POLICE BHAVAN KALABURAGI

POLICE BHAVAN KALABURAGI

11 August 2014

Gulbarga District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ತಾನಾಜಿ  ತಂದೆ  ಗೋಪಾಲ ರಾಠೋಡ  ಸಾ: ಗೋಗಿ[ಕೆ] ತಾಂಡಾ  ತಾ:ಜಿ: ಗುಲಬರ್ಗಾ  ಇವರು  ದಿನಾಂಕ: 09-08-2014 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ  ನಮ್ಮ ತಾಂಡಾದ ತಿರುಪತಿ ಬಾಲಾಜಿ  ದೇವರ ಗುಡಿಯಲ್ಲಿ ನಮ್ಮ ತಾಂಡಾದವರೆಲ್ಲರೂ ಕೂಡಿಕೊಂಡು ದೇವರ ಖಾಂಡ ಮಾಡಿ ಭಜನೆ ಮಾಡುತ್ತಿದ್ದರು.  ಎಲ್ಲರಂತೆ  ನಾನು ಬಾಲಾಜಿ  ದೇವಸ್ಥಾನದ  ಹೊರಗಡೆ ಖುಲ್ಲಾ ಜಾಗದಲ್ಲಿ  ಕುಳಿತುಕೊಂಡು  ಭಜನೆ  ಕೇಳುತ್ತಿದ್ದೇನು. ನಂತರ ಎಲ್ಲರಂತೆ  ನಾನು ಭಜನೆ  ಮಾಡುವವರಿಗೆ  ಆಹೇರಿ ಮಾಡಲು  ಹಣ  ಮಾಡಲು ಎದ್ದು ಹೋಗುವಾಗ  ನಮ್ಮ ತಾಂಡಾದ ಗೋಮು  ತಂದೆ ಠಾಕರು ರಾಠೋಡ ಈತನು ನನಗೆ ನಡೆಯುವಾಗ ಅಡ್ಡಗಾಲು ಹಾಕಿದ್ದು, ಆಗ ನಾನು ಆಯತಪ್ಪಿ ನೆಲದ ಮೇಲೆ ಬಿದ್ದಿದ್ದು, ನಂತರ ಎದ್ದು ಗೋಮು ರಾಠೋಡ  ಈತನಿಗೆ  ಯಾಕೆ  ನನಗೆ ನೀನು ಅಡ್ಡಗಾಲು ಹಾಕಿದ್ದೀ ಅಂತಾ ಕೇಳಿದ್ದು, ಆಗ  ಗೇಮು ಈತನು  ರಂಡಿ ಮಗನೇ ತಾನ್ಯಾ  ನೀನೇ  ನನ್ನ ಕಾಲು ತುಳಿದು ನನಗೆ ಎದುರು ಮಾತನಾಡುತ್ತೀ ಅಂತಾ ಅವಾಚ್ಯ ಶಬ್ದ್ಗಳಿಂದ ಬೈಯ್ಯುತ್ತಾ1. ಗೋಮು ತಂದೆ ಠಾಕರು ರಾಠೋಡ  2. ಭೀಮು ತಂದೆ ಠಾಕರು ರಾಠೋಡ  3. ಗೋಪಾಲ ತಂದೆ ಠಾಕರು ರಾಠೋಡ  4. ವಿಠಲ ತಂದೆ ಠಾಕರು ರಾಠೋಡ  5. ಮಾರುತಿ ತಂದೆ ಮನ್ನು ರಾಠೋಡ  6. ಏಮನ ತಂದೆ ಮನ್ನು ರಾಠೋಡ   7. ಅರವಿಂದ ತಂದೆ ಮನ್ನು ರಾಠೋಡ  8. ರಮೇಶ ತಂದೆ  ವಿಠಲ  ರಾಠೋಡ  9. ಕೃಷ್ಣಿಬಾಯಿ ಗಂಡ ವಿಠಲ ರಾಠೋಡ  ಮತ್ತು  10. ಹೀರಿಬಾಯಿ ಗಂಡ ಗೋಪಾಲ  ರಾಠೋಡ  ಸಾ: ಎಲ್ಲರೂ ಗೋಗಿ[ಕೆ] ತಾಂಡಾ  ತಾ;ಜಿ: ಗುಲಬರ್ಗಾ  ಇವರುಗಳು ಕೂಡಿಕೊಂಡು ಅಕ್ರಮವಾಗಿ  ಗುಂಪುಕಟ್ಟಿಕೊಂಡು ಬಂದವರೆ  ಬಾಲಾಜಿ  ದೇವಸ್ಥಾನದ ಮುಂದಿನ  ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ  ನನಗೆ  ಅಕ್ರಮವಾಗಿ ತಡೆದು ನಿಲ್ಲಿಸಿ   ಈಗ  ತಾಂಡಾದಲ್ಲಿಯೂ ನಮ್ಮೊಂದಿಗೆ  ತಕರಾರು ಮಾಡುತ್ತಿದ್ದೀಯಾ ಇವತ್ತು  ನಿನಗೆ  ಸುಮ್ಮನೆ ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ  ಬೈಯ್ಯುತ್ತಾ  ಬಡಿಗೆಯಿಂದ  ನನ್ನ  ತೆಲೆಯ ಮೇಲೆ ಹೊಡೆದು  ರಕ್ತಗಾಯ ಗುಪ್ತಗಾಯ ಪಡಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಲ್ಲಪ್ಪ ಪೂಜಾರಿ ಸಾ|| ಕುದಮುಡ, ತಾ|| ಆಳಂದ ಇವರು ಮತ್ತು ಆತನ ಮಾವನಾದ ಭರತ ತಂದೆ ಬೀರಪ್ಪ ಇಬ್ಬರೂ ಸೇರಿ ದಿನಾಂಕ 09/08/2014 ರಂದು ತಮ್ಮೂರಿನಿಂದ ತನ್ನ ಹೊಸ ಹಿರೋ ಹೊಂಡಾ ಮೋಟಾರ ಸೈಕಲ ಅದಕ್ಕೆ ಇನ್ನು ನಂಬರ ಬಂದಿರುವದಿಲ್ಲ, ಅದರ ಮೇಲೆ ದಂಗಾಪೂರ ಗ್ರಾಮಕ್ಕೆ ತನ್ನ ಸಣ್ಣಮ್ಮ ನಿಂಗಮ್ಮನ ಹತ್ತಿರ ಬಂದು ಅವಳನ್ನು ಮಾತನಾಡಿಸಿ ಸಾಯಂಕಾಲ 05.00 ಪಿ.ಎಮ ಕ್ಕೆ ಮರಳಿ ತಮ್ಮೂರಿನ ಕಡೆಗೆ ಹೋರಟಾಗ 05.15 ಪಿ.ಎಮ ಸುಮಾರಿಗೆ ದಂಗಾಪೂರ ಗ್ರಾಮ ದಾಟಿ 1-2 ಕೀ.ಮಿ ದಾಟಿ ಭೂಸನೂರ ಕಡೆಗೆ ಹೊರಟಾಗ ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ ನಂ. ಕೆ.ಎ 32, ಎಫ – 1307 ನೇದ್ದರ ಚಾಲಕನು ಬಸ್ಸನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿರುತ್ತಾನೆ. ಸದರಿ ಅಪಘಾತದಲ್ಲಿ ಫಿರ್ಯಾದಿಯ ಎರಡು ಕಾಲುಗಳಿಗೆ ಭಾರಿ ರಕ್ತಗಾಯ, ಬಲಗೈಗೆ ಭಾರಿ ರಕ್ತಗಾಯ, ಹಣೆಯ ಮೇಲೆ ತರಚಿದ ಗಾಯ, ಭರತನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿರುತ್ತವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 August 2014

Gulbarga District Reported Crimes

ಮೊಬೈಲನಿಂದ ಕೊಟ್ಟಿ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸೈಯದ ನಿಸಾರ ಅಹ್ಮದ ವಜೀರ ತಂದೆ ಸೈಯದ ಇಬ್ರಾಹಿಂ ಸಾಃ ಮನೆ ನಂ. 37, ಎಸ್.ವಿ.ಪಿ ಬಡಾವಣೆ ಜಿ.ಡಿ.ಎ ಲೇಔಟ ಸಂತ್ರಾಸವಾಡಿ ಗುಲಬರ್ಗಾ ದಿನಾಂಕಃ 08/08/2014 ರಂದು ಶುಕ್ರವಾರ ಮದ್ಯಾನ್ಹ ಪ್ರಾರ್ಥನೆ ಮುಗಿಸಿಕೊಂಡು ತಮ್ಮ ಮನೆಯಿಂದ ಕಛೇರಿಗೆ ತೆರಳುವಾಗ ಮನೆಯ ಮುಂದೆ ಸುಮಾರು ಮದ್ಯಾನ್ಹ 03 ಗಂಟೆಗೆ ನನ್ನ ಕಛೇರಿಯ ತಹಸೀಲ್ದಾರರು ಆಗಿರುವ ಶ್ರೀ ಸುರೇಶ ಅಂಕಲಗಿ ಇವರು ತನ್ನ ಮೊಬೈಲ್ ಸಂಖ್ಯೆ 9901112994 ರಿಂದ ನನಗೆ ನನ್ನ ಮೊಬೈಲ್ ಸಂಖ್ಯೆ 9008119394 ನೇದ್ದಕ್ಕೆ ಕರೆ ಮಾಡಿದ್ದು ಮಿಸ್ ಕಾಲ್ ನೋಡಿ ತಕ್ಷಣ ನಾನು ಅವರಿಗೆ ಪುನಃ ಮೊಬೈಲ್ ಮೇಲೆ ಸಂಪರ್ಕಿಸಿದ್ದು ಅವರು ನನಗೆ ತಿಳಿಸಿದ್ದೇನೆಂದರೇ, ನಿಮಗೆ ಲೋಕಾಯುಕ್ತಾ ಎಸ್.ಪಿ ಸಾಹೇಬರು ತಕ್ಷಣ ಮೊಬೈಲ್ ಸಂಖ್ಯೆ 9731624416 ರ ಮೇಲೆ ಮಾತನಾಡಲು ತಿಳಿಸಿರುತ್ತಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಖಮರುಲ್ ಇಸ್ಲಾಂ ಮಾನ್ಯ ಗುಲಬರ್ಗಾ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಶ್ರೀ ಜಾಕಿರ ಇವರು ಸಹ ತಮ್ಮ ಮೊಬೈಲ್ ಸಂಖ್ಯೆ 9886693931 ರಿಂದ ನನ್ನ ಸದರಿ ಮೊಬೈಲಗೆ ಫೋನ್ ಮಾಡಿ ಇದೇ ವಿಷಯ ತಿಳಿಸಿದರು. ಆಗ ನಾನು ನನ್ನ ಸದರಿ ಮೊಬೈಲನಿಂದ ತಕ್ಷಣ ಮೊಬೈಲ್ ಸಂಖ್ಯೆ 9731624416 ಕ್ಕೆ ಫೋನ್ ಮಾಡಿರುತ್ತೇನೆ. ಆಗ ಸದರಿ ಫೋನಿನ ಮೇಲೆ ಆದ ಸಂಭಾಷಣೆ ಏನೆಂದರೇ, ನಾನು ಎಸ್.ಪಿ ಲೋಕಾಯುಕ್ತ ಗುಲಬರ್ಗಾ ರವರಾದ  ಚಿಪ್ಪಾರ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದಾಗ ಸಾಹೇಬರೆ ನಾನು ನಿಮ್ಮ ಕಛೇರಿಗೆ ಬಂದು ಹಾಜರಾಗುತ್ತೇನೆಂದು ಹೇಳಿದೆ. ಆಗ ಅವರು ನನ್ನ ಕಛೇರಿಗೆ ಬರುವುದು ಬೇಡ ಇಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿದ್ದಾರೆ ಅಲ್ಲದೇ ಈಗ ನಮ್ಮ ಕಛೇರಿಗೆ ಅಡ್ವಕೇಟ್ ಜನರಲ್ ಬಂದಿದ್ದಾರೆ. ಈಗ ನನಗೆ ಫೋನ್ ಮಾಡಲಿಕ್ಕೆ ಸುರೇಶ ಹೇಳಿದ್ದಾರೆ ಅಥವಾ ಜಾಕಿರ ಅವರು ಹೇಳಿದ್ದಾರೆ? ಎಂದು ಕೇಳಿದರು. ಆಗ ಸದರಿ ಇಬ್ಬರೂ ಕೂಡ ನಿಮ್ಮನ್ನು ಫೋನಿನ ಮೇಲೆ ಸಂಪರ್ಕಿಸಲು ತಿಳಿಸಿದ್ದಾರೆಂದು ನಾನು ಹೇಳಿದೆ. ಆದಾದ ಮೇಲೆ ಅವರು ಹೇಳಿದ್ದೇನೆಂದರೇ, ನೋಡಿ ನಾನು ಎಸ್.ಪಿ ಲೋಕಾಯುಕ್ತ ರಾಯಚೂರ ಇದ್ದೇನೆ ಹಾಗು ಗುಲಬರ್ಗಾಕ್ಕೆ ಇಂಚಾರ್ಜ ಇದ್ದೇನೆ. ದಿನಾಂಕಃ 16/07/2014 ರಂದು ನಿಮ್ಮ ಮನೆಯ ಮೇಲೆ ಲೋಕಾಯುಕ್ತ ರವರಿಂದ ರೇಡ್ ಆಗಿದ್ದು ಅದರಲ್ಲಿ ನಿಮಗೆ ನಾನು ಸಹಾಯ ಮಾಡಬೇಕೆಂದು ಬಯಸಿದ್ದೇನೆ. ಆದರೆ ಈ ವಿಷಯ ನೀವು ಯಾರೂ ಮುಂದೆ ಬಹಿರಂಗ ಪಡಿಸಬಾರದು ಇದು ನಿಮಗೆ ಮತ್ತು ನನಗೆ ಇಬ್ಬರಿಗೆ ಗೊತ್ತಿರಬೇಕು. ಅಲ್ಲದೇ ನಿಮ್ಮ ಆರ್.ಸಿ. ಬಿಸ್ವಾಸ್ ಸಾಹೇಬರು ಕೂಡ ನಿಮಗೆ ಸಸ್ಪೆಂಡ್ ಮಾಡಲು ನಿಮ್ಮ ವಿರುದ್ದ ಕೂಡಲೇ ರಿಪೋರ್ಟ ಕೊಡಲು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಒಂದಿಲ್ಲ ಒಂದು ನೆಪ ಹೇಳಿ ಮುಂದಕ್ಕೆ ಹಾಕುತ್ತಿದ್ದೇನೆ. ಒಂದು ವೇಳೆ ಅವರು ನಿಮಗೆ ಸಸ್ಪೆಂಡ್ ಮಾಡಿದ ಕೂಡಲೇ ನಾವು ನಿಮ್ಮನ್ನು ಅರೆಸ್ಟ್ ಮಾಡುವುದು ಅನಿವಾರ್ಯವಾಗುತ್ತದೆ. ಈ ಬಗ್ಗೆ ನೀವು ನನಗೆ ನಾಳೆ ಬೆಳಗ್ಗೆ 09:00 ಗಂಟೆಗೆ ಫೋನ್ ಮಾಡಿ ಎಂದು ತಿಳಿಸಿದರು. ದಿನಾಂಕಃ 09/08/2014 ರಂದು ಬೆಳಗ್ಗೆ ಸುಮಾರು 09:40 ಗಂಟೆಗೆ ನಾನು ಸದರಿ ನನ್ನ ಮನೆಯಲ್ಲಿದ್ದಾಗ ಪುನಃ ಇದೇ ಮೊಬೈಲ್ ಸಂಖ್ಯೆ 9731624416 ರಿಂದ ನನಗೆ ನನ್ನ ಮೊಬೈಲ್ ಸಂಖ್ಯೆ 9008119394 ನೇದ್ದಕ್ಕೆ 02 ಸಲ ಕರೆ ಬಂದಿದ್ದು ನಾನು ಫೋನ್ ಲಿಫ್ಟ್ ಮಾಡಲಿಲ್ಲಾ. ನಂತರ ನಾನೇ ವಿಷಯ ತಿಳಿದುಕೊಳ್ಳಲು ಸದರಿಯವರಿಗೆ ಕರೆ ಮಾಡಿದಾಗ ಅವರು ಹೇಳಿದ್ದೇನೆಂದರೇ, ನೋಡಿ ನಿಸಾರ ಅಹ್ಮದ ರವರೆ ನಿಮ್ಮ ಬಗ್ಗೆ ನಾನು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇನೆ ನಮ್ಮ ಲೋಕಾಯುಕ್ತ ಇಲಾಖೆಯಲ್ಲಿ ಎ, ಬಿ ಮತ್ತು ಸಿ ರಿಪೋರ್ಟ ಮಾಡುವುದು ಇರುತ್ತದೆ. ಆದರೆ ನಿಮ್ಮ ಬಗ್ಗೆ ಸಿ ರಿಪೋರ್ಟ ಹಾಕುವ ಬಗ್ಗೆ ಫೈಲ್ ರೆಡಿ ಮಾಡಿಕೊಂಡಿದ್ದೇನೆ. ಇದು ಬೆಂಗಳೂರ ಲೋಕಾಯುಕ್ತ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಾದ ಶ್ರೀ ರಿಯಾಜ್ ಸಾಹೇಬ ಅವರ ಕೈಯಲ್ಲಿ ಇರುತ್ತದೆ. ನಾನು ಅವರಿಗೂ ಸಹ ಎಲ್ಲಾ ರೀತಿಯಿಂದ ಹೇಳಿಕೊಂಡಿದ್ದೇನೆ. ಸೋಮವಾರ ನಿಮ್ಮ ಫೈಲ್ ಅವರ ಟೇಬಲಿಗೆ ಹೋಗುವ ಹಾಗೆ ಮಾಡಿದ್ದೇನೆ. ಈಗ ನಮ್ಮ ರಿಯಾಜ್ ಸಾಹೇಬ ರವರ ಮಗಳ ಮದುವೆ ರವಿವಾರ ಇದೆ. ಇದಕ್ಕೆ ನೀವು ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಆಗ ನಾನು ಸರ್ ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ ಎಂದು ಪುನಃ ಕೇಳಿದೆ. ಆಗ ಅವರು ಮತ್ತೆ ಇದೇ ರೀತಿ ಈ ಮೇಲಿನಂತೆ ಹೇಳುತ್ತಾ ನೀವು ನಮಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳುತ್ತಿರುವಾಗ ನನಗೆ ಯಾವುದೇ ರೀತಿಯ ಅರ್ಥ ಆಗದೇ ಇರುವುದರಿಂದ ನಾನು ಫೋನ್ ಕಾಲನ್ನು ಕಟ್ ಮಾಡಿರುತ್ತೇನೆ. ಸದರಿಯವರೊಂದಿಗೆ ಈ 02 ದಿನಗಳ ಮೊಬೈಲ್ ಸಂಭಾಷಣೆಯಲ್ಲಿ ನಾನು ಯಾವುದೇ ರೀತಿಯ ಆಸೆ ಆಮೇಷಕ್ಕೆ ಒಳಗಾಗದೇ ಅವರೊಂದಿಗೆ ಯಾವುದೇ ವಾಗ್ದಾನ (ಕರಾರು) ಮಾಡಿರುವುದಿಲ್ಲಾ. ಮೊದಲನೇ ದಿನವೇ ಅವರು ಶ್ರೀ ಸುರೇಶ ತಹಸಿಲ್ದಾರ, ಪ್ರಾದೇಶಿಕ ಆಯುಕ್ತರ ಕಛೇರಿ ಗುಲಬರ್ಗಾ ಹಾಗು ಶ್ರೀ ಜಾಕಿರ (ಮಾನ್ಯ ಸಚಿವರ ಆಪ್ತ ಸಹಾಯಕರು) ನಂತರ ನನ್ನೊಂದಿಗೆ ಈ ರೀತಿ ಸರಳವಾಗಿ ಫೋನಿನ ಮೇಲೆ ಮಾತನಾಡುತ್ತಿರುವುದನ್ನು ಗಮನಿಸಿದರೇ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗಳು ಈ ಮಟ್ಟಕ್ಕೆ ಇಳಿದು ಎಲ್ಲರೊಂದಿಗೆ ಫೋನ್ ಮಾಡಿ ನನಗೆ ಸಹಾಯ ಮಾಡುತ್ತೇನೆಂದು ಹೇಳುತ್ತಿರುವುದು ನನಗೆ ನಂಬಿಕೆ ಆಗಿರುವುದಿಲ್ಲಾ. ಆದಾದ ಮೇಲೆ 02 ನೇ ದಿನವೂ ಸಹ ಅವರು ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿ ತಮ್ಮ ಬೇಡಿಕೆ ನನ್ನ ಮುಂದೆ ಇಟ್ಟಿದ ಮೇಲೆ ಇದು ಖೊಟ್ಟಿ (ಬೋಗಸ್) ಫೋನ್ ಎಂದು ಮನವರಿಕೆ ಆದ ಕೂಡಲೇ ನಾನು ಅವರೊಂದಿಗೆ ಮೊಬೈಲ್ ಮೇಲೆ ಮಾತನಾಡುವುದು ಕೂಡಲೇ ನಿಲ್ಲಿಸಿರುತ್ತೇನೆ. ನಂತರ ಲೋಕಾಯುಕ್ತ ಕಛೇರಿ ಗುಲಬರ್ಗಾಕ್ಕೆ ತೆರಳಿ ಮಾನ್ಯ ಎಸ್.ಪಿ ಸಾಹೇಬರ ಮೊಬೈಲ್ ಫೋನ್ 9731624416 ಹೌದು / ಅಲ್ಲಾ ಎಂಬ ಬಗ್ಗೆ ಖಚಿತ ಪಡಿಸಿಕೊಂಡು ಇದು ನಿಜಕ್ಕೂ ಸುಳ್ಳು ಫೋನ್ ಕರೆ ಆಗಿರುತ್ತದೆ ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗಣೇಶ ತಂದೆ ಶಂಕರ ಪವಾರ ಸಾ: ನಂದೂರ ಫೈಲ ತಾಂಡಾ ತಾ:ಜಿ:ಗುಲಬರ್ಗಾ ಇವರು ದಿನಾಂಕ: 09-08-2014 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಇವರ ತಂದೆಯಾದ ಶಂಕರ ತಂದೆ ಭೀಮಲಾ ಪವಾರ ಇವರು  ನನ್ನ ಮಗನಾದ ಸುನೀಲ ಇತನಿಗೆ ಮೈಯಲ್ಲಿ ಆರಾಮವಿಲ್ಲದ ಕಾರಣ ಅವನಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರುವ ಕುರಿತು ನಂದೂರ(ಕೆ) ಗ್ರಾಮಕ್ಕೆ ಹೋಗಿದ್ದು. ನಂತರ 04-15 ಪಿಎಮ ಸುಮಾರಿಗೆ ನನ್ನ ಮಗ ಸುನೀಲ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ತಾತ ಶಂಕರ ಇಬ್ಬರು ನನಗೆ ಆಸ್ಪತ್ರೆಗೆ ತೋರಿಸುವ ಕುರಿತು ನಡೆಯುತ್ತಾ ನಂದೂರ(ಕೆ) ಗ್ರಾಮದ ಶಿವಕುಮಾರ ಹಿರೇಗೌಡರ ಇವರ ಮೆಡಿಕಲ್ ಎದುರು ನಡೆಯುತ್ತಾ ಅಂದಾಜು 4 ಪಿಎಮ ಸುಮಾರಿಗೆ ರಸ್ತೆಯ ಎಡಬದಿಗೆ ಹೊರಟಿದ್ದು. ಆಗ ಗುಲಬರ್ಗಾ ಕಡೆಯಿಂದ ಒಬ್ಬ ಟಂಟಂ ಚಾಲಕ ತನ್ನ ಟಂಟಂ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತ ಬದಿಗೆ ಹೊರಟಿದ್ದ ತಾತ ಶಂಕರ ಇವರಿಗೆ ಡಿಕ್ಕಿಪಡಿಸಿ ಟಂಟಂ ಅನ್ನು ವೇಗದ ನಿಂಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬಿಳಿಸಿದನು. ಇದರಿಂದಾಗಿ ಸದರಿ ಟಂಟಂದಲ್ಲಿದ್ದ ರಾಡಗಳಲ್ಲಿ ಕೆಲವು ರಾಡಗಳು ಶಂಕರನ ಎಡಗಣ್ಣಿಗೆ, ಎಡಗಣ್ಣಿನ ಮೇಲೆ ಭಾರಿ ರಕ್ತಗಾಯ, ತಲೆಗೆ ರಕ್ತಗಾಯವಾಗುವ ಹಾಗೆ ಚುಚ್ಚಿದ್ದು ಮತ್ತು ಎಡಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ತಾತ ಶಂಕರ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಬೇಗನೆ ಬನ್ನಿರಿ ಅಂತಾ ಹೇಳಿದಾಗ ನಾನು ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆ ಶಂಕರ ಇವರಿಗೆ ಈ ಮೇಲಿನಂತೆ ಭಾರಿ ರಕ್ತಗಾಯ, ಗುಪ್ತಗಾಯವಾಗಿ ಮೃತಪಟ್ಟಿದ್ದು. ಅಪಘಾತ ಪಡಿಸಿದ ಟಂ.ಟಂ ಸ್ಥಳದಲ್ಲಿ ಪಲ್ಟಿಯಾಗಿ ಬಿದ್ದಿದ್ದು. ಅದರ ನಂಬರ ನೋಡಲು ಕೆಎ-32-ಎ-7230 ಇದ್ದು. ಸದರಿ ಟಂ.ಟಂ ಚಾಲಕ ಓಡಿ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಬಸವರಾಜ ಸಾ: ಅಂಬಿಕಾ ಕಾಂಪ್ಲೆಕ್ಸ ಲಾಲಗೇರಿ ಕ್ರಾಸ್ ಹತ್ತಿರ  ಗುಲಬರ್ಗಾ ಇವರು. ದಿನಾಂಕ 09-08-2014 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಲಾಲಗೇರಿ ಪಕ್ಕದಲ್ಲಿರುವ ಅರವಿಂದ ಮೇಡಿಕಲ ಸ್ಟೋರ ಎದುರಿನ ರೋಡ ಪಕ್ಕದಲ್ಲಿ ನಾನು ಮತ್ತು ಜಗದೀಪ ಹಾಗು ದತ್ತಾತ್ರೇಯ ಮೂರು ಜನರು ನಿಂತು ಮಾತನಾಡುತ್ತಿರುವಾಗ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಎಕ್ಸ-7446 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 August 2014

Gulbarga District Reported Crimes

ದರೋಡೆ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 09-08-14 ಬೆಳಗಿನ ಜಾವ 2-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿರೇಶ ನಗರ  ಕ್ರಾಸ್ ಹತ್ತಿರ ಇರುವ ಜಾಲಿ ಕಂಟಿಯ ಮರೆಯಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ  ಬಾತ್ಮಿ ಬಂದ ಮೇರೆಗೆ ಶ್ರೀ ಎಮ್.ಬಿ.ಬಿರಾದಾರ ಪಿ.ಎಸ್.ಐ (ಅ.ವಿ) ಬ್ರಹ್ಮಪೂರ ಠಾಣೆ ಮತ್ತು  ಸಿಬ್ಬಂದಿಯವರೊಂದಿಗೆ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೊಗಿ ಜಾಡು ಹಿಡಿದು ನೋಡಲು  ವಿರೇಶ ನಗರದ ಕಡೆಗೆ ಹೋಗುವ ರೋಡಿನ ಎಡಗಡೆ ಜಾಲಿ ಕಂಟಿಗಳಲ್ಲಿ ದರೋಡೆ ಕೋರರು ಗುಜು ಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರೂ ಬರುವದನ್ನು ಗಮನಿಸಿ ಓಡಿರೋ ಓಡಿರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ  ಒಟ್ಟು 6 ಜನರಿಗೆ ಹಿಡಿದು ಕೊಂಡಿದ್ದು ಅವರ ಹೆಸರು 1. ಮುಸ್ತಾಖ ಶಫೀ @ ಭೋಲಾ ತಂದೆ ಅಲಿಂ ಮೀಯಾ  ಸಾ|| ರಹಿಮತ ನಗರ ಗುಲಬರ್ಗಾ 2. ಸೈಯದ ಸದಾಂ ತಂದೆ ಬಾಬುಮಿಯಾ ಸಾ|| ಎಮ್.ಎಸ್.ಕೆ ಮೀಲ ಗುಲಬರ್ಗಾ 3. ಸಾಗರ @ ಸಾಗರ್ಯಾ ತಂದೆ ವಕೀಲ @ ನಾರಾಯಣ ಕಾಂಬಳೆ   ಸಾ|| ಬಾಪು ನಗರ ಗುಲಬರ್ಗಾ 4. ಚಿರಂಜೀವಿ ತಂದೆ ಸುಗಾರಾಮ ಪಾಟೀಲ ಸಾ|| ಬಾಪು ನಗರ ಗುಲಬರ್ಗಾ 5.  ದೇವು @ ದೇವ್ಯಾ ತಂದೆ ಪನ್ನಾ ಸಕಟ ಸಾ|| ಬಾಪು ನಗರ ಗುಲಬರ್ಗಾ  6. ಅಜರ್ುನ ತಂದೆ ವಿಜಯ ಕಾಂಬಳೆ ಸಾ|| ಬಾಪು ನಗರ ಗುಲಬರ್ಗಾ ಅಂತಾ ತಿಳಿಸಿದ್ದು  ಸದರಿಯವರ ವಶದಲ್ಲಿದ್ದ ನಗದು ಹಣ ಒಟ್ಟು 5618/- ರೂಪಾಯಿ ಹಾಗು  ದರೊಡೆ ಮತ್ತು ಸುಲಿಗೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ 2 ಮೋಟಾರು ಸೈಕಲಗಳಾದ 1] ಒಂದು ಸಿ.ಟಿ 100 ಮೋಟಾರ ಸೈಕಲ್ ನಂ. ಕೆಎ-32.ಕ್ಯೂ-9876 ಕಪ್ಪು ಬಣ್ಣದು ಅ||ಕಿ|| 35.000/- 2) ಹಿರೋಹೊಂಡಾ ಸ್ಪ್ಲೆಂಡರ್  ಮೋಟಾರ ಸೈಕಲ್ ನಂಬರ ಕೆಎ-32. ಎಲ್-1199 ಕಪ್ಪು ಬಣ್ಣದು ಅ|| ಕಿ|| 35.000/-  ಮತ್ತು ಕೃತ್ಯಕ್ಕೆ ಬಳಸಲು ತಂದಿದ್ದ ಖಾರದ ಪುಡಿ ಪಾಕೀಟಗಳು, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ ಹಾಗು ಹಗ್ಗಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಸುರೇಶ ತಂದೆ ಲಾಲುಸಿಂಗ್ ಪವಾರ ಸಾ; ಮಹಾರಾಜ ಹೋಟಲ ಎದುರುಗಡೆ ಐವಾನ್-ಶಾಹಿ ರೋಡ ಗುಲಬರ್ಗಾ ರವರ  ಅಕ್ಕ ಅನುಷಾ ಮತ್ತು ಭಾವ ರಾಜು ಇವರಿಬ್ಬರೂ ಮೃತಪಟ್ಟಿದ್ದರಿಂದ ಅವರ ಮಕ್ಕಳಾದ ಸಪ್ನಾ ಮತ್ತು ರಾಹುಲ ಇವರು ಸುಮಾರು 5 ವರ್ಷಗಳಿಂದ ನಮ್ಮಲ್ಲಿಯೇ ಇರುತ್ತಾರೆ. ಸಪ್ನಾ ಇವಳೂ ದಿನಾಂಕ 7.08.2014 ರಂದು ಮನೆಯ ಮುಂದೆ ಆಡುತ್ತಿದ್ದಳು. ಸುಮಾರು 4 ಗಂಟೆಯ ಸುಮಾರಿಗೆ ನಾನು ಹೊರಗಡೆ ಬಂದು ನೋಡಲಾಗಿ ಸಪ್ನಾ ಇವಳು ಕಾಣಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ನಾನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ. ಕಾರಣ ಕಾಣೆಯಾದ ಸಪ್ನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಥಾವರು ತಂದೆ ಪಾಂಡು ಪವಾರ ಸಾ; ಚೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ  ರವರು ದಿನಾಂಕ 07-08-2014 ರಂದು 8 ಗಂಟೆಗೆ ಸುಮಾರಿಗೆ ಶ್ರಾವಾಣ ಮಾಸವಿದ್ದ ಸಂಭಂದ ಜೋಕ್ಲಾ ನಾಯ್ಕ ತಾಂಡದ ಹುನುಮಾನ ದೇವರ ಗುಡಿಯಲ್ಲಿ ಪಿರ್ಯಾದಿ ಮತ್ತು ಆರೋಪಿತರು ಹಾಗೂ ತಾಂಡದ ಇತರರು ಕೂಡಿಕೊಂಡು ಭಜನೆ ಮಾಡಿ ರಾತ್ರಿ 10 ಗಂಟೆಗೆ ಸಮಯ ಬಹಳ ಆಗಿದ್ದರಿಂದ ಪಿರ್ಯಾದಿ ಹುಮನಾನ ದೇವರಿಗೆ ಟೆಂಗು ಒಡೆದು ಆರತಿ ಮಾಡಿ ಭಜನೆಯನ್ನು ಮುಗಿಸಿದ್ದರಿಂದ ಇದೆ ವಿಷಯದಲ್ಲಿ ದೇವಿದಾಸ ಸಂಡಗ 3 ಜನರು ಎಲ್ಲರೂ ಸಾ; ಜೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ ಇವರು ಅವಾಚ್ಯ ಶಭ್ದಗಳಿಂದ ಬೈದ್ದು, ಪ್ರಚೋದನೆ ಯಿಂದ ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಹಾಕಿದ ಪ್ರಕಣ :
ನಿಂಬರ್ಗಾ ಠಾಣೆ : ಶ್ರೀ ಶಾಂತಮಲ್ಲಪ್ಪ ಹೆಚ್.ಸಿ 434 ನಿಂಬರ್ಗಾ ಪೊಲೀಸ ಠಾಣೆರವರು ದಿನಾಂಕ  01-08-2014 ರಂದು 15-30 ಗಂಟೆಗೆ ತನ್ನ ಮೊಬೈಲ ನಂ. 9449693699 ನೇದ್ದಕ್ಕೆ ಮೋಬೈಲ ನಂ. 9902496551 ನೇದ್ದರಿಂದ ಯಾವುನೊ ಒಬ್ಬ ವ್ಯಕ್ತಿಯು ಜೀವ ಬೆದರಿಕೆ ಕರೆ ಮಾಡಿರುತ್ತಾನೆ ಕಾರಣ ಮಾನ್ಯರವರು ಸದರಿ ಮೋಬೈಲ ನಂಬರದಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಪ್ಪ ತಂದೆ ಶರಣಪ್ಪ ದೇವಣಿ  ಸಾ : ಮೈಸಲಗಿ ತಾ: ಬಸವಕಲ್ಯಾಣ ಜಿ : ಬೀದರ ರವರು ಬೆಳಗ್ಗಿನ ಜಾವ 2.00 ,ಎಮ್,ದ ಸೂಮಾರಿಗೆ ನನ್ನ ಲಾರಿ ಚಾಲಕ ಕಿಶನ ಇತನು ಪೋನ ಮಾಡಿ ತಿಳಿಸಿದ್ದೇನಂದರೆ ಮದ್ಯ ರಾತ್ರಿ 1.00 ಗಂಟೆಯ ಸೂಮಾರಿಗೆ ತಾನು ಸದರ ಲಾರಿ ಚಲಾಯಿಸಿಕೊಂಡು ಗುಲಬರ್ಗಾ ಕಡೆಗೆ ಹೋಗುತ್ತಿದ್ದಾಗ ಕುರಿಕೋಟ ಗ್ರಾಮದ ಸಮೀಪ ರೋಡಿನ ಎಡಗಡೆ ತೆಗ್ಗಿನಲ್ಲಿ ಲಾರಿ ಅಪಘಾತವಾಗಿರುತ್ತದೆ ಇದರಿಂದ ತನಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಅಂತಾ ತಿಳಿಸಿದನು ದಿನಾಂಕ 08-08-2014  ರಂದು ಬೆಳಗ್ಗೆ 11.00 ಗಂಟೆಗೆ ನಾನು ಸ್ಥಳದಲ್ಲಿ ಬಂದು ನೋಡಲಾಗಿ ಹಕೀಕತ ನಿಜಾಇದ್ದು ಲಾರಿ ನೋಡಲಾಗಿ ಲಾರಿ ಬಲಮಗ್ಗಲಾಗಿ ಬಿದ್ದಿದ್ದು ಮುಂದಿನ ಗ್ಲಾಸ ಒಡೆದು ಹೋಗಿದ್ದು ಸೈಡ ಬಾಡಿ ಜಖಂ ಗೊಂಡಿದ್ದು ಕ್ಯಾಬೀನ , ಲಾರಿಯ ಚೆಸ್ಸಿ , ಬೆಂಡ್ ಹಾಗೂ ಹೌಸಿಂಗ ಇತ್ಯಾದಿಗಳು ಜಖಂ ಗೊಂಡಿರುತ್ತವೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.