POLICE BHAVAN KALABURAGI

POLICE BHAVAN KALABURAGI

05 September 2013

ಅಪಘಾತ ಪ್ರಕರಣ :

ಚಿಂಚೋಳಿ ಠಾಣೆ : ಶ್ರೀ ಇಬ್ರಾಹಿಮ್ ತಂದೆ ಮೈಮೂದ್ ಸಾಬ ಲಷ್ಕರೆ ಸಾ: ನಿಮಾಹೋಸಳ್ಳಿ  ತಾ: ಚಿಂಚೋಳಿ ದಿನಾಂಕ 04.09.2013 ರಂದು 09.10 ಪಿ ಎಮ್ ಸುಮಾರಿಗೆ ನಮ್ಮ ಮಗಳಾದ ಶ್ರೀಮತಿ ಶರಣಮ್ಮಾ ಎಂಬುವವಳಿಗೆ  ಬಾಣಂತನಕ್ಕಾಗಿ ಇಂದ್ರಪಾಡ ಹೋಸಳ್ಳಿ ಗ್ರಾಮದಿಂದ ಕರೆ ತಂದು ಸರಕಾರಿ ಆಸ್ಪತ್ರೆ ಸುಲೇಪೇಟದಲ್ಲಿ ಸೇರಿಕೆಮಾಡಿರುತ್ತಾರೆ ಅಂತಾ ಫೋನಮಾಡಿ ತನ್ನ ಅಳಿಯನಾದ ಶ್ರೀ ಪ್ರಭು ಪೂಜಾರಿ ಎಂಬುವವನು ತಿಳಿಸಿದ್ದು ನಾನು ಸರಕಾರಿ ಆಸ್ಪತ್ರೆ ಸುಲೆಪೇಠಕ್ಕೆ ಹೋಗಬೇಕೆಂದುರೆ ಯಾವುದೇ ವಾಹನದ ಸೌಕರ್ಯವಿಲ್ಲ ಕಾರಣ ನಮ್ಮ ಅಣ್ಣನ ಮೊಟಾರ ಸೈಕಲ್ ಹೋಗಲು ನಮ್ಮ ಅಣ್ಣನಿಗೆ ಕೆಳಿದಾಗ  ನಮ್ಮ ಮೋಟಾರ ಸೈಕಲನಲ್ಲಿ ಪೆಟ್ರೋಲ್ ಇಲ್ಲಾ  ಚಿಂಚೋಳಿಗೆ ಹೋಗಿ ಹಾಕಿಸಿಕೊಂಡು ಹೋಗೋಣಾ ಅಂತಾ ಅಂದಿದ್ದಕ್ಕೆ ನಮ್ಮ ಅಣ್ಣ ಹಾಗಾದರೆ ನಡೆಯಿರಿ  ಹೋಗೋಣಾ  ಅಂತಾ ಅಂದು ನಮಗೆ ಸರಕಾರಿ ಆಸ್ಪತ್ರೆ ಸುಲೇಪೇಟಕ್ಕೆ ಹೋಗಿ ಸದರಿ ಬಸ್ಸಪ್ಪಾನಿಗೆ ಬಿಟ್ಟು ಮರಳಿ ಮನೆಗೆ  ಬರುವದಾಗಿ  ಹೇಳಿ ನಮ್ಮ ಅಣ್ಣನು ಇತ್ತಿಚಿಗೆ ಖರಿದಿಸಿದ ಹೀರೋ ಹೋಂಡಾ ಸ್ಪ್ಲೆಂಡರ ಮೋಟಾರ ಸೈಕಲ್ ನಂ ಕೆ ಎ 32 ಕೆ 8521 ನೇದ್ದರ ಮೇಲೆ ಕುಳಿತುಕೊಂಡು ನಮ್ಮ ಮನೆಯಿಂದ ಮೋದಲು ಪೆಟ್ರೋಲ್ ಕರಿದಿಗಾಗಿ ಚಿಂಚೋಳಿಗೆ ಹೋಗುವದಾಗಿ ಹೇಳಿ ಹೋರಟು ಹೋದರು . ರಾತ್ರಿ 10.15 ಘಂಟೆ ಸುಮಾರಿಗೆ ಮನೆಯಲ್ಲಿ  ಕುಳಿತುಕೊಂಡಾಗ ಚಿಂಚೋಳಿ- ಗುಲ್ಬರ್ಗಾ ಮೂಖ್ಯ ರಸ್ತೆಯ ಮೇಲೆ ಅಣವಾರ ಕ್ರಾಸದಿಂದ ಸ್ವಲ್ಪ ಮುಂದುದುಗಡೆ ಸರಕಾರಿ ಬಸ್ ಮತ್ತು ಮೋಟಾರ ಸೈಕಲ ಮದ್ಯ ರಸ್ತೆ ಅಪಘಾತವಾಗಿ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿರುತ್ತಾರೆ ಅಂತಾ ಸುದ್ದಿ ಬಂದಿದ್ದರಿಂದ ನಾನು ನಮ್ಮ ಹೂರಿನ ಕೆಲವು ಜನರು ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು ರಸ್ತೆ ಅಪಘಾತದಿಂದ ಮೃತಪಟ್ಟವರು ನನ್ನ ಅಣ್ಣ ನಾದ ಮಹ್ಮದ ಇಸ್ಮಾಯಿಲ್ ಲಷ್ಕರೆ ಮತ್ತು ನಮ್ಮ ಊರಿನ ಬಸ್ಸಪ್ಪಾ ಕಟ್ಟೋಳ್ಳಿ ಎಂಬುವವರೆ ಆಗಿದ್ದು ದ್ದರೂ . ಚೀಂಚೋಳಿಯಿಂದ ಸುಲೇಪೇಠಗೆ ಬರುವಾಗ ಅಣವಾರ ಕ್ರಾಸದಿಂದ ಸ್ವಲ್ಪ ಮುಂದೆ ನಮ್ಮ ಅಣ್ಣನಾದ ಮಹ್ಮದ ಇಸ್ಮಾಯಿಲ್ ಮತ್ತು ನಮ್ಮ ಊರಿನ ಬಸ್ಸಪ್ಪಾ  ಕಟ್ಟೋಳ್ಳಿ ಎಂಬುವವರು ಮೋಟಾರ ಸೈಕಲ್ ಕೆ ಎ 32 ಕೆ 8521 ನೇದ್ದರ ಮೇಲೆ ಹೋರಟಾಗ ಎದುರಿನಿಂದ ಸರಕಾರಿ ಬಸ ನಂ ಕೆಎ  38 ಎಪ್ 444 ನೇದ್ದರ ಚಾಲಕನಾದ ರೂಬೇನ್ ಚಾಲಕ ನಂ 1534 ಎಂಬುವವನು ಸದರಿ ಬಸ್ಸನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಅಣ್ಣನು ಚಲಾಯಿಸಿಕೊಂಡು ಬರುತ್ತಿದ್ದ ಮೋಟರ ಸೈಕಲಗೆ  ಡಿಕ್ಕಿ ಪಡಿಸಿದ್ದರಿಂದ ನಮ್ಮ ಅಣ್ಣನಾದ ಎಮ್ ಇಸ್ಮಾಯಿಲ್  ಮತ್ತು ನಮ್ಮ ಊರಿನ ಬಸ್ಸಪ್ಪನಿಗೆ ತಲೆಗೆ ಬಾರಿ ರಕ್ತ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

04 September 2013

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ :ಶ್ರೀ ಆನಂದ ತಂದೆ ಶಿವಪುತ್ರ ಸಾ;  ಶಹಾಬಜಾರ  ಗುಲಬರ್ಗಾ ಇವರು ದಿನಾಂಕ 29-08-2013 ರಂದು  ರಾತ್ರಿ 9-00 ಗಂಟೆಯ ಸುಮಾರಿಗೆ ಆಳಂದ ಚಕ್ಕ ಪೋಸ್ಟ ಹತ್ತಿರ ಹೋಗಲು ತಮ್ಮ ಸಂಬಂಧಿಕ ಸಾಗರ ಇತನು ತನ್ನ ಗೆಳೆಯನಾದ ಸೂರ್ಯಕಾಂತ ಮಾಟೂರ ಇತನೊಂದಿಗೆ ಅಲ್ಲಿಗೆಬಂದರು . ಸಾಗರ ಇತನು ತಿಳಿಸಿದ್ದು ಏನೆಂದರೆ ತನ್ನ ಸಂಗಡ ಇದ್ದ ಸೂರ್ಯಕಾಂತ ಮಾಟೂರ ಇತನು ಬೆಂಗಳೂರಿಗೆ ಹೋಗುವವರಿದ್ದಾರೆ ಅವರಿಗೆ ಬಸ್ಸ ಸ್ಟ್ಯಾಂಡ ವರೆಗೆ ಬಿಟ್ಟು ಬರೋಣ ನಡೆಯಿರಿ ಅಂತಾ ಹೇಳಿ  ಸಾಗರ ಮುನ್ನೊಳ್ಳಿ ಇತನು ತನ್ನ ಮೋಟಾರ ಸೈಕಲ ನಂ.ಕೆ.ಎ.32 ಇಡಿ 4738 ಮೇಲೆ ತನ್ನ ಹಿಂದೆ ಸೂರ್ಯಕಾಂತನಿಗೆ ಕೂಡಿಸಿಕೊಂಡು ಹೊರಟಿದ್ದು ನಾನು ಹಾಗೂ ನಾಗರಾಜ ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಆಳಂದ ಚಕ್ಕ ಪೊಸ್ಟದಿಂದ ರಿಂಗರೋಡ ಮೂಲಕ ಬಸ್ಸ ಸ್ಟ್ಯಾಂಡ ಕಡೆಗೆ ಹೋರಟಿದ್ದೇವು.ರಿಂಗರೋಡ ಮೂಲಕ ಹೊರಟಾಗ ಹುಸೇನಿ ಗಾರ್ಡನ ಎದರುಗಡೆ ರಿಂಗರೋಡ ಮೇಲೆ ಬಂದಾಗ ಸಾಗರ ಮತ್ತು ಸೂರ್ಯಕಾಂತ ಇದ್ದ ಮೋಟಾರ ಸೈಕಲ್ ಒಮ್ಮೆಲೆ ಸ್ಕಿಡಾಗಿ  ಇಬ್ಬರು ಕೆಳಗೆ ಬಿದ್ದರು. ಅವರ ಹಿಂದುಗಡೆ ಹೊರಟಿದ್ದ ನಾವು ಕೂಡಲೆ ನಮ್ಮ ಮೋಟಾರ ಸೈಕಲನ್ನು ನಿಲ್ಲಿಸಿ ಹೋಗಿ ನೋಡಲಾಗಿ  ಸಾಗರನಿಗೆ  ಮುಖಕ್ಕೆ ತರಚಿದ ರಕ್ತಗಾಯ ,ಎಡಗೈ ಮುಂಗೈಗೆ ಬಾರಿ ಗುಪ್ತ ಪೆಟ್ಟು , ಬಲಗೈ ಮೋಳಕೈಗೆ ತರಚಿದ ರಕ್ತಗಾಯವಾಗಿದ್ದವು ಮತ್ತು ಸೂರ್ಯಕಾಂತನಿಗೆ ಗದ್ದದ ಕೆಳಗೆ  ತುಟಿಗಳಿಗೆ ಬಾರಿ ರಕ್ತಗಾಯ ಮತ್ತು ಎದೆಗೆ ಹೋಟ್ಟೆಗೆ ಭಾರಿ ಗುಪ್ತ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು. ಆಗ ನಾನು ಮತ್ತು ನನ್ನೊಂದಿಗೆ ಇದ್ದ ನಾಗರಾಜ ಇಬ್ಬರು ಕೂಡಿಕೊಂಡು ಸ್ಥಳಕ್ಕೆ  108 ಅಂಬುಲೆನ್ಸ ಕರೆಯಿಸಿಕೊಂಡು ಅದರಲ್ಲಿ ಸಾಗರ ಮತ್ತು ಸೂರ್ಯಕಾಂತ ಇವರಿಬ್ಬರನ್ನು ಉಪಚಾರ ಕುರಿತು ಗುಲಬರ್ಗಾದ ಯುನೈಟೆಡ ಆಸ್ಪತ್ರೆಗೆ ಕರೆದಕೊಂಡು ಹೋಗಿ ಸೇರಿಕೆ ಮಾಡಿದ್ದು ಸಾಗರ ಇತನು ತನ್ನ ಮೋಟಾರ ಸೈಕಲ ನಂ.ಕೆ..32 .ಡಿ 4738 ನೆದ್ದನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿದ್ದರಿಂದ ಘಟನೆ ಸಂಭವಿಸಿರುತ್ತದೆ. ಅಷ್ಟರಲ್ಲಿ  ಸೂರ್ಯಕಾಂತನ ಸಂಬಂಧಿಕರು ಬಂದು ಸೂರ್ಯಕಾಂತನಿಗೆ ಭಾರಿಗಾಯವಾಗಿದ್ದರಿಂದ  ಗುಲಬರ್ಗಾ ಬಸವೇಶ್ವರ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಿಗೆ ಕರೆದುಕೊಂಡು ಹೋಗಿರುತ್ತಾರ ಸದರಿ ಪ್ರಕರಣದಲ್ಲಿನಯ ಗಾಯಾಳು ಸೂರ್ಯಕಾಂತ ತಂದೆ  ಸೋಮಣ್ಣಾ ಮಾಟೂರ  ಇತನಿಗೆ ಬಸವೇಶ್ವರ ಆಸ್ಪತ್ರೆಯಿಂದ ಹೆಚ್ಚಿನ  ಉಪಚಾರ ಕುರಿತು ಗುಲಬರ್ಗಾದಿಂದ ಹೈದ್ರಾಬಾದನ ಯಶೋಧ  ಆಸ್ಪತ್ರೆ ಸೋಮಾಜಿ ಗುಡಾ ಹೈದ್ರಾಬಾದ  ಕರೆದುಕೊಂಡು ಹೋಗಿದ್ದು ದಿನಾಂಕ. 30-8-2013 ರಂದು 5-45 .ಎಂ.ಕ್ಕೆ ಆಸ್ಪತ್ರೆಯಲ್ಲಿ  ಮೃತ ಪಟ್ಟಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಶಂಕ್ರೇಪ್ಪಾ ದೊಡ್ಡಮನಿ ಸಾ:ಬೆಳಗುಂಪಿ ಹಾ:ವ:ತೊನಸಳ್ಳಿ (ಎಸ್‌) ಇವರು ದಿನಾಂಕ 01-09-2013 ರಂದು ತೊನಸಳ್ಳಿ (ಎಸ್‌‌) ಗ್ರಾಮದಲ್ಲಿರುವ  ಅಂಬೇಡ್ಕರ ಚೌಕದ ಹತ್ತಿರ ನಿಂತಾಗ ಜೇವರ್ಗಿ ಕಡೆಯಿಂದ ಲಾರಿ.ನಂ.ಕೆಎ-32,4731 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ನನಗೆ ತಲೆಗೆ ಭಾರಿ ಒಳಪೆಟ್ಟು, ಎರಡು ಮುಂಗೈಗೆ ಒಳಪೆಟ್ಟು ಮತ್ತು ಟೊಂಕಕ್ಕೆ ರಕ್ತಗಾಯ ಹಾಗೂ ಒಳಪೆಟ್ಟು ಮಾಡಿದ್ದು ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಬಸವರಾಜ ತಂದೆ  ವಿರಭದ್ರಪ್ಪಾ ಕೋರಿ ಸಾ: ಮನೆ ನಂ ಈ ಡಬ್ಲೂ .ಎಸ್. 16 ಆರ.ಟಿ.ಓ ಆಫೀಸ ಹಿಂದುಗಡೆ ಗುಬ್ಬಿ ಕಾಲೋನಿ ಗುಲಬರ್ಗಾ  ಇವರ ಮಗಳಾದ ಪೂಜಾ ವ: 17 ವರ್ಷ ಇವಳು ದಿನಾಂಕ: 17.08.2013 ರಂದು ಬೆಳಗ್ಗೆ 8.00 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ  ಅಂತಾ ಹೇಳಿ ಹೋದವಳು ಸಾಯಾಂಕಾಲವಾದರು ಮನೆಗೆ ಮರಳಿ ಬಂದಿರುವುದಿಲ್ಲಾ ನಾವು ಅಲ್ಲಿಂದ ಇಲ್ಲಿಯವರೆಗೆ ಪೂಜಾ ಇವಳ ಸ್ನೇಹಿತರಲ್ಲಿ ಮತ್ತು ನಮ್ಮ ಸಂಭಂದಿಕರಲ್ಲಿ  ಹುಡಿಕಾಡಿದರು ಸಿಕ್ಕಿರುವುದಿಲ್ಲಾ. ನನ್ನ ಮಗಳಿಗೆ ಮಹೇಶ @ ಮಹಾದೇವ ದೊರೆ ಸಾ: ಗುಬ್ಬಿ ಕಾಲೋನಿ ಗುಲಬರ್ಗಾ ಇತನು ಅಪಹರಿಸಿಕೊಂಡು ಹೋಗಿರಬಹುದು ಹಾಗು ನನ್ನ ಮಗಳಿಗೆ ಹುಡಿಕಿಕೊಡಬೇಕು ಅಂತಾ ನಮಗೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 September 2013


ಮಾರಣಾಂತಿಕ ಹಲ್ಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಸುಭದ್ರ ಗಂಡ ಚನ್ನಬಸಪ್ಪ ಬುಸಣ್ಣೊರ ಸಾ:ನಾಚವಾರ ಇವರ ಸುಮಾರು 15, 20 ವರ್ಷಗಳ ಹಿಂದೆ ನನ್ನ ಗಂಡನ ಅಣ್ಣತಮ್ಮಕಿಯವರಾದ ಜಗದೇವಪ್ಪ ತಂದೆ ಸಂಗಣ್ಣ ಬುಸಣ್ಣೊರ ರವರೊಂದಿಗೆ ವೈಶಮ್ಯ ಬೆಳೆದಿದ್ದರಿಂದ ನಾವು ಅವರೊಂದಿಗೆ ಮಾತಾಡುತ್ತಿರಲಿಲ್ಲ. ಹೀಗಿದ್ದು ದಿ:02-09-2013 ರಂದು ಮದ್ಯಾಹ್ನ ನನ್ನ ಗಂಡ, ಮನೆಯಿಂದ ಹೋರಗೆ ಹೋದ ಸ್ವಲ್ಪ ಹೊತ್ತಿಗೆ ಚೀರಾಡುವ ಶಬ್ದ ಕೇಳಿ ನಾನು ಹೊರಗೆ ಬಂದು ನೋಡಲು, ಮೊನಪ್ಪ ಬಡಿಗೇರ ಇವರ ಮನೆಯ ಹತ್ತಿರ ಸಿ.ಸಿ ರೋಡಿನ ಮೇಲೆ ಹೋಗಿ ನೋಡಲು ನನ್ನ ಗಂಡನಾದ ಚನ್ನಬಸಪ್ಪ ಇತನಿಗೆ ನಮ್ಮ ಅಣ್ಣತಮ್ಮಕಿಯವರಾದ 1] ಜಗದೇವಪ್ಪ 2] ಶರಣಪ್ಪ ಹಾಗು 3] ನಾಗಮ್ಮ ಗಂಡ ಜಗದೇವಪ್ಪ ಬುಸಣ್ಣೊರ 3 ಜನರು ಕೂಡಿಕೊಂಡು ಈ ಮಗನಿಗೀ ಬಿಡಬಾರದು ಖಲಾಸ ಮಾಡಬೇಕು ಅಂತಾ ಬೈಯುತ್ತಾ,  ಜಗದೇವಪ್ಪ ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಗಂಡನಿಗೆ ಈ ರಂಡೀ ಮಗನಿಗ ಬಿಡಬ್ಯಾಡದು, ಅಂತ ಕೊಲೆ ಮಾಡುವ  ಉದ್ದೇಶದಿಂದ ಕೊಡಲಿಯಿಂದ ತಲೆಯ ಮೇಲೆ ಹೊಡೆದು, ಭಾರಿ ರಕ್ತ ಗಾಯ ಮಾಡಿದನು. ಆಗ ಅಲ್ಲಿಯೇ ಇದ್ದ ಆತನ ತಮ್ಮ ಶರಣಪ್ಪ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಗಂಡನ ಎರಡು ಕೈಗಳ ಬೆರಳುಗಳ ಮೇಲೆ ಮತ್ತು ಎರಡು ಮೊಳಕಾಲುಗಳ ಮೇಲೆ , ಬೆನ್ನಿಗೆ ಹೊಡೆಯುತ್ತಾ, ಕೊಲೆ ಮಾಡಿ ಮುಗಸಬೇಕು ಅನ್ನುತ್ತಿದ್ದನು. ಆಗ ನನ್ನ ಗಂಡ ಚೀರಾಡಿದ್ದರಿಂದ ಈ ಸಪ್ಪಳ ಕೇಳಿ ಭೀಮಣ್ಣ ತಂದೆ ಶರಣಪ್ಪ ಸಿಮೇರ, ಮತ್ತು ನರಸರೆಡ್ಡಿ ತಂದೆ ಸಾಬರೆಡ್ಡಿ ಕೊನಾಪುರ ಹಾಗು ನಾನು ಮತ್ತು ನನ್ನ ಮಗ ಕೂಡಿ ಜಗಳ ಬೀಡಿಸಿದೇವು. ಇವರ ಹೊಡೆತಕ್ಕೆ ನನ್ನ ಗಂಡ ಮೂರ್ಚೆ ಹೋದನು ಅದನ್ನು ನೋಡಿ ಅವರು ಅವರು ಅಲ್ಲಿಂದ ಹೋಗಿದ್ದು ನನಗೆ ತಡೆದು ನಿಲ್ಲಿಸಿ ಹಿಂದಿನ ಜಗಳದ ವೈಮನಸ್ಸು ಇಟ್ಟುಕೊಂಡು ಅದೇ ದ್ವೇಶದಿಂದ ನನಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಕೊಡಲಿ ಹಾಗು ಬಡಿಗೆಯಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.