಿಶೀಲಿಸಲಾಗಿ 01] 180 ML 24 ORIGINAL CHOICE DELUXE WHISKY BOXES WORTH RS. 1150/- ರೂಪಾಯಿಯ ಮೌಲ್ಯದ ಮಧ್ಯದ ಡಬ್ಬಿಗಳನ್ನು, 02] 650 ML 10 KNOCK OUT BEER BOTTALS WORTH RS. 1000/- ರೂಪಾಯಿಯ ಮೌಲ್ಯದ ಮಧ್ಯದ ಬಾಟಲಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ನಿಂಗಣ್ಣ ಕುಂಬಾರ ಸಾ|| ಬೆಣ್ಣೆಶಿರೂರ ರವರಿಗೆ  ಮದುವೆಯಾಗಿ 1 ವರ್ಷವಾಗಿದ್ದು, ಮದುವೆಯಾದ ನಂತರ 6 ತಿಂಗಳ ನಂತರ ಗಂಡ, ಅತ್ತೆ, ಮಾವ ಮತ್ತು ಮೈದುನರೂ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿದ್ದರಿಂದ ದಿನಾಂಕ 26/03/2015 ರಂದು 1700 ಗಂಟೆಗೆ ಮನೆಯಲ್ಲಿ ಕರಿಕೆಗೆ ಹೊಡೆಯುವ ಕ್ರಿಮಿನಾಶಕ ಔಷಧಿ ಸೇವಿಸಿ ಉಪಚಾರ ಕುರಿತು ದಾಖಲಾಗಿದ್ದು ನನ್ನ ಗಂಡ ಮತ್ತು ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ನಮ್ಮೂರಿನಲ್ಲಿ ಪರಿಶಿಷ್ಟ ಜಾತಿ ಓಣಿಯಲ್ಲಿ ಸರಕಾರದವರೇ ಬೋರವೆಲ್ಲ ತೊಡಿಸಿದ್ದು, ಸದರಿ ಬೋರವೆಲ್ಲದಲ್ಲಿ ಮೂರು ಇಂಚು ನೀರು ಬಿದ್ದಿವೆ,ಸದರಿ ನೀರನ್ನು  ಗ್ರಾಮದ ಎಲ್ಲಾ ಕೋಮಿನ ಜನರು  ಉಪಯೋಗಿಸುತ್ತಿದ್ದು,  ಈ ಸಂಬಂರ್ಧದಲ್ಲಿ  ನಮ್ಮ ಗ್ರಾಮದ ಲಿಂಗಾಯತ ಕೋಮಿನ ಬೆನಕನಳ್ಳಿ  ಮನೆತನದವರು ಕೇವಲ ಇವರೇ  ಸರಕಾರದವರು ಹೊಸದಾಗಿ ತೋಡಿದ ಬೋರವೆಲ್ಲದಿಂದ ಪೈಪು ಲೈನ ಮಾಡಿ ಊರಲ್ಲಿ ನೀರು ಒಯ್ಯುತ್ತೇವೆ ಅಂತಾ ಬಂದಿದ್ದರು. ಆ ಸಂಬಂರ್ಧದಲ್ಲಿ  ಬೆನಕನಳ್ಳಿ ಮನೆತನದವರಾದ ರಾಜಕುಮಾರ ತಂದೆ ಅರ್ಜುನ ಬೆನಕನಳ್ಳಿ ಮತ್ತು ಅವರ ಸಂಬಂಧಿಕರು  ಹಾಗೂ ನಮ್ಮ ಜಾತಿಯ ಶಾಂತಪ್ಪ ತಂದೆ ಮಲ್ಕಪ್ಪ ಶಿವಕೇರಿ ಮತ್ತು ಇತರರ ಮಧ್ಯೆ ತಕರಾರು ಆದಾಗ ಶಾಂತಪ್ಪ ಇತರರು ಕೂಡಿ ರಾಜಕುಮಾರ ಬೆನಕನಳ್ಳಿಗೆ ಇವರಿಗೆ ಪೈಪು ಲೈನ ಮಾಡಿ ನೀರು ಒಯ್ಯುವುದು ಬೇಡಾ ಊರ ಜನರಂತೆ ಇಲ್ಲಿಯೇ ಬಂದು ಬೋರವೆಲ್ಲದಿಂದ ನೀರು ತೆಗೆದುಕೊಂಡು ಹೋಗಿರಿ ಅಂತಾ ಹೇಳಿದ್ದಕ್ಕೆ ಬೆನಕನಳ್ಳಿ ಮನೆತನದವರ ಹಾಗೂ ನಮ್ಮ  ಪರಿಶಿಷ್ಟ ಜಾತಿಯವರ ಮಧ್ಯೆ ನೀರಿನ ಬಗ್ಗೆ  ವೈಷ್ಯಮ ಬೆಳೆದಿದ್ದು ಅದೇ ವೈಷ್ಯಮದಿಂದ ದಿನಾಂಕ 03-04-15 ರಂದು  ಮಧ್ಯಾಹ್ನ  2-00 ಗಂಟೆ ಸುಮಾರಿಗೆ ನಮ್ಮ ತಮ್ಮ ಚಂದ್ರಕಾಂತ ಮತ್ತು ನಮ್ಮೂರಿನ ಲಿಂಗಾಯತ  ಹುಡುಗುರು ನಮ್ಮೂರಿನ ಹಾಳಕೇರಿ ಹೊಲದಲ್ಲಿ  ಕ್ರಿಕೆಟ ಆಟ ಆಡುತ್ತಿದ್ದು, ಕ್ರಿಕೆಟ ಆಟ ನೋಡಲು ಹೋದಾಗ, ನಮ್ಮೂರಿನ ಲಿಂಗಾಯತ ಜನಾಂಗದ ಲಕ್ಷ್ಮೀಪುತ್ರ ತಂದೆ ಶಿವಾನಂದ ಬೆನಕನಳ್ಳಿ  ಇತನು ನನಗೆ ಈ  ಹೊಲ್ಯಾ ಸೂಳೇ ಮಗನೇ ಊರಲ್ಲಿ ಕ್ರಿಕೆಟ ನೋಡಲು ಯಾಕೇ ಬಂದಿದ್ದೀ ಅಂತಾ ಜಾತಿ ಎತ್ತಿ ಬೈದು ನನಗೆ ಕೈಯಿಂದ ಹೊಟ್ಟೆಯಲ್ಲಿ , ಎಡ ರಟ್ಟೆಗೆ, ಮತ್ತು ಕುತ್ತಿಗೆ ಹಿಂಭಾಗದಲ್ಲಿ ಹೊಡೆದು ಗುಪ್ತಗಾಯಗೊಳಿಸಿದನು. ನಾನು ಅವನಿಂದ ಬಿಡಿಸಿಕೊಂಡು, ಮನೆಗೆ ಓಡಿ ಬಂದಾಗ, ಆಗ ಲಕ್ಷ್ಮೀಪುತ್ರ ಇತನು ತಮ್ಮ ಸಂಬಂಧಿಕರಾದ 2) ಸೋಮಶೇಖರ ತಂದೆ ಭೀಮಶ್ಯಾ ಬೆನಕನಳ್ಳಿ 3)ಶರಣಬಸಪ್ಪ ತಂದೆ ಶಿವಾನಂದ ಬೆನಕನಳ್ಳಿ 4)ಶಿವಾನಂದ ತಂದೆ ಮಲ್ಲೇಶಪ್ಪ ಬೆಕನಳ್ಳಿ 5)ಚಂದ್ರಕಾಂತ ತಂದೆ ಶರಣಪ್ಪ ಬೆನಕನಳ್ಳಿ 6) ಅರುಣಕುಮಾರ ತಂದೆ ಚಂದ್ರಕಾಂತ ಬೆನಕನಳ್ಳಿ 7)ಪವನಕುಮಾರ ತಂದೆ ಶಿವಪುತ್ರಪ್ಪ ಮುನ್ನಳ್ಳಿ 8)ಅಂಬಾರಾಯ ತಂದೆ ಬಸವಂತರಾಯ ಬೆನಕನಳ್ಳಿ 9)ಶಿವುಕುಮಾರ ತಂದೆ ಬಸವಂತರಾಯ ಬೆನಕನಳ್ಳಿ 10)ಗುರುನಾಥ ತಂದೆ ಬಸವಂತರಾಯ ಬೆನಕನಳ್ಳಿ 11)ಶ್ರವಣಕುಮಾರ ತಂದೆ ಅಂಬಾರಾಯ ಬೆನಕನಳ್ಳಿ 12)ಶಿವಲಿಂಗಪ್ಪ ತಂದೆ ಅಂಬಾರಾಯ ಬೆನಕನಳ್ಳಿ 13)ಯೋಗಪ್ಪ ತಂದೆ ಧನಪಾಲ ಬೆನಕನಳ್ಳಿ  