POLICE BHAVAN KALABURAGI

POLICE BHAVAN KALABURAGI

02 March 2013

GULBARGA DISTRICT REPORTED CRIME


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ನಾಗಮ್ಮ ಗಂಡ ಚಂದ್ರಕಾಂತ ಸಾ:ತಾರಪೈಲ ಗುಲಬರ್ಗಾ ರವರು ನನಗೆ 6 ವರ್ಷಗಳ ಹಿಂದೆ ಶಹಾಪೂರ ತಾಲ್ಲೂಕಿನ  ಕಾಡಮಗೇರಿ ಗ್ರಾಮದ  ಚಂದ್ರಕಾಂತ ತಂದೆ ಶಿವಬಸಪ್ಪ ಹುಡೆದವರ ಜೋತೆ ಮದುವೆ ಮಾಡಿದ್ದು, ಮದುವೆಯಲ್ಲಿ ವರದಕ್ಷಿಣೆ  ಅಂತಾ 25,000/- ರೂಪಾಯಿಗಳು, 2 1/2 ತೊಲೆ ಬಂಗಾರ  ಮತ್ತು ಇತರೆ ವಸ್ತುಗಳನ್ನು ನೀಡಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರ ಇನ್ನೂ 50.000/- ರೂಪಾಯಿಗಳು ತರುವಂತೆ ಗಂಡ ಮತ್ತು ಗಂಡನ ಮನೆಯವರು ಪಿಡಿಸುತ್ತಿದ್ದರು. ನನ್ನ ತಂದೆ ತಾಯಿ ಬಡವರಾಗಿದ್ದರಿಂದ ತವರಿನಿಂದ ಹಣ ತರಲು ಆಗುತ್ತಿಲ್ಲ ಗಂಡ ಚಂದ್ರಕಾಂತ, ಅತ್ತೆ ಶಿವಲಿಂಗಮ್ಮ, ಮಾವ ಶಿವಬಸಪ್ಪ ಮೈದುನ ಮರಿಲಿಂಗಪ್ಪ ಮತ್ತು ನಾದಿನಿ ನಾಗಮ್ಮ  ನನಗೆ ಬೈಯುವುದು ಅವಮಾನಿಸುವದು ಮಾಡುತ್ತಿದ್ದಾರೆ. ನನ್ನ ಎರಡೂವರೆ ವರ್ಷದ ಮಗನ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಬರುತ್ತಿದ್ದೆ, ನೀನು  50.000/- ರೂಪಾಯಿಗಳು ನಿನ್ನ ತವರು ಮನೆಯಿಂದ ತಂದರೆ ಮಾತ್ರ ಮನೆಯಲ್ಲಿ ಇರಬೇಕು ಇಲ್ಲವಾದರೆ ಬೇರೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇದರಿಸಿ ಮನೆಯಿಂದ ಹೋರ ಹಾಕಿರುತ್ತಾರೆ. ದಿನಾಂಕ:17-1-2013 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಗಂಡ ಅತ್ತೆ ನಾದಿನಿ  ಮಾವ  ಮೈದುನ ಎಲ್ಲರೂ ದುಡ್ಡು ತರದೆ ಇರುವದಕ್ಕೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜಬರದಸ್ತಿಯಿಂದ ನನ್ನ 2 ವರ್ಷದ ಮಗನನ್ನು ತೆಗೆದುಕೊಂಡು ಹೋಗಿರುತ್ತಾರೆ. ಇವತ್ತಲ್ಲ ನಾಳೆ ನನ್ನ ಗಂಡ ತಿದ್ದುಕೊಳ್ಳಬಹುದು ಅಂತಾ ಸಹಕರಿಸಿಕೊಂಡು ಬಂದಿರುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ  ಗುನ್ನೆ ನಂ:12/2013 ಕಲಂ 498(ಎ),323,504,506,363 ಸಂಗಡ 34 ಐಪಿಸಿ ಮತ್ತು 3 &4 ಡಿಪಿ ಆಕ್ಟ್ಯ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 February 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಶೇಖ್ ಖಾಜಾಮೀಯಾ ಹುಸೇನ ತಂದೆ ಶೇಖ್ ಮಗ್ದುಮ್ ಹುಸೆನ ಮೀಣಜಗಿ ಸಾಮದಿನಾ ಕಾಲೊನಿ ಎಮ್‌ಎಸ್‌ಕೆ ಮಿಲ್  ಜಿಲಾನಾಬಾದ ಗುಲಬರ್ಗಾರವರು ನನ್ನ ಮೂರನೆಯ ಮಗನಾದ ಶೇಖ್‌ ವಾಸೀಂ ಹುಸೇನ್‌ ಇತನು ಫಿರೋಜಾಬಾದದಲ್ಲಿರುವ ಮಹಿಬೂಬ ಪಾಷಾ ತಂದೆ ಸುಲೈಮಾನಸಾಬ ಹೆರವಾಲೆ ಸಾ|| ಫಿರೋಜಾಬಾದ ಇವರ ಹತ್ತಿರ ಹೋಗಿ ಬಹಳ ದಿವಸವಾಯಿತು ನಾನು ಹೋಗಿ ಬರುತ್ತೆನೆ ಅಂತಾ ದಿನಾಂಕ:25-02-2013 ರಂದು 7-00 ಪಿ.ಎಮ ಸುಮಾರಿಗೆ ತನ್ನ ಹೀರೋ ಹೊಂಡಾ ಸಿಡಿ-100 ಮೋಟರ ಸೈಕಲ್‌ ನಂ. ಕೆಎ-32 ಆರ್-2942 ನೇದ್ದರ ಮೇಲೆ ಹೋಗಿದ್ದು, ರಾತ್ರಿ 9-00  ಗಂಟೆಯ ನನ್ನ ಎರಡನೆಯ ಮಗನಾದ ಶೇಖ್‌ ಹಾಬಿದ ಹುಸೇನ್‌ ಇತನು ಅಣ್ಣನಾದ ಶೇಖ್ ವಾಸೀಂ ಹುಸೇನ ಇತನ ಮೋಬೈಲ್‌ ಫೊನ್‌ನಿಂದ ಯಾರೋ ಪೊನ್ ಮಾಡಿ ಸರಡಗಿ ಕ್ರಾಸ್‌ ಸಮೀಪ ಯಾವೂದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಮೋಟರ್‌ ಸೈಕಲ್‌ ನಂ:ಕೆಎ-32 ಆರ್- 2942 ನೇದ್ದಕ್ಕೆ ಡಿಕ್ಕಿ ಪಡಿಸಿ ನಿಲ್ಲಿದೆ ಹಾಗೆಯೆ ಓಡಿಸಿಕೊಂಡು ಹೋಗಿರುತ್ತಾರೆ. ಆತನಿಗೆ ಭಾರಿಗಾಯಗಳಾಗಿದ್ದರಿಂದ ಉಪಚಾರ ಕುರಿತು 108 ಅಂಬ್ಯುಲೆನ್ಸನಲ್ಲಿ  ಗುಲಬರ್ಗಾಕ್ಕೆ ಕಳಿಸುತಿದ್ದೆವೆ ಅಂತಾ ತಿಳಿಸಿದ ಮೇರೆಗೆ ನಾವು ಹೋಗಿ ನೋಡಲಾಗಿ ದೇಹದ ಹಲವು ಕಡೆ ಭಾರಿ ರಕ್ತಗಾಯವಾಗಿ ಮಾತನಾಡುತ್ತಿಲ್ಲ. ನನ್ನ ಮಗ ಶೇಖ್‌ ವಾಸೀಂ ಹುಸೇನ್‌ ಇತನ ಮೋಟರ ಸೈಕಲ್‌ ಕ್ಕೆ ಡಿಕ್ಕಿ ಪಡಿಸಿದ ಚಾಲಕ ಮತ್ತು ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶೇಖ್ ಖಾಜಾಮೀಯಾ ಹುಸೇನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2013 ಕಲಂ,279,338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

