POLICE BHAVAN KALABURAGI

POLICE BHAVAN KALABURAGI

05 August 2014

Gulbarga District Reported Crimes

ಕಳವು ಪ್ರಕರಣ :
ಆಳಂದ ಠಾಣೆ :ಶ್ರೀ ಮಹ್ಮದ ಸುಲೇಮಾನ ತಂದೆ ಅಬ್ದುಲ ರಹೇಮನ ಮುಗುಟ ಸಾ: ಬಾಹರ ಪೇಟೆ ಆಳಂದ ರವರಿಗೆ ಸೇರಿದ ಪಿಕಪ್‌ ವಾಹನ ಇದ್ದು ಸದರಿ ವಾಹನವನ್ನು ನನ್ನ ಸ್ವಂತ ಕೆಲಸಕ್ಕಾಗಿ ಹಾಗು ಬಾಡಿಗೆಗಾಗಿ ಹೊಡೆಯುತ್ತೇನೆ. ದಿನಾಂಕ 24/07/2014 ರಂದು ಸಾಹಾಂಕಾಲ 6 ಗಂಟೆಗೆ ಪರಚುಟನ್‌ ಸಾಮಾನುಗಳನ್ನು (ಕಿರಾಣಿ ಸಾಮಾನುಗಳು) ತರಲು ನಮ್ಮ ಪಿಕಪ್‌ ವಾಹನ ತಗೆದುಕೊಂಡು ಚಾಲಕನಾದ ಬಸವರಾಜ ತಂದೆ ಯಶ್ವಂತರಾವ ರಾಮಶೇಟ್ಟಿ ಸಂಗೋಳಗಿ ಹಾ:ವ: ಆಳಂದ ಇತನು ಗುಲಬರ್ಗಾಕ್ಕೆ ಹೋಗಿ ಪರಚುಟನ್‌ ಟ್ರಾನ್ಸಪೊರ್ಟ ಮಾಲು ತುಂಬಿಕೊಂಡು ಮರಳಿ ಆಳಂದಕ್ಕೆ ರಾತ್ರಿ ಅದೆ ದಿವಸ 11;45 ಪಿಎಮ್‌ಕ್ಕೆ ಬಂದು ನನ್ನ ಮನೆಯ ಮುಂದೆ ನಿಲ್ಲಿಸಿ ಸದರಿ ವಾಹನ ಕೀಲಿ ಕೈಯನ್ನು ಕೊಟ್ಟು ಮನೆಗೆ ಹೋಗಿದ್ದು ಇರುತ್ತದೆ. ನಂತರ ಮದ್ಯ ರಾತ್ರಿಯ ವೇಳೆ ಅಂದರೆ ದಿನಾಂಕ 25/07/2014 ರಂದು 3;30 ಎಎಮ್‌ಕ್ಕೆ ನನ್ನ ತಮ್ಮನು ರಂಮಜಾನ ಶಹರಿ ಮಾಡುವದಕ್ಕಾಗಿ ಎದ್ದು ಹಲ್ಲು ಉಜ್ಜುತ್ತಾ ಸದರಿ ವಾಹನ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಲಾಗಿ ಪರಚುಟನ್‌ಗೆ ಕಟ್ಟಿದ ಹಗ್ಗವನ್ನು ತುಂಡಾಗಿದ್ದು ಕಂಡು ನನ್ನ ತಮ್ಮನಾದ ನೀಸಾರ ಅಹ್ಮದ ಬಂದು ನನಗೆ ಹೇಳಿದೆನಂದರೆ ಯ್ಯಾಕೊ ವಾಹನದ ಹಗ್ಗ ಕಡಿದ ಹಾಗೆ ಕಾನುತ್ತಿದೆ ಬರಲು ಹೇಳಿದ ಮೇರೆಗೆ ನಾನು ಹೋಗಿ ನೋಡಲಾಗಿ ಸದರಿ ಪಿಕ್‌ಪ್‌ ವಾಹನದಲ್ಲಿ ಇದ್ದ ಪಾರಚುಟನ್‌ ಸಾಮಾನುಗಳಿಗೆ ತಾಡ ಪತ್ರಿಗೆ ಹಗ್ಗ ಹಾಕಿ ಕಟ್ಟಿದ್ದು ಕಟ್ಟಿದ ಹಗ್ಗವನ್ನು ಕತ್ತರಿಸಿ ತಾಡ ಪತ್ರಿಯನ್ನು ಹರಿದು ಅದರ ಒಳಗಡೆ ಇದ್ದ ಪರಚುಟನ್‌ ಸಾಮಾನುಗಳು ಯ್ಯಾರೋ ಕಳ್ಳರು ರಾತ್ರಿ 2:30 ರಿಂದ 3:30 ರ ಒಳಗಡೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವುಗಳ ಅ.ಕಿ. 