14)ರಾಜಕುಮಾರ ತಂದೆ ಅರ್ಜುನ ಬೆನಕನಳ್ಳಿ 15)ಅರ್ಜುನ ತಂದೆ ಶಾಂತಪ್ಪ ಆಲಗೂಡ 16)ರಮೇಶ ತಂದೆ ಶಾಂತಪ್ಪ ಆಲಗೂಡ 17)ಸತೀಷ ತಂದೆ ಶಾಂತಪ್ಪ ಆಲಗೂಡ  18)ವಿದ್ಯಾನಂದ ತಂದೆ ಭೀಮಶ್ಯಾ ಬೆನಕನಳ್ಳಿ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆ ಎದುರು ಬಂದು ಈ ಮೇಲಿನ ಎಲ್ಲಾ ನನಗೆ ಸುನ್ಯಾ ಸೂಳೇ ಮಗನೇ ಮನೆಯಿಂದ ಹೊರೆಗೆ  ಬಾ ನಿನಗೆ ಖಲಾಷ ಮಾಡುತ್ತೇವೆ. ಅನ್ನುತ್ತಿದ್ದಾಗ,  ನಮ್ಮ  ಸೋದರಮಾವ ಬಸವರಾಜ ತಂದೆ ವಿಠಲ ಕಾಂಬಳೆ ಇವರು ನನಗೆ ನಮ್ಮ ಮನೆಯಲ್ಲಿ ಹಾಕಿ ಹೊರಗಿನಿಂದ ಕೊಂಡಿ ಹಾಕಿದರು. ಆಗ ಈ ಮೇಲಿನ ಎಲ್ಲಾ ಜನರು ನಮ್ಮ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ನನಗೆ ಮನೆಯಿಂದ ಹೊರೆಗೆ ಕರೆದುಕೊಂಡು ಬಂದು ಎಲ್ಲರೂ ನನಗೆ ಮುತ್ತಿಗೆ ಹಾಕಿ ಕೈಯಿಂದ ಮೈಮೇಲೆ ಸಿಕ್ಕಾ ಪಟ್ಟೆ ಹೊಡೆ ಬಡಿ ಮಾಡಿ ಗುಪ್ತಗಾಯಗೊಳಿಸಿದರು. ಇದನ್ನು ನೋಡಿ ನಮ್ಮ ಸೋದರ ಮಾವ ಬಸವರಾಜ ತಂದೆ ವಿಠಲ ಕಾಂಬಳೆ, ಮತ್ತು ನಮ್ಮ ಓಣಿಯ ಶರಣಪ್ಪ ತಂದೆ ಕಾಳಪ್ಪ ಹುಲಿಗೆ, ಬಸಣ್ಣಾ ತಂದೆ ದೇವಪ್ಪ ಶಿವಕೇರಿ, ಸದಾನಂದ ತಂದೆ ಶಾಮರಾಯ ಕಾಂಬಳೆ, ಅಣ್ಣಾರಾಯ ತಂದೆ ಕಲ್ಲಪ್ಪ ಹುಲಿಮನಿ, ಬಾಬುರಾಯ ತಂದೆ ಕಾಶಪ್ಪ ಹುಲಿಮನಿ, ಮತ್ತು ಬಂಡೆಮ್ಮಾ ಗಂಡ ಅಣ್ಣಾರಾಯ ಹುಲಿಮನಿ,  ಎಲ್ಲರೂ ಕೂಡಿ ನನಗೆ ಹೊಡೆಯುವುದನ್ನು  ಬಿಡಿಸಲು ಬಂದಾಗ, ಈ ಮೇಲಿನ ಎಲ್ಲಾ ಜನರು ಬಿಡಿಸಲಿಕ್ಕೆ ಬಂದವರಿಗೂ ಸಹಾ  ಹೊಲೆಯರೇ ನೀವು   ಬೆನಕನಳ್ಳಿ ಮನೆತನದವರು ಹೇಳಿದ ಮಾತು ಕೇಳಬೇಕು. ನಾವು ಹೇಳಿದಂತೆ ಕೇಳಿದ್ದಿದ್ದರೆ ಊರಲ್ಲಿ ಸಂಸಾರ ಮಾಡಲು ಬಿಡುವುದಿಲ್ಲಾ ಅಂತಾ ಹೆದರಿಸಿದರು. ಮತ್ತು ಬಂಡೆಮ್ಮಾ ಹುಲಿಮನಿ ಇವರಿಗೆ ಪವನಕುಮಾರ, ಅರ್ಜುನ, ಲಕ್ಷ್ಮೀಪುತ್ರ, ಸೋಮಶೇಖರ, ರಾಜಕುಮಾರ  ಇವರೆಲ್ಲರೂ ನನ್ನ  ಸೀರೆ ಹಿಡಿದು ಜಗ್ಗಾಡಿ ಅವಮಾನ ಮಾಡಿರುತ್ತಾರೆ. ಬಂಡೆಮ್ಮಾ ಇವಳಿಗೆ ಅವಮಾನ ಮಾಡುತ್ತಿದ್ದಾಗ, ಬಿಡಿಸಲು ಬಂದ ಶಿವಕಾಂತಬಾಯಿ ಗಂಡ ಶರಣಪ್ಪ ಜೈಕಾರ, ಕಾಶಿಬಾಯಿ ಗಂಡ ಕಾಳಪ್ಪ ಹುಲಗೆ, ಶರಣಮ್ಮಾ ಗಂಡ ಬಾಬುರಾಯ ಹುಲಿಮನಿ, ಸಂಗೀತಾ ಗಂಡ ಬಾಬುರಾಯ ಹುಲಿಮನಿ ಇವರಿಗೂ ಕೂಡಾ ಈ ಮೇಲಿನ ಎಲ್ಲಾ ಜನರು ಬಿಡಿಸಲು ಬಂದವರಿಗೂ ಸಹಾ ರಂಡಿ ಭೋಸಡಿರೇ ನೀವು ಬಿಡಿಸಲಿಕ್ಕೆ ಬಂದರೇ ನಿಮಗೆ ಬಂಡೆಮ್ಮಾಳಿಗೆ ಮಾಡಿದಂತೆ ಮಾಡುತ್ತೇವೆ ಅನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಮ್ಮೆಲ್ಲರ ಜೀವಕ್ಕೆ ಎನಾದರೂ ಅನಾಹುತ ಆದ್ದಲ್ಲಿ  ಈ ಮೇಲಿನ ಜನರೇ ಕಾರಣಕರ್ತರಾಗುತ್ತಾರೆ. ಅಂತಾ ಶ್ರೀ ಸುನೀಲಕುಮಾರ ತಂದೆ ಬಾಬುರಾಯ ಹುಲಿಮನಿ ಸಾ:ಅಷ್ಟಗಾ ಗ್ರಾಮ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು  :
ರಾಘವೇಂದ್ರ ನಗರ ಠಾಣೆ : ಶ್ರೀ ಯೂನುಸ ಅಲಿ ತಂದೆ ಉಸ್ಮಾನಅಲಿ ಶೇಖ ಸಾ: ಶಾ ಜಿಲಾನಿ ದರ್ಗಾ ಹತ್ತಿರ ಮದೀನಾ ಕಾಲೋನಿ ಕಲಬುರಗಿ ಇವರ ಮಗಳಾದ ಶ್ರೀಮತಿ ಶಮಶಾದಬೇಗಂ  ಗಂಡ ಸುಲ್ತಾನ ಶೇಖ ಸಾ:ಬಹುಮನಿ ಈದ್ಗಾ ಹತ್ತಿರ ಮದೀನಾ ಕಾಲೋನಿ ಕಲಬುರಗಿ ಇವಳ ಗಂಡ ಸುಲ್ತಾನ ಶೇಖ ಇತನು ಅಬುದುಬಾಯಿ ರಾಷ್ಟ್ರದಲ್ಲಿ ಇರುತ್ತಾನೆ. ನನ್ನ ಮಗಳು ಇಲ್ಲಿಯೇ ತನ್ನ ಮಕ್ಕಳ ವಿದ್ಯಾಭ್ಯಾಸಗೋಸ್ಕರ ಮನೆಯಲ್ಲಿ ಇರುತ್ತಾಳೆ. ತಮ್ಮ ಮಕ್ಕಳ ಶಾಲೆ ಬೇಸಿಗೆ ರಜೆ ಇದ್ದ ಪ್ರಯುಕ್ತ ನನ್ನ ಮಗಳು ತನ್ನ ಮಕ್ಕಳೊಂದಿಗೆ ತನ್ನ ಗಂಡನ ಹತ್ತಿರ ಅಬುದುಬಾಯಿ ರಾಷ್ಟ್ರಕ್ಕೆ ದಿನಾಂಕ: 01/04/2015 ರಂದು ಮುಂಜಾನೆ ಗಂಟೆಗೆ ಮನೆಗೆ ಬೀಗ ಹಾಕಿ ಬೀಗದ ಕೈ ನನ್ನ ಕೈಯಲ್ಲಿ ಕೊಟ್ಟು ಅವಳಿಗೆ ಹೈದ್ರಾಬಾದವರೆಗೆ ಕಳುಹಿಸುವ ಕುರಿತು ನಾನು ಮತ್ತು ನನ್ನ ಮಗಳ ಮಾವ ಖಾಜಾಸಾಬ ಅವಳ ಅತ್ತೆ ಶ್ರೀಮತಿ ಜೈಬುನಿಶಾ ಎಲ್ಲರೂ ಕೂಡಿ ಕಳುಹಿಸಿ ಮರಳಿ ಸಾಯಂಕಾಲ 6.00 ಗಂಟೆಗೆ ಬಂದು ನಾನು ನನ್ನ ಮನೆಗೆ ಹೋಗಿದ್ದು ಅವರಿಬ್ಬರೂ ನನ್ನ ಮಗಳ ಮನೆಯಲ್ಲಿ ಮಲಗಿಕೊಂಡರು. ಬೆಳಗ್ಗೆ ದಿನಾಂಕ:02/04/2014 ರಂದು 9.00 ಗಂಟೆಗೆ ನಾನು ನನ್ನ ಮಗಳ ಮನೆಗೆ ಹೋಗಿದ್ದು ನನ್ನ ಮಗಳ ಅತ್ತೆ-ಮಾವರು ಕೂಡಾ ಆಳಂದ ತಾಲ್ಲೂಕಿನ ತನ್ನ ಗ್ರಾಮವಾದ ಹೆಬ್ಬಳಿ ಗ್ರಾಮಕ್ಕೆ ಹೋಗುವಾಗ ಮನೆಯ ಬೀಗ ನನ್ನ ಕೈಯಲ್ಲಿ ಕೊಟ್ಟು ಹೋದರು. ನಾನು ಗೋಡವಾಡಿ ದೇವರಿಗೆ ಹೊದೇನು. ಮರಳಿ ರಾತ್ರಿ 9.00 ಗಂಟೆಗೆ ನನ್ನ ಮಗಳ ಮನೆಗೆ ರಾತ್ರಿ ಮಲಗಿ ಕೊಳ್ಳುವ ಕುರಿತು ಹೋಗಿದ್ದು ಮನೆಯ ಮುಖ್ಯಬಾಗಿಲ ಬೀಗ ಮುರಿದಿದ್ದು ಇದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಮನೆಯ ಬೇಡ್ರೂಮ ಬಾಗಿಲ ಕೀಲಿ ಮುರಿದಿದ್ದು ಅಲಮಾರಿ ಕೀಲಿಕೂಡಾ ಮುರಿದು ಎಲ್ಲಾ ಸಾಮಾನುಗಳು ಚಿಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ. ನಾನು ಈ ವಿಷಯ ನನ್ನ ಮಗಳಾದ ಶಮಶಾದಬೇಗಂ ಇವಳಿಗೆ ಮೊಬೈಲ ಪೋನ ಮುಖಾಂತರ ತಿಳಿಸಿದ್ದು ಅವಳು ಅಲಮಾರಾದಲ್ಲಿ ನನ್ನ 5 ಗ್ರಾಂ ಬಂಗಾರದ ಒಂದು ಜೊತೆ ಕಿವಿ ಓಲೆ, ಮತ್ತು  ಒಂದು 15 ಗ್ರಾಂ ಬಂಗಾರದ ನಕ್ಲೇಸ್ ಮತ್ತು ಅಂದಾಜು 20 ತೊಲೆ ಬೆಳ್ಳಿಯ 2 ಜೊತೆ ಕಾಲು ಚೈನು ಇಟ್ಟು ಹೋಗಿರುತ್ತೇನೆ. ನೋಡು ಅಂತಾ ಹೇಳಿದಾಗ ನಾನು ಅಲಮಾರಾದಲ್ಲಿ ನೋಡಲು ಅಲಮಾರದಲ್ಲಿ ಇರಲಿಲ್ಲ. ಈ ವಿಷಯ ನನ್ನ ಮಗಳಿಗೆ ತಿಳಿಸಿದ್ದು ಹೀಗಾದರೆ ನೀನು ಪೊಲೀಸ ಠಾಣೆಗೆ ಹೋಗಿ ದೂರು ಸಲ್ಲಿಸು ಅಂತಾ ತಿಳಿಸಿದ್ದರಿಂದ ನಾನು ಇಂದು ದಿನಾಂಕ:03/04/2015 ರಂದು ಠಾಣೆಗೆ ಬಂದು ಹೇಳಿಕೆ ನೀಡಿರುತ್ತೇನೆ. ಕಾರಣ ನನ್ನ ಮಗಳ ಮನೆಯ ಬೀಗ ಮುರಿದು ಯಾರೋ ಅಪರಿಚಿತ ಕಳ್ಳರು 1) 5 ಗ್ರಾಂ ಬಂಗಾರದ ಒಂದು ಜೊತೆ ಕಿವಿ ಓಲೆ ಅವುಗಳ ಅ.