POLICE BHAVAN KALABURAGI

POLICE BHAVAN KALABURAGI

19 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ : ದಿನಾಂಕ:19-03-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಗುಲಬರ್ಗಾ ಗ್ರಾಮೀಣ ಮತಕೇತ್ರದ ವ್ಯಾಪ್ತಿಯಲ್ಲಿ ಬರುವ ಕಮಲಾಪೂರ ಗ್ರಾಮದಲ್ಲಿ ಕೆ.ಜೆ.ಪಿ ಪಕ್ಷದ ಟೆಂಗನಿಕಾಯಿ ಚಿಹ್ನೆ ಮತ್ತು ಆ ಪಕ್ಷದ ಮುಖಂಡರ ಭಾವವಿತ್ರವಿರುವ ಬಿತ್ತಿ ಪತ್ರಗಳು ಬಸವೇಶ್ವರ ಕಟ್ಟೆಯ ಸಮೀಪ ಲೈಟ ಕಂಬದ ಮೇಲೆ ಯಾವದೇ ಪರವಾನಿಗೆ ಪಡೆಯದೆ ಕೆ.ಜೆ.ಪಿ ಪಕ್ಷದ ಅಧಿಕೃತ ಅಭ್ಯರ್ತಿಯವರು ಅಂಟಿಸಿರುತ್ತಾರೆ. ಹಾಗೂ ಪ್ರೀಂಟಗಳು ಹಾಗೂ  ತಯಾರಕರ ಹೆಸರು ನಮೂದಿಸಿರುವದಿಲ್ಲ  ಅಂತಾ ಶ್ರೀ, ನಾಗೇಂದ್ರ ಬಿರಾದಾರ ಗ್ರಾಮೀಣ ಮತಕ್ಷೇತ್ರದ ಚುನಾವಣೆ ಜಾಗೃತ ಅಧಿಕಾರಿಗಳು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 38/2013  ಕಲಂ,3 Karnataka open places prevention disfigurement act ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ :ದಿನಾಂಕ:19-04-2013 ರಂದು 12-30 ಗಂಟೆ ಸಮಯದಲ್ಲಿಗುಲಬರ್ಗಾ ಗ್ರಾಮೀಣ ಮತ ಕ್ಷೇತ್ರದ ಕಮಲಾಪೂರ ಗ್ರಾಮದಲ್ಲಿ ಪರಿವೀಕ್ಷಣೆಮಾಡುತ್ತಿರುವಾಗ ಕಮಲಾಪೂರ ಗ್ರಾಮದ ಸೇತುವೆ ಹತ್ತಿರ ಇರುವ ಗುಂಡಪ್ಪಾ ಮೂಲಿಮನಿ ಇವರ ಅಂಗಡಿಯ ಮೇಲೆ ಬಿ.ಎಸ್.ಆರ್ ಪಕ್ಷದ ಚಿಹ್ನೆ ಪತ್ರ ಶ್ರೀರಾಮಲು ಹಾಗೂ ಈ ಕ್ಷೇತ್ರದ ಬಿ.ಎಸ್.ಆರ್ ಪಕ್ಷದ ಅಬ್ಯರ್ಥಿಯಾದ ಬಾಬು ಹೂನ್ನ ನಾಯಕ ಭಾವಚಿತ್ರಅಂಟಿಸುವ  ಇರುವ ಭಿತಿ ಪತ್ರ ಅಂದಾಜು ಸೈಜ್  6 X 8 ಇಂಚ್ ಅಂಟಿಸಿದ್ದು ಕಂಡುಬಂದಿದೆ ಇದರ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.ಈ ರೀತಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದೆ ಭೀತಿ ಪತ್ರ ಅಂಟಿಸುವದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ  ಮಾಡಿರುತ್ತಾರೆ.  ಅಲ್ಲದೆ ಈ ಪಾಂಪಪ್ಲೇಟಗಳ ಮೇಲೆ ಅಧಿಕೃತವಾಗಿ ಎಷ್ಟು ಪ್ರೀಂಟಗಳು ಮತ್ತು ತಯಾರಕರ ಹೆಸರು ವಿಳಾಸ ನಮೂದಿಸಿರುವದಿಲ್ಲ ಅಂತಾ ಶ್ರೀ, ನಾಗೇಂದ್ರ ಬಿರಾದಾರ ಗ್ರಾಮೀಣ ಮತಕ್ಷೇತ್ರದ ಚುನಾವಣೆ ಜಾಗೃತ ಅಧಿಕಾರಿಗಳು  ವರದಿ ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ. 39/2013 ಕಲಂ. ಕರ್ನಾಟಕ ಓಪನ್ ಪ್ಲೇಸ್ ಪ್ರಿವೇನಶನ್ ಆಫ್ ಡಿಸ ಪಿಗರಮೇಂಟ್ ಕಾಯ್ದೆ -1981 ಸಬ್ ಕಲಂ. 3 ಸಂ. 188 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅಜಯ ತಂದೆ ಜಗನ ರಾಠೋಡ ಸಾ:ಮಡ್ಡಿ ಶಹಾಬಾದರವರು ದಿನಾಂಕ:18/04/2013 ರಂದು ಮಧ್ಯರಾತ್ರಿ 00.45 ಎಎಂಕ್ಕೆ ನಾನು ಮತ್ತು ಶಿವಕುಮಾರ ತಂದೆ ಅಶೋಕ ರಾಠೋಡ ಕೂಡಿಕೊಂಡು ಭಂಕೂರ ಕ್ರಾಸದಿಂದ ಟಂ ಟಂ ನಂ.ಕೆಎ-33/4397 ನೇದ್ದರಲ್ಲಿ ಕುಳಿತುಕೊಂಡು ಶಹಾಬಾದಕ್ಕೆ ಬರುತ್ತಿದ್ದಾಗ ಮಧ್ಯರಾತ್ರಿ 1.15 ಎಎಂಕ್ಕೆ ಜಗಜೀವನರಾಮ ವೃತ್ತದ ಹತ್ತಿರ ರೋಡಿನ ಮೇಲೆ ತಿರುವಿನಲ್ಲಿ  ಟಂ ಟಂ ಚಾಲಕನು ಅತೀವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಟಂ ಟಂ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿದ್ದರಿಂದ ನನಗೆ ಎಡಗೈಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಶಿವಕುಮಾರನಿಗೆ ಎಡಗೈ ಮತ್ತು ಎಡಗಾಲಿಗೆ ರಕ್ತಗಾಯ ಮತ್ತು ತರಚಿದ ಗಾಯವಾಗಿರುತ್ತದೆ. ಟಂ ಟಂ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2013 ಕಲಂ:279,337,338 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌     ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:18-04-13 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ  ಸಿಬ್ಬಂದಿಯವರು ಅಫಜಲಪೂರ ಕ್ರಾಸ ಹತ್ತ್ಟಿರುವ ಎಂ.ಸಿ.ಸಿ. ಚೆಕ್ಕ ಪೋಸ್ಟದಲ್ಲಿದ್ದಾಗ, ಗುಲಬರ್ಗಾ ಕಡೆಯಿಂದ  ಬಿಳಿ ಬಣ್ಣದ ಇನೋವಾ ಕಾರ ನಂಬರ ಎಮ್ಎಚ್-13 /ಎಝಡ್-7011 ನೇದರ ವಾಹನ ನಿಲ್ಲಿಸಿ ತಪಾಸಣೆ ಮಾಡುವ ಕುರಿತು ನಿಲ್ಲಿಸಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ  ಸಮಾಜವಾದಿ ಪಕ್ಷ ಕರ್ನಾಟಕ ರಾಜ್ಯ ಸೈಕಲ ಚಿನ್ಹೆವುಳ್ಳ ಸ್ಟಿಕರಗಳು ಮೂರು ಬಂಡಲಗಳಿದ್ದು, ಕರಪತ್ರದ  ಎಡಭಾಗಕ್ಕೆ ಅಭ್ಯರ್ಥಿ ಭಾವಚಿತ್ರವಿದ್ದು, ಅದರ ಕೆಳಗಡೆ  ಗೋವಿಂದ ವ್ಹಿ.ಭಟ್ಟ್ ರಾಜ್ಯ ಉಪಾಧ್ಯಕ್ಷರು ಎಂದು ಕನ್ನಡದಲ್ಲಿ ಬರೆದಿದ್ದು  ಇರುತ್ತದೆ. ಸ್ಟಿಕರಗಳ ಮೇಲೆ ಮುದ್ರಕರ ಮತ್ತು ಪ್ರಕಾಶಕರ ಹೆಸರು ವಿಳಾಸ, ಅದರ ಸಂಖ್ಯೆ  ನಮೂದಿಸಿರುವುದಿಲ್ಲಾ. ಲಕ್ಷ್ಮಣ ತಂದೆ ಮಲ್ಲಪ್ಪ ಟಕ್ಕಳಕಿ  ಸಾ:ಹಾವನೂರ ತಾ: ಆಫಜಲಪೂರ ರವರು ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯದೇ ಮುದ್ರಣೆ ಮಾಡಿ ಚುನಾವಣೆ ಪ್ರಚಾರ ತೊಡಗಿದ್ದಲ್ಲದೇ ಮತ್ತು ಸಂಬಂಧಪಟ್ಟ ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯದೆ ಸ್ಟೀಕರಗಳು ಸಾಗಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂ ಘನೆ ಮಾಡುತ್ತಾರೆ. ಅಂತಾ ಶ್ರೀಡಾ:ಡಿ.ಎಂ. ಮಣ್ಣೂರು ಪ್ಲಾಯಿಂಗ್ ಸ್ವ್ಕಾಡ  ಎಂ.ಸಿ.ಸಿ. ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿ 44- ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಮತಕ್ಷೇತ್ರ ದ ಆಧಿಕಾರಿಯವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:203/2013 ಕಲಂ, 188 ಐಪಿಸಿ ಮತ್ತು 127 (ಎ) 133 ಆರ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

18 April 2013

GULBARGA DISTRICT REPORTED CRIMES


ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ, ಮಹೆಬೂಬಪಾಶಾ ತಂದೆ ಮೌಲಾಸಾಬ ಎಮ್.ಸಿ.ಸಿ. ಪ್ಲಾಯಿಂಗ್ ಸ್ಕ್ವಾಡ್ ಮತ್ತು ಎಮ್.ಸಿ.ಸಿ. ನೋಡಲ್ ಅಧಿಕಾರಿ 41-ಸೇಡಂ ವಿಧಾಸಭಾ ಕ್ಷೇತ್ರದ ಆಧಿಕಾರಿಯವರು,  ನಾನು ನಮ್ಮ  ತಂಡದವರೊಂದಿಗೆ  ದಿನಾಂಕ:17-4-13 ರಂದು ಮದ್ಯಾಹ್ನ 3-30 ಗಂಟೆಗೆ ಸೇಡಂ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದಾಗ ಸೇಡಂ ಜಿ.ಕೆ ಕ್ರಾಸ್ ಹತ್ತಿರ ಇರುವ ಜೆ.ಡಿ.ಎಸ್. ಕಛೇರಿ ಹತ್ತಿರ ವಾಹನಗಳು ತಿರುಗಾಡುತ್ತಿದ್ದು ಸದರಿ ವಾಹನಗಳು ಸೇಡಂ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಶ್ರೀ. ಮುಕ್ರಂ ಖಾನ  ಇವರು ಜೆ.ಡಿಎಸ್. ಪಕ್ಷದ ಅಭ್ಯರ್ಥಿಯ ಪರವಾಗಿ ಈ ಕೆಳಕಂಡ  ವಾಹನಗಳನ್ನು ಚುನಾವಣಾ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಪಡೆಯಲಾರದೆ ಜೆ.ಡಿ.ಎಸ್. ಪಕ್ಷದ  ಸ್ಟಿಕರ್  ಹಾಗು ಬಾವುಟಗಳೊಂದಿಗೆ ಓಡಾಡುವುದನ್ನು ಗಮನಿಸಿರುತ್ತೇವೆ. ವಾಹನಗಳ ಚಾಲಕರಿಗೆ  ನಾವು  ಸ್ಟಿಕರ್ ಮತ್ತು ಬಾವುಟಗಳ ಪರವಾನಿಗೆಯ ಬಗ್ಗೆ ವಿಚಾರಿಸಿದಾಗ ಸದರಿಯವರು ಚುನಾವಣಾ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಪಡೆಯದೆ ಇರುವುದು ಕಂಡು ಬಂದಿದ್ದು, ಚುನಾವಣೆ ನೀತಿ ಸಂಹಿತೆಯ  ಉಲ್ಲಂಘನೆಯಾಗಿರುತ್ತದೆ. ಜೀಪ್ ನಂ ಕೆ-ಎ-33- ಎಮ್-247, ಟಂಟಂ ನಂ ಕೆ-ಎ-32- ಬಿ- 7815,ಮೋಟಾರು ಸೈಕಲ್ ನಂ ಕೆಎ-34- ಬಿ-6901, ಟಂಟಂ ನಂ ಕೆ-ಎ-32-ಬಿ-4472, ಮೇಲ್ಕಂಡ 4 ವಾಹನಗಳಲ್ಲಿ  ಕ್ರಮ ಸಂ 1 ಮತ್ತು 2 ರ ವಾಹನಗಳನ್ನು ಸೇಡಂ ಪೊಲೀಸ್ ಠಾಣೆಗೆ ತಂದು ಒಪ್ಪಿಸಲಾಗಿದೆ  ಬಾಕಿ ಇರುವ 2 ವಾಹನಗಳ  ಚಾಲಕರು  ತಮ್ಮ ವಾಹನಗಳೊಂದಿಗೆ  ತಪ್ಪಿಸಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:95/2013 ಕಲಂ-188 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಗಣೇಶ ತಂದೆ ಅಯ್ಯಾಪ್ಪ ಶಿರವಾಳ ಸಾ: ಎಲ್.ಐ.ಜಿ ಶಾಂತಿ ನಗರ ಗುಲಬರ್ಗಾ ರವರು ದಿನಾಂಕ:18-04-2013 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ನನ್ನ ಮಾವನವರಾದ ಮಲ್ಲಿಕಾರ್ಜುನ ಪಾಟೀಲ ರವರು ನನಗೆ ಪೋನ ಮಾಡಿ ‘ ಕೊತಂಬರಿ ಲೇ ಔಟದಲ್ಲಿರುವ ನಮ್ಮ ಬಾಡಿಗೆ ಮನೆ ಬೀಗ ಮುರಿದು ಕಳ್ಳತನವಾಗಿರುತ್ತದೆ ಅಂತಾ ಮನೆಯ ಮಾಲೀಕರು ಪೋನ ಮಾಡಿ ಹೇಳಿರುತ್ತಾರೆ. ನೀವು ಹೋಗಿ ನೋಡುವಂತೆ ಹೇಳಿದ ಮೇರೆಗೆ ‘ನಾನು ಹೋಗಿ ನೋಡಲು ನಮ್ಮ ಮಾವನವರು ಬಾಡಿಗೆಯಿಂದ ಇರುವ ಮನೆಗೆ ಹೋಗಿ ನೋಡಲು ಅಲಮಾರಿಯ ಲಾಕರ ಮತ್ತು ಪೆಟ್ಟಿಗೆ ಮುರಿದು, ಲಾಕರ ದಲ್ಲಿಟ್ಟಿದ್ದ., ಒಂದು ಜೊತೆ ಬಂಗಾರದ ಬೆಂಡೋಲಿ 10ಗ್ರಾಂ ಅ.ಕಿ 25,000/- 2) 20 ತೊಲೆ ಬೆಳಿಯ ಸಾಮಾನುಗಳು ಅ.ಕಿ 10,000/- ರೂ ಹಾಗೂ ಪೆಟ್ಟಿಗೆಯಲ್ಲಿಟ್ಟಿದ್ದ 32,000/- ನಗದು ಹಣ ಇರಲಿಲ್ಲಾ. ಯಾರೋ ಕಳ್ಳರು ದಿನಾಂಕ 17/18-04-2013 ರಂದು  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆ ಬಾಗಿಲ ಬೀಗ ಮುರಿದು ಒಟ್ಟು 67,000/- ರೂ ಕಿಮ್ಮತ್ತಿನ ಬಂಗಾರ ಬೆಳ್ಳಿಯ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೇ ನಮ್ಮ ಮಾವನ ಮನೆಯ ಹಿಂದೆ ಇರುವ ಶ್ರೀ ಚನ್ನಪ್ಪ ಗೌಡ ತಂದೆ ಬಸಣ್ಣ ಗೌಡ ಪಾಟೀಲ ರವರ ಮನೆಯಲ್ಲಿಯೂ ಸಹ ಕಳ್ಳತನವಾಗಿದ್ದು, ಅವರದು ಒಂದು ಬ್ಯಾಗ ಮತ್ತು ಶರ್ಟ ಜೇಬಿನಲ್ಲಿಟ್ಟಿದ್ದ 10,000/- ರೂ ಮತ್ತು ಒಂದು ನೋಕಿಯಾ ಮೊಬಾಯಿಲ್ ಕಳ್ಳತನವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:65/2013 ಕಲಂ.457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕೊಲೆ ಪ್ರಕರಣ:
ಯಡ್ರಾಮಿ  ಪೊಲೀಸ್ ಠಾಣೆ:ನನ್ನ ಗಂಡನಾದ ಮಡಿವಾಳಪ್ಪ ಇವರು ಸಮಾಜ ಸೇವೆ ಕೆಲಸ ಮಾಡಿಕೊಂಡಿದ್ದರು, ಕೇಲವು ವರ್ಷಗಳಿಂದ ನನ್ನ ಗಂಡ ಮಡಿವಾಳಪ್ಪ ಮತ್ತು ಮಲ್ಲಣ್ಣಗೌಡ ಇಬ್ಬರು ಕೂಡಿ ತಿರುಗಾಡುತ್ತಿದ್ದರು ದಿನಾಂಕ:17-04-2013 ರಂದು ರಾತ್ರಿ ನನ್ನ ಗಂಡ ಮಡಿವಾಳಪ್ಪ, ಮನೆಯಲ್ಲಿದ್ದಾಗ ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಗಂಡನು ಊಟ ಮಾಡುತ್ತಿದ್ದಾಗ ನನ್ನ ಗಂಡನ ಮೋಬಾಯಿಲ್ ಫೋನ್ ಗೆ ಮಲ್ಲಣ್ಣಗೌಡ ಲಕಣಾಪೂರ ಇವನು ಫೋನ್ ಮಾಡಿದ್ದು ನನ್ನ ಗಂಡನು ಊಟ ಮಾಡುತ್ತಿದ್ದರಿಂದ ಅತ್ತೆಯಾದ ಲಕ್ಷ್ಮಿಬಾಯಿ ಇವಳು ಫೋನ್ ಎತ್ತಿ ಯಾರು ಮಾತನಾಡುತ್ತಿರುವುದು ಅಂತಾ ಕೇಳಿದಳು ಆಗ ನಾನು ಮಲ್ಲಣ್ಣಗೌಡ ಲಕಣಾಪೂರ ಮಾತನಾಡುವುದು ಅಂತಾ ಹೇಳಿ ಮಡಿವಾಳಪ್ಪನಿಗೆ ಸಾಥಖೇಡ ಕ್ರಾಸಿಗೆ ಕಳುಹಿಸಿಕೊಡಿರಿ ನಾನು ಸಾಥಖೇಡ ಕ್ರಾಸಿನಲ್ಲಿ ನಿಂತಿದ್ದೆನೆ ಅಂತಾ ಹೇಳಿದನು. ನನ್ನ ಗಂಡ ಮಡಿವಾಳಪ್ಪ ಇವನು ಊಟ ಮಾಡುವುದನ್ನು ಬಿಟ್ಟು ಕೈ ತೊಳೆದುಕೊಂಡು ಲುಂಗಿಯ ಮೇಲೆ ನಮ್ಮ ಮೋಟಾರ ಸೈಕಲ್ ಮೇಲೆ ಮನೆಯಿಂದ ಹೋದನು. ರಾತ್ರಿ ಸುಮಾರು 9-15 ಗಂಟೆ ಸುಮಾರಿಗೆ ನನ್ನ ಗಂಡ ಮಡಿವಾಳಪ್ಪನಿಗೆ ಮಲ್ಲಣ್ಣಗೌಡ ತಂದೆ ಸಿದ್ದಣ್ಣಗೌಡ ಪಾಟೀಲ ಜಾತಿ:ರೆಡ್ಡಿ ಇತನು ಮತ್ತು ಇತರರು ಕೂಡಿಕೊಂಡು ನೀರಡಗಿ ಗ್ರಾಮದ ಶರಣಪ್ಪ ತಂದೆ ಚನ್ನಬಸಪ್ಪ ನಾಟೀಕಾರ ಇವರ ಹೊಲದ ಹತ್ತಿರದ ಫೂಲಿನ ಕೆಳಗೆ ಕೊಲೆ ಮಾಡಿ ಹೋಗಿದ್ದಾರೆ ಅಂತಾ ತಿಳಿಯಿತು, ನಾವು ಹೋಗಿ ನೋಡಲು ನನ್ನ ಗಂಡನ ಹೆಣವು ಫೂಲಿನ ತಗ್ಗಿನಲ್ಲಿಯ ಮುಳ್ಳಿನ ಮೇಲೆ ಬಿದ್ದಿತ್ತು ನಾವು ನೋಡಲಾಗಿ ನನ್ನ ಗಂಡನ ತಲೆಯ ಹಿಂಬಾಗಕ್ಕೆ, ಎಡಗೈ ಹಸ್ತಕ್ಕೆ, ಎಡಗಾಲು ಮೋಣಕಾಲು ಕೆಳಗೆ ಭಾರಿ ಕತ್ತಿರಿಸಿದ ರಕ್ತಗಾಯವಾಗಿರುತ್ತದೆ ಯಾವುದೋ ದುರದ್ದೇಶದಿಂದ ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ, ಅಂತಾ ಶ್ರೀಮತಿ ಯಲ್ಲಮ್ಮ ಗಂಡ ಮಡಿವಾಳಪ್ಪ ಬಡಿಗೇರ ಜಾ: ಹರಿಜನ, ಸಾ|| ಮಾರಡಗಿ ತಾ|| ಜೇವರ್ಗಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 74/2013 ಕಲಂ.302 ಐ.ಪಿ.ಸಿ ಮತ್ತು 3 (1) (10)  ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.