POLICE BHAVAN KALABURAGI

POLICE BHAVAN KALABURAGI

25 January 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಚೌಕ ಠಾಣೆ : ¢£ÁAPÀ 24.01.2014 gÀAzÀÄ 1945 ಗಂಟೆಗೆ  ನೆಹರು ಗಂಜದ ಎಪಿಎಂಸಿ ಕಾರ್ಯಲಯದ ಮುಂದುಗಡೆ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ ಎಸ್ ಐ ರಾಜಶೇಖರ ವಿಶೇಷ ಪೊಲೀಸ್ ಠಾಣೆ ಅಲಾನಿ ಗುಲಬರ್ಗಾ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1.ರಾಮಚಂದ್ರ ತಂದೆ ಮರೆಪ್ಪ ಘಂಟಿ ಸಾಃ ಸಂಜೀವ ನಗರ ಮತ್ತು 2. ರಾಜಶೇಖರ ರವರನ್ನು ಹಿಡಿದು ಆರೋಪಿತರಿಂದ ನಗದು 550 ರೂಪಾಯಿ ಮತ್ತು ಮಟಕಾ ಬರೆದ ಚೀಟಿ, ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಸುಲಿಗೆ ಪ್ರಕರಣಗಳು :
ಬ್ರಹ್ಮಪೂರ ಠಾಣೆ : ಶ್ರೀ. ನರಸಿಂಹ ತಂದೆ ಬಾಲಯ್ಯಾ ಕಲ್ಲಕುಟಿಗ ಸಾ|| ಜೊಪಡಪಟ್ಟಿ ಹೆಡಪೊಸ್ಟ ಆಫೀಸ್ ಹತ್ತಿರ  ಗುಲಬರ್ಗಾ  ರವರು ದಿನಾಂಕ 25-01-2014 ರಂದು ರಾತ್ರಿ 01:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣನಾದ ಪಿಂಟು ಇಬ್ಬರೂ ಕೂಡಿ ಸಿಟಿ ಬಸಸ್ಟ್ಯಾಂಡ ಹತ್ತಿರದ ರೋಡಿನ ಕೆಲಸ ಮಾಡುತ್ತಿರುವಾಗ ಯಾರೋ ಒಬ್ಬನು ಅವರ ಹತ್ತಿರ ಬಂದವನೆ ಏ ಮಕ್ಕಳೆ ನಿಮ್ಮ ಹತ್ತಿರ ಏನೆನು ಇವೆ ನಾನು ಚೆಕ್ಕಿಂಗ ಮಾಡಲು ಬಂದಿದ್ದೇನೆ. ತನ್ನ ಕೈಯಲ್ಲಿದ್ದ ರಾಡಿನಿಂದ ಹೊಡೆಯಲು ಬಂದಾಗ ಅವನಿಗೆ ಹೆದರಿ ನನ್ನ ಪ್ಯಾಂಟಿನ ಜೇಬಿಗೆ ಕೈ ಹಾಕಿ ಪಾಕೆಟನಲ್ಲಿ ಇದ್ದ 600/- ರೂಪಾಯಿ ಹಾಗು ಪ್ಯಾಂಟಿನ ಜೇಬಿನಲ್ಲಿದ್ದ ಒಂದು ಓನಿಡಾ ಮೋಬಾಯಿಲ ಅ||ಕಿ|| 1200/-ರೂ ಒಟ್ಟು 1800/- ರೂ ಮಾಲು ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಪೂರ ಠಾಣೆ : ಶ್ರೀ. ಅಂಥೋನಿ ತಂದೆ ವಿಶ್ವಾಸ ಮಠ ಸಾ|| ವೆಂಕಟೇಶ್ವರ ನಗರ ಚಿತ್ತಾಪೂರ ಹಾ|| ಸನಮಾನ ಲಾಡ್ಜ ಗುಲಬರ್ಗಾ.ರವರು ದಿನಾಂಕ 24-01-2014 ರಂದು ರಾತ್ರಿ 11:15 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಲಾಡ್ಜ ರೂಮ ಬಾಯ ಆದ ಮೋನಪ್ಪಾ ಸೂಲಹಳ್ಳಿ ಇಬ್ಬರೂ ಲಾಡ್ಜನಲ್ಲಿ ಇದ್ದ ಸಮಯದಲ್ಲಿ ಯಾರೋ ಒಬ್ಬ ಅಪರಿಚಿತ ಕೈಯಲ್ಲಿ ರಾಡು ಹಿಡಿದುಕೊಂಡು ಏ ಮಕ್ಕಳೆ ನಿಮ್ಮ ಜೇಬಿನಲ್ಲಿ ಏನೆನು ಇದಿಯೋ ತಗೆಯಿರಿ ಇಲ್ಲದ್ದಿದ್ದರೆ. ಹೊಡೆದು ಖಲಾಸ ಮಾಡುತ್ತೇನೆ ಅಂತಾ ಹೇದರಿಸಿ ತಮ್ಮ ಜೇಬಿನಲ್ಲಿದ್ದ. ಮತ್ತು ರೂಮ ಬಾಯ ಹತ್ತಿರ ಇದ್ದ ಅಲ್ಲದೆ ಕ್ಯಾಸ ಕೌಂಟರನಲ್ಲಿ ಇದ್ದ ನಗದು ಹಣ ಹೀಗೆ ನಮ್ಮ ಹತ್ತಿರದಿಂದ 1. ಲಾವಾ ಕಂಪನಿಯ ಮೋಬಾಯಿಲ್ ಅ||ಕಿ|| 3000/- ರೂ 2. ಮೈಕ್ರೋ ಮ್ಯಾಕ್ಸ ಮೋಬಾಯಿಲ ಅ||ಕಿ|| 2500/- 3. ನಗದು ಹಣ 4500/- ಹೀಗೆ ಒಟ್ಟು 10,000/- ರೂ ಬೆಲೆ ಬಾಳುವ ಮಾಲು ಹೆದರಿಸಿ ಜಬರದಸ್ತಿಯಿಂದ ಕಸಿದುಕೊಂಡ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಶೋಕ ನಗರ ಠಾಣೆ :
