POLICE BHAVAN KALABURAGI

POLICE BHAVAN KALABURAGI

29 July 2013

GULBARGA DIST REPORTED CRIMES

ಶಹಾಬಾದ ನಗರ ಪೊಲೀಸ ಠಾಣೆ
ಅಪಘಾತ ಪ್ರಕರಣ  
ಮೈನುದ್ದೀನ ತಂದೆ ಮಹಿಬೂಬಸಾಬ ಸಂಧಿಮನಿ ಸಾ:ನಾಗೂರ ಹಾ:ವ:ರಾಮನಗರ ಗುಲಬರ್ಗಾ ಮತ್ತು ಶರಣು ಕೂಡಿ ಇಬ್ಬರು ಮೋಟಾರ ಸೈಕಲ ಮೇಲೆ ಅವರ ಅಣ್ಣ ಮೋಬಿನ ಇನ್ನೊಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಶಹಾಬಾದನಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಮೋಬಿನನು ಮೋಟಾರ ಸೈಕಲ ಮೇಲೆ ಮುಂದೆ ಹೋಗುತ್ತಿದ್ದು ನಾವು ಹಿಂದೆ ಹೋಗುತ್ತಿರುವಾಗ ಮೋಬಿನನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಸುತ್ತಾ ದೇವನ ತೆಗನೂರ ಗ್ರಾಮದ ಬಸಸ್ಟಾಂಡ ಹತ್ತಿರ ಇರುವ ರೋಡ ಬ್ರೇಕ ಹತ್ತಿರ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕಿಡ್ಡಾಗಿ ಬಿದ್ದುಮೊಬಿನನ ಬಲಕಪಾಳಿಗೆ ತರಚಿದ ರಕ್ತಗಾಯ ಹಣೆಯ ಮಧ್ಯ ಭಾಗದಲ್ಲಿ ಭಾರಿ ರಕ್ತಗಾಯ & ತಲೆ ಬಲಭಾಗಕ್ಕೆ ಭಾರಿ  ಗಾಯವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ ಠಾಣೆ
ಅಪಘಾತ ಪ್ರಕರಣ  

ಜಗದೀಶ@ಜಗನ್ನಾಥ ಮತ್ತು ಪ್ರದೀಪ ಕುಮಾರ ತಂದೆ ಬಸಪ್ಪಾ ಕೂಡಿ ಹೀರೊ ಹೊಂಡಾ ಮೋಟಾರ ಸೈಕಲ ನಂ.ಕೆಎ-32, ಇಎ-7914 ನೇದ್ದರ ಮೇಲೆ ಹೊನಗುಂಟಾ-ಶಹಾಬಾದ ರಸ್ತೆಯ ಮರಗಮ್ಮಾ ಗುಡಿಯ ಹತ್ತಿರ ಹೋಗುತ್ತಿರುವಾಗ ಪ್ರದೀಪ ಕುಮಾರನು ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಹೋಗಿ ರಸ್ತೆ ಪಕ್ಕದ  ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದರಿಂದ ಹಿಂದೆ ಕುಳಿತ ಜಗದೀಶನಿಗೆ ಹಣೆಯ ಮಧ್ಯದಲ್ಲಿ ಭಾರಿ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲಿ ಇರುವದಿಲ್ಲಾ. ಕಾರಣ ಮೋ/ಸೈ ಸವಾರನಾದ ಪ್ರದೀಪ ಕುಮಾರನ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಜಗದೀಶ@ಜಗನ್ನಾಥನ ತಂದೆ  ಸುಬ್ಬಣ್ಣಾ ತಂದೆ ಮಲ್ಲಣ್ಣಾ ಸಾ:ಹೊನಗುಂಟಾ  ಇವ್ರುಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

28 July 2013

GULBARGA DIST REPORTED CRIMES

ಮಹಿಳಾ ಪೊಲೀಸ್ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ :   


