POLICE BHAVAN KALABURAGI

POLICE BHAVAN KALABURAGI

19 July 2014

Gulbarga District Reported Crimes

ಹುಡುಗ ಕಾಣೆಯಾದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ಭೀಮರಾಯ ಮೈಲಾಪೂರ ಸಾ:ಇಂಜನಫೈಲ್ ಶಹಾಬಾದ ಇವರ ಮಗ  ಆಂಜನೇಯ  ವ|| 12 ವರ್ಷ ಈತನು ದಿನಾಂಕ 30.06.2014 ರಂದು 7.00 ಪಿ.ಎಮ್. ಗಂಟೆಸುಮಾರಿಗೆ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ  ಸದರಿಯವನು ಬಿಳಿ, ಕೆಂಪು,  ಕರಿ ಬಣ್ಣ ಮಿಶ್ರಿತ ಉಳ್ಳ ನಾಶಿ ಬಣ್ಣದ ಚೌಕಡಿ ಶರ್ಟು  ನಾಶಿ ಬಣ್ಣದ ಹಾಫ್ ಪ್ಯಾಂಟು , ನಾಶಿ ಬಣ್ಣದ ರ್ಶಯಾಂಡೊ ಬನಿಯಾನ,  ಧರಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸಾವಿತ್ರಿಬಾಯಿ ಗಂಡ ಸುಭಾಶ ಇವರು  ದಿನಾಂಕ 18-07-2014 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ಸುಪರ ಮಾರ್ಕೆಟದಿಂದ ಲಾಲಗೇರಿ ಕ್ರಾಸ ಮುಖಾಂತರ ಮನೆಗೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತಿರುವಾಗ ಟೆಕ ಬುರಾನ ದರ್ಗಾ ಕ್ರಾಸ್ ಹತ್ತಿರ ರೋಡ ಮೇಲೆ ಜಯಾನಂದ ಇತನು ತನ್ನ ಕಾರ ನಂ ಕೆಎ-32 ಎ-7810 ನೇದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನಗೆ ಡಿಕ್ಕಿ ಪಡಿಸಿ ನನ್ನ ಎಡಗಾಲಿನ ಪಾದದ ಮೇಲೆ ಮತ್ತು ಬೆರಳುಗಳ ಮೇಲೆ ಕಾರ ಚಲಾಯಿಸಿಕೊಂಡು ಹೋಗಿ ಹೆಬ್ಬರಳು ತೋರು ಬೆರಳು ನಡುಬೆರಳು ಉಂಗುರ ಬೆರಳುಗಳಿಗೆ ಭಾರಿ ಪೆಟ್ಟುಗೊಳಿಸಿರುತ್ತಾನೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಲಿಂಗಪ್ಪ ತಂದೆ ಹಣಮಂತರಾವ ಸಂಗೋಳಗಿ ಸಾ : ಜಂಬಗಾ (ಆರ್) ರವರು ದಿನಾಂಕ 18-07-2014 ರಂದು ಬೆಳಿಗ್ಗೆ 11-30 ಗಂಟೆಗೆ ಯಲ್ಲಮ್ಮ ದೇವಸ್ಥಾನಕ್ಕೆ ದರ್ಶನ ಮಾಡಬೇಕೆಂದು ಗೋವಾ ಹೋಟಲದಿಂದ ಜಗತ ಸರ್ಕಲ ರೋಡ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯಲ್ಲಮ್ಮ ದೇವಸ್ಥಾನದ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಎಸ್-8333 