POLICE BHAVAN KALABURAGI

POLICE BHAVAN KALABURAGI

03 April 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ಹೇಮಲತಾ @ ಲಕ್ಷ್ಮಿ ಗಂಡ ಸುನೀಲ ಚವ್ಹಾಣ ಸಾ:ದೇವಾಜಿ ನಾಯಕ ಸ್ಕೂಲ ಹತ್ತಿರ ಮಡ್ಡಿತಾಂಡಾ ಪಿಲ್ಟರಬೆಡ ಗುಲಬರ್ಗಾ ರವರು ನನ್ನ ಮದುವೆಯು ಗುರು ಹಿರಿಯರು ಸಮ್ಮುಖದಲ್ಲಿ ದಿನಾಂಕ24-04-2012 ರಂದು ಸುನೀಲ ತಂದೆ ಪ್ರೇಮದಾಸ ಚವ್ಹಾಣ ಸಾ: ಕುಸ್ರಂಪಳ್ಳಿ ತಾಂಡಾ ತಾ:ಚಿಂಚೋಳಿ ಇವರ ಜೊತೆ ವಿವಾಹವಾಗಿದ್ದು  ಮದುವೆಯ ಮಾತುಕತೆ ಸಂದರ್ಭದಲ್ಲಿ ವರನಿಗೆ  2 ತೊಲೆ ಬಂಗಾರ 1 ಪ್ಲಾಟ ಹಾಗೂ ಮನೆ ಕಟ್ಟುವ ಸಲುವಾಗಿ 2.00 ಲಕ್ಷ ರೂಪಾಯಿಗಳು ಕೊಟ್ಟಿರುತ್ತಾರೆ. ಮದುಎಯಾದ 3 ತಿಂಗಳಲ್ಲಿ  ಇನ್ನೂ  ನಾಲ್ಕು ಲಕ್ಷ ರೂಪಾಯಿಗಳನ್ನು ತವರು ಮನೆಯಿಂದ ತೆಗೆದುಕೊಂಡು ಬರುವಂತೆ ನನ್ನ ಗಂಡ ಅತ್ತೆ ಮಾವ ಇವರೆಲ್ಲರು ಜಗಳ ಮಾಡಿರುತ್ತಾರೆ ಅಲ್ಲದೇ ನನ್ನ ಗಂಡನು ಅವಾಚ್ಯವಾಗಿ ಬೈದು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದರಿಂದ ಹಿರಿಯರ ಸಮ್ಮುಖದಲ್ಲಿ ಪಂಚಾಯತ ಮಾಡಿ ಸಮಾಜಾಯಿಸಿರುತ್ತಾರೆ, ನಾನು ಮೊದಲೆ ಅಂಗವಿಕಲೆಯಾಗಿದ್ದರಿಂದ ನನ್ನ ಗಂಡನು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆ ನೀಡುತ್ತಿದ್ದಾನೆ. ನನ್ನ ಗಂಡನು ಆತನ ಕಾಕನಾದ ಅಂಬರಸಿಂಗ ಚವ್ಹಾಣ, ಮಾಣಿಕ ಚವ್ಹಾಣ, ಲಲಿತಾಬಾಯಿ, ಸುಮಿತ್ರಾಬಾಯಿ ಹಾಗೂ ಸುನೀಲನ ತಂದೆ ಪ್ರೇಮದಾಸ ಚವ್ಹಾಣ ಇವರೆಲ್ಲರ ಕೈವಾಡವಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ 498 (ಎ),323.504. ಸಂಗಡ 34 ಐ.ಪಿ.ಸಿ ಮತ್ತು 3 & 4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