ಹಲ್ಲೆ ಪ್ರಕರಣ: ದಿನಾಂಕ  24/01/2014 ರಂದು 11 ಎಎಂಕ್ಕೆ  ಶ್ರೀ. ಗುರುರಾಜ  ತಂದೆ ಹರಿಶ್ಚಂದ್ರ ರಾವ ಬಾದನಹಟ್ಟಿ  ಜೆ.ಇ ಸಾ: ಪ್ಲಾಟ ನಂ. 15/ಎ ಭಗವತಿ ನಗರ ಗುಲಬರ್ಗಾ  ರವರು ನೀಡಿದ ಫಿರ್ಯಾದಿ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ  ನಾನು ನನ್ನ ಮಗಳಿಗೆ ಕೊಡುವುದಿಲ್ಲಾ ಎಂದು ಹೇಳಿದಕ್ಕೆ  ವಿನಯಕುಮಾರ ಜಿ.ಗಿರಣಿ  ಇತನು ಅದೆ ಹಗೆತನದಿಂದ  ಕಳೇದ ಒಂದು ವರ್ಷದಿಂದ 4-5 ಸಲ  ನಮ್ಮ ಮನೆಯ ಹತ್ತಿರ ಬಂದು ಮನಬಂದಂತೆ ಬೈದು ಅವಹೆಳನ ಮಾಡಿ ಮನೆಯ ಕಿಡಕಿ ಗ್ಲಾಸ ಒಡೆದಿದ್ದುಮತ್ತು ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನದ  ಸೀಟ ಕವರಿಗೆ ಬೆಂಕಿ ಹಚ್ಚಿ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾನೆ.  ಆದರೂ ಸಹ ನಾವು ಮರ್ಯಾದೆಗೆ ಅಂಜಿ ಅವನ ಕಿರುಕುಳ ಸಹಿಸಿಕೊಂಡು ಇದ್ದೇವೆ.  ಹೀಗಿದ್ದು  ಇಂದು ದಿನಾಂಕ 24/01/2014 ರಂದು ಬೆಳಗಿನ ಜಾವ 3-30 ಎಎಂ ಸುಮಾರಿಗೆ  ನಾನು ಮತ್ತು ನನ್ನ ಧರ್ಮ ಪತ್ನಿ ಅನಿತಾ  ಇಬ್ಬರು ಮನೆಯಲ್ಲಿ ಮಲಗಿರುವಾಗ  ವಿನಯಕುಮಾರ ಜಿ. ಗಿರಣಿ ಎನ್ನುವನು ನಮ್ಮ  ಮನೆಯ ಕಂಪೌಂಡ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಕಲ್ಲು ತೂರಾಟ ಮಾಡಿ ಮನೆಯ ಕಿಟಕಿ ಗ್ಲಾಸ ಒಡೆದು “ ಹೊರಗೆ ಬರಲೇ ಬೊಸಡಿ ಮಗನೆ , ನೊಡು ಇನ್ನು ಏನೇನು ಮಾಡುತ್ತೆನೆನಿಮ್ಮ ಕುಟುಂಬದವರಿಗೆ  ನೆಮ್ಮದಿಯಿಂದ ಇರಲು ಬಿಡುವುದಿಲ್ಲಾ” ಅಂತಾ ಬೈಯುತ್ತಾ ಬೇದರಿಕೆ ಹಾಕುತ್ತಿರುವಾಗ ನಾನು ಪೊಲೀಸ ಠಾಣೆಗೆ ಫೋನ ಮಾಡುವಾಗ  ಮೊಟರ ಸೈಕಲ ಮೇಲೆ ಹೊಗಿರುತ್ತಾನೆ. ಇವನಿಂದ ನಮ್ಮ  ಕುಟುಂಬದವರ ನೆಮ್ಮದಿ ಹಾಳು ಆಗಿರುತ್ತದೆ. ನಾವು ಭಯದ ವಾತಾವರಣದಲ್ಲಿ ಬದಕುತ್ತಿದ್ದೆವೆ.  ಆವನಿಂದ ನಮ್ಮ ಪ್ರಾಣಕ್ಕೆ ಅಪಾಯ ಇರುತ್ತದೆ.  ಈ ಬಗ್ಗೆ ಸೂಕ್ತ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕ ನಗರ ಠಾಣೆ
ಹಲ್ಲೆ ಪ್ರಕರಣ : ದಿನಾಂಕ 24/01/2014  ರಂದು 5 ಪಿ.ಎಂ.ಕ್ಕೆ ಪಿರ್ಯಾಧಿ ಶ್ರೀ ಮಾಹಾಂತಪ್ಪ ತಂದೆ ಕಾಶಿನಾಥ ದವಡೇ ಸಾ: ಸಿಐಬಿ ಕಾಲೋನಿ ಗುಲಬರ್ಗಾ ರವರು ನೀಡಿದ ಪಿರ್ಯಾದಿಯ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ24/01/2014 ರಂದು ಸಂಜೆ 4 ಗಂಟೆ ಸುಮಾರಿಗೆ ತಿಮ್ಮಾಪುರಿ ಚೌಕದಿಂದ ಅಟೋ ರಿಕ್ಷಾ ನಂ. ಕೆ.ಎ-32/6637 ನೇದ್ದರಲ್ಲಿ ಕುಳಿತು ಕೊಳ್ಳುವಾಗ ಆಟೋ ಚಾಲಕನು ಬಸ್ ಸ್ಟ್ಯಾಂಡಕ್ಕೆ ಹೋಗಲು 5 ರೂ ಅಂತಾ ಹೇಳಿದನು.  ಆಟೋ ರಿಕ್ಷಾದಲ್ಲಿ ಕುಳಿತು ಬಸ್ ನಿಲ್ದಾಣಕ್ಕೆ 4-15 ಪಿ.ಎಂದ ಸುಮಾರಿಗೆ ಬಂದು ಇಳಿದು 100 ರೂ ನೋಟು ಕೊಟ್ಟಿದ್ದು ಅದಕ್ಕೆ ಆಟೋ ಚಾಲಕನು 7 ರೂ ತೆಗೆದುಕೊಳ್ಳುತ್ತೇನೆ. ಅಂದನು ಅದಕ್ಕೆ 5 ರೂ ತೆಗೆದುಕೋ ಎಂದು ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕಪಾಳ ಮೇಲೆ ಕೈಯಿಂದ ಹೊಡೆದನು. ಮತ್ತು ‘’’ ಸಾಲೇ ಮೇರೆಕೂ ಪಾಚ್ ರೂಪಾಯಿ ಲೇ ಬೋಲತೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಟ್ಟೆಯ ಮೇಲೆ ಜೋರಾಗಿ ಹೊಡೆದನು ಮತ್ತು ಕೆಳಗಡೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ಎಡ ಕಪಾಳದ ಮೇಲೆ ಹೊಡೆದು ಗುಪ್ತ ಗಾಯಗೊಳಿಸಿದನು. ಆಟೋ ಚಾಲಕನು ನಾನು ಕೊಟ್ಟ 100 ರೂ ಹಾಗೇ ತೆಗೆದುಕೊಂಡು ಹೋಗಿ ಸಾಲೇ ತೆರೆಕೂ ನಹಿ ಛೋಡತಾ ಅಂತಾ ಅನ್ನುತ್ತಾ ಆಟೋ ತೆಗೆದುಕೊಂಡು ಓಡಿ ಹೋದನು. ಕಾರಣ ಆಟೋ ರಿಕ್ಷಾ ನಂ. ಕೆ.ಎ-32/6637 ನೇದ್ದರ ಚಾಲಕನ ಮೇಲೆ ಕಾನೂನಿನ ರೀತಿ ಕ್ರಮ ಕೈಕೊಳ್ಳಬೇಕೆಂತಾ ವಗೈರೆ ಪಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ.         
ಹಲ್ಲೆ ಪ್ರಕರಣ: ದಿನಾಂಕ: 24.01.14ರಂದು 1 ಪಿ ಎಮ್ ಕ್ಕೆ ಸರ್ಕಾರಿ ಆಸ್ಪತ್ರೆ ಸೇಡಂದಲ್ಲಿ ಫಿರ್ಯಾಧಿ ಬದ್ದಿಬಾಯಿ ಗಂಡ ಕಾಶ್ಯಾನಾಯಕ ಸಾ|| ಕೋಲಕುಂದಾ ದೊಡ್ಡ ತಾಂಡಾ ಇವರು ತಾಂಡಾದ ಸೀಮಾಂತರದಲ್ಲಿ ಹೊಲದಲ್ಲಿರುವಾಗ  ತಾಂಡಾದ ಹಣಮಂತ ತಂದೆ ತುಳಜ್ಯಾನಾಯಕ ಚಿನ್ನಾ ರಾಠೋಡ ಈತನ ಹೊಲ ಇರುತ್ತದೆ. ಈತನಿಗು ಮತ್ತು ನಮಗು ಹೊಲದ ಬಾಂದಾರಿ ಸಂಬಂಧ ತಕರಾರು ಇದ್ದು ದಿನಾಂಕ: 23.01.14 ರಂದು ಸಾಯಂಕಾಲ5 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿರುವ ಸಾರ್ವಜನಿಕ ರಸ್ತೆಯಿಂದ ನಮ್ಮ ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ನಮ್ಮ ತಾಂಡಾದ ಹಣಮಂತ ತಂದೆ ತುಳಜ್ಯಾನಾಯಕ ಚಿನ್ನರಾಠೋಡ ಈತನು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಹಳೆ ದ್ವೇಷದಿಂದ ನನಗೆ ಕಟ್ಟಿಗೆಯಿಂದ ಎದೆಗೆಬೆನ್ನ ಮೇಲೆ ಮೊಣ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಕೊಲೆ ಮಾಡತ್ತೇನೆ ಅಂತಾ ಜೀವದ ಹೆದರಿಕೆ ಹಾಕಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
PÀªÀįÁ¥ÀÆgÀ ¥ÉưøÀ oÁuÉ
ಹಲ್ಲೆ ಪ್ರಕರಣ :    ದಿನಾಂಕ: 24/01/2014 ರಂದು ರಾತ್ರಿ 07-45  ಗಂಟೆಗೆ ಶ್ರೀ. ವಿಜಯಕುಮಾರ ತಂದೆ ಪಾಂಡು ರಾಠೋಡ ಸಾ: ಹರ್ಜಿ ತಾಂಡಾ ಸೊಂತ ಇವರು ಠಾಣೆಗೆ ಹಾಜರಾಗಿ ನಿನ್ನೆ ನಮ್ಮ ತಾಂಡಾದಲ್ಲಿ ಸಂಭಂದಿಕರಾರ ಶಿವಾಜಿ ತಂದೆ ಚಂದ್ರು ರಾಠೋಡ ಈತನ ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ ನಮ್ಮ ತಾಂಡಾದ ಜನರು ಕೂಡಿಕೊಂಡು ರಾತ್ರಿ ವೇಳೆಯಲ್ಲಿ ಮದುವೆಯ ನೀತಿ-ನಿಯಮಗಳನ್ನು ಮಾಡುತ್ತಾ ರಾತ್ರಿ 11-00 ಗಂಟೆ ಸುಮಾರಿಗೆ ಎಲ್ಲರೂ ಕೂಡಿಕೊಂಡು ನಮ್ಮ ಲಂಬಾಣಿ ನೃತ್ಯ ಮಾಡುತ್ತಿದ್ದು,ಈ ಮದುವೆಯ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಸೊಂತ ಕೇವಳು ತಾಂಡಾ (ಡೋಲಮುಖ ತಾಂಡಾ)ದಿಂದ ಮದುವೆ ಹುಡುಗಿಯ ಕಡೆಯವರೂ ಸಹ ಬಂದು ನಮ್ಮೊಂದಿಗೆ ನೃತ್ಯ ಮಾಡುತ್ತಿದ್ದಾಗ ಒಬ್ಬರಿಗೊಬ್ಬರೂ ತಳ್ಳಾಡಿಕೊಂಡು ಬಾಯಿ ಮಾತಿನ ತಕರಾರು ಮಾಡಿದ್ದು ಇರುತ್ತದೆ.  ಮದುವೆ ಕಾರ್ಯಕ್ರಮದ ಅಕ್ಷತೆ ಹಾಕಿ ಊಟ ಮಾಡಿ ನಮ್ಮ ತಾಂಡಾದ ಸಮುದಾಯ ಭವನದ ಹತ್ತಿರ ನಾನು ಮತ್ತು ನಮ್ಮ ಸಂಭಂದಿಕರಾದ ಸುರೇಶ ತಂದೆ ಲಕ್ಷ್ಮಣ ರಾಠೋಡ ಮತ್ತು ಆತನ ಮಕ್ಕಳಾದ ಗಣೇಶ ಮತ್ತು ಮೋಹನ ಕೂಡಿಕೊಂಡು ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಸೊಂತ  ಕೇವಳು (ಡೋಲಮುಖ ) ತಾಂಡಾದ 1.ನವರಂಗ ಚವ್ಹಾಣ 2. ಅನೀಲ ತಂದೆ ಗಣಪತಿ ಚವ್ಹಾಣ 3. ಕಿಶನ ತಂದೆ ಪ್ರಭು ಚವ್ಹಾಣ 4. ದಿನೇಶ ತಂದೆ ತಾರು ಚವ್ಹಾಣ 5. ಪುಂಡಲೀಕ ತಂದೆ ತಾರಾಸಿಂಗ ಚವ್ಹಾಣ 6. ಸಂದೀಪ ತಂದೆ ಪಾಂಡು ಚವ್ಹಾಣ 7. ಅರುಣ ಹೀಗೆ ಎಲ್ಲರೂ ಕೂಡಿಕೊಂಡು ನಾವು ಕುಳಿತಲ್ಲಿಗೆ ಬಂದವರೇ ನಮ್ಮ ಲಂಬಾಣಿ ಭಾಷೆಯಲ್ಲಿ ನಿನ್ನೆ ರಾತ್ರಿ ನಾವು ಡ್ಯಾನ್ಸ್ ಮಾಡುವಾಗ ನಮಗೆ ನೀವೇ ನೂಕಿಸಿಕೊಟ್ಟು ನಮಗೆ ಅಪಮಾನ ಮಾಡಿರುತ್ತೀರಿ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ನಾವು ನಿನ್ನೆ ನಾವು ನಿಮಗೆ ನೂಕಿಸಿಕೊಟ್ಟಿರುವುದಿಲ್ಲಯಾರೋ ನೂಕಿಸಿಕೊಟ್ಟಿದ್ದಕ್ಕೆ ನಮ್ಮನ್ನೇಕೆ ಬೈಯ್ಯುತ್ತಿದ್ದೀರಿ ಅಂತಾ ಕೇಳುತ್ತಿದ್ದಾಗ ಅವರೆಲ್ಲರೂ ಕೂಡಿಕೊಂಡು ಸುರೇಶ ರಾಠೋಡ ಮತ್ತು ಆತನ ಮಗ ಮೋಹನ ರಾಠೋಡ ಇವರುಗಳಿಗೆ ಕೈಯಿಂದ ಕಲ್ಲಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದುಜಗಳ ಬಿಡಿಸಲು ಹೋದ ನನಗೆ ನೂಕಿಸಿಕೊಟ್ಟು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.   
