POLICE BHAVAN KALABURAGI

POLICE BHAVAN KALABURAGI

07 August 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಕಮಲಾಪೂರ ಠಾಣೆ : ಕಮಲಾಪೂರ ಗ್ರಾಮದ ಸುಭದ್ರಾ ಕಾಂಪ್ಲೇಕ್ಸ್ ಎದುರುಗಡೆ ಇರುವ  ರಾಚೋಟೇಶ್ವರ  ಪಾನ ಶಾಪದ  ಹತ್ತಿರ  ಸಾರ್ವಜನಿಕ  ರಸ್ತೆಯ  ಮೇಲೆ  ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ  ಸಾರ್ವಜನಿಕರಿಂದ ಹಣವನ್ನು ಪಡೆದುಕುಂಡು ಏನೋ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಿದ್ದು, ಹಾಗೂ ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಅಂತಾ ಕರೆಯುತ್ತಿರುವುದನ್ನು ನೋಡಿ ಖಚಿತಪಡಿಸಿಕೂಂಡು  ಎ ಎಸ್.ಐ ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ವಿಚಾರಿಸಲು  ರಾಮನಾಥ ತಂದೆ ಚಂದ್ರಪ್ಪ ರಾಜೇಶ್ವರ  ಸಾ; ಕಮಲಾಫೂರ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 3665/- ರೂಪಾಯಿ, ಒಂದು  ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಮತ್ತು ಎರಡು ಬಾಲಪೆನ್  ವಶಪಡಿಸಿಕೊಂಡು ಮರಳಿ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 06-08-2014 ರಂದು ಮಧ್ಯಾಹ್ನ 03-00 ಗಂಟೆಗೆ ಕಾಳಮಂದರ್ಗಿ ಗುತ್ತಿ ತಾಂಡಾದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಮೇರೆಗೆ ಶ್ರೀ.ಸಿದ್ರಾಮಪ್ಪ ಎ.ಎಸ್.ಐ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದು 1. ವಿಕ್ರಮ ತಂದೆ ನಾಮು ರಾಠೋಡ ರ್ಷ  2. ಸಂದೀಪ್ ತಂದೆ ಬಳಿರಾಮ ಜಾಧವ  3. ಪ್ರಕಾಶ ತಂದೆ ಹರಿಶ್ಚಂದ್ರ ಪವಾರ  4. ದಿಲೀಪ್  ತಂದೆ  ಜೈಚಂದ್ರ ಜಾಧವ  5. ಸಂತೋಷ ತಂದೆ ಭೀಮಲಾ ರಾಠೋಡ 6. ಸಂಜುಕುಮಾರ ತಂದೆ ನಾಮದೇವ ರಾಠೋಡ 7. ಅಶೋಕ ತಂದೆ ಕಿಶನ ಜಾಧವ  ಎಲ್ಲರೂ  ಸಾ: ಕಾಳಮಂದರ್ಗಿ ಗುತ್ತಿ ತಾಂಡಾ  ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು  ಇಸ್ಪೀಟ್  ಜೂಜಾಟಕ್ಕೆ  ಸಂಭಂದಿಸಿದ  ನಗದು ಹಣ 1150 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತು ಪಡಿಸಿಕೊಂಡ  ಮರಳಿ ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ರವಿಕುಮಾರ ತಂದೆ ಬಸವರಾಜ ಬೆಣ್ಣೂರ ಸಾ: ಮ.