1,20,846/- ರೂ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಜಿತೇಂದ್ರ ತಂದೆ ಜಗನ್ನಾಥ ಕಾಂಬಳೆ ಸಾಃ ಬಾಚಪಳ್ಳಿ ತಾಃ ಔರಾದ ಜಿಃ ಬೀದರ   ಜಯನಗರ ಗುಲಬರ್ಗಾ ರವರು ದಿನಾಂಕಃ 04/08/2014 ರಂದು 01:30 ಪಿ.ಎಂ. ಸುಮಾರಿಗೆ ಎಣ್ಣೆ ತರಲು ಜಯನಗರ ಕ್ರಾಸ್ ಎದರುಗಡೆ ಇರುವ ಕಿರಾಣಿ ಅಂಗಡಿಗೆ ಹೋಗಬೇಕೆಂದು ಜಯನಗರ ಕ್ರಾಸ್ ಹತ್ತಿರ ನಿಂತಾಗ ಅದೇ ವೇಳೆಗೆ ಸೇಡಂ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ 36 ಎಸ್ 7555 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಬಲಗಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಗಾಲಿಗೆ ಭಾರಿ ಒಳಪೆಟ್ಟಾಗಿದ್ದು, ಕೆಳತುಟಿ ಹರಿದು ರಕ್ತ ಬರುತ್ತಿತ್ತು ಮತ್ತು ಬಲಗೈ ಮೊಳಕೈ ಹತ್ತಿರ ಮತ್ತು ಬಲಗಾಲಿನ ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಝಾರ ಠಾಣೆ : ಶ್ರೀ ಸಂಗಮನಾಥ ತಂದೆ ದತ್ತಪ್ಪಾ ಕಣ್ಣಿ ಸಾಃ ಚೌಡೆಶ್ವರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ಇವರು ದಿನಾಂಕ 06-07-2014  ರಂದು 4 ಪಿ.ಎಮ್ ಸುಮಾರಿಗೆ ರೈಲ್ವೆ ಸ್ಟೇಷನ ಹತ್ತಿರ ಇರುವ ಜನತಾ ರಿಫ್ರೆಶಮೆಂಟ ಹೊಟೇಲ್ ಮುಂದೆ ತನ್ನ ಟಿ.ವಿ.ಎಸ್ ಸ್ಕೂಟಿ ನಂ. ಕೆಎ 32 ಎಲ್ 9751 ಸಿಲ್ವರ ಕಲರ ಅ.ಕಿ 15000/- ನೇದ್ದನ್ನು ಕೀಲಿ ಹಾಕಿ ನಿಲ್ಲಿಸಿ ಹೊಟೇಲ್ ದಲ್ಲಿ ಹೋಗಿ ನಾಷ್ಟಾ ಮಾಡಿ ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಸ್ಕೂಟಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇಂದಿನ ವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ಅದರ ಇಂಜಿನ ನಂ.K803HM898486, ಚೆಸ್ಸಿ ನಂ.KO3HF912776 ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 August 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 03-08-2014 ರಂದು ಅವರಳ್ಳಿ ಗ್ರಾಮದ ಬಸವಣ್ಣ ದೇವರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ 1] ಕಲ್ಯಾಣಿ ತಂದೆ ಯಲ್ಲಪ್ಪ ಮಾಂಗ 2] ನಿಂಗಣ್ಣ ತಂದೆ ಸಿದ್ದಪ್ಪ ಮ್ಯಾಕೇರಿ 3] ಸೋಮರಾಯ ತಂದೆ ಈರಣ್ಣ ಪರತಾಪೂರ 4] ಶರಣಪ್ಪ ತಂದೆ ಚಂದ್ರಶ್ಯಾ ಯರಗಲ್  5] ನಾಗಪ್ಪತಂದೆ ಧರ್ಮಣ್ಣ ತಮಟಾಪೂರ 6] ರಾಜು ತಂದೆ ದೇವಿಂದ್ರ ಪರತಾಪೂರ 7] ಹಣಮಂತರಾಯ ತಂದೆ ಅಣ್ಣಾರಾಯ ಪಾಟೀಲ ಸಾ|| ಎಲ್ಲರೂ ಅವರಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಒಟ್ಟು 1670-00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ದೇವಲ ಗಾಣಗಾಪೂರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಮತಿ ಗಂಗಮ್ಮ ಗಂ ದಿ: ನಾಗೇಂದ್ರಪ್ಪ ಅಲಗೂಡ  ಸಾ|| ಅಲಗೂಡ ಹಾ|||| ಹೀರಾಪೂರ ತಾ|| ಗುಲಬರ್ಗಾ ರವರು ದಿನಾಂಕ 03-08-2014 ರಂದು ತನ್ನ ಸಂಬಂದಿಕ ಮಾವನಾದ ಚಿತಂಬರಾಯ ಸಾವಳಗಿ, ಹಾಗೂ ಪರಿಚಯ ದವನಾದ ಬಸವರಾಜ ತಂ ಸಂಬಾಜಿ ಇವರಿಗೆ ತಿಳಿಸಿ ಹೋಲದಲ್ಲಿ ಹುಲ್ಲು ಬೆಳದಿದ್ದರಿಂದ ಕುರಿಕೋಟಾ ಗ್ರಾಮದ ಶಿವಪ್ಪ ತಂ ಜಯಣ್ಣ ಇತನಿಗೆ ಕೂಲಿಯಿಂದ ಯಡಿ ಹೊಡೆಯಲು ಹಚ್ಚಿದ್ದು ಬೆಳಗ್ಗೆ 10.00 ಗಂಟೆಯಿಂದ ಮದ್ಯಾನ 2.00 ಗಂಟೆಯವರೆಗೆ ಹೋಲದಲ್ಲಿ ಕೆಲಸ ಮಾಡಿ ಇನ್ನೆನು ಊಟಮಾಡಬೇಕು ಎನ್ನುವಷ್ಟರಲ್ಲಿ ಕಲ್ಯಾಣರಾವ ಪಾಟೀಲ ಇತನು ತನ್ನ ಹೋಲದಲ್ಲಿ ಅತಿಕ್ರಮೇಣ ಪ್ರವೇಶ ಮಾಡಿ ಅವಾಚ್ಯ ಶಬ್ದ್ಗಳಿಂದ ಬೈದು ನೀನು ನಾನು ಖರೀದಿಸಿದ ಈ ಹೋಲದಲ್ಲಿ ಯಾಕೇ ಬಂದಿದ್ದಿ ಅಂತಾ ಅಂದು ನಾನು ಎಡಗಾಲಿನಿಂದ ಅಂಗವಿಕಲನಾ ಗಿದ್ದೇನೆ ಅಂತಾ ಗೊತ್ತಿದ್ದರು ನನ್ನ ಎಡಗೈ ಹಿಡಿದು ತಿರುವಿ ಬಲಗೈ ಬುಜದ ಹತ್ತಿರದ ನನ್ನ ಬ್ಲೋಜ ಹರಿದು ಹಾಕಿ ಶೀರೆ ಹಿಡಿದು ಎಳೆದಾಡಿ  ಮಾನಬಂಗ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪದ್ಮಣ್ಣ ತಂದೆ ನಾಗಪ್ಪಾ ಸಗರೆ ಸಾ : ಕರಜಗಿ ರವರು ದಿನಾಂಕ -24/03/2014 ರಂದು ಬೆಳಿಗ್ಗೆ 09:00 ಗಂಟೆಗೆ ಕರಜಗಿ ಸೀಮಾಂತರದ ಹೊಲ ಸರ್ವೆ ನಂ- 406 ಮತ್ತು ದಿನಾಂಕ:- 03/06/2014 ರಂದು ಬೆಳಿಗ್ಗೆ 10:00 ಗಂಟೆಗೆ ಕರಜಗಿ ಸೀಮಾಂತದ ಹೊಲ ಸರ್ವೆ ನಂ- 417/2 ನೇದ್ದರ ಫಿರ್ಯಾದಿ ಹೊಲದಲ್ಲಿ ಆರೋಪಿತರು