POLICE BHAVAN KALABURAGI

POLICE BHAVAN KALABURAGI

14 November 2013

Gulbarga District Reported Crimes

ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಯಶ್ವಂತರಾಯ ತಂದೆ ಶಿವಶರಣಪ್ಪಾ ಪರಪ್ಪಗೋಳ ಸಾ: ಜೋಗೂರ ರವರು ದಿನಾಂಕ 13-11-2013 ರಂದು ಬೆಳಗ್ಗೆ ನಮ್ಮೂರಿನ ಮಲ್ಲು ಬಡದಾಳ ಇವರ ಹೊಟೆಲ ಮುಂದೆ ಕುಳಿತ್ತಿದ್ದಾಗ ನಮ್ಮೂರಿನ ನಮ್ಮ ಅಣ್ಣ ತಮ್ಮಕೀಯವರಾದ 1. ನಿಂಗಣ್ಣ ಪರಪ್ಪಗೋಳ 2. ರಮೇಶ ಪರಪ್ಪಗೊಳ 3. ಮಲ್ಲು ಪರಪ್ಪಗೋಳ 4. ಬಲವಂತ ಪರಪ್ಪಗೊಳ 5. ಗುರಲಿಂಗಪ್ಪ ಪರಪ್ಪಗೋಳ 6. ಈರಣ್ಣಾ ಪರಪ್ಪಗೋಳ 7. ಶರಣಮ್ಮಾ ಪರಪ್ಪಗೋಳ 8. ಪಾರ್ವತಿ ಪರಪ್ಪಗೋಳ 9. ಶರಣಮ್ಮ ಗಂಡ ನಿಂಗಪ್ಪ 10. ಸುರೇಶ ಪರಪ್ಪಗೋಳ ಇವರೆಲ್ಲರೂ ಕೂಡಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ನಿನ್ನೆ ಅವರ ಹೊಲದಲ್ಲಿ ತೋಗಿರಿ ಬೆಳೆಯನ್ನು ಎಮ್ಮೆ ಮೆಯಿಸಿದ ವಿಚಾರದಲ್ಲಿ ಜಗಳ ತೆಗೆದು ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 13-11-2013 ರಂದು  ಬೆಳಗ್ಗೆ 8 ಗಂಟೆಗೆ ನಮ್ಮ ಅಣ್ಣತಮ್ಮಕೀಯ ಗುರುಲಿಂಗಪ್ಪಾನ ಮನೆ ಎದರು ರಸ್ತೆಯ ಮೇಲೆ ಜಗಳವಾಡುವ ಗೌಳಿ ಕೇಳಿ ಮನೆಯಲ್ಲಿದ್ದ ನಾನು ,ನನ್ನ ಹೆಂಡತಿ ಶಕುಂತಲಾ ,ಮಕ್ಕಳಾದ ನಿಂಗಣ್ಣಾ, ಮಲ್ಲಿಕಾರ್ಜುನ ,ರಮೇಶ ಎಲ್ಲರೂ ಕೂಡಿ ಓಡಿ ಹೋಗಿ ನೋಡಲಾಗಿ ಅಲ್ಲಿ ನಮ್ಮ ಅಣ್ಣತಮ್ಮಕೀಯ ಯಶವಂತ್ರಾಯ , ಭೀಮರಾಯ, ಸಿದ್ದಣ್ಣ, ಸಿದ್ದಪ್ಪಾ ತಂದೆ ಬೀಮರಾಯ ,ಮಂಜುನಾಥ, ಸಂತೋಷ, ಮಲ್ಲಣ್ಣಾ ತಂದೆ ಸಿದ್ದಪ್ಪಾ, ಮಲ್ಲಿಕಾರ್ಜುನ ತಂದೆ ಶಂಕ್ರೇಪ್ಪಾ, ಉಮೇಶ, ಚೆನ್ನಪ್ಪಾ, ಕಮಲಾಬಾಯಿ ಗಂಡ ಬೀಮರಾಯ, ಬಸಮ್ಮಾ ಗಂಡ ಯಶ್ವಂತ್ರಯ, ಭಾಗಮ್ಮಾ ಗಂಡ ಸಿದ್ದಪ್ಪಾ, ಭಾಗಮ್ಮಾ ಗಂಡ ಮಲ್ಲಿಕಾರ್ಜುನ, ರೇಣುಕಾ ಮತ್ತು ಉಮಾಬಾಯಿ ಇವರೆಲ್ಲರೂ ಸೇರಿ ನಮ್ಮ ಅಣ್ಣತಮ್ಮಕೀಯ ಗುರುಲಿಂಗಪ್ಪಾನ ಮಗನಾದ ಈರಣ್ಣನಿಗೆ ನಮ್ಮ ತೊಗರಿ ಬೆಳೆಯಲ್ಲಿ ಎತ್ತುಗಳು ಉದ್ದೇಶ ಪೂರ್ವಕವಾಗಿ ಬಿಟ್ಟಿದ್ದಿರಿ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾವು ಅವರಿಗೆ ಸುಮ್ಮನೆ ಯಾಕೇ ವಿನಕಾರಣ ಬೈಯುತ್ತಿದ್ದಿರಿ ದನಗಳು ಮೂಕ ಜಾನವಾರ ಅವು ತಾನಾಗಿಯೆ ಹೋಗಿವೆ ಇಷ್ಟಕ್ಕೆ ಸುಮ್ಮನೆ ಜಗಳ ಬಿಡ್ರೀ ಅಂತಾ ನಾನು ಮತ್ತು ನನ್ನ ಮಗನಾದ ನಿಂಗಣ್ಣಾ ಹೇಳುತ್ತಿರುವಾಗ ಎಲ್ಲರು ಸೇರಿ ನನಗೆ ಮತ್ತು ನನ್ನ ಮಗ ನಿಂಗಣ್ಣ ಇವನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಬಲವಂತರಾಯ ತಂದೆ ನಾಗಲಿಂಗಪ್ಪಾ ಪರಪ್ಪಗೋಳ ಸಾ: ಜೋಗೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾಹಾಗಾಂವ ಠಾಣೆ : ಶ್ರೀಮತಿ ಗೀತಾ ಗಂ, ಆನಂದಕುಮಾರ  ಹರಸೂರಕರ್,  ರವರಿಗೆ  2 ವರ್ಷದ ಹಿಂದೆ ತನ್ನ ಗಂಡನಾದ ಆನಂದ ಕುಮಾರ ಇತನೊಂದಿಗೆ ಮದುವೆಯಾಗಿದ್ದು ಈಗ 8 ತಿಂಗಳ ಹಿಂದೆ ಬಸವ ಕಲ್ಯಾಣ ತಾಲೂಕಿನ ಖೇಲ್ಡಾ(ಕೆ) ಗ್ರಾಮದ ಪೂಜಾ ತಂ, ನಾಂಗೇಂದ್ರಪ್ಪ ಕಾಂಬಳೆ ಜಾ||ಹರಿಜನ, ಇವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಈಗ 5-6 ದಿವಸಗಳ ಹಿಂದೆ ತನ್ನ ಗಂಡನು ಮನೆ ಬಿಟ್ಟು ಹೋಗಿದ್ದು 2 ದಿವಸಗಳ ಹಿಂದೆ ತಾನು ತನ್ನ ಅತ್ತೆಯಾದ ಜಗದೇವಿ ಕೂಡಿ ಅಲ್ಲಿಗೆ ಹೋಗಿ ವಿಚಾರ ಮಾಡಿದರೆ ತಮ್ಮೊಂದಿಗೆ ಜಗಳ ಮಾಡಿದ್ದು ದಿನಾಂಕ: 12-11-2013  ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪೂಜಾ ತಂ, ನಾಗೇಂದ್ರ ಕಾಂಬಳೆ ಅವಳ ತಮ್ಮ ಅಂಬ್ರೇಶ ತಂ, ನಾಗೇಂದ್ರ ಕಾಂಬಳೆ ಅವಳ ತಾಯಿ ಪಾರ್ವತಿ ಗಂ, ನಾಗೇಂದ್ರ ಕಾಂಬಳೆ ಇವರೆಲ್ಲರೂ ಮನೆಗೆ ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಹೊಡೆಬಡೆ ಮಾಡಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

13 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ನರಸಿಂಗರಾವ, ತಂದೆ ಸಾತೋಜಿ, ಸಾಃ ಮಕ್ತಂಪೂರ ಹೋಳಿಕಟ್ಟಾ ಗುಲಬರ್ಗಾ ರವರು ದಿನಾಂಕ 12-11-2013 ರಂದು  ಡಂಕಾ ಕ್ರಾಸ್ ರೋಡಿಗೆ ಇರುವ ಸಾತ ಗುಂಬಜ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಎಸ್.ಟಿ.ಬಿ.ಟಿ ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನರಸಿಂಗರಾವ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ರಕ್ತಗಾಯವಾಗಿಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರತಾಬಾದ ಠಾಣೆ : ದಿನಾಂಕ 12-11-2013 ರಂದು ಮದ್ಯಾಹ್ನ 1230 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ನಂ: 218 ರ ರಸ್ತೆಯ ಮೇಲೆ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ  ಗುಲಬರ್ಗಾ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ವಾಹನವನ್ನು ರಾಷ್ಟ್ರೀಯ ಹೆದ್ದಾರಿಯ 218 ರ ರಸ್ತೆಯ ಮೇಲೆ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರೋಡಿನ ಮೇಲೆ ಅತೀವೇಗದಿಂದ, ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿದ್ದನ್ನು ನೋಡಿ ಸದರಿ ಟಿಪ್ಪರ ನಿಲ್ಲಿಸಲು ಸೂಚಿಸಿದ್ದರೂ ಸದರಿ ಟಿಪ್ಪರ ಚಾಲಕನು ಅತಿವೇಗದಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ್ದರಿಂದ ಕೈ ಮಾಡಿದ ಜಾಗದಲ್ಲಿ ನಿಲ್ಲಿಸದೆ ಮುಂದೆ ಹೋಗಿ ನಿಲ್ಲಿಸಿದ್ದು, ಸದರಿ ಟಿಪ್ಪರ ನಂಬರ ನೊಡಲಾಗಿ ಟಿಪ್ಪರ ನಂ: ಕೆಎ-28/ಬಿ-0397  ನೇದ್ದು ಇದ್ದು ಸದರಿ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಖಂಡಪ್ಪಾ ತಂದೆ ಶಿವನಾಥ ಮೂಲಗೆ ಉ: ಚಾಲಕ ಸಾ:ಚಿಂಚೋಳಿ(ಬಿ) ತಾ:ಆಳಂದ ಜಿ:ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನು ತನ್ನ ಟಿಪ್ಪರ ನಂ: ಕೆಎ-28/ಬಿ-0397 ನೇದ್ದನ್ನು ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆಯ ಮೇಲೆ ಅತಿವೇಗದಿಂದ ಮತ್ತು ನಿರ್ಲಕ್ಷ್ಯತನದಿಂದ ಮಾವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ಮೇಲೆ ಚಲಾಯಿಸಿದ್ದರಿಂದ ಸದರಿಯವನ ಮೇಲೆ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

12 November 2013

Gulbarga District Reported Crimes

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಕು: ಅಭಿಷೇಕ ತಂದೆ ಚಂದ್ರಕಾಂತ ರವರು ದಿನಾಂಕ 11-11-2013 ರಂದು 4-30 ಗಂಟೆ ಸುಮಾರಿಗೆ ಬೈಸಿಕಲ ಮೇಲೆ ಇಂಟರ ನ್ಯಾಷನಲ ಪಬ್ಲಿಕ ಶಾಲೆಯಿಂದ ಪಟೇಲ ಸರ್ಕಲ ಮುಖಾಂತರ ಆರ್.ಪಿ ಸರ್ಕಲ ಕಡೆಗೆ ಹೋಗುತ್ತಿದಾಗ ನೊಬಲ ಸ್ಕೂಲ ಎದುರು ರೋಡಿನ ಮೇಲೆ ಹಿಂದಿನಿಂದ ಒಬ್ಬ ಟಾಟಾ ಸೊಮೊ ಜೀಪ ನಂಬರ ಕೆಎ-35 ಎ-2880 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೈಸಿಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.