POLICE BHAVAN KALABURAGI

POLICE BHAVAN KALABURAGI

02 April 2013

GULBARGA DISTRICT


::  ಪೊಲೀಸ್ ದ್ವಜಾ ದಿನಾಚರಣೆ::

ಗುಲಬರ್ಗಾ ಜಿಲ್ಲಾ ಸಶಸ್ತ್ರ ಕವಾಯತ್ ಮೈದಾನದಲ್ಲಿ ದಿನಾಂಕ:02-04-2013 ರಂದು ಬೆಳಿಗ್ಗೆ 8-00 ಗಂಟೆಗೆ ಹಮ್ಮಿಕೊಂಡಿದ್ದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಮಹಮದ ವಜೀರ್ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು ಅಧ್ಯಕ್ಷತೆ ಹೊಂದಿದ್ದರು. ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀ ವೀರಣ್ಣಾ ಕುಂಬಾರ ನಿವೃತ್ತ ಪಿ.ಎಸ.ಐ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪರೇಡ್ ವಂದನೆ ಸ್ವೀಕರಿಸಿದರು. ಮಾನ್ಯ ಐ.ಜಿ.ಪಿ ಸಾಹೇಬರು ಸಿಬ್ಬಂಧಿಯವರನ್ನು ಉದ್ದೇಶಿಸಿ ಮಾತನಾಡಿ ಪೊಲೀಸ್ ಸಿಬ್ಬಂದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು, ಮಾನ್ಯ ಶ್ರೀ,ಎನ್.ಸತೀಷಕುಮಾರ ಐ.ಪಿ.ಎಸ್,.ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಪರಾದದಲ್ಲಿ ನೊಂದವರಿಗೆ ಸಹಾಯ ಮತ್ತು ಸಹಾನುಬೂತಿ ವ್ಯಕ್ತ ಪಡಿಸುವಂತೆ ಕರೆ ನೀಡಿದರು. ಹಾಗು ಪೊಲೀಸ್ ಸಿಬ್ಬಂದಿಯವರಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೂಚಿಸಿ,  ಸಿಬ್ಬಂದಿಯವರು ತಮ್ಮ ಕುಟುಂಬದ ಕಡೆ ಮತ್ತು ತಮ್ಮ ಮಕ್ಕಳ ವಿಧ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು. ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಈ ಕಾರ್ಯಕ್ರಮದಲ್ಲಿ ಹಾಜರಾಗಿರುವವ ನಿವೃತ್ತ ಪೊಲೀಸ್ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು.  