ಅಫಜಲಪೂರ ಪೊಲೀಸ್ ಠಾಣೆ
ಹಲ್ಲೆ ಪ್ರಕರಣ :    ದಿನಾಂಕ 24/01/2014 ರಂದು 10.30 ಎಎಮ್ ಕ್ಕೆ ಫಿರ್ಯಾದಿದಾರ  ಶ್ರೀ ಹುಚ್ಚಪ್ಪ ತಂದೆ ಸುಕ್ಕಣ್ಣ ಸಿಂಧೆ ಸಾ|| ಉಡಚಣ ಹಟ್ಟಿ ಇವರು ಠಾಣೆಗೆ ಹಾಜರಾಗಿ ದು ಬೆಳಿಗ್ಗೆ ಫಿರ್ಯಾದಿದಾರ ಹಾಗೂ ಅವರ ಅಣ್ಣನ ಮಗ ಇಬ್ಬರು ಉಡಚಣ ಹಟ್ಟಿ ನೀರಿನ ಟ್ಯಾಂಕ್ ಹತ್ತಿರ ಇದ್ದಾಗ  ಆರೋಪಿತ್ರಾದ 1) ಕಿರಣ 2)ಸುರೇಶ 3) ರಮೇಶ 4) ಗುಂಡಪ್ಪ ಇವರು ಫಿರ್ಯಾದಿಗೆ ತಡೆದು ನಿಲ್ಲಿಸಿ  ಅವಾಚ್ಯ ಬೈದು ಕೈಯಿಂದ ಬಡಿಗೆ ಯಿಂದ ಹೋಡೆದು ರಕ್ತಗಾಯ ಗುಪ್ತ ಗಾಯ ಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಗ್ರಾಮೀಣ ಪೊಲೀಸ್ ಠಾಣೆ :
ಪಾಲಿಕೆ. ಕೆ.ಇ.ಬಿ ರವರ ನಿರ್ಲಕ್ಷ ಬಾಲಕನ ಸಾವು. : ದಿನಾಂಕ. 24-01-2014 ರಂದು ಶ್ರೀ.ಇಜಾಜ ತಂದೆ ಅಬ್ದುಲ ಗನಿ ಮೊಮಿನ ಸಾ; ಜುಬೇರ ಕಾಲೂನಿ ಹಾಗರಗಾ ಕ್ರಾಸ ಇವರ ಮಗ ವಸೀ ಜುಬೇರ ಮಸೀದ ಹತ್ತಿರ ಇರುವ ಡ್ರೈನೇಜನಲ್ಲಿ ಬಿದ್ದಿದರಿಂದ ಆತನನ್ನು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಗಳು ವಸೀ ಇತನನ್ನು ನೋಡಿ ಮೃತ ಪಟ್ಟಿರುತ್ತಾನೆ ಅಂತಾ  ಹೇಳಲು ವಸೀ ಯ  ಶವವನ್ನು ಮನೆಗೆ ತೆಗೆದುಕೊಂಡು ಹೋಗಿ  ವಿಚಾರಿಸಿದಾಗ ವಸೀ ವಯ;12 ವರ್ಷ ಇತನು ಮನೆಯಿಂದ ಕಿರಾಣಾ ಅಂಗಡಿಗೆ ಹೋಗುವಾಗ  ಡ್ರೈನೇಜ ನಾಲಿಯಲ್ಲಿ  ಬಿದಿದ್ದು   ಡ್ರೈನೇಜ ಸುತ್ತಾ ನಿಂತಿದ್ದ ನೀರಿನಲ್ಲಿ ಅಲ್ಲಿದ್ದ ವಿದ್ಯುತ ಕಂಬದಿಂದ  ವಿದ್ಯುತ ಇಳಿದಿದ್ದರಿಂದ, ನನ್ನ ಮಗ ವಸೀ ಇತನಿಗೆ ವಿದ್ಯುತ್ ಶಾಖ ಬಡಿದು ಮೃತ ಪಟ್ಟಿರುತ್ತಾನೆ. ಮಹಾನಗರ ಪಾಲಿಕೆಯವರು ಡ್ರೈನೇಜ ಕೆಲಸ ಮಾಡುವಾಗ ನಾಲಿ ನೀರು ನಿಲ್ಲದಂತೆ ಮಾಡಿದಲ್ಲಿ ಮತ್ತು ಕೆ.ಪಿ.ಟಿ.ಸಿಯಲ್.  ಇಲಾಖೆಯವರು ವಿದ್ಯುತ ಕಂಬದ ಸುತ್ತಾ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿದಲ್ಲಿ ಈ ಘಟನೆ ಸಂಭವಿಸುತ್ತಿರಲಿಲ್ಲಾ.  ಈ ಘಟನೆಯು ಮಾನ್ಯ ಆಯುಕ್ತರು  ಮಹಾನಗರ ಪಾಲಿಕೆ ಗುಲಬರ್ಗಾ  ಮತ್ತು ಸಹಾಯಕ ಕಾರ್ಯಾ ನಿರ್ವಾಹಕ ಅಭಿಯಂತರರು ಕೆ.ಪಿ.ಟಿ.ಸಿಯಲ್. ಏರಿಯಾ ಇಂಚಾರ್ಜ  ಇವರುಗಳ  ನಿರ್ಲಕ್ಷತನದಿಂದ  ಈ ಘಟನೆ ಸಂಭವಿಸಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಂತಾ  ವಗೈರೆ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ:
ಕೊಲೆ ಪ್ರಕರಣ:ಶ್ರೀ ವೀರಯ್ಯಸ್ವಾಮಿ ತಂದೆ ಶಂಕ್ರಯ್ಯಸ್ವಾಮಿ ಸಾ|| ಬಡಗೇರಾ (ಬಿ) ಇವರು ಠಾಣೆಗೆ ಹಾಜರಾಗಿ ತಮ್ಮ  ಅಜ್ಜಿಯಾದ ಪಾರ್ವತಮ್ಮ ಗಂಡ ಸದಾನಂದಯ್ಯ ವ|| 80 ವರ್ಷ ಇವಳು ಈಗ ಸುಮಾರು 40 ವರ್ಷಗಳ ಹಿಂದೆ ಗಂಡ ಮಕ್ಕಳು ಹಾಗೂ ಮನೆ ಮಾರು ಬಿಟ್ಟು ಸನ್ಯಾಸತ್ವವನ್ನು ಸ್ವಿಕರಿಸಿದ್ದು  ಅವಳಿಗೆ ನನ್ನ ತಂದೆಯಾದ ಶಂಕ್ರಯ್ಯ ಇವರು ಒಬ್ಬನೆ ಮಗನಿರುತ್ತಾನೆ ಅಜ್ಜಿ ಪಾರ್ವತಮ್ಮಳು ಕೊಂತನಪಲ್ಲಿ ಸೀಮೆಯಲ್ಲಿರುವ ಗುಡ್ಡದಲ್ಲಿರುವ ಕಾರ್ಯಗಡ್ಡ ಸಿದ್ದೇಶ್ವರ ಗುಡಿಯ ಹತ್ತಿರ ವಾಸವಾಗಿದ್ದಳುನಾನು ಗುಡ್ಡದಲ್ಲಿ ವಾಸಿಸುವ ಮನೆಗೆ ವಾರದಲ್ಲಿ ಎರಡು ಮೂರು ಸಲ ಹೋಗಿ ಹಾಲು ಹಣ್ಣು ಹಂಪಲು ಇನ್ನಿತರ ವಸ್ತುಗಳನ್ನು ಕೊಟ್ಟು ಮಾತಾಡಿ ಬರುತ್ತಿದ್ದೆನು. ಹೀಗಿರುವಾಗ ದಿನಾಂಕ: 24.01.14 ರಂದು ನಾನು ಹಾಲು ಹಣ್ಣು ಮತ್ತು ಇನ್ನಿತರ ಸಾಮಾನುಗಳು ತೆಗೆದುಕೊಂಡು ಕಾರ್ಯಗಡ್ಡ ಗುಡ್ಡದಲ್ಲಿರುವ ನನ್ನ ಅಜ್ಜಿಯಾದ ಪಾರ್ವತಮ್ಮ ಇವಳು ವಾಸಿಸುವ ಮನೆಗೆ ಇಂದು ಮುಂಜಾನೆ 11:30 ಗಂಟೆ ಸುಮಾರಿಗೆ ಬಂದು ನೋಡಿದಾಗ ಮನೆಯಲ್ಲಿ ನನ್ನ ಅಜ್ಜಿ ಪಾರ್ವತಮ್ಮಳ ಕುತ್ತಿಗೆ ಭಾಗವು ಪೂರ್ತಿ ಕತ್ತರಿಸಿ ದಂಡದಿಂದ ರುಂಡವು ಕತ್ತರಿಸಿ ಬೇರ್ಪಡಿಸಿದ್ದುಕುತ್ತಿಗೆ ಬಾಗದಿಂದ ಕಾಲಿನವರೆಗೆ ಇರುವ ಬಾಗವು ಮಾತ್ರ ಮೃತದೇಹವಿತ್ತು ಇವಳ ತಲೆಯಿಂದ ಕುತ್ತಿಗೆವರೆಗೆ ಇರುವ ಭಾಗವು ಇರುವದಿಲ್ಲ . ನನ್ನ ಅಜ್ಜಿಯಾದ ಪಾರ್ವತಮ್ಮ ಗಂಡ ಸದಾನಂದಯ್ಯ ವ|| 80ವರ್ಷ ಇವಳಿಗೆ ದಿನಾಂಕ: 23.01.14 ರಂದು 5 ಪಿ ಎಮ್ ರಿಂದ  ದಿನಾಂಕ: 24.01.14 11:30 ಎ ಎಮ್ ಅವಧಿಯಲ್ಲಿ ಯಾರೊ ಆರೋಪಿತರು ಮನೆಯೊಳಗೆ ಬಂದು ಹರಿತವಾದ ಆಯುಧಗಳಿಂದ ಕುತ್ತಿಗೆಗೆ ಹೊಡೆದು ಕತ್ತರಿಸಿ ಕೊಲೆ ಮಾಡಿ ದಂಡದಿಂದ ರುಂಡವನ್ನು ಬೇರ್ಪಡಿಸಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಯಾವುದೊ ಸ್ಥಳದಲ್ಲಿ ಒಯ್ದು ಹಾಕಿದ್ದು. ಅಜ್ಜಿಯಾದ ಪಾರ್ವತಮ್ಮಳಿಗೆ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮಾದನ ಹಿಪ್ಪರಗಾ ಪೊಲೀಸ್ ಠಾಣೆ   :