ಅತೀಕ್ರಮ ಪ್ರವೇಶ ಮಾಡಿ ಸಾಗುವಳಿ ಮಾಡುತ್ತಿದ್ದಾಗ ಫಿರ್ಯಾದಿ ವಿರೋದ ವ್ಯಕ್ತಿ ಪಡಿಸಿದ್ದಕ್ಕೆ ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾರೆ, ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ನೂರ ಅಹ್ಮದ ತಂದೆ ಖಾಜಾ ಹುಸೇನ ಖನಿವಾಲೆ ಸಾ: ಮನೆ ನಂ. 5-993/177 ನಿಯರ ಮಜ್ಜೀದ ಎ ನಯೀಮ ಮೆಹಬೂಬ ನಗರ ಕಾಲೋನಿ ಗುಲಬರ್ಗಾ ಇವರು ದಿನಾಂಕ: 03/08/2014 ರಂದು ನನ್ನ ಸಡಕನ ನಾದ ಮಹ್ಮದ ರೈಸ್ ತಂದೆ ಇಸಮಿಯಾ ಸಾ: ಟಿಪ್ಪು ಚೌಕ್ ಗುಲಬರ್ಗಾದಲ್ಲಿ ಇವರು ಒಂದು ಜುಮಾಗಿ ಫಂಕ್ಷನ ಇಟ್ಟುಕೊಂಡಿದ್ದರಿಂದ ನಾನು ನನ್ನ ಹೆಂಡತಿ ಮಕ್ಕಳು ಮತ್ತು ನನ್ನ ಅಳಿಯನ ಮಗ ಮಹ್ಮದ ಜಕಿತಬರೆಜ ಇವರೆಲ್ಲರೂ ಸೇರಿಕೊಂಡು ಸಮಾರಂಬಕ್ಕೆ ಹೋಗಲು ತಯ್ಯಾರಾಗಿ ಮದ್ಯಾನ 2:30 ಪಿಎಮ್ ಕ್ಕೆ ನನ್ನ ಮನೆಗೆ ಬಾಗಿಲಿಗೆ ಕೀಲಿಹಾಕಿಕೊಂಡು ಹೋಗಿದ್ದು ಸಾಯಂಕಾಲ 4:30 ಗಂಟೆಗೆ ಸಮಾರಂಬ ಮುಗಿಸಿಕೊಂಡು ಮನೆಗೆ ಬಂದು ಮುಖ್ಯ ದ್ವಾರದ ಗೇಟು ತೆರೆದು ಕಂಪೌಂಡದಿಂದ ಒಳಗಡೆ ಹೋಗಿ ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಗಾಬರಿಯಾಗಿ ಒಳಗಡೆ ಹೋಗಿ ನೋಡಿದಾಗ ಕೊಣೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪೆಲ್ಲಿಯಾಗಿದ್ದು ಮನೆಯ ಅಲಮಾರಿಗಳು ಸಹ ಮುರಿದಿದ್ದು  ಅದರಲ್ಲಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ ನನ್ನ ಅಳಿಯನ ಮನೆಯ ಕಿಲಿ ಸಹ ಮುರಿದು ಒಳಗೆ ಪ್ರವೇಶಮಾಡಿ ಯಾರೋ ಕಳ್ಳರು ಅಲಮಾರಿಯನ್ನು ಮುರಿದು ಅಲಮಾರಿಯಲ್ಲಿ ಇಟ್ಟಿದ್ದ ಒಂದುತೊಲಿಯ ಬಂಗಾರದ ರಾಣೆಹಾರು ಅ.ಕಿ. 28 ಸಾವಿರ ಹಾಗೂ 10 ಸಾವಿರ ರೂಪಾಯಿ ನಗದು ಇರುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳರು ನಮ್ಮ ಮನೆಯನ್ನು ಕಳವು ಮಾಡಲು ನೇರವಾಗಿ ಮನೆಯ ಮುಖ್ಯದ್ವಾರದಿಂದ ಬರದೇ ನಮ್ಮ ಮನೆಯ ಪಕ್ಕದಲ್ಲಿ ಇರುವ ಮಜ್ಜೀದ ಮೇಲೆ ಹತ್ತಿ ನಮ್ಮ ಮನೆಯ ಚೆತ್ತಿನ ಮೇಲೆ ಏರಿ ಸಿಡಿಗಳ ಮುಖಾಂತರ ಒಳಗಡೆ ಬಂದು ಬಾಗಿಲಿಗೆ ಹಾಕಿದ ಕೀಲಿಗಳು ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಒಟ್ಟು ಎರಡುವರೆ ತೋಲಿ ಬಂಗಾರ ಅ.ಕಿ. 70ಸಾವಿರ ರೂಪಾಯಿ ಮತ್ತು ನಗದು ಹಣ 30 ಸಾವಿರ ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 August 2014