ಮಾನ್ಯ ಶ್ರೀ ಕಾಶಿನಾಥ ತಳಕೇರಿ, ಅಪರ್ ಪೊಲೀಸ್ ಅಧೀಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ, ಮೋಹನ ತಂದೆ ಮೇಘು ಚವ್ಹಾಣ ವಯಾ||| 35 ಸಾ|| ಬಾಚವಾರ ಹೊಸ ತಾಂಡಾ ದಿನಾಂಕ 01-04-2013 ರಂದು ಮಧ್ಯಾಹ್ನ 2-00  ಗಂಟೆಯ ಸುಮಾರಿಗೆ ಮೋತಿಲಾಲ ಇತನು ಮೊಟರ ಸೈಕಲ ನಂ ಕೆಎ-33 ಎಲ್- 4636 ನೇದ್ದರ ಮೇಲೆ ಕೀಶನ ತಂದೆ ಯಮಕಾ ಚೌವ್ಹಾಣ ಇತನೊಂದಿಗೆ ಯರಗೊಳದಿಂದ ತಮ್ಮ ಊರಿಗೆ ಹೊಗುವ ಕಾಲಕ್ಕೆ ಲಕ್ಷ್ಮಿ ಗುಡಿ ಸಮೀಪ ರೋಡಿಗೆ ಮೋತಿಲಾಲ ಇತನು ಮೋಟರ ಸೈಕಲನ್ನು  ಅತೀವೇಗ ಹಾಗು ಅಲಕ್ಷತನದಿಂದ ನಡೆಯಿಸಿ ರೋಡಿನ ಎಡಗಡೆ ಇರುವ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೋತಿಲಾಲ ಇತನಿಗೆ ಬಲ ತಲೆಯ ಹತ್ತಿರ ಬಡೆದು ಭಾರಿ ರಕ್ತಗಾಯವಾಗಿರುತ್ತದೆ. ಹಾಗೂ ಕೀಶನ ಇತನಿಹೂ ಸಹ ಬಲಗೈ ಹಾಗು ಬಲಗಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ. ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಹೊಂದುತ್ತಾ ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮೋತಿಲಾಲ ಇತನು ಮೃತ ಪಟ್ಟಿರುತ್ತಾನೆ ಅಂತಾ ಮೋಹನ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:52/2013 ಕಲಂ 279,338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ
ಸಂಚಾರಿ ಪೊಲೀಸ್ ಠಾಣೆ: ಕೀಶನ ರಾವ ತಂದೆ ನರಸಿಂಗ ರಾವ ಪೂಕಾಳೆ ಸಾ|| ಆದರ್ಶ ನಗರ ಗುಲಬರ್ಗಾ ರವರು ದಿನಾಂಕ:01-04-2013 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಮದನ ಟಾಕೀಜದಿಂದ ಚೌಕ ಸರ್ಕಲ ಕಡೆ ಹೋಗುವ ಕುರಿತು ನಂದಿ ವೈನ ಶಾಪ ಎದರುಗಡೆಯ ರಸ್ತೆ ದಾಟುತ್ತಿದ್ದಾಗ ಕಾರ ನಂ:ಕೆಎ-32/ 0966 ನೇದ್ದರ ಚಾಲಕನು ತನ್ನ ಕಾರನ್ನು ಚೌಕ ಸರ್ಕಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ  ಬಲ ಗಾಲಿಗೆ ಡಿಕ್ಕಿ ಪಡಿಸಿ  ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಕೀಶನ ರಾವ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ 21/2013 ಕಲಂ 279, 337 ಐ.ಪಿ.ಸಿ, ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,