ಕಳವು ಪ್ರಕರಣ :ದಿನಾಂಕ: 24-01-14 ರಂದು ಶ್ರೀಮತಿ.ಮಧುಮತಿ ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ  ತಾ:ಆಳಂದ.  ಇವರು ಠಾಣೆಗೆ ಬಂದು ದಿನಾಂಕ:23-01-14 ರ ರಾತ್ರಿ 08:00 ಗಂಟೆಯಿಂದ ದಿ:24/01/14 ರ ಬೆಳಗಿನ 6 ಗಂಟೆಯ ಮಧ್ಯದ ಅವಧಿಯಲ್ಲಿ. ನಾವು ಶಾಲೆಯಲ್ಲಿ ಯಾರು ಇರಲಾರದ ಸಮಯದಲ್ಲಿಯಾರೋ ಅಪರಿಚಿತ ಕಳ್ಳರು ಸರಕಾರಿ ಪ್ರೌಢಶಾಲೆ ಹಿರೋಳಿ ಶಾಲೆಯ ಕಂಪ್ಯೂಟರ್ ಕೋಣೆಯಲ್ಲಿನ 1) H.C.L. ಕಂಪನಿಯ 2 ಎಲ್.ಸಿ.ಡಿ ಮಾನಿಟರ್ 2)H.C.L. ಕಂಪನಿಯ  ಒಂದು ಸಿ.ಪಿ.ಯು. 3) 02 ಕಂಪ್ಯೂಟರ್ ಕೀ ಬೋರ್ಡ 4) 03 ಕಂಪ್ಯೂಟರ್ Mouse.ಹೀಗೆ ಒಟ್ಟು : 24,000=00 ರೂಪಾಯಿಗಳ ಕಂಪ್ಯೂಟರ್ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು.  ಕಳುವಾದ ಕಂಪ್ಯೂಟರ್ ಸಾಮಗ್ರಿಗಳು ಪತ್ತೆ ಹಚ್ಚಿ ಕೊಡಬೇಕು ಅಂತಾ ಕೊಟ್ಟ ಅರ್ಜಿ  ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ :


ವರದಕ್ಷಿಣೆ ಕಿರುಕುಳ ಪ್ರಕರಣ : ದಿನಾಂಕ 24/01/2014 ರಂದು 6 ಪಿಎಮ್‌ಕ್ಕೆ  ಪಿರ್ಯಾದಿ ಭಾರತಾಬಾಯಿ ಗಂಡ ವಿಜಯಕುಮಾರ ಚವ್ಹಾಣ ಠಾಣೆಗೆ ಹಾಜರಾಗಿ ತನಗೆ ದಿನಾಂಕ 26/02/2012 ರಂದು ಅಫಜಲಪೂರ ತಾಲೂಕಿನ ಚವಡಾಪೂರ ತಾಂಡಾದ ವಿಜಯಕುಮಾರ ತಂದೆ ಪಾಂಡು ಚವ್ಹಾಣ ರವರೊಂದಿಗೆ ಗುಲ್ಬರ್ಗಾದ ನಾಜ ಫಂಕ್ಷನ ಹಾಲ ದಲ್ಲಿ ಮದುವೆ ಮಾಡಿ ಕೊಟ್ಟಿದ್ದು.  ಮದುವೆ ಕಾಲದಲ್ಲಿ ನನ್ನ ಗಂಡನಿಗೆ 1 ಲಕ್ಷ ರೂಪಾಯಿ  ಹಾಗೂ 6 ತೋಲೆ ಬಂಗಾರ ವರೋಪಚಾರವಾಗಿ ಹಾಗೂ ಇತರೆ ಗೃಹ ಉಪಯೋಗಿ ಸಾಮಾನುಗಳು ಕೊಟ್ಟಿರುತ್ತಾರೆ, ಲಗ್ನವಾದ 6 ತಿಂಗಳವರೆಗೆ ನನಗೆ ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಇವರು ನನಗೆ ತವರು ಮನೆಯಿಂದ ಇನ್ನು ಹೆಚ್ಚಿಗೆ ಹಣ ತರಬೇಕು ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಪ್ರತಿ ದಿನ ಕಿರುಕುಳ ನೀಡುತ್ತಾ ನನ್ನ ಗಂಡ ಹಾಗೂ ನಾದನಿ ಬೈಯುವದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿ ನನಗೆ ನನ್ನ ತವರು ಮನೆಗೆ ನನ್ನ ಗಂಡನು ಹಣ ತರುವ ವರೆಗೂ ನನ್ನ ಹತ್ತಿರ ಬರಬೇಡ ಅಂತಾ ನನ್ನ ತವರು ಮನೆಗೆ ನನಗೆ ಬಿಟ್ಟು ನೀನು ಎಲ್ಲಿ ಬೇಕಾದರೂ ಹೋಗು ಅಂತಾ ಹೇಳಿತ್ತಿದ್ದು. ದಿ: 02/12/2013 ರಂದು ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಕೂಡಿ ನಾನಿದ್ದ ನಮ್ಮ ತವರು ಮನೆಗೆ ಬಂದು ವಿಚ್ಚೇದನೆ ಕೊಡು ಇಲ್ಲದಿದ್ದರೆ ಹಣ ತೆಗೆದುಕೊಂಡು ಬಾ ಎಂದು ಜಗಳ ತೆಗೆದು ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂಧ ಬಯ್ದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

24 January 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಾಳಗಿ ಠಾಣೆ : ದಿನಾಂಕ 23-01-2014 ರಂದು 00-15 ಗಂಟೆಗೆ ಕಾಳಗಿ ಗ್ರಾಮದ ಕೃಷ್ಣ ಧಾಬಾದ ಹತ್ತಿರ ಇಸ್ಪೀಟ್ ಜೂಜಾಟ ನಡೆದಿದೆ  ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ,ಬಾಹರ ಎಂಬ ಜೂಜಾಟವನ್ನು ಆಡುತ್ತಿರುವದನ್ನು ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ ಮಹ್ಮದ ರಫೀಕ ತಂದೆ ಮಹ್ಮದ ಗಪೂರ ಸಂಗಡ 7 ಜನರು ಸಾ: ಎಲ್ಲರೂ ತಾ:ಚಿಂಚೋಳ್ಳಿ  ಜನರನ್ನು ಹಿಡಿದು ಅವರಿಂದ ಜೂಜಾಟಕ್ಕೆ ಬಳುಸುತ್ತಿದ್ದ ಒಟ್ಟು 9101/-ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. 