POLICE BHAVAN KALABURAGI

POLICE BHAVAN KALABURAGI

30 October 2014

Gulbarga District Reported Crimes

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಅಪಹರಣಕ್ಕೋಳಗಾದ ಕುಮಾರಿ ಇವಳನ್ನು  ದಿನಾಂಕ 20-09-2014 ರಂದು ಸಾಯಂಕಾಲ 7;30 ಗಂಟೆ ಸುಮಾರಿಗೆ ಆರೋಪಿ ಅನೀಲ ಶಂಡಗೆ ಈತನು ನಾನು ಒಪ್ಪದಿದ್ದರು ನನ್ನೊಂದಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪುಸಲಾಯಿಸಿ ಮತ್ತು ಹೆದರಿಸಿ ಜೀವದ ಭಹ ಹಾಕಿ ತನ್ನ ಅಣ್ಣ ಮತ್ತು ತಾಯಿಯ ಚಿತಾವಣೆ ಮೇರೆಗೆ ಅಪಹರಿಸಿಕೊಂಡು ಹೋಗಿ ಐರೋಡಗಿ ತಾ|| ದಕ್ಷಿಣ ಸೋಲಾಪುರ ಜಿಲ್ಲಾ|| ಸೋಲ್ಲಾಪುರ ಸಿಮಾಂತರದ ಒಂದು ಮೆಟಗಿಯಲ್ಲಿ ಅಕ್ರಮ ಬಂಧನದಲ್ಲಿಟ್ಟು. ಅಪ್ರಾಪ್ತ ವಯಸ್ಕಳಾದ ನನಗೆ ಒತ್ತಾಯ ಪೂರ್ವಕವಾಗಿ ಜಬರಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 October 2014

GULBARGA DIST REPORTED CRIMES

ಕಾಳ ಸಂತೆಯಲ್ಲಿ ಅನೀಲ ಸಿಲೆಂಡರ ರಿಫಿಲಿಂಗ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ|| 28/10/14 ರಂದು ಸಾಯಂಕಾಲ 07-00 ಗಂಟೆಗೆ  ಗುಲಬರ್ಗಾ ನಗರದ ರಾಘವೇಂದ್ರ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ಅಹ್ಮದ ನಗರದಲ್ಲಿ  ಒಂದು  ತಗಡಿನ ಶಡ್ಡಿನಲ್ಲಿ ಗೃಹ ಬಳಕೆಯ ಅನೀಲ ತುಂಬಿದ ಸಿಲೇಂಡರ್ ಗಳನ್ನು ಯಾವುದೆ ಪರವಾನಿಗೆ ಇಲ್ಲದೆ ಅನಾಧಿಕೃತವಾಗಿ ಸಂಗ್ರಹಸಿ ಇಟ್ಟಿಕೊಂಡು ಅವುಗಳಲ್ಲಿದ್ದ ಅನೀಲವನ್ನು ಗೃಹಕರಿಗೆ ವಂಚಸಿ ಅಕ್ರಮವಾಗಿ ಮೋಸದಿಂದ ಅನೀಲವನ್ನು ಎಲೇಕ್ಟಾನಿಕ ಮಶೀನಗಳ ಸಹಾಯದಿಂದ ತೆಗೆದು ಆಟೋರಿಕ್ಷಾಗಳಿಗೆ ಅಳವಡಿಸಿದ ಅನೀಲ ಸಿಲೇಂಡರಗಳಿಗೆ  ತುಂಬಿ ಚಿಲ್ಲರೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಶ್ರೀ ಸಿದ್ದಪ್ಪ ಎ.ಎಸ್.ಐ ರಾಘವೇಂದ್ರ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಹಾನಿಂಗ ನಂದಗಾಂವಿ ಇವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಒಬ್ಬನನ್ನು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು  ಅವನು ತನ್ನ ಹೆಸರು  ಮಹೇಬೂಬ ತಂದೆ ಮಾಲಾಸಾಬ ಲದಾಫ್ ಸಾ: ಅಹ್ಮೆದ ನಗರ  ಚೊರಗುಮ್ಮಜ ಹತ್ತಿರ ರಿಂಗ ರಸ್ತೆ ಗುಲಬರ್ಗಾಅಂತಾ ತಿಳಿಸಿದ್ದು ಸದರಿ ಶಡ್ಡಿನಲ್ಲಿ ಎ.ಎಸ್.ಐ. ಸಾಹೇಬರು ನಮ್ಮ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲು 1) ಆರು ಭಾರತ ಕಂಪನಿಯ ಅನೀಲ ತುಂಬಿದ ಗ್ಯಾಸ್ ಸಲೇಂಡರ್ ಗಳು ಅವುಗಳ ಅಂದಾಜ ಕಿಮ್ಮತ್ತು 8000/- ರೂ.  2) ಒಂದು ಭಾರತ  ಕಂಪನಿಯ ಅರ್ದದಷ್ಟು ಅನೀಲ ತುಂಬಿದ ಗ್ಯಾಸ್ ಸಿಲೇಂಡರ್  ಅ.ಕಿ 800/- ರೂ. 3) ಎರಡು ಭಾರತ ಕಂಪನಿಯ ಖಾಲಿ ಸಿಲೇಂಡರಗಳು ಅ:ಕಿ: 1600/-4) ಒಂಬತ್ತು  ಹೆಚ್.ಪಿ ಕಂಪನಿಯ ಖಾಲಿ ಗ್ಯಾಸ್ ಸಿಲೇಂಡರಗಳು ಅ:ಕಿ: 5000/ರೂ 5) ಮೂರು ಹೆಚ್.ಪಿ ಕಂಪನಿಯ ಅನಿಲ ತುಂಬಿದ ಗ್ಯಾಸ ಸಿಲೆಂಡರಗಳು ಅ:ಕಿ: 3000 6) ಒಂದು  1 ಹೆಚ್.ಪಿ  ಸಾಮಥ್ಯ ಉಳ್ಲಎಲೇಕ್ಟಿಕಲ್ ಮೋಟಾರ  ಅದಕ್ಕೆ ಅನಿಲ ತೆಗೆಯಲು ಪೈಪಗಳು ಅಳವಡಿಸಿದ್ದು ಅ.ಕಿ 1500/- ರೂ.  7) ಒಂದು ಎಲ್ಕೆಟ್ರಿಕಲ ತೂಕದ ಯಂತ್ರ ಅ:ಕಿ: 2000/ರೂ ಹೀಗೆ ಇದ್ದು  ಸದರಿ ವಸ್ತುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಚಂದ್ರಕಾಂತ ತಂದೆ ಸಿದ್ರಾಮಪ್ಪಾ ಪಾಟೀಲ ಸಾ:ಕಾಮನಳ್ಳಿ ಇವರು ದಿನಾಂಕ:28/10/2014 ರಂದು 02:30 ಪಿ.ಎಮ್. ಸುಮಾರಿಗೆ ನಮ್ಮೂರಿನ ಮಹಾದೇವ ತಂದೆ ಕಲ್ಯಾಣಿ ಸರಡಗಿ ಈತನು ನಮ್ಮ ಹೊಲದಲ್ಲಿ ಪ್ರವೇಶ ಮಾಡಿ ತನ್ನ ತಮ್ಮ ಹಣಮಂತ ಸರಡಗಿ ಈತನಿಗೆ ಹೊಡೆಯುವಾಗ ಮದ್ಯ ನಾನು ಬಿಡಿಸಲು ಹೋದಾಗ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಕಬ್ಬಿಣದ ರಾಡಿನಿಂದ ನನ್ನ ಸೊಂಟದ ಮೇಲೆ ಹೊಡೆದು ಭಾರಿ ಒಳಪೆಟ್ಟು ಮಾಡಿ ನನಗೆ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಣಿಗೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಜೇಶ್ರೀ ಗಂಡ ಬಸವರಾಜ ಪಾಸೋಡಿ ಸಾ|| ಜೆವರ್ಗಿ (ಬಿ) ರವರು ದಿ.26/10/2014 ರಂದು 3.00 ಪಿಎಮ್ ಕ್ಕೆ ತನ್ನ ಮನೆಯಲ್ಲಿದ್ದಾಗ ಗಂಡ ಬಸವರಾಜ ಇವನು ಸರಾಯಿ ಕುಡಿದು ಬಂದು ಫೀರ್ಯಾದಿಗೆ ಬಾಜು ಮನೆಯವರ ಜೋತೆ ಮಾತನಾಡಬೇಡ ಅಂತ ಅಂದರು ಯಾಕ ಮಾತನಾಡುತ್ತಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈ ಯಿಂದ ಹೊಡೆ ಬಡೆ ಮಾಡಿರುತ್ತಾನೆ. ರೀತಿ ಸುಮಾರು ತಿಂಗಳಿಂದ ಆರೋಪಿತನು ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಅವಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೈ ಯಿಂದ ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಯಿಕವಾಗಿ ಹಿಂಸಿಸುತಿದ್ದರಿಂದ ಫೀರ್ಯಾದಿದಾರಳು ಬೇಜಾರ ಮಾಡಿಕೊಂಡು ಮನೆಯಲಿದ್ದ ಸಿಮೆ ಎಣ್ಣೆಯನ್ನು  ತನ್ನ ಮೈ ಮೇಲೆ ಹಾಕಿಕೊಂಡು ಬೆಂಕಿ ಅಚ್ಚಿಕೊಂಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಬಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