01 April 2013

GULBARGA DISTRICT REPORTED CRIMES

ಮನುಷ್ಯ ಕಾಣೆಯಾದ ಬಗ್ಗೆ:
ಫರತಬಾದ ಪೊಲೀಸ್ ಠಾಣೆ:ಶ್ರೀಮತಿ, ಗೌರಮ್ಮ ಗಂಡ ರಮೇಶ ಬಂಡಾರದವರು ವಯ: 30 ವರ್ಷ ಉ:ಭಾರತಿಯ ವಿದ್ಯಾ ಕೇಂದ್ರ ಶಿರನೂರದಲ್ಲಿ ಅಡುಗೆ ಮಾಡುವ ಕೆಲಸ ಜಾತಿ: ಲಿಂಗಾಯತ ಸಾ: ಕನಕಪುರ ತಾ:ಚಿಂಚೋಳಿ ಹಾ:ವ: ಭಾರತಿಯ ವಿದ್ಯಾ ಕೇಂದ್ರ ಶಿರನೂರ ರವರು ನನ್ನ ಗಂಡ ರಮೇಶ ಇತನು ದಿನಾಂಕ:19-02-2013 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ನಮ್ಮೂರಿನ ಮನೆಯ ದೇವತೆಯಾದ ಲಕ್ಷ್ಮೀದೇವಿ ಜಾತ್ರೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಭಾರತೀಯ ವಿಧ್ಯಾ ಮಂದಿರದ ಶಾಲೆಯಿಂದ ಹೋಗಿರುತ್ತಾನೆ.  ನಾನು 4-5 ದಿವಸಗಳು ಆದ ಮೇಲೆ ನಮ್ಮ ಅತ್ತೆಯಾದ ಕುಸುಮಾವತಿ ಇವಳಿಗೆ ಫೊನ ಮಾಡಿ ಕೇಳಲು ರಮೇಶನು ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದರು. ನಾವೇಲ್ಲರೂ ಹುಡಕಾಡಿದರೂ ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲ, ಕಾರಣ ಮಾನ್ಯರವರು ಕಾಣೆಯಾದ ನನ್ನ ಗಂಡನಿಗೆ ಹುಡುಕಿ ಕೂಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 41/2013 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಮಹಾತ್ಮ ಬಸವೇಶ್ವರ ನಗರ  ಪೊಲೀಸ್ ಠಾಣೆ:ದಿನಾಂಕ 31/03/2013 ರಂದು 3:15 ಪಿ.ಎಂ. ಕ್ಕೆ ಖಚಿತವಾದ ಬಾತ್ಮಿ ಮೇರೆಗೆ ಶ್ರೀ ಶ್ರೀಮಂತ ಇಲ್ಲಾಳ ಮತ್ತು ಅವರ ಸಿಬ್ಬಂದಿಯವರು ಗಣೇಶ ನಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಿ  1)ಸುನೀಲ ತಂದೆ ಶಾಮು ಚವ್ಹಾಣ ವಯಃ 24 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, 2) ಅನೀಲ ತಂದೆ ಶಾಮು ಚವ್ಹಾಣ ವಯಃ 22 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, 3) ಮಹೇಶ ತಂದೆ ಶಾಮು ಚವ್ಹಾಣ ವಯಃ 20 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, 4) ಬಬಲೇಶ ತಂದೆ ಶಾಮು ಚವ್ಹಾಣ ವಯಃ 19 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ, ಮತ್ತು 5) ರಾಘವೇಂದ್ರ ತಂದೆ ಬಸವರಾಜ ಚವ್ಹಾಣ ವಯಃ 24 ವರ್ಷ ಉಃ ವಿದ್ಯಾರ್ಥಿ ಜಾತಿಃ ಲಂಬಾಣಿ ಸಾಃ ಗಣೇಶ ನಗರ ಗುಲಬರ್ಗಾ ರವರನ್ನು ವಶಕ್ಕೆ ಅವರಿಂದ ನಗದು ಹಣ  2050/- ರೂ.  ಹಾಗು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ.35/2013 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ  ಪೊಲೀಸ್ ಠಾಣೆ: ದಿನಾಂಕ:31-03-13 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸ ಹತ್ತಿರ ಇರುವ ಖೇಮಜಿ ಇವರ ಹೊಲದಲ್ಲಿರುವ ದನಗಳ ಕೊಟ್ಟಿಗೆ ಪಕ್ಕದಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಆನಂದರಾವ ಪಿ.ಎಸ.ಐ ಮತ್ತು ಅವರ ಸಿಬ್ಬಂದಿಯವರು ಜೂಜಾಟದಲ್ಲಿ ನಿರತರಾದವರ ಮೇಲೆ ದಾಳಿ ಮಾಡಿ ಅನೀಲ ತಂದೆ ನಾಗೇಂದ್ರಪ್ಫಾ ಪಾಟೀಲ ಸಂಗಡ ಇನ್ನೂ 5 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 6200 ರೂ. ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 165/2013 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ:31/03/2013 ರಂದು ಮಧ್ಯಾಹ್ನ 12.30 ಗಂಟೆಯಿಂದ 2.00 ಪಿಎಂ  ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಆಲಮಾರದಲ್ಲಿನ ಲಾಕರದಲ್ಲಿಟ್ಟಿದ್ದ 1) ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 97,200/-ರೂ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಶ್ರೀ ಸುನೀಲ ತಂದೆ ಬಾಬುರಾವ ಸೂರ್ಯವಂಶಿ ವ:40 ಜಾ:ಮರಾಠ ಉ:ವ್ಯಾಪಾಸ ಸಾ:ಲಕ್ಷ್ಮೀಗಂಜ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2013  ಕಲಂ:454, 380 ಐಪಿಸಿ  ಪ್ರಕಾರಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.