02-25 ಗಂಟೆಗೆ ಮರಳಿ ಠಾಣೆಗೆ ಬಂದು ಎಸ್,ಹೆಚ್,ಓ ರವರ ಮುಂದೆ ಹಾಜರ ಪಡಿಸಿದ್ದು ಸದರ ಜಪ್ತಿ ಪಂಚನಾಮೆಯ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 05/2014 ಕಲಂ 87 ಕೆ,ಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಕಾಶಿನಾಥ ತಂದೆ ಶಿವಾನಂದ ಮೂಲಗೆ   ಸಾ: ಗೌಡಗಾಂವ ತಾ: ಅಫಜಲಪೂರ ಹಾ:ವ: ದೇವಿ ನಗರ ಗುಲಬರ್ಗಾ ರವರ ಅಣ್ಣನಾದ ಅಶೋಕ ರವರು  ದಿನಾಂಕ 23-01-2014 ರಂದು ಮದ್ಯಾಹ್ನ 2-00 ಗಂಟೆ ತನ್ನ ಮೋಟಾರ ಸೈಕಲ ನಂಬರ ಕೆಎ-15 ಹೆಚ್-6672 ನೇದ್ದರ ಮೇಲೆ ರೆಡ್ಡಿ ಪೆಟ್ರೊಲ ಪಂಪ ಕಡೆಗೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಪಂಪ ಕಡೆಗೆ ತಿರುಗಿಸುವಾಗ ಸನ್ ಇಂಟರ ನ್ಯಾಷನಲ ಹೋಟೆಲ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂಬರ ಕೆಎ-02 ಇಡಬ್ಲೂ-4584 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಅಣ್ಣನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತಾನು ಗಾಯಹೊಂದಿ ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರಿಯಂಕಾ ಗಂಡ ಮಂಜುನಾಥ ಕುಂಬಾರ  ಸಾ;ಸುಂಟನೂರ ತಾ;ಆಳಂದ ಜಿ;ಗುಲಬರ್ಗಾ ರವರು ದಿನಾಂಕ 01-02-2013  ರಂದು ನಮ್ಮ ತಂದೆ ತಾಯಿಯವರು ನರೋಣಾ ಗ್ರಾಮದ ಮಂಜುನಾಥ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ 1 ಲಕ್ಷ ರೂಪಾಯಿ 3 ತೊಲೆ ಬಂಗಾರ ಕೊಡುವಂತೆ ಮಾತನಾಡಿದ್ದು ಮದುವೆಯಲ್ಲಿ 50.000/- ರೂಪಾಯಿ 3 ತೊಲೆ ಬಂಗಾರ ಕೊಟ್ಟಿದ್ದು ಇರುತ್ತದೆ. ಮುದವೆಯಾದ ನಂತರ 1 ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಸರಿಯಾಗಿ ಇದ್ದು ತದ ನಂತರ ಇನ್ನುಳಿದ 50.000/- ರೂ ಹಣ ತವರು ಮನೆಯಿಂದ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡಲು ಪ್ರಾರಂಬಿಸಿದರು. ದಿನಾಂಕ 23-01-2014 ರಂದು 9 ಗಂಟೆಯ ಸುಮಾರಿಗೆ ನಾನು ಸುಂಟನೂರ ಗ್ರಾಮದಿಂದ ಕಂಪ್ಯೂಟರ ಕ್ಲಾಸಿಗೆಂದು ಗುಲಬರ್ಗಾದ ಶಹಾಬಜಾರ ನಾಕಾದ ಹತ್ತಿರ ಬಂದು ಬಸ್ಸಿನಿಂದ ಕೆಳಗೆ ಇಳಿದಾಗ ಅಲ್ಲಿ ನನ್ನ ಗಂಡ ಮಂಜುನಾಥ ಮೈದುನ ನಾಗರಾಜ ಮತ್ತು ಮಾವ ಗುಂಡಪ್ಪಾ ಇವರು ಕೂಡಿಕೊಂಡು ಬಂದವರೆ ರಂಡಿ ನಿನಗೆ ತವರು ಮನೆಯಿಂದ 50.000/- ರೂ ಹಣ ತೆಗೆದುಕೊಂಡು ಬಾ ಅಂದರೆ ಗುಲಬರ್ಗಾಕ್ಕೆ ಕಂಪ್ಯೂಟರ ಕ್ಲಾಸಿಗೆ ಬರುತ್ತಿದ್ದಿಯಾ ಅಂತಾ ಅಂದವನೆ ನನ್ನ ಗಂಡ ಮಂಜುನಾಥ ಕೈಮುಷ್ಟಿ ಮಾಡಿ ಎಡಗಣ್ಣಿನ ಹುಬ್ಬಿನ ಹತ್ತಿರ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದನು. ನಾಗರಾಜ ಇತನು ಕೈಯಿಂದ ಹೊಟ್ಟೆಗೆ ಹೊಡೆದನು. ಮಾವ ಗುಂಡಪ್ಪ ಇತನು ತಲೆಯ ಕೂದಲು ಹಿಡಿದು ಜಗ್ಗಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಗಳ ಕಳವು ಪ್ರಕರಣಗಳು :
ದೇವಲ ಗಾಣಗಾಪೂರ ಠಾಣೆ : ಶ್ರೀ ಸಾಯಬಣ್ಣ ತಂದೆ ಸಂಗಪ್ಪ ಮೂರನೆತ್ತಿ ಸಾ|| ದೇವಲಗಾಣಗಾಪೂರ ರವರ ಹೊಂಡಾ ಸೈನ್ ಕಂಪನಿಯ ಸೈಕಲ ಮೋಟಾರ ಇದ್ದು ಅದು ನನ್ನ ಹೆಸರಿನಿಂದ ಇರುತ್ತದೆ. ಅದರ ನಂ. KA-32 ED-0830 ಅಂತಾ ಇದ್ದು ಅದರ ಚಸ್ಸಿ ನಂ. ME4JC36JBD7337170  ಇಂಜೀನ ನಂ, JC36E77517931 ಅಂತಾ ಇರುತ್ತದೆ. ಸದರ ಮೋಟಾರ ಸೈಕಲನ್ನು ನಾನೆ ಉಪಯೋಗ ಮಾಡುತ್ತಿದ್ದುದ್ದು ಇರುತ್ತದೆ. ನಮ್ಮ ಮೋಟಾರ ಸೈಕಲ ದಿನಾಲು ನಮ್ಮ ಮನೆಯ ಮುಂದೆ ನಿಲ್ಲಿಸುತಿದ್ದೆನು. ದಿನಾಂಕ: 25-12-2013 ರಂದು ರಾತ್ರಿ 11-00 ಗಂಟೆ ಸುಮಾರಿಗೆ ನಾನು ಊಟ ಮಾಡಿ ನಮ್ಮ ಮನೆಯಲ್ಲಿ ಮಲಗಿದ್ದೆನು. ದಿನಾಂಕ: 26-12-2013 ರಂದು ಬೆಳಿಗ್ಗೆ ಎದ್ದು ನೋಡುವದರಲ್ಲಿ ನನ್ನ ಸೈಕಲ ಮೋಟಾರ ಕಾಣಲಿಲ್ಲಾ  ಆಗ ನಾನು ಗಾಬರಿಯಾಗಿ ಊರಲ್ಲಿ ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲಾ. ಅಲ್ಲದೆ ನನ್ನ ಮಗ ರಾಜು ಮೂರನೆತ್ತಿ ಮತ್ತು ಅಳಿಯ ವಿಶಾಲ ಕರ್ಚಿ ಕೂಡಿ ಅಂಕಲಗಿ, ಹೂಲ್ಲೂರ, ಅಫಜಲಪೂರಗೊಬ್ಬೂರ[ಬಿ] ಚಿಣಮಗೇರಾ ಗ್ರಾಮಗಳಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ಯಾರೊ ಕಳ್ಳರು ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಕಪ್ಪು ಬಣ್ಣದ ಹೊಂಡಾ ಸೈನ್ ಸೈಕಲ ಮೋಟಾರ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಲಿಂಗಣ್ಣ ಪೂಜಾರಿ ಸಾ:ಪ್ಲಾಟ ನಂ:61 ದತ್ತ ನಗರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು  ದಿನಾಂಕ  18-01-2014 ರಂದು ರಾತ್ರಿ 9:00 ಗಂಟೆ ಸುಮಾರಿಗೆ ತನ್ನ ಹಿರೊಹೊಂಡಾ  CBZ Extreme  ದ್ವೀಚಕ್ರ ವಾಹನ ನಂ: KA-32 V-8708 ಚೆಸ್ಸಿ ನಂ: MBLKC12EC9GH08292  ಇಂಜಿನ ನಂ: KC12EB9GH07833 ನೇದ್ದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗಿದ್ದು ದಿನಾಂಕ 19-01-2014  ರಂದು ಮುಂಜಾನೆ 8:00 ಗಂಟೆಗೆ ಎದ್ದು ನೋಡಲಾಗಿ ನನ್ನ ದ್ವೀಚಕ್ರ ವಾಹನ ಕಾಣಲಿಲ್ಲ  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ರಟಕಲ್ ಠಾಣೆ : ಶ್ರೀಮತಿ ಕವಿತಾ ಗಂಡ ಮೋಹನ ರಾಠೋಡ ಸಾ||ಕೊರವಿದೊಡ್ಡ ತಾಂಡಾ ರವರು ದಿನಾಂಕ 23-01-2014 ರಂದು 09.00 ಎ.ಎಂ ಸುಮಾರಿಗೆ ನಾನು ನನ್ನ ಗಂಡ ಕೂಡಿ ಹಣಮಂತ ಇತನ ಮನೆ ಹತ್ತಿರ ಹೋದಾಗ ನನ್ನ ಗಂಡನು ಹಣಮಂತನಿಗೆ ನಿನ್ನೆ ನನ್ನ ಹೆಂಡತಿಗೆ ಏನು ಅಂದಿದ್ದಿ ಅಂತ ಕೇಳಿದ್ದಕ್ಕೆ ಹಣಮಂತ ಇತನು ನನ್ನ ಗಂಡನಿಗೆ ನೂಕಿಕೊಟ್ಟು ತನ್ನ ತಮ್ಮನಾದ ಬಲವಂತ ಹಾಗು ಹೆಂಡತಿ ಸುನೀತಾ ಇವಳೊಂದಿಗೆ ಕೂಡಿ  ಅವಾಚ್ಯಬೈದು ನನಗೆ ಹೊಡೆಬಡೆ ಮಾಡಿ ಅವಮಾನ ಮಾಡಿ ಜೀವದಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ಶ್ರೀ ಗುಂಡೇನಾಯಕ ತಂದೆ ದಿಪ್ಲಾನಾಯಕ ರಾಠೋಡ ಸಾ: ಮೇದಕ ತಾಂಡಾ ತಾ : ಸೇಡಂ ರವರ  ಮನೆ ಮತ್ತು ಶಂಕರ ತಂದೆ ತುಳಜ್ಯಾನಾಯಕ ರಾಠೋಡ ಇವರ ಮನೆಯು ಅಕ್ಕ ಪಕ್ಕದಲ್ಲಿ ಇರುತ್ತದೆ ಮತ್ತು ಇಗ ಕೆಲವು ದಿವಸಗಳ ಹಿಂದೆ ನಮ್ಮ ಹುಡುಗರು ಶಂಕರ ತಂದೆ ತುಳಜ್ಯಾನಾಯಕ ರಾಠೋಡ ಇವರ ಮನೆಯ ಹಿಂದೆ ಇರುವ ಖುಲ್ಲಾ ಜಾಗದಲ್ಲಿ ಆಟ ಆಡುತ್ತಾ ಸಂಡಾಸ ಮತ್ತು ಏಕಿ ಮಾಡಿದ್ದಕ್ಕೆ ಇದರ ಬಗ್ಗೆ ಶಂಕರ ಇವನು ನನ್ನ ಸಂಗಡ ತಕರಾರು ಮಾಡುತ್ತಾ ನೀಮ್ಮ ಹುಡುಗರು ನಮ್ಮ ಜಾಗದಲ್ಲಿ ಬಂದು ಹೊಲಸು ಮಾಡುತ್ತಿದ್ದಾರೆ ಅಂತಾ ಜಗಳ ಮಾಡಿದ್ದನು. ಆಗಿನಿಂದ ನನ್ನ ಸಂಗಡ ವೈಮನಸ್ಸು ಹೊಂದಿದ್ದು ದಿನಾಂಕ: 22.01.14 ರಂದು 10 ಪಿ ಎಮ್ ಸುಮಾರಿಗೆ ನಾನು ಮತ್ತು ನಮ್ಮ ತಾಂಡದವರಾದ ರುಖ್ಯಾನಾಯಕ ತಂದೆ ದೇವಜ್ಯಾನಾಯಕ ರಾಠೋಡ, ರಾಜು ತಂದೆ ರುಖ್ಯಾನಾಯಕ ರಾಠೋಡ, ಗುಂಡ್ಯಾನಾಯಕ ತಂದೆ ಪಾಂಡ್ಯಾನಾಯಕ ಚವ್ಹಾಣ ಇವರು ಕೂಡಿ ನಮ್ಮ ಮನೆಯ ಮುಂದೆ ಇರುವ ಕಟ್ಟೆಯ ಮೇಲೆ ಕುಳಿತು ಮಾತಾಡುತ್ತಿದ್ದೇವು ಇದನ್ನು ನೋಡಿ ನಮ್ಮ ಪಕ್ಕದ ಮನೆಯವರಾದ ಶಂಕರ ತಂದೆ ತುಳಜ್ಯಾನಾಯಕ ರಾಠೋಡ, ಗೋಪಾಲ ತಂದೆ ತುಳಜ್ಯಾನಾಯಕ, ಜೈರಾಮ ತಂದೆ ತುಳಜ್ಯಾನಾಯಕ ಹಾಗೂ ಸೇವಾಲಾಲ ತಂದೆ ತುಳಜ್ಯಾನಾಯಕ  ರಾಠೋಡ ಈ ನಾಲ್ಕು ಜನರು ಕೂಡಿ ನನ್ನ ಬಳಿ ಬಂದು ನನ್ನ ಸಂಗಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ಹೀಡಿದು ಜಗ್ಗಿ ಕಟ್ಟೆಯ ಮೇಲಿಂದ ಕೆಳಗೆ ಇಳಿಸಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಶಂಕರ ತಂದೆ ತುಳಜಾ ನಾಯಕ ರಾಠೋಡ ಸಾ || ಮೇದಕ ತಾಂಡಾ ತಾ|| ಸೇಡಂ ಇವರು ನಿನ್ನೆ ದಿನಾಂಕ 22-01-2014 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನಮ್ಮ ತಾಂಡಾದ ಗುಂಡ್ಯಾ ತಂದೆ ದೀಪಲಾನಾಯಕ ರಾಠೋಡ ಇವರ ಮನೆಯ ಮುಂದೆ ಇರುವ ಸಾರ್ವಜನಿಕ ದಾರಿಯಿಂದ ನಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ನಮ್ಮ ತಾಂಡಾದ ಗುಂಡ್ಯಾ ತಂದೆ ದೀಪಲಾ ನಾಯಕ ರಾಠೋಡ ಮತ್ತು ರಾಜು ತಂದೆ ರುಕ್ಯಾನಾಯಕ ರಾಠೋಡ ಇವರು ಗುಂಡ್ಯಾ ತಂದೆ ದೀಪಲಾ ನಾಯಕ ರಾಠೋಡ ಇವರ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತ್ತಿದ್ದರು ನಾನು ಬರುವುದನು  ನೋಡಿ ಅವರು ಏದ್ದು  ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮನೆಯ ಮುಂದಿನ ದಾರಿಯಿಂದ ಯಾಕೆ ಹೋಗುವುದು ಬರುವುದು ಮಾಡುತ್ತಿ ಅಂದು ಕೈಯಿಂದ ಕಟ್ಟಿಗೆಯಿಂದ ಹೋಡೆ ಬಡೆ ಮಾಡಿ ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತಿಗೆ ಹಾನಿ ಮಾಡಿ ಗಾಯಗೊಳಿಸಿದ ಪ್ರಕರಣ :