ನಂ. 11-45/29 ಮಹಾಲಕ್ಷ್ಮಿ ಲೇಔಟ ಫೈಯರ ಸ್ಟೇಷನ ಎದುರುಗಡೆ ಗುಲಬರ್ಗಾ ರವರು ದಿನಾಂಕ  06-08-2014 ರಂದು ಸಂಜೆ 7-45 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಗೆಳೆಯರಾದ ಪ್ರದೀಪ ಪಾಟೀಲ, ಗುರುಪ್ರಸಾದ ಪಾಟೀಲ, ಶಿವಶರಣ ರಾಮಪೂರ, ಎಲ್ಲರೂ ಮಾತನಾಡುತ್ತಾ ವೆಂಕಟಗೀರಿ ಹೊಟೇಲ ಎದುರಿಗೆ ಇರುವ ಗುರುಶಾಂತಯ್ಯಾ ಸ್ವಾಮಿ ರವರ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಂತಾಗ ಕಾರಿನಲ್ಲಿ ಬಂದು ವ್ಯಕ್ತಿ ಮಿರರ್ ತಾಗಿಸಿದಕ್ಕೆ ಕಾರ ನಡೆಸಲು ಬರುವುದಿಲ್ಲಾ ಎಂದು ಕೇಳಿದಕ್ಕೆ ಆ ವ್ಯಕ್ತಿ ಕಾರಿನಿಂದ ಇಳಿದು ಬಂದು '' ಏನು ಮಾತನಾಡುತ್ತಿ ಬೋಸಡಿ ಮಗನೇ ಏನು ನಿಗರಿ ನೋಡತ್ತಿ ಅಂತಾ ಅವಾಚ್ಯ ಶಬ್ಗಗಳಿಂದ ಬೈದು ನಿನಗೆ ಶೂಟ ಮಾಡುತ್ತಿನಿ ಅಂತಾ ಬಗಲಲ್ಲಿ ಇದ್ದ ಪಿಸ್ತೂಲಿನಿಂದ ಹೊಡೆಯಲು ಬಂದು ಕೊಲೆಗೆ ಯತ್ನಿಸಿರುತ್ತಾನೆ. ಅಷ್ಠರಲ್ಲಿ ನನ್ನ ಗೆಳೆಯರಾದ ಪ್ರದೀಪ ಪಾಟೀಲ, ಗುರುಪ್ರಸಾದ ಪಾಟೀಲ, ಶಿವಶರಣ ಅವರು ಬಂದು ಯಾಕೆ ಪಿಸ್ತೂಲಿನಿಂದ ಹೆದರಿಸುತ್ತಿದ್ದಿರಿ ಅಂತಾ ಆ ವ್ಯಕ್ತಿಗೆ ಕೇಳಿದಾಗ ನನ್ನ ಹೆಸರು ಜಗದೀಶ ಅಂಬಲಗಿ ಇದೆ ನನ್ನ ಹತ್ತಿರ ಪಿಸ್ತೂಲ್  ಲೈಸನ್ಸ ಇದೆ ಪೊಲೀಸರು ಏನು ಮಾಡಲ್ಲಾ ಅಂತಾ ಹೇಳಿ ಹೆದರಿಸಿ ಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಸಮೀಮ್ ತಂದೆ ಮಹ್ಮದ ಸಲಿಮ ಸಾ|| ಗುಲಶನ ಚೌಕ ಮದಿನಾ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ|| 06-08-2014 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ತಾನು ಮತ್ತು ತಂದೆ ಕೂಡಿಕೊಂಡು ನಜೀರ ಪಟೇಲ ಈತನಿಗೆ ನೀವು ಹಾಕುತ್ತಿರುವ ನಿಮ್ಮ ಮನೆಯ ಚತ್ ನಮ್ಮ ಜಾಗದಲ್ಲಿ ಬರುತ್ತಿದ್ದು  ಅದನ್ನು