POLICE BHAVAN KALABURAGI

POLICE BHAVAN KALABURAGI

08 December 2013

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 07-12-2013 ರಂದು 19-30 ಗಂಟೆಗೆ ರಾಷ್ಟ್ರಪತಿ ವೃತದ ಸಮಿಪ ಹೊಸ ಜೇವರ್ಗಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮೀ  ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು 1. ಹಣಮಂತ ತಂದೆ ಶಿವಶರಣಪ್ಪಾ ಮಾಳಗೆನವರ ಸಾ|| ಅಂಬಿಕಾನಗರ ಗುಲಬರ್ಗಾ 2. ಚೌಡಪ್ಪಾ ತಂದೆ ಶ್ರೀಮಂತ ಕಲ್ಲೂರ ಸಾ|| ಬಿದ್ದಾಪೂರ ಕಾಲೂನಿ  ಅಂತಾ ತಿಳಿಸಿದ್ದು ಸದರಿಯವರಿಂದ 5475/- ರೂ ಮತ್ತು ಎರಡು ಮಟಕಾ ನಂಬರಗಳನ್ನು ಬರೆದ ಚೀಟಗಳನ್ನು ಒಂದು ಬಾಲಪೆನ್ನ ಮತ್ತು ಒಂದು ಮೋಬೈಲ್ ನ್ನು  ಪಂಚರ ಸಮಕ್ಷಮ ವಶಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿವರ ವಿರುಧ್ಧ ಸ್ಟೇಞನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-12-2013 ರಂದು 2:30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ತಹಸೀಲ್ದಾರ ಕಾರ್ಯಲಯಾ ಹತ್ತಿರ ಇದ್ದಾಗ ನಂದರ್ಗಿ ಗ್ರಾಮದ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಬಸ್ಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ  ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಡದೆ ಸಾರ್ವಜನಿಕರಿಂದ ಹಣ ಪಡೆದು ಅವರನ್ನು ಮೋಸ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಶರಣಪ್ಪ ತಂದೆ ಸಾತಲಿಂಗಪ್ಪ ಪಾಸೋಡಿ ವಯ; 50 ವರ್ಷ ಉ; ಕೂಲಿ ಸಾ|| ಲಿಂಗಾಯತ ಸಾ|| ನಂದರ್ಗಿ  ಇವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನ ವಶದಿಂದ 170/- ರೂ ನಗದು ಹಣ ಮತ್ತು ಅಂಕಿ ಸಂಕ್ಯೆ ಬರೆದ ಮಟಕಾ ಚೀಟ ಹಾಗು ಬಾಲ ಪೆನ್ನ ವಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಜಗಪ್ಪ ತಂದೆ ನಾಗಪ್ಪ ಉಪ್ಪಾರ ವ; 28 ವರ್ಷ ಉ; ಕೂಲಿಕೆಲಸ ಜಾ; ಉಪ್ಪಾರಸಾ; ಚಂದ್ರಂಪಳ್ಳಿ ತಾ; ಚಿಂಚೋಳಿ ರವರು ದಿನಾಂಕ 07.12.2013 ರಂದು ನಮ್ಮೂರಿನ ಝರಣಪ್ಪ ತಂದೆ ಗುಂಡಪ್ಪ, ರಾಜಪ್ಪ ತಂದೆ ಗುಂಡಪ್ಪ ಕಂಠೆಪ್ಪ ತಂದೆ ಗುಂಡಪ್ಪ ತುಕ್ಕಪ್ಪ ತಂದೆ ಕಲ್ಲಪ್ಪ ಐದು ಜನರು ಕೂಡಿಕೊಂಡು ಟ್ರ್ಯಾಕ್ಟರ್ ನಂ ಕೆಎ 32. ಟಿಎ 1344 ನೇದ್ದರಲ್ಲಿ ಕುಳಿತುಕೊಂಡು ಸಂಜುಕುಮಾರ ತಂದೆ ಗುಂಡಪ್ಪ ತಗ್ಗಿರವರ ಹೋಲದ ಉಸುಕು ತುಂಬಿಕೊಂಡು ಬರಲು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಹೋದೆವು ಸದರಿ ಟ್ರ್ಯಾಕ್ಟರನ್ನು ನಮ್ಮೂರಿನ  ಅಶೋಕ ತಂದೆ ಚಂದ್ರಪ್ಪ ಮೇತ್ರಿ ಚಲಾಯಿಸುತ್ತಿದ್ದು ನಾವು ಸದರಿಯವರ ಹೋಲದಲ್ಲಿ ಉಸುಕು ತುಂಬಿಕೊಂಡು ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ನಾವೇಲ್ಲರು ಕುಳಿತುಕೊಂಡು ನಮ್ಮೂರ ಕಡೆಗೆ ಬರುವಾಗ ದಾರಿಯಲ್ಲಿ ನಮ್ಮೂರಿನ ಗೋಪಾಲ ನಾಗಪ್ಪ ತುಮಕುಂಟಾ ಎಂಬುವವನು ಕೈ ಸನ್ನೆ ಮಾಡಿ ಟ್ರ್ಯಾಕ್ಟರ ನಿಲ್ಲಿಸಲು ಕೇಳಿದಾಗ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿದ್ದು ಆಗ ಅವನು ಸಹ ನಮ್ಮೋಂದಿಗೆ ಉಸುಕು ತುಂಬಿದ ಟ್ರ್ಯಾಕ್ಟರನಲ್ಲಿ ಕುಳಿತುಕೊಂಡನು ನಂತರ ಮತ್ತೆ ಟ್ರ್ಯಾಕ್ಟರ ಚಾಲು ಮಾಡಿಕೊಂಡು ನಮ್ಮೂರ ಕಡೆ ಬರುತ್ತಿದ್ದಾಗ ಸದರಿ ಟ್ರ್ಯಾಕ್ಟರ ಚಾಲಕನಾದ ಅಶೋಕನು ಟ್ರ್ಯಾಕ್ಟರನ್ನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮೂರ ಶ್ರೀ ಮಾಣಿಕರೆಡ್ಡಿ ರವರ ಹೋಲದ ಹತ್ತಿರವಿರುವ ಬ್ರೀಡ್ಜ್ [ಫೂಲ್] ದಾಟುತ್ತಿದ್ದಂತೆಯೇ ಒಮ್ಮೆಲೆ ಎಡಗಡೆ ಬ್ರಿಡ್ಜ್ ದ ಕೆಳಗೆ ಟ್ರ್ಯಾಕ್ಟರನ್ನು ಪಲ್ಟಿ ಮಾಡಿದ್ದು ಆದ್ದರಿಂದ ನನಗೆ, ಝರಣಪ್ಪ ತಂದೆ ಗುಂಡಪ್ಪ ಹೋಸಮನಿ, ರಾಜಪ್ಪ ತಂದೆ ಗುಂಡಪ್ಪ ವಗ್ಗಿ, ಕಂಠೆಪ್ಪ ತಂದೆ ಗುಂಡಪ್ಪ ಮುನ್ನೂರ, ಗೋಪಾಲ ತಂದೆ ನಾಗಪ್ಪ ತುಮಕುಂಟಾ ರವರುಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ತುಕ್ಕಪ್ಪ ತಂದೆ ಕಲ್ಲಪ್ಪ ಮೊಗಡಂಪಳ್ಳಿ ಎಂಬುವವನಿಗೆ ತಲೆಯ ಹಿಂಬದಿಗೆ ಭಾರಿ ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು, ಸದರಿ ಟ್ರ್ಯಾಕ್ಟರ್ ಚಾಲಕನಾದ ಅಶೋಕನಿಗೂ ಸಹ ತಲೆಯ ಎಡಬದಿಗೆ ಭಾರಿರಕ್ತಗಾಯ ಎಡಹಣೆಗೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಗಿಸುತ್ತಿದ್ದ ಲಾರಿ ವಶ :
ಅಫಜಲಪೂರ ಠಾಣೆ :  ದಿನಾಂಕ 30-11-2013 ರಂದು ಬೆಳಿಗ್ಗೆ 11:15 ಗಂಟೆಗೆ ಪಿಸಿ 530 ಜಗನ್ನಾಥ, ಮತ್ತು ಪಿಸಿ 894 ನಿಂಗಣ್ಣ ರವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಮಣೂರ, ಮಶಾಳ, ಶಿರವಾಳ ಗ್ರಾಮ ಕಡೆ ಹೋಗಿ ಮರಳಿ ಇಂದು ದಿನಾಂಕ 01-12-2013 ರಂದು ಬೆಳಿಗ್ಗೆ 08;00 ಗಂಟೆಗೆ ಅಫಜಲಪೂರ ಪಟ್ಟಣದ ಬಸವೇಶ್ವರ ವೃತ್ತ ಹತ್ತರಿ ಇದ್ದಾಗ ಖಚೀತ ಬಾತ್ಮಿ ಬಂದಿದ್ದು ಎನೆಂದರೆ, ಆನೂರ ಗ್ರಾಮ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟಿಪ್ಪರನಲ್ಲಿ ಮರಳು ತುಂಬಿ ಕೊಂಡು ಮಲ್ಲಾಬಾದ ಗ್ರಾಮ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ನನ್ನೊಂದಿಗೆ ಪಂಚರನ್ನು ಬರಮಾಡಿಕೊಂಡು  ಸಿಬ್ಬಂದಿಯವರೊಂದಿಗೆ ನಮ್ಮ ವಾಹನದಲ್ಲಿ ಬೆಳಿಗ್ಗೆ 08;15 ಗಂಟೆಗೆ ಹೊರಟು 08;30 ಗಂಟೆಗೆ ಮಾತೋಳಿ ಕ್ರಾಸ್ ಹತ್ತಿರ ನಮ್ಮ ವಾಹನ ನಿಲ್ಲಿಸಿದೆವು. ನಂತರ 08;40 ಗಂಟೆಗೆ ಆನೂರ ಗ್ರಾಮದ ಕಡೆಯಿಂದ ಒಂದು ಸಣ್ಣ ಟಿಪ್ಪರ ಬರುತ್ತಿದ್ದು, ಅದನ್ನು ನೋಡಿ ನಾವು ನಿಲ್ಲಿಸಿದೆವು ಸದರಿ ವಾಹನ  ಚಾಲಕನನ್ನು ಕರೆಯಿಸಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಯಲ್ಲಪ್ಪ ತಂದೆ ಈರಣ್ಣ ಜಮಾದಾಸ ಸಾ|| ಅತನೂರ ಅಂತಾ ತಿಳಿಸಿದನು ವಾಹನದಲ್ಲಿ ಏನಿದೆ ಅಂತಾ ಕೇಳಲಾಗಿ ತಡಪಡಿಸುತ್ತಾ ಮರಳು ಇದೆ ಅಂತಾ ಹೇಳಿದನು, ಆಗ ನಾನು ಪಂಚರ ಸಮಕ್ಷಮ ವಾಹನ ಚಕ್ಕ ಮಾಡಲು ವಾಹನದಲ್ಲಿ ಮರಳು ಇತ್ತು, ಈ ಬಗ್ಗೆ ಚಾಲಕನಿಗೆ ಸಂಬಂಧಪಟ್ಟ ಅಧೀಕಾರಿಯವರಿಂದ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿ ಅಲ್ಲೆ ಬಾಜು ಇದ್ದ ಕಬ್ಬಿನ ಹೊಲದಲ್ಲಿ ಓಡಿದನು. ನಾವು ಬೆನ್ನಟ್ಟಿ ಹುಡುಕಾಡಿದರು ಸಿಗಲಿಲ್ಲಾ. ಸದರಿ ಮಹಿಂದ್ರಾ ಟಿಪ್ಪರ ನಂ ಕೆ-33 ಎ0154 ಅಂತಾ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಪಂಚರ  ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿ ಮರಳು ತುಂಬಿದ ಟಿಪ್ಪನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

07 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ:06-12-2013 ರಂದು 10 ಎ.ಎಮ್. ಸುಮಾರಿಗೆ ಬಸವರಾಜ ತಂದೆ ಕರಬಸಪ್ಪಾ ಕಲಬುರ್ಗಿ ರವರ ತಮ್ಮ ಸಿದ್ದಾರೂಡ ಹಾಗೂ ಆತನ ಅಕ್ಕಳ ಮಗಳಾದ ಲಕ್ಷ್ಮೀ @ ವಿಜಯ ಲಕ್ಷ್ಮೀ ಇಬ್ಬರು ಅಡಕಿ ಗ್ರಾಮಕ್ಕೆ ಹೋಗಿ ಸಾಮಾನು ತೆಗೆದುಕೊಂಡು ಮೊಟಾರ ಸೈಕಲ ನಂ. ಕೆ.ಎ. 32 ಕ್ಯೂ 657 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಗುಲ್ಬರ್ಗಾ ಸೇಡಂ ರಸ್ತೆಯ ಮುಗಟಾ ಗ್ರಾಮದ ಡೊದ್ಮನಿ ಕಂಕರ ಮಶೀನ ಹತ್ತಿರ ರೋಡಿನ ಮೇಲೆ 5.30 ಪಿ.ಎಮ್. ಸುಮಾರಿಗೆ ಬರುತ್ತಿರುವಾಗ ಎದುರಿನಿಂದ ಮೊಟಾರ ಸೈಕಲ ನಂ. ಕೆ.