POLICE BHAVAN KALABURAGI

POLICE BHAVAN KALABURAGI

06 April 2014

Gulbarga District Reported Crimes

ಆಕ್ರಮವಾಗಿ ಸ್ಪೋಟಕ ವಸ್ತಗಳನ್ನು ಸಾಗಿಸುತ್ತಿದ್ದವರ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ:05/04/2014 ರಂದು 4-00 ಪಿಎಮ ಸುಮಾರಿಗೆ ವಿಶ್ವವಿದ್ಯಾಲಯ ಪೊಲೀಸ ಠಾಣಾ ವ್ಯಾಪ್ತಿಯ ಗುಲಬರ್ಗಾ-ಸೇಡಂ ರೋಡಿನ ಸಣ್ಣೂರ ಕ್ರಾಸ ಬಳಿ ಬ್ಲಾಸ್ಟಿಂಗ ಮಾಡಲು ಸ್ಪೋಟಕ ವಷ್ತುಗಳನ್ನು ವಾಹನಗಳಲ್ಲಿ ಸಾಗಣಿಕೆ ಮಾಡುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ಬಾಬು ಎ.ಎಸ್.ಪಿ. ಗ್ರಾಮಾಂತರ ವಿಭಾಗ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೇಡಂ ರೋಡ ಮುಖಾಂತರ ಸಣ್ಣೂರ ಕ್ರಾಸ ಹತ್ತಿರ ಬಂದು ನಿಂತೆವು. ಅಂದಾಜು 5-20 ಪಿಎಮ ಆದಾಗ ಗುಲಬರ್ಗಾ ಕಡೆಯಿಂದ ಒಂದು 407 ವಾಹನ ನಂ. KA-32-A-8809 ಮತ್ತು ಅದರ ಹಿಂದೆ ಒಂದು ಜೀಪ ನಂ. KA-32-M-3279 ನೇದ್ದವುಗಳನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ನಿಲ್ಲಿಸಿ ವಾಹನಗಳಲ್ಲಿ ಇದ್ದು ಸ್ಪೋಟಕ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಮತ್ತು ಸದರಿ ಸರಬರಾಜು ವಾಹನ ಚಲಾಯಿಸಿಕೊಂಡು ಹೋಗುವ ಚಾಲಕ 1) ರಾಧೇಶಾಮ ತಂದೆ ಮನೋಹರಲಾಲ ಧಾರೋ  ಸಾ|| ಮೇಲ್ಯಾಸ ತಾ|| ಮಂಡಲ್, ಜಿ|| ಬಿಲವಾಡ ರಾಜ್ಯಸ್ಥಾನ ಹಾ||ವ|| ತೇಜು ಚವ್ಹಾಣ ಕಡಗಂಚಿ ರವರ ಮನೆಯಲ್ಲಿ ಬಾಡಿಗೆ, 2) ಸೀತಾರಾಮ ತಂದೆ ಲಾದುಲಾಲ  ಸಾ|| ಮೇಲ್ಯಾಸ್ ತಾ|| ಮಂಡಲ್, ಜಿ|| ಬಿಲವಾಡ ರಾಜ್ಯಸ್ಥಾನ ಹಾ||ವ|| ಸುಲ್ತಾನಪೂರ ಕಾಗಿ ದಾಲ್ಮಿಲದಲ್ಲಿ ಬಾಡಿಗೆ ಮತ್ತು ಸುಪರವೈಜರ್ ಕೆಲಸ ಮಾಡುವ 3) ಗುರುಲಿಂಗಪ್ಪ ತಂದೆ ವಿಜಯಕುಮಾರ ರಾಂಪೂರೆ,  ಸಾ|| ರೇವಣಸಿದ್ದೇಶ್ವರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ವಾಹನ ಮತ್ತು ಮಾಲು ಒಟ್ಟು ಅ||ಕಿ|| 4,64,720/- ರೂ. ಬೆಲೆಬಾಳುವ ಮುದ್ದೆಮಾಲ ಜೋತೆಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಗಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 05-04-2014 ರಂದು 04:00 ಪಿ.ಎಂ ಕ್ಕೆ ಖಚಿತವಾದ ಬಾತ್ಮಿ  ದೊರೆತ್ತಿದ್ದೆ ನೆಂದೆರೆ, ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ  ಬರುವ ವಿರೇಂದ್ರ ಪಾಟೀಲ ಬಡಾವಣೆಯ ಜಿ.ಡಿ.ಎ ಸಾರ್ವಜನಿಕರ ಗಾರ್ಡನದಲ್ಲಿ 03 ಜನರು ದುಂಡಾಗಿ ಕುಳಿತು ಕೆಲವು ಜನರು ಹಣಕ್ಕೆ ಪಣ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದವರ ಮೇಲೆ ಸಿಬ್ಬಂದಿಯವರೊಂದಿಗೆ 04:45 ಪಿ.ಎಂ. ಕ್ಕೆ ದಾಳಿ ಮಾಡಿ 03 ಜನರನ್ನು ಹಿಡಿದು 1. ವಸೀಮ ತಂದೆ ಹಮೀದ ಪಟೇಲ ಸಾ :ಮಹೀಬೂಬ ನಗರ ಗುಲಬರ್ಗಾ 2. ಜಾನಿಮಿಯಾ ತಂದೆ ಗೌಸ ಮಿಯಾ ಪಟೇಲ 3. ಶಾಕೀರ ತಂದೆ ದಾವೂದ ಬಾಗ ಸಾ : ಇಬ್ಬರು  ಅಜಾದಪೂರ ರೋಡ ಗುಲಬರ್ಗಾ ರವರಿಂದ ಹಾಗು ಸ್ಥಳದಲ್ಲಿ ಹೀಗೆ ಒಟ್ಟು 5,520/- ರೂ. ಹಾಗು 52 ಇಸ್ಪೇಟ್ ಎಲೆಗಳುನ್ನು  ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಪ್ಪಾ ತಂದೆ ಅಯ್ಯಪ್ಪಾ ರವರು  ದಿನಾಂಕ 27-03-2014 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ  ತನ್ನ ಮನೆಯಿಂದ ಏಕಿ ಮಾಡುವ ಸಲುವಾಗಿ ಅಪ್ಪನ ಮೈದಾನಕ್ಕೆ ನಡೆದುಕೊಂಡು ಹೋಗುವಾಗ ಮೈಹಿಬಾಬ ಮಜೀದ ಎದುರು ರೋಡ ಮೇಲೆ ಗೋವಾ ಹೋಟೆಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಡಬ್ಲೂ-0801 ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಚಂದ್ರಕಾಂತ ತಂದೆ ತಿಪ್ಪಣ್ಣ ನಾಯಕ ಸಾ : ವಿದ್ಯಾ ನಗರ ಗುಲಬರ್ಗಾ ಇವರು ದಿನಾಂಕ : 27-03-2014  ರಂದು ರಾತ್ರಿ 08-30 ಗಂಟೆಗೆ ತನ್ನ ಹೀರೋ ಹೊಂಡಾ ಸಿಡಿ ಡಿಲೇಕ್ಸ್ ಮೋಟಾರ ಸೈಕಲ್ ನಂ ಕೆಎ - 32 - ಎಸ್ - 2185 ನೇದ್ದನ್ನು ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ಗುಡಿಯ ಅವರಣದಲ್ಲಿ ನಿಲ್ಲಿಸಿ ನಾನು ದರ್ಶನ ಕುರಿತು ಹೋಗಿ ದರ್ಶನ ಮಾಡಿ ಮರಳಿ ರಾತ್ರಿ 09-30 ಗಂಟೆ ಸುಮಾರಿಗೆ ನನ್ನ ವಾಹನ ಹತ್ತಿರ ಬರಲು ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ನನ್ನ ಮೋಟಾರ ಸೈಕಲ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ  ಕಾರಣ ನನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ - 32 - ಎಸ್ - 2185 ಅ.ಕಿ 15,000=00 ರೂ. ಬೆಲೆ ಬಾಳುವುದನ್ನು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 April 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 04-04-2014 ಶ್ರೀ ಹಣಮಂತರಾಯ ತಂದೆ ಮಹಾದೇವಪ್ಪಾ ಪೂಜಾರಿ  ಸಾ; ಭೀಮಳ್ಳಿ ತಾ;ಜಿ;ಗುಲಬರ್ಗಾ ಇವರು ಆಳಂದ ಗುಲಬರ್ಗಾ ರೋಡಿನ ಸಂತೋಷ ದಾಬ ದಾಟಿ  ರೈಲ್ವೆ ಬ್ರೀಜ  ಇನ್ನೂ ಸ್ವಲ್ಪ ದೂರ ಇರುವಾಗ ಪ್ರಭುಲಿಂಗ ಟೆಂಗಿನ ಇವರ ಹೊಲದ ಹತ್ತಿರ ಒಬ್ಬ ವ್ಯಕ್ತಿಯ ಮೃತ ದೆಹವು ರೋಡಿನ ಉತ್ತರದ ಬದಿಗೆ  ಬಿದ್ದಿದ್ದು ಆಗ ನಾನು ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಅಪರಿಚಿನಾಗಿದ್ದು  ಆತನ ವಯಸ್ಸು ಅಂದಾಜು 45-50 ವರ್ಷದವನಿದ್ದು, ಆತನ ವೇಷಭೂಷಣ ನೋಡಿದಾಗ  ಅವನು ಭೀಕ್ಷುಕನಂತೆ ಕಾಣುತಿದ್ದು  ಅವನ ತಲೆ ಪೂರ್ತಿ ಒಡೆದಿದ್ದು ,ಮುಖ ಪೂರ್ತಿ ಜಜ್ಜಿ ಹೋಗಿದ್ದು , ಚಹರೆ ಸರಿಯಾಗಿ ಗುರ್ತಿಸಲು ಆಗುತ್ತಿಲ್ಲಾ , ಹೊಟ್ಟೆಯಲ್ಲಿನ ಕರಳುಗಳು ಹೊರ ಬಂದಿದ್ದು  , ಎರಡು ಕೈ ಗಳು ಮತ್ತು ಕಾಲುಗಳು ಪೂರ್ತಿ  ಮುರಿದು ಹೋಗಿದ್ದು ಇರುತ್ತದೆ. ದಿನಾಂಕ.4-4-2014 ರಂದು ಮದ್ಯ ರಾತ್ರಿ 12-00 ಗಂಟೆಯಿಂದ ಬೆಳಗ್ಗಿನ ಜಾವ 8-00ಗಂಟೆಯ ಮದ್ಯದ  ಅವಧಿಯಲ್ಲಿಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಸದರಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದು  ಅಫಘಾತ ಪಡಿಸಿ ಅವನ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ  ಸದರಿ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅನುಮಾನಸ್ಪದ ವ್ಯಕ್ತಿಯ ಬಂಧನ :
ಎಮ್. ಬಿ. ನಗರ ಠಾಣೆ : ದಿನಾಂಕಃ 04-04-2014 ರಂದು ಬೆಳಗ್ಗೆ 04:15 ಎ.ಎಂ. ಸುಮಾರಿಗೆ ಒಬ್ಬ ವ್ಯಕ್ತಿ ನಿಂತಿದ್ದು ನಮ್ಮನ್ನು ನೋಡಿ ತನ್ನ ಮುಖ ಮರೆ ಮಾಚಿಕೊಂಡು ಸಂಶಯ ಬರುವ ರೀತಿಯಲ್ಲಿ ನಿಂತಿದ್ದು ಅಲ್ಲದೇ ಗುಬ್ಬಿ ಕಾಲೋನಿ ಕಡೆಗೆ ಓಡ ತೊಡಗಿದನು. ಸದರಿಯವನ ಮೇಲೆ ಸಂಶಯ ಬಂದು ನಾವು ಬೇನ್ನಟ್ಟಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು, ಸದರಿಯವನು ತನ್ನ ಹೆಸರು ಹಾಸೇನ ತಂದೆ ಖಾಜಾಮಿಯಾಂ ಮಕಾನ್ದಾರ ವಯಃ 26 ವರ್ಷ ಉಃ ಆಟೋ ಚಾಲಕ ಜಾತಿಃ ಮುಸ್ಲಿಂ ಸಾಃ ಮಿಲ್ಲತ ನಗರ ಬಂದೂಕವಾಲಾ ಕಾಟಾ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಗೆ ಯಾಕೆ ತನ್ನ ಮುಖ ಮರೆ ಮಾಚಿಕೊಂಡು ಓಡುತ್ತಿದ್ದಿ, ಈ ಸಮಯಕ್ಕೆ ಇಲ್ಲಿ ಯಾಕೆ ಓಡಾಡುತ್ತಿದ್ದಿ, ಅಂತಾ ಕೇಳಿದಕ್ಕೆ ಸದರಿಯವನು ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯ ಕಂಡು ಬಂದಿದ್ದು ನಂತರ ಸದರಿ ಅಪಾಧಿತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 April 2014

Gulbarga District Reported Crimes

PÀªÀįÁ¥ÀÆgÀ ¥ÉưøÀ oÁuÉ:
 ದಿನಾಂಕ:03/04/2014  ರಂದು  ಠಾಣೆಯ ಸಿಬ್ಬಂದಿಯವರಾದ ಚಂದ್ರಕಾಂತ ಪಿಸಿ. 988, ಭೀಮಾಶಂಕರ ಪಿಸಿ.531, ಕತಲಸಾ ಪಿಸಿ. 310 ರವರೊಂದಿಗೆ, ಕಮಲಾಪೂರದಿಂದ ಕಿಣ್ಣಿಸಡಕ ಸೇತುವೆವರೆಗೆ ಪೆಟ್ರೋಲಿಂಗ್ ಮಾಡುತ್ತಿರುವಾಗ  ಕಿಣ್ಣಿಸಡಕ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಗೆ ಲೋಕಸಭೆ  ಚುನಾವಣೆ  ನಿಮಿತ್ಯಾ ನೀವು ಯಾವ ಪಕ್ಷಕ್ಕೆ ಮತ ನೀಡುತ್ತಿರಿ, ನಿಮ್ಮನ್ನು ನೋಡುತ್ತೇನೆ. ಮತ್ತು ನಾನು ಹೇಳಿದ ಪಕ್ಷಕ್ಕೆ ಮತ ಹಾಕಬೇಕು ಅಂತಾ, ಒದರಾಡುತ್ತಾ, ಚಿರಾಡುತ್ತಾ ಸಾರ್ವಜನಿಕರಿಗೆ ಹಾಗು ಹೋಗಿ ಬರುವ ಜನರಿಗೆ ತಡೆದು ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡೆ ತಡೆ ಉಂಟುಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಾ ಇದ್ದುದ್ದರಿಂದ ಸದರಿಯವನಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷಕುಮಾರ ತಂದೆ ಶರಣಪ್ಪಾ ಸಿಂಧೆ ವಯ; 28 ವರ್ಷ ಜಾ; ಮಾದಿಗ ಉ; ಮೇಕ್ಯಾನಿಕ್ ಕೆಲಸ ಸಾ; ಕಿಣ್ಣಿಸಡಕ ತಾ:ಜಿ: ಗುಲಬಗರ್ಾ ಅಂತಾ ತಿಳಿಸಿದ್ದು ಸದರಿಯವನಿಗೆ ಹಾಗೆಯೆ ಬಿಟ್ಟಲ್ಲಿ ಇನ್ನು ಮುಂದೆ ಸಂಜ್ಞೆಯ ಅಪರಾಧ ಮಾಡುವದಾಗಿ ಕಂಡು ಬಂದಿದ್ದರಿಂದ ಮತ್ತು ಲೋಕಸಭೆ ಚುನಾವಣೆಯ ಸಮಯದಲ್ಲಿ ಗಲಾಟೆ ಮಾಡುವ ಸಂಭವವಿರುವದರಿಂದ, ಮುಂಜಾಗ್ರತೆ ಅಡಿಯಲ್ಲಿ ದಸ್ತಗಿರಿ ಮಾಡಿಕೊಂಡು ಠಾಣೆಗೆ  ತಂದು ಸದರಿಯವನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.                                                                     
C¥sÀd®¥ÀÆgÀ ¥Éưøï oÁuÉ:
ಇಂದು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕುರಿತು ಜೀಪ ಚಾಲಕ ಪಿಸಿ-339 ಗುಂಡಪ್ಪ ಇವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಂಬೆಡ್ಕರ ಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಅಂಬಿಗರ ಚೌಡಯ್ಯನವರ ಕಮಾನ ಹತ್ತಿರ ಇರುವ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಪಿಸಿ-1258 ಆನಂದ, ಪಿಸಿ-894 ನಿಂಗಣ್ಣ, ಪಿಸಿ-1225 ಚಿದಾನಂದ, ಪಿಸಿ-903 ಚಂದ್ರಶಾ ಇವರನ್ನು ವಾಕಿ ಮೂಲಕ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ, ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಹುಚ್ಚಪ್ಪ ತಂದೆ ಶರಣಪ್ಪ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿದೆನು. ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಪಂಚರು, ಹಾಗು ಸಿಬ್ಬಂದಿಯವರು ಕೂಡಿಕೊಂಡು ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಠಾಣೆ ಜೀಪಿನಲ್ಲಿ 5:15 ಪಿ ಎಮ್ ಕ್ಕೆ ಹೊರಟು  ಸ್ಥಳಕ್ಕೆ 5:20 ಪಿ ಎಮ್ ಕ್ಕೆ ಹೊಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯನವರ ಕಮಾನದ ಹತ್ತಿರ ಇರುವ ಹನುಂತ ದೆವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಡುತ್ತಿದ್ದ 5 ಜನರನ್ನು ಹಿಡಿದು  ಒಟ್ಟು 4785/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ದಿಂದ ವರೆಗೆ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡೆವು. ಸದರಿ ಆರೋಪಿತರೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
 ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:
 ದಿನಾಂಕ: 04/04/2014 ರಂದು ರಾತ್ರಿ  ಕಾಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಹಾಜರಾಗಿ ಶ್ರೀ ಸೋಮನಾಥ ಇವರ ಎಮ್.ಎಲ್.ಸಿ. ಪತ್ರವನ್ನು ಹಾಜರಪಡಿಸಿದ್ದರಿಂದ ನಾನು ಕಾಮರೆಡ್ಡಿ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಶ್ರೀ ಸೋಮನಾಥ ತಂದೆ ಶ್ರೀಶೈಲ ರವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ಫಿರ್ಯಾದಿ ತನ್ನ ಮೋ/ಸೈಕಲ್ ನಂ; ಕೆಎ 32 ವಿ 0210 ನೆದ್ದನ್ನು ಚಲಾಯಿಸಿಕೊಂಡು ಸುಪರ ಮಾರ್ಕೇಟ ದಿಂದ ಲಾಲಗೇರಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಅಪ್ಪನ ಕೆರೆ ಗಾರ್ಡನ ಕ್ರಾಸ್ ಹತ್ತಿರ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ್ ನಂ:ಕೆಎ 32 ಇಇ 0770 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರೀಕ್ಷಾ ಕ್ಕೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಹೊರಟು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.