POLICE BHAVAN KALABURAGI

POLICE BHAVAN KALABURAGI

01 June 2013

GULBARGA DISTRICT REPORTED CRIME

ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ  ಠಾಣೆ: ದಿನಾಂಕ;31/05/2013 ರಂದು ರಾತ್ರಿ 10:30 ಗಂಟೆಗೆ ಮೋಟಾರ ಸೈಕಲ ನಂ ಕೆಎ 32 ಆರ್‌‌ 7549 ನೇದ್ದರ ಮೇಲೆ ನನ್ನ ತಮ್ಮನಾದ ಲಕ್ಷ್ಮಣಸಿಂಗ ತಂದೆ ರನ್ನುಸಿಂಗ ತಿವಾರಿ ಇತನು ಗುಲಬರ್ಗಾದಿಂದ ಊರಿಗೆ ಬರುತ್ತಿರುವಾಗ ಗುಲಬರ್ಗಾ-ಹುಮನಾಬಾದ ರೋಡಿ ಉಪಳಾಂವ  ಕ್ರಾಸಿನ ಸಮೀಪ ಇರುವ ಮಲ್ಲಿಕಾರ್ಜುನ  ದಾಲ ಮಿಲ್‌‌ ಹತ್ತಿರ ಹಿಂದಿನಿಂದ ಯಾವುದೋ ವಾಹನದ ಚಾಲಕನ್ನು ಲಕ್ಷ್ಮ ಣ ಇತನಿಗೆ  ಡಿಕ್ಕಿ ಪಡೆಯಿಸಿ ಹಾಗೇಯೇ  ಹೋಗಿದ್ದರಿಂದ ಲಕ್ಷ್ಮಣ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಾವರಗೇರಾ ಗ್ರಾಮದ ಸಂಜುಕುಮಾರ ಚಲವಾದಿ  ಹಾಗೂ ಪಿರೋಜ ಪಟೇಲ ಇವರು ಗುಲಬರ್ಗಾ ಕಡೆಯಿಂದ ತಮ್ಮ ಊರಿಗೆ ಬರುವಾಗ ನೋಡಿ ತಿಳಿಸಿದ್ದರಿಂದ ನಾನು ಹೋಗಿ ನೋಡಲು ಅಪಘಾತದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಗಂಗಾಬಾಯಿ ಗಂಡ ಶ್ಯಾಮಸಿಂಗ ಠಾಕೂರ ಸಾ|| ಮಳಖೇಡ ಹಾ:ವ:ತಾವರಗೇರಾ ತಾ;ಜಿ:ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 277/2013 ಕಲಂ 279, 304 (ಎ) ಐಪಿಸಿ ಸಂ. 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಗುಲಬರ್ಗಾ ನಗರದ ಶಾಂತಿನಗರದಲ್ಲಿರುವ ನನ್ನ ಅಳಿಯ ಲಕ್ಷ್ಮಿನಾರಾಯಣ ಹಾಗು ಮಗಳು ಪದ್ಮಾ ಮಕ್ಕಳೊಂದಿಗೆ ವಾಸವಾಗಿದ್ದು ಬೇಸಿಗೆ ರಜೆ ನಿಮಿತ್ಯ ನನ್ನ ಮಗಳು ಅಳಿಯ ಶಾಂತಿನಗರ ಮನೆಗೆ ಕೀಲಿ ಹಾಕಿಕೊಂಡ ಶಾಹಾಪುರಕ್ಕೆ ಹೋಗಿದ್ದರು ಆಗಾಗ್ಗೆ ಬಂದು ಹೋಗುವುದು ಮಾಡುತ್ತಿದ್ದರು. ದಿನಾಂಕ:31/05/2013 ರಂದು ಮುಂಜಾನೆ ನಾನು ನನ್ನ ಮಗಳು ನನ್ನ ಹೆಂಡತಿ ಮೋಮ್ಮಕಳೊಂದಿಗೆ ಶಾಂತಿನಗರ ಮನೆಗೆ ಬಂದು ನೋಡಲು ಕೊಣೆಯ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ಬೆಳ್ಳಿಯ ಸಾಮಾನುಗಳು ಒಟ್ಟು 1,62,000/- ರೂಪಾಯಿಗಳ ಕಿಮ್ಮತ್ತಿವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಕಿಶನರಾವ ತಂದೆ ಜೈರಾಮ ಕುಲಕರ್ಣಿ ಸಾ:ಸೇಡಂ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 88/2013 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಮನ್ನು ತಂದೆ ಭಿಮು ಚವ್ಹಾಣ ಸಾ:ಪಾಣೆಗಾಂವ ತಾಂಡಾ ತಾ:ಜಿ:ಗುಲಬರ್ಗಾ ರವರು  ನಮ್ಮ ತಾಂಡಾದ ಬಿಲ್ಲು ನಾಯಕ ಇವರ ಮಗನ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 10-00 ಗಂಟೆ ಸುಮಾರಿಗೆ ನಮ್ಮ ಸಂಬಂಧಿಕರಾದ ರಾಮು ರಾಠೋಡ ಇವರ ಮನೆಯ ಮುಂದುಗಡೆಯಿಂದ ಹೋಗುತ್ತಿದ್ದಾಗ ರಾಮು ರಾಠೋಡ ಇತನು ನಮ್ಮ ಮಗಳ ಜೋತೆಗೆ ಸುಮ್ಮನೆ ಕಿರಿಕಿರಿ ಮಾಡುತ್ತಾನೆ ಅಂತಾ ಅವಾಚ್ಯವಾಗಿ ಬೈದು ತನ್ನ ಮಕ್ಕಳಿಗೆ ಕರೆಯುತ್ತಿದ್ದಾಗ ನಾನು ಗಾಬರಿಯಿಂದ ನಮ್ಮ ಮನೆಯ ಕಡೆಗೆ ಓಡಿ ಹೋಗುತ್ತಿದ್ದಾಗ ರಾಜು ಇತನು ತನ್ನ ಕೈಯಲ್ಲಿ ಕಟ್ಟಿಗೆ, ಅನಿಲ್‌ ಇತನು ತನ್ನ ಕೈಯಲ್ಲಿ ಕ್ರೀಕೆಟ್‌ ಆಡುವ ಬ್ಯಾಟನ್ನು  ಹಿಡಿದುಕೊಂಡು ಮೂರೂ ಜನರು ನನ್ನ ಬೆನ್ನ ಹಿಂದೆ ಓಡಿಸಿಕೊಂಡು ಬಂದು ನಮ್ಮ ಮನೆಯ ಮುಂದೆ ಕೈಯಲ್ಲಿದ್ದ ಕಟ್ಟಿಗೆಯಿಂದ ಬ್ಯಾಟನಿಂದ ಹೋಡೆದು ರಕ್ತಗಾಯ ಮಾಡಿರುತ್ತಾರೆ.ನನ್ನ ಹೆಂಡತಿ ಫಾತಿಬಾಯಿ ಇವಳು ಬಿಡಿಸಲು ಬಂದರೆ ಅವಳಿಗೂ ಕೂಡಾ ರಾಜು ಇತನು ಕಟ್ಟಿಗೆಯಿಂದ ಎಡಗೈ ರಟ್ಟಿಯ ಮೇಲೆ, ಮುಂಗೈ ಕೆಳಗೆ ಮತ್ತು ಎಡ ಚಪ್ಪಿಗೆ ಹೊಡೆದು ಒಳಪೆಟ್ಟು ಮಾಡಿ ನೂಕಿ ಕೋಟ್ಟಿರುತ್ತಾರೆ. ಉಪಚಾರ ಕುರಿತು 108 ಅಂಬುಲೇನ್ಸ್ ವಾಹನದಲ್ಲಿ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 76/2013 ಕಲಂ:  341, 323, 324, 504, 506 ಸಂ: 34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಹಲ್ಲೆ ಪ್ರಕರಣ:

ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಶರಣಬಸ್ಸಪ್ಪಾ ತಂದೆ ಮಲ್ಲಿಕಾರ್ಜುನ ಹೀರೆಗೌಡರ ಸಾ:ಯಳವಂತಗಿ (ಕೆ) ತಾ||ಜಿ||ಗುಲಬರ್ಗಾರವರು  ದಿನಾಂಕ:29-05-2013 ರಂದು ನನ್ನ ದೊಡ್ಡಪನ ಮಗನಾದ ಲಕ್ಷ್ಮೀಕಾಂತ ಹಿರೇಗೌಡರ ಇತನ ಮದುವೆ ಕಾರ್ಯಾಕ್ರಮದ ಮೆರವಣಿಗೆ ನಮ್ಮ ಗ್ರಾಮದ ಲಕ್ಷ್ಮೀ ಗುಡಿಯ ಹತ್ತಿರ ಹೋಗುತ್ತಿರುವಾಗ ನಮ್ಮ ಗ್ರಾಮದ ನಮ್ಮ ಅಣ್ಣತಮ್ಮಂದಿರಾದ ಶಿವಾನಂದ ತಂದೆ ಶಿವಶರಣಪ್ಪ ಹೀರೆಗೌಡ ಇತನು ಕೂಡಾ ಮೆರವಣೆಗೆಯಲ್ಲಿ ಬರವಾಗ ನನಗೆ ಮುಂಡಿ ಹೊಡೆದು ಮುಂದಕ್ಕೆ ಹೋದನು ಆಗ ನಾನು ಮನುಷ್ಯರಿಗೆ ನೋಡಿ ನಡೆಯಿರಿ ಅಂತಾ ಅಂದ್ದಿದಕ್ಕೆ ಶಿವಾನಂದ ಇತನು ಅವಾಚ್ಯ ಶಬ್ದಗಳಿಂದ ಬೈಯ್ದು ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೋಡದು ತನ್ನ ಕೈಯಲ್ಲಿರುವ ರಾಡ ನಮೂನೆಯ ವಸ್ತುವಿನಂದ  ನನಗೆ ಹೋಡೆಯಲು ಬಂದಾಗ ತಪ್ಪಿಸಿಕೊಂಡಿದ್ದರಿಂದ ನನ್ನ  ಎಡಗೈ ಮುಂಗೈ, ಮತ್ತು ಎಡಗೈ ರಟ್ಟೆಗೆ ತರಚಿದ ನಮೂನೆಯ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 276/2013 ಕಲಂ. 341, 323, 324, 504, 506 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

31 May 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:30/05/2013 ರಂದು ಬೆಳಿಗ್ಗೆ 11-30 ಗಂಟೆಗೆನಾನುಮತ್ತು ಶರಣಪ್ಪ ಇಬ್ಬರು ಕೂಡಿಕೊಂಡು ಊರಿಗೆ ಹೋಗುವ ಕುರಿತು ಕೇಂದ್ರ ಬಸ್ಸ್ ನಿಲ್ದಾಣದ ಎಡಭಾಗದಲ್ಲಿರುವ ಖಾಸಗಿ ಬಸ್ ಜೀಪ ನಿಲ್ಲುವ ಸ್ಥಳಕ್ಕೆ ಹೋದಾಗ ಎಲ್ಲಿ ಊರಿಗೆ ಹೋಗುವ ವಾಹನ ಇರದೆ ಇದ್ದುದರಿಂದ ಸ್ವಲ್ಪ ಕುಡಿಯೊಣ ಅಂತ ಇಬ್ಬರು ಕೂಡಿಕೊಂಡುವಿನಾಯಕ ಬಾರ ಹತ್ತಿರ ಹೊಗುವಷ್ಟರಲ್ಲಿ 20-25 ವರ್ಷದವರು ಇಬ್ಬರು ಅದರಲ್ಲಿ ಒಬ್ಬ ಕಪ್ಪಾಗಿದ್ದು ಉದ್ದನೆ ಕುದಲು ಇನ್ನೊಬ್ಬ ಕಪ್ಪಾಗಿದ್ದು ಸಣ್ಣ ಕುದಲು ಇದ್ದವರು ನಮ್ಮನ್ನು ನೋಡಿ ಏ ಭೋಸಡಿ ಮಕ್ಕಳ್ಯಾ ಇಲ್ಲಿ ಬರ್ರಿ ಅಂತ ಕಪ್ಪಾಗಿರುವ ಸಣ್ಣ ಕುದಲಿನವನು ಕರೆದ ನಾವು ಏನು ಅಂತ ಅವರ ಹತ್ತಿರ ಹೋಗುವಷ್ಟರಲ್ಲಿ ಅವರಲ್ಲಿಯ ಇನ್ನೊಬ್ಬನು ಅವಾಚ್ಯವಾಗಿ ಬೈದು ಬೋಸಡಿ ಮಕ್ಕಳೆ ಏಲ್ಲಿಯವರು ನೀವು ಈ ಗುಲಬರ್ಗಾ ನಿಮ್ಮಪ್ಪಂದು ಯಾಕ ತಿರುಗ್ಯಾಡುತ್ತಿರಿ ನಮಗೆ ಮಧ್ಯ ಕುಡಿಸಿ ಅಂತ ನನ್ನ ಅಂಗಿ ಹಿಡಿದಿದ್ದು ಆಗ ನಾನು ಯಾಕೆ ಅಂತ ಅನ್ನುವಷ್ಟರಲ್ಲಿ ಉದ್ದ ಕೂದಲಿದ್ದವನು ಮರ್ಯಾದಿ ಇಂದ ಕೂಡಿಸು ಇಲ್ಲದಿದ್ದರೆ ಈ ಬ್ಲೇಡಚಾಕುವಿನಿಂದ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅಂದವನೆ ನನ್ನ ಮೇಲೆ ಹೊಡೆಯಲು ಬಂದಿದ್ದು ಆಗ ಶರಣಪ್ಪ ಇತನು ಬಿಡಿಸಿಕೊಳ್ಳಲು ಬಂದಾಗ ಅವನಿಗೂ ಸಹ ಹೊಡೆದು ನೂಕಿಕೊಟ್ಟು ಬ್ಲೇಡಚಾಕುವಿನಿಂದ ನನ್ನ ಕುತ್ತಿಗೆ ನಳ್ಳಿ ಹತ್ತಿ ಎಡಭಾಗದಲ್ಲಿ ಜೋರಾಗಿ ಹೊಡೆದು ಅದರಿಂದ ನನಗೆ ಭಾರಿ ಗಾಯವಾಗಿ ರಕ್ತ ಸೊರಹತ್ತಿದ್ದು ಆಗ ಅಂಗಡಿಯವರು ಮತ್ತು ಇತರರನ್ನುನೋಡಿ ನನ್ನನ್ನು ಬಿಟ್ಟು ಓಡಿಹೋಗಿರುತ್ತಾರೆ.ವಿನಾಕಾರಣ ತಂಟೆ ಕತರಾರು ಮಾಡಿ ಮಧ್ಯ ಕುಡಿಸು ಅಂತ ಬ್ಲೇಡಚಾಕುವಿನಿಂದ ಹೊಡೆದಿರುವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಯ್ಯ ತಂದೆ ಸಿದ್ದಯ್ಯ ಮಠಪತಿ ಸಾ|| ವಜ್ಜರಗಾವಂ ತಾ|| ಚಿಂಚೋಳಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.87/2013 ಕಲಂ. 323, 324, 307, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:

ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀಮತಿ, ಮೇರಾಬಿ ಗಂಡ ಉಸ್ಮಾನಸಾಬ ಮೇಲ್ದಾರ್ ಸಾ|| ಆಲ್ಲೂರ (ಬಿ) ರವರು ನಿನ್ನ ದಿವಸ ನಾವು ನಿನ್ನಗೆ  ಹೋಡೆದಿದ್ದವಿ ಅಂತಾ ನಮ್ಮ ವಿರುದ್ಧ  ಪೋಲಿಸ್ ಠಾಣೆಯಲ್ಲಿ  ಕೇಸು ಮಾಡಿದ್ದಿ ಅಯ್ಯುಬ ಖಾನ  ತಂದೆ ಮೈಹಿಬೂಬ ಅಲಿ ಮೇಲ್ದಾರ್ ಸಾ|| ಅಲ್ಲೂರ (ಬಿ) ಮತ್ತು ಅವನ ಹೆಂಡತ್ತಿ ಶಬಾನ ಬೇಗಂ ಗಂಡ ಅಯ್ಯುಬ ಖಾನ  ಮೇಲ್ದಾರ್ ಸಾ|| ಅಲ್ಲೂರ (ಬಿ)    ರವರು ಅವಾಚ್ಯ ಶಬ್ದಗಳಿಂದ  ಬೈಯುತ್ತಾ ಅಯ್ಯುಬ ಖಾನ  ಇತನು ನನಗೆ ಬೆನ್ನ ಮೇಲೆ .ಹೊಟ್ಟೆಯ ಮೇಲೆ ಹೊಡೆದಿದ್ದು, ಶಬಾನ ಬೇಗಂ ಇವಳು  ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದು ಅಯ್ಯುಬ ಖಾನ  ಇತನು ನೆಲಕ್ಕೆ ಹಾಕಿ ಕುಳಿತು ಕುತ್ತಿಗೆ ಒತ್ತಿ ಹಿಡಿದು ಖಲಾಸ ಮಾಡಿಯೇ ಬಿಡುತ್ತನೆ ಅಂತಾ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತಾ ಶ್ರೀಮತಿ ಮೇರಾಬಿ ರವರು ದೂರ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:77/2013 ಕಲಂ, 323, 324, 354, 504, 506, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.