ಅಳತೆ ಮಾಡಿ ಹಾಕಿಕೊಳ್ಳಿ ಅಂತಾ ಹೇಳುತ್ತಿದ್ದಾಗ ನಜೀರ ಪಟೇಲ ಈತನು ನಮ್ಮೊಂದಿಗೆ ಜಗಳಾ ತೆಗೆದು ನಾನು ನಮ್ಮ ಜಾಗದಲ್ಲಿ ಕಟ್ಟುತ್ತಿದ್ದು ನೀನು ಏಕೆ ನನಗೆ ಬಂದು ಕೇಳುತ್ತಿರುವೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತ ತನ್ನ ಹತ್ತಿರ ಇದ್ದ ಒಂದು ಚಾಕುವಿನಿಂದ ಫಿರ್ಯಾದಿಯ ಮುಗಿನ ಹತ್ತಿರ ಹೊಡೆದಿದ್ದರಿಂದ ನನಗೆ ರಕ್ತ ಬರಹತ್ತಿದ್ದು  ಇದನ್ನು ನೋಡಿ ನಮ್ಮ ತಂದೆ ನಜೀರ ಪಟೇಲ ಇವರ ಕುಟುಂಬದವರಾದ ಮಲಂಗಹಾಗು ಅವರ ಮನೆಯ ಹೆಣ್ಣು ಮಕ್ಕಳಾದ ಜಾಹೀದ, ಪರವಿನ ಶಮಿಮ ಜಾಹಾಂ, ಹೀನಾ, ಕೌಸರ ಇವರೆಲ್ಲರೂ ಸೇರಿ ನನ್ನ ತಂದೆಗೆ ಕೈಯಿಂದ ಹೊಡೆದು ಅಲ್ಲಲ್ಲಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ಶೇಖ ರಶೀದ ಅಹ್ಮದ ಕಿರಿಯ ಇಂಜನಿಯರ್ (ವಿ) ಜೇಸ್ಕಾಂ ಗುಲಬರ್ಗಾರವರು ನಾಗಲೇಗಾಂವ ಗ್ರಾಮದ ಶ್ರೀ.ಶ್ರೀಕಾಂತ ತಂದೆ ಶರಣಪ್ಪ ಮಂಜೂಳಕರ್ ರವರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಸರಬರಾಜು ಮಾಡಲು 25 ಕೆ.ವಿ.ಎ ವಿದ್ಯುತ್ ಪರಿವರ್ತಕ ಮಂಜೂರಾಗಿದ್ದು ಅವರ ಹೊಲದಲ್ಲಿ ವಿದ್ಯುತ್ ಕಾಮಗಾರಿಯು ನಡೆಯುತ್ತಿದ್ದು ದಿನಾಂಕ:25/05/2014 ರಂದು ರಾತ್ರಿ ಸುಮಾರು 07:00 ಗಂಟೆ ಯಿಂದ ದಿ:26/05/2014 ರ ಬೇಳಗ್ಗೆ 06:00 ಗಂಟೆ ಅವಧಿಯೊಳಗೆ 25 ಕೆ.ವಿ.ಎ ವಿದ್ಯುತ್ ಪರಿವರ್ತಕದ ತೈಲ ಚೆಲ್ಲಿ ಅದರೊಳಗಿನ ವೈಂಡಿಂಗ್ ಕಾಯಿಲ್ ಗಳುನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೊತ್ತ ರೂಪಾಯಿ 14,500/- ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಗಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿನೋದ ತಂದೆ ಯಲ್ಲಪ್ಪ ಇಂಗಳಗಿ ಸಾ: ರಾಜಾಪೂರ ಗುಲಬರ್ಗಾ ರವರು ದಿನಾಂಕ 06-07-2014 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ತಾನು ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಕೆಎ-32 ಇಡಿ-8540 ನೇದ್ದರ ಹಿಂದುಗಡೆ ದೇವಿಂದ್ರ ಇತನನ್ನು ಕೂಡಿಸಿಕೊಂಡು ಕೋರ್ಟ ಕ್ರಾಸ ಕಡೆಯಿಂದ ಸ್ಟೇಶನ ಏರಿಯಾದಲ್ಲಿ ಬರುವ ನನ್ನ ಗೆಳಯ ಮಲ್ಲು ಇವರ ಹತ್ತಿರ ಹೋಗುವಾಗ ಎಸ್.