POLICE BHAVAN KALABURAGI

POLICE BHAVAN KALABURAGI

19 June 2013

GULBARGA DISTRICT REPORTED CRIMES

ಎರಡನೆ ಮದುವೆ ಮಾಡಿಕೊಂಡ ಬಗ್ಗೆ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:18/06/2013 ರಂದು ಸಾಯಂಕಾಲ 6-00 ಗಂಟೆಗೆ ನಮ್ಮ ಠಾಣೆಯ ಕೋರ್ಟ ಸಿಬ್ಬಂದಿಯಾದ ಶ್ರೀ ಮಾಣಿಕ ಪಿಸಿ ರವರು ಮಾನ್ಯ 1ನೇ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಸಂ.2469 ದಿನಾಂಕ: 14/06/2013 ನೇದ್ದರ ಅರ್ಜಿದಾರಳಾದ ಶ್ರೀಮತಿ ಉಷಾದೇವಿ ಗಂಡ ಸಂಗಣ್ಣಾ ಕಲ್ಲೂರ ವಯ:55ವರ್ಷ ಉಃಮನೆಕೆಲಸ ಸಾಃಹೊಳಕುಂದಾ ತಾಃಗುಲಬರ್ಗಾ ಇವರು 1975 ರಲ್ಲಿ ಸಂಗಣ್ಣಾ ತಂದೆ ಬಸವಣ್ಣಪ್ಪಾ ಕಲ್ಲೂರ ವಯ:60 ವರ್ಷ ಉಃನಿವೃತ್ತ ಫಾರೆಸ್ಟ ಅಧಿಕಾರಿಯೊಂದಿಗೆ ಮದುವೆಯಾಗಿದ್ದು. ನಮಗೆ ಮಹಾನಂದ ಎಂಬ ಮಗಳು ಜನಿಸಿದ್ದು ಅವಳು 3 ವರ್ಷದ ನಂತರ ಅನಾರೋಗ್ಯದಿಂದ ಮೃತಪಟ್ಟಿದ್ದು. ಮದುವೆಯಾದ 4-5 ವರ್ಷಗಳ ನಂತರ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕವಾಗಿ ನೌಕರಿಗೆ ಸೇರಿ, ಅವರಾದ ತಾಲ್ಲೂಕಿನ ಸಂಗಮ ಫಾರೆಸ್ಟಗೆ ವರ್ಗಾವಣೆಯಾಗಿ ನಂತರ ಹುಮನಾಬಾದಕ್ಕೆ  ವರ್ಗಾವಣೆಯಾಯಿತು. ಆವಾಗಿನಿಂದ ದಿನಾಲು ಕುಡಿಯುವುದು ತಿನ್ನುವುದು ಮಜಾ ಮಾಡಿ  ಹೊಡೆಬಡೆ ಮಾಡುತ್ತಿದ್ದನು. ನಾನು ಬೇಸತ್ತು ನಾನು ನನ್ನ ತವರು ಮನೆಯಲ್ಲಿ ಬಂದು ಉಳಿದೇನು. ನಂತರ ನನಗೆ ಗೊತ್ತಾಗದಂತೆ 2000ನೇ ಸಾಲಿನಲ್ಲಿ ಕಮಲಾಪೂರ ಗ್ರಾಮದ ರಾಮತೀರ್ಥ ಗುಡಿಯಲ್ಲಿ ರೇಣುಕಾ @ ಆಶಾದೇವಿ ತಾಯಿ ನಾಗಮ್ಮಾ ಸಾಃಹೊಳಕುಂದಾ ಹಾಃವಃ ಹುಮನಾಬಾದ  (ಗಂಡ ಸಂಗಣ್ಣಾ ಕಲ್ಲೂರ ) ಇವಳೊಂದಿಗೆ 2ನೇ ಮದುವೆ ಮಾಡಿಕೊಂಡು ಮತದಾನ ಪತ್ರದಲ್ಲಿ ಹೆಸರು ಸೇರಿದ್ದು ಅಲ್ಲದೇ ತನ್ನ ಸೇವಾ ಪುಸ್ತಕದಲ್ಲಿ ನನ್ನ ಹೆಸರು ತೆಗೆದು ಹಾಕಿ 2ನೇ ಹೆಂಡತಿಯಾದ ರೇಣುಕಾ @ಆಶಾದೇವಿ ಇವಳ ಹೆಸರು ನಮೂದಿಸಿದ್ದಾರೆ.