POLICE BHAVAN KALABURAGI

POLICE BHAVAN KALABURAGI

12 May 2014

Gulbarga District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಸ್ಟೇಷನ ಬಜಾರ ಠಾಣೆ : ಇತ್ತೀಚಿಗೆ ಗುಲಬರ್ಗಾ ನಗರದಲ್ಲಿ ಕೊಲೆ,ದರೋಡೆ,ಸುಲಿಗೆಗಳು ಹೆಚ್ಚಾಗುತ್ತಿರುವದರಿಂದ ನಮ್ಮ ಮೇಲಾಧಿಕಾರಿಯವರು ಗುಲಬರ್ಗಾ ನಗರದಲ್ಲಿ ನಡೆದ ಅಪರಾಧಗಳನ್ನು ತಡೆಗಟ್ಟಲು ಹಾಗು ಆರೋಪಿತರನ್ನು ಪತ್ತೆ ಹಚ್ಚಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರಿಂದ ನಾನು ನಮ್ಮ  ರೌಡಿ ನಿಗ್ರಹದಳದ ಸಿಬ್ಬಂದಿಯವರಾದ ಶಿವಪ್ಪ ಹೆಚ್,ಸಿ,386, ಅಣ್ಣಪ್ಪ ಹೆಚ್.ಸಿ.332, ಶಿವಯೋಗಿ ಹೆಚ್ಸಿ.220, ದೇವಿಂದ್ರಪ್ಪ ಪಿ,ಸಿ 212, ರಾಮುಪವಾರ ಪಿ,ಸಿ 761, ರಫಿಯೋದ್ದಿನ ಪಿ,ಸಿ-11,  ಗಜೇಂದ್ರ ಪಿ.ಸಿ 108, ಪ್ರವೀಣ ಪಿ.ಸಿ 907, ಚನ್ನಬಸಪ್ಪಾ ಎಪಿಸಿ-130 ವಾಹನ ಚಾಲಕ ರವರೊಂದಿಗೆ, ಗುಲಬರ್ಗಾ ನಗರದ ಸ್ಟೇಷನ ಬಜಾರ ಪೊಲೀಸ ಠಾಣಾ ಹದ್ದಿಯಲ್ಲಿ ದಿನಾಂಕ 10-05-2014 ರಂದು ರಾತ್ರಿ 11.00 ಗಂಟೆ ವೇಳೆಯಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಬೆಳಗಿನ ಜಾವ 2-00 ಗಂಟೆಗೆ ಪಿ.ಡಿ.ಎ ಕಾಲೇಜ ಹತ್ತಿರ ಇರುವಾಗ ಬಾತ್ಮಿ ಬಂದಿದ್ದೆನೆಂದರೆ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯಲ್ಲಿ ಚಂದ್ರಶೇಖರ ಕ್ರಿಡಾಂಗಣದಿಂದ ರಾಜಾಪೂರ ಕಡೆಗೆ ಹೋಗುವ ರೋಡಿನ ಪಕ್ಕದಲ್ಲಿರುವ ಖುಲ್ಲಾ ಸ್ಥಳದಲ್ಲಿ ಇರುವ ಗಿಡಗಂಟೆಯಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ ಖಚಿತ ಮಾಹಿತಿ ಸಿಕ್ಕ ಮೇರೆಗೆ ನಾನು ಸ್ಟೇಷನ ಬಜಾರ ಠಾಣೆಯ ಪಿಐ ಬಿ.ಬಿ ಭಜಂತ್ರಿ ಮತ್ತು ಅಪರಾಧ ವಿಭಾಗದ ಪಿಎಸ್ಐ ಸುರೇಶ ಭಾವಿಮನಿ ಅವರ ಸಿಬ್ಬಂದಿ ಬಸವರಾಜ ಪಿಸಿ-612, ಅಶೋಕ ಪಿಸಿ-625, ಶಿವರಾಜ ಪಿಸಿ-277 ಕರೆಯಿಸಿಕೊಂಡು ಬಾತ್ಮಿಯ ಮಾಹಿತಿಯನ್ನು ಪಿ.ಐ ಸ್ಟೇಷನ ಬಜಾರ ಹಾಗೂ ಎಲ್ಲಾ ಸಿಬ್ಬಂದಿ ಜೊತೆ ಚರ್ಚಿಸಿ ಎಲ್ಲರೂ ಸೇರಿ ಸರ್ಕಾರಿ ಶಿಕ್ಷಕರ ತರಭೇತಿ ಕಾಲೇಜು ಹತ್ತಿರ ಹೋಗಿ ನಮ್ಮ ವಾಹನಗಳನ್ನು ಅಲ್ಲೇ ನಿಲ್ಲಿಸಿ ಬಾತ್ಮಿ ಬಂದ ಸ್ಥಳಕ್ಕೆ ಬೆಳಗಿನ ಜಾವ ರಾಜಾಪುರ ಕಡೆಗೆ ಹೋಗುವ ರೋಡಿನ ಜಾಡು ಹಿಡಿದು ಹೋಗಿ ನೋಡಲು ರೋಡಿನ ಎಡ ಪಕ್ಕದಲ್ಲಿರುವ ಗಿಡ ಗಂಟೆಗಳಲ್ಲಿ  ಗುಜು-ಗುಜು ಮಾತನಾಡುವ ಶಬ್ದ ಕೇಳಿಸಿದ್ದು ಆಗ ನಾವೆಲ್ಲರೂ ಬರುವದನ್ನು ಗಮನಿಸಿ ಓಡರೋ ಓಡರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ ಒಟ್ಟು 5 ಜನ ಹಿಡಿದುಕೊಂಡಿದ್ದು, ಹಿಡಿದುಕೊಂಡ 5 ಜನರನ್ನು  ರೋಡಿನ ಮೇಲಿನ ಬದಿಯಲ್ಲಿರುವ ಲೈಟಿನ ಕಂಬದ ಬೆಳಕಿನ ಕಡೆಗೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1..ರಾಹುಲ್@ಪಿಂಟ್ಯಾ ತಂದೆ ವಿಠ್ಠಲರಾವ ಹೋಟಕರ ಸಾ:ಕಡಗಂಚಿ ತಾ:ಅಳಂದ ಜಿ:ಗುಲಬರ್ಗಾ, 2. ಗಿರೀಶ @ ಗಿರಿ ತಂದೆ ಶಿವಾನಂದ ಲೇಖನರ  ಸಾ:ರೇವಣಸಿದ್ದೇಶ್ವರ ಕಾಲೋನಿ ಅಫಜಲಪುರ, 3. ರವಿ ತಂದೆ ಪಾಂಡು ರಾಠೋಡ  ಸಾ: ಹನುಮಾನ ತಾಂಡ ಶಹಾಬಾದ 4. ಜ್ವಾಲೇಂದ್ರನಾಥ ತಂದೆ ರವಿಚಂದ್ರ ಕಾವಲೆ  ಸಾ:ಬಿದ್ದಾಪುರ ಕಾಲೋನಿ ರೈಲ್ವೇ ಗೇಟ ಹತ್ತಿರ ಗುಲಬರ್ಗಾ 5. ಸಾಗರ ತಂದೆ ರಾಜು ರಿಟಲಾ ಸಾ:ಗಾಜಿಪುರ ಮೇತಾರಗಲ್ಲಿ ಗುಲಬರ್ಗಾ ಅಂತ ತಿಳಿಸಿದರು. ಸದರಿಯವರಿಗೆ ಇಲ್ಲಿ ಯಾಕೇ ಕತ್ತಲಲ್ಲಿ ಕುಳಿತ್ತಿದ್ದಿರಿ ಅಂತಾ ವಿಚಾರಿಸಲು ಸದರಿಯವರು ದರೋಡೆ ಹಾಗೂ ಸುಲಿಗೆ ಮಾಡುವ ಸಲುವಾಗಿ ಕುಳಿತ್ತಿದ್ದೆವೆ ಅಂತಾ ತಿಳಿಸಿದ್ದು ಸದರಿಯವರನ್ನು ದಸ್ತಗೀರ ಮಾಡಿಕೊಂಡು ಮಾರಕಾಸ್ತ್ರಗಳು ಮತ್ತು ಕೃತ್ಯಕ್ಕೆ ಬಳಸಲು ತಂದ ಖಾರದ ಪುಡಿ, ಹಗ್ಗ ಹಾಗೂ ಮುಖಕ್ಕೆ ಹಾಕುವ ಕಪ್ಪು ಮುಸುಕು ಬಟ್ಟೆಗಳನ್ನು ಮತ್ತು ಬುಲೇರೊ ವಾಹನ ನಂ.ಕೆಎ-36 ಎಂ-5546 ಗಳನ್ನು  ಔಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವರ ವಿದುದ್ಧ ಶ್ರೀ ಸಿದ್ದೇಶ್ವರ ಪಿ.ಐ ಡಿ.ಎಸ್.ಬಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ :  ದಿನಾಂಕ 11-05-2014 ರಂದು ಹಡಲಗಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂದಿ  ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 04 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಲಾಗಿ 1. ಗುರುಲಿಂಗಪ್ಪ ತಂದೆ ಚನ್ನಬಸವೇಶ್ವರ ಸರಸಂಬಿ 2.