ಗೃಹಿಣಿಗೆ ಕೊಲೆ ಮಾಡಿ ನೇಣು ಹಾಕಿದ ಬಗ್ಗೆ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀಮತಿ ಶೋಭಾದೇವಿ ಗಂಡ ಅಶೋಕ ಜಂಬಗಾ ವಯಸ್ಸು:40 ಸಾ; ಕಗ್ಗನಮಡಿ ತಾ;ಜಿ;ಗುಲಬರ್ಗಾ ರವರು ನನ್ನ ಮಗಳಾದ ಜಯಶ್ರೀ ಎಂಬುವವಳಿಗೆ  ನಮ್ಮ ಸಂಭಂದಿಕರಾದ ಅಂಬಣ್ಣಾ ಶಟಗೋಳ ಇವರ ಮಗನಾದ ಮಲ್ಲಿಕಾರ್ಜುನ ಸಾ||ಓಕಳಿ ಗ್ರಾಮ ದವನಿಗೆ 10 ತಿಂಗಳ ಹಿಂದೆ ನಮ್ಮೂರಲ್ಲಿಯೇ ಲಗ್ನ ಮಾಡಿಕೂಟ್ಟಿರುತ್ತೆವೆ. ನನ್ನ ಗಂಡನಾದ ಅಶೋಕ ತಂದೆ ಮಲ್ಕಪ್ಪಾ ಇವರ ನಮ್ಮ ಉಪ-ಜೀವನಕ್ಕಾಗಿ ಹೋರದೇಶಕ್ಕೆ ಹೋಗಿರುತ್ತಾರೆ. ನನ್ನ ಅಳಿಯನಾದ ಮಲ್ಲಿಕಾರ್ಜುನ ಮತ್ತು ಅವನ ಅಕ್ಕಂದ್ದಿರಾದ ರಾಧಾ ಮತ್ತು ಕಸ್ತೂರಿಬಾಯಿವರು ಆಗಾಗ ವಿನಾಃಕಾರಣ ಜಗಳ ತೆಗೆದು ಅವಳ ಸಂಶಯ ಮಾಡಿ ಬೈಯುವದು ಹೋಡೆ ಬಡೆ ಮಾಡುತ್ತಿದ್ದರು. ನನ್ನ ಮಗಳ ಜಯಶ್ರೀ ಇವಳು ನಮ್ಮೂರ ಜಾತ್ರೆಗೆ 7-8 ದಿವಸಗಳ ಹಿಂದೆ ಬಂದಾಗ, ಅಳಿಯ ಮಗಳಿಗೆ ತಿಳುವಳಿಕೆ ನೀಡಿ ನಂತರ ಗಂಡನ ಮನೆಗೆ ಕಳುಹಿಸಿದೆವು. ದಿನಾಂಕ:02-04-2013 ರಂದು ಸಾಯಾಂಕಾಲ 6-30 ಗಂಟೆ ಸುಮಾರಿಗೆ ನಮ್ಮ ಮೈದುನನ ಮಗನಾದ ಸತೀಶನಿಗೆ ಓಕಳಿ ಗ್ರಾಮದಿಂದ ಯಾರೂ ಪೋನ ಮಾಡಿ ಜಯಶ್ರೀ ನೇಣು ಹಾಕಿಕೂಂಡು ಸತ್ತಿರುತ್ತಾಳೆ ಅಂತಾ ತಿಳಿಸಿದ್ದರಿಂದ, ನಾವು ಹೋಗಿ ನೋಡಲು ನನ್ನ ಮಗಳಾದ ಜಯಶ್ರೀ ಇವಳಿಗೆ ಆಕೆಯ ಗಂಡನಾದ ಮಲ್ಲಿಕಾರ್ಜುನ ಮತ್ತು ನಾದನಿಯರಾದ ದಾವಮ್ಮಾ ಮತ್ತು ಕಸ್ತೂರಿಬಾಯಿ ಇವರು ಜಗಳ ತೆಗೆದು  ಸಾಯಂಕಾಲ 4=00 ಗಂಟೆ ಸುಮಾರಿಗೆ ಜೀವ ಹೋಡೆದು ಹಗ್ಗದಿಂದ ನೇಣು ಹಾಕಿರುತ್ತಾರೆ ಅನ್ನುವದು ತಿಳಿದು ಬಂದಿರುತ್ತದೆ ಅಂತಾ ಮೃತಳ ತಾಯಿಯವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 27/2013 ಕಲಂ, 498 (ಎ) 302 ಸಂಗಡ  34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ, 

02 April 2013

GULBARGA DISTRICT


::  ಪೊಲೀಸ್ ದ್ವಜಾ ದಿನಾಚರಣೆ::

ಗುಲಬರ್ಗಾ ಜಿಲ್ಲಾ ಸಶಸ್ತ್ರ ಕವಾಯತ್ ಮೈದಾನದಲ್ಲಿ ದಿನಾಂಕ:02-04-2013 ರಂದು ಬೆಳಿಗ್ಗೆ 8-00 ಗಂಟೆಗೆ ಹಮ್ಮಿಕೊಂಡಿದ್ದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಮಹಮದ ವಜೀರ್ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು ಅಧ್ಯಕ್ಷತೆ ಹೊಂದಿದ್ದರು. ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀ ವೀರಣ್ಣಾ ಕುಂಬಾರ ನಿವೃತ್ತ ಪಿ.ಎಸ.ಐ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪರೇಡ್ ವಂದನೆ ಸ್ವೀಕರಿಸಿದರು. ಮಾನ್ಯ ಐ.ಜಿ.ಪಿ ಸಾಹೇಬರು ಸಿಬ್ಬಂಧಿಯವರನ್ನು ಉದ್ದೇಶಿಸಿ ಮಾತನಾಡಿ ಪೊಲೀಸ್ ಸಿಬ್ಬಂದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು, ಮಾನ್ಯ ಶ್ರೀ,ಎನ್.ಸತೀಷಕುಮಾರ ಐ.ಪಿ.ಎಸ್,.ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಪರಾದದಲ್ಲಿ ನೊಂದವರಿಗೆ ಸಹಾಯ ಮತ್ತು ಸಹಾನುಬೂತಿ ವ್ಯಕ್ತ ಪಡಿಸುವಂತೆ ಕರೆ ನೀಡಿದರು. ಹಾಗು ಪೊಲೀಸ್ ಸಿಬ್ಬಂದಿಯವರಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೂಚಿಸಿ,  ಸಿಬ್ಬಂದಿಯವರು ತಮ್ಮ ಕುಟುಂಬದ ಕಡೆ ಮತ್ತು ತಮ್ಮ ಮಕ್ಕಳ ವಿಧ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು. ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಈ ಕಾರ್ಯಕ್ರಮದಲ್ಲಿ ಹಾಜರಾಗಿರುವವ ನಿವೃತ್ತ ಪೊಲೀಸ್ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು.  ಮಾನ್ಯ ಶ್ರೀ ಕಾಶಿನಾಥ ತಳಕೇರಿ, ಅಪರ್ ಪೊಲೀಸ್ ಅಧೀಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ, ಮೋಹನ ತಂದೆ ಮೇಘು ಚವ್ಹಾಣ ವಯಾ||| 35 ಸಾ|| ಬಾಚವಾರ ಹೊಸ ತಾಂಡಾ ದಿನಾಂಕ 01-04-2013 ರಂದು ಮಧ್ಯಾಹ್ನ 2-00  ಗಂಟೆಯ ಸುಮಾರಿಗೆ ಮೋತಿಲಾಲ ಇತನು ಮೊಟರ ಸೈಕಲ ನಂ ಕೆಎ-33 ಎಲ್- 4636 ನೇದ್ದರ ಮೇಲೆ ಕೀಶನ ತಂದೆ ಯಮಕಾ ಚೌವ್ಹಾಣ ಇತನೊಂದಿಗೆ ಯರಗೊಳದಿಂದ ತಮ್ಮ ಊರಿಗೆ ಹೊಗುವ ಕಾಲಕ್ಕೆ ಲಕ್ಷ್ಮಿ ಗುಡಿ ಸಮೀಪ ರೋಡಿಗೆ ಮೋತಿಲಾಲ ಇತನು ಮೋಟರ ಸೈಕಲನ್ನು  ಅತೀವೇಗ ಹಾಗು ಅಲಕ್ಷತನದಿಂದ ನಡೆಯಿಸಿ ರೋಡಿನ ಎಡಗಡೆ ಇರುವ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೋತಿಲಾಲ ಇತನಿಗೆ ಬಲ ತಲೆಯ ಹತ್ತಿರ ಬಡೆದು ಭಾರಿ ರಕ್ತಗಾಯವಾಗಿರುತ್ತದೆ. ಹಾಗೂ ಕೀಶನ ಇತನಿಹೂ ಸಹ ಬಲಗೈ ಹಾಗು ಬಲಗಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ. ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಹೊಂದುತ್ತಾ ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮೋತಿಲಾಲ ಇತನು ಮೃತ ಪಟ್ಟಿರುತ್ತಾನೆ ಅಂತಾ ಮೋಹನ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:52/2013 ಕಲಂ 279,338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ
ಸಂಚಾರಿ ಪೊಲೀಸ್ ಠಾಣೆ: ಕೀಶನ ರಾವ ತಂದೆ ನರಸಿಂಗ ರಾವ ಪೂಕಾಳೆ ಸಾ|| ಆದರ್ಶ ನಗರ ಗುಲಬರ್ಗಾ ರವರು ದಿನಾಂಕ:01-04-2013 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಮದನ ಟಾಕೀಜದಿಂದ ಚೌಕ ಸರ್ಕಲ ಕಡೆ ಹೋಗುವ ಕುರಿತು ನಂದಿ ವೈನ ಶಾಪ ಎದರುಗಡೆಯ ರಸ್ತೆ ದಾಟುತ್ತಿದ್ದಾಗ ಕಾರ ನಂ:ಕೆಎ-32/ 0966 ನೇದ್ದರ ಚಾಲಕನು ತನ್ನ ಕಾರನ್ನು ಚೌಕ ಸರ್ಕಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ  ಬಲ ಗಾಲಿಗೆ ಡಿಕ್ಕಿ ಪಡಿಸಿ  ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಕೀಶನ ರಾವ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ 21/2013 ಕಲಂ 279, 337 ಐ.ಪಿ.ಸಿ, ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,