POLICE BHAVAN KALABURAGI

POLICE BHAVAN KALABURAGI

03 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ರಾಮಲಿಂಗಯ್ಯ ತಂದೆ ಶರಣಯ್ಯ ಮಂಠಾಳ ಸಾ; ಕಮಲಾಪೂರ ತಾ;ಜಿ ಗುಲಬರ್ಗಾ ಇವರು ದಿನಾಂಕ: 01-11-2013 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ತನ್ನ ಅಟೋ ರಿಕ್ಷಾದೊಂದಿಗೆ ಕಮಲಾಪುರ ಬಸ್ ನಿಲ್ದಾಣದ ಹತ್ತಿರ ಇರುವ ಸಲಾವುದ್ದೀನ ಗ್ಯಾರೇಜ್ ಎದುರುಗಡೆ ನಿಂತಾಗ ನಮ್ಮೂರ ಬಸಪ್ಪ ತಂದೆ ಪರುತಪ್ಪ  ನಾಗೂರ ಈತನು ಜಗದೀಶ ದೊಶೆಟ್ಟಿ ಇವರ ಹಳೆಯ ಹೊಟೇಲ್ ಕಡೆಯಿಂದ ಸಲಾವುದ್ದೀನ್ ಗ್ಯಾರೇಜ್ ಕಡೆಗೆ ಬರುವದಕ್ಕಾಗಿ ರೋಡ ಧಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ ಒಂದು  ಸ್ಕಾರ್ಫಿಯೋ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಧಾಟುತ್ತಿದ್ದ ಬಸಪ್ಪ ನಾಗೂರ ಈತನಿಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದನು. ಸದರಿ ಬಸಪ್ಪನಿಗೆ ತಲೆಗೆ ಭಾರಿ ಗಾಯವಾಗಿ ಕೆಳಗೆ ಬಿದ್ದನು. ಜನರು ಸೇರಿದ್ದರಿಂದ ಸ್ಕಾರ್ಫಿಯೋ ವಾಹನ ಚಾಲಕನು ತನ್ನ ವಾಹನವನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದನು.ಸ್ಕಾರ್ಫಿಯೋ ವಾಹನ ನಂಬರ ನೋಡಲಾಗಿ ಎಮ್‌‌.ಹೆಚ್‌.13. ಎಎನ್‌.9191 ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ನಾಗೇಶ ತಂದೆ ಮನೋಹರ ಹಂಚೆ ಸಾ: ಶಹಾ ಗಂಜ್ ಬೀದರ ಎಂದು ಹೇಳಿದನು. ಬಹಳಷ್ಟು ಜನರು ಸೇರಿರುವದರಿಂದ ಸ್ಕಾರ್ಫಿಯೋ ವಾಹನ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು  ಅಲ್ಲಿಂದ ಓಡಿ ಹೋಗಿದ್ದು ಬಸಪ್ಪ ಈತನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ದಿನಾಂಕ 02-11-2013 ರಂದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : 01-11-13 ರಂದು ಕುರಿಕೋಟಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎದುರುಗಡೆ ರಾಷ್ಟ್ರಿಯ ಹೆದ್ದಾರಿ 218 ರ ಮೇಲೆ ರಾತ್ರಿ 7.45 ಗಂಟೆಗೆ ಗುಲಬರ್ಗಾ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ ನಂ ಕೆ,ಎ 51 ಇಸಿ, 767 ಹಾಗೂ ಮಹಾಗಾಂವ ಕ್ರಾಸ ಕಡೆಯಿಂದ ಹೋಗುತ್ತಿದ್ದ ಬುಲೆರೊ ಜೀಪ ನಂ ಕೆ,ಎ, 40 ಜಿ,0346 ನೇದ್ದರ ಮದ್ಯ ಮುಖಾಮುಖಿ ಅಪಘಾತವಾಗಿದ್ದು ಮೋಟಾರ ಸೈಕಲ ಮೇಲೆ ಸವಾರಿದ್ದ ಸುಭಾಷ ತಂ ಚನ್ನಪ್ಪ ಮಣಕೊಜಿ ಸಾ|| ಕೊಹಿನೂರ ,ಕಲ್ಯಾಣಿ ತಂ ಸಿದ್ರಾಮಪ್ಪ ಪವಾಡಶಟ್ಟಿ ಸಾ|| ಕೊಹಿನೂರ ತಾ|| ಬಸವಕಲ್ಯಾಣ ಜಿ|| ಬೀದರ ಇವರು ಮೃತಪಟ್ಟಿದ್ದು . ಲಕ್ಷ್ಮಿಕಾಂತ ತಂ ವೀರಣ್ಣ ಪರಾಂಡೆ ಸಾ|| ಕೊಹಿನೂರ ಇತನಿಗೆ ಭಾರಿ ಗಾಯಗಳಾಗಿರುತ್ತವೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದ ಬುಲೇರೊ ಜೀಪ ಕೆ,ಎ, 40 ಜಿ,0346 ನೇದ್ದು ಪೊಲೀಸ ಇಲಾಖೆಯ ಜೀಪ ಆಗಿದ್ದು ಜೀಪ ಚಾಲಕನ ಹೆಸರು ವೀರಾರೆಡ್ಡಿ ಅಂತಾ ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 01-11-2013 7.45 ಪಿ,ಎಮ್,ಕ್ಕೆ ಮೊಟರ ಸೈಕಲ್ ನಂ ಕೆ,ಎ, 51 ಇ,ಸಿ, 767 ನೇದ್ದರ ಚಾಲಕ ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವೀರಾರೆಡ್ಡಿ ಎ,ಪಿ,ಸಿ 55 ಡಿ,ಎ,ಅರ್, ಕೇಂದ್ರ ಸ್ಥಾನ ಗುಲಬರ್ಗಾ  ಅಂತರಿಕ ಭದ್ರತೆವಿಭಾಗ ದಲ್ಲಿ ಪೊಲೀಸ ಇಲಾಖೆಯ ವಾಹನ ಸಂಖ್ಯೆ ಕೆ,ಎ, 40 ಜಿ.0346 ಬುಲೆರೋ ಜೀಪಿನ ಚಾಲಕ ಇವರ ಬುಲೇರೊ ಜೀಪಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಇದರಿಂದ ನನಗೆ ಸಾದಾ  ರಕ್ತಗಾಯವಾಗಿದ್ದು ಜೀಪ ಜಖಂ ಗೊಂಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ಶಂಕರ ತಂದೆ ಪಾಂಡುರಂಗ ರಾಠೋಡ ಸಾ; ಚೌಕಿ ತಾಂಡಾ ಚಿಮ್ಮನಚೋಡ ತಾ;ಚಿಂಚೋಳಿ ರವರು ದಿನಾಂಕ 31.10.2013 ರಂದು ಸಾಯಂಕಾಲ 3.30 ಗಂಟೆ ಸುಮಾರಿಗೆ ಚಿಮ್ಮಾಇದಲಾಯಿ ಕ್ರಾಸ ದಾಟಿದ ಮೇಲೆ  ಯಾವನೋ ಒಬ್ಬ ತನ್ನ ನಾಲ್ಕು ಚಕ್ರದ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಯಿಸಿಕೊಂಡು ಬಂದು ನನ್ನ ಮೋ,ಸೈ ನಂ ಕೆಎ 32 ಎಸ್ 4456 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ  ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದು ನಾನು ಸದರ ಘಟನೆಯಿಂದ ಭಾರಿ ಪಟ್ಟಾಗಿ ರಸ್ತೆಯ ಬದಿಗೆ ತಗ್ಗಿನಲ್ಲಿ ಬಿದ್ದು ಮುಖಕ್ಕೆ ಭಾರಿ ಗಾಯಗಳಾಗಿದ್ದು ಮತ್ತು ಬಲ, ಎಡಗೈಮೇಲೆ ಭಾರಿ ತರಚಿದ ಮತ್ತು ಗುಪ್ತ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ಶ್ರೀ ಸುಜೀತ ಕುಮಾರ ತಂದೆ ಧನಸಿಂಗ ರಾಠೋಡ ಸಾ ಮಾದಾಬಾಳ ತಾಂಡಾ ತಾ: ಅಫಜಲಪೂರ ರವರು 02-11-2013 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದುದಾರರು ತಮ್ಮ ಹೊಲದಿಂದ ಮರಳಿ ಮನೆಗೆ ಹೋಗುತ್ತಿರುವಾಗ ಲಕ್ಷ್ಮಿ ಪಾಟಿ ಹತ್ತಿರ ರಸ್ತೆಯ ಎಡಗಡೆಯಿಂದ ಬರುತ್ತಿರುವಾಗ ಯಾರೊ ಒಬ್ಬ ಮೊಟಾರ ಸೈಕಲ್ ಸವಾರನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಪಡೆಸಿದರ  ಪರಿಣಾಮವಾಗಿ ನಾನು ರೋಡಿನ ಮೇಲೆ ಬಿದ್ದಿದ್ದು ನನಗೆ ಎಡಪಕ್ಕಿಗೆ, ಎಡಕಾಲಿನ
ಹಿಂಬದಿಗೆ ತರಚಿದ ಗಾಯ, ಎಡ ಸೊಂಟಕ್ಕೆ ರಕ್ತಗಾಯ ಹಾಗೂ ಎಡಗೈ ರಟ್ಟೆಯ  ಕೆಳಗೆ  ಹೊಟ್ಟೆಗೆ, ತಲೆಗೆಒಳ
ಪೆಟ್ಟಾಗಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ನಂ.ಕೆಎ-28 ಯು8338 ಅದರ ಚಾಲಕನ ಹೆಸರು ಶರಣು ತಂದೆ ರಾಜಶೇಖರ ಸಾ: ಅತನೂರ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-10-2011 ರಿಂದ 30-09-2012 ರ ಅವದಿಯಲ್ಲಿ ರೇಣುಕಾ ಸೂಗರ ಪ್ಯಾಕ್ಟರಿಗೆ ತರೆಸಿದ ಡಿಜೆಲ್ ಟ್ಯಾಂಕರಗಳಲ್ಲಿ  1). UÀeÁ£À£À JªÀiï gÉqÉPÀgÀ, 2). ¸ÉÆÃªÀıÉÃRgÀ ¥Ánïï 3). ¸ÀAUÀªÉÄñÀ PÉÆ½î ªÀÄvÀÄÛ PÉ®ªÀÅ PÀA¥ÀÆålgï D¥ÀgÉÃlgïì ರವರು ಕುಡಿಕೊಂಡು ಕೇಲವೊಂದು ಪ್ರಮಾಣದ ಡಿಜೇಲ ಉಳಿಸಿ ಹೊರಗೆ ಸಾಗಿಸಿ ಸುಮಾರು 17,000 ಲೀಟರ ಅ.ಕೀ 10,00,000 ರೂ/    ರಷ್ಟು ವಂಚನೆಯಿಂದ ಅವ್ಯವಹಾರ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಗೋಪಮ್ಮ ಗಂಡ ಜಯಶಂಕರ ಸಾ;ಪ್ಲಾಟ ನಂ 15 ಸುಭಾಷಚಂದ್ರ ಭರ್ಮಾ ಇವರ ಮನೆಯಲ್ಲಿ ಬಾಡಿಗೆ ಜಯತೀರ್ಥ ಕಾಲನಿ ಗುಲಬರ್ಗಾ ಇವರ ತಂದೆ ತಾಯಿಯವರು ಈಗ ಸುಮಾರು 2 ವರ್ಷಗಳ ಹಿಂದೆ ಗುಲಬರ್ಗಾದ ಜಯಶಂಕರ ಇತನೊಂದಿಗೆ ಸಂಪ್ರದಾಯದಂತೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 6 ತೊಲೆ ಬಂಗಾರ ಮತ್ತು ಗ್ರಹಪಯೋಗಿ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನ್ನ ಗಂಡ ಜಯಶಂಕರ ಇತನು ಖಾಸಗಿ ಕೆಲಸ ಮಾಡುತ್ತಾರೆ. ನನ್ನ ಗಂಡ ಮದುವೆಯಾದಾಗಿನಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿಯೇ ಇರುತ್ತಾರೆ. ನನ್ನ ಅತ್ತೆಯಾದ ಸರಸ್ವತಿ ಇವಳು ನನ್ನ ಮದುವೆಯಾದಾಗಿನಿಂದ ನನ್ನ ತವರು ಮನೆಯಿಂದ 2 ತೊಲೆ ಬಂಗಾರ 10 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ನನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುವದಲ್ಲದೇ ನಾನು ಹಾಕುತ್ತಿರುವ ಕೂಳೂ ತಿಂದು ನಮ್ಮ ಮನೆಯಲ್ಲಿ ನಾಯಿಯಂತೆ ಬೀಳಬೇಕು.ಅಲ್ಲದೇ ದಿನಾಲು ವರದಕ್ಷಿಣೆ ಹಣವನ್ನು ಕೊಡುವಂತೆ ಪೀಡಿಸುತ್ತಿದ್ದರಿಂದ ಅವಳು ಕೊಡುವ ಹಿಂಸೆಯನ್ನು ತಾಳಲಾರದೇ ಜಯತೀರ್ಥ ಕಾಲನಿಯಲ್ಲಿ ನಾನು ನನ್ನ ಗಂಡ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವೆ, ದಿನಾಂಕ 27.10.2013 ರಂದು 3 ಗಂಟೆಯ ಸುಮಾರಿಗೆ ನನ್ನ ಅತ್ತೆಯಾದ ಸರಸ್ವತಿ ಇವಳು ನಾವು ಬಾಡಿಗೆಯಿಂದ ಇರುವ ಮನೆಗೆ ಬಂದು ನನ್ನ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ರಂಡಿ 10 ಲಕ್ಷ ರೂಪಾಯಿ 2 ತೊಲೆ ಬಂಗಾರ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂದರೆ ನನ್ನ ಮಗನಿಗೆ ಕರೆದುಕೊಂಡು ಇಲ್ಲಿ ವಾಸವಾಗಿರುವಿಯಾ ನೀನು ಹಣ ತರದೇ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾಳೆ. ನನ್ನ ಗಂಡ ಮತ್ತು ನನ್ನ ಮಗನಿಗೂ  ಕೂಡ ನನ್ನ ಅತ್ತೆಯಿಂದ ಜೀವದ ಭಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ. ಶರಣಮ್ಮ ಗಂಡ ಹಳ್ಳಪ್ಪ ಸಾ|| ಮನೆ ನಂ:3-944 ಜಾಂಬವೀರ ನಗರ ಗಾಜೀಪೂರ ಗುಲಬರ್ಗಾ ಇವರು ದಿನಾಂಕ:31-10-2013 ರಂದು ರಾತ್ರಿ ತಾನು ಮತ್ತು ತನ್ನ ಮಗ ಕಾರಿನಲ್ಲಿ ಕುಳಿತುಕೊಂಡು ಮನೆಗೆ ಬರುತ್ತಿರುವಾಗ ನಮ್ಮ ಬಡಾವಣೆಯ 1) ನಾಗಮ್ಮ ಗಂಡ ಸಿದ್ದಪ್ಪ,2) ಮಾಣಿಕ ತಂದೆ ಸಿದ್ದಪ್ಪ 3) ಅವಿನಾಶ ತಂದೆ ಸಿದ್ದಪ್ಪ 4) ತಿಮ್ಮಣ್ಣ 5) ಕತ್ತಿಮರವ್ವ 6)ಬಸಪ್ಪ 7) ಚಂದ್ರಕಲಾ 8)ನಾಗಮ್ಮ 9) ವಿಜಯಲಕ್ಷ್ಮಿ 10) ಶರಣಪ್ಪ 11) ಸಾಗರ ಸಾ|| ಎಲ್ಲರೂ ಜಾಂಬವೀರ ನಗರ  ಗಾಜೀಪೂರ ಗುಲಬರ್ಗಾ ಇವರೆಲ್ಲರೂ ಕೂಡಿಕೊಂಡು ಬಂದು ನಮ್ಮ ಕಾರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ತಾಯಿ ಮಗಳದು ಹೆಚ್ಚಿಗೆ ಆಗಿದೆ ನಮ್ಮ ಓಣಿಯಲ್ಲಿ ಹ್ಯಾಗೆ ಇರುತ್ತಿರಿ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳಸೂತ್ರ ಕಸಿದುಕೊಂಡು ಹೋದ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ.ಪುನಿತಾ ಗಂಡ ಸುರಜ ತಿವಾರಿ ಸಾ|| ಪ್ಲಾಟ ನಂ:2 ಮನೆ ನಂ 10-5-2 ಶರಣ ನಗರ  ಗುಲಬರ್ಗಾ ರವರು ದಿನಾಂಕ: 01-11-2013 ರಂದು ಸಾಯಂಕಾಲ 1700 ಗಂಟೆಯ ಸುಮಾರಿಗೆ ಮನೆಯಿಂದ ತಮ್ಮ ಅತ್ತೆಯವರಾದ ಶೋಭಾ ತಿವಾರಿಯವರೊಂದಿಗೆ ದಿಪಾವಳಿ ಹಬ್ಬದ ಪ್ರಯುಕ್ತ ಮಾರ್ಕೆಟಿಗೆ ಶಾಪಿಂಗ್ ಮಾಡಿಕೊಂಡು ಬರಲು ನಡೆದುಕೊಂಡು ಗಬರಾದಿ ಬಿಲ್ಡಿಂಗ ಹತ್ತಿರ ಅಟೋ ರೀಕ್ಷಾದ ಸಲುವಾಗಿ ಹೊಗುತ್ತಿರುವಾಗ ಎದುರಿನಿಂದ ಒಬ್ಬ ಮೋಟರ ಸೈಕಲ ಮೇಲೆ ಎನ್.ವಿ ರೋಡಿನ ಕಡೆಯಿಂದ ಬಂದವನೆ ತಮ್ಮಿಬ್ಬರ ಮದ್ಯ ಮೋಟರ ಸೈಕಲ ನಿಲ್ಲಿಸಿದವನೆ ನನ್ನ ಕೊರಳಿಗೆ ಕೈಹಾಕಿ ಕೊರಳಲ್ಲಿಯ ಬಂಗಾರದ 2 ಮಂಗಳಸೂತ್ರ ಮತ್ತು ಒಂದು ಬಂಗಾರದ ಲಾಕೇಟ 60 ಗ್ರಾಂ  ಅ||ಕಿ|| 1,80,000/- ಬೆಲೆ ಬಾಳುವದನ್ನು ಕಸಿದುಕೊಂಡು ಅತೀ ವೇಗದಿಂದ ಪಬ್ಲಿಕ ಗಾರ್ಡನ ರೋಡಿನಿಂದ ಹೊರಟು ಹೊದನು ಗಡಿಬಿಡಿಯಲ್ಲಿ ಮೋಟರ ಸೈಕಲ ನಂ: ನೋಡಿರುವದಿಲ್ಲಾ ಅವನನ್ನು ನೋಡಿದರೆ ಗುರುತಿಸುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು ಅವನು ಎತ್ತರ ಇದ್ದು ಮೈ ಮೇಲೆ ನೀಲಿ ಬಣ್ಣದ ಫೂಲ ತೋಳಿ ಟೀ ಶರ್ಟ ನೀಲಿದ ಬಣ್ಣದ ತಲೆಯ ಮೇಲೆ ಕ್ಯಾಪ ಹಾಕಿದವನು ಇರುತ್ತಾನೆ ಅವನನ್ನು ಪತ್ತೆ ಹಚ್ಚಿ ನನ್ನ ಕೊರಳಿಲ್ಲಲ್ಲಿ ಬಂಗಾರದ ಒಡವೆಯನ್ನು ದೋಚಿದವನನ್ನು ಪತ್ತೆ ಮಾಡಬೇಕು ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 163/2013 ಕಲಂ: 392 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದುಇರುತ್ತದೆ.
ಹಣವಿರುವ ಬ್ಯಾಗ ಕಸಿದುಕೊಂಡು ಹೋಗಲು ಪ್ರಯತ್ನ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ರಸೀದ ಖಾನ ತಂದೆ ಮಹಮೂದ ಖಾನ ಸಾ : ಮುಮಿನಪೂರ ಗುಲಬರ್ಗಾ ರವರು ದಿನಾಂಕ 28-10-2013 ರಂದು ಜಮತಿನ ಕ್ಯಾಶಿಯರರಾದ ಶ್ರೀ ಉಸ್ಮಾನಸಾಬ ಇವರು ತಮ್ಮ ಕ್ಯಾಶ ಬ್ಯಾಗನಲ್ಲಿ 5 ಲಕ್ಷ ನಗದು ಹಣ ತೆಗೆದುಕೊಂಡು ಖುನಿ ಅಲಾವಾ ದಿಂದ ಖಸಾಬ ಮಜೀದ ಹತ್ತಿರ ಇರುವ ಜಮತಲಾದ ಅಧ್ಯಕ್ಷರಾದ ಶ್ರೀ ಹಾಜಿ ಪಾಶಾ ಸಾಬ ನವಾಡೆಯವರ ಮನೆಗೆ ದ್ವೀಚಕ್ರ ವಾಹನದ ಮೇಲೆ ಬರುತ್ತಿರುವಾಗ ಯಾರೋ ಇಬ್ಬರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಂದು ವಾಹನಕ್ಕೆ ಡಿಕ್ಕಿ ಹೊಡೆದು ಕ್ಯಾಶಿಯರನ ಕೈಯಲ್ಲಿದ್ದ ಬ್ಯಾಗ ಕಸಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಆ ವೇಳೆಯಲ್ಲಿ ಗಡಿಬಿಡಿಯಲ್ಲಿ ನಮ್ಮ ಕ್ಯಾಶೀಯರ ತಮ್ಮ ಬ್ಯಾಗನ್ನು ಕಸಿದುಕೊಂಡು ಚಿರಾಡುತ್ತಿರುವಾಗ ಅಲ್ಲೆ ಇದ್ದ ಜನರು ಸೇರಿದಾಗ ಆ ಇಬ್ಬರು ಓಡಿಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಗುರುಶಾಂತಪ್ಪ ತಂದೆ ಬಸವಣಪ್ಪ ಇವರು ದಿನಾಂಕ 31-10-2013 ರಂದು ರಾತ್ರಿ 11-40 ಗಂಟೆಯ ಸುಮಾರಿಗೆ ಪಟೇಲ ಸರ್ಕಲದಿಂದ ಜಗತ ಸರ್ಕಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿದ್ದಿಪಾಷ ದರ್ಗಾ ಎದುರು ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಇಡಿ-1846 ನೇದ್ದರ ಸವಾರನು ರಾಂಗ ಸೈಡಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಭಾರಿಗಾಗೊಳಿಸಿ  ತನ್ನ ಮೋಟಾರ ಸೈಕಲ ಸಮೇತ ಹೊರಟು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ತೋಟಪ್ಪ  ತಂದೆ ಬಸ್ಸಪ್ಪ ಯಾಕಾಪೂರ ಸಾ|| ಸುಲೇಪೇಟ ತಾ|| ಚಿಂಚೋಳಿ ಇವರು ದಿನಾಂಕ 31.10.2013 ರಂದು  ಸಾಯಾಂಕಾಲ ಚಿಂಚೋಳಿಯ ತಹಸಿಲ ಆಫಿಸ್  ಹತ್ತಿರ  ಪರಿಚಯಸ್ತರಾದ ಸಂಬಣ್ಣಾ ತಂಧೆ ರಾಯಪ್ಪ ಶಿರಿಸಿ ಮತ್ತು  ಶ್ರೀ ಮಾರುತಿ ತಂಧೆ ಪೀರಪ್ಪ  ಬೋಮ್ಮನಳ್ಳಿ  ಸಾ|| ಇಬ್ಬರೂ ಚಿಂಚೋಲಿ ಇವರ ಜೋತೆಯಲ್ಲಿಯೇ ಮಾತಾಡುತ್ತಾ ನಿಂತು ಕೊಂಡಿದ್ದಾಗ ಚಿಂಚೋಳಿ ಕಡೆಯಿಂದ ತಾಂಡೂರು ಕಡೆಗೆ ಹೋರಟಿರುವ ಯಾವನೋ ಒಬ್ಬ ತನ್ನ ಮೊಟಾರ ಸೈಕಲ್ನ್ನು ಅತೀ ವೇಗ, ನಿಷ್ಕಾಳಿಜಿತನದಿಂದ ಹಾಗೂ  ಮಾನವ ಜೀವಕ್ಕೆ ಅಪಾಯವಾಗುವಂತೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು  ತನ್ನ ಮೋಟಾರ ಸೈಕಲ್ನಿಂದ ನನ್ನ ಬಲಗಾಲಿಗೆ ಡಿಕ್ಕಿ ಪಡಿಸಿರುತ್ತಾನೆ ಈ ಘಟನೆಯಿಂದಾಗಿ ನನ್ನ ಬಲಗಾಲಿಗೆ  ಮೋಳಕಾಲಿನ  ಕೆಳಗೆ  ಭಾರಿ ಪೆಟ್ಟಗಿ  ಎಲಬು ಮುರಿದಂತಾಗಿ ಬಾವು ಸಮೇತ ಭಾರಿ ಗುಪ್ತಗಾಯವಾಗಿರುತ್ತದೆ.. ಸದರಿ ಮೋಟಾರ ಸೈಕಲ್ ಸವಾರನು ನನಗೆ ತನ್ನ ಮಾಟಾರ ಸೈಕಲ್ನಿಂದ ಡಿಕ್ಕಿ ಪಡಿಸಿದ  ಕೂಡಲೇ ತನ್ನ ಮೋಟಾರ ಸೈಕಲ್ ನ್ನು  ರ್ಸತಳಲ್ಲಿಯೇ ಬಿಟ್ಟು ಓಡಿ ಹೋಗಿದ್ದು  ಸವಾರನ ಹೆಸರು ಮತ್ತು ವಿಳಾಸ ತಿಳಿದುಬಂದಿರುವದಿಲ್ಲಾ  ಸದರ ಮೋಟಾರ ಸೈಕಲ್ ನ್ನು  ನೋಡಾಲಾಗಿ ದ್ದು ಹೀರೋಹೊಂಡಾ ಪ್ಯಾಶನ್ ಪ್ಲಸ್ ಆಗಿದ್ದು ನಂ ಕೆ ಎ 32 ವಿ 0410  ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸೈಯದ ಮೋಶಿನ ತಂದೆ ಸೈಯದ ಲಾಲ ಅಹ್ಮದ ಸಾಃ ಮಿಲತ್ ನಗರ ಗುಲಬರ್ಗಾ  ರವರು ದಿನಾಂಕ 31-10-2013 ರಂದು ರಾತ್ರಿ 10-15 ಗಂಟೆಗೆ ಫಿರ್ಯಾದಿಯು ಬಟ್ಟೆ ವ್ಯಾಪಾರ ಮುಗಿಸಿಕೊಂಡು ತನ್ನ ಮನೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಎಕ್ಸ 4296 ನೇದ್ದರ ಮೇಲೆ ಆದರ್ಶ ನಗರ ರೋಡಿಗೆ ಇರುವ ಸಾನಿಯಾ ಟೇಲರ್ ಅಂಗಡಿಯ ಮುಂದೆ ಹೋಗುತ್ತಿದ್ದಾಗ ಎದರುಗಡೆಯಿಂದ ಅಟೋರಿಕ್ಷಾ ನಂ. ಕೆ.ಎ 32 ಎ 8517 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಅಮೃತ ತಂದೆ ಬಾಪಣ್ಣಾ ಸಿಂಧೆ ವಯ:43 ವರ್ಷ ಉ:ಖಾಸಗಿ ಕೆಲಸ  ಜಾತಿ:ಢೋರ  ಸಾ:ಸರಸಂಬಾ ತಾ:ಆಳಂದ. ಇವರು ದಿನಾಂಕ: 31-10-2013 ರಂದು ಬೇಳಗ್ಗೆ 10:00 ಗಂಟೆಯ ಸುಮಾರಿಗೆ   ನಾನು ನನ್ನ ಹೆಸರಿನಲ್ಲಿದ್ದ ಜಾಗೆಯಲ್ಲಿ ನನ್ನ ಅಣ್ಣನಾದ ಶಂಕರ ತಂದೆ ಬಾಳಪ್ಪಾ ಸಿಂಧೆ ಮತ್ತು ಇವನ ಮಕ್ಕಳು  ಮಡಿ ಮತ್ತು ಕೇರ ಕಟ್ಟಿದ್ದರಿಂದ ಅವರಿಗೆ ನಾನು ಈ ಜಾಗ ನನ್ನದು ಇದೆ ಇಲ್ಲಿ ಏಕೆ ಮಡಿಗಳು ಕೇರ ಕಟ್ಟಿದ್ದಿರಿ ಅಂತಾ ಕೇಳಿದಕ್ಕೆ ನನ್ನ ಅಣ್ಣನಾದ  1) ಶಂಕರ ತಂದೆ ಬಾಪಣ್ಣಾ ಸಿಂಧೆ 2] ಗೌರಾಬಾಯಿ ಗಂಡ ಶಂಕರ ಸಿಂಧೆ 3] ಮಲ್ಲಿಕಾರ್ಜುನ ತಂದೆ ಶಂಕರ ಸಿಂಧೆ 4] ಹಿರಲಾಲ ತಂದೆ ಶಂಕರ ಸಿಂಧೆ 5] ಸಿದ್ದಪ್ಪಾ ತಂದೆ ಈಶ್ವರ ಸಿಂಧೆ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ತಡೆದು ಅವಾಚ್ಯ ಶಬ್ಬಗಳಿಂದ ಬೈದು ನನ್ನ ಜಾಗೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಈ ಜಾಗ ನಮ್ಮದು ಇದೆ.ಬಿಟ್ಟು ಬಿಡು ಅಂತಾ ಅನ್ನುತ್ತಿದ್ದರು ನಾನು ಅವರಿಗೆ ಈ ಜಾಗೆ ನನ್ನ ಹೆಸರಿನಲ್ಲಿದೆ. ನಾನು ಬಿಡುವುದಿಲ್ಲಾ ಅಂದಿರುತ್ತೇನೆ. ಸದರಿಯವರು ಇನ್ನೊಮೆ ನಮಗೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯದ ಬೇದರಿಕೆ ಹಾಕಿ ಹೋಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಜ್ಯೋತಿ ಗಂಡ ಶರಣಪ್ಪಾ ಉಪ್ಪಿನ ಸಾಃ ನದಿಸಿನ್ನೂರ ಗ್ರಾಮ ತಾ.ಜಿಃ ಗುಲಬರ್ಗಾ ಇವರು ನಾನು ಮತ್ತು ನನ್ನ ಗಂಡ ಶರಣಪ್ಪಾ ಇಬ್ಬರು ಕೂಡಿ ಫರಹತಾಬಾದದಿಂದ ನದಿಸಿನ್ನೂರ ಊರಿಗೆ ದಿನಾಂಕ: 31-10-2013 ರಂದು ರಾತ್ರಿ 8-00 ಗಂಟೆಗೆ ಹೊರಟಿದೇವು. ಆಗ ನಮ್ಮ ಮಾವನಾದ ಅಮೃತ ಉಪ್ಪಿನ ಈತನು ನನ್ನ ಗಂಡನಿಗೆ ಗಾಡಿಯಲ್ಲಿ ಕರೆದುಕೊಂಡು ಬರುತ್ತೇನೆ ನೀನು ಮುಂದೆ ಹೋಗು ಅಂತಾ ಅವನಿಗೆ ಮುಂದೆ ಕಳುಹಿಸಿ, ನಾನು ಮತ್ತು ಮಾವ ಇಬ್ಬರು ನದಿಸಿನ್ನೂರ ಕ್ರಾಸದಲ್ಲಿ ಸ್ವಲ್ಪ ಹೊತ್ತು ನಿಂತು ನಂತರ ಯಾವುದು ಗಾಡಿ ಬಾರದೆ ಇದ್ದಾಗ ನಾವಿಬ್ಬರು ಕ್ರಾಸದಿಂದ ನಮ್ಮೂರಿಗೆ  ನಡೆದುಕೊಂಡು ಹೊರಟೇವು ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮೂರ ಊರ ಸಮೀಪ ಹೋಗುತ್ತಿದಂತೆ ಕತ್ತಲಲ್ಲಿ ಒಮ್ಮಲೇ ಏಕಾಏಕಿ ನಮ್ಮ ಮಾವ ನನ್ನ ಕೈ ಹಿಡಿದು ಎಳೆದಾಡಿ ಮಲಗೋಣಾ ಬಾ ಅಂತಾ ಅನ್ನುತ್ತಾ ನನ್ನ ಸೀರೆ ಸೆರಗು ಹಿಡಿದು ಜಗ್ಗಾಡಿದನು. ನಾನು ಬಿಡು ಅಂತಾ ಅನ್ನುತ್ತಿದ್ದಾಗ ನನಗೆ ಬೆನ್ನಿನ ಮೇಲೆ ಕೈಯಿಂದ ಹೊಡೆದನು. ನಾನು ಅವನಿಂದ ಬಿಡಿಸಿಕೊಂಡು ನಮ್ಮ ಮನೆಗೆ ಓಡಿಕೊಂಡು ಹೋಗಿ ನನ್ನ ಗಂಡನಿಗೆ ಈ ವಿಷಯ ತಿಳಿಸಿದಾಗ ನನ್ನ ಗಂಡ ಶರಣಪ್ಪ ಈತನು ನನಗೆ ನೀನು ಸುಳ್ಳು ಹೇಳುತ್ತಿ ರಂಡಿ ಭೊಸಡಿ ಅಂತಾ ಬೈದು ಕಟ್ಟಿಗೆಯಿಂದ  ಹೊಡೆದಿದ್ದು  ನಂತರ ನಮ್ಮ ಮಾವ ಬಂದು ನನಗೆ ಈ ವಿಷಯ ಯಾರ ಮುಂದೆ ಹೇಳಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿದದ್ದು ನೀನು ನನ್ನ ಜೊತೆಯಲ್ಲಿ ಮಲಗಲ್ಲ ಅಂದರೆ ನನ್ನ ದೊಡ್ಡ ಮಗ ಶಿವಾನಂದನ ಜೊತೆ ಮಲಗಿಕೋ ಒತ್ತಾಯ ಮಾಡಿದನು. ನೀರು ಅನ್ನ ಕೊಡದೆ ಉಪವಾಸ ಹಾಕಿದರು. ನಂತರ ಮರು ದಿವಸ ಬೆಳಗ್ಗೆ ನನ್ನ ಭಾವನಾದ ಶಿವಾನಂದ ಕೂಡಾ ನನಗೆ ಹೊಡೆಬಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 31-10-2013 ರಂದು ಸಾಯಂಕಲ 5-30 ರಂದು ಶ್ರೀಮತಿ ಅರ್ಚನಾ ಗಂಡ ಸಂತೋಷ ಕಾಸರ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ ರವರು  ಮತ್ತು ಆಕೆಯ ಅತ್ತೆ  ಗೋದಾವರಿ ನಾದಿನಿ ರಾಜೇಶ್ವರಿ  ಕುಡಿಕೊಂಡು ಮನೆಗೆ ಕೀಲಿ ಹಾಕಿಕೊಂಡು ಈಣಿಯಲ್ಲಿರುವ ಸ್ವಾಮಿ ಬಟ್ಟೆ ಅಂಗಡಿಗೆ ದಿಪಾವಳಿ ಹಬ್ಬದ ಬಟ್ಟೆ ಖರೀದಿ ಕುರಿತು ಹೋಗಿದ್ದು ಸಂಜೆ 6-30 ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಬಾಗಿಲ ಕೊಂಡು ಮುರಿದು ಮನೆಯೋಳಗೆ ಪ್ರವೇಶ ಮಾಡಿ  ಅಲಮಾರಿಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು ಸುಮಾರು 17,13,000/- ರೂ ಕಿಮ್ಮತ್ತಿನವುಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಸುಭಾಶಚಂದ್ರ ಎ ಎಸ್ ಐ ಚಿಂಚೋಳಿ ಪೊಲೀಸ್ ಠಾಣೆ   ತಾ: ಚಿಂಚೊಳಿ  ರವರು ಪಟಡ್ರೋಲಿಂಗ  ಕರ್ತವ್ಯ ಕುರಿತು  ಬಡಿದರ್ಗಾದ ಕಡೆಗೆ ಹೋದಾಗ ಬಡಿದರ್ಗಾದ ಹತ್ತೀರ  ಇರುವ ಮುಲ್ಲಾಮಾರಿ ಹಳ್ಳದಲ್ಲಿ ಒಬ್ಬ ಗಂಡು ಮನುಷ್ಯನ ಶವವು ನೀರಿನಲ್ಲಿ ಹರಿದುಕೊಂಡು ಬಂದು ನಿಂತಿರುತ್ತದೆ ಅಂತಾ ಬಾತ್ಮಿ ಬಂದ ಮೇರೆಗೆ ದಿನಾಂಕ 01-11-2013 ರಂದು ಮಧ್ಯಾಹ್ನ 01.00 ಗಂಟೆಗೆ ಮುಲ್ಲಾ ಮಾರಿ  ಹಳ್ಳಕ್ಕೆ ಹೋಗಿ ನೋಡಲಾಗಿ  ಸದರಿ ಹಳ್ಳದಲ್ಲಿ  ಅಂದಾಜು 45 ರಿಂದ 50 ವರ್ಷ ವಯಸ್ಸಿನ ಗಂಡು ಮನುಷ್ಯನ ಶವವು ಬೋರಲಾಗಿ ಬಿದ್ದಿದ್ದು ಕಾಲುಗಳು ನೇರವಾಗಿ ಚಾಚಿರುತ್ತವೆ.(ಹಿಂದಕ್ಕೆ) ಸದರಿ ಮೃತ ದೇಹದ ಮೇಲೆ ಯಾವುದೇ ಬಟ್ಟೆಗಳಿರುವುದಿಲ್ಲಾ ನಗ್ನ ವಾಸ್ಥೆಯಲ್ಲಿರುತ್ತದೆ. ಹಳ್ಳದಲ್ಲಿರುವ ಗಿಡ-ಬಳ್ಳಿಗಳು ಸೋಂಟಕ್ಕೆ ಸುತ್ತಿಕೊಂಡಿದ್ದು ಇರುತ್ತದೆ. ಸದರಿ ಮೃತ ವ್ಯಕ್ತಿಯು ಹೆಸರು /ವಿಳಾಸ ಗೋತ್ತಾಗಿರುವುದಿಲ್ಲಾ ಅಪರಿಚಿತ ವ್ಯಕ್ತಿಯಾಗಿರುತ್ತಾನೆ. ಸದರಿಯವನು ಸುಮಾರು ಎರಡು ದಿವಸಗಳ ಹಿಂದೆ ನೀರಿನಲ್ಲಿ  ಬಿದ್ದು ಹರಿದುಕೊಂಡು ಬಂದು ಆಸ್ಥಳದಲ್ಲಿ ನೀರಿನ ಹರಿವು ಕಡಿಮೇವಿರುವುದರಿಂದ  ನಿಂತಂತೆ ಕಂಡುಬರುತ್ತಿದ್ದು ಮಾನ್ಯರವರು ಮುಂದಿನ ಕಾನೂನು ಕ್ರಮ ಕೈಗೋಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ  
ಅಪಹರಣ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ ದೇವಕಿ ಗಂಡ ಲಕ್ಷ್ಮಣ ಕಡಬಾಣಿ ಸಾ: ಜೋಗುರ ಗ್ರಾಮ ತಾ:ಜಿ:ಳ ಗುಲಬರ್ಗಾ ಇವರ ಮಗಳಾದ ಐಶ್ವರ್ಯಗೆ ಇವಳಿಗೆ  ಒಂದು ವರ್ಷದಿಂದ ನಮ್ಮ ಜೋಗುರ ಗ್ರಾಮದ ಚಾಂದ ತಂದೆ ಬಾಬು ಡೆಂಗೆ ಎನ್ನುವವನು ನಮ್ಮ ಹುಡುಗಿಯ ಹಿಂದೆ ಬಿದ್ದು ಲವ್ವ ಮಾಡು ಅಂತಾ ಕಿರಿಕಿರಿ ಕೊಡುತ್ತಿದ್ದು.  ಈಗ 8-10 ದಿವಸದ ಹಿಂದೆ ಚಾಂದ ತಂದೆ ಬಾಬು ಡೆಂಗೆ ಇತನು ನನ್ನ ಮಗಳಾದ ಐಶ್ವರ್ಯಗೆ ಲವ್ವ ಮಾಡು ಅಂತಾ ಚುಡಾಯಿಸಿದಕ್ಕೆ ಅವಳು ಚಪ್ಪಲಿಯಿಂದ ಹೊಡೆದಿದ್ದು ಈ ವಿಷಯ ಮನೆಗೆ ಬಂದು ನನಗೂ ಹೇಳಿದ್ದರಿಂದ ನಾನು ಅವನಿಗೆ ಎರಡೇಟು ಹೊಡೆದು  ಅವರ ಮನೆಗೆ ಹೋಗಿ ಅವರ ತಂದೆ-ತಾಯಿಗೆ ಈ ರೀತಿಯ ಚುಡಾಯಿಸುತ್ತಿದ್ದಾನೆ ಅಂತಾ ಹೇಳಿ ಬಂದಿರುತ್ತೇನೆ. ಹೀಗಿದ್ದು ದಿನಾಂಕ 30-10-2013 ರಂದು ನನ್ನ ಹಿರಿಯ ಮಗಳ ಮಗನಿಗೆ  ಆರಾಮ ಇರಲಾರದಕ್ಕೆ ಗುಲಬರ್ಗಾ ಮೋಹನ ಲಾಡ್ಜ ಹತ್ತಿರದ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿದ್ದೆ  ಆ ದಿನ ನನ್ನ ಮಗಳಾದ ಐಶ್ವರ್ಯ ಇವಳು ಕಾಲೇಜಿಗೆ ಹೋಗಿದ್ದಳು ರಾತ್ರಿ ಮುಕ್ಕಾಂ ಬಸ್ಸಿಗೆ ಜೋಗುರಕ್ಕೆ ಹೋಗುತ್ತಿದ್ದೇನೆ ಅಂತಾ ಪೋನ ಮಾಡಿ ಹೇಳಿದಳು.  2 ದಿವಸ ಆದರೂ ಸಹ ನನ್ನ ಮಗಳು ಮನೆಗೆ ಬಂದಿರುವುದಿಲ್ಲಾ.  ನಾವು ಹುಡುಕಾಡುತ್ತಿರುವಾಗ, ನಿನ್ನೆ ದಿವಸ  ನನ್ನ ಮಗಳು ಐಶ್ವರ್ಯ ಇವಳು  ಪೋನ ಮಾಡಿ   “ ಗುಲಬರ್ಗಾ ಬಸ್ಸ ಸ್ಟಾಂಡ ಹತ್ತಿರ ಬರುತ್ತಿರುವಾಗ ರಾತ್ರಿ 9 ಗಂಟೆ ಸುಮಾರಿಗೆ ಚಾಂದ ಮತ್ತು ಅವನ ಸಂಗಡ 5-6 ಜನರು ಕೂಡಿ ನನಗೆ ಕಿಡ್ನಾಪ ಮಾಡಿಕೊಂಡು ಒಯ್ದಿದಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ದಾಖಲೆ ಸೃಷ್ಠಿ ಮಾಡಿ ಮೋಸ ಮಾಡಿದ ಪ್ರಕರಣ :
ಚಿಂಚೋಳಿ ಠಾಣೆ : 1) ಬಕ್ಕಪ್ಪ ತಂದೆ ನರಸಪ್ಪ ಬಜಾರ 2) ರಮೇಶ ತಂದೆ ಬಕ್ಕಪ್ಪ ಬಜಾರ 3) ಬಸ್ಸಪ್ಪ ತಂದೆ ಶಿವಪ್ಪಾ ಸುಂಕಾ 4) ನರಸಪ್ಪ ತಂದೆ ತುಕ್ಕಪ್ಪ ಹುಡ್ಗಿ  5) ಹಣಮಂತರಾಯ ತಂದೆ ರೇವಣಸಿದ್ದಪ್ಪಾ ಚೇಂಗ್ಟಿಕರ ಸಾ ಎಲ್ಲರು ಮು; ಐನೋಳ್ಳು ತಾ; ಚಿಂಚೋಳಿ ರವರು  ಸದಸ್ಯರಿದ್ದು ಸದರಿಯವರು ಫಿರ್ಯಾದಿದಾರರ ಮತ್ತು ಇತರೆ ಸದಸ್ಯರ ರುಜುಗಳನ್ನು ಖೋಟ್ಟಿ ರುಜು ತಯ್ಯಾರಿಸಿರುತ್ತಾರೆ ಸದರಿ ವಿಷಯವು ಫಿರ್ಯಾದಿದಾರನ ಗಮನಕ್ಕೆ ಬಂದ ನಂತರ ಮೇಲೆ ತೋರಿಸಿದ ಆರೋಪಿತರು ಸಭೆ ಕರೆದಿದ್ದೆವೆ ಎಂದು ಸುಳ್ಳು ದಾಖಲೆಯನ್ನು ಸೃಷ್ಟಿಸಿ ಖೊಟ್ಟಿ ರುಜುಗಳನ್ನು ಹಾಕಿ ಸಂಸ್ಥೆಯ ಹಣವನ್ನು ದುರುಪಯೋಗ ಮಾಡಿದ ಬಗ್ಗೆ ಶ್ರೀ ಶಾಮರಾವ ತಂದೆ ಚಂದ್ರಪ್ಪ ಬೆಸ್ತ ಅಧ್ಯಕ್ಷರು ಶಾರಧಾಂಭಾ ಶೀಕ್ಷಣ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಐನೋಳ್ಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.