            ಶ್ರೀಮತಿ ಪರವೀನ ಬೇಗಂ ಗಂಡ ಮಹ್ಮದ ಮುಸ್ತಾಕ ಖಾನ   ಸಾ; ಹುಸೇನಿ ಗಾರ್ಡನ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಸುಮಾರು 4 ವರ್ಷಗಳ ಹಿಂದೆ ಗುಲಬರ್ಗಾ ಹುಸೇನಿ ಗಾಡನದ ಮಹ್ಮದ ಮುಸ್ತಾಕ ಖಾನ ಇತನೊಂದಿಗೆ ಸಂಪ್ರದಾಯದಂತೆ ತಮ್ಮ ಮದುವೆ ಆಗಿದ್ದು ಯಾವಾಗಲೋ ನಮ್ಮ ತವ್ರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದು.  ದಿ: 21-07-2013 ರಂದು ನಮ್ಮ ತಾಯಿ ರಹಿಮುನ್ನಿಸಾ ಬೇಗಂ ಮತ್ತು ನನ್ನ ಅಕ್ಕಂದಿರಾದ ನಸ್ರೀನ್ ಬೇಗಂ, ಇಸ್ರತ್ ಬೇಗಂ ಇವರೆಲ್ಲರೂ ನನಗೆ ಮಾತನಾಡಿಸುವ ಕುರಿತು ಮನೆಗೆ ಬಂದಾಗ ನನ್ನ ಗಂಡ ಮಹ್ಮದ ಮುಸ್ತಾಕ, ಅತ್ತೆ ಖುಸ್ರೀದ್ ಬೇಗಂ ನಾದೀನಿಯರಾದ ಸಾಹೇರಾ ಬೇಗಂ, ಹಾಜೀ ಬೇಗಂ ನಸ್ರೀನ್ ಬೇಗಂ , ಕೌಸರ ಬೇಗಂ, ಶಾಹೀದಾ ಬೇಗಂ,ಇರ್ಫಾನ್ ಬೇಗಂ ಮತ್ತು ಮೈದುನನಾದ ಅಲ್ತಾಫ ಇವರೆಲ್ಲರೂ ಕೂಡಿ ನನ್ನ ತಾಯಿ ಮತ್ತು ನನ್ನ ಅಕ್ಕಂದಿರಿಗೆ ನಿವೇಲ್ಲ ನಮ್ಮ ಮನೆಗೆ ಯಾಕೆ? ಬಂದಿದ್ದೀರಿ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ಹಾಗೆ ಬಂದಿರುತ್ತೀರಿ ನೀವು 2 ಲಕ್ಷ ರೂಪಾಯಿ ಹಣ ಕೊಡದೇ ಇದ್ದರೆ ಪರವೀನ್ ಬೇಗಂ ಇವಳಿಗೆ ಕೊಲೆ ಮಾಡಿ ಮಹ್ಮದ ಮುಸ್ತಾಕ ಇವನಿಗೆ ಬೇರೆ ಮದುವೆ ಮಾಡುತ್ತೇವೆ. ಎಂದು ಜಗಳ ತೆಗೆದು ನನ್ನ ಗಂಡ ನನಗೆ ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮ ತಾಯಿ ರಹಿಮುನ್ನೀಸಾ ಬೇಗಂ ಬಿಡಿಸಲು ಬಂದಾಗ ನನ್ನ ನಾದೀನಿಯರೆಲ್ಲರೂ ಕೂಡಿ ನನ್ನ ತಾಯಿಗೆ ಎಳೆದು ಹೊಡೆ ಬಡೆ ಮಾಡಿರುತ್ತಾರೆ. ಆಗ ನನಗೆ ನನ್ನ ಮಕ್ಕಳೊಂದಿಗೆ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಮನೆಯಿಂದ ಹೊರಗಡೆ ಹಾಕಿರುತ್ತಾರೆ. ಕಾರಣ ನನಗೆ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ದಿನಾಲೂ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಕೈಯಿಂದ ಹೊಡೆ ಬಡೆ ಮಾಡುತ್ತಿರುವ ನನ್ನ ಗಂಡ ,ಅತ್ತೆ, ನಾದೀನಿಯರು ಹಾಗೂ ನಾದೀನಿಯ ಗಂಡ, ಮತ್ತು ಮೈದುನ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆಯಲ್ಇಲಪ್ರಕ್ರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

27 July 2013

GULBARGA DIST REPORTED CRIME


ಶಹಾಬಾದ ನಗರ ಠಾಣೆ:
ಯು.ಡಿ.ಆರ್ ಪ್ರಕರಣ:
ದಿನಾಂಕ:25/07/2013 ರಂದು ಶ್ರೀ ನೀಲಕಂಠ ತಂದೆ ಸಿದ್ದಪ್ಪ ಪಾಣಿಗಾಂವ ಸಾ:ಗೋಳಾ (ಕೆ) ರವರು ಠಾಣೆಗೆ ಹಾಜರಾಗಿ ಬೆಳಗ್ಗೆ 10.30 ಎಎಂ ಸುಮಾರಿಗೆ ಮಾಲಗತ್ತಿ ಸೀಮಾಂತರದಲ್ಲಿರುವ ತಮ್ಮ ಹೊಲಕ್ಕೆ ಹೋದಾಗ ಅವರ ಹೊಲದಲ್ಲಿರುವ ಬನ್ನಿ ಗಿಡಕ್ಕೆ ಒಬ್ಬ ವ್ಯಕ್ತಿ ನೇತಾಡುತ್ತಿರುವದನ್ನು ನೋಡಿ ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ನೇಣು ಹಾಕಿ ಕೊಂಡಿದ್ದು ನೋಡಲಾಗಿ ಆತನು ಯಾರೋ ಅಪರಿಚಿತನಿದ್ದು ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಆತನ ವಯಸ್ಸು ಅಂದಾಜು 23/25 ವರ್ಷ ಇದ್ದು ಮೃತ ವ್ಯಕ್ತಿಯು ಬನ್ನಿ ಗಿಡದ ಮೇಲ್ಬಾಗದಲ್ಲಿ ಗುಲಾಬಿ ಬಣ್ಣದ ನೂಲಿನ ಹಗ್ಗ ಕಟ್ಟಿ ಅದಕ್ಕೆ ಕೆಳಭಾಗದಲ್ಲಿ ಕಪ್ಪು ವಾಯರ  ಹಗ್ಗ ಕಟ್ಟಿ ನೇಣು ಹಾಕಿಕೊಂಡಿರುತ್ತಾನೆ. ಸದರಿಯವನ ಮೈ ಮೇಲೆ ಒಂದು ಬಿಳಿ ಗೇರಿ-ಗೇರಿ ಶರ್ಟ ಮತ್ತು ಒಂದು ಚಾಕಲೇಟ ಬಣ್ಣದ ಚೌಕಡಿ ಲುಂಗಿ ಇರುತ್ತದೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕನಗರ ಠಾಣೆ:
ಕಳವು ಪ್ರಕರಣ:
ಶ್ರೀ. ಸಮೀರ  ತಂದೆ ರಶೀದ ಬಾಗವಾನ  ಸಾ:ಭಗವತಿ ನಗರ ಗುಲಬರ್ಗಾ ರವರು ಠಾಣೆಗೆ ದಿನಾಂಕ 25/07/2013 ರಂದು ಬೆಳಿಗ್ಗೆ 3-30 ರಿಂದ 4 ಗಂಟೆ ಸುಮಾರಿಗೆ  ತಾವು ಮನೆಯಲ್ಲಿ ಮಲಗಿರುವ ಸಮಯದಲ್ಲಿ ಯಾರೋ ಕಳ್ಳರು ಕಂಪೌಂಡ ಹಾರಿ ಮನೆಯ ಕಿಟಕಿ ಮುರಿದು ಒಳಗಡೆ ಬಂದು  ಮನೆಯಲ್ಲಿದ್ದ ಒಂದು ಐ-ಫೋನ ಮೊಬೈಲ ಅದರ ಸೀಮ ನಂ 9611869999 ಮತ್ತು ಪ್ಯಾಂಟನ ಜೇಬಿನಲ್ಲಿದ್ದ 15,000/- ರೂಪಾಯಿಗಳನ್ನು ತೆಗೆದುಕೊಂಡು ಬೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೈಕೊಳ್ಳಲಾಗಿದೆ.