POLICE BHAVAN KALABURAGI

POLICE BHAVAN KALABURAGI

02 June 2014

Gulbarga District Reported Crimes

ಮಾಂಗಲ್ಯ ಸರ ಕಿತ್ಉಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶೋಭಾ ಗಂಡ ವಿರುಪಾಕ್ಷಪ್ಪ ಕಡಕೊಳ ಸಾಃ ಮನೆ ನಂ.4-601/74/3/ಎ, ಬಸವೇಶ್ವರ  ಕಾಲೋನಿ ಗುಲಬರ್ಗಾ ಇವರು ದಿನಾಂಕ 02/06/2014 ರಂದು 07:15 ಎ.ಎಂ.ಕ್ಕೆ  ಸುಮಾರಿಗೆ ಹಾಲು ತರಲು ಅಂತಾ ಒಬ್ಬಳೆ ಬಸವೇಶ್ವರ ಕಾಲೋನಿಯ ಶಿವ ಮಂದಿರಕ್ಕೆ ಹೋಗುವ ಕ್ರಾಸ್ ಹತ್ತಿರ ನಡೆದುಕೊಂಡು ಹೋಗಿ ಹಾಲು ತೆಗೆದುಕೊಂಡು ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಾಮರೆಡ್ಡಿ ಇವರ ಮನೆಯ ಹತ್ತಿರ ರೋಡಿನ ಮೇಲೆ ನನ್ನ ಎದುರುಗಡೆಯಿಂದ ಅಂದಾಜು ಸಮಯ 07:30 ಎ.ಎಂ. ಸುಮಾರಿಗೆ ಒಂದು ಮೋಟರ ಸೈಕಲ ಮೇಲೆ ಇಬ್ಬರು ಅಪರಿಚಿತ ಸವಾರರು ಬಂದವರೆ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ ಐದುವರೆ ತೋಲೆ ಬಂಗಾರದ ಮಂಗಳಸೂತ್ರ ಅಃಕಿಃ 1,35,000/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಅದೆ ಮೋಟರ ಸೈಕಲ ಮೇಲೆ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಅಮೀರ ತಂದೆ ಮಕ್ತುಮ ಮುಲ್ಲಾ ಸಾ: ತಡೋಳಾ ಇವರ ಅಣ್ಣನಾದ ನಬಿಲಾಲ ತಂದೆ ಮಹ್ಮದ
ಹನೀಫ ಮುಲ್ಲಾ ಇವರ ಮೊಮ್ಮಗಳಾದ ಕುಮಾರಿ ಶಫಿಯಾ ತಂದೆ ಶಾಜೀದ ಧರೆವಾಲೆ ಸಾ: ಹೊಸೂರ
ತಾ:ಅಫಜಲಪೂರ ಜಿ: ಗುಲಬರ್ಗಾ ಹಾ:ವ: ತಡವಳ ತಾ;ಅಕ್ಕಲಕೋಟ ಇವಳ ಜವಳದ ಕಾರ್ಯಕ್ರಮದ ನಿಮಿತ್ಯ ಗುಲಬರ್ಗಾದ ಖಾಜಾ ಬಂದೆನವಾಜ ದರ್ಗಾಕ್ಕೆ ಹೋಗುವ ಕುರಿತು ಮೈಸಲಗಿ ಗ್ರಾಮದ ಕಮಲಾಕರ ಬರಗುಡಿ ಇವರ ಪಿಕ್‌ಅಪ್‌ ವಾಹನ ನಂ ಎಮ್‌ಎಚ್‌ 13 ಎಎನ್‌ 5817 ನೇದ್ದು ಮುಗಿಸಿ ಸದರಿ ವಾಹನದಲ್ಲಿ ಇಂದು ದಿನಾಂಕ 02/06/2014 ರಂದು ಬೆಳಗಿನ ಜಾವ 01:30 ಗಂಟೆ ಸುಮಾರಿಗೆ ನಮ್ಮೂರಿನ ನಾನು ಹಾಗು ನನ್ನಂತೆ ನಮ್ಮ ಸಂಬಂದಿಕರಾದ 1) ಸುಲೆಮಾನ ತಂದೆ ನಬಿಲಾಲ ಮುಲ್ಲಾ 2) ಬಾಶಾ ತಂದೆ ಮದರ  ಮುಲ್ಲಾ 3) ನಬಿಲಾಲ ತಂದೆ ಮಹ್ಮದ ಹನೀಫ ಮುಲ್ಲಾ 4) ಚಾಂದಬೀ ಗಂಡ ಬಾಷಾ ಮುಲ್ಲಾ 5) ಜನತ್‌ಬೀ ಗಂಡ ಖಾಜಾಬಾಯಿ ಶೇಖ 6) ಗುಂಡು ತಂದೆ ಬಾಬು ಮುಲ್ಲಾ 7) ರಜಾಕ ತಂದೆ ಮಹ್ಮದ ಹನೀಫ ಮುಲ್ಲಾ 8) ನೂರಜಾ ಗಂಡ ರಜಾಕ ಮುಲ್ಲಾ 9) ಸಿಂದರ ತಂದೆ ಮಹ್ಮದ ಹನೀಫ್‌ ಮುಲ್ಲಾ 10) ಪರವಿನ ತಂದೆ ಸಿಕಂದರ ಮುಲ್ಲಾ 11) ಶಕೀಲ ತಂದೆ ಸಿಕಂದರ ಮುಲ್ಲಾ 12) ಸಮೀರ ತಂದೆ ಸಿಕಂದರ ಮುಲ್ಲಾ 13) ಮಹಿಮೂನಬಿ ಗಂಡ ನಬಿಲಾಲ ಮುಲ್ಲಾ 14) ಬಿಸ್ಮಿಲ್ಲಾ ಗಂಡ ರಮಜಾನ ಮುಲ್ಲಾ 15) ಆಯಶಾ ತಂದೆ ಸಿಕಂದರ ಮುಲ್ಲಾ 16) ಹಜರತ ಬೀ ಗಂಡ ಬುರಾನ ಮುಲ್ಲಾ 17) ರಮಜಾನ ತಂದೆ ದಾದುಮಿಯಾ ಮುಲ್ಲಾ  18) ಮೋಶಿನ ತಂದೆ ಸಿಕಂದರ ಮುಲ್ಲಾ 19) ಹುಸೇನ ತಂದೆ ಮದರಸಾಬ ಮುಲ್ಲಾ 20) ರಿಯಾನಾ 21) ಮುಮತಾಜ ಗಂಡ ಮಹಿಬೂಬ ಲವಣಿ 22) ಅಮೀನಾಬಿ ಗಂಡ ಮಹ್ಮದ ಹನೀಪ್ ಮುಲ್ಲಾ 23) ತನುಜಾ ತಂದೆ ಖಾಸಿಂಸಾಬ ಹಾಗು ಇತರರು ಕೂಡಿ ಗುಲಬರ್ಗಾಕ್ಕೆ ಹೊಗುವ ಕುರಿತು ಬೆಳಗಿನ ಜಾವ 01:30 ಗಂಟೆ ಸುಮಾರಿಗೆ ಅಲ್ಲಿಂದ ಹೊರಟು ಆಳಂದ ಮುಖಾಂತರ ಸಿಡ್ಸ ಪಾರಂ ದಾಟಿ ಕೊಡಲ ಹಂಗರಗಾ ಗ್ರಾಮ ಅಂದಾಜು 2 ಕೀಮೀ ದೂರ ಇರುವಾಗ ಬೆಳಗಿನ ಜಾವ 04:35 ಗಂಟೆ ಸುಮಾರಿಗೆ ರೋಡಿನ ಮೇಲೆ ಹೊಗುವಾಗ ನಮ್ಮ ಪಿಕ್‌ಅಪ್‌ ವಾಹನ ಚಾಲಕ ತನ್ನ ವಾಹನವನ್ನು ರೋಡಿನ ಎಡಬದಿಯಿಂದ ಸವಕಾಶವಾಗಿ ನಡೆಸಿಕೊಂಡು ಹೊಗುವಾಗ ಎದುರಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಕೆಎಸ್‌ಆರ್‌ಟಿಸಿ ಬಸ್‌ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ನಾವು ಕುಳಿತು ಹೊರಟ ಪಿಕ್‌ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಅಫಘಾತ ಮಾಡಿದ ಪರಿಣಾಮ ನಮ್ಮ ವಾಹನ ಆಳಂದಕ್ಕೆ ಮುಖಮಾಡಿ ಮಗ್ಗಲಲ್ಲಿ ನಿಂತಿದ್ದು ಡಿಕ್ಕಿ ಪಡಿಸಿದ ಬಸ್ಸು ರೋಡಿನ ಎಡಗಡೆ ತಗ್ಗಿನಲ್ಲಿ ಮುಖ ಕೆಳಮಾಡಿ ನಿಂತಿದ್ದು ನಾನು ಪಿಕ್‌ಅಪ್‌ ವಾಹನದಿಂದ ಜಿಗಿದು ಕೆಳಗೆ ಬಿದ್ದೆನು. ನನಗೆ ಬಲಗಾಲಿಗೆ ಟೊಂಕಕ್ಕೆ ರಕ್ತಗಾಯವಾಗಿದ್ದು ಪಿಕ್‌ಅಪ್‌ದಲ್ಲಿ ಇದ್ದ ನಮ್ಮ ಜನರಿಗೆ ನೋಡಲಾಗಿ ಅವರಲ್ಲಿ 1) ನಬಿಲಾಲ ತಂದೆ ಮಹ್ಮದ ಹನೀಪ ಮುಲ್ಲಾ 2) ಬಾಷಾ ತಂದೆ ಮದರಸಾಬ ಮುಲ್ಲಾ 3)ನೂರಜಾ ಗಂಡ ರಜಾಕ್‌ ಮುಲ್ಲಾ 4) ಪರವಿನ ಗಂಡ ಸಿಕಂದರ ಮುಲ್ಲಾ 5) ಸಮೀರ ತಂದೆ ಸಿಕಂದರ ಮುಲ್ಲಾ 6) ಮಹಿಮೂನ ಬೀ ಗಂಡ ನಬಿಸಾಬ ಮುಲ್ಲಾ 7) ರಮಜಾನ ತಂದೆ ದಾದುಮಿಯಾ ಮುಲ್ಲಾ 8) ಮೋಸಿನ್‌ ತಂದೆ ಸಿಕಿಂದರ ಮುಲ್ಲಾ 9) ಹುಸೇನ ತಂದೆ ಮದರಸಾಬ ಮುಲ್ಲಾ 10) ರಿಯಾನ್‌ ಗಂಡ ಜಾವೀದ ಶೇಖ 11) ಮಮತಾಜ ಗಂಡ ಮಹಿಬೂಬ ಲಾವಣಿ 12) ಬಾವಾಶಾ ತಂದೆ ಖಾಜಾಬಾಯಿ ಮುಲ್ಲಾ ಮತ್ತು 13) ನಮ್ಮ ಪಿಕ್ಅಪ್‌ ವಾಹನದ ಚಾಲಕನಾದ ಕಮಲಾಕರ್‌ ಬರಗುಡೆ ಇತನಿಗೂ ಭಾರಿಗಾಯ ಹೊಂದಿ ಸದರಿ 13 ಜನರು ಭಾರಿ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರು ತ್ತಾರೆ. ಹಾಗು ನಮ್ಮ ವಾಹನದಲ್ಲಿ ಕುಳಿತಿದ್ದ ಇನ್ನುಳಿದವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅದರಲ್ಲಿ ಕೆಲವರಿಗೆ ಆಳಂದ ಸರಕಾರಿ ಆಸ್ಪತ್ರೆಗೆ ಹಾಗು ಕೆಲವರಿಗೆ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ನರಸಯ್ಯ ತಂದೆ ನಾಗಯ್ಯ ಗುತ್ತೇದಾರ ಸಾ: ಗಡಿಕೇಶ್ವರ ತಾ:ಚಿಂಚೋಳಿ ಜಿ:ಗುಲಬರ್ಗಾ ರವರು  ದಿನಂಕ:02-06-2014 ರಂದು 8 ಎ.ಎಮಕ್ಕೆ ನಮ್ಮೂರಿನಿಂದ ನನ್ನ ಮಗನಾದ ರಮೇಶ ಇತನು ನಮ್ಮ ದ್ವಿಚಕ್ರ ವಾಹನ ನಂ. ಕೆಎ-32-ಕ್ಯೂ-8732 ನೇದ್ದರ ಮೇಲೆ ನಮ್ಮೂರಿನಿಂದ ನನ್ನ ಕಣ್ಣಿನ ಡ್ರೆಸಿಂಗ್ ಮಾಡಿಸಿಕೊಂಡು ಬರಲು ಗುಲಬರ್ಗಾದ ಬರೂಕಾ ಆಸ್ಪತ್ರೆಗೆ 10-00 ಎ.ಎಮಕ್ಕೆ ಬಂದು ಅಲ್ಲಿಯ ವೈದ್ಯಾಧೀಕಾರಿಯವರಿಂದ ನನ್ನ ಕಣ್ಣಿನ ಡ್ರೇಸಿಂಗ ಮಾಡಿಸಿಕೊಂಡು ಅಂದಾಜು 11 ,ಎಮದ ಸುಮಾರಿಗೆ ಅಲ್ಲಿಂದ ನಮ್ಮೂರಿಗೆ ಹೊರಟೇವು. ಮೊಟಾರ ಸೈಕಲನ್ನು ನನ್ನ ಮಗ ರಮೇಶನು ಚಲಾಯಿಸುತ್ತಿದ್ದು, ನಾನು ಹಿಂದೆ ಕುಳಿತಿದ್ದು. ಜೇವರ್ಗಿ ರೋಡ ಕೇಂದ್ರಿಯ ವಿದ್ಯಾಲಯ ಕ್ರಾಸ ಹತ್ತಿರ ಗುಲಬರ್ಗಾ ಕಡೆಗೆ ಹೊರಟಾಗ ಗುಲಬರ್ಗಾ ಕಡೆಯಿಂದ ಕೆ.ಎಸ.ಆರ್.ಟಿ.ಸಿ ಬಸ್ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮಮೊಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಹಿಂದೆ ಕುಳಿತ ನಾನು ಹಾರಿ ಪಕ್ಕದಲ್ಲಿ ಬಿದ್ದೇನು. ನನ್ನ ಮಗ ಬಸ್ಸಿನ ಮುಂದಿನ ಗಾಲಿಯಲ್ಲಿ ಸಿಲ್ಕಿಕೊಂಡು ಮೊಟಾರ ಸೈಕಲ ಸಮೇತ ಮುಂದೆ ಹೋಯಿತು. ಅಷ್ಟರಲ್ಲಿಯೇ ನನ್ನ ತಮ್ಮನಾದ ನಾಗಯ್ಯ ಕಾಶಪ್ಪ ಗುತ್ತೇದಾರ ಇವರು ಬಂದು ನೋಡಿ ನನಗೆ ಎಬ್ಬಿಸಿ ಕುಳಿಸಿದರು. ನಾನು ಮತ್ತು ನನ್ನ ತಮ್ಮ ಇಬ್ಬರು ಹೋಗಿ ನೋಡಲು ನನ್ನ ಮಗನಿಗೆ ಬಲಗಾಲ ಪಾದದ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದು ಹೋಗಿದ್ದು. ಬಲಗೈ ಪೂರ್ತಿ ಮುರಿದಿದ್ದು. ಎಡಗೈಗೆ ತರಚಿದ ಗಾಯ. ಬಲಗಣ್ಣಿನ ಹತ್ತಿರ ರಕ್ತಗಾಯ, ಮೆಲಕಿನಿಂದ ಕಿವಿಯವರೆಗೆ ಚಪ್ಪಟ್ಟೆಯಾಗಿರುತ್ತದೆ. ನನಗೆ ಟೊಕ್ಕಕ್ಕೆ ಒಳಪೆಟ್ಟಾಗಿರುತ್ತದೆ. ಸದ್ರಿ ಬಸ ನಂ. ನೋಡಲು ಕೆಎ-33-ಎಫ-212 ನೇದ್ದು ಇದ್ದು. ಸದ್ರಿ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ನನ್ನ ಮಗನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 01-06-2014 ರಂದು ರಾತ್ರಿ 9-30 ಗಂಟೆಗೆ ಶ್ರೀ ಮಲ್ಲಿಕಾರ್ಜುನ  ತಂದೆ ನಿಂಗಣ್ಣಾ ಬನ್ನಿ ಸಾ: ಮನೆ ನಂ 10-368 ರಾಮ ಮಂದಿರ ಗೋವಾ ಹೋಟಲ ಹತ್ತಿರ ಬ್ರಹ್ಮಪೂರ  ಗುಲಬರ್ಗಾ ರವರು ತನ್ನ ಕೆಲಸದ ಸಂಬಂದ ಹೋಗಿ ವಾಪಸ್ಸ  ಲಾಲಗೇರಿ ಕ್ರಾಸ ಮುಖಾಂತರವಾಗಿ  ಗೋವಾ ಹೋಟಲ ಕಡೆಗೆ ನಡೆದುಕೊಂಡು ಹೋಗುವಾಗ ಲಾಲಗೇರಿ ಕ್ರಾಸ್ ಸಮೀಪವಿರುವ  ಮುಕ್ತಾಂಬಿಕಾ ಡಿಗ್ರಿ ಕಾಲೇಜ ಎದುರು ರೋಡ ಮೇಲೆ  ಮೋಟಾರ ಸೈಕಲ ನಂ ಕೆಎ-32 ಕೆ-8920 ರ ಸವಾರ ಎದರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀಮತಿ ಹೀರಾಬಾಯಿ ಗಂಡ ಬಂದು ರಾಠೋಡ ಸಾ|| ಭಂಕೂರ ಇವರ ಮಗ  ದೇವರಾಮ ವ||20 ವರ್ಷ ಈತನು ದಿನಾಂಕ 25.05.2014 ರಂದು ಮಧ್ಯಾಹ್ನ 5.00ಪಿ.ಎಮ್. ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಟಕಲ ಠಾಣೆ : ಶ್ರೀ ಮಾಣಿಕ ತಂದೆ ಶರಣಪ್ಪಾ ಸಾ ಪಸ್ತಾಪೂರ ತಾ : ಚಿಂಚೋಳಿ ಜಿ : ಗುಲಬರ್ಗಾ ರವರ ಮಗನಾದ ಚಂದ್ರಕಾಂತ ಇವನು ದಿನಾಂಕ 22-05-2014 ರಂದು 10 ಎಎಮ್ ಸುಮಾರಿಗೆ ಪಸ್ತಾಪೂರದಿಂದ ಹುಮನಾಬಾದಕ್ಕೆ ಬರುತ್ತೆನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ . ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Glbarga District Reported Crimes

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಬಸಪ್ಪಾ ತಂದೆ ಬಿಮಪ್ಪಾ ಬಜಂತ್ರಿ ಪಿ.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ರವರು. ದಿನಾಂಕ. 18.05.2014 ರಂದು ಶ್ರೀ ಗಣೇಶ ತಂದೆ ರಾಮಚಂದ್ರ ಇವರ ದೂರಿನ ಮೇರೆಗೆ ಠಾಣೆ ಗುನ್ನೆ ನಂ. 87/2014 ಕಲಂ. 420, 384, 387, 448, 323, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣವು ಗುರುಶಾಂತ ಪಟ್ಟೆದಾರ ಇವರ ವಿರುದ್ದ ಇರುತ್ತದೆ. ಸದರಿಯವನು ತನಿಖೆಗೆ ಸಹಕರಿಸುತ್ತಿಲ್ಲ. ದಿನಾಂಕ. 31.05.2014 ರಂದು 6.30 ಪಿ.ಎಂಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಕಛೇರಿ ಸ್ಟೇಪ ಹತ್ತಿರ ಗುರುಶಾಂತ ಪಟ್ಟೆದಾರ ಇವನು ನನ್ನನ್ನು ನೋಡಿ ನಿನಗೆ ಸಸ್ಪೆಂಡ ಮಾಡುತ್ತೇನೆ ಅಂತಾ ಒದರಾಡಿದನು. ಮತ್ತು ಇಂದು ದಿನಾಂಕ. 01.06.2014 ರಂದು 12.20 ಪಿ.ಎಂಕ್ಕೆ ನಾನು ಮತ್ತು ಪಿ.ಎಸ್.ಐ (ಅವಿ) ಮತ್ತು ಸಿಬ್ಬಂದಿಯವರಾದ ಅಶೋಕ ಪಿಸಿ-625, ಶಿವರಾಜ ಪಿಸಿ-277, ಚನ್ನಮಲ್ಲಪ್ಪಾ ಪಿಸಿ-241, ಹಾಜಿಮಲಂಗ ಪಿಸಿ-640, ಶಿವಾನಂದ ಪಿಸಿ-1240, ಅಕ್ಬರ ಪಿಸಿ-784 ಕೂಡಿ ಡಿ.ಎಸ್.ಪಿ ಆಫಿಸಿನಿಂದ ಠಾಣೆಗೆ ಬರುವಾಗ ತಾಲ್ಲುಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ ಎದುರಿಗೆ ಸದರಿ ಗುರುಶಾಂತ ಪಟ್ಟೆದಾರ ಇವನು ನನ್ನ ಜೀಪನ್ನು ತಡೆದು ನಿಲ್ಲಿಸಿ ಏ ನಿನ್ನ ಒಂದು ವಾರದಲ್ಲಿ ಸಸ್ಪೆಂಡ ಮಾಡುತ್ತೇನೆ ನಾನು ಸಿ.ಎಂ ಮತ್ತು ಹೆಚ್.