POLICE BHAVAN KALABURAGI

POLICE BHAVAN KALABURAGI

24 December 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ನಿಂಬಾಜಿ ಸಾ|| ಕಲ್ಲ ಹಂಗರಗಾ ನಾನು ಮನೆಯಲ್ಲಿದ್ದಾಗ ನಮ್ಮ   ತಂದೆ ಹೆಸರಿನಲ್ಲಿದ್ದ  ಒಟ್ಟು  29 ಎಕರೆ ಜಮೀನು ಮತ್ತು ಎರಡು ಮನೆ ಗಂಡು ಮಕ್ಕಳಿಗೆ ಹಂಚಬೇಕು ಮತ್ತು  ಸಿವಿಲ ಕೋರ್ಟನಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ  ಪಾಲು ಕೊಡಬೇಕೆಂದು ಕೇಸ ಹಾಕಿದ್ದಕ್ಕೆ ಕೇಸು ವಾಪಸ್ಸು ತೆಗೆದುಕೋ ಅಂತಾ ಶರಣಬಸಪ್ಪಾ ತಂದೆ ಮಾಧುರಾಯ, ರೇವಣಸಿದ್ದಪ್ಪ ತಂದೆ ಮಾಧುರಾಯ  ಸಾ: ಇಬ್ಬರು ಕಲ್ಲಹಂಗರಗಾ ರವರು ನಮ್ಮ ಜೋತೆ ಜಗಳಾ ತೆಗೆದು ನನಗೆ ಮತ್ತು ಇತರರಿಗೆ ಅವಾಚ್ಯವಾಗಿ ಬೈದು ರಾಡಿನಿಂದ, ಕಲ್ಲಿನಿಂದ, ಕೈಯಿಂದ, ಬಾಯಿ ಕಚ್ಚಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:424/2012 ಕಲಂ 504, 323, 324, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಮೊನಪ್ಪ ತಂದೆ ಲಕ್ಷ್ಮಣರಾವ ಜಮಾದಾರ ವ; 38, ಉ: ಒಕ್ಕಲುತನ ಸಾ: ಕುಮಸಿ, ತಾ:ಜಿ: ಗುಲಬರ್ಗಾ  ರವರು  ದಿನಾಂಕ: 21/22-12-2012 ರಂದು ಮಧ್ಯರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಫಳಿ ಮುರಿದು, ಕಬ್ಬಿಣದ  ಟ್ರಂಕನಲ್ಲಿಟ್ಟದ್ದ ಹಣ 11,000/- ತಾಮದ್ರ ಕೊಡ ಬಂಗಾರದ ಆಭರಣ ಹೀಗೆ ಒಟ್ಟು 20,000/- ಮೌಲ್ಯದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 425/2012 ಕಲಂ, 457, 380 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕುಡಿದ ಅಮಲಿನಲ್ಲಿ ಹೆಂಡತಿಯ ಮೇಲೆ ಹಲ್ಲೆ :
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀಮತಿ ರಿಜ್ವಾನ ಬೇಗಂ ಗಂಡ ಮೊಹ್ಮದ ರಫೀಕ ವ:30 ಜಾ:ಮುಸ್ಲಿಂ ಉ:ಮನೆಕೆಲಸ ಸಾ:ಇಂಜೈನ ಫೈಲ ಪಠಾಣ ಗಲ್ಲಿ ಶಹಾಬಾದ ರವರು ನಾನು ದಿನಾಂಕ:21/12/2012 ರಂದು ರಾತ್ರಿ 9-30  ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಗಂಡ ಮೊಹ್ಮದ ರಫೀಕ ಇತನು ಕುಡಿದು ಬಂದು ವಿನಾಕಾರಣ ನನ್ನೊಂದಿಗೆ ಜಗಳ ತೆಗೆದು  ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಗಾಜಿನ ಬಾಟಲಿ ಒಡೆದು ಅದರಿಂದ ನನ್ನ ಎಡಗೈ ಹೆಬ್ಬೆರಳಿಗೆ ಚುಚ್ಚಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 163/2012 ಕಲಂ, 341, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ.ರಾಣೋಜಿ ತಂದೆ ಶಿವಪುತ್ರ ಸಿಂಗೆ ಜ್ಯಾತಿ; ಪರಿಶಿಷ್ಟ.ಜಾತಿ. ಉ; ವಿದ್ಯಾರ್ಥಿ ಸಾ;ಕುಮಸಿ ಗ್ರಾಮ ತಾ;ಜಿ;ಗುಲಬರ್ಗಾ ವರು ನಮ್ಮ ಮನೆಯವರೆಗೆ ನಮ್ಮ ಊರಿನ ಅಂಬರೀಷ ತಂದೆ ಸೂರ್ಯಕಾಂತ ಕೇವಂಟಗಿ,ಶಿವಾನಂದ ತಂದೆ  ಹಣಮಂತರಾಯ ಕೇವಂಟಿಗಿ,ಬಸವರಾಜ ತಂದೆ ಮಾದುರಾಯ ಕೇವಂಟಿಗಿ, ವಿಠಲ ತಂದೆ ಮಾದುರಾಯ ಕೇವಂಟಗಿ, ಹಾಗೂ  ಶಿವರಾಜ ತಂದೆ ಮಾದುರಾಯ ಕೇವಂಟಿಗಿ ಎಲ್ಲರೂ ಕೂಡಿಕೊಂಡು ದಿನಾಂಕ. 22-12-2012 ರಂದು ಅಂದಾಜ ರಾತ್ರಿ  10-30 ಗಂಟೆಯ ಬಂದು ನಮ್ಮ ಮನೆಯವರೆಗೆ ಬಂದು ಅವಾಚ್ಯವಾಗಿ ಜಾತಿ ಎತ್ತಿ   ಬೈಯುತ್ತಿದ್ದಾಗ ಹೊರಗಡೆ ಬಂದೆನು. ಪಕ್ಕದ ಮನೆಯ ಹಣಮಂತ ಸಿಂಗೆ , ಹಣಮ್ಮಂತ ತಂದೆ ಲಕ್ಕಪ್ಪಾ ಸಿಂಗೆ , ಮತ್ತು ಹಣಮಂತ ತಂದೆ ಲಕ್ಷ್ಮಣ ಕರಪೈಕಿ ಇವರುಗಳು ಬಂದು , ಶಿವಾನಂದನಿಗೆ ನಾನು  ನಿಮ್ಮ  ಅಳಿಯ ಅಂಬರೀಷನೊಂದಿಗೆ ಜಗಳವಾಡಿಲ್ಲಾ, ಅವನೆ ತಕರಾರು ಮಾಡುತ್ತಿದ್ದಾಗ ನಾನೇ ಅವನನ್ನು ಸಮಜಾಯಿಸಿರುತ್ತೇನೆ ಅಂತಾ ಹೇಳುವಷ್ಟರಲ್ಲಿ  ಊರಲ್ಲಿ ಬಹಳ ಉರುಣಿಗಿ ನಡೆದಿದೆ ಅಂತಾ  ಅಂದವನೆ  ತನ್ನ ಕೈಯಲ್ಲಿದ್ದ ಕುಡಗೋಲು ದಿಂದ ನನಗೆ ಹೋಡೆಯಲು ಬಂದಾಗ ನಾನು ತಪ್ಪಿಸಿಕೊಳ್ಳಲು ನನ್ನ ಬಲಗೈ  ಅಂಗೈ  ಹಾಗೂ ತೋರು ಬೆರಳಿನ ಹತ್ತಿರ ಹತ್ತಿ  ರಕ್ತಗಾಯವಾಯಿತು. ಜಗಳ ಬಿಡಿಸಲು ಬಂದ  ಹಣಮಂತ ಸಿಂಗೆ ಮತ್ತು ಹಣಮಂತ ಕರಪೈಕಿ   ಇವರು ಶಿವಾನಂದನ ಕೈಯಲಿದ್ದ ಕುಡುಗೋಲು ಕಸಿದುಕೊಳ್ಳಲು ಹೋದಾಗ  ಹಣಮಂತ ಸಿಂಗೆ ಇತನ ಬಲಗೈ ಅಂಗೈಯಲ್ಲಿ ಕೂಡಾ  ಕುಡಗೋಲು ಹತ್ತಿ ರಕ್ತ ಗಾಯವಾಯಿತು.  ಮತ್ತು ಹಣಮಂತ ಕರಪೈಕಿ ಇತನನ ಎಡಗೈ ಮಣಿಕಟಿನ ಹತ್ತಿರ  ತರಚಿದಗಾಯವಾಗಿರುತ್ತದೆ.  ಶಿವಾನಂದನ ಸಂಗಡ ಇದ್ದ  ಶಿವರಾಜ ಕೇವಂಟಿಗಿ  ಇತನು ಹಣಮಂತ ತಂದೆ ಶಿವಲಿಂಗಪ್ಪಾ ಸಿಂಗೆ ಇತನಿಗೆ ಕೈಯಿಂದ ಮುಷ್ಠಿ ಮಾಡಿ ಹೊಟ್ಟೆಯಲ್ಲಿ, ಎದೆಗೆ ಹೊಡೆಬಡಿ ಮಾಡಿದ್ದು, ಬಸವರಾಜ ಕೇವಂಟಿಗಿ , ವಿಠಲ್ ಕೇವಂಟಿಗಿ ಇವರಿಬ್ಬರು ಕೂಡಿ  ಹಣಮಂತ ಕರಪೈಕಿ ಮತ್ತು ಹಣಮಂತ ತಂದೆ ಲಕ್ಕಪ್ಪಾ ಸಿಂಗೆ ಇವರಿಗೆ ಕೈಗಳಿಂದ ಹೊಡೆಬಡಿ ಮಾಡುವಾಗ, ನನ್ನ ತಂಗಿ ಸಾವಿತ್ರಿಬಾಯಿ  ಇವಳು  ಸದರಿ ಜಗಳ ಬಿಡಿಸಲು ಬಂದಾಗ ಶಿವಾನಂದನು ಆಕೆಗೆ ನೂಕಿಸಿಕೊಟ್ಟಿದರಿಂದ ಅವಳು ಕೆಳೆಗೆ ಬಿದ್ದಿದ್ದು  ಅದರಿಂದ ಅವಳ  ಎಡಕಣ್ಣಿನ ಹತ್ತಿರ  ರಕ್ತಗಾಯವಾಗಿರುತ್ತದೆ.  ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:427/2012 ಕಲಂ.341,323,324,504,307,ಸಂಗಡ 34 ಐಪಿಸಿ.ಮತ್ತು 3 (1) (10), (11) ಎಸ್.ಸಿ/ಎಸ್.ಟಿ  ಪಿ.ಎ.ಕ್ಟ 1986  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

22 December 2012

GULBARGA DISTRICT REPORTED CRIMES


ಹಲ್ಲೆ, ಕೊಲೆಗೆ ಪ್ರಯತ್ನ:
ಚೌಕ ಪೊಲೀಸ್ ಠಾಣೆ:ಶ್ರೀ ಅಂಬು ತಂದೆ ಮಲ್ಕಣ್ಣಾ ಕುಂಬಾರ ಅಟೋ ಚಾಲಕ ಸಾ:ರಾಜೀವಗಾಂಧಿ ನಗರ ಗುಲಬರ್ಗಾ ನಾನು ದಿನಾಂಕ:21.12.2012 ರಂದು ರಾತ್ರಿ  21-30 ಗಂಟೆ ಸುಮಾರಿಗೆ ಲಿಂಗರಾಜ ತಂದೆ ಸುಭಾಶ್ಚಂದ್ರ ಜಮಾದಾರ ಸಾ: ಫಿಲ್ಟರ್ ಬೆಡ್ ಗುಲಬರ್ಗಾ ಇಬ್ಬರೂ ಕೂಡಿಕೊಂಡು ಮಾಸ್ತರ ಖಾನಾವಳಿಯಿಂದ ಊಟ ತಗೆದುಕೊಂಡು ಮಹೇಶ ವೈನ್ ಶಾಪ ಎದುರುಗಡೆಯಿಂದ ನಮ್ಮ ಬಡಾವಣೆಗೆ ಹೋರಟಾಗ ಕೈಲಾಸ, ರಾಜು,ಪ್ರಕಾಶ ಡೊಲಾರೆ,ಜಗು, ಆಕಾಶ, ಕೃಷ್ಣಾ ಸಾ:ಎಲ್ಲರೂ ಆರ್ಯ ನಗರ ಗುಲಬರ್ಗಾ ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ ಕಲ್ಲು ಬಡಿಗೆ ಹಿಡಿದುಕೊಂಡು ನಮ್ಮನ್ನು ನೋಡಿ ಅವಾಚ್ಯವಾಗಿ ಬೈದು ಮೊನ್ನೆ ನಮ್ಮ ಬಡಾವಣೆ ಹುಡುಗರಿಗೆ ಹೊಡೆದಿದ್ದಿರಿ ಇವುತ್ತು ನಾವು ನಿಮ್ಮನ್ನು ಖಲಾಸ ಮಾಡುತ್ತೇವೆ ಅಂತ ನನಗೆ ಮತ್ತು ಲಿಂಗರಾಜ ಇತನಿಗೆ ಎಲ್ಲರೂ ಕೂಡಿಕೊಂಡು  ತಲವಾರ, ಕಲ್ಲು, ಬಡಿಗೆಗಳಿಂದ ನನಗೆ ಹಣೆಯ ಎಡಭಾಗಕ್ಕೆ, ಎಡಮೊಳಕಾಲ ಮೇಲೆ ಮತ್ತು ಲಿಂಗರಾಜ ಇತನಿಗೆ ಭಾಯಿ ಮತ್ತು ತುಟಿಯ ಮೇಲೆ, ಎರಡು ಭುಜಗಳಿಗೆ, ಬೆನ್ನಿಗೆ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 211/2012 ಕಲಂ, 143, 147, 148, 341, 323, 324, 504, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಬಾಬುರಾವ ತಂದೆ ಶಿವಶರಣಪ್ಪ ಗೊಬ್ಬೂರ ಗ್ರಾಮ ಪಂಚಾಯತ ಸದಸ್ಯರು ಭೂಸನೂರ, ಸಾ|| ಭೂಸನೂರ ರವರು ನಾನು ಭೂಸನೂರ ಗ್ರಾಮದ ಗ್ರಾಮ ಪಂಚಾಯತಿಯ  ವಾರ್ಡ ನಂ.02 ರಲ್ಲಿ ಹೋದ ಚುನಾವಣೆಯಲ್ಲಿ ಚುನಾಯಿತನಾಗಿ ಸದಸ್ಯನಾಗಿರುತ್ತಾನೆ. ದಿನಾಂಕ 24/12/2012 ರಂದು ಭೂಸನೂರ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಇದ್ದು ಅದರ ಸಂಭಂಧ ಜವಳಿ (ಡಿ) ಗ್ರಾಮದ ಪಂಚಾಯತ ಸದಸ್ಯರ ಹತ್ತಿರ ಹೋಗಿ ಮರಳಿ ನಮ್ಮ ಮನೆಗೆ ರಾತ್ರಿ ವೇಳೆ ಬರುತ್ತಿದ್ದಾಗ ದಾರಿಯಲ್ಲಿ ನನ್ನ ಹೆಂಡಿತಿಯಾದ ಕವಿತಾ ಇವಳು  ದೂರವಾಣಿ ಮೂಲಕ ತಿಳಿಸಿದ್ದೇನೆಂದರೆ ನಾನು ಮನೆಯ ಬಾಗಿಲು ಹಾಕಿಕೊಂಡು ಮಲಗಿಕೊಂಡಿದ್ದು ಒಂದು  ಗಂಟೆಯ ಹಿಂದೆ ನಮ್ಮ ಮನೆಯ ಬಾಗಿಲು ಯಾರೋ ಬಡೆದಿದ್ದರಿಂದ ಅವಾಜ ಕೇಳಿ ನನ್ನ ಗಂಡನೆ ಮನೆಗೆ ಬಂದಿರಬಹುದೆಂದು ತಿಳಿದು ಬಾಗಿಲು ತೆಗೆದು ನೋಡಲು ಮನೆಯ ಮುಂದೆ ಬಾಬುಗೌಡ ತಂದೆ ಸಿದ್ದಣ್ಣಗೌಡ ಪಾಟೀಲ, ಶಂಕರರಾವ ಪಾಟೀಲ, ಅಣ್ಣಾರಾವ ಪಾಟೀಲ, ಅನೀಲ ಎಸ್. ಪಾಟೀಲ,ಅಶೋಕ ಎಸ್. ಪಾಟೀಲ, ರಾಜಶೇಖರ ಮಲಶೆಟ್ಟಿ ಎಲ್ಲರೂ ಸಾ|| ಭೂಸನೂರ ಇವರೆಲ್ಲರೂ ನಿನ್ನ ಗಂಡ ಎಲ್ಲಿದ್ದಾನೆ ಅವನಿಗೆ ಹೊರಗಡೆ ಕಳುಹಿಸು ಅಂತ ಅಂದಾಗ ಅವರು ಮನೆಯಲ್ಲಿ ಇಲ್ಲ ಅಂತ ಹೇಳಿದೆನು. ಆಗ ಬಾಬುಗೌಡ ಈತನು ಆ ಭೋಸಡಿ ಮಗ ಎಲ್ಲಿಗೆ ಹೋಗಿದ್ದಾನೆ ಅವನಿಗೆ ಹೇಳು ನಾವು ಹೇಳಿದವರಿಗೆ ಓಟ ಹಾಕಬೇಕು ಇಲ್ಲವೆಂದರೆ ಊರಲ್ಲಿ ಹೇಗೆ ಜೀವಿಸುತ್ತಾನೆ ನೋಡುತ್ತೇವೆ ಅಂತ ಹೇಳಿ ಹೋಗಿದ್ದಾರೆಂದು ತಿಳಿಸಿದಳು. ನಾನು ರಾತ್ರಿ 11-30 ಗಂಟೆ ಸುಮಾರಿಗೆ ಗುರುಶಾಂತಪ್ಪ ತಂದೆ ನಿಂಗಪ್ಪ ಕಡಕೋಳ, ಶಾಂತಮಲ್ಲಪ್ಪ ನೆಲ್ಲೂರ ಕೂಡಿಕೊಂಡು ಬರುತ್ತಿರುವಾಗ ಗ್ರಾಮದ ಚಕ್ರ ಕಟ್ಟೆಯ ಮುಂದಿನ ರೋಡಿನ ಮೇಲೆ ಮೇಲಿನವರು ದಿನಾಂಕ 24/12/2012 ರಂದು ನಡೆಯುವ ಗ್ರಾಮ ಪಂಚಾಯತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಾವು ಹೇಳಿದವರಿಗೆ ಓಟ ಹಾಕಬೇಕು ಇಲ್ಲವಾದರೆ ನಿನ್ನನ್ನು ಖಲಾಸ ಮಾಡುತ್ತೇವೆಂದು ಜೀವದ ಭಯ ಹಾಕಿದರು. ಆಗ ನಾನು ನನ್ನ ಮನಸ್ಸಿಗೆ ಬಂದವರಿಗೆ ಓಟು ಹಾಕುತ್ತೇವೆ ಅಂದಾಗ ಮಗನೆ ನನ್ನ ಮಾತು ಕೇಳುವದಿಲ್ಲ ಅಂತ ಹೊಡೆ ಬಡೆ ಮಾಡಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.110/2012 ಕಲಂ 143, 147, 148, 307, 341, 323324, 325, 504, 506 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT PRESS MEET NOTES


ಪತ್ರಿಕಾ ಪ್ರಕಟಣೆ
: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಾಚರಣೆ:

ಇಬ್ಬರು ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆದಾರರ ಬಂಧನ ಸುಮಾರು ರೂ. 25,55,000/-  ಮೌಲ್ಯದ ಅಕ್ಕಿ ಹಾಗೂ ಸಾಗಾಣಿಕೆ ಮಾಡುತ್ತಿದ್ದ ರೂ. 12,00,000/- ಲಕ್ಷ್ಮ ಮೌಲ್ಯದ ಲಾರಿ ಜಪ್ತಿ

  ಗುರಮಿಟಕಲ್ ಪಟ್ಟಣದಿಂದ ಮುಂಬೈ ವಾಸಿಗೆ ಗುಲಬರ್ಗಾ ಮಾರ್ಗವಾಗಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಲಿಖಿತ ರೂಪದಲ್ಲಿ ಮಾಹಿತಿಯನ್ನು ತಿಳಿಸಿ ದಾಳಿಗೆ ಸಹಕರಿಸಲು ಕೋರಿ, ಈ ತನಿಖಾ ತಂಡದಲ್ಲಿ ಡಿಸಿಐಬಿ ಘಟಕ ಹಾಗು ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾನ್ಯ ಶ್ರೀ ಕಾಶೀನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಎ.ಡಿ. ಬಸಣ್ಣನವರ್ ಡಿ.ಎಸ್.ಪಿ. ಬಿ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಹುಮ್ನಾಬಾದ ರಿಂಗ್ ರೋಡ್ ಹತ್ತಿರ ಲಾರಿ ನಂ: ಕೆ.ಎ. 56 0062 ನೇದ್ದನ್ನು ಹಿಡಿದು ಲಾರಿಯಲ್ಲಿದ್ದ ಆರೋಪಿತರಾದ 1) ಚಾಲಕ ಜಯತೀರ್ಥ ರಂಜೋಳ ವಯ: 25 ವರ್ಷ ಸಾ: ಹುಡಗಿ ತಾ:ಹುಮ್ನಾಬಾದ, 2) ಲಾರಿ ಕ್ಲೀನರ್ ಸೂರ್ಯಕಾಂತ ಬೋರಾಳ ವಯ:21 ವರ್ಷ ಸಾ: ಹಳ್ಳಿಖೇಡ ತಾ:ಹುಮ್ನಾಬಾದ ಇವರನ್