ವಿ.ಪಿ. ಸರ್ಕಲ ಹತ್ತಿರ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಸ್ಟೇಶನ ಏರಿಯಾ ಕಡೆಗೆ ಹೋಗುವ ಕುರಿತು ಲಾರಿ ನಂಬರ ಕೆಎ-31 -7211 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಮೋ/ಸೈಕಲ ಎಡಗಡೆಯ ಫುಟರೆಸ್ಟ, ಎರಡು ಶಾಗಪ್ಸ ಗೇರ, ಹಿಂದಿನ ವಿಲ ಹಾಗು ಕ್ಲಚ ಡ್ಯಾಮೇಜ ಮಾಡಿ ತನ್ನ ಲಾರಿ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 August 2014

Gulbarga District Reported Crimes

ಕಳವು ಪ್ರಕರಣಗಳು ;
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಅಶ್ವಿನಿ ಗಂಡ ನಾಗರಾಜ ವಡ್ಡನಕೇರಿ ಸಾ: ಪ್ಲಾಟ ನಂ. 43 ಲಕ್ಷ್ಮೀ ನಗರ ಎಂ.ಬಿ ನಗರ ಪೊಲೀಸ ಠಾಣೆ ಎದುರಗಡೆ ಗುಲಬರ್ಗಾ ರವರ ಮತ್ತು ನನ್ನ ನೆಗೆಣಿಯಾದ ದೀಪಾ ಮನೆಯಲ್ಲಿ ಇದ್ದು. ಮಂಗಳಗೌರಿಯ ಪೂಜೆಯನ್ನು ಮಾಡಿದ ನಂತರ ನಿನ್ನೆ ದಿನಾಂಕ: 05-08-2014 ರಂದು ಮದ್ಯಾಹ್ನ 1:00 ಗಂಟೆಗೆ ನಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ದೀಪಾ ಇಬ್ಬರು ನಮ್ಮ ಮನೆ ಕೀಲಿ ಹಾಕಿಕೊಂಡು ಹೋಗಿದ್ದು ನಂತರ ಕಾರ್ಯಕ್ರಮ ಮುಗಿಸಿಕೊಂಡು ಜಯನಗರದಿಂದ ಮರಳಿ 5:00 ಪಿಎಮ ಸುಮಾರಿಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಹಿಂದನ ಬಾಗಿಲ ಒಳಕೊಂಡಿಯನ್ನು ಮುರಿದು ಯಾರೊ ಕಳ್ಳರು ಒಳಗೆ ಒಂದು ಅಲಮಾರಿ ಬಾಗಿಲು ತೆರೆದು ಅದರೊಳಗಿದ್ದ ಬಂಗಾರದ ಮತ್ತು ಬೆಳಳಿಯ ಆಭರಘಳು ಮತ್ತು ನಗದು ಹಣ ಹೀಗೆ ಒಟ್ಟು 5,22,,000/- ರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ರಾಘವೇಂದ್ರ ಗುಪ್ತಾ ತಂದೆ ಎಂ. ಲಕ್ಷ್ಮೀನಾರಾಯಣ ಗುಪ್ತ ಸಾಜಾಗೆ ಸರ್ವೆ ನಂ. 43/2 ಗ್ಯಾಲಕ್ಷೀ ಅಗ್ರಿಟೆಕ್ ನಿಯರ ಮದರಥೆರಸಾ ಆಸ್ಪತ್ರೆ ಹತ್ತಿರ  ಹುಮನಾಬಾದ ರೋಡ ಗುಲಬರ್ಗಾ ಇವರು ಗುಲಬರ್ಗಾ ಹುಮನಾಬಾದ ರೋಡಿನ ಉಪಳಾಂವ ಸೀಮಾಂತರದಲ್ಲಿ ಜಮೀನ ಸರ್ವೆ ನಂ. . 43/2 ಗ್ಯಾಲಕ್ಷೀ ಅಗ್ರಿಟೆಕ್  ಫ್ಯಾಕ್ಟರಿ ಇದ್ದು , ಈ ಫ್ಯಾಕ್ಟರಿಯು ನನ್ನ ತಾಯಿ ಶ್ರೀಮತಿ ವರಲಕ್ಷ್ಮೀ  ಗುಪ್ತಾ  ಗಂ.ಡ  ಎಂ.ಲಕ್ಷ್ಮೀನಾರಾಯಣ ಗುಪ್ತ  ಇವರ ಹೆಸರಿನಲ್ಲಿ ಇದ್ದು ದಿನಾಂಕ.4-8-2014 ರಂದು 1-30,ಎಂ. ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಮಲಗಿದ್ದು ಬೆಳಗ್ಗೆ 7-00 ಗಂಟೆಗೆ ಎದ್ದು ನೋಡಲಾಗಿ ನಮ್ಮ ಫ್ಯಾಕ್ಟರಿಯ ಶಟರ ಗೇಟ ಮುರಿದು ಒಳಗೆ ಪ್ರವೇಶ ಮಾಢಿ ಒಳಗಿದ್ದ ಕಾಪರ ವೈರ ಸಾಮನುಗಳು ಹೀಗೆ ಒಟ್ಟು 2,47,365/- ರೂ ಕಿಮ್ಮತ್ತಿನ ಮಾಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮ ತಂದೆ ದತ್ತು ಕಲಶೆಟ್ಟಿ ಸಾ : ಲಿಂಬಿ ತೋಟ ಅಫಜಲಪೂರ ರವರು ದಿನಾಂಕ 02-08-2014 ರಂದು ರಾತ್ರಿ 11 ಗಂಟೆಗೆ ತನ್ನ ಮೋಟರ ಸೈಕಲನ್ನು ಹ್ಯಾಂಡ್ ಲಾಕ್ ಮಾಡಿ ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿರುತ್ತೇವೆ. ನಂತರ ರಾತ್ರಿ 1 ಗಂಟೆಗೆ ನನಗೆ ಎಚ್ಚರವಾದಾಗ ಎದ್ದು ಮನೆ ಹೊರಗೆ ಬಂದು ನೋಡಿದ್ದು ನನ್ನ ಮೋಟರ ಸೈಕಲ್ ನಾನು ನಿಲ್ಲಿಸಿದ ಸ್ಥಳದಲ್ಲೆ ಇತ್ತು, ನಂತರ ನಾನು ಮನೆಯಲ್ಲಿ ಹೋಗಿ ಮಲಗಿಕೊಂಡೆನು. ಎಂದಿನಿಂತೆ ನಮ್ಮ ತಂದೆ ರಾತ್ರಿ 03;00 ಗಂಟೆಗೆ ಎದ್ದು ಮನೆ ಹೊರಗೆ ಬಂದು ನೋಡಿದಾಗ ನಮ್ಮ ಮೋಟರ ಸೈಕಲ್ ಇರಲಿಲ್ಲ. ನಂತರ ನಮ್ಮ ತಂದೆ ನನಗೆ ಎಬ್ಬಿಸಿದ್ದು, ಆಗ ನಾನು ನೋಡಲಾಗಿ ನಮ್ಮ ಮೋಟರ ಸೈಕಲ್ ಕಂಡಿರಲಿಲ್ಲನಂತರ ಅಲ್ಲೆ ನಮ್ಮ ಓಣಿಯಲ್ಲಿ ಎಲ್ಲಾ ಕಡೆ ಹುಡಕಾಡಿದರು ನನ್ನ ಮೋಟರ ಸೈಕಲ್ ಸಿಕ್ಕಿರುವುದಿಲ್ಲ. ನಮ್ಮ ಮನೆಯ ಮುಂದೆ ನಿಲ್ಲಿಸಿದ ಅಂದಾಜು 45,000/- ರೂ ಬೆಲೆಬಾಳುವ ನನ್ನ ಬಜಾಜ ಮೋಟರ ಸೈಕಲ್ ನಂ ಕೆ.-32/.ಎಫ್-6952 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಮಾಹಾದೇವಪ್ಪ ತಂದೆ ಮಾರುತಿ ವಡ್ಡರ ಸಾ: ಬಟಗೇರಾ(ಕೆ) ಗೇಟ್ ಇವರು ದಿನಾಂಕ: 04-08-14 ರಂದು 3-30 ಪಿಎಮ್.ದ ಸುಮಾರಿಗೆ ಸಾಧಿಕ್ ಇವರ ಹೊಟೇಲನಲ್ಲಿ ಚಹಾ ಕುಡಿದು ಮೊಬೈಲ್ ರಿಚಾರ್ಜ ಕಾರ್ಡ ತಗೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ನನ್ನ ಕಾಲು ಆನಂದ ತಂದೆ ವೀರಯ್ಯ ಸ್ವಾಮಿ ಇತನಿಗೆ ಹತ್ತಿದ್ದರಿಂದ ಆನಂದ ಮತ್ತು ಮಾಹಾನಂದ ಇಬ್ಬರೂ ಕೂಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಆನಂದ ಇತನು ಕಾಲಿನಿಂದ ನನ್ನ ಹೊಟ್ಟೆಗೆ ಒದ್ದು ಗುಪ್ತ ಗಾಯ, ಕೈಯಿಂದ ತುಟಿಗಳಿಗೆ ಹೊಡೆದು ರಕ್ತ ಗಾಯ ಮತ್ತು ಗುಪ್ತ ಗಾಯ ಮಾಡಿದ್ದು ಆನಂದ ಇತನು ಕಲ್ಲಿನಿಂದ ಈ ರಂಡೀ ಮಗನ ಸೊಕ್ಕೆ ಬಹಳ ಇದೆ ಅಂತ ಅಂದವನೇ ಕಲ್ಲಿನಿಂದ ಬಲ ಮೆಲಕಿನ ಹತ್ತಿರ ಹೊಡೆದು ರಕ್ತ ಗಾಯ ಮತ್ತು ಗುಪ್ತ ಗಾಯ ಪಡಿಸಿ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಆಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ ;
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹ್ಮದ ಫಿರೋಜ್ ತಂದೆ ಮಹ್ಮದ ಯಾಕೂಬ್ ಇವರು ಈಗ ಸುಮಾರು 06 ತಿಂಗಳ ಹಿಂದೆ ನನಗೆ ಹಣದ ಅಡಚಣೆ ಇದ್ದ ಪ್ರಯುಕ್ತ ನಮ್ಮ ಓಣಿಯಲ್ಲಿರುವ ರಾಮು ಡಿಗ್ಗಿ ಇವರ ಹತ್ತಿರ 10,000/- ರೂ. ಸಾಲವನ್ನು ಬಡ್ಡಿಯಿಂದ ತೆಗೆದುಕೊಂಡಿದ್ದು ಅದರಂತೆ ಪ್ರತಿ ತಿಂಗಳು ಬಡ್ಡಿ ಹಣ ಕೊಡುತ್ತಾ ಬಂದಿದ್ದು, ರಂಜಾನ್ ಹಬ್ಬ ಇದ್ದ ಪ್ರಯುಕ್ತ ಒಂದು ತಿಂಗಳ ಬಡ್ಡಿ ಹಣ ಕೊಡಲು ಆಗಿಲ್ಲಾ. ದಿನಾಂಕಃ 04/08/2014 ರಂದು ರಾತ್ರಿ 09:00 ಪಿ.ಎಂ. ಸುಮಾರಿಗೆ ನಾನು ರಾಮು ಡಿಗ್ಗಿ ಇವರ ಮನೆಗೆ ಹೋಗಿ ನಾನು ಕೇವಲ ಬಡ್ಡಿ ಹಣ ಮಾತ್ರ ಕೊಡುತ್ತೇನೆ ಪ್ರತಿ ದಿನ 100/- ರೂ. ಹಾಕಿ ಕೊಡುವುದಿಲ್ಲಾ ಅಂದಿದ್ದಕ್ಕೆ ಸದರಿ ರಾಮು ಈತನು 100/- ರೂ. ಕೊಡುವುದಿಲ್ಲಾ ಅಂತಿಯಾ ಭೋಸಡಿಕೆ ಅಂದವನೇ ಅಲ್ಲಿಯೇ ಇದ್ದ ಬಡಿಗೆ ತೆಗೆದುಕೊಂಡು ನನಗೆ ಎಡಗೈ ರಟ್ಟೆಯ ಮೇಲೆ, ಎಡಗಡೆ ಮಗ್ಗಲಿಗೆ ಕಾಲುಗಳಿಗೆ ಹೊಡೆದನು ಮತ್ತು ಕೈಗಳಿಂದ ಎಡ ಕಪಾಳಿನ ಮೇಲೆ ಹಾಗು ಕಿವಿಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಅಜರಉದ್ದಿನ ಸಿದ್ದಿಕಿ ತಂದೆ ಮಹ್ಮದ ನಸೀರೋದ್ದಿನ ಸಿದ್ದಿಕಿ ಸಾ|| ಗಾಲಿಬ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ|| 31-07-2014 ರಂದು ಮನೆ ಕೆಲಸ ಮುಗಿಸಿಕೊಂಡು ಸಾಯಂಕಾಲ 07-00 ಗಂಟೆ ಸುಮಾರಿಗೆ  ತನ್ನ ಹೀರೋ ಹೊಂಡಾ ಸ್ಲೇಂಡರ್ ಮೋಟಾರ ಸೈಕಲ ನಂ ಕೆಎ-32-ಎಲ್-8392  ಮನೆಯ ಮುಂದೆ ನಿಲ್ಲಿಸಿ ಲಾಕ್ ಹಾಕಿ ಮನೆಯ ಒಳಗೆ  ಹೋಗಿ ನಂತರ ಊಟ ಮುಗಿಸಿಕೊಂಡು ನಮ್ಮ ತಾಯಿಯವರಿಗೆ ಮಾತ್ರೆಗಳು ತೆಗೆದುಕೊಂಡು ಬರಲು ಅಂತಾ ರಾತ್ರಿ  09-15 ಗಂಟೆಗೆ ಹೊರಗೆ ಬಂದು ನೋಡಲು ಸದರಿ ನನ್ನ ಹೀರೋ ಹೊಂಡಾ ಸ್ಲೇಂಡರ್ ಕಪ್ಪು ಬಣ್ಣದು  ಅಲ್ಲಿ ಇರಲಿಲ್ಲ ಸದರ ನನ್ನ ಮೋಟಾರ ಸೈಕಲ ಯಾರಾದರೂ ನಮ್ಮವರೆ ತೆಗೆದುಕೊಂಡು ಹೋಗಿರಬಹುದು ಅಂತಾ ಅಲ್ಲಿಯವರೆಗೆ ಕಾಯ್ದು ನೋಡಲು ಸದರ ಮೋಟಾರ ಸೈಕಲ ಸಿಕ್ಕಿರುವದಿಲ್ಲ  ಸದರ ಮೋಟಾರ ಸೈಕಲ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂದಾಜ ಕಿಮ್ಮತ್ತು 25,000/- ರೂಪಾಯಿ ಅಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಮಲ್ಲಿಕಾರ್ಜುನ ತಂದೆ ಶಿವಶರಣಪ್ಪಾ ಕಲಶೆಟ್ಟಿ ಸಾ|| ಹೆಬಳಿ ತಾ|| ಆಳಂದ ರವರದೊಂದು ರೇವಣಸಿದ್ದೇಶ್ವರ ಕಾಲನಿಗೆ ಹೋಗುವ ದಾರಿಯಲ್ಲಿ ಆಳಂದ ಪೋಸ್ಟ ಆಫಿಸ್ ಹತ್ತಿರ ಮೋಬಾಯಿಲ್ ಶಾಪ್ ಇಟ್ಟುಕೊಂಡುದ್ದು ದಿನಾಂಕ 04/08/2014 ರಂದು ಎಂದಿನಂತೆ ರಾತ್ರಿ 8:30 ಪಿಎಮ್‌ಕ್ಕೆ ನಾನು ನನ್ನ ಮೋಬಾಯಿಲ್ ಶಾಪ್ ಬಂದ ಮಾಡಿಕೊಂಡು ಮನೆಗೆ ಹೋಗಿ ಊಟ ಮಾಡಿ ಮಲಗಿರುತ್ತೇನೆ, ಮರುದಿನ ಬೆಳಿಗ್ಗೆ 8 ಎಎಮ್‌ಕ್ಕೆ ದಿನಾಂಕ 05/08/2014 ರಂದು ಮೋಬಾಯಿಲ್ ಶಾಪಗೆ ಬಂದು ತೆರೆದು ನೋಡಿದಾಗ ಒಳಗಡೆ ಇದ್ದ ಮೋಬಾಯಿಲ್ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಹೊರಗಡೆಯಿಂದ ಶೆಟರ್ ಒಡೆದು ಒಳಗಡೆ ನುಗ್ಗಿ ಯಾರೋ ಕಳ್ಳರು ಒಳಗಡೆ ಇದ್ದ ಮೋಬಾಯಿಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅವುಗಳ ಅ.ಕಿ.ಒಟ್ಟು 22000/- ಸಾವಿರ ರೂಪಾಯಿ ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.