ಎ 25 ಕ್ಯೂ 5629 ನೇದ್ದರ ಚಾಲಕ ಬಸವರಾಜ ತಂದೆ ಕರಬಸಪ್ಪ ಈತನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮುಖ ಮುಖಿ ಡಿಕ್ಕಿ ಪಡಿಸಿದ್ದರಿಂದ ಸಿದ್ದಾರೂಡ ಈತನಿಗೆ ತಲೆ ಹಿಂದೆ ಭಾರಿ ರಕ್ತಗಾಯ ವಾಗಿ ಕಿವಿ ಯಿಂದ ಮೂಗಿನಿಂದ ರಕ್ತ ಬಂದು ಲಕ್ಷ್ಮೀ @ ವಿಜಯ ಲಕ್ಷ್ಮೀ ಇವಳಿಗೆ ತಲೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯ ವಾಗಿ ಡಿಕ್ಕಿ ಪಡಿಸಿದ ಮೊಟಾರ ಸೈಕಲ ಸವಾರ ಬಸವರಾಜ ಈತನಿಗೂ ತಲೆಗೆ ಭಾರಿಗುಪ್ತಗಾಯವಾಗಿ ಉಪಚಾರ ಕುರಿತು ಅಂಬುಲೆನ್ಸ್ ದಲ್ಲಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಬಂದಾಗ ಸಿದ್ದಾರೂಡ ಹಾಗೂ ಬಸವರಾಜ ಇಬ್ಬರು ದಿನಾಂಕ: 06-12-2013  ರಂದು 6 ಪಿ.ಎಮ್. ಸುಮಾರಿಗೆ ಮೃತ್ತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ :  ದಿನಾಂಕ 05-12-2013 ರಂದು ರಾತ್ರಿ 08-30 ಪಿ.ಎಮ್ ಕ್ಕೆ ಶ್ರೀ ಸೈಯದ ಅನ್ವ ಅಲಿ ತಂದೆ ಅಜಗರ ಅಲಿ, ಸಾಃ ಸೋನಿಯಾ ಗಾಂಧಿ ನಗರ ಗುಲಬರ್ಗಾ ತನ್ನ ಮನೆಗೆ ಹೊಗುವ ಕುರಿತು ಕೆ.ಬಿ.ಎನ್ ದರ್ಗಾ ರೋಡಿಗೆ ಇರುವ ಲಿಲ್ಲಿ ರೋಜಾ ಶಾಲೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32   4655 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಪಘಾತದಿಂದ ಬಲಗಾಲು ಮೊಳಕಾಲು ಕೆಳಗೆ ಭಾರಿ ಪೆಟ್ಟಾಗಿದ್ದು ಎಡಗೈ ಮೊಳಕೈ ಹತ್ತಿರಎಡಗಾಲು ಮೊಳಕಾಲು ಮತ್ತು ಹಿಮ್ಮಡಿಯ ಹತ್ತಿರ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು ರಾತ್ರಿ ಸಮಯದಲ್ಲಿ ಶ್ರೀ ಸಮೀರ ತಂದೆ ಮಹಿಬೂಬ ಪಟೇಲ  ಸಾಃ ವಿದ್ಯಾ ನಗರ ಗುಲಬರ್ಗಾ ರವರು ಮತ್ತು ಆತನ ಗೆಳೆಯನಾದ ಸೂಪಿಯಾನ ಇಬ್ಬರು ಕೂಡಿ ಸೂಫಿಯಾನ ಈತನ ಮೋಟಾರ ಸೈಕಲ ಮೇಲೆ ಕೆ.ಬಿ.ಎನ್ ದರ್ಗಾ ಕಡೆ ಕೆಲಸ ಇರುವದರಿಂದ ಇಬ್ಬರು ಕೂಡಿ ಹೋಗಿ 11-45 ಎಮ್.ಕ್ಕೆ ಸೂಫಿಯಾನ ಈತನ ಮೋಟಾರ ಸೈಕಲ ನಂ.ಕೆ.ಎ 27 ಕೆ 3912 ನೇದ್ದರ ಮೇಲೆ ಫಿರ್ಯಾದಿ ಹಿಂದೆ ಕುಳಿತು ಬರುತ್ತಿದ್ದಾಗ ಆರೋಪಿ ಸೂಫಿಯಾನ ಇತನು ತನ್ನ ಮೋಟಾರ ಸೈಕಲ ಡಂಕಾ ಕ್ರಾಸ್ ಹತ್ತಿರ ಇರುವ ಝಮ ಝಮ ಹೋಟೆಲ ಮುಂದೆ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆಯಲು ಹೋಗಿ ಬ್ರೇಕ್ ಹಾಕಿದ್ದರಿಂದ ಸ್ಕಿಡ್ ಆಗಿ ಇಬ್ಬರು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು  05-12-2013 ರಂದು ರಾತ್ರಿ 09-00 ಗಂಟೆಗೆ ಶ್ರೀಕಾಂತ ತಂದೆ ಶಾಮರಾವ ಮುರಗಾನೊರ, ಸಾಃ ಮಾಣಿಕೇಶ್ವರಿ ಕಾಲೂನಿ ಗುಲಬರ್ಗಾ ಇವರಿಗೆ ಧನರಾಜ ತಂದೆ ರಾಮಚಂದ್ರ ಸಗರಕರ,  ಸಾಃ ಭೋವಿಗಲ್ಲಿ ಸಾಃ ಸರಾಫ ಬಜಾರ ಗುಲಬರ್ಗಾ ಇವರು ಹೋಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇಡಿ 8567ನೇದ್ದರ ಮೇಲೆ ಹಿಂದೆ ಕುಳಿತು ಬರುತ್ತಿದ್ದಾಗ ಧನರಾಜ ಈತನು ತನ್ನ ಆಕ್ಟೀವಾ ಹೊಂಡಾ ಮೋಟಾರ ಸೈಕಲ ನೇದ್ದು ಫಿಲ್ಟರ ಬೆಡ್ ಎದರುಗಡೆ ಮುಸ್ಲಿಂ ಸಂಘ ಕ್ರಾಸ್ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಎಮ್ಮೆಲೆ ಬ್ರೆಕ್ ಹಾಕಿ ಆಯಾ ತಪ್ಪಿ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-12-2013 ರಂದು ರಾಜೇಂದ್ರ ತಂದೆ ಶಿವಪ್ಪಾ ಕೊರಳ್ಳಿ, ಸಾ : ನಂ. 185, ಡಿ.ಎ.ಆರ್ ಕೇಂದ್ರ ಸ್ಥಾನ, ಗುಲಬರ್ಗಾ ರವರು ಕೆ.ಜಿ.ಐ.ಡಿ ಆಫೀಸಕ್ಕೆ ಹೋಗುವ ಕುರಿತು ಭಾಂಡೆ ಬಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ. 32 ಎನ್.2325 ನೇದ್ದರ ಚಾಲಕ ರಾಘವೇಂದ್ರ ತನ್ನ ಕಾರನ್ನು ಜೆ.ಬಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾಧಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆತರಚಿದ ರಕ್ತಗಾಯ ವಾಗಿ ಹಿಮ್ಮಡಿಯ ಮೇಲ್ಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06-12-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ  ಶ್ರೀ ರುಕುಂಬೀ ಗಂಡ ಜಾಫರಸಾಬ ಮುಜಾವರ  ಸಾ : ಬಬಲಾದ (ಎಸ್) ಮತ್ತು ಆಕೆ ಮಗಳು ನಿಂತಾಗ ಇಬ್ರಾಹಿಂ ತಂದೆ ಮೌಲಾಸಾಬ ಅತನೂರ ಇವನು ತನಗೆ ಬೀಸಿದ ಹಣ 100 ರೂ ಕೊಡು ಅಂತಾ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ  ಬೈದು ಕಲ್ಲಿನಿಂದ ಫಿರ್ಯಾದಿ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಜಗಳಾ ಬಿಡಿಸಲು ಬಂದು ಜರೀನಾಬೇಗಂ ಇವಳಿಗೆ ಎಡ ರಟ್ಟೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 December 2013

Gulbarga District Reported Crime

ಅಪಹರಣ ಪ್ರಕರಣ :
ಮಳಖೇಡ ಠಾಣೆ : ದಿನಾಂಕ  06-12-2013 ಕ್ಕೆ ಮಧ್ಯಾಹ್ನ ೦1:00 ಗಂಟೆಗೆ ಮಹಾದೇವಿ  ಗಂಡ ಜಗನ್ನಾಥ ಕಂಬಾರ  ಸಾ|| ಶಾಪೂರ ದರ್ಗಾ ಹತ್ತಿರ ಮಳಖೇಡ ತಾ|| ಸೇಡಂ ಇವರ ಮಗಳಾದ ಕುಮಾರಿ ಕಾವೇರಿ ವಯ: 15 ವರ್ಷ ಇವಳಿಗೆ ನಮ್ಮ ಗ್ರಾಮದ ಮಹ್ಮದ್ ಖಲೀಲ ತಂದೆ ಗೌಸ್‌ ಪಾಶಾ ಈತನು  ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.