28 October 2014

Gulbarga District Reported Crimes

ಅತ್ಯಾಚಾರ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಚವಡಪ್ಪಾ ಕುರವಲ ಸಾ : ದೇವಣಗಾಂವ ತಾ : ಸಿಂದಗಿ ಇವರ  ಮಗಳು ಅಫಜಲಪೂರ ಬಸ್ಟ್ಯಾಂಡದಲ್ಲಿ ಒಬ್ಬಳೆ ಕುತಿತಾಗ ಇವಳು ಅಪ್ರಾಪ್ತ ವಯಸ್ಸಿನವಳಿದ್ದು ಮತ್ತು ಹಿಂದುಳಿದ ಜಾತಿಗೆ ಸೇರಿದವಳಿರುತ್ತಾಳೆ  ಅಂತ ತಿಳಿದು ಮಲ್ಲಿಕಾರ್ಜುನ ತಂದೆ ಶಿವಪ್ಪಾ ಕೇರಿ ಸಾ : ದೇವಣಗಾಂವ ತಾ : ಸಿಂದಗಿ ಇವನು  ಸದರಿಯವಳಿಗೆ ಅಫಹರಿಸಿಕೊಂಡು ಹೋಗಿ ಲೈಂಗಿಕ ಸಂಭೋಗ ಮಾಡಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀ ಗುರಣ್ಣಾ ತಂದೆ ಭೋಗಣ್ಣಾ ಕಣ್ಣಿ ಸಾ|| ಭಟ್ಟರ್ಗಾ  ಇವರು ದಿನಾಂಕ 25/10/2014 ರಂದು 1030 ಪಿ.ಎಮ ಕ್ಕೆ ತಾನು ತನ್ನ ಮನೆಯವರೆಲ್ಲರೂ ಊಟ ಮಾಡಿಕೊಂಡು ಜಿಡಿಜಿಡಿ ಮಳೆ ಬರುತ್ತಿದ್ದರಿಂದ ತಮ್ಮ ಮನೆಯಲ್ಲಿ ಆಸರ ಇಲ್ಲದ ಕಾರಣ ತಮ್ಮ ಮನೆಯ ಬಾಗಿಲು ಕೀಲಿ ಹಾಕಿಕೊಂಡು ತಮ್ಮ ಮನೆಯ ಮುಂದೆ ಇರುವ ಜಲಾನಯನ ಆಫೀಸಿನಲ್ಲಿ ಮಲಗಿಕೊಂಡು ಬೆಳಿಗ್ಗೆ ದಿನಾಂಕ 26/10/2014 ರಂದು 0430 ಎ.ಎಮಕ್ಕೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆರೆದ ಸ್ಥತಿಯಲ್ಲಿ ಇದ್ದು ಒಳಗೆ ಹೋಗಿ ನೋಡಲಾಗಿ ಪರ್ಸನಲ್ಲಿ ಇಟ್ಟ ಬಂಗಾರದ ಆಭರಣ ಮತ್ತು ನಗದು ಹಣ ಒಟ್ಟು 63000/- ಸಾವಿರ ರೂಪಾಯಿಯ ಮೌಲ್ಯದ ಬಂಗಾರ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.