ಕಿ.13000/-ರೂ 2) ಒಂದು 15 ಗ್ರಾಂ ಬಂಗಾದ ನಕ್ಲೇಸ್ ಅ.ಕಿ.38000/-ರೂ 3)ಅಂದಾಜು 20 ತೊಲೆ ಬೆಳ್ಳಿಯ 2 ಜೊತೆ ಹಳೆ ಕಾಲು ಚೈನುಗಳು ಅ.ಕಿ.6000/- ಹೀಗೆ ಒಟ್ಟು 57000/-ರೂ ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಅಪರಿಚಿತ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀ ಈಶ್ವರ ತಂದೆ ದೇವಿಂದ್ರಪ್ಪ ಪಾಟೀಲ ಸಾ : ಮನೆ ನಂ; 1-421 ಐ ವಾನ್ ಏ ಶಾಹಿ ಕಾಲೋನಿ ಕಲಬುರಗಿ ಇವರು ರೇಲ್ವೆ ಫಿಟ್‌ ಲೈನ್  ಕೆಲಸ ಗುತ್ತಿಗೆಗೆ ಹಿಡಿದು ಪಿಡಿಎ ಇಂಜನಿಯಿರಿಂಗ ಕಾಲೇಜ ಹತ್ತಿರ ಕೆಲಸ ಮಾಡಿಸುತ್ತಿದ್ದು ಸದರಿ ಕೇಲಸದ ನಿಮಿತ್ಯ ಸ್ಟೀಲ್‌ ರಾಡಗಳು ಇತರೆ ವಸ್ತುಗಳು ಹಾಕಿರುತ್ತೇವೆ. ದಿನಾಂಕ; 03-04-2015 ರಂದು ಬೆಳಗ್ಗೆ 7 ಎಎಮ್‌ ದಿಂದ 8 ಎಎಮ್‌ ದ ಅವದಿಯಲ್ಲಿ ಯಾರೋ ಕಳ್ಳರು ಕೆಲಸದ ಸಲುವಾಗಿ ಇಟ್ಟಿದ್ದ ಸ್ಟೀಲ್ ರಾಡ್‌ಗಳು ಅ.ತೂ. 100 ಕೆಜಿ ಅ.ಕಿ. 10,000/- ರೂ ನೇದ್ದವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 April 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2015 ರಂದು ಅಫಜಲಪೂರ ಪಟ್ಟಣದ ಪಾಲ್ಟೆಕ್ನಿಕ್ ಕಾಲೇಜ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣಹಚ್ಚಿ ಇಸ್ಪೇಟ ಏಲೆಗಳ ಸಾಹಾಯದಿಂದ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಪಾಲ್ಟೆಕ್ನಿಕ ಕಾಲೇಜದಿಂದ ಸ್ವಲ್ಪ ದೂರು ಹೋಗಿ, ಮರೆಯಾಗಿ ನಿಂತು ನೊಡಲು ಪಾಲ್ಟೆಕ್ನಿಕ್ ಕಾಲೇಜ ಮುಂದೆ ಲೈಟಿನ ಬೆಳಕಿನಲ್ಲಿ 05 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ,  05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಸಂತೋಶ ತಂದೆ ಶಂಕರ ಚಲವಾದಿ 2) ಸಂತೋಶ ತಂದೆ ಸಿದ್ದಣ್ಣಾ ಬಿಲ್ಯಾಡ 3) ದತ್ತು ತಂದೆ ಹಣಮಂತ ಕೋರಿ 4) ಶಿವಪ್ಪಾ ತಂದೆ ಭೀಮಶಾ ಸಿಂಗೆ 5) ಲಕ್ಷ್ಮೀಪುತ್ರ ತಂದೆ ಪರೆಪ್ಪಾ ಬಳೂರಗಿ ಸಾ|| ಎಲ್ಲರು ಅಫಜಲಪೂರ ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ  52 ಇಸ್ಪೆಟ ಎಲೆಗಳು ನಗದು ಹಣ 3860/- ರೂ ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. .
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಧರ್ಮಣ್ಣಾ ತಂದೆ ಭೀಮಶ್ಯಾ ಭೀಮಳ್ಳಿ ಸಾ:ಪಟ್ಟಣ ತಾ:ಜಿ:ಕಲಬುರಗಿ  ಇವರು ದಿನಾಂಕ:-02/03/2015 ರಂದು ರಾತ್ರಿ ಪಟ್ಟಣ ಗ್ರಾಮದ ಬಸವಂತರಾಯ ಇವರ ಹೋಲದಲ್ಲಿ ಫಿರ್ಯಾದಿ ಹೆಂಡತಿ ಮತ್ತು ತಾಯಿ ಇಬ್ಬರು ಕೂಡಿಕೊಂಡು ಸಂಡಾಸಕ್ಕೆ ಹೋಗುತ್ತಿದ್ದಾಗ ಆಗ ಲಕ್ಷಿಕಾಂತ ಇತನು ನಮ್ಮ ಮಾಲಿಕರ ಹೋಲದಲ್ಲಿ ಸಂಡಾಸಕ್ಕೆ ಯಾಕೇ ಬಂದಿದಿರಿ ಅಂತಾ ಬಾಯಿ ಮಾತಿನ ತಕರಾರು ಮಾಡುತ್ತಿದ್ದಾಗ ಆಗ ಫಿರ್ಯಾದಿ ವಿಚಾರಿಸಲು ಹೋದಾಗ 1. ಲಕ್ಷ್ಮಿಕಾಂತ ತಂದೆ ಮಾರುತಿ ನಾಯಿಕೋಡಿ 2. ರಾಚಣ್ಣಾ ತಂದೆ ಶಿವಶರಣಪ್ಪ ನಾಯಿಕೋಡಿ 3. ಚಂದ್ರು ತಂದೆ ಶರಣಪ್ಪ ನಾಯಿಕೋಡಿ 4. ಮಹಾದೇವಪ್ಪ ತಂದೆ ಸಿದ್ದಣ್ಣಾ ನಾಯಿಕೋಡಿ 5. ಶರಣಬಸಪ್ಪ ತಂದೆ ಸಿದ್ದಣ್ಣಾ ನಾಯಿಕೋಡಿ ಸಾ: ಎಲ್ಲರು ಪಟ್ಟಣ ತಾ:ಜಿ:ಕಲಬುರಗಿ ಎಲ್ಲರು  ಕೂಡಿಕೊಂಡು ಜಗಳ ತೆಗದು ಮಾದಿಗ ಸೂಳೇ ಮಕ್ಕಳದು ಬಹಳ ಆಗಿದೆ ಅಂತಾ ಜಾತಿ ಎತ್ತಿ ಬೈಯ್ದ ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡುತ್ತಿದ್ದಾಗ ಬೀಡಿಸಲು ಬಂದ ಫಿರ್ಯಾದಿ ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಹೊಡೆ ಬಡೆ ಮಾಡಿ ಜಗಳ ನಂತರ ಸದರಿ ಆರೋಪಿತರೆಲ್ಲರೂ ಇನ್ನೊಮ್ಮೆ ಈ ಹೋಲಕ್ಕೆ ಸಂಡಾಸಕ್ಕೆ ಬಂದರೇ ನಿಮಗೆ ಗಳ್ಯಾದ ದಿಂಡಿಗೆ ಹಚ್ಚಿ ಕೊಡಲಿಯಿಂದ ಕಡಿಯುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಪರಮೇಶ್ವರ ಮೇಳಕುಂದಿ  ಸಾ: ಕೊಳಕೂರ ತಾ: ಜೇವರ್ಗಿ ಜಿ: ಕಲಬುರಗಿ ರವರು ದಿನಾಂಕ 02-04-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಹೆಂಡತಿ ವಿಜಯಲಕ್ಷ್ಮಿ ಇವಳಿಗೆ ಕಲಬುರಗಿ ಚಿಣಮಗೇರಿ ಆಸ್ಪತ್ರೆಯಲ್ಲಿ ತೋರಿಸುವ ಸಲುವಾಗಿ ನಮ್ಮೂರಿನಿಂದ ನಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ಇಎಫ-8417 ನೇದ್ದರ ಮೇಲೆ ಕೂಡಿಸಿಕೊಂಡು ಕಲಬುರಗಿ ರಾಮ ಮಂದಿರ ರಿಂಗ ರೋಡ ಮುಖಾಂತರವಾಗಿ ಆರ್.ಪಿ. ಸರ್ಕಲ ಕಡೆಗೆ ಹೋಗುವಾಗ ದಾರಿ ಮದ್ಯ ಬಂಜಾರ ಕ್ರಾಸ್ ಸಮೀಪವಿರುವ ಪೆಟ್ರೊಲ ಪಂಪ ಎದುರಿನ ರೋಡ ಮೇಲೆ ಹಿಂದಿನಿಂದ ಸಂಜಯ ಇತನು ತಾನು ಚಲಾಯಿಸುತ್ತಿರುವ ಎನ್.ಈ.ಕೆ.ಆರ್.ಟಿ.ಸಿ ಬಸ ನಂಬರ ಕೆಎ-32 ಎಫ-1546 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನ್ನ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಸ ಮುಂದಿನ ಗಾಲಿಯು ನನ್ನ ಎಡಗಾಲಿಗೆ ಹಾಯಿಸಿ ನನ್ನ ಎಡಗಾಲಿನ ಮೊಳಕಾಲ ಕೆಳಗೆ ಭಾರಿಗುಪ್ತಪೆಟ್ಟು ತರಚಿದಗಾಯ, ಹಾಗು ಎಡ ತೊಡೆಗೆ ಗುಪ್ತಗಾಯ, ಎಡಗಾಲ ರಿಸ್ಟ ಹತ್ತಿರ ತರಚಿದಗಾಯ, ಹಾಗು ನನ್ನ ಹೆಂಡತಿಗೆ ಎಡ ಟೊಂಕಿಗೆ ಮತ್ತು ಎಡತೊಡೆಗೆ ಗುಪ್ತಪೆಟ್ಟುಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.