ಆಳಂದ ಠಾಣೆ : ದಿನಾಂಕ 22/01/2014  ರಂದು ಬೆಳಿಗ್ಗೆ 08 ಗಂಟೆಗೆ  ಬಿದರ ಜಿಲ್ಲೆಯ ನ್ಯೂಟೌನ  ಠಾಣೆಯ ಗುನ್ನೆ ನಂ 15/2014 ಕಲಂ 143 147 148 324 ಐಪಿಸಿ ಸಂ 3 ಪ್ರಿವೇನಸೆನ ಆಪ್ ಡ್ಯಾಮೇಜ ಟು ಪಬ್ಲೀಕ ಪ್ರಾಪರ್ಟಿ ಆಕ್ಟ್‌ 1984  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಠಾಣಾ ಸರಹದ್ದಿನ್ ಆದಾರದ ಮೇಲಿಂದ ಕಡತವನ್ನು ಹೆಚ್‌ಸಿ 736 ಸುಜ್ಞಾನಿ ನೌಟಾನ ಠಾಣೆ ಬಿದರ ರವರು ತಂದು ಹಾಜರು ಪಡಿಸಿದ ಸಾರಾಂಶವೆನೆಂದರೆ ನಾನು ಈ ಮೇಲ್ಕಾಣಿಸಿದ ವಿಳಾಸದವನಿದ್ದು ಬೀದರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯ ಪೇದೆ ಅಂತಾ ಸೇವೆ ಸಲ್ಲಿಸುತ್ತಿದ್ದು ದಿನಾಂಕ 15/01/2014 ರಂದು ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಪೊಲೀಸ್ ಅಧೀಕ್ಷಕರು ಬೀದರ ರವರ ಆದೇಶದ ಮೇರೆಗೆ ಮಾನ್ಯ ಗೃಹ ಮಂತ್ರಿಗಳು ಕರ್ನಾಟಕ ರಾಜ್ಯ ಬೆಂಗಳೂರು ರವರು ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮಕ್ಕೆ ಭೇಟಿಗಾಗಿ ಬರುವವರಿದ್ದ ಕಾರಣ ಬೆಂಗಾವಲು ಕರ್ತವ್ಯ ಕುರಿತು ಪ್ರಭು ಪಾಟೀಲ್ ಆರ್‌‌ಪಿಐ ರವರೊಂದೊಗೆ ನಾನು & ನನ್ನ ಜೋತೆ ಸುನೀಲ್ ಎಪಿಸಿ 300 ಗಿರಿಧರ ಎಪಿಸಿ 348 ಹಾಗೂ ವಾಹನ ಚಾಲಕನಾದ ಶೇಖ್ ಫಾರೂಖ್ ಎಪಿಸಿ 344 ರವರಿಗೆ ನೇಮಿಸಲಾಗಿತ್ತು ಅದರಂತೆ ದಿನಾಂಕ 16/01/2014 ರಂದು ಬೆಳಿಗ್ಗೆ 5 ಗಂಟೆಗೆ ಬೀದರ ಹಬ್ಸಿಕೋಟ ಪ್ರವಾಸಿ ಮಂದಿರದಿಂದ ಮಾನ್ಯ ಗೃಹ ಮಂತ್ರಿಗಳು ಕರ್ನಾಟಕ ರಾಜ್ಯ ಇವರ ಬೆಂಗಾವಲು ಕರ್ತವ್ಯ ಮಾಡುತ್ತಾ ಖಜೂರಿ ಗ್ರಾಮದ ಶಿವಾರದಲ್ಲಿಯ ದಿ|| ಮಲ್ಲಿಕಾರ್ಜುನ ಬಂಡೆ ಪಿಎಸ್‌ಐ ರವರ ಹೊಲದಲ್ಲಿ ಅವರ ಅಂತ್ಯಕ್ರಿಯೆ ಕುರಿತು ಇಂದು 1330 ಗಂಟೆಗೆ ಹೊದೇವು, ಅಲ್ಲಿ ಅಂತ್ಯಕ್ರಿಯೆಗೆ ಸುಮಾರು 20000/- ಜನರು ನೆರೆದಿದ್ದರು ಅದರಲ್ಲಿಯ ಸುಮಾರು 500 ಜನರು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಗಳಲ್ಲಿ ಕಲ್ಲುಗಳನ್ನು ಹಾಗೂ ಮಣ್ಣಿನ ಹೆಂಟೆಗಳನ್ನು ಹಿಡಿದುಕೊಂಡು ನಮ್ಮ ಪೊಲೀಸ್ ಅಧಿಕಾರಿಗಳ ಮೇಲೆ ನಮ್ಮ ಮೇಲೆ ಹಾಗೂ ನಮ್ಮ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲು ಪ್ರಾರಂಭಿಸಿದರು, ಅದರಲ್ಲಿಯ ಒಂದು ಕಲ್ಲು ನನ್ನ ಮುಖದ ಎಡಕೆನ್ನೆಗೆ ಹತ್ತಿ ರಕ್ತಗಾಯ ಆಗಿರುತ್ತದೆ, ಸದರಿ ಉದ್ರಿಕ್ತ ಜನರು ಕಲ್ಲು ತೂರಾಟ ಮಾಡಿದ್ದರಿಂದ ನಮ್ಮ ವಾಹನ ಸಂಖ್ಯೆ ಕೆಎ 38 ಜಿ 352 ಟವೇರಾ ವಾಹನದ ಮಧ್ಯದ & ಹಿಂಭಾಗದ ಗಾಜುಗಳು ಒಡೆದಿರುತ್ತವೆ, & ವಾಹನದ ಬೇರೆ ಬೇರೆ ಭಾಗಗಳಲ್ಲಿ ಕಲ್ಲುಗಳು ಬಿದ್ದಿದರಿಂದ ಅಲ್ಲಲ್ಲಿ ಡ್ಯಾಮೇಜ ಆಗಿರುತ್ತದೆ, ಸುಮಾರು 20000 ದಿಂದ  25000 ಸಾವಿರ ರೂ ಮೌಲ್ಯದ ವಾಹನದ ಸ್ವತ್ತು ಲುಕಸಾನ ಆಗಿರುತ್ತದೆ, ಅಲ್ಲೆ ಇದ್ದ ನಮ್ಮ ಇಲಾಖೆಯ ಇನ್ನೊಂದು ವಾಹನ ನಂ ಕೆಎ 38 ಜಿ 727 ಇನೋವಾ ಕಾರಿನ ಮೇಲೆ ಉದ್ರಿಕ್ತ ಜನರು ಕಲ್ಲು ತೂರಾಟ ಮಾಡಿದ್ದರಿಂದ ಸದರಿ ವಾಹನದ ಬಾಡಿ ಡ್ಯಾಮೇಜ ಆಗಿದ್ದು ಸುಮಾರು 25000 ಸಾವಿರ ರೂ ಮೌಲ್ಯದ ಲುಕಸಾನ ಆಗಿರುತ್ತದೆ, ಮತ್ತು ಕಾರ ನಂ ಕೆಎ 01 ಜಿ 5513 ನೇದ್ದು ಸಹ ಜಖಂ ಆಗಿದ್ದು ಇದರ ಅಂದಾಜು 20000 ಸಾವಿರ ರೂ ಮೌಲ್ಯದ ಲುಕಸಾನ ಆಗಿರುತ್ತದೆ, & ಕಾರ ನಂ ಕೆಎ 01 ಜಿ 5110 ನೇದು ಸಹ ಜಖಂ ಆಗಿದ್ದು ಇದರ ಅಂದಾಜು 15000 ಸಾವಿರ ರೂ ಮೌಲ್ಯದ ಲುಕಸಾನ ಆಗಿರುತ್ತದೆ, ನನಗೆ ಗಾಯಪಡಿಸಿ ಸರ್ಕಾರಿ ವಾಹನಗಳಿಗೆ ಜಖಂ ಮಾಡಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.