ಅಲ್ಲಾಭಕ್ಷ ತಂದೆ ಪಾಚಾಪಟೇಲ ಮುಜಾವರ 3. ಚಂದ್ರಶಾ ತಂದೆ ಅಣ್ಣಪ್ಪ ನೀಲೂರ 4.ಅರುಣ ತಂದೆ ಲಿಂಬಾಜಿ ಮಾಳವೆ ಸಾ : ಎಲ್ಲರು ಹಡಲಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 2900/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಇಪ್ತಿಯಾಜ್ ತಂದೆ ಮಹ್ಮದ ಅಜಾಮ್ ಇವರು ದಿನಾಂಕಃ 10-05-2014 ರಂದು 10:30 ಪಿ.ಎಂ. ಕ್ಕೆ ತಾನು ಮತ್ತು ತನ್ನ ಗೆಳೆಯ ಮಹಿಮೂದ ಶರೀಫ್ ಇಬ್ಬರು ತನ್ನ ಮೋಟಾರ ಸೈಕಲ ನಂ. TP / KA 32 TV 9635 ನೇದ್ದರ ಮೇಲೆ ಜಿ.ಜಿ.ಹೆಚ್ ಮಾರ್ಗವಾಗಿ ಸೇಡಂ ರಿಂಗ್ ರೋಡಿಗೆ 11:00 ಪಿ.ಎಂ. ಕ್ಕೆ ಬಂದು ಉಮರ ಕಾಲೋನಿಗೆ ಹೋಗುತ್ತಿರುವಾಗ ಅದೇ ವೇಳೆಗೆ ಶಹಾಬಾದ ರಿಂಗ್ ರೋಡ್ ಕಡೆಯಿಂದ ಲಾರಿ ನಂ. ಕೆ.ಎ 32 ಎ 8535 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನನ್ನ ಗೆಳೆಯ ಮಹಿಮೂದ ಈತನಿಗೆ ಬಲಗಡೆ ಕೈಗೆ ಗುಪ್ತಗಾಯ ಹಾಗು ಬಲ ಕಿವಿಗೆ ಹಾಗು ಬಲ ಕಪಾಳದ ಮೇಲೆ ತರಚಿದ ಗಾಯಗಳಾಗಿದ್ದು, ನನಗೆ ಎದೆಗೆ ಒಳಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 May 2014

Gulbarga District Reported Crimes

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಧನರಾಜ ತಂದೆ ಅಡವಿರಾವ್‌ ಚಿತಾಪೂರ ಸಾ : ಸ್ವಸ್ತಿಕ್‌ ನಗರ ಸೇಡಂ ರಸ್ತೆ ಗುಲಬರ್ಗಾ ಹಾ. ವ: 383-10-95/ಜಿ ಸಮರ್ಥ ಅಪಾರ್ಟಮೇಂಟ್‌ ಗೊಖಲೆ ನಗರ ರಾಮಂತಪೂರ ಹೈದ್ರಾಬಾದ-500013 ರವರು ಹೈದ್ರಾಬಾದನಲ್ಲಿ ಅಕಾಡೆಮಿ ಫಾರ್‌ ನರ್ಸಿಂಗ್ ಸ್ಟಡೀಸ್‌ ಎನ್‌ ಜಿ ಓ ನಲ್ಲಿ ಪ್ರೋಗ್ರಾಮ್‌ ಮ್ಯಾನೇಜರ ಅಂತಾ ಕೇಲಸಮಾಡುತ್ತಿದ್ದು ನಾನು ಗುಲಬರ್ಗಾ ನಗರದ ಮಹಾಲಕ್ಷ್ಮೀ ಲೇಔಟನಲ್ಲಿ ಇರುವ ನನ್ನ ಕಾಕಾರವರಾದ ದಿ: ಉಪೇಂದ್ರರಾವ ಚಿತಾಪೂರಕರ್‌ ಇವರ ಮಗ ಅಂದರೆ ನನ್ನ ತಮ್ಮ ಹರಿಚರಣ ಚಿತಾಪೂರ್‌ಕರ್‌ ಇತನ ಮದುವೇ ಇದ್ದ ಪ್ರಯುಕ್ತ ನಾನುದಿನಾಂಕ: 07-05-2014 ರಂದು ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 08-05-2014 ರಂದು ನನ್ನ ತಮ್ಮ ಹರಿಚರಣ ಇವರ ಮದುವೆ ಹುಬ್ಬಳ್ಳಿಯಲ್ಲಿ ಇದ್ದರಿಂದ ನಮ್ಮ ಮನೆಯವರೆಲ್ಲರೂ ಒಂದು ಖಾಸಗಿ ಬಸ್ಸು ಮಾಡಿಕೊಂಡು ಹುಬ್ಬಳಿಗೆ ಹೊಗಿ ಮದುವೆ ಮುಗಿಸಿಕೊಂಡು ದಿನಾಂಕ: 09-05-2014 ರಂದು ಬೆಳಗಿನ 4.00 ಗಂಟೆ ಸುಮಾರಿಗೆ  ಗುಲಬರ್ಗಾ ನಗರದ ಮಹಾಲಕ್ಷ್ಮೀ ಲೇಔಟನಲ್ಲಿರುವ ನಮ್ಮ ತಮ್ಮನ ಮನೆಗೆ ವಾಪಸ್ಸು ಬಂದಿದ್ದು. ಮನೆಯಲ್ಲಿ ಚಹಾ ಮಾಡಲು ಹಾಲು ಬೆಕಾಗಿದ್ದರಿಂದ, ನಾನು ಹಾಲು ತರಲು ಲಾಲ್‌ ಗೇರೆ ಕ್ರಾಸ್‌ಗೆ ನಡೆದುಕೊಂಡು ಹೊಗುತ್ತಿರುವಾಗ ಬೆಳಗಿನ 4.30 ಗಂಟೆ ಸುಮಾರಿಗೆ ಲಾಲಗೇರೆ ಕ್ರಾಸ ಮೆಲೆ 4 ಜನ ಅಪರಿಚಿತ ಹುಡುಗರು ಅವರುಗಳು ಅಂದಾಜು 18-22 ವಯಸ್ಸಿನವರಿದ್ದು. ಅವರೆಲ್ಲರೂ ಒಟ್ಟಿಗೆ ಸೇರಿ ನನ್ನ ಸುತ್ತುವರೆದರು. ಅದರಲ್ಲಿ ಎರಡು ಜನ ಹುಡುಗರು ತಮ್ಮಲ್ಲಿದ್ದ ಲಾಂಗ್‌  ಮತ್ತು ಒಬ್ಬ ಹುಡುಗನು ಚಾಕುವನ್ನು ತೋರಿಸಿ, “ಎ ನೋಡು ನಿನ್ನಲ್ಲಿ ಎನು ಇದೆ ಎಲ್ಲಾ ಸುಮ್ಮನೆ ಕೊಡುಅಂತಾ ಬೆದರಿಕೆ ಹಾಕಿದನು. ಎರಡು ಜನ ಹುಡುಗರು ನನ್ನ ಕೈಗಳನ್ನು ಹಿಡಿದರು, ಅದರಲ್ಲಿ ಒಬ್ಬ ಹುಡುಗನು ನನ್ನ ಪ್ಯಾಂಟ್‌ ಮತ್ತು ಶರ್ಟ ಜೇಬಲ್ಲಿ ಕೈಹಾಕಿ ಜೇಬಲ್ಲಿದ್ದ 700/- ರೂಗಳನ್ನು ತೆಗೆದುಕೊಂಡನು, ಇನ್ನೋಬ್ಬ ಹುಡುಗ ನನ್ನ ಕುತ್ತಿಗೆಗೆ ಕೈಹಾಕಿ ನನ್ನ ಕೊರಳಲ್ಲಿದ್ದ ಬಾಕ್ಸ ಟೈಪ್‌ ಮಾಡೆಲ್‌ನ ಅಂದಾಜು 24 ಇಂಚು ಉದ್ದದ 16 ಗ್ರಾಂ ತೂಕದ 48,000/- ರೂ ಬೆಲೆ ಬಾಳುವ ಬಂಗಾರದ ಒಂದು ಲ್ಯಾಕೇಟ್‌ ದೊಚಿಕೊಂಡನು. ನಂತರ ನಾನು ಅವರಿಗೆ ಅಂಜಿ ಸುಮ್ಮನೆ ಮಾತನಾಡದೆ ನಡೆದುಕೊಂಡು ನನ್ನ ತಮ್ಮನ ಮನಗೆ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ.ದೊಡ್ಡಪ್ಪ ತಂದೆ ವೀರಪ್ಪ ದೇಸಾಯಿ ಸಾ:ಗಂವ್ಹಾರ ಮಾರಡಗಿ ತಾ:ಜೇವರ್ಗಿ ಹಾ.ವ.