26 February 2013

GULBARGA DISTRICT


ಅಪ್ರಾಪ್ತ ವಯಸ್ಸಿನ ಹುಡಗರಿಂದ ಹಣ ಮತ್ತು ಮೊಬಾಯಿಲ್ ದರೋಡೆ:
ಅಶೋಕ ನಗರ ಪೊಲೀಸ ಠಾಣೆ:ದಿನಾಂಕ:26/11/2012 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಗೋದುತಾಯಿ ನಗರದ ರೈಲ್ವೆ ಹಳೆಯ ಹತ್ತಿರ ಶ್ರೀ ಚೇತನ ತಂದೆ ಗುಂಡಪ್ಪ ಕೊಟಗಿ ಮತ್ತು ಶಫೀಮುಲ್ಲಾ ಇಬ್ಬರು ವಿದ್ಯಾರ್ಥಿಗಳು ನಿಸರ್ಗಾ ಕಾಲೇಜದಲ್ಲಿ ಟಿವಿಶನ್ ಮುಗಿಸಿಕೊಂಡು ರೈಲ್ವೆ ಹಳೆಯ ದಾಟಿ ಬರುತ್ತಿರುವಾಗ ಇಬ್ಬರು ಅಪರಿಚಿತ ಹುಡುಗರು ಬಂದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಂಭೀರ ಸ್ವರೂಪದ ಗಾಯಗೊಳಿಸಿ ಮೊಬೈಲ ಮತ್ತು ಹಣ ಕಸಿಕುಕೊಂಡು ಹೋಗಿರುತ್ತಾರೆ ಅಂತಾ ಚೇತನ ತಂದೆ ಗುಂಡಪ್ಪ ಕೊಟಗಿ ಸಾ||ಗೋದುತಾಯಿ ನಗರ ಗುಲಬರ್ಗಾ ರವರು ದೂರು ನೀಡಿದ್ದರಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 107/2012 ಕಲಂ 397 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಕೊಂಡ  ಶ್ರೀ ಟಿ.ಹೆಚ್. ಕರೀಕಲ್ ಪಿ.ಐ ಅಶೋಕ ನಗರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರಾದ ಸುರೇಶ, ರಫೀಕ, ಬಸವರಾಜ, ಉಮ್ಮಣ್ಣ ಪಿ.ಸಿ ರವರು ವೈಜ್ಞಾನಿಕ ತಂತ್ರಾಂಶದಿಂದ ಹಣ ಮತ್ತು ಮೊಬೈಲ ಕಸಿದುಕೊಂಡು ಹೋಗಿದ್ದ ಅಪ್ರಾಪ್ತ ವಯಸ್ಸಿನ ಆಪಾಧಿತರಾದ ಸಮೀರ ತಂದೆ ಸೈಯದ ಮಹೆಬೂಬ ಸಾ|| ವಿದ್ಯಾನಗರ ಗುಲಬರ್ಗಾ, ಶಫೀ @ ಮಹ್ಮದ ಶಫೀಯೊದ್ದಿನ್ ತಂದೆ ಮಹ್ಮದ ಇಮ್ತಿಯಾಜ ಸಾ|| ಶಾಂತಿನಗರ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿರುತ್ತಾರೆ.