Gulbarga District Reported Crimes

ಅಪಹರಣ ಮಾಡಿಕೊಂಡು ಹೋಗಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಮತಾಜ ಗಂಡ ಮಹಿಬೂಬಸಾಬ ಗೊಬ್ಬೂರ  ಸಾ|| ಕವಲಗಾ ಇವರ ಮಗಳಾದ ಅಫ್ರೀನ್ ಇವಳಿಗೆ ದಿನಾಂಕ 18-06-2014 ರಂದು ಕವಲಗಿ ಗ್ರಾಮದ ನಿಜಲಿಂಗಪ್ಪ ತಂದೆ ಸಿದ್ರಾಮಪ್ಪ ಹಾಗು ಇತರರು ಕುಡಿಕೊಂಡು ಕಿಡ್ನಾಪ್ ಮಾಡಿಕೊಂಡು ಹೋಗಿರುತ್ತಾನೆ ಇಲ್ಲಿಯವರೆಗೆ ಅವರು ಎಲ್ಲಿ ಹೋಗಿದ್ದಾರೆ ಎಂಬ ಸುಳಿವು ಇಲ್ಲ ನಿಜಲಿಂಗಪ್ಪ ಇವರ ಮನೆಯವರಾದ ಶಿವನಿಂಗಪ್ಪ ತಂದೆ ರಾಮಚಂದ್ರಪ್ಪ, ಶರಣಬಸಪ್ಪ ತಂದೆ ಬಾಬಾಶಾ, ಗುರುನಾಥ ತಂದೆ ಸಿದ್ರಾಮಪ್ಪ ಅಮರೇ ಇವರೆಲ್ಲರೂ ಅಫ್ರಿನ್ ಇವಳಿಗೆ ಮನಬಂದಂತೆ ತಳಿಸಿ ಮದುವೆ ಮಾಡಿಕೊಳ್ಳಲು ಒಪ್ಪಬೇಡ ಹಾಗೂ ನಿಮ್ಮ ಮನೆಗೆ ನೀವು ಹೋಗು ಎಂದು ಅಫ್ರೀನ್ ಇವಳು ದೂರವಾಣಿ ಮುಖಾಂತರ ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪ ತಂದೆ ವೀರಸಂಗಪ್ಪ ಭೀಮನಳ್ಳಿ ಸಾ: ರೇವಣಸಿದ್ದೇಶ್ವರ ಕಾಲೋನಿ ಹುಮನಾಬಾದ ರೋಡ ಗುಲ್ಬರ್ಗಾ ಇವರು ದಿನಾಂಕ: 30/07/2014 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ: 31/07/2014 ರಂದು 3-00 ಎ.ಎಮ್ ದ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಎದುರುಗಡೆ ಬಯಲು ಜಾಗೆಯಲ್ಲಿ ನಿಲ್ಲಿಸಿದ ಗ್ರೇ ಕಲರನ ಟಾಟಾ ಇಂಡಿಕಾ ಕಾರ ನಂ ಕೆಎ-32 ಎಮ್-5797  ಅ.ಕಿ= 150000/- ರೂ ಬೆಲೆಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ಸಾ: ಕಮಲಾಪೂರ ಇವರ ಮಗಳು ದಿನಾಂಕ: 07-07-2014 ರಂದು ಬೆಳೆಗ್ಗೆ 8 ಗಂಟೆಗೆ ಕಮಲಾಪೂರದಲ್ಲಿರುವ ಸರಕಾರಿ ಬಾಲಕಿಯರ ಪಿ.ಯು.ಸಿ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಇನ್ನು ವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ. ಅವಳನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿದ್ದಾಗ ದಿನಾಂಕ: 31-07-2014 ರಂದು ಸದರಿ ಅಪಹರಣವಾದ ಹುಡುಗಿಯು ತುಮಕೂರ ಜಿಲ್ಲೆಯ ಕುಣಿಗಲ ತಾಲೂಕಿನ ಪಂಚವಟಿ ತಾಂಡಾದಲ್ಲಿರುವ ಮಾಹಿತಿ ತಿಳಿದುಕೊಂಡು ಸಿಬ್ಬಂದಿಯರೊಂದಿಗೆ ಹೋಗಿ ಸದರಿ ಅಪಹರಣಗೊಂಡ ಮಗಳು ಇವಳನ್ನು ಕರೆದುಕೊಂಡು ದಿನಾಂಕ: 01-08-2014 ರಂದು ಮರಳಿ ಕಮಲಾಪೂರ ಪೊಲೀಸ್ ಠಾಣೆಗೆ  ಬಂದಿದ್ದು ಇರುತ್ತದೆ. ಸದರಿ ಮಗಳಿಗೆಮಹಿಳಾ ಸಿಬ್ಬಂದಿಯಿಂದ ವಿಚಾರಿಸಲಾಗಿ ಅದರಲ್ಲಿ ಅವಳು ಈಗ ಸುಮಾರು ಒಂದು ವರ್ಷದಿಂದ ತಾನು  ಕುಣಿಗಲ ತಾಲೂಕಿನ ಪಂಚವಟಿ ತಾಂಡಾದ ರಘುನಾಯಕ ತಂದೆ ಕೃಷ್ಣಾ ನಾಯಕ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು, ಅವನು ನನ್ನನ್ನು ಪ್ರೀತಿಸುತ್ತಿದ್ದನು. ನಾವಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ ದಿನಾಂಕ: 07-07-2014 ರಂದು ನಾವಿಬ್ಬರೂ ಮೊದಲೇ ಮಾತನಾಡಿಕೊಂಡಂತೆ   ನಾನು ನನ್ನ ಮನೆಯಲ್ಲಿ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಬಂದಿದ್ದು, ರಘುನಾಯಕನು ಕಮಲಾಪೂರ ಬಸ್ ನಿಲ್ದಾಣದಲ್ಲಿ ಬಂದು ನಿಂತುಕೊಂಡಿದ್ದನು.  ನಾನು ಕಮಲಾಪೂರ ಬಸ್ ನಿಲ್ದಾಣಕ್ಕೆ ಬಂದು ಈ ಮೊದಲೇ ಮಾತನಾಡಿಕೊಂಡಂತೆ ನನ್ನನ್ನು ರಘು ನಾಯಕ ಈತನು ತಮ್ಮ ಊರಾದ ಪಂಚವಟಿ ತಾಂಡಾಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೋದ ನಂತರ ದಿನಾಂಕ: 20-07-2014 ರಂದು ನಾವಿಬ್ಬರು ದೇವಸ್ಥಾನದಲ್ಲಿ ಮದುವೆ ಆಗಿರುತ್ತೇವೆ.  ಮದುವೆ ಆದ ನಂತರ ಪಂಚವಟಿ ತಾಂಡಾದ ರಘುನಾಯಕನ ಮನೆಯಲ್ಲಿ ನಾನು ಮತ್ತು ರಘುನಾಯಕ ಇಬ್ಬರೂ ದೈಹಿಕ ಸಂಪರ್ಕ ಮಾಡಿರುತ್ತೇವೆ ಅಂತಾ ಹೇಳಿದ್ದು  ದುಃಖಾಪತಳು ಮನೆಯಿಂದ ಹೋಗುವಾಗ ಮತ್ತು ಅವಳ ಮದುವೆ ಆಗಿರುತ್ತದೆ ಎಂದು ಹೇಳಿಕೆ ಕೊಟ್ಟ ದಿನಾಂಕದಂದು ಇನ್ನೂ ಅಪ್ರಾಪ್ತಳಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.