POLICE BHAVAN KALABURAGI

POLICE BHAVAN KALABURAGI

20 January 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ದಿನಾಂಕ 20-01-2013 ರಂದು ಮಧ್ಯರಾತ್ರಿ 12-00 ಗಂಟೆ ಸುಮಾರಿಗೆ ಮೃತ  ಶರಣು @ ಶರಣಪ್ಪ @ ಶರಣಬಸಪ್ಪ ತಂದೆ ಮಾಹಾದೇವಪ್ಪ ತೇಲಾಕುಣಿ  ವ:30 ವರ್ಷ  ರವರು ಹಿರೋ ಹೊಂಡಾ ಫ್ಯಾಶನ ಕೆಎ-32 ಎಲ್-2639 ನೇದ್ದರ ಮೇಲೆ ಹುಮನಾಬಾದ ರಿಂಗ ರೋಡ ಕಡೆಯಿಂದ ಮನೆಗೆ ಬರುತ್ತಿರುವಾಗ ಏರಲೈನ್ಸ ದಾಬಾದ ಹುಮನಾಬಾದ ರೋಡಿನ ಮೇಲೆ  ಹಿಂದಿನಿಂದ ಲಾರಿ ಎಮ್.ಪಿ-22 ಹೆಚ-0978 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ  ಬಂದು ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ. ಶರಣು ಇತನು  ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಾಗ, ಲಾರಿ  ಮೋಟಾರ ಸೈಕಲ ಮತ್ತು ಮೃತ ಮೈಮೇಲಿದ್ದ ಹಾಯ್ದು ಹೋಗಿದ್ದರಿಂದ  ಮೃತನ ತೊಡೆಯ ನಡುವಿನಿಂದ ಸೀಳಿ ಹೊಟ್ಟೆಯಿಂದ ಎದೆಯವರೆಗೆ ಹರಿದು ಭಾರಿ ರಕ್ತಗಾಯವಾಗಿ ಎಲ್ಲಾ ಕರುಳುಗಳು ಹೊರ ಬಂದು ರೋಡಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.  ಲಾರಿ ಚಾಲಕ ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ನೀಲಮ್ಮಾ ಗಂಡ ಶರಣು @ ಶರಣಪ್ಪ @ ಶರಣಬಸಪ್ಪ ತೇಲಾಕುಣಿ  ವ:28 ವರ್ಷ ಸಾ||ದುಧನಿ ಪಟ್ಟಣ ತಾ||:ಅಕ್ಕಲಕೋಟ  ಹಾ:ವ: ಕಪನೂರರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:46/2013 ಕಲಂ. 279,304(ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


19 January 2013

GULBARGA DISTRICT REPORTED CRIMES


2 ½ ವರ್ಷದ ಮಗುವಿನ ಮೇಲೆ ಅತ್ಯಾಚಾರ :
ದೇವಲ ಗಾಣಗಾಪೂರ ಠಾಣೆ: ಅಪಜಲಪೂರ ತಾಲೂಕಿನ ದೇವಲ ಗಾಣಗಾಪುರದಲ್ಲಿ ದಿನಾಂಕ:18-01-2013 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಅಂಗನವಾಡಿ ಶಾಲೆಗೆ ಹೋಗಿ ಬಂದ 2 ½  ವರ್ಷದ  ಹೆಣ್ಣು ಮಗವಿಗೆ (ಹೆಸರು ಸೂಚಿಸಿರುವದಿಲ್ಲ)  ನಮ್ಮ ಪಕ್ಕದ ಮನೆಯ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವನು ಮಗುವಿಗೆ ಮನೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿರುತ್ತಾನೆ ಅಂತಾ ಮಕ್ಕಳು ತಿಳಿಸಿದ ಮೇರೆಗೆ  ನಾನು ಗಾಬರಿಯಾಗಿ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವರ ಮನೆಯ ಮುಂದೆ ಹೋದಾಗ ಒಳಗಡೆಯಿಂದ ನನ್ನ ಮಗಳ ಅಳುವ ಶಬ್ದ ಬರುತ್ತಿತ್ತು. ತಾನು ಮಂಜುನಾಥನಿಗೆ ಬಾಗಿಲು ತೆಗೆಯಲು ಚಿರಾಡಿದಾಗ ಅವನು ಸ್ವಲ್ಪ ಹೊತ್ತಿನ ಮೇಲೆ ಬಾಗಿಲು ತೆರೆದನು ಅವನು ಚಡ್ಡಿಯ (ಅಂಡವೇಯರ) ಮೇಲೆ ಇದ್ದನು. ಮಂಜುನಾಥನು ನನಗೆ ನೋಡಿ ಪ್ಯಾಂಟ್ ಹಾಕಿಕೊಳ್ಳುತ್ತಾ ಓಡಿ ಹೋದನು.ನಮ್ಮ ಪಕ್ಕದ ಮನೆಯ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವನು ಏನೋ ಆಸೆ ತೋರಿಸಿ ನನ್ನ 2 ½ ವರ್ಷದ ಮಗಳಿಗೆ ತನ್ನ ಮನೆಯಲ್ಲಿ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿದ್ದು. ಅವನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಮಗುವಿನ ತಾಯಿ ದೂರು  ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 7/2013 ಕಲಂ. 376 ಐಪಿಸಿ ಮತ್ತು ಕಲಂ.3 (I ),  (XII) ಎಸ್.ಸಿ/ಎಸ್ಟಿ ಪಿ.ಎ ಆಕ್ಟ್  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ್ ಠಾಣೆ:ಸಾ:ನದಿ ಸಿನ್ನೂರ ತಾ:ಜಿ:ಗುಲಬರ್ಗಾ ಹಾ||ವ|| ಕೆ.ಪಿ.ಹೆಚ್‌.ಬಿ ಕಾಲೋನಿ ಹೈದ್ರಾಬಾದ ರವರು ನನ್ನ 26 ವರ್ಷದ ಮಗಳು (ಹೆಸರು ಸೂಚಿಸಿರುವದಿಲ್ಲ)  ದಿನಾಂಕ:26/12/2012 ರಂದು ಮನೆಯಿಂದ ಕೆಲಸಕ್ಕೆ ಹೋದವಳು ಮನೆಗೆ ಹಿಂದಿರುಗಿ ಬರದ ಕಾರಣ ನಾವೇಲ್ಲರೂ ಹುಡುಕಾಡಿದರು ಸಿಕ್ಕಿರುವದಿಲ್ಲಾ. ದಿನಾಂಕ:17/01/2013 ರಂದು ವೀರಣ್ಣಾ ತಂದೆ ಲಕ್ಷಮಯ್ಯ ಮುತ್ತಗಿ ಇವನ ತಮ್ಮನಾದ ತಿರುಪತಿ ತಂದೆ ಲಕ್ಷಮಯ್ಯ ಇತನು ಬಂದು ನನ್ನ ಮಗಳು ಮರಣ ಹೊಂದಿರುತ್ತಾಳೆ,ಸದರಿ ಶವವು ಮುತ್ತಗಾ ಗ್ರಾಮಕ್ಕೆ ತುರ್ತುವಾಹನದ ಮೂಲಕ ಮನೆಗೆ ತಲುಪಿಸಿ ಮರಳಿ ಮುತ್ತಗಾ ಗ್ರಾಮದಿಂದ ತೆರಳುವಾಗ ನಮ್ಮ ಕುಟುಂಬದವರು ಸದರಿ ವಾಹನವನ್ನು ರಾವೂರ ಹತ್ತಿರ ನಿಲ್ಲಿಸಿದೇವು, ನನ್ನ 26 ವರ್ಷದ ಮಗಳಿಗೆ ಅಪಹರಣ ಮಾಡಿ ಬಲತ್ಕಾರವೆಸಗಿ ಕೊಲೆ ಮಾಡಿರುವ ವೀರಣ್ಣಾ ತಂದೆ ಲಕ್ಷಮಯ್ಯ ಮುತ್ತಗಿ ಹಾಗೂ ಅವನಿಗೆ ಸಹಾಯ ಮಾಡಿರುವ ಅವರ ಅಣ್ಣಂದಿರಾದ ದ್ಯಾವಪ್ಪಾ ಮತ್ತು ತಿರುಪತಿರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಮೃತ ಯುವತಿಯ ತಾಯಿಯವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ:365,376,302,109 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:18-01-2013 ರಂದು ಮಧ್ಯಾಹ್ನ 14-00 ಗಂಟೆಗೆ ಇಂಡಸ್ಟ್ರೀಯಲ್ ಏರಿಯಾದ ಮಾಸಾಪತಿ ದರ್ಗಾಕ್ಕೆ ಹೋಗುವ ದಾರಿಯ ರೋಡ ಬದಿಗೆ ಇರುವ ಗಿಡದ ಕೆಳಗಡೆ ಮಟಕಾ ಜೂಜಾಟದಲ್ಲಿ ನಿರತರಾಗಿದ್ದ  ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.(ಅ.ವಿ.) ಮತ್ತು ಠಾಣೆಯ ಸಿಬ್ಬಂದಿ ಯವರು ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಶೇಕ ಮುನೀರ ತಂದೆ ಶೇಕ ಮದಾರ ಮತ್ತು ಮುನೀರ ತಂದೆ ಅಬ್ದಲ ಗನಿ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮಟಕಾ ಚೀಟಿ ಹಣ ತೆಗೆದುಕೊಂಡು ಹೋಗಲು ಬಂದ ರಾಜಶೇಖರ ಉಮಾಶೆಟ್ಟಿ ತನ್ನ ಮೋಟಾರ ಸೈಕಲ ಮತ್ತು ಮೋಬಾಯಿಲ ಸ್ಥಳದಲ್ಲಿ ಬಿಸಾಕಿ ಓಡಿ ಹೋಗಿರುತ್ತಾನೆ. ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 16,025/- , ಎರಡು ಮೊಬಾಯಿಲ್, ಬಜಾಜ ಪಲ್ಸರ ಮತ್ತು ಟಿವಿಎಸ್ ದ್ವಿ-ಚಕ್ರವಾಹನ ಹೀಗೆ ಒಟ್ಟು 76,725/- ಗಳದ್ದು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 41/2013 ಕಲಂ, 78 (3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

18 January 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಭೋಜರಾಜ ತಂದೆ ರಾಮಚಂದ್ರ ಪಾಟೀಲ  ಸಾ||ಸರಸಂಬಾ ತಾ|| ಆಳಂದ ರವರು ನನಗೆ ದಿನಾಂಕ:16/01/2013 ರಂದು ರಾತ್ರಿ 8 ಗಂಟೆಗೆ ವರದಾಶಂಕರ ತಂದೆ ಯಶ್ವಂತರಾವ ಪೊಲೀಸ್ ಪಾಟೀಲ ಸಾ|| ಸರಸಂಬಾ ಇತನು  ಸರಸಂಬಾ ಗ್ರಾಮ ಪಂಚಾಯತಿಯ ಎದುರುಗಡೆ ಬಸವೇಶ್ವರ ಚೌಕ ಅಗಸಿಯಲ್ಲಿ ರಾಜಶೇಖರ ತಂದೆ ಚನ್ನಬಸ್ಸಪ್ಪ ಮಾಲಿ ಪಾಟೀಲ ಇತನಿಗೆ ಇಲ್ಲಿ ಯಾಕೇ ಕುಳಿತುಕೊಂಡಿರಿ ಅಂತಾ ಅವಾಚ್ಯವಾಗಿ ಬೈದು ಪಿಸ್ತೂಲ್ ತೋರಿಸಿ ಇಲ್ಲಿಂದ ಹೋಗು ಇಲ್ಲವಾದರೆ ಜೀವ ತೆಗೆಯುತ್ತೆನೆ ಅಂತಾ ಬೇದರಿಕೆ ಹಾಕಿ ಕೈಯಿಂದ ಹೊಡೆದಿರುತ್ತಾನೆ. ಮತ್ತು ರಾತ್ರಿ 10 ಗಂಟೆಯ ಸುಮಾರಿಗೆ ಬಿ.ಆರ್. ಪಾಟೀಲ ಇವರು ಸರಸಂಬಾ ಕ್ಕೆ ಬಂದು ವರದಶಂಕರನಿಗೆ ವಿಚಾರಿಸುತ್ತಿದ್ದಾಗ ವರದಾಶಂಕರನು ನೀನು ಸುಭಾಷ ಗುತ್ತೆದಾರ ಎದುರು ಚುಣಾವಣೆಗೆ ಹೇಗೆ ನಿಲ್ಲುತ್ತಿ ನೊಡುತ್ತೆನೆ, ನೀನು ಚುಣಾವಣೆಗೆ ನಿಂತರೆ ನಿನ್ನ ಜೀವ ತೆಗೆಯುತ್ತೆನೆ ಎಂದು ಬೈದು ಪಿಸ್ತೂಲ ತೋರಿಸಿ ಜೀವದ ಭಯದ ಬೇದರಿಕೆ ಹಾಕಿದ್ದಲ್ಲದೆ ಎದೆಯ ಮೇಲಿನ ಶರ್ಟ ಹಿಡಿದು ಹರಿದು ಹಾಕಿರುತ್ತಾನೆ. ಈ ಘಟನೆಗೆ  ಸುಭಾಷ ಗುತ್ತೆದಾರ ಇವರ ಕುಮ್ಮಕ ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳಬೇಕು ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ 323, 341, 504, 506 [2] 109 ಸಂಗಡ 34 ಐ.ಪಿ.ಸಿ. ಮತ್ತು 25 ಆರ್ಮ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ವರದಾಶಂಕರ ತಂದೆ ಯಶ್ವಂತರಾವ  ಪಾಟೀಲ  ಸಾ||ಸರಸಂಬಾ ತಾ||ಆಳಂದ ರವರು ನಾನು ದಿನಾಂಕ:16/01/2013 ರಂದು ಆಳಂದದಿಂದ ಸರಸಂಬಾಕ್ಕೆ ಬಂದಾಗ ಊರ ಅಗಸಿಯಲ್ಲಿ ನನ್ನ ಸ್ನೇಹಿತ ಹಣಮಂತ ಜಮಾದಾರ ಈತನಿಗೆ ರಾಜಶೇಖರ ಪಾಟೀಲ ಸರಸಂಬಾ ಇವರು ವರದಾಶಂಕರನ ಜೋತೆ ಹಾಗೂ ಗುತ್ತೇದಾರನ ಜೋತೆ ಯ್ಯಾಕೆ ತಿರುಗಾಡಿತ್ತಿ ಅಂತಾ ಕೇಳುತ್ತಿದ್ದನು. ಆಗ ನಾನು ಅವರ ಹತ್ತಿರ ಬಂದು ಹಣಮಂತ ಜಮಾದಾರ ಇವರಿಗೆ ನನ್ನ ಮೋಟರ್ ಸೈಕಲ್ ಮೇಲೆ ಕುಡಿಸಿಕೊಂಡು ಅವರ ಮನೆಗೆ ಬಿಟ್ಟು ಮತ್ತೆ ರಾಜಶೇಖರ ಪಾಟೀಲ ಇವರ ಎದುರುಗಡೆಯಿಂದ ಬರುತ್ತಿರುವಾಗ ರಾಜಶೇಖರ ಇತನು  ಅವಾಚ್ಯವಾಗಿ ಬೈದು ಅವನಿಗೆ ಯ್ಯಾಕೆ ಕರೆದುಕೊಂಡು ಹೋಗಿದ್ದಿ ಅಂತ ನನಗೆ ಪ್ರಶ್ನಿಸಿದರು, ಅದಕ್ಕೆ ನಾನು ಅದು ನನ್ನ ವೈಯಕ್ತಿಕ ವಿಚಾರ ನೀವು ಕೇಳುವ ಸಂಬಂದ ಇಲ್ಲ ಎಂದು ಹೇಳಿದಾಗ,ಅವನು ಅವಾಚ್ಯವಾಗಿ ಬೈದು ನಿನಗೆ ಇಲ್ಲೆ ಕೂಲೆ ಮಾಡುತ್ತೆನೆ ಅಂತ ಹೆದರಿಸಿದನು. ನಾನು ಬಿ.ಆರ್.ಪಾಟೀಲ ಬಂದರೂ ನನ್ನನ್ನೂ ಕೊಲ್ಲುವುದಕ್ಕೆ ಆಗುವುದಿಲ್ಲ ಇದು ಪ್ರಜಾಪ್ರಭುತ್ವ ಇದು ನನ್ನ ಹಕ್ಕು ಎಂದೆ, ನಾನು ಅಲ್ಲಿಂದ ಹೋಗಿ ಸಾವಳೇಶ್ವರದಲ್ಲಿ ಸಾರಾಯಿ ಕುಡಿದು ಪುನ: ಸರಸಂಬಾಕ್ಕೆ ಬಂದು ಸರಸಂಬಾ ಗ್ರಾಮ ಪಂಚಾಯತ ಹತ್ತಿರ ಬಂದು ನನ್ನ ಬೈಕ್ ನಿಲ್ಲಿಸಿ ನಿಂತಾಗ ಅಷ್ಟರಲ್ಲಿ ಸುಮಾರು 25-30 ಜನರು ಅದರಲ್ಲಿ ಬಿ.ಆರ್.ಪಾಟೀಲ, ರಾಜಶೇಖರ ಪಾಟೀಲ,ನಾಗರಾಜ ಪಾಟೀಲ, ಸಚೀನ,ಬಸವರಾಜ,ಪಂಡಿತ ಜಿಡಗೆ ಹಾಗೂ ಬೇರೆ ಊರಿನಿಂದ ನಾಲ್ಕರೂ ವಾಹನಗಳಲ್ಲಿ 25-30 ಕ್ಕೂ ಹೆಚ್ಚು ಜನರು ಬಂದು ಮೊದಲಿಗೆ ಬಿ.ಆರ್.ಪಾಟೀಲ ನನಗೆ ಪಿಸ್ತೂಲ್ ಎದೆಗೆ ಹಚ್ಚಿ ಮಗನೆ ನಿನಗೆ ಕೊಲ್ಲುತ್ತೇನೆ ಸರಸಂಬಾದಲ್ಲಿ ಜೆ.ಡಿ.ಎಸ್ ಕಛೇರಿ ಮುಚ್ಚು ಇಲ್ಲವಾದಲ್ಲಿ ನಿನಗೆ ಸಾಯಿಸುತ್ತೇನೆ ಎಂದು ಹೆದರಿಸಿದರು ಅವರ ಸಂಗಡಿಗರಾದ ರಾಜಶೇಖರ ಪಾಟೀಲ,ನಾಗರಾಜ ಪಾಟೀಲ,ಪಂಡಿತ ಜಡಗೆ ಇನ್ನೀತರ ಬೇರೆ ಊರಿನಿಂದ ಬಂದ ಸುಮಾರು 25-30 ಜನರು ನನಗೆ ಹೊಡೆದು ನನ್ನ ಕೊರಳಿನಲ್ಲಿದ್ದ 1 ತೊಲೆಯ (10 ಗ್ರಾಂ)ಬಂಗಾರದ ಚೈನು, ಮೊಬಾಯಿಲ್, ಡೈರಿ ಕಿತ್ತುಕೊಂಡಿರುತ್ತಾರೆ. ಸದರಿಯವರ ಮೇಲೆ ಕಾನೂನಿನ ಪ್ರಕಾರ  ಕ್ರಮ ಕೈಕೊಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ:143,147,323,329,363,504,506(2),ಸಂಗಡ 149 ಐ.ಪಿ.ಸಿ. ಮತ್ತು 25 ಆರ್ಮ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.