ಹೌಸಿಂಗ್ ಬೋರ್ಡ ಕಾಲೂನಿ ಜೇವರ್ಗಿ ಇವರು ದಿನಾಂಕ:08-05-2014ರಂದು ತಾನು ಮತ್ತು ನನ್ನ ಹೆಂಡತಿ ಕಲಾವತಿಮಗಳಾದ ಸರೋಜಾ ಗಂಡ ಗುಂಡಪ್ಪ ಲಲಗಿ ಕೂಡಿಕೊಂಡು ಉದಗೀರದಲ್ಲಿರುವ ನನ್ನ ಸೊಸೆ ಸವಿತಾಳಿಗೆ ಆಪರೇಷನ ಆಗಿದ್ದರಿಂದ ಮಾತನಾಡಿಸಿಕೊಂಡು ಮರಳಿ ಜೇವರ್ಗಿಗೆ ಹೋಗಲು ಉದಗೀರದಿಂದ ಹುಮನಾಬಾದಕ್ಕೆ ಬಂದು ಹುಮನಾಬಾದದಿಂದ ಬೀದರಗುಲಬರ್ಗಾ ಬಸ್ ನಂ ಕೆಎ:38ಎಫ್:639 ನೇದ್ದರಲ್ಲಿ ಕುಳಿತುಕೊಂಡು 18-30 ಗಂಟೆಗೆ ಹುಮನಾಬಾದದಿಂದ ಹೊರಟು ಹುಮನಾಬಾದ ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218ನೇದ್ದರ ಡೊಂಗರಗಾಂವ ಕ್ರಾಸ್ ಹತ್ತಿರ ಬರುತ್ತಿದ್ದಾಗ ನಮ್ಮ ಬಸ್ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಕಟ್ ಹೊಡೆಯುತ್ತಾ ಚಲಾಯಿಸುತ್ತಾ ಮುಂದೆ. ಮರಗುತ್ತಿ ಕ್ರಾಸ್ ಹತ್ತಿರ  ಇರುವ ಕೆ.ಇ.ಬಿ. ಆಫೀಸ್ ಹತ್ತಿರ  ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆಯಲ್ಲಿ ಯಾವುದೇ ಸಂಚಾರಿ  ಸೂಚನೆಗಳನ್ನು ಪಾಲಿಸದೇ ಮತ್ತು ಇಂಡಿಕೇಟರ್  ಹಾಕದೇ ನಿಲ್ಲಿಸಿದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಆಗ ಬಸ್ಸಿನಲ್ಲಿದ್ದ  ಹಲವಾರು ಪ್ರಯಾಣಿಕರು ಮತ್ತು ನಾವೇಲ್ಲರೂ ಕೆಳಗೆ ಇಳಿದು ನೋಡಲಾಗಿ ನನಗೆ ಮೂಗಿಗೆಬಾಯಿಗೆ ರಕ್ತಗಾಯವಾಗಿತ್ತು ಮತ್ತು ಎರಡೂ ಮೊಳಕಾಲುಗಳಿಗೆ ತರಚಿದ ಗಾಯ ಮತ್ತು ಟೊಂಕಕ್ಕೆ  ಗುಪ್ತಗಾಯವಾಗಿತ್ತು. ನನ್ನ ಹೆಂಡತಿ ಕಲಾವತಿ ಇವಳಿಗೆ ಹಣೆಗೆಮುಖಕ್ಕೆ ಮತ್ತು  ಎರಡೂ ಕಾಲುಗಳಿಗೆ ಗುಪ್ತಗಾಯಗಳಾಗಿದ್ದವು. ಮಗಳಾದ  ಸರಜಾ ಇವಳಿಗೆಎರಡೂ ಮೊಳಕಾಲಿಗೆ ಗುಪ್ತಗಾಯಗಳಾಗಿದ್ದವು. ಅಲ್ಲದೇ ನಮ್ಮ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಇತರರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದವು. ನಂತರ ಲಾರಿ ನಂ.ನೋಡಲಾಗಿ ಎಪಿ-02 ಡಬ್ಲೂ:0794ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸತೀಶ ತಂದೆ ಸೊಪ್ಪಣ್ಣಾಗೌಡ ಮಾಲಿ ಪಾಟೀಲ ರವರು ದಿನಾಂಕ 10-05-2014 ರಂದು ಬೆಳಿಗ್ಗೆ 9-30 ಗಂಟೆಗೆ  ತನ್ನ ಇನೊವಾ ಕಾರ ನಂ ಕೆಎ-32 ಎನ್-2792 ನೇದ್ದರಲ್ಲಿ ಸಂಜಯ ಬಿರಾದಾರ ಮತ್ತು ಸಾಗರ ಪಾಟೀಲ ರವರನ್ನು ಕೂಡಿಸಿಕೊಂಡು ನಾಗನಹಳ್ಳಿಗೆ ಹೋಗಿ ಸಸಿಗಳನ್ನು ನೋಡಿಕೊಂಡು ಬರುವ ಸಲುವಾಗಿ ನಾನು ಕಾರ ಚಲಾಯಿಸಿಕೊಂಡು ಹಳೆ ಜೆವರ್ಗಿ ರೋಡ ಮುಖಾಂತರ ಹೋಗುವಾಗ ಹೌಸಿಂಗ ಬೋರ್ಡ ಕಾಲೋನಿ ಒಳಗಡೆಯಿಂದ ಜೆ.ಸಿ.ಬಿ ನಂ ಕೆಎ-32 ಎಮ್-5725 ರ ಚಾಲಕ ಭಗವಾನ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಡ್ಡವಾಗಿ ಬಂದು ಕಾರಿಗೆ ಡಿಕ್ಕಿ ಪಡಿಸಿ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ.ವಿಶ್ವನಾಥ ತಂದೆ ನಿಂಗಣ್ಣಗೌಡ ಸಾ: ಮಹಾಂತೇ ನಗರ ಬೆಳಗಾವಿ ರವರು ದಿನಾಂಕ: 09-05-2014 ರಂದು ಮುಂಜಾನೆ 6 ಗಂಟೆಗೆ ಬಳ್ಳಾರಿಯಿಂದ ಗುಲಬರ್ಗಾಕ್ಕೆ ಬಂದಿದ್ದು ಹೋಟಲ್ ಹೆರಿಟೇಜ ಇನ್ ನಲ್ಲಿ ಇಳಿದುಕೊಂಡಿದ್ದು  ನನ್ನ ಕೆಲಸ ಮುಗಿಸಿಕೊಂಡು ಇಂದು ದಿನಾಂಕ: 10-05-2014 ರಂದು ಮುಂಜಾನೆ 7 ಕ್ಕೆ ಬೀದರಕ್ಕೆ ಹೋಗಲು ಹೋಟಲದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬೀದರ ಬಸ್ ನಂ; ಕೆಎ-32 ಎಫ್-1676 ನೇದ್ದರಲ್ಲಿ ಕುಳಿತು ನನ್ನ ಲಗೇಜ ಬಸ್ ನ ಒಳಗಡೆ ಇರುವ ಕ್ಯಾರಿಯರನಲ್ಲಿ ನನ್ನ ಲ್ಯಾಪಟಾಪ ಬ್ಯಾಗ ಅದರಲ್ಲಿ 1. Lenova think pad E430 LAPTOP ಅ.ಕಿ. 25,000=00 ರೂ  & 2.ಸೊನಿ ಕ್ಯಾಮರ ಡಿ.ಎಸ್.ಇ ಡಬ್ಲೂ ಎಕ್ಸ್-60 ಅ.ಕಿ. 8000=00 ರೂ 3. ಟಾಟಾ ಫೊಟಾನ್ ಇಂಟರನೇಟ್ ಡೊಂಗಲ್ ನಂ: 9212246171 ಅ.ಕಿ. 00 ಹೀಗೆ ಒಟ್ಟು 33,000=00 ರೂ. ಬೆಲೆಬಾಳುವ ವಸ್ತುಗಳು ಕೂಡಾ ಇಟ್ಟಿದ್ದು ನಂತರ 7-10 ಕ್ಕೆ ನನ್ನ ಬ್ಯಾಗ ನೋಡಲಾಗಿ ಕಾಣಲಿಲ್ಲ ಎಲ್ಲಾಕಡೆ ಹುಡುಕಾಡಿ ಅಲ್ಲಿರುವ ಜನರಿಗೆ ವಿಚಾರಿಸಲಾಗಿ ನನ್ನ ಬ್ಯಾಗ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಬ್ಯಾಗ ಅದರಲ್ಲಿರುವ ಲ್ಯಾಪಟಾಪ ಮತ್ತು ಕ್ಯಾಮರಾ ಕೂಡಾ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ :  ಶ್ರೀ ಕೈಲಾಶ ತಂದೆ ಸುಭಾಷ ರಾಠೋಡ ಸಾ: ಪ್ಲಾಟ ನಮ; 103 ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ: 02-05-2014 ರಂದು ರಾತ್ರಿ ವೇಳೆ ಮನೆಯಲ್ಲಿ ಶಕೆ ಆಗುತ್ತಿದ್ದರಿಂದ ನಾನು ನಮ್ಮ ಮನೆಯ ಛತ್ತಿನ ಮೇಲೆ  ಮಲಗಿದ್ದು,  ನನ್ನ ಮೈಕ್ರೊಮ್ಯಾಕ್ಸ ಕಾನ್ವಸ್‌-2  ಮೊಬೈಲ ಸೇಟ  ಐಎಂಇಐ ನಂ. 911239259474940 ಅದರಲ್ಲಿ ಸಿಮ ನಂ. 