ಎಂ ಗೆ ಬೇಟಿಯಾಗಿ ಬಂದಿದ್ದೆನೆ ನಿನ್ನನ್ನು ನೋಡುತ್ತೇನೆ ಅಂತ ಅಂದವನೆ ತನ್ನ ಹತ್ತಿರ ಇದ್ದ ಪಿಸ್ತೂಲಿನಿಂದ ನನಗೆ ತೊರಿಸಿ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದನು. ಮತ್ತು ಅವ್ಯಾಚ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-06-2014 ಸರಕಾರಿ ಪ್ರೌಡ ಶಾಲೆ ಲಕ್ಷ್ಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 5 ಜನ ಆರೋಪಿತರನ್ನು ಹಿಡಿದು ವಿಚಾರಿಸಲು 1.ಬಸವರಾಜ ತಂದೆ ಶಿವಶರಣಪ್ಪ ಅಗಸಿ 2. ಶರಣಬಸು ತಂದೆ ಶಿವಯೋಗೆಪ್ಪ ನಂದಗೇರಿ ಸಾ : ಇಬ್ಬರು ಸೊನ್ನ 3.ಸಿದ್ದಪ್ಪ ತಂದೆ ದುಂಡಪ್ಪ ಕೋರಳ್ಳಿ 4. ರವಿ ತಂದೆ ಸಿದ್ದಣ್ಣ ಬಿರಾದ 5. ರಾಜು ತಂದೆ ಚನ್ನಬಸಪ್ಪ ಹಳ್ಳೆಪ್ಪಗೋಳ ಸಾ : ಎಲ್ಲರು ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 8910/- ರೂ ಹಾಗು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಬಾನಾಬೇಗಂ ಗಂಡ ಜಮೀಲ್‌ ಅಹ್ಮದ  ಸಾ:ಮದೀನಾ ಕಾಲೊನಿ  ಗುಲಬರ್ಗಾ ಇವರು ಮಗಳಾದ  ವ:7 ವರ್ಷ ಇವಳು ಆಲ ಅಮೀನ್ ಉರ್ದು ಶಾಲೆಯಲ್ಲಿ 2 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ.  ನನಗೆ ಆರಾಮ ಇಲ್ಲದ ಪ್ರಯುಕ್ತ ದಿನಾಂಕ:30/05/2014 ರಂದು ಮುರಗೇಶ ಪಸ್ತಾಪುರ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿ ಉಪಚಾರ ಪಡೆದು ಇಂದು ದಿನಾಂಕ:31/05/2014 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಸಾಯಂಕಾಲ 4.30 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಇದ್ದಿರುತ್ತೇನೆ. ಇಂದು ದಿನಾಂಕ:01/06/2014 ರಂದು ನನ್ನ ಗಂಡನು ರವಿವಾರ ರಜೆ ಇರುವದರಿಂದ ಕೆಲಸಕ್ಕೆ ಹೋಗದೆ ನೀಲೂರ ದರ್ಗಾಕ್ಕೆ  ಹೋಗಿರುತ್ತಾನೆ. ಮನೆಯಲ್ಲಿ ನಾನು ನನ್ನ ಮಕ್ಕಳು ಇದ್ದು ನನ್ನ ಮಗಳು ನನ್ನ ಭಾವನಾದ ನಜೀರ ಅಹ್ಮದ ಇವರ ಅಂಗಡಿ ಹತ್ತಿರ ಆಟ ಆಡಲು ಹೋಗಿದ್ದಳು. ರಾತ್ರಿ 7.00 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಕುರ್ಚಿಯ ಮೇಲೆ ಕುಳಿತು ಗುಪ್ತಾಂಗ ಒರೆಸುತ್ತಾ ಅಳುತಿದ್ದಳು ಆಗ ನಾನು ನನ್ನ ಮಗಳಿಗೆ ವಿಚಾರಿಸಲು ಅವಳು ಹೇಳಿದ್ದೇನೆಂದರೆ ನಮ್ಮ ದೊಡ್ಡಪ್ಪನಾದ ನಜೀರ ಅಹ್ಮದ ಇವರ ಅಂಗಡಿಯಲ್ಲಿ ಕುಳಿತು ಕೊಂಡಿದ್ದ  ಜಾಕೀರ ಹುಸೇನ್ ಇವನು ನನಗೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗಿ ದೊಡ್ಡಪ್ಪನ ಗೋದಾಮ ಒಳಗಡೆ ಜೋಳದ ಚೀಲದ ಮೇಲೆ ಮಲಗಿಸಿ ನನ್ನ ಬಾಯಿ ಒತ್ತಿ ಹಿಡಿದು ಎದೆಯ ಮೇಲೆ ಕೈ ಆಡಿಸಿ ಅವನ ಶಿಶ್ನವನ್ನು ತೆಗೆದು ನನ್ನ ಯೋನಿಯ ಮೇಲೆ ಆಡಿಸಿ ಸಂಭೋಗ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 June 2014

Gulbarga District Reported Crimes

ಕೊನ ಹಿಪ್ಪರಗಾ ಗ್ರಾಮದ ಆಸ್ತಿ ವಿವಾದ ಹಿನ್ನಲೆಯಲ್ಲಿ ವಿಶ್ವರಾಜ ಮಲಬೋ ಈತನ ಕೊಲೆ, 6 ಜನರ ಬಂಧನ 
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 25-09-2013  ರಂದು ರಾತ್ರಿ ವೇಳೆಯಲ್ಲಿ ವಿಶ್ವರಾಜ ತಂದೆ ಬಾಬುರಾವ ಮಲಬೋ ಸಾ// ಕೊನಹಿಪ್ಪರಗಾ ಇವರು ಕೊನ ಹಿಪ್ಪರಗಾ ಗ್ರಾಮದಲ್ಲಿ ಪರ್ವತಪ್ಪ ಹಾಲಕಾಯಿ ಇವರಿಂದ 5 ಎಕರೆ ಜಮಿನು ಖರಿಧಿಸಿದ್ದು ಪರ್ವತಪ್ಪ ಹಾಲಕಾಯಿ ಈತನು ಮರಣ ಹೊಂದಿದ ನಂತರ ಆತನ ಆತನ ಮಕ್ಕಳು ಹಾಗೂ ಸಂಬಂಧಿಕರು ವಿಶ್ವರಾಜ ಮಲಬೋ ಈತನಿಗೆ ಹೊಲ ರಜಿಸ್ಟರ ಮಾಡಿಕೊಡದೇ ಆತನ ಕಬ್ಜೆಯಿಂದ ಹೊಲ ಬಿಡಿಸಿಕೊಂಡು ತಕರಾರು ಮಾಡಿದ್ದರಿಂದ ವಿಶ್ವರಾಜ ಈತನು ಕೊನಹಿಪ್ಪರಗಾ ಗ್ರಾಮ ಬಿಟ್ಟು ಜೇವರ್ಗಿ ತಾಲೂಕಿನ ರಾಮಪುರದಲ್ಲಿ ವಾಸವಾಗಿದ್ದು ಇರುತ್ತದೆ. ವಿಶ್ವರಾಜ ಮಲಬೋ ಈತನಿಗೆ ಹೀಗೆ ಬಿಟ್ಟರೆ ಮತ್ತೆ ಜಮೀನು ತನ್ನ ಹೆಸರಿಗೆ ರಜಿಸ್ಟರ ಮಾಡಿಕೊಡಬೇಕು ಅಂತಾ ಜಿದ್ದು ಸಾಧಿಸುತ್ತಿರುವದರಿಂದ ಅಂಬು ಹಾಲಕಾಯಿ ಹಾಗೂ ಇತರರು ಕೂಡಿಕೊಂಡು ಗುಲಬರ್ಗಾ ನಗರದ ಸುಫಾರಿ ಹಂತರಕರಿಂದ ಮಾಲಗತ್ತಿ ಸಿಮಾಂತರದ ಕಚ್ಛಾ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿಸಿರುತ್ತಾರೆ ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಈ ಕೊಲೆ  ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ  ಶ್ರೀ ಸಂತೋಷ ಬಾಬು. ಐ.ಪಿ.ಎಸ್. ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬಗರ್ಾ ರವರ ನೇತೃತ್ವದಲ್ಲಿ ಶ್ರೀ ಡಿ.ಜಿ ರಾಜಣ್ಣ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ಹಾಗೂ ಶ್ರೀ ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 30-05-2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1. ಅರ್ಜುನ ತಂದೆ ಮರೇಪ್ಪ ಕೋಬಾಳ  ಸಾ : ವಿದ್ಯಾ ನಗರ ವಿಶ್ವರಾದ್ಯ ಗುಡಿ ಹಿಂದುಗಡೆ ಜೇವರ್ಗಿ 2. ಖಾಸಿಂ ತಂದೆ ಫಕ್ರುದ್ದಿನ ಮುಜಾವರ ಸಾ: ವಿದ್ಯಾ ನಗರ ವಿಶ್ವರಾದ್ಯ ಗುಡಿ ಹಿಂದುಗಡೆ ಜೇವರ್ಗಿ 3. ಅಂಬು ಅಲಿಯಾಸ ಅಬ್ರೀಶ ತಂದೆ ಪರ್ವತಪ್ಪ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 4. ಹಣಮಂತ್ರಾಯ ಅಲಿಯಾಸ ದೇಸಾಯಿ ತಂದೆ ಭೀಮರಾವ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 5. ದೇವಿಂದ್ರಪ್ಪಾ ಅಲಿಯಾಸ್ ದೇವು ತಂದೆ ಪರ್ವತಪ್ಪ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 6. ಇಸಾಮೊದ್ದಿನ ತಂದೆ ಗೌಸೊದ್ದಿನ ಶೇಖ ಸಾ: ಇಲಾಯಿ ಮಜ್ಜಿದ ಹತ್ತಿರ ಸಮತಾ ಕಾಲೋನಿ ಜಿಲಾನಾಬಾದ ಗುಲಬರ್ಗಾ ರವರನ್ನು ದಸ್ತಗೀರ ಮಾಡಿದ್ದು
ಈ ಕೊಲೆ ಪ್ರಕರಣದಲ್ಲಿ ಸುಫಾರಿ ಪಡೆದುಕೊಂಡು ಕೊಲೆ ಮಾಡಿರುವ ಆಆರೋಪಿತರಾದ 1. ನಾಸೀರ @ ಶೇಖ ನಾಸೀರ ತಂದೆ ಶೇಖ ಶಮರ್ುದ್ದೀನ್ ವಯಾ 24 ವರ್ಷ ಜಾ:ಮುಸ್ಲಿಂ ಉ: ಆಟೋ ಚಾಲಕ ಸಾ: ಏಕಬಾಲ್ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾಮತ್ತು 2. ಸೈಯ್ಯದ ಸದ್ದಾಂ ತಂದೆ ಬಾಬುಮಿಯಾ ವಯಾ 22 ವರ್ಷ ಜಾ: ಮುಸ್ಲಿಂ ಉ: ಗೌಂಡಿ ಕೆಲಸ ಸಾ: ಖದೀರ ಚೌಕ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರನ್ನು ದಿ: 28-11-2013 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಸದರಿ ಆರೋಪಿತರು ತನಿಖೆ ಕಾಲಕ್ಕೆ ತಮಗೆ ಸುಫಾರಿ ನೀಡಿರುವ ವ್ಯಕ್ತಿಗಳ ಹೆಸರು ಹೇಳದೆ ಇರುವದರಿಂದ ಪ್ರಕರಣದಲ್ಲಿ ಸುಫಾರಿ ನೀಡಿದವರ ಪತ್ತೆ ಹಚ್ಚುವದು ಪೊಲೀಸರಿಗೆ ಸವಾಲಾಗಿತ್ತು. ಆದರೂ ಯಶಸ್ವಿಯಾಗಿ ಈ ಪ್ರಕರಣದಲ್ಲಿ ವಿಶ್ವರಾಜ ಮಲಬೋ ಈತನಿಗೆ ಕೊಲೆ ಮಾಡಲು ಸುಫಾರಿ ನೀಡಿರುವ ಆರೋಪಿತರನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿ ಸುಫಾರಿ ನೀಡಿದ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೊಪಿತರನ್ನು ಮೇಲ್ಕಂಡ ತನಿಖಾ ತಂಡವು ಭೇದಿಸುವಲ್ಲಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಶ್ಲಾಘಿಸಿರುತ್ತಾರೆ.  