POLICE BHAVAN KALABURAGI

POLICE BHAVAN KALABURAGI

24 August 2014

Gulbarga District Reported Crimes

ಹುಡುಗ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅಂಬಾರಾಯ ತಂದೆ ಚಂದ್ರಶಾ ಪೂಜಾರಿ ಸಾಃ ಕೋತನ ಹಿಪ್ಪರಗಾ ತಾಃ ಆಳಂದ ಜಿಲ್ಲಾಃ ಗುಲಬರ್ಗಾ ರವರ  ಹಿರಿಯ ಮಗ ಚಂದ್ರಕಾಂತ ಇವರಿಗೆ ಗುಲಬರ್ಗಾದ ಧರಂಸಿಂಗ ಕನ್ನಡ ಪ್ರಾಥಮಿಕ ಶಾಲೆ ಅಂಬಿಕಾ ನಗರ ಗುಲಬರ್ಗಾದಲ್ಲಿ ಶಾಲೆ ಕಲಿಯಲು ಸೇರಿಕೆ ಮಾಡಿದ್ದು, ಈಗ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಕರುಣೇಶ್ವರ ನಗರದಲ್ಲಿರುವ ಬಿ.ಸಿ.ಎಮ್ ಹಾಸ್ಟಲದಲ್ಲಿ ಇರುತ್ತಾನೆ. ಹೀಗಿರುವಾಗ ದಿನಾಂಕ 19/08/2014 ರಂದು ಸಾಯಂಕಾಲ 06:00 ಪಿ.ಎಮ್ ಸುಮಾರಿಗೆ ಧರಂಸಿಂಗ ಶಾಲೆಯ ಶಾಂತಯ್ಯಮಠ ಮುಖ್ಯೋಪಾಧ್ಯಾಯರು ಇವರು ಫೋನ್ ಮೂಲಕ ತಿಳಿಸಿದ್ದೆನೆಂದರೆ, ನನ್ನ ಮಗ ದಿನಾಂಕ 19/08/2014 ರಂದು 01:15 ಪಿ.ಎಮ್ ಸುಮಾರಿಗೆ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ ತಿಳಿಸಿದ್ದ, ನಾನು ಮತ್ತು ನಮ್ಮ ಮಾವ ಈರಪ್ಪಾ ಪೂಜಾರಿ ಕೂಡಿ ಶಾಲೆಗೆ ಬಂದು ಶಾಂತಯ್ಯಮಠ ಇವರಿಗೆ ವಿಚಾರಿಸಿ ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆ ತಿರುಗಾಡಿ ವಿಚಾರಿಸಿದರು ಕೂಡಾ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ ಮರಲಿಂಗಮ್ಮ ಗಂಡ ನಾಗಪ್ಪ ಹೊನ್ನಪ್ಪನೋರ,ಸಾ: ಕಲಕಂಬಾ ಗ್ರಾಮ, ಇವರ ಗಂಡ ನಾಗಪ್ಪ ಇವರು ದಿನಾಂಕ 23-08-2014 ರಂದು ಬೆಳಿಗ್ಗೆ ಮನೆಯಿಂದ ಕ್ರುಜರ ಜೀಪ ನಡೆಸಲು ಅಂತಾ ಹೇಳಿ ಹೋಗಿ ರಾತ್ರಿಯಾದರೂ ನನ್ನ ಗಂಡ ಮನೆಗೆ ವಾಪಸ್ಸು ಬಂದಿರಲಿಲ್ಲ. ರಾತ್ರಿ 11 ಗಂಟೆಯ ಸುಮಾರಿಗೆ ಸೇಡಂ ದಿಂದ ಸವೇರಾ ಹೊಟೆಲ ಮಾಲಿಕ ಯುನುಸ್ ಇವರು ಪೋನ ಮಾಡಿ ನನಗೆ ತಿಳಿಸಿದ್ದೆನಂದರೆ, ದಿನಾಂಕ 23-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಿನ್ನ ಗಂಡ ನಾಗಪ್ಪ ಈತನು ನಮ್ಮ ಕ್ರುಜರ್ ಜೀಪ ಗುಲ್ಬರ್ಗಾ ದಿಂದ ಪ್ಯಾಸೆಂಜರ್ ಹಾಕಿಕೊಂಡು ಬಂದು ಸೇಡಂ ನ ಬಸವೇಶ್ವರ ಹೊಟೆಲ ಮುಂದುಗಡೆ ಇರುವ ಟ್ಯಾಕ್ಸಿ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ನಡೆದುಕೊಂಡು ಸೇಡಂ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಗುಲ್ಬರ್ಗಾ ಕಡೆಯಿಂದ ಒಂದು ಕ್ರುಜರ್ ಜೀಪ ನಂಬರ ಕೆಎ-32,ಬಿ-6552 ನೇದ್ದರ ಚಾಲಕ ಪ್ರಶಾಂತ ಇತನು ತನ್ನ ಕ್ರುಜರ್ ಜೀಪನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಾಗಪ್ಪ ಇತನಿಗೆ ಸೇಡಂನ ಐ ಬಿ. ಎದುರುಗಡೆ ಮುಖ್ಯರಸ್ತೆಯ ಮೇಲೆ ಕ್ರುಜರ್ ಡಿಕ್ಕಿ ಪಡಿಸಿದ್ದರಿಂದ ನಾಗಪ್ಪ ಇತನು ಕೆಳಗೆ ಬಿದ್ದನು ಆಗ ನಾನು ಮತ್ತು  ಸಂಜು ನಾಮದಾರ, ಕಾಲಜ್ಞಾನಮೂರ್ತಿ ಮತ್ತು ಶರಣಯ್ಯ ಗಣಾಚಾರಿ ಸಾ:ಸೇಡಂ ಎಲ್ಲರೂ ಅಫಘಾತವನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ನಾಗಪ್ಪ ಇತನಿಗೆ ಅಫಘಾತದಲ್ಲಿ ಎಡಗೈ ಮೊಳಕೈಗೆ ರಕ್ತಗಾಯ, ಎಡಗೈ ಭುಜಕ್ಕೆ ಗುಪ್ತಗಾಯ ಹಾಗು ತರಚಿದ ಗಾಯವಾಗಿದ್ದು  ಎಡಗಡೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ವಾಗಿದ್ದು ನಾವು ನಾಗಪ್ಪ ಇತನಿಗೆ ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡುವಷ್ಟರಲ್ಲಿ ವೈಧ್ಯರು ಪರೀಕ್ಷಿಸಿ ನಾಗಪ್ಪ ಇತನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು . ಕ್ರುಜರ ಚಾಲಕ ನಾಗಪ್ಪ ಇವರಿಗೆ ಅಫಘಾತ ಪಡಿಸಿದ ನಂತರ ಕ್ರುಜರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನೀವು ಸೇಡಂ ಸರಕಾರಿ ಆಸ್ಪತ್ರೆಗೆ ಬರ್ರಿ ಅಂತಾ ತಿಳಸಿದ್ದರಿಂದ ನಾನು ಮತ್ತು ನಮ್ಮ ಅತ್ತೆಯಾದ ರತ್ನಮ್ಮ ಗಂಡ ಸಾಬಣ್ಣ ಹೊನ್ನಪ್ಪನೋರ ಇಬ್ಬರು ಕೂಡಿ ಸೇಡಂ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ನಾಗಪ್ಪ ಇವರು ಅಫಘಾತದಲ್ಲಿ ಗಾಯ ಹೊಂದಿ ಮೃತ ಪಟ್ಟಿದ್ದು ನಿಜಇರುತ್ತದೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 22-08-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಶ್ರೀ ತಾರಾಸಿಂಗ @ ಮೋಹನ ತಂದೆ ಶಂಕರ ಚವ್ಹಾಣ ಸಾ: ಪ್ಲಾಟ ನಂ 52 ಸಾಹಿ ಮಂದಿರ ಹಿಂದುಗಡೆ ಭಾಗ್ಯಲಕ್ಷ್ಮಿ ನಗರ  ಗುಲಬರ್ಗಾ  ರವರು ತನ್ನ ಮೋ/ಸೈಕಲ್ ನಂ; ಕೆಎ 32 ಜೆ 2563 ನೆದ್ದರ ಮೇಲೆ ಸತೀಶ ಈತನಿಗೆ ಹಿಂದೆ ಕೂಡಿಸಿಕೊಂಡು ಸಿ.ಟಿ ಬಸ್ ನಿಲ್ದಾಣ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯದ ಮೈಕ್ರೋಟವಾರ ಹತ್ತಿರ ರೋಡಿನ ಮೇಲೆ ಮೋ/ಸೈಕಲ್ ನಂ; ಕೆಎ 34 ವಿ 9537 ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲ್ ಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಬಲಗಾಲ ಮೊಳಕಾಲ ಕೆಳಗೆ ರಕ್ತ ಗಾಯ , ಬಲಗಾಲ ರಿಸ್ಟ ಹತ್ತಿರ ಭಾರಿ ರಕ್ತಗಾಯ ಹಾಗು ಎಡ ತಲೆಗೆ ರಕ್ತಗಾಯವಾಗಿರುತ್ತದೆ. ಸತೀಶ ಇತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲಾ .ಫಿರ್ಯಾದಿಗೆ ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶರಣು ಕುಮಾರ ತಂದೆ ಭೀಮಣ್ಣಾ ಇವರು ದಿನಾಂಕಃ 22/08/2014 ರಂದು ರಾತ್ರಿ 08:30 ಪಿ.ಎಂ. ನನ್ನ ಡಿ.ಎಲ್ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಗೆ ಎಂದಿನಂತೆ ಕೀಲಿ ಹಾಕೊಮಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 23/08/2014 ರಂದು 06:00 ಎ.ಎಂ. ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿದ್ದ ಆಕಾಶ ಕ್ಷೌರ ಅಂಗಡಿಯ ಮಾಲಿಕರಾದ ಶ್ರೀಮಂತ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮೊಬೈಲ್ ಅಂಗಡಿಯ ಬಾಗಿಲು ತೆರೆದಿದೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮೊಬೈಲ್ ಅಂಗಡಿಗೆ ಬಂದು ನೋಡಲಾಗಿ ಅಂಗಡಿಗೆ ಹಾಕಿದ ಕೀಲಿ ಮುರಿದಿದ್ದು ಅಂಗಡಿಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಮೊಬೈಲಗಳು ಮತ್ತು ಮೋಡಮ ಹಾಗು ನಗದು ಹಣ ಹೀಗೆ ಒಟ್ಟು 22,500/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2014

Gulbarga District Reported Crimes

ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಾಹೇಬಖಾನ ತಂದೆ ಮೆಹಬೂಬಖಾನ ಸಾ: ಕೊಳ್ಳೂರ ತಾ:ಜಿ:ಗುಲಬರ್ಗಾ ಹಾ:ವ: ಮಿಜಬಾನಗರ ಗುಲ್ಬರ್ಗಾ  ರವರು ದಿನಾಂಕ: 11/08/2014 ರಂದು ರಾತ್ರಿ 11-00 ಗಂಟೆಗೆ ತನ್ನ ಪೀರಪಾಶಾ ಟ್ರಾನ್ಸ ಪೋರ್ಟನ ಹಳದಿ ಬಣ್ಣದ ಲಾರಿ ನಂ ಕೆಎ-27 - 6979 ನೇದ್ದನ್ನು ನಿಲ್ಲಿಸಿ ದಿನಾಂಕ: 12/08/2014 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಲಾಗಿ ತಾವು ನಿಲ್ಲಿಸಿದ ಲಾರಿ ಕಾಣಲಿಲ್ಲ. ನೆರೆಯವರನ್ನು ವಿಚಾರಿಸಿ ಲಾರಿ ಚಾಲಕ ಮತ್ತು ಸ್ನೇಹಿತರೊಂದಿಗೆ ಸೇರಿ ಗುಲ್ಬರ್ಗಾ ನಗರದ ವಿವಿಧೆಡೆ ಮತ್ತು ಜೇವರ್ಗಿ, ಸೇಡಂ ,ಆಳಂದ , ನಿಂಬರ್ಗಾ ಮುಂತಾದ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ  ಕಳುವಾದ ನಮ್ಮ ಲಾರಿ ನಂ ಕೆಎ-27 -6979 .ಕಿ 5,00,000/-ರೂ ಕಿಮ್ಮತ್ತಿನ ಲಾರಿ ಮತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 August 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 21-08-14 ರಂದು 3 ಪಿಎಂಕ್ಕೆ ಕುರಿಕೋಟ ಸಿಮಾಂತರದ ವೀರಭದ್ರಯ್ಯಾ ಸಾಹು ಮತ್ತು ರವಿ ಸಾಹು ಇವರ ಹೋಲದ ಮದ್ಯದ ಬಂದಾರಿಯಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರನ್ನು ಮತ್ತು ಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ  5 ಜನರಿಗೆ ಹಿಡಿದು ವಿಚಾರಿಸಲು 1. ಚಂದ್ರಕಾಂತ ತಂ ಹಣಮಂತಪ್ಪ ಸಿಂಗೆ 2. ರೇವಣಸಿದ್ದಪ್ಪ ತಂ ಮಲ್ಲಿಕಾರ್ಜುನ ಅಂಬಲಗಿ 3.  ದೇವಿಂದ್ರಪ್ಪ ತಂ ಗುಂಡಪ್ಪ ಜಾಲೇಕರ 4. ಸಿದ್ದಪ್ಪ ತಂ ಶಿವಶರಣಪ್ಪ ಬಡಿಗೇರ 5. ಸುರೇಶ ತಂ ಶಿವಶರಣಪ್ಪ ಅಂಬಲಗಿ ಸಾ|| ಎಲ್ಲರೂ ಕುರಿಕೋಟಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೇಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 4300 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ ಮರಳಿ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : 2013 ನೇ ಸಾಲಿನಲ್ಲಿ   ಇ.ಎಸ್.ಐ. ಕಾರ್ಪೋರೆಷನ ರೀಜನಲ್ ಆಫೀಸ, ಕರ್ನಾಟಕದಲ್ಲಿ ಅಪ್ಪೆರ ಡಿವಿಜನ ಕ್ಲರ್ಕ ಹುದ್ದೆ ಖಾಲಿ ಇದೆ ಅಂತಾ ನೋಟಿಪೀಕೇಶನ ಕೊಟ್ಟಿದ್ದು ದಿನಾಂಕ : 23-06-2013 ರಂದು ಗುಲಬರ್ಗಾ ನಗರದಲ್ಲಿ N.V Boys High School,  ದಲ್ಲಿ ಭಾಗ - 1 ಪರೀಕ್ಷೆ ನಡೆಸಿದ್ದು ರಮೇಶ ಕುಮಾರ ತಂದೆ ರಬಿಂದ್ರ ಪ್ರಸಾದ ಮನೀಶ ರಾಣಾ ಪ್ರತಾಪ ನಗರ ಇಸ್ಲಾಮಪೂರ ನಾಲಂದ  ರಾಜ್ಯ ಬಿಹಾರ ಇವನು ತನ್ನ ಪರವಾಗಿ ನಿಜವಾದ ಅಭ್ಯರ್ಥಿ ತಾನೆ ಎಂದು ಬೇರೆಯವರಿಂದ ಪರೀಕ್ಷೆ ಬರೆಸಿ ದಿ : 19-01-2014 ರಂದು ನಡೆದ Computer Skill ಪರೀಕ್ಷೆಗೆ ಸ್ವತಹ ಮೇಲ್ಕಂಡ ಆರೋಪಿ ಹಾಜರ ಅಗಿ ಪರೀಕ್ಷೆ ಎದರಿಸುತ್ತಾನೆ ನಂತರ  ESI Corporation  ಯಿಂದ  UDC ಹುದ್ದೆಗೆ ಅಯ್ಕೆಯಾಗಿ ಹಾಲಿ  Regional Office, ಬೆಂಗಳೂರ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೇಲ್ಕಂಡ ಆರೋಪಿ ಇಲಾಖೆಗೆ ವಂಚಿಸಿ ತಾನೆ ಅಭ್ಯರ್ಥಿ ಎಂದು ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಯಿಸಿ ಹುದ್ದೆ ಗಿಟ್ಟಿಸಿಕೊಂಡು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ  ಶ್ರೀ ಎಸ್. ಶಿವಾರಾಮಕೃಷ್ಣನ ತಂದೆ ಶಂಕರನ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಯಲ್ಲಿದ್ದ ಮಾರ್ಬಲ ಕಲ್ಲುಗಳನ್ನು ಇಳಿಸುವಾಗ ನಿರ್ಲಕ್ಷದಿಂದ ಕಾರ್ಮಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹಿಬೂಬಸಾಬ ತಂದೆ ಮಶಾಕಸಾಬ ಮುಲ್ಲಾ ಸಾ: ಆಶ್ರಯ  ಕಾಲೊನಿ ಸತ್ರಾಶವಾಡಿ ಎಂ ಜಿ ರಸ್ತೆ ಗುಲಬರ್ಗಾ ರವರ ಮಗ ಖುತ್ಬುದ್ದಿನ ಇವನು ದಿನಾಲು ನನ್ನ ಜೊತೆಯಲ್ಲಿಯೆ  ಕುಲಿ ಕೆಲಸ ಮಾಡುತ್ತಿದ್ದು ದಿನಾಂಕ 21-08-2014 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಗುಲಬರ್ಗಾ ನಗರದದ ಎಮ್ ಎಸ್ ಕೆ ಮಿಲ ಬಡಾವಣೆಯ ಹುಸೇನಿ ಗಾರ್ಡನದಲ್ಲಿ ಲಾರಿ ನಂ ಆರ್ ಜೆ 27 ಜಿಎ 5673 ನೆದ್ದರಲ್ಲಿದ್ದ  ಶ್ರೀ ಡಾ : ಅರ್ಷದ ಇವರಿಗೆ ಸಂಬಂದಿಸಿದ ಅಂದಾದ  10 ಫಿಟ್ ಉದ್ದ 6 ಫೀಟ್ ಅಗಲ ಉಳ್ಲ ಮಾರಬಲಗಳು ಇದ್ದು ಅವುಗಳನ್ನು ಖಾಲಿಮಾಡಲು ಡಾ :ಅರ್ಷಧ ಮತ್ತು ಲಾರಿ ಡ್ರೈವರ ಇವರು  ನಮಗೆ 4500/ರೂ ಗುತ್ತಿಗೆ ಕೊಟ್ಟರುತ್ತಾರೆ ಆಗ ನಾನು ಮತ್ತು  ನನ್ನ ಮಗ 2) ಖುತ್ಬೋದ್ದಿನ 3) ಲಾಲಹ್ಮದ 4) ಜಾಫರ್ 5) ಈರಣ್ಣಾ 6) ಬಸಣ್ಣಾ 7) ಬಾಬುರಾವ 8) ಸಮೀರ  9) ಲಕ್ಷುಣ ಎಲ್ಲರು ಕೂಡಿಕೊಂಡು ಲಾರಿನಲ್ಲಿದ್ದ ಮಾರ್ಬಲ್ ಕಲ್ಲುಗಳು ಖಾಲಿ ಮಾಡುತ್ತಿರುವಾಗ. ನನ್ನ ಮಗ ಖುತ್ಬೊದ್ದಿನ್ .ಲಕ್ಷ್ಮಣ ಮತ್ತು ಜಾಫರ್ ಇವರು ಲಾರಿಯಲ್ಲಿ  ಏರಿ ಮೇಲಿಂದ ಕಲ್ಲು ಕೊಡುತ್ತಿದ್ದರು. ಉಳಿದ ನಾವೆಲ್ಲರು ಕೆಳಗೆನಿಂತು ಕಲ್ಲುಗಳು ಹಿಡಿದ್ದುಕೊಂಡು ಕೇಳಗೆ ಇಳಿಸುತ್ತಿದ್ದೆವು. ಅದೆ ವೆಳೆಯಲ್ಲಿ ಲಾರಿಯಲ್ಲಿ ಮಾರ್ಬಬಲಗಳು ಹಚ್ಚಿದ  ಅಂದಾಜ 6 ಫೀಟ್ ಅಗಲ 10 ಫಿಟ್ ಉದ್ದ ಇರುವ ಮಾರ್ಬಲ್ ಕಲ್ಲುಗಳ ಥಪ್ಪಿ ಉರುಳಿ ನನ್ನ ಮಗ ಖುತ್ಬುದ್ದಿನ ಇವರ ಮೈ ಮೇಲೆ ಬಿದ್ದಿದರಿಂದ ಅವನ ಕುತ್ತಿಗೆ ಮತ್ತು ಎಡಗಲ್ಲದ ಮೇಲೆ  ಹತ್ತಿದ್ದರಿಂದ ಭಾರಿ ರಕ್ತಗಾಯ ಆಗಿ ಲಾರಿಯಲ್ಲಿಯೆ ಮೃತ ಪಟ್ಟಿರುತ್ತಾನೆ. ಕಾರಣ ಮಾರ್ಬಲ್ ಮಾಲಿಕನಾದ ಡಾ. ಅರ್ಷದ ಇವನು  ನಮಗೆ ಮಾರ್ಬಲ ಕಲ್ಲುಗಳು ಲಾರಿಯಿಂದ ಕೇಳಗೆ ಇಳಿಸಲು ಕೂಲಿ ಕೆಲಸಕ್ಕೆ ಹಚ್ಚಿದ್ದು ಲಾರಿಯಲ್ಲಿನ ಕಲ್ಲುಗಳು ತೆಗೆಯುವ ಸಮಯದಲ್ಲಿ ಕಲ್ಲುಗಳಿಂದ ಕುಲಿಕೆಸ ಮಾಡುವ ಜನರ ಜಿವಕ್ಕೆ ಧಕ್ಕೆ ಯಾಗದಂತೆ  ಹಾಗು ಜೀವ ಹಾನಿ ಆಗದಂತೆ ಯಾವದೆ ವ್ಯೆವಸ್ಥೆ ಮಾಡಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶೇಖ ಫರೀದ ತಂದೆ ಉಸ್ಮಾನ ಸಾಬ ಸಾ : ದಸ್ತಗೀರ ಮೊಹಲ್ಲಾ ಚಿಟಗುಪ್ಪಾ ತಾ : ಹುಮನಾಬಾದ ಜಿಲ್ಲೆ ಬೀದರ ರವರು  ದಿನಾಂಕ: 21-08-2014 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟ ಗುಲಬರ್ಗಾದ ಮೈಬಾಸ ಮಜ್ಜೀದ ಮುಂದೆ ನಿಲ್ಲಿಸಿದ ತನ್ನ ಹಿರೋ ಫ್ಯಾಷನ ಪ್ರೋ ಮೋಟಾರ ಸೈಕಲ್  ನಂ: ಕೆಎ 39 ಕೆ-2077 ಅ.ಕಿ. 40,000/- ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿದ್ದು ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ.ನಿಲೋಫರ ಬೇಗಂ ಗಂಡ ಮಹ್ಮದ ಸರಫರಾಜ ಸುಲ್ತಾನ, ಸಾ: ಜಾನಿ ಮೊಹಲ್ಲಾ, ಜಂಡಾ ಕಟ್ಟಾ ರಾಯಚೂರ ಹಾ:: ಸರಸ್ವತಿಪುರಂ ಗುಲಬರ್ಗಾ ರವರನ್ನು ನನಗೆ ನಮ್ಮ ತಂದೆ-ತಾಯಿಯವರು ಸುಮಾರು ಒಂದುವರೆ ವರ್ಷದ ಹಿಂದೆ ಮಹ್ಮದ ಸರಫರಾಜ ಸುಲ್ತಾನ ತಂದೆ ಮಹ್ಮದ ಸುಲ್ತಾನ ಇವರಿಗೆ ಸಂಪ್ರದಾಯದಂತೆ ಗುಲಬರ್ಗಾ ಬಾಕರ್ ಫಂಕ್ಷನ್ ಹಾಲ್ದಲ್ಲಿ ನಮ್ಮ ತಂದೆ-ತಾಯಿಯವರು 2 ಲಕ್ಷ ರೂಪಾಯಿ ಮತ್ತು 3ತೊಲೆ ಬಂಗಾರ ಉಡುಗೋರೆಯಾಗಿ ಕೊಟ್ಟಿದ್ದು ಅಲ್ಲದೆ ಮದುವೆ ಸಮಯದಲ್ಲಿ ನನ್ನ ಮೈಮೇಲೆ 9 ತೊಲೆಯ ಬಂಗಾರದ ಆಭರಣಗಳು ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ. ನಂತರ ನನ್ನ ಗಂಡ ನನಗೆ ರಾಯಚೂರಕ್ಕೆ ಕರೆದುಕೊಂಡು ಹೋಗಿ ಒಂದು ತಿಂಗಳ ವರೆಗೆ ರಾಯಚೂರದಲ್ಲಿ ಇಟ್ಟು ನನ್ನ ಗಂಡ ಬೆಂಗಳೂರದಲ್ಲಿ ಸಾಫ್ಟವೇರ್ ಇಂಜನೀಯರಿಂಗ್ ಕೆಲಸ ಮಾಡುತ್ತಿದ್ದರಿಂದ ಅಲ್ಲಿಂದ ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿ ನನ್ನ ಗಂಡ ನನಗೆ ದಿನಾಲೂ ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ ದಿನಾಲೂ ಹೊಡೆಬಡೆ ಮಾಡುತ್ತಾ ಇದ್ದ. ನಂತರ ನಾನು ಅಗಷ್ಟ-2013 ತಿಂಗಳಲ್ಲಿ ರಂಜಾನ ಹಬ್ಬಕ್ಕೆಂದು ರಾಯಚೂರಕ್ಕೆ ಬಂದಿದ್ದು, ಅಲ್ಲಿ ನನಗೆ ನನ್ನ ಗಂಡ ಮತ್ತು ಅತ್ತೆ ಸೈಯದಾ ಫರೀದಾ ಬೇಗಂ ಇಬ್ಬರು ನನಗೆ ನಿಮ್ಮ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನ್ನ ಅತ್ತೆ ನನಗೆ ನನ್ನ ಮಗ ನೀನು 10 ಲಕ್ಷ ರೂಪಾಯಿ ತಂದರೆ ಕೆಲಸ ಮಾಡುತ್ತಾನೆ. ಅಂತಾ ಅಂದು ನನ್ನ ಗಂಡ ಮತ್ತು ಅತ್ತೆ ಇಬ್ಬರು ನನಗೆ ನಿನ್ನ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಅಂತಾ ಬಯ್ಯುತ್ತಾ ಕೈಯಿಂದ ಮತ್ತು ಕಾಲಿನಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಆದರೂ ನಾನು ಆವತ್ತು ತಾಳಿಕೊಂಡು ಬಂದಿದ್ದು, ನಂತರ ನಾನು ಮತ್ತೆ ನನ್ನ ಗಂಡನ ಸಂಗಡ ಬೆಂಗಳೂರಿಗೆ ಹೋಗಿದ್ದು, ಅಲ್ಲಿ ನನ್ನ ಗಂಡ ಮತ್ತೆ ನನಗೆ ಅದೇ ರೀತಿ ನೀನು ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ನನ್ನ ಕುತ್ತಿಗೆಯ ಮೇಲೆ ಚಾಕು ಇಟ್ಟು ಅಂಜಿಕೆ ಹಾಕಿರುತ್ತಾನೆ. ಆಗ ನಮ್ಮ ಮನೆಯ ಮಾಲೀಕರು ನನ್ನ ತಂದೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ನಂತರ ನಮ್ಮ ತಂದೆ ಬೆಂಗಳೂರಿಗೆ ಬಂದು ನನಗೆ ಅಲ್ಲಿಂದ ಗುಲಬರ್ಗಾಕ್ಕೆ ಕರೆದುಕೊಂಡು ಬಂದು ತಮ್ಮ ಹತ್ತಿರ ಇಟ್ಟಿಕೊಂಡಿರುತ್ತಾರೆ. ನನ್ನ ಗಂಡ ಮದುವೆ ಸಮಯದಲ್ಲಿ ನನ್ನ ಮೇಲೆ ಹಾಕಿದ್ದ ಬಂಗಾರವೆಲ್ಲಾ ಮಾರಿಕೊಂಡಿರುತ್ತಾನೆ. ನನಗೆ ಡಿಸೆಂಬರ್-2013 ರಲ್ಲಿ ನಾನು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೇನೆ. ನಾನು ಆಸ್ಪತ್ರೆಯಲ್ಲಿ ಇದ್ದಾಗಲೂ ಕೂಡ ಅಲ್ಲಿಯು ನನ್ನ ಗಂಡ ಬಂದು ಜಗಳ ಮಾಡಿಕೊಂಡು ಹೋಗಿರುತ್ತಾನೆ. ಸುಮಾರು 7-8 ತಿಂಗಳಿಂದ ನಾನು ನನ್ನ ತವರು ಮನೆಯಾದ ಸರಸ್ವತಿಪೂರಂ ಕುಸನೂರ ರೋಡ ಗುಲಬರ್ಗಾದಲ್ಲಿ ಇದ್ದಾಗಲೂ ಕೂಡ ಆಗಾಗ ನಮ್ಮ ಮನೆಗೆ ಬಂದು ನನ್ನ ಜೊತೆ ನಮ್ಮ ಹಾಗೂ ನಮ್ಮ ತಂದೆ-ತಾಯಿ ಜೊತೆ ಜಗಳ ಮಾಡಿಕೊಂಡು ಬಂದಿದ್ದು ದಿನಾಂಕ:21/08/14 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಹಾಗೂ ನನ್ನ ಮಗುವಿನೊಂದಿಗೆ ತವರು ಮನೆಯಲ್ಲಿ ಇದ್ದಾಗ ಆಗ ಯಾರೋ ಬಾಗಿಲು ಬಡಿದಾಗ ನಾನು ಹೋಗಿ ಬಾಗಿಲು ತೆಗೆದಾಗ ಆಗ ನನ್ನ ಗಂಡ ಇದ್ದು, ಅವನು ನನಗೆ ಒಮ್ಮಿದೊಮ್ಮಲೆ ನನ್ನ ಕುತ್ತಿಗೆ ಹಿಡಿದು ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಿನ್ನ ತಂದೆ ಎಲ್ಲಿ ಹಣ ಕೇಳಿದರೆ ಕೊಡುವದಿಲ್ಲ ಅಂತಾ ಅನ್ನುತ್ತಿದ್ದಾನೆ ಎಲ್ಲಿ ಇದ್ದಾನೆ ಆ ರಂಡಿ ಮಗ ಅಂತಾ ಅನ್ನುತ್ತಾ ನನ್ನ ಕುತ್ತಿಗೆ ಹಿಡಿದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.