9742898233 ನೇದ್ದನ್ನು ಇಟ್ಟು ಮಲಗಿರುವಾಗ ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಛತ್ತಿನ ಮೇಲೆ ಬಂದು  ನನ್ನ ಮೊಬೈಲ ಸೇಟ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ನನ್ನ ಮೈಕ್ರೊಮ್ಯಾಕ್ಸ ಕಾನ್ವಸ-2 ಮೊಬೈಲ ಸೇಟ  ಐಎಂಇಐ ನಂ. 911239259474940  ಅಂದಾಜು ಕಿಮ್ಮತ್ತು  20000/- ರೂಪಾಯಿ ಇರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ.ಪಾರ್ವತಿ @ಪ್ರೀತಿ ಗಂಡ ಮಹಾದೇವ ಭಜಂತ್ರಿ ಸಾ: ಮನೆ ನಂ 322/75 ಲಕ್ಷ್ಮಿನಾರಾಯಣ ನಗರ ಹಳೆ ಜೇವರ್ಗಿ ರೋಡ ಗುಲಬರ್ಗಾ ರವರನ್ನು ದಿನಾಂಕ 25-3-2007  ರಂದು ನಮ್ಮ ತಂದೆ ತಾಯಿಯವರು ಗುಲಬರ್ಗಾ ನಗರದ ಸಂತ್ರಸವಾಡಿಯಲ್ಲಿರುವ ಮಹಾದೇವ ಇತನ್ನೊಂದಿಗೆ  ದೇವೆಶ್ವರ ಕಲ್ಯಾಣ ಮಂಟಪ್ ಮಕ್ತಂಪೂರದಲ್ಲಿ ಲಗ್ನವಾಗಿದದ್ದು  ಸದ್ಯ ನನಗೆ ಈಗ ಎರಡು ಗಂಡು ಒಂದು ಹೆಣ್ಣು ಮಗು ಇರುತ್ತದೆ.ಲಗ್ನವಾಗಿ  ಒಂದು ವರ್ಷದ ನಂತರ  ನನ್ನ ಗಂಡ ಕುಡಿದು ಬಂದು ನನಗೆ ಬೈಯುವದು, ಹೊಡೆಯುವುದು ಮಾಡುತ್ತಾ ಬಂದಿದ್ದು, ನಂತರ ನನ್ನ ಗಂಡ ಮಹಾದೇವ ಮತ್ತು ಅತ್ತೆ ಶಾಂತಾಬಾಯಿ ಇಬ್ಬರೂ ಕೂಡಿ ನಿನಗೆ ಕೆಲಸ ಬರುವುದಿಲ್ಲ ರಂಡಿ ಮುಂಡಿ ಅಂತಾ ಬೈಯುವದು, ಹೊಡೆಯುವುದು ಮಾಡುತ್ತಿದ್ದು, ಈ ವಿಷಯ ನನ್ನ ತಂದೆ ಮತ್ತು ನನ್ನ ಅಣ್ಣನಿಗೆ ತಿಳಿಸಿದಾಗ ಅವರು ಬಂದು ನನ್ನ ಗಂಡನಿಗೆ ಮತ್ತು ನನ್ನ ಅತ್ತೆಗೆ ಈ ರೀತಿ ಮಾಡುವುದು ಸರಿಯಲ್ಲ ,ಸರಿಯಾಗಿಟ್ಟುಕೊಳ್ಳಿ ಅಂತಾ ಬುದ್ದಿವಾದ ಹೇಳಿ ಹೋದರು.ನಂತರ ನನ್ನ ಗಂಡ ಹಾಗೂ ನನ್ನ ಅತ್ತೆ ಕೂಡಿ ನಿಮ್ಮ ತಂದೆ 6 ಲಕ್ಷ ರೂ..ಗೆ ಮನೆ ಒತ್ತೆ ಹಾಕಿದ್ದಾನೆ 2 ಲಕ್ಷ ರೂಪಾಯಿ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ ಮಾಡಿ ಎರಡು ದಿವಸ ಊಟ ಕೊಡಲಿಲ್ಲಾ  ನಾನು ನನ್ನ ತಂದೆತಾಯಿ ಹತ್ತಿರ ಹೋಗಿ ದವಾಖಾನೆ ತೋರಿಸಿಕೊಳ್ಳಬೇಕೆಂದು ತವರುಮನೆಗೆ ಹೊದೆನು. ದಿನಾಂಕ 05-05-2014  ರಂದು ಸಾಯಂಕಾಲ 4-00 ಪಿ.ಎಂಕ್ಕೆ ನನ್ನ ಗಂಡ ಮಹಾದೇವ ಅತ್ತೆ ಶಾಂತಾಬಾಯಿ ಮೈದುನ ಯಲ್ಲಾಲಿಂಗ ಎಲ್ಲರೂ ಕೂಡಿಕೊಂಡು ಗುಲಬರ್ಗಾದ ನನ್ನ ತವರು ಮನೆಗೆ  ಬಂದು ರಂಡಿ ಯಾರಿಗೂ ಹೇಳದೇ ಕೇಳದೆ ಮನೆಬಿಟ್ಟು ಹೇಗೆ ಬಂದಿ ಅಂತಾ ಹೊಡೆ ಬಡೆ ಮಾಡಿದರು ನನ್ನ ಅತ್ತೆ ಮೈದುನ  ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ಕೊಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಶಸಯಾಸ್ಪದ ವ್ಯಕ್ತಿಯ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ (ಕಾ.ಸೂ) ಎಂ.ಬಿ ನಗರ ಪೊಲೀಸ್ ಠಾಣೆ ಗುಲಬರ್ಗಾ, ದಿನಾಂಕ 09-05-2014 ರಂದು ರಾತ್ರಿ ಎಂ.ಬಿ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯದಲ್ಲಿದ್ದಾಗ ಠಾಣೆಯಿಂದ 11:00 ಪಿ.ಎಂ ಕ್ಕೆ ಸಂಗಡ ಪಿ.ಸಿ 1186 ಪ್ರವೀಣ ಕುಮಾರ ರವರನ್ನು ಠಾಣಾ ಜೀಪ ನಂ. ಕೆ.ಎ 32 ಜಿ 278 ರಲ್ಲಿ ಕರೆದುಕೊಂಡು ಏರಿಯಾಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಜಿ.ಡಿ.ಎ ಕಾಲೋನಿ, ಓಂ ನಗರ, ಸೇಡಂ ರಿಂಗ್, ಸಂತ್ರಾಸವಾಡಿ, ಆದರ್ಶ ನಗರ ಮುಖಾಂತರ ಬಸವೇಶ್ವರ ಕಾಲೋನಿಗೆ ಬಂದಾಗ ಬಸವೇಶ್ವರ ಕಾಲೋನಿಯ ಶಿವಮಂದಿರ ಹತ್ತಿರ ದಿನಾಂಕಃ 09-05-2014 ರಂದು ಬೆಳಗ್ಗೆ 04:30 ಎ.ಎಂ. ಸುಮಾರಿಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ನಿಂತಿದ್ದು ನಮ್ಮನ್ನು ನೋಡಿ ತನ್ನ ಮುಖ ಮರೆ ಮಾಚಿಕೊಂಡು ಸಂಶಯ ಬರುವ ರೀತಿಯಲ್ಲಿ ನಿಂತಿದ್ದು ಅಲ್ಲದೇ ನಮ್ಮನ್ನು ನೋಡಿ ಓಡ ತೊಡಗಿದನು. ಸದರಿಯವನ ಮೇಲೆ ಸಂಶಯ ಬಂದು ನಾವು ಬೇನ್ನಟ್ಟಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು, ಸದರಿಯವನು ತನ್ನ ಹೆಸರು ಜಾವೀದ ಶೇಖ್ ತಂದೆ ಯುನೂಸ್ ಶೇಖ್  ಸಾಃ ಸಂತ್ರಾಸವಾಡಿ ಬಡಿ ಮಸೀದಿ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಗೆ ಯಾಕೆ ತನ್ನ ಮುಖ ಮರೆ ಮಾಚಿಕೊಂಡು ಓಡುತ್ತಿದ್ದಿ, ಈ ಸಮಯಕ್ಕೆ ಇಲ್ಲಿ ಯಾಕೆ ಓಡಾಡುತ್ತಿದ್ದಿ, ಅಂತಾ ಕೇಳಿದಕ್ಕೆ ಸದರಿಯವನು ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯ ಕಂಡು ಬಂದಿದ್ದು ನಂತರ ಸದರಿ ಅಪಾಧಿತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 May 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 08-05-2014 ರಂದು ದುತ್ತರಗಾಂವ ಗ್ರಾಮದ ಶ್ರೀ ವೀರೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ, ಸಿಬ್ಬಂದಿ ಮತ್ತು ಪಂಚರೊಂದಿಗೆ ಧುತ್ತರಗಂವ ಗ್ರಾಮಕ್ಕೆ ಹೋಗಿ ಶ್ರೀ ವೀರೇಶ್ವರ ಗುಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ  07 ಜನ ವ್ಯಕ್ತಿಗಳು ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 07 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 1. ಶ್ರೀಶೈಲ ತಂದೆ ನಾಗಣ್ಣ ದೂದನಾಳ 2. ಶಾಂತಮಲ್ಲಪ್ಪ ತಂದೆ ಅಣ್ಣಪ್ಪ ದಿಡ್ಡಿಮನಿ 3. ವೀರಣ್ಣ ತಂದೆ ಭೀಮರಾವ ಖಜೂರಿ 4. ಹಣಮಂತ ತಂದೆ ಸಂಗಣ್ಣ ಬೆಳ್ಳಿ 5. ಸುಬಾಷ ತಂದೆ ತುಕಾರಾಮ ಗೌಡೆ 6. ಶ್ರೀಮಂತ ತಂದೆ ಭೀಮಶಾ ಹುಚ್ಚಗೊಟಿ 7. ಈರಣ್ಣ ತಂದೆ ವಸಂತರಾವ ಅಲ್ಲಾಫೂರ ಸಾ: ಎಲ್ಲರು ಧುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 7630/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕೊಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀಮತಿ ಸುವರ್ಣಾ ಗಂಡ ಬಾಬು@ಮಾದೋಜಿ ಮರಾಠಾ  ಸಾ : ಹಿರೇ ಅಗಸಿ ಹನುಮಾನ ಗಲ್ಲಿ ಚಿಂಚೋಳಿ ತಾ:  ಚಿಂಚೋಳಿ ರವರ ಗಂಡನಾದ ಬಾಬು@ಮಾದೋಜಿ ಇವರು ಮಧ್ಯ ಸೇವನೆ ಮಾಡುವ ಚಟವುಳ್ಳವನಾಗಿದ್ದು  ಯಾವಾಗಲೂ ಕುಡಿದ  ನಶೆಯಲ್ಲಿರುತ್ತಿದ್ದನು. ಹಿಗಿದ್ದು ನಿನ್ನೆ  ದಿನಾಂಕ 06.05.2014 ರ ಸಾಯಾಂಕಾಲ 04.00 ಗಂಟೆ ಸುಮಾರಿಗೆ ನನ್ನ  ಗಂಡನಾದ ಬಾಬು@ಮಾದೋಜಿ ಎಂಬುವವನು ಮಧ್ಯ ಸೇವನೇಮಾಡಿ  ಎಸ್.ಬಿ.ಹೆಚ್ ಬ್ಯಾಂಕ ಎದರುಗಡೆ ಮಲಗಿಕೊಂಡಿರುತ್ತಾನೆ ಎಂಬ ಸುದ್ದಿ ಕೇಳಿ ಕರೆದುಕೊಂಡು ಬರಲು ಹೋಗುತ್ತಿದ್ದಾಗ ನನ್ನ ಗಂಡನು ನನಗೆ ಎದರು ಬಂದಿದ್ದು ನಂತರ ಇಬ್ಬರೂ ಕೂಡಿಕೋಂಡು ನಮ್ಮ ಮನೆಗೆ ಹೊದೇವು. ಮನೆಗೆ ಹೋದ ನಂತರ ನನ್ನ ಗಂಡನಿಗೆ ನಾನು ಊಟಕೊಟ್ಟಿದ್ದು ಊಟಮಾಡಿ ಮಲಗಿಕೊಂಡನು. ನಿನ್ನೆ ದಿನಾಂಕ 06.05.2014 ರಂದು ರಾತ್ರಿ 09.00 ಗಂಟೆ ಸುಮಾರಿಗೆ ಮಲಗಿಕೊಂಡ ನನ್ನ ಗಂಡನು ಎದ್ದು ಊರೋಳಗೆ ಹೋಗಿ ಬರುತ್ತೇನೆ ಅಂತಾ ಅಂದನು ಅದಕ್ಕೆ ನಾನು ಅವರಿಗೆ ಎಲ್ಲಿಗೆ ಹೋಗುತ್ತಿರಿ?  ಅಂತಾ ಕೇಳಿದ್ದಕ್ಕೆ ತಾನು ಎಲ್ಲಿಗೆ ಹೋಗುವುದಾಗಿ ಹೇಳಲಿಲ್ಲ. ಊರೋಳಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದನು. ಮನೆಯಿಂದ ಹೋದವನು ರಾತ್ರಿ 10.00 ಗಂಟೆಯಾದರೂ ಮರಳಿ ಮನೆಗೆ ಬಾರದರಿಂದ ದಾರಿ ನೋಡಿ- ನೋಡಿ ಮಾವ ಮಕ್ಕಳೋಂದಿಗೆ ಮನೆಯಲ್ಲಿ ಮಲಗಿಕೊಂಡೆನು. ದಿನಾಂಕ 07.05.2014 ರಂದು ಬೆಳೆಗ್ಗೆ 06.30 ಗಂಟೆ ಸುಮಾರಿಗೆ ಎದ್ದು  ನಮ್ಮ ಮನೆಯಲ್ಲಿ  ಕಸಗೂಡಿಸುತ್ತಿದ್ದಾಗ ನನ್ನ ಗಂಡನಾದ ಬಾಬು@ಮದೋಜಿ ಮರಾಠಾ ನಮ್ಮೂರ ಚಂರಂಡಿ ನಾಲೆಯ  ಹತ್ತೀರವಿರುವ  ನಮ್ಮೂರಿನ  ಕಿಶೋರ  ತಂದೆ ಗುಂಡಪ್ಪ ನಾಯನೋರ ಎಂಬುವವರ ಹೊಲದಲ್ಲಿ ಬಿದ್ದಿರುತ್ತಾನೆ ಅಂತಾ ಸುದ್ದಿ ಬಂದಿದ್ದರಿಂದ . ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಗಂಡನು ಸತ್ತು ಬಿದ್ದಿದ್ದನು. ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಮುಖ ಮತ್ತು ತಲೆಯ ಮೇಲೆ ಕಲ್ಲನ್ನು ಎತ್ತಿ ಬಿಸಾಕಿ. ಜಜ್ಜಿ ಕೊಲೆ ಮಾಡಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸುರೇಶ ತಂದೆ ಪುರು ರಾಠೋಡ ಸಾ: ಪಾಣೆಗಾಂವ ತಾಂಡಾ ತಾ: ಜಿ: ಗುಲಬರ್ಗಾ ದಿನಾಂಕ: 07-05-2014 ರಂದು ರಾತ್ರಿವೇಳೆಯಲ್ಲಿ ನಮ್ಮ ತಾಂಡಾದ ಧರ್ಮು ರಾಠೋಡ ಇವರ ಮಕ್ಕಳ ಮದುವೆ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ನಮ್ಮ ತಾಂಡಾದ ಕಾಶಿನಾಥ ರಾಠೋಡ, ಶೇಖರ ರಾಠೋಡಕುಮಾರ ರಾಠೋಡ ಎಲ್ಲರೂ ಹೋಗಿದ್ದು ಇರುತ್ತದೆ. ಕಾರ್ಯಕ್ರಮ ನಡೆಯುವಾಗ ಕಾಶಿನಾಥ ರಾಠೋಡ ಮತ್ತು ಶೇಖರ ರಾಠೋಡಕುಮಾರ ರಾಠೋಡ ಇವರ ನಡುವೆ ಯಾವುದೊ ಒಂದು ವಿಷಯಕ್ಕಾಗಿ ಬಾಯಿ ತಕರಾರು ಮಾಡಿಕೊಂಡಿದ್ದು ದಿನಾಂಕ: 08-05-2014 ರಂದು ರಾತ್ರಿ 12:30 ಗಂಟೆಯ ಸುಮಾರಿಗೆ ನಾನು ಮತ್ತು ಕಾಶಿನಾಥ ರಾಠೋಡ ಇಬ್ಬರೂ ಕೂಡಿಕೊಂಡು ರಮಣಾದೇವಿಯ ಗುಡಿಯ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಕುಮಾರ ರಾಠೋಡ ಇತನು ಬಂದು ನನಗೆ ನಿವು ಇಬ್ಬರು ಕೂಡಿಕೊಂಡು ನಮ್ಮ ವಿಷಯ ಮಾತನಾಡುತ್ತಿದ್ದಿರಿ ಅಂತಾ ವಿನಾಕಾರಣ ಜಗಳ ತಗೆಯಬೇಡ ಅಂತಾ ಹೇಳಿದಾಗ ಸೂಳೆ ಮಗನೆ ನನಗೆ ಎದುರು ಮಾತಾಡತಿಯಾ ಅಂತಾ ಬೈಯುತ್ತಿದ್ದಾಗ ಹಿಂದಿನಿಂದ ಶೇಖರ ಇತನು ಅಡಿಗೆಯ ಮಾಡುವ ಕಡಚಿಯಿಂದ ನನ್ನ ತೆಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ. ಕಾಲಿನಿಂದ ಒದಿಯುತ್ತಿದ್ದಾಗ ನನ್ನ ಪಕ್ಕದಲ್ಲಿದ ಕಾಶಿನಾಥ ಮತ್ತು ನೇಮು ರಾಠೋಡ, ಧರ್ಮು  ರಾಠೋಡ, ಬಾಬು ಚವ್ಹಾಣ ಇವರು ಹೋಡೆಯುವದನ್ನು ನೋಡಿ ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಿನಾಥ ತಂದೆ ಅಣ್ಣಾರಾವ್ ಮುಚ್ಚಟ್ಟೆ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ರವರು ಜೇವರ್ಗಿ ತಾಲ್ಲೂಕಿನ ಗುತ್ತಿಗೆ ಕಾಮಗಾರಿ ಮಾಡಿದ್ದು, ಸದರಿ ಕಾಮಾಗಾರಿಯ ಸೆಕ್ಷೆನ್ ಆಫೀಸರ್ ಶ್ರೀ ಶಿವಪ್ರಸಾದ ಅಣ್ಣಾರಾವ್ ಬಿರಾದಾರ ಇವರು ಕರ್ತವ್ಯ ನಿರ್ವಹಿಸತ್ತಿದ್ದರು. ಈ ಕುರಿತು ಶಿವಪ್ರಸಾದ ಬಿರಾದಾರ ಇವರು ನಾನು ನಿನಗೆ ಟೆಂಡರನಲ್ಲಿ ಹಾಗು ತುಂಡು ಗುತ್ತಿಗೆಯಲ್ಲಿ ಸಾಕಷ್ಟು ಸಹಾಯ ಮಾಡಿದ್ದೇನೆ. ಇದಕ್ಕಾಗಿ ನೀನು ನನಗೆ 50 ಲಕ್ಷ ರೂಪಾಯಿ ಕೊಡುವಂತೆ ಸುಮಾರು ಒಂದು ತಿಂಗಳಿಂದ ಫೂನ್ ಮೂಲಕ ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಹಾಗು ದಿನಾಂಕಃ 05-05-2014 ರಂದು 9448354378 ಮೋಬೈಲ್ ದಿಂದ ಅಶೋಕ ಚೆಂಗಟೆ, ಶಿವಪ್ರಭು ಪಾಟಿಲ ಇವರೆ ಕರೆ ಮಾಡಿ 50 ಲಕ್ಷ ರೂಪಾಯಿ ಕೊಡದಿದ್ದರೆ ನಿನನ್ನು ಜೀವ ಸಹಿತ ಹೂಳಿ ಹಾಕುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಹಾಗು ದಿನಾಂಕಃ 06-05-2014 ರಂದು ಮುಂಜಾನೆ 06:00 ಗಂಟೆಗೆ ಶಿವಪ್ರಸಾದ ಅಣ್ಣಾರಾವ್ ಬಿರಾದಾರ, ಮತ್ತು ಶಿವಪ್ರಭು ತಂದೆ ಲಿಂಗರಾಜ ಪಾಟೀಲ್, ಅಶೋಕ ಚೆಂಗಟಾ ಹಾಗು ಸಂಗಡಿಗರು ಸೇರಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮಗನೆ ಬಾರೋ ಹೊರಗೆ 50 ಲಕ್ಷ ಕೊಡುತ್ತಿಯೋ ಇಲ್ಲಾ, ನಿನ್ನ ಜೀವ ಬಿಡತಿಯೋ ಎಂದು ಅವಾಚ್ಯ ಶಬ್ದಗಳಿಂದ ಬೈಯಿದು, ನನ್ನ ಮನೆ ಬಾಗಿ ತೆಗೆಯುವಂತೆ ದಬಾಯಿಸಿದ್ದು, ನಾನು ಮನೆಯೊಳಗಿಂದಲೇ ನೋಡಲಾಗಿ ಶಿವಪ್ರಸಾದ ಬಿರಾದಾರ ಇತನು ಕಬ್ಬಿಣದ ರಾಡಿನಿಂದ ಮನೆ ಬಾಗಿಲಿಗೆ ಹೊಡೆಯುತ್ತಿದ್ದ, ಶಿವಪ್ರಭು ಪಾಟೀಲ ಇತನು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಹೊರಗಡೆ ಬಾರಲೇ ಮಗನೆ ಇವತ್ತು ನಿನಗೆ ಜೀವ ಸಹಿತ ಉಳಿಸುವುದಿಲ್ಲ ಅಂತಾ ಕೊಲೆ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಬಾಳಪ್ಪ ತಂದೆ ನಾಗಪ್ಪ ಚಿಂಚೂರ ಸಾ: ಜವಳಗಾ [ಬಿ] ರವರು ಸುಮಾರು 8-9 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಅಳಿಯನಾದ ಶರಣಬಸಪ್ಪ ಈತನು ಈಗ ಸುಮಾರು 3 ತಿಂಗಳಿಂದಾ ಮಹಾಗಾಂವ ಗ್ರಾಮದ ಯಾವಳೋ ಒಬ್ಬಳು ಹೆಣ್ಣು ಮಗಳೊಂದಿಗೆ ಅನೈತಿಕ ಸಂಬಂದ ಇಟ್ಟುಕೊಂಡಿರುವ ಬಗ್ಗೆ ನನಗೆ ಮತ್ತು ನನ್ನ ಮಗನಾದ ಲವಕುಮಾಋನಿಗೆ ಗೊತ್ತಾದ ಮೇರೆಗೆ ನನ್ನಮಗ ಲವಕುಮಾರನು ನನ್ನ ಅಳಿಯನಾದ ಶರಣಬಸಪ್ಪಾ ಕೇಳಲು ಅವರ ಮನೆಗೆ ಮೊನ್ನೆ ದಿನಾಂಕ 06-05-2014 ರಂದು ಸಂಜೆ 7 ಗಂಟೆಯ ಸುಮಾರಿಗೆ ಹೋಗಿ ನನ್ನ ಅಳಿಯನಿಗೆ ಕೇಳಿದ್ದು ಅದಕ್ಕೆ ನನ್ನ ಅಳಿಯ ಹಾಗೂ ಮಗಳಾದ ಅನೀತಾ ಕೂಡಿ ಅವಳೊಂದಿಗೆ ತಕರಾರು ಮಾಡಿರುವ ಬಗ್ಗೆ ನನಗೆ ನನ್ನ ಮಗ ಮನೆಗೆ ಬಂದು ತಿಳಿಸಿದ ಮೇರೆಗೆ ನಾನು ನನ್ನ ಮಗ ಲವಕುಮಾರ ಹಾಗೂ ನನ್ನ ತಮ್ಮನ ಮಕ್ಕಳಾದ  ಅನೀಲಕುಮಾರ ಹಾಗೂ ಅಂಬರೀಶ ರವರುಗಳು ಮತ್ತು ನನ್ನ ಹೆಂಡತಿಯಾದ ಮಹಾದೇವಿ ಹಾಗೂ ಸೊಸೆಯಾದ ಗೀತಾ ರವರುಗಳು ಕೂಡಿ ನಮ್ಮ ಅಳಿಯನಿಗೆ ವಿಚಾರಿಸಬೇಕೆಂದು  ಅವರ ಮನೆಯ ಕಡೆಗೆ ಬಾಲೆಸಾಬ ದರ್ಗಾದ ಮುಂದಿನಿಂದಾ ಹೋಗುತ್ತಿರುವಾಗ ರಾತ್ರಿ 8ಗಂಟೆಗೆ ಸುಮಾರಿಗೆ 1. ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಬಸಗೊಂಡಿ 2. ರೇವಣಸಿದ್ದಪ್ಪ ತಂದೆ ನಿಂಗಪ್ಪ ಬಸಗೊಂಡಿ 3. ಭೀಮಶ್ಯಾ ತಂದೆ  ರೇವಣಸಿದ್ದಪ್ಪ ಬಸಗೊಂಡಿ 4.ಅಂಬಾರಾಯ ತಂದೆ ರೇವಣಸಿದ್ದಪ್ಪ  ಬಸಗೊಂಡಿ 5. ಅನೀಲ ತಂದೆ ಶಿವರಾಯ ಬಸಗೊಂಡಿ  6. ಸುನೀಲ ತಂದೆ ಶೀವರಾಯ ಬಸಗೊಂಡಿ 7. ಸುಗಲಬಾಯಿ ಗಂಡ ರೇವಣಸಿದ್ದಪ್ಪಾ ಬಸಗೊಂಡಿ 8. ಹೇಮಾವತಿ ಗಂಡ ಶಿವರಾಯ ಬಸಗೊಂಡಿ 9] ನಿಂಗಮ್ಮ ಗಂಡ ಸೋಮಣ್ಣ ಚಿಂಚೂರ ಮತ್ತು 10] ಗೀತಾ ಗಂಡ ಅಂಬಾರಾಯ ಬಸಗೊಂಡಿ ರವರುಗಳು ಕೂಡಿಕೊಂಡು ನಮಗೆ ಕೊಲೆ ಮಾಡುವ ಉದ್ದೇಶದಿಂದ ಅಕ್ರಮಕೊಟ ಕಟ್ಟಿಕೊಂಡು ಬಂದು ಬಾಲೆ ಸಾಭ ದರ್ಗಾದ ಮುಂದೆ ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದಾ ಬೈಯುತ್ತಾ ನಮ್ಮೊಂದಿಗೆ ಜಗಳಾ ತೆಗೆದು ಶರಣಬಸಪ್ಪ ಈತನು ನನಗೆ ಏ ಮಗನೆ ನನ್ನ ವೈಯಕ್ತಿಕ ಜೀವನದ ಬಗ್ಗೆ ನಿನೇಕೆ ತಲೆ ಹಾಕುತ್ತಿದ್ದಿಯಾ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದಾ  ನನ್ನ ತಲೆಯ ಮೇಲೆ ಹೊಡೆಯುತ್ತಿರುವಾಗ ನಾನು ನನ್ನ ಎಡಗೈ ಅಡ್ಡ ತಂದಿದ್ದರಿಂದಾ ಎಟು ನನ್ನ ಎಡಗೈ ಮುಂಗೈಗೆ ಬಿದ್ದಿದ್ದರಿಂದಾ ರಕ್ತಗಾಯವಾಗಿರುತ್ತದೆ. ಆಗ ನನ್ನ ತಮ್ಮನ ಮಗನಾದ ಅನೀಲಕುಮಾರನು ಬಿಡಿಸಲು ಬಂದಾಗ ಶರಣಬಸಪ್ಪನು ಅದೆ. ಕಬ್ಬಿಣದ ರಾಡಿನಿಂದಾ ಅನೀಲನ ತಲೆಯ ಮೇಲೆ ಹೊಡೆದು ಗಾಐಪಡಿಸಿರುತ್ತಾನೆ. ಅಂಬರಾಯ ಈತನು ಹಲ್ಲಿನಿಂದಾ ಅಂಬರೀಶನ ಬಲಗೈ ಬೆರಳುಗಳಿಗೆ ಕಚ್ಚಿರುತ್ತಾನೆ. ರೇವಣಸಿದ್ದಪ್ಪಾ ಮತ್ತು ಭೀಮಶ್ಯಾ ಇವರುಗಳು ಲವಕುಮಾರನಿಗೆ  ನೆಲಕ್ಕೆ ಹಾಕಿ ಕಾಲಿನಿಂದಾ  ಅವನ ಬೆನ್ನ ಮೇಲೆ ಹೊಟ್ಟೆ ಮೇಲೆ ಒದ್ದಿರುತ್ತಾರೆ. ಅನೀಲ & ಸುನೀಲ ಇವರುಗಳು ನನಗೆ ನೆಲಕ್ಕೆ ಕೆಡವಿ  ಕಾಲಿನಿಂದ  ನನ್ನ ಎಡಗಾಲ ಮೊಳಕಾಲ ಮೇಲೆ ತೊಡೆಯ ಮೇಲೆ ಒದ್ದಿರುತ್ತಾರೆ. ಸುಗಲಾಬಾಯಿ ಮತ್ತು ಹೇಮವತಿ ಇವರುಗಳು ಕೈಯಿಂದಾ ನನ್ನ ಹೆಂಡತಿಗೆ ಹೊಡೆದು ಒಳ ಪಟ್ಟಮಾಡಿರುತ್ತಾರೆ. ಅಮಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆನಂದ ತಂದೆ ಅಪ್ಪರಾವ ಇವರು ದಿನಾಂಕ: 08-05-2014 ರಂದು ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಮೋ/ಸೈಕಲ್ ನಂಕೆಎ 32 ಯು 1014 ನೆದ್ದರ ಮೇಲೆ ಹಿಂದೆ ಶರಣು ಈತನಿಗೆ ಕೂಡಿಸಿಕೊಂಡು ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಕಡೆಗೆ ಹೋಗುವಾಗ ಎನ್.ಸಿ.ಸಿ. ಆಫೀಸ್ ಎದುರಿನ ರೋಡ ಮೇಲೆ ಎದುರಿನಿಂದ ಮೋ/ಸೈಕಲ್ ನಂಕೆಎ 32 ಕ್ಯೂ 6563 ಸಿ.ಟಿ. 100 ರ ಸವಾರ ಅರುಣಕುಮಾರ ಈತನು ತನ್ನ ಮೋ/ಸೈಕಲ್ ನ್ನು ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಮತ್ತು ಶರಣು ಈತನಿಗೆ ಸಾದಾಗಾಯಗೊಳಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದಪ್ಪ ತಂದೆ ಶರಣಪ್ಪಾ ಹೂಗಾರ ದಿನಾಂಕ 07-05-2014 ರಂದು ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರಪತಿ ಸರ್ಕಲ ಹತ್ತಿರವಿರುವ ಟೀ ಪಾಯಿಂಟಗೆ  ಫಿರ್ಯಾದಿಯು ನಡೆದುಕೊಂಡು ಹೋಗಿ ಚಹಾ ಕುಡಿದು ವಾಪಸ್ಸ ಪನಿರ್ಚರ ಅಂಗಡಿಗೆ ನಡೆದುಕೊಂಡು ಹೋಗುವಾಗ ಆರ್.ಪಿ ಸರ್ಕಲ ಕಡೆಯಿಂದ  ಕಾರ ನಂಬರ ಕೆಎ-32 ಎಮ್-9936 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಿಜಯ ಮೋಹನ ಆಸ್ಪತ್ರೆಯ ಎದುರಿನ ರೋಡ ಮೇಲೆ ಫಿರ್ಯಾದಿಯ ಬಲಗಾಲಿನ ಮೇಲೆ ಕಾರ ಚಲಾಯಿಸಿಕೊಂಡು ಹೋಗಿದ್ದರಿಂದ ಬಲಗಾಲಿನ ಹಿಮ್ಮಡಿಯ ರಿಸ್ಟ ಹತ್ತಿರ ಭಾರಿಪೆಟ್ಟು ಮತ್ತು ತರಚಿದ ರಕ್ತಗಾಯ ಪಡಿಸಿ  ಕಾರ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                                                         
ಮಾಹಾಗಾಂವ ಠಾಣೆ : ಶ್ರೀ ರಾಜಕುಮಾರ ತಂದೆ ಭೀಮರಾವ ಸಾ : ಕುರಿಕೋಟ ಇವರು ದಿನಾಂಕ 08-05-2014 ರಂದು ರಾತ್ರಿ 12 ಗಂಟೆ ಸುಮಾರಿಗೆ ಬಸ್ಸು ಕಾಯುತ್ತಾ ನಿಂತಾಗ ಆಳಂದ ಹೈದ್ರಾಬಾದ ಬಸ್ಸು  ಕೆಎ 32 ಎಫ 1921  ಬರಲು ಅದರಲ್ಲಿ ಏರಿ ಕುಳಿತೆನು. ನನ್ನಂತೆ ಬಸ್ಸಿನಲ್ಲಿ ಕೆಲವು ಜನ ಗಂಡು ಹೆಣ್ಣು ಪ್ರಯಾಣಿಕರು ಕುಳಿತಿದಿದ್ದರು. ನಾವು ಕುಳಿತ ಹೊರಟ ಬಸ್ಸು ಚಾಲಕ ಹೆಸರು ಕೇಳಿ ಗೊತ್ತಾದ  ಮಂಜುನಾಥ ತಂದೆ ಮಾರುತಿ ನಾಟೀಕರ ಆಳಂದ ಡಿಪೋ ಸಾ: ಸರಸಂಬಾ ಇತನು ಬಸ್ಸು ನಡೆಸುತ್ತಾ ರಾತ್ರಿ 12-45 ಗಂಟೆ ಸುಮಾರಿಗೆ ನಾವದಗಿ (ಬಿ) ಗ್ರಾಮದ ಹತ್ತಿರ ಇರುವ  ಸಣ್ಣ ಬ್ರೀಡ್ಜ ಹತ್ತಿರ ಹೊರಟಾಗ, ಆಗ ಗುಲಬರ್ಗಾ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದವನೇ  ನಮ್ಮ ಬಸ್ಸಿನ  ಬಲಭಾಗಕ್ಕೆ ಡಿಕ್ಕಿ ಹೊಡೆದು ಬರಚುತ್ತಾ ಹೋಗಿ  ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿದೆನು.  ಇದರಿಂದ ನನ್ನ ಕಾಲಿಗೆ ಒಳಪೆಟ್ಟಾಗಿರುತ್ತವೆ  ಬಸ್ಸು ಚಾಲಕನು ಸ್ಥಳದಲ್ಲಿ ಬಸ್ಸು ನಿಲ್ಲಿಸಿದೆನು. ಮತ್ತು ಆಗ ಬಸ್ಸಿನಿಂದ ಬಸ್ಸು ಚಾಲಕ ಮಂಜುನಾಥ ಮತ್ತು ಒಳಗಿದ್ದ ನಾನು ಮತ್ತು  ಪ್ಯಾಂಸೀಜರ ಎಲ್ಲಾ ಜನರು ಕೆಳೆಗೆ ಇಳಿದೇವು.  ಅಪಘಾತ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಎಂಹೆಚ 10 ಝಡ 277 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಥಾಬಾದ ಠಾಣೆ : ಶ್ರೀ ಶಂಕರ  ತಂದೆ ಗುಂಡಪ್ಪಾ ಗಣಜಖೇಢ ಸಾಃ ಗುಂಜ ಬಬಲಾದ ತಾಃ ಆಳಂದ ಜಿಃ ಗುಲಬರ್ಗಾ  ರವರು  ಗುಲಬರ್ಗಾ ತಲೂಕಿನ ಕಲ್ಲಹಂಗರಗ  ಗ್ರಮದಲ್ಲಿ ನಮ್ಮ ತಾಯಿಯ ತಂಗಿ ಮಲ್ಲಮ್ಮ ಅಂತಾ ನಮ್ಮ ಚಿಕ್ಕಮ್ಮ ಇರುತ್ತಾಳೆ. ಅವರ ಮಗನಾದ ಮಲ್ಲಿಕಾರ್ಜುನ ಇವನು ಗುಲಬರ್ಗಾದ ಅಕ್ವಾಗಾರ್ಡ ಮತ್ತು ಅಕ್ಚಾಪ್ರೇಸ ನೀರಿನ ಫಿಲ್ಟರ ಕಂಪನಿಯಲ್ಲಿ ಸರ್ವಿಸ ಗಾರ್ಡ ಅಂತಾ ಕೆಲಸ ಮಾಡುತ್ತಾನೆ ಅವನು ದಿನಾಲೂ ಕಲ್ಲಹಂಗರಗಾ ಗ್ರಾಮದಿಂದ ಗುಲಬರ್ಗಾಕ್ಕೆ ತನ್ನ ಮೋಟಾರ ಸೈಕಲ ನಂ ಕೆಎ-32 ಇಸಿ-8049 ನೇದ್ದರ ಮೇಲೆ ಹೋಗಿ ಬಂದು ಮಾಡುತ್ತಿರುತ್ತಾನೆ. ಅವರ ಕಂಪನಿಯವರು ಆತನಿಗೆ ಎಲ್ಲಿಗೆ ಹೋಗಿ ವಟರ್ ಫಿಲ್ಟಟ ರಿಪೇರಿ ಮಾಡಿ ಬರಲು ತಿಳಿಸುತ್ತಾರೋ ಅದರಂತೆ ಆತನು ತನ್ನ ಮೋಟಾರ ಸೈಕಲ ಮೇಲೆ ಹೋಗಿ ಕೆಲಸ ಮಾಡಿಬರುತ್ತಿದ್ದನು. ದಿನಾಂಕ  06-05-2014 ರಂದು  ಮುಂಜಾನೆ ನನ್ನ ಕಾಸಗಿ ಕೆಲಸ ನಿಮಿತ್ಯ ಶಹಾಪೂರಕ್ಕೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ತನ್ನ  ಮೋಟಾರ ಸೈಕಲ ಮೇಲೆ ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗಜೇವರ್ಗಿಯಲ್ಲಿ ನನ್ನ ಚಿಕ್ಕಮ್ಮನ ಮಗನದ ಮಲ್ಲಿಕಾರ್ಜುನ ಹೀರಾಪೂರಸಿ ಈತನು ಜೇವರ್ಗಿ ಯಲ್ಲಿ ಬೇಟ್ಟಿ ಆಗಿ ತನ್ನ ಕೆಲಸ ನಿಮಿತ್ಯ ಬಂದಿದ್ದಾಗ ನನಗೆ ತಿಳಿಸಿದನು. ನಂತರ  ನಾವಿಬ್ಬರೂ ನಮ್ಮ ನಮ್ಮ ಮೋಟಾರ ಸೈಕಲಗಳ  ಮೇಲೆ ಗುಲಬರ್ಗಾಕ್ಕೆ ಬರುತ್ತಿರುವಾಗ  ನನ್ನ ಮುಂದೆ ಸ್ವಲ್ಪ ದೂರದಲ್ಲಿ ಸದರಿ ಮಲ್ಲಿಕಾರ್ಜುನ ಮೋಟಾರ ಸೈಕಲ ಮೇಲೆ  ಹೋಗುತ್ತಿದ್ದನು ನಾನು ಅವನ ಹಿಂದೆ ಬರುತ್ತಿದ್ದೆ, ಹಸನಾಪೂರ ಕ್ರಾಸ ಹತ್ತಿರ ರಾತ್ರಿ 11.00 ಗಂಟೆಯ  ಸುಮರಿಗೆ ಬರುತ್ತಿರುವಾಗ ಹಸನಾಪೂರ ಕ್ರಾಸ ಹತ್ತಿರ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು  ರೋಡಿನ ಮೇಲೆ ಯಾವುದೇ ಮುನ್ಸೂಚನೆ ಇಲ್ಲದೇ ಇಂಡಿಕೇಟರ್ ಸಿಂಗ್ನಲ್ ಇಲ್ಲದೇ ಕತ್ತಲಲ್ಲಿ ನಿಲ್ಲಿಸಿದ್ದರಿಂದ ಮಲ್ಲಿಕಾರ್ಜನ ಇತನು ಸದರಿ ಲಾರಿಗೆ ಡಿಕ್ಕಿ ಪಡಿಸಿದ್ದರಿಂದ ನಾನು ಹೋಗಿ ನೋಡಲಾಗಿ ಸದರಿ ಮಲ್ಲಿಕಾರ್ಜುನ ಇತನಿಗೆ ಎಡಗಾಲಿನ ಹತ್ತಿರ ಭಾರಿ ರಕ್ತಗಾಯತಲೆಗೆ ಎಡಕಿವಿಯ ಹಿಂದೆ ಭಾರಿ ರಕ್ತಗಾಯವಾಗಿ ರಕ್ತ ಬರುತ್ತಿತ್ತು. ಆಗ ನಾನು ಸದರಿ ನಿಂತ ಲಾರಿಯ ನಂಬರ ನೋಡಲಾಗಿ ಲಾರಿ ನಂ. ಎಂ.ಹೆಚ್. 04 ಇ.ಎಲ್ 557 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪರಿಚಿ ವ್ಯಕ್ತಿಯ ಶವ ದೊರೆತ ಪ್ರಕರಣ :
ರಟಕಲ ಠಾಣೆ : ಶ್ರೀ ಸೈದಪ್ಪ ತಂದೆ ಸಾಯಬಣ್ಣ ಯಾದವ ಸಾ||ಹುಲಸಗೂಡ ಇವರು ದಿನಾಂಕ 08-05-2014 ರಂದು ಬೆಳಗ್ಗೆ 06.00 ಗಂಟೆ ಸುಮಾರಿಗೆ ಮನೆಯಿಂದ ಖಾಸಗಿ ಕೆಲಸದ ನಿಮಿತ್ಯ ಗ್ರಾಮದಲ್ಲಿ ಹೋದಾಗ ನಮ್ಮ ಗ್ರಾಮದ ಸಿಮಾಂತರ ಗುಲಬರ್ಗಾ ಚಿಂಚೋಳಿ ರಸ್ತೆಯ ಪಕ್ಕದಲ್ಲಿರುವ ಜಾಹಿದಾ ಜಿವಣಗಿ ಇವರ ಹೊಲದ ಹಳ್ಳದ ದಂಡೆಗೆ ಯಾವುದೊ ಒಂದು ಶವ ಬಿದ್ದಿರುತ್ತದೆ ಅಂತ ಜನರು ಅಂದಾಡುವುದರಿಂದ ನನಗೆ ಗೊತ್ತಾಗಿ ನಾನು ಮತ್ತು ನಮ್ಮೂರ ಸಂತೋಷಕುಮಾರ ತಂದೆ ಅರ್ಜುನ ನಾಯಕೋಡಿ ಕೂಡಿ ಸದರಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಅಲ್ಲಿ ನಮ್ಮಂತೆ ಇತರೆ ಕೆಲ ಜನರು ದೂರದಿಂದಲೆ ಶವವನ್ನು ನೋಡುತ್ತಿದ್ದರು. ನಾವಿಬ್ಬರು ಸಹ ಸ್ವಲ್ಪ ಮುಂದೆ ಹೋಗಿ ನೋಡಲಾಗಿ ಸದರಿ ಶವ ಅಂದಾಜು  35 ರಿಂದ 40 ವರ್ಷದ ಗಂಡಸಿನ ಶವವಾಗಿದ್ದು ಬೊರಲಾಗಿ ಬಿದ್ದಿದ್ದು ಚರ್ಮ ಕೊಳೆತಿದ್ದು ಮೈಮೇಲೆ ಒಂದು ತಿಳಿ ನೀಲಿ ಬಣ್ಣದ ಪ್ಯಾಂಟು ಒಂದು ಬಿಳಿ ಬಣ್ಣದ ಚಕ್ಸ್ ಶರ್ಟಗಳಿದ್ದು ತಲೆಯ ಮೇಲಿನ ಕೂದಲುಗಳೆಲ್ಲ ಉದರಿ ತಲೆ ಬೋಳಾಗಿದ್ದು ಸದರಿ ಶವ ಸ್ಥಳದಲ್ಲಿ ಬಿದ್ದು ಸುಮಾರು ಒಂದು ವಾರ ಗತಿಸಿರಬಹುದು ಆದ್ದರಿಂದ ಶವ ಪೂರ್ತಿ ಕೊಳೆತು ಗುರುತು ಸಿಗದಂತಾಗಿರುತ್ತದೆ. ಸದರಿಯವನ ಸಾವಿನ ಬಗ್ಗೆ ಬಲವಾದ ಸಂಶಯವಿರುತ್ತದೆ.ಅಲ್ಲಿ ನೆರೆದಿದ್ದ ಜನರನ್ನು ವಿಚಾರಿಸಲಾಗಿ ಮೃತನಿಗೆ ಯಾರೊಬ್ಬರು ಗುರುತಿಸಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.