ಇನ್ನೂ ಫರಾರಿ ಇರುವ ಆರೋಪಿತರ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಅನಾಥ ಮಗು ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 13-01-2014 ರಂದು ಗುಲಬರ್ಗಾ ನಗರದ ಬ್ರಹ್ಮಪೂರ ಬಡಾವಣೆಯ ಟೆಕ್ಬರನಾ ದರ್ಗಾದ ಹತ್ತಿರ ಒಂದು ಅನಾಥ ಹೆಣ್ಣು ಮಗು ಒಂದು ದಿವಸದ ಯಾರೋ ಅಪರಿಚಿತರು ಇಟ್ಟು ಹೋಗಿದ್ದು ಮಗುವನ್ನು ಅಲ್ಲಿನ ಸಾರ್ವಜನಿಕರು ನೋಡಿ ಗುಲಬರ್ಗಾ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಮಗುವಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳವರೆಗೆ ಚಿಕಿತ್ಸೆ ಮಾಡಿಸಿ ಮಗುವನ್ನು ನಮ್ಮ ಅಮೂಲ್ಯ ಶಿಶುಗೃಹದಲ್ಲಿ ತೆಗೆದುಕೊಂಡು ಹೋಗಿ ಅದರ ಪಾಲನೆ ಪೋಷಣೆ ಮಾಡುತ್ತಾ ಬರುತ್ತಿದ್ದು ದಿನಾಂಕ: 26-05-2014 ರಂದು ರಾತ್ರಿ 10 ಗಂಟೆ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದ್ದು ಉಪಚಾರ ಕುರಿತು ನಾನು ಮತ್ತು ನಮ್ಮ ಅಮೂಲ್ಯ ಶಿಶುಗೃಹದ ಶುಶ್ರೂಷಿಕಿಯಾದ ಜಯಶ್ರೀ ಇಬ್ಬರೂ ಕೂಡಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರ್ಪಡೆ ಮಾಡಿರುತ್ತೇವೆ. ಉಪಚಾರ ಪಡೆಯುತ್ತಾ ಮಗು ಉಪಚಾರದಲ್ಲಿ ಫಲಕಾರಿಯಾಗದೆ ದಿನಾಂಕ: 31-05-2014 ರಂದು ರಾತ್ರಿ 2 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತದೆ. ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರ ಹಿರೇಮಠ ಅಧೀಕ್ಷಕರು ಪ್ರಭಾರಿ ಅಮೂಲ್ಯ ಶಿಶುಗೃಹ ಅಳಂದ ಕಾಲೋನಿ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕೊಲೆ ಪ್ರಕರಣ :
ಗ್ರಾಮೀಣ ಟಾಣೆ : ಶ್ರೀ ನಾಗಪ್ಪ ತಂದೆ ಶಿವಪ್ಪ ಗೊಬ್ಬೂರಕರ ಸಾ: ತಾಜಸುಲ್ತಾನಪೂರ ಇವರ ಮಗನಾದ ಶಿವಪ್ರಕಾಶ ಗೊಬ್ಬೂರಕರ ವ: 22 ವರ್ಷ ಈತನು ನಮ್ಮೂರ ಸಿದ್ದರಾಮ ಲಗಶೇಟ್ಟಿ ಇವರ ಮಗಳಾದ ಕುಮಾರಿ ಇವಳೊಂದಿಗೆ ಈಗ ಸುಮಾರು 06 ತಿಂಗಳಿನಿಂದ ಪ್ರೀತಿಸುತ್ತಿದ್ದೂ, ಈ ವಿಷಯವಾಗಿ ಒಂದು ತಿಂಗಳ ಹಿಂದೆ ಸಿದ್ದರಾಮ ಲಗಶೇಟ್ಟಿಯವರ ಮನೆಯವರು ನನ್ನ ಮಗ ಶಿವಪ್ರಕಾಶ ಈತನಿಗೆ ನೀವು ದಲಿತ ವರ್ಗದವರಿದ್ದು ನಾವು ಲಿಂಗಾಯತ ಕೊಮಿಗೆ ಸೇರಿದವರಿರುವದರಿಂದ ತಮ್ಮ ಮಗಳ ಜೊತೆ ಮಾತನಾಡುವದಾಗಲಿ ಭೇಟಿಯಾಗುವದಾಗಲೀ ಮಾಡಬೇಡವೆಂದು ತಂಟೆ ತಕರಾರು ಮಾಡಿರುತ್ತಾರೆ. ದಿನಾಂಕ 29-05-2014 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ಊಟ ಮಾಡಿ ನಾವು ಮನೆಯಲ್ಲಿ ಮಲಗಿದ್ದು ನನ್ನ ಮಗ ಶಿವಪ್ರಕಾಶ ಈತನು ಮನೆಯ ಛತ್ತಿನ ಮೇಲೆ ಮಲಗಿಕೊಂಡಿದ್ದು, ದಿನಾಂಕ:  30-05-2014  ರಂದು ಬೆಳಿಗ್ಗೆ ಎದ್ದು ನೋಡಲಾಗಿ ನಮ್ಮ ಮಗ ಮನೆಯ ಛತ್ತಿನ ಮೇಲೆ ಇರಲಿಲ್ಲ. ಅಂದಿನಿಂದ ಇಂದಿನವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ. ನಮ್ಮ ಮಗ ಶಿವಪ್ರಕಾಶ ಈತನು ನಮ್ಮೂರ ಸಿದ್ದರಾಮ ಲಗಶೇಟ್ಟಿ ಇವರ ಮಗಳನ್ನು ಪ್ರೀತಿ ಮಾಡುತ್ತಿರುವದರಿಂದ ಅದೇ ವೈಮನಸ್ಸಿನಿಂದ ನಮ್ಮೂರ  1] ಸಿದ್ದರಾಮ ತಂದೆ ನಾಗಪ್ಪ ಲಗಶೇಟ್ಟಿ 2] ಗುರುಬಾಯಿ ಗಂಡ ಸಿದ್ದರಾಮ ಲಗಶೇಟ್ಟಿ  3] ನಾಗರಾಜ ತಂದೆ ಸಿದ್ದರಾಮ ಲಗಶೇಟ್ಟಿ  4] ಸುನಿತಾ ತಂದೆ ಸಿದ್ದರಾಮ ಲಗಶೇಟ್ಟಿ  5] ಈರಣ್ಣಾ ತಂದೆ ಬಸವರಾಜ ಹಾಗೂ ಇತರರು ಸಾ: ಎಲ್ಲರೂ ತಾಜಸುಲ್ತಾನಪೂರ  ಇವರುಗಳು ದಿನಾಂಕ: 29-05-2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ:30-05-2014 ರಂದು ಬೆಳಗಿನ ಜಾವ 6:00 ಗಂಟೆಯ ಮದ್ಯದ ಅವಧಿಯಲ್ಲಿ ನನ್ನ ಮಗ ಶಿವಪ್ರಕಾಶ ಈತನಿಗೆ ತಮ್ಮ ಮನೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಶವವನ್ನು ಎಲ್ಲಿಯೋ ಬಿಸಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು  :
ಮಾಡಬೂಳ ಠಾಣೆ : ಶ್ರೀ ಅನಮೊಲ ತಂದೆ ರಾಜೇಶ ಗಾಯಕವಾಡ ಸಾ : ಗಂಜ ಪೇಠ ಗಲ್ಲಿ ನಂ 01 ಪುಣೆ ರವರ ಗೆಳೆಯನಾದ ರಾಜೇಶ ಇವರು ಬಾಪನಪಳ್ಳಿ(ಎಪಿ)ಯಲ್ಲಿ ತನ್ನ ಗೆಳೆಯನಾದ ಶಂಕರ ಭೋವಿನಾಳ ಈತನ ಮದುವೆ ಇದ್ದ ಕಾರಣ ಫಿರ್ಯಾದಿ ಹಾಗೂ ಅವನ ಗೆಳೆಯ ರಾಜೇಶ ಧನಗರ ಇಬ್ಬರು ಕೂಡಿ ಪಲ್ಸರ ಮೊಟಾರ ಸೈಕಲ ನಂ. ಎಮ್.ಹೆಚ್.12 ಜೆಪಿ 1788ನೇದ್ದರ ಮೇಲೆ ಪುಣೆಯಿಂದ ದಿನಾಂಕ:-29/05/2014 ರಂದು ಬಂದು ನಿನ್ನೆ ಲಗ್ನ ಮುಗಿಸಿಕೊಂಡು ಮರಳಿ ಪುಣಾಕ್ಕೆ ಹೋಗಬೇಕು ಅಂತಾ ಸದರಿ ಮೊಟಾರ ಸೈಕಲ ಮೇಲೆ ಇಂದು ದಿನಾಂಕ:-31/05/2014 ರಂದು 8 ಎ.ಎಮ್.ಕ್ಕೆ ಹೊರಟು ಸದರಿ ಮೊಟಾರ ಸೈಕಲ ನನ್ನ ಗೆಳೆಯ ರಾಜೇಶ ಧನಗರ ಈತನು ನಡೆಸುತ್ತಿದ್ದು. 10.30 ಎ.ಎಮ್. ಸುಮಾರಿಗೆ ಮುಗಟಾ ಬಸ್ ನಿಲ್ದಾಣದ ಎದುರು ಹೋಗುತ್ತಿದ್ದಾಗ ಬಸ್ ನಿಲ್ದಾಣ ಹತ್ತಿರ ನಿಂತಿದ್ದ ಒಂದು ಟಂ ಟಂ ಚಾಲಕನು ತನ್ನ ಟಂ ಟಂ ಅನ್ನು ಒಮ್ಮೇಲೆ ತಿರುಗಿಸಿ ನಮ್ಮ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿದ ನಾನು ನನ್ನ ಗೆಳೆಯ ರಾಜೇಶ ಕೆಳಗೆ ಬಿಳಲು ನನ್ನ ಬಲಗಾಲಿನ ಮೊಣಕಾಲ ಕೆಳಗೆ ಭಾರಿ ರಕ್ತಗಾಯ ವಾಗಿ ಎರಡು ಕಪಾಳಕ್ಕೆ ಗುಪ್ತಗಾಯ ಮತ್ತು ತರಚಿದ ಗಾಯವಾಗಿದ್ದು. ನಂತರ ರಾಜೇಶನಿಗೆ ನೋಡಲಾಗಿ ರಾಜೇಶನ ತಲೆ ಒಡೆದು ಮೆದುಳು ಹೊರಗೆ ಬಿದ್ದಿದ್ದು. ಹಾಗೂ ಅಲ್ಲೆ ಇದ್ದ ಯಾರೋ ಒಬ್ಬರು ಜಿ.ವಿ.ಆರ್. ಅಂಬುಲೆನ್ಸ್ ಗೆ ಫೋನ ಮಾಡಿ ಬರಲು ತಿಳಿಸಿದರು. ನಂತರ ಸದರಿ ಟಂ ಟಂ ನಂ. ನೋಡನಾಗಿ ಕೆಎ 32 ಸಿ 1733 ಅಂತ ಇದ್ದು ಅದರ ಚಾಲಕ ಟಂ ಟಂ ಅಲ್ಲೆ ಬಿಟ್ಟಿ ಓಡಿ ಹೋದನು ಅವನು ನೋಡಿದರೆ ಗುರುತಿಸುತ್ತೇನೆ. ಅಷ್ಟರಲ್ಲಿ ಜಿ.ವಿ.ಆರ್. ಅಂಬುಲೆನ್ಸ್ ಬರಲು ನನಗೂ ಹಾಗೂ ನನ್ನ ಗೆಳೆಯ ರಾಜೇಶನಿಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲ್ಬರ್ಗಾಕ್ಕೆ ಸೇರಿಕೆ ಮಾಡಿದ್ದು. ಉಪಚಾರ ಕಾಲಕ್ಕೆ ನನ್ನ ಗೆಳೆಯ ರಾಜೇಶ ಈತನು ಮೃತ ಪಟ್ಟಿದ್ದು ಇರುತ್ತದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀ ಬಾಬುರಾವ ತಂದೆ ರೆವಣಪ್ಪ ಬುದ್ದಾ ಸಾ:ಮನೆನಂ.22-1 ಕಸ್ತೂರಿ ನಿವಾಸ ಘಾಟಗೆ ಲೇಔಟ ಗುಲಬರ್ಗಾ ಇವರು ದಿನಾಂಕ:01-06-2014 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಕಸ್ತೂರಿಬಾಯಿ ನನ್ನ ತಾಯಿ ಶರಣಮ್ಮ ಹಾಗೂ ಕಾರ ಚಾಲಕ ಸಂಜುಕುಮಾರ ಬಿರಾದಾರ ಕೂಡಿಕೊಂಡು ನನ್ನ ಮಾರುತಿ ರಿಟ್ಜ ಶಿಲ್ವರ ಕಲರ ಕಾರ ನಂ ಕೆಎ-32 ಎನ-0437 ನೆದ್ದರಲ್ಲಿ  ಗುಲಬರ್ಗಾದಿಂದ ಹೈದ್ರಾಬಾದಗೆ ಆಸ್ಪತ್ರೆಗೆ ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ನೇದ್ದರ ರೋಡಿನ ಮುಖಾಂತರ ಹೊರಟಿದ್ದು. ಕಿಣ್ಣಿ ಸಡಕ ಗ್ರಾಮದ ಹತ್ತಿರ ಬೆಳಿಗ್ಗೆ 09-00 ಗಂಟೆಯ ಸೂಮಾರಿಗೆ ಹೊಗುತ್ತೀದ್ದಾಗ ಹಿಂದಿನಿಂದ ಯಾವುದೋ ಒಬ್ಬ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಓಡಿ ಹೋಗಿದ್ದರಿಂದ ನಮ್ಮ ಕಾರ ರೋಡಿನ ಎಡಭಾಗಕ್ಕೆ 2 ರಿಂದ 3 ಬಾರಿ ಪಲ್ಟಿಯಾಗಿ ನಾಲ್ಕು ಗಾಲಿಗಳು ಮೇಲಾಗಿ ಬಿದ್ದಿದ್ದರಿಂದ ನಾವು ಕಾರನಿಂದ ಇಳಿದು ನೋಡಲಾಗಿ ನನಗೆ ಎಡಗಾಲ ಮೋಣಕಾಲಿಗೆ ತರಚಿದ ರಕ್ತಗಾಯ ಎಡಪಾದದ ಮೇಲೆ ರಕ್ತಗಾಯ ಮತ್ತು ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು ನನ್ನ ಹೆಂಡತಿ ಕಸ್ತೂರಿಬಾಯಿ ಇವಳಿಗೆ ಬೆನ್ನಿಗೆ ಕುತ್ತಿಗೆಗೆ ಹಾಗೂ ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು ನನ್ನ ತಾಯಿ ಶರಣಮ್ಮ ಇವಳಿಗೆ ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು ನಮ್ಮ ಕಾರ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಈ ಅಪಘಾತದಲ್ಲಿನಮ್ಮ ಕಾರ ಜಖಂಗೊಂಡು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಗೋಪಾಲ ತಂದೆ ಈರಣ್ಣಾ ಕಾವಳೆ ಸಾ : ಎರಂಡಗಿ ತಾ: ಬಸವಕಲ್ಯಾಣ ಜಿ: ಬೀದರ ರವರ  ಮದುವೆಯು ದಿನಾಂಕ 09-06-2014  ರಂದು ನಿಶ್ಚಯವಾಗಿದ್ದರಿಂದ ದಿನಾಂಕ 31-05-2014  ರಂದು ಲಗ್ನ ಪತ್ರಿಕೆಯು ತನ್ನ ಸಂಬಂದಿಕರಿಗೆ ಕೊಡುವ ಸಂಬಂದ ತಮ್ಮೂರಿನ ತಮ್ಮ ಪೈಕಿಯವನೆಯಾದ ವಿನೋದ  ಹಾಗೂ ಪಿರ್ಯಾದಿದಾರ ಕೂಡಿಕೊಂಡು ಅದೆ ಊರಿನವನಾದ ವಾಲ್ಮಿಕ ತಂ ರಾಮಣ್ಣ ಬಾಲೆ ಇತನ ಹತ್ತಿರ ಇದ್ದ ಹೀರೊ ಹೊಂಡಾ ಮೋಟಾರ ಸೈಕಲ ನಂ ಎಮ್,ಹೆಚ್, 03 ಎಕ್ಸ್, 613 ನೇದ್ದು ಆತನಿಗೆ ಕೇಳಿ ತೆಗೆದುಕೊಂಡು ಅದರ ಮೇಲೆ ಕುಳಿತು ಅಲ್ಲಿಂದ 6.00 ಗಂಟೆಗೆ ಗುಲಬರ್ಗಾಕ್ಕೆ ಹೊರಟು ಗುಲಬರ್ಗಾಕ್ಕೆ ಬಂದು ಲಗ್ನ ಪತ್ರಿಕೆ ಕೊಟ್ಟು ಮತ್ತೆ ಅದೆ ಮೋಟಾರ ಸೈಕಲ ಮೇಲ ಗುಲಬರ್ಗಾದಿಂದ 9.30 ,ಎಮ್,ಕ್ಕೆ ಹೊರಟಿದ್ದು ಮೋಟಾರ ಸೈಕಲನ್ನು ವಿನೋದ ಗುಜ್ಜೆ ಇತನು ಚಲಾಯಿಸುತ್ತಿದ್ದು ತಾನು ಹಿಂದೆ ಕುಳಿತಿದ್ದೆ 10.00 ,ಎಮ್,ಕ್ಕೆ ಮಹಾಗಾಂವ ಕ್ರಾಸ ದಾಟಿ ಹೋಗುತ್ತಿದ್ದಾಗ ವಿನೋದ ಇತನು ಮಹಾಗಾಂವ ಕ್ರಾಸ ಮುಂದೆ ಇದ್ದ ಡೈರಿ ಸೈನ್ಸ ಕಾಲೇಜ ಎದುರುಗಡೆ ಇದ್ದ ಒಂದು ಸಣ್ಣ ಬ್ರಿಡ್ಜ ಹತ್ತಿರ ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಬ್ರಿಡ್ಜ ಪಕ್ಕದಲ್ಲಿದ್ದ ಸೈನ ಬೋರ್ಡಿಗೆ ಜೋರಾಗಿ ಹೊಡೆದು ಅಪಘಾತ ಪಡಿಸಿದನು ಇದರಿಂದ ತನ್ನ ಎಡಗಾಲ ಮೋಳಕಾಲ ಕೆಳಗೆ ಮುರಿದು ಹೋಗಿದ್ದು ಹೊಟ್ಟೆಯ ಮೇಲೆ ತರಚೀದ ಗಾಯಗಳಾಗಿರುತ್ತವೆ ವಿನೋದನಿಗೆ ನೋಡಲಾಗಿ ಆತನ ಎಡಗಾಲು ಕೂಡಾ ಮೊಳಕಾಲ ಕೆಳಗೆ ಮುರದಿದ್ದು ಬಲಗಾಲಿನ ಹಿಂಬಡಿಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಮೂಗಿನಿಂದ ರಕ್ತ ಸೋರಿದ್ದು ಎಡಗಲ್ಲ ಮತ್ತು ಅದರ ಕೆಳಗಡೆ ಉಬ್ಬಿದಂತೆ ಆಗಿರುತ್ತದೆ,ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಂಗಲ್ಯ ಸರ ದೊಚಿಕೊಂಡು ಹೋದ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 31-05-2014  ರಂದು ಸಂಜೆ 7-15 ಗಂಟೆ ಸುಮಾರಿಗೆ ಫಿರ್ಯಾದಿ  ಮತ್ತು ನನ್ನ ಅತ್ತಿಗೆ  ವಿಜಯಲಕ್ಷ್ಮಿ  ಕಮಲಾಪೂರ  ಇಬ್ಬರು  ನಮ್ಮ ಭಾಗ್ಯವಂತಿ ನಗರದ ಮನೆಯಿಂದ ಕಿರಾಣಾ ಖರಿದಿಸಲು  ಮುಖ್ಯ ರಸ್ತೆಗೆ ಇರುವ  ಸದಗೂರು ಸುಪರ ಬಜಾರಕ್ಕೆ ಹೊಗುತ್ತಿರುವಾಗ   ಹಳೇ ಅಪರಾಜಿತಾ ಕಂಪ್ಯೂಟರ  ಹತ್ತಿರ ರಸ್ತೆಯ ಮೇಲೆ  ರಾಂಗ ಸೈಡ ಎದರುಗಡೆಯಿಂದ   ಒಂದು ಮೊಟರ ಸೈಕಲ ಮೇಲೆ  ಇಬ್ಬರು ಸವಾರರು ಬಂದವರೇ ಒಮ್ಮೇಲೆ ನನ್ನ ಕೊರಳಲ್ಲಿ ಕೈ ಹಾಕಿ   3 ವರೆ ತೊಲೆಯ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಂಡು ರಾಮ ಮಂದಿರ ಕಡೆ ಹೊಗಿರುತ್ತಾರೆ.  ಕತ್ತಲಲ್ಲಿ ಆ ಮೊಟರ ಸೈಕಲ ನಂಬರ ಕಾಣಿಸಿಲ್ಲಾ.  ಕಳ್ಳ ಕಳ್ಳಾ ಎಂದು ಚಿರಾಡಿದರು  ಯಾರು ಹತ್ತಿರ ಬರಲಿಲ್ಲ. ಮೊಟರ ಸೈಕಲ ಮೇಲೆ ಇಬ್ಬರು ಸವಾರರು  ಬಂದು ನನ್ನ ಕೊರಳಲ್ಲಿಂದ 3 ವರೆ ತೊಲೆ ಬಂಗಾರದ ಮಂಗಳಸೂತ್ರ  ಅದರ ಅಂದಾಜು ಕಿಮ್ಮತ್ತು  1 ಲಕ್ಷ ರೂಪಾಯಿ ಕಿಮ್ಮತ್ತಿನದನ್ನು  ಸುಲಿಗೆ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.