ನೇದ್ದರ ಸವಾರನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ತಲೆಯ ಹಿಂದುಗಡೆ ರಕ್ತಗಾಯ, ಮೂಗಿಗೆ ತರಚಿದಗಾಯ, ಎಡಗಾಲ ಮೊಳಕಾಲಿಗೆ, ಮೊಳಕಾಲ ಕೆಳಗೆ, ಎಡಗಾಲು ಹೆಬ್ಬರಳಿಗೆ, ಬಲಗಾಲ ಮೊಳಕಾಲಿಗೆ, ಬಲಬೆನ್ನಿಗೆ ತರಚಿದಗಾಯಗಳು ಮಾಡಿ ಮೋ/ಸೈಕಲ ಅಲ್ಲೆ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವಿ ಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯೂನುಸ ಖಾನ ತಂದೆ ಅಫಜಲ ಖಾನ ಸಾ : ಅಫಜಲಪೂರ ರವರು ದಿನಾಂಕ 19-05-2014 ರಂದು 11:30 ಎ ಎಮ್ ಕ್ಕೆ ನಾನು ಮತ್ತು ದಾನಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ|| ಅಫಜಲಪೂರ ಇಬ್ಬರು ನನ್ನ ಮೋ/ಸೈ ಮೇಲೆ ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದಲ್ಲಿ ಕೆಲಸ ಇದ್ದರಿಂದ ನನ್ನ ಮೋ/ಸೈ ಮೇಲೆ ತಹಸಿಲ ಕಾರ್ಯಾಲಯಕ್ಕೆ ಹೋಗಿ, ಕಾರ್ಯಾಲಯದ ಮುಂದೆ ಇರುವ ಆವರಣದಲ್ಲಿ ಮೋ/ಸೈ ನಿಲ್ಲಿಸಿ ತಹಸಿಲ ಕಾರ್ಯಾಲಯದ ಒಳಗೆ ಹೋಗಿರುತ್ತೆವೆ, ಕೆಲಸ ಮುಗಿಸಿಕೊಂಡು ಮರಳಿ 12:00 ಪಿ ಎಮ್ ಕ್ಕೆ ಬಂದು ನನ್ನ ಮೋ/ಸೈ ನೊಡಲಾಗಿ, ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ನನ್ನ ಮೋ/ಸೈ ಸಿಕ್ಕಿರುವುದಿಲ್ಲ, ಸದರಿ ಮೋ/ಸೈ ಅಂದಾಜು 35,000/- ರೂ ಕಿಮ್ಮತ್ತಿನದು ಇದ್ದು ಇರುತ್ತದೆ, ಅದರ ನಂಬರ ಕೆಎ-32 ಇಎಫ್-7720 ಅಂತಾ ಇದ್ದು, ಚೆಸ್ಸಿ ನಂಬರ:- MBLHA10AMEHB73704 ಇಂಜೆನ ನಂಬರ:- HA10EJEHB62756 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದೋಂಡಿಬಾ ತಂದೆ ಬಾಪೂರಾಯ ಪಾಟೀಲ ಸಾ : ಮಾತೋಳಿ ಮತ್ತು ನಮ್ಮೂರ ಹಣಮಂತ ತಂದೆ ಸಿದ್ದಪ್ಪ ಕಲ್ಲೂರ ಇಬ್ಬರು ಮಾತಾಡುತ್ತಾ ನಮ್ಮೂರ ಮರಗಮ್ಮನ ಗುಡಿಯ ಮುಂದೆ ಕುಂತಿದ್ದಾಗ ನನ್ನ ಹೆಂಡತಿ ಅಳುತ್ತಾ ಬಂದು ಹೊಲದಲ್ಲಿ ನನಗೆ ಸುರೇಶ ಪಾಟೀಲ ಮತ್ತು ರಮೇಶ ಪಾಟೀಲ ರವರು ನಮ್ಮ ಹೊಲದಲ್ಲಿಯಾಕ ಕಲ್ಲು ಇಡತಿ ಅಂತಾ ಅಂದು ನೋಕಿ ಕೊಟ್ಟಿದ್ದರಿಂದ ನಾನು ಕಲ್ಲಿನ ಮೇಲೆ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ ಅಂತಾ ಹೇಳಿದಳು, ಅಷ್ಟರಲ್ಲಿ ಸದರಿ ಸುರೇಶ ಮತ್ತು ರಮೇಶ ರವರು ನಮ್ಮ ಹತ್ತಿರ ಬಂದು ಸುರೇಶ ಇವನು ನನಗೆ ತಡೆದು ನಿಲ್ಲಿಸಿ ಏ ಸೂಳಿ ಮಗನಾ ನಿಮ್ಮ ಹೊಲದಲ್ಲಿ ನಮಗ ಇನ್ನು ಪಾಲ ಬರತಾದ ಅಂತಾ ಅಂದರು ಕೇಳುತ್ತಿಲ್ಲ, ಇವತ್ತ ನಿಮಗ ಜೀವ ಸಹಿತ ಬಿಡುವುದಿಲ್ಲ ಅಂತಾ ಅಂದು ನನಗೆ ಎಳೆದು ನೆಲದ ಮೆಲೆ ಕೆಡವಿದನು, ಆಗ ರಮೇಶ ಮತ್ತು ಸುರೇಶ ಇಬ್ಬರು ಕೂಡಿ ಕೈಯಿಂದ ಮತ್ತು ಕಾಲಿನಿಂದ ನನ್ನ ಎಡಗಾಲ ತೊಡೆಯ ಮೇಲೆ ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 July 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:  16-05-2014 ರಂದು ಸಾಯಾಂಕಾಲ 6  ಗಂಟೆಗೆ ನಮ್ಮ ಮನೆಯಲ್ಲಿದ್ದಾಗ ವಿಜಯಕುಮಾರ ಶಾಹಬಜಾರ ಗುಲಬರ್ಗಾ ಕಾರು ಚಾಲಕ ಈತನು ನರೋಣಾ ಗುರುಬಾಯಿ ಮನೆಯಲ್ಲಿ ಊಟಕ್ಕೆ ಬಂದಿರುತ್ತಾನೆ. ನೀನು ಇಲ್ಲಿಗೆ ಬಾ ಅಂತಾ ಫೋನಿನಲ್ಲಿ ತಿಳಿಸಿದಾಗ ನಾನು ಗುರುಬಾಯಿ ಮನಗೆ ಹೋಗಿ ನೋಡಲು ಅಲ್ಲಿ ರವಿರೆಡ್ಡಿ, ವಿನೋದಕುಮಾರ, ಶರಣುರೆಡ್ಡಿ, ವಿಜಯಕುಮಾರ, ಕಾತು ಚಿಂಚನಸೂರ, ಮತ್ತು ಸೀನು ಇವರೆಲ್ಲರೂ ಇದ್ದು  ಎಲ್ಲರೂ ಕೂಡಿ ಊಟ ಮಾಡಿದೇವು ಆಗ ಅಶೋಕ ಚಿತಲಿ ಮನೆಗೆ ಹೋಗುತ್ತೇನೆಂದು ಮನಗೆ ಹೇಳಿ ಹೋದನು ನನಗೆ ಈ ಮೇಲೆ ನಮೂದಿಸಿದ ಎಲ್ಲರು ನನಗೆ ಮನೆಗೆ ಬಿಟ್ಟು ಹೋಗುತ್ತೇವೆ ನಡಿ ಅಂತಾ ನನಗೆ ವಿಜಯಕುಮಾರ ಜಬರದಸ್ತಿ ಮಾಡುತ್ತಿದ್ದನು ನಾನು ಅವರೊಂದಿಗೆ ಗುರುಬಾಯಿ ಮನೆಯಿಂದ ರಾತ್ರಿ  9:30  ಗಂಟೆಗೆ ಅವರ ಮನೆಬಿಟ್ಟು ಅವರ ಮನೆಯಿಂದ ಊರಿನ ರಸ್ತೆಯ ಮೇಲೆ ಒಂದು ಇಂಡಿಕಾ ಕಾರು ನಿಲ್ಲಿಸಿದ್ದು ಜಬ್ಬರದಸ್ತಿಯಿಂದ ಕಾರಿನಲ್ಲಿ ಕೂಡಿಸಿದರು. ನಾನು ಮನೆಗೆ ನಡೆದುಕೊಂಡು ಹೋಗುತ್ತೇನೆಂದು ಹೇಳಿದರೆ ಇವರೆಲ್ಲರೂ ನನಗೆ ಹೋಗದೆ ಬಿಡದಂತೆ ಕಾರಿನಲ್ಲಿ ಕೂಡಿಸಿ ಇವರಲ್ಲಿ ಕಾರು ಸೀನು ಚಲಾಯಿಸುತ್ತಾ ನರೋಣಾ ದಿಂದ ಹೋಗುತ್ತಿದ್ದು  ಬಸ್ ಸ್ಟ್ಯಾಂಡದಲ್ಲಿ ನಾನು ಇಳಿಯುತ್ತೇನೆ ಅಂತಾ ಹೇಳಿದರೆ ಇವರಲ್ಲಿ ವಿಜಯಕುಮಾರ ಇತನು ನನ್ನ 9000  ರೂ ಕೊಡು ಮಗನೆ ಅಂದನು. ನಾನು  2-3  ದಿವಸಗಳಲ್ಲಿ ಕೊಡುತ್ತೇನೆ ಅಂತಾ ಹೇಳಿದರೆ ಬೋಸಡಿ ಮಗನೆ ಈಗ ರೂಪಾಯಿ ಕೊಡು ಅಂತಾ ಹೇಳಿದ್ದು. ನಾನು ಇಲ್ಲ ಅಂತಾ ಹೇಳಿದರೆ ತಮ್ಮ ಕಾರ ಚಾಲಕ ಸೀನುಗೆ ಕಾರು ಚಾಲು ಮಾಡಿ ನಡೆ ಅಂತಾ ವಿಜಯಕುಮಾರ ಮತ್ತು ಸಂಗಡಿಗೇರು ಹೇಳಿದಕ್ಕೆ ಕಾರು ಬಸ್ ಸ್ಟ್ಯಾಂಡದಿಂದ ಹೋದರುಇವರು ಯಾವ ಉದ್ದೇಶಕ್ಕಾಗಿ ಜಬ್ಬರದಸ್ತಿಯಿಂದ ಹೋಗುತ್ತಿದ್ದು ಗೊತ್ತಾಗಿಲ್ಲ ಕಡಗಂಚಿ ರೋಡಿಗೆ ಹೋಗಿದ್ದಾಗ  ನನಗೆ ಇವರೆಲ್ಲರೂ ಕೈಯಿಂದ ಮುಷ್ಠಿ ಮಾಡಿ ಹೊಟ್ಟೆಯ ಮೇಲೆ ಬೆನ್ನ ಮೇಲೆ ಮುಖದ ಮೇಲೆ ಹೊಡೆದಿರುತ್ತಾರೆ. ಕಡಗಂಚಿ ಗುಲಬರ್ಗಾ ಕ್ಕೆ ಹೋಗುವ ರೋಡಿನ ಪಕ್ಕದಲ್ಲಿ ಕಾರು ನಿಲ್ಲಿಸಿದ್ದು  ಆಗ ಸಮಯ 1030  ಪಿ ಎಂ ಆಗಿತ್ತು. ಕಾರಿನಲ್ಲಿದ್ದ ಬಡಿಗೆ ತೆಗೆದುಕೊಂಡು ವಿಜಯಕುಮಾರ ನನಗೆ ಬೆನ್ನ ಮೇಲೆ ಎರಡು ಕೈಗಳಿಗೆ ಬಲಭಾಗದಲ್ಲಿ ಹೊಡೆದಿರುತ್ತಾನೆ. ಮೈಮೇಲೆ ಕೆಂಪು ಬರೆಯಾಗಿ ಕಂದು ಗಟ್ಟಿರುತ್ತದೆ ಉಳಿದವರೆಲ್ಲರೂ ಬೋಸಡಿ ಮಗನೆ ರಂಡಿ ಮಗನೆ ಕೊಡುವ ಬಾಕಿ ಕೊಡವದಿಲ್ಲ ಅಂತಾ ಬೈಯುತ್ತಿದ್ದರು. ಎಲ್ಲರೂ ಕೂಡಿ ನನಗೆ ಜೀವ ಖಲ್ಲಾಸ್ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 17/07/2014 ರಂದು ಮಾನ್ಯ ಡಿಎಸ್ಪಿ ಸಾಹೇಬರು ಆಳಂದ ರವರು ಮಾನ್ಯ ಜೆಎಮ್ ಎಫ್ ಸಿ ನ್ಯಾಯಾಲಯ ಅಫಜಲಪೂರ ರವರ ಖಾಸಗಿ ದೂರು ಸಂ 27/2014 ನೇದ್ದು ಪ್ರಕರಣ ದಾಖಲಿಸಿಕೊಂಡು ಮರಳಿ ಸಲ್ಲಿಸುವಂತೆ ಕಳುಹಿಸಿಕೊಟ್ಟಿದ್ದು ಸದರಿ ಪಿಸಿ ರವರು ಮಲ್ಲಿಕಾರ್ಜುನ ರವರ ಮುಖಾಂತರ ಕಳುಯಿಸಿಕೊಟ್ಟಿದ್ದು ಸದರಿ ಪಿಸಿ  ರವರು 7 ಪಿಎಮ್ ಕ್ಕೆ ಖಾಸಗಿ ದೂರು ಸಂ 27/14  ನೇದ್ದು  ತಂದು ಹಾಜರ ಪಡಿಸಿದ್ದರ ಸಾರಂಶ ವೆನೆಂದರೆ ದಿನಾಂಕ 22/06/2014 ರಂದು 4.30 ಪಿಎಮ್ ದಿಂದ 7.30ಪಿಎಮ್ ದ ಅವದಿಯಲ್ಲಿ ಫಿರ್ಯಾದಿದಾರನಾದ ಮಾಹಂತೇಶ ತಂದೆ ಚಂದಪ್ಪ ವಾಹಿ ಸಾ|\ ಮಣೂರ ರವರಿಗೆ ಅಫಜಲಪೂರ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ ಬೆಂಡೆಗುಂಬಳ ಹಾಗೂ 3 ಜನ ಪೊಲೀಸರು ಸೇರಿ ಹಲ್ಲೆ ಮಾಡಿರುತ್ತಾರೆ ಅಂತ ಸಲ್ಲಿಸಿದ ಖಾಸಗಿ ದೂರಿನ ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :                             
ಸ್ಟೇಷನ ಬಜಾರ ಠಾಣೆ : ಶ್ರೀ ಮಡಿವಾಳಪ್ಪ ದ್ವಿ.ದ.ಸ ಪ್ರದಾನ ವ್ಯವಹಾರ ನ್ಯಾಯಾದೀಶ (ಕಿ.ವಿ) ಜೆ.ಎಂ.ಎಫ.ಸಿ ನ್ಯಾಯಾಲಯ ಗುಲಬರ್ಗಾ ರವರು ದಿನಾಂಕ. 09-07-2014 ರಂದು ಬೆಳಿಗ್ಗೆ 10  ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ನನ್ನ ಬಜಾಜ ಡಿಸ್ಕವರ ಮೊಟಾರ ಸೈಕಲ ನಂ. ಕೆಎ-32ಎಸ್- 6486 ಇ.ನಂ. JNGPE63314, ಚಾ.ನಂ. MD2DSJNZZPCE45019 ಅ.ಕಿ. 30,000/- ರೂ ನೆದ್ದನ್ನು ನಿಲ್ಲಿಸಿ ನಂತರ ಮರಳಿ ಬಂದು ನೋಡಲಾಗಿ ನನ್ನ ಮೊಟಾರ ಸೈಕಲ ಇರಲಿಲ್ಲ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

17 July 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ : 16-07-2014 ರಂದು ರಾತ್ರಿ 2 ಗಂಟೆ ಸುಮಾರಿಗೆ ಮೃತ ರಾಜೇಶ ತಂದೆ ಹೇಮದ ಶಾಹ ಮಕಾನದಾರ್ ಸಾ : ಬಸ್ ನಿಲ್ದಾಣದ ಹತ್ತೀರ ಅಕ್ಕಲಕೋಟ್ ಮಹಾರಾಷ್ಟ್ರ ಹಾ : ವ : ರಾಮ ನಗರ ಕಾಲೋನಿ ಗುಲಬರ್ಗಾ ಇತನು ಆಳಂದ ಚೆಕ್ ಪೋಸ್ಟ ಹುಮ್ನಾಬಾದ ರಿಂಗ ರೋಡ ಬಬಲಾದ ಮಠದ ಹತ್ತೀರ ಹಿಂದಿನಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ಚಲಾಯಿಸಿ ಬಂದು ಮೃತ ರಾಜೇಶ ಶಾಹ ಈತನಿಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಮೃತ ರಾಜೇಶ ಇತನು ರೋಡಿನ ಮೇಲೆ ಬಿದ್ದು ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು ಮೂಗಿನಿಂದ ರಕ್ತಸ್ರಾವವಾಗಿ ಮೃತಪಟ್ಟಿರುತ್ತಾನೆ ಅಂತಾ  ಎದೆಗೆ ಪಕ್ಕೆಗಳಿಗೆ ಗುಪ್ತಪೇಟ್ಟಾಗಿರುತ್ತದೆ. ಯಾವುದೋ ವಾಹನವನ್ನು ಅದರ ಚಾಲಕನು ವಾಹನ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಂತಾ ಶ್ರೀಮತಿ ಬಸೀರಾ ಗಂಡ ರಾಜೇಶ ಮಕಾನದಾರ್ ಸಾ: ರಾಮನಗರ ಕಾಲೋನಿ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.