ನನ್ನ ಗಂಡ ಸಂಗಣ್ಣಾ ಈತನು 2ನೇ ಮದುವೆ ಮಾಡಿಕೊಂಡು ತನ್ನ ಸೇವಾ ಪುಸ್ತಕ ದಲ್ಲಿ 2ನೇ ಹೆಂಡತಿ ಹೆಸರು ನಮೂದಿಸಿ ನನಗೆ  ಮೋಸ ಮಾಡಿದ್ದರಿಂದ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ನ್ಯಾಯಾಲಯದ ಆದೇಶ ಪ್ರಕಾರ ದೂರು ವಸೂಲಾಗಿದ್ದರಿಂದ ಠಾಣೆ ಗುನ್ನೆ ನಂ:58/2013 ಕಲಂ. 494, 420, 465, 468, 419 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ಹೋದಾಗ ಸೂರ್ಯಕಾಂತ ಸಿಬರ್ ಈತನು ವಿನಾಃಕಾರಣ ಜಗಳ ತೆಗೆದಿದ್ದನು. ರಾತ್ರಿ 9-00 ಗಂಟೆಗೆ ಮಳಖೇಡಕ್ಕೆ ಬಂದು ಮನೆಯ ಮುಂದೆ ನಿಂತಾಗ ಸೂರ್ಯಕಾಂತ ಮತ್ತು ಅವನ ಸಂಗಡ ಅಣ್ಣ ತಮ್ಮಂದಿರು ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀ ರವಿಚಂದ್ರ ತಂದೆ ಶರಣಪ್ಪ ಸಿಬರ್ ವಯಾ|| 21 ವರ್ಷ ಜಾ|| ಕಬ್ಬಲಿಗ ಉ||  ಆರ್.ಸಿ.ಎಫ್ ಕಂಪನಿಯಲ್ಲಿ ಕೆಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:59/2013 ಕಲಂ 323. 324. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ನಾವು ಮತ್ತು ರವಿಚಂದ್ರ ತಂದೆ ಶರಣಪ್ಪ ಸಿಬರ್  2) ಸಾಬಣ್ಣ 3ನಾಗಪ್ಪ ಸಾ|| ಎಲ್ಲರು ಮಳಖೇಡ ರವರು ಜಗಳ ತೆಗೆದಿದ್ದು ಮರಳಿ ಮಳಖೇಡಕ್ಕೆ ಬಂದಾಗ ನಿಮ್ಮ ತಮ್ಮ ನಮ್ಮ ಜೋತೆ ಜಗಳ ತೆಗೆದಿದ್ದಾನೆ ನಿಮ್ಮ ಸೊಕ್ಕು ಬಹಳ ಬಂದಿದೆ ಅಂತ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಲಕ್ಷ್ಮಿಕಾಂತ ತಂದೆ ಚಂದ್ರಪ್ಪ ಸಿಬಾನೋ ವಯಾ||23 ವರ್ಷ ಜಾ|| ಕಬ್ಬಲಿಗ ಉ|| ಆರ್.ಸಿ.ಎಫ್ ಕೇಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 341. 323. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

18 June 2013

GULBARGA DISTRICT REPORTED CRIME

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ:ಶ್ರೀ, ಮಹ್ಮದ ರಫೀಕ ತಂದೆ ಮಹಿಬೂಬ ಅಲಿ,  ಸಾಃ ಮೋಮಿನಪೂರ ಗುಲಬರ್ಗಾ ರವರು ನನ್ನ ಮಗ ಮಹ್ಮದ ನಬಿ ವಯಾ|| 5 ವರ್ಷ ಈತನು ತನ್ನ ತಾಯಿಯೊಂದಿಗೆ ದಿನಾಂಕ:17-06-2013 ರಂದು ರಾತ್ರಿ 8-30 ಗಂಟೆಗೆ ಮೋಮಿನಪೂರ ದಿವಾನ್ ಕಟ್ ಪೀಸ್ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಒಂದು ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಮೋಮಿನಪೂರ ಕಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2013 ಕಲಂ 279, 338 ಐಪಿಸಿ ಸಂ. 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

17 June 2013

GULBARGA DISTRICT REPORTED CRIME

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ:ಶ್ರೀಮತಿ ವಿಜಯಲಕ್ಷ್ಮೀ ಗಂಡ ದೇವಿಂದ್ರ ಕಟ್ಟಿಮನಿ ಉ;ಸಹ ಶಿಕ್ಷಕಿ ಸಾ: ಬಸವೇಶ್ವರ ಕಾಲನಿ ಗುಲಬರ್ಗಾರವರು ನನ್ನ ಮದುವೆಯು ದಿನಾಂಕ:26-05-2011 ರಂದು ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಗ್ರಾಮದ ದೇವಿಂದ್ರ ಇತನೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ 50.000/- ರೂಪಾಯಿ 5 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಗಂಡ ರಾಯಚೂರ ಜಿಲ್ಲೆಯ ಇಡಪ್ಪನೂರ ಪೌಡ್ರಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಗಂಡ ತನ್ನ ಅಣ್ಣನಾದ ತಿಪ್ಪಣ್ಣಾ ಇತನ ಮಾತು ಕೇಳಿ ನನಗೆ ವರದಕ್ಷಿಣೆ ಕಿರುಕುಳ ಕೊಟ್ಟು ನನಗೆ ಮನೆಯಿಂದ ಹೊರಗೆ ಹಾಕಿರುತ್ತಾನೆ. ದಿನಾಂಕ:10-06-2013 ರಂದು ನನ್ನ ಗಂಡ ಪೋನ ಮಾಡಿ ನಾನು ರಾಯಚೂರನಿಂದ ಗುಲಬರ್ಗಾಕ್ಕೆ ವರ್ಗಾವಣೆಯಾಗಿ ಬರುವದಕ್ಕಾಗಿ ಸೇವಾ ಪ್ರಮಾಣ ಪತ್ರ ಅವಶ್ಯಕತೆ ಇರುತ್ತದೆ ಅಂತಾ ಹೇಳಿ  ಜಗತ ಸರ್ಕಲ್ ದ ಗುಡ್ಡಾಂಬೆ ಶೋರುಮ್ ಹತ್ತಿರ ಬರುವಂತೆ ಹೇಳಿದ್ದರಿಂದ ದಿನಾಂಕ:11.06.2013 ರಂದು ಸಾಯಂಕಾಲ್ 6.30 ಗಂಟೆಗೆ ಜಗತ ಸರ್ಕಲ್ ದ ಗುಡ್ಡಾಂಬೆ ಶೋರುಮ್ ಹತ್ತಿರ ಹೋದಾಗ ನಮ್ಮ ತಂಗಿಯ ಮದುವೆಗಾಗಿ 5 ಲಕ್ಷ ರೂಪಾಯಿ ಖರ್ಚಾಗಿರುತ್ತದೆ. ನನ್ನ ಅಣ್ಣ ತಿಪ್ಪಣ್ಣಾ ನೀನು ಹಣ ಕೊಡುವುದಿದ್ದರೆ ನಿನಗೆ ಖಲಾಸ ಮಾಡು ಅಂತಾ ಹೇಳಿದ್ದಾರೆ ನಾನು ಹಣವಿಲ್ಲಾ ಅಂತಾ ಹೇಳದಕ್ಕೆ ನನ್ನ ಗಂಡ ಕಪಾಳಕ್ಕೆ ತಲೆ, ಕಿವಿ ಮೇಲೆ  ಹೊಡೆದಿದ್ದಾನೆ, ಕೆಳಗೆ ಹಾಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ, ನನಗೆ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡ ಮತ್ತು ಭಾವ ತಿಪ್ಪಣ್ಣಾ ರವರ ಮೇಲೆ ಕಾನೂನು ಕ್ರಮ್ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:36/2013 ಕಲಂ 498(ಎ).323.506 109 ಸಂಗಡ 34 ಐ.ಪಿ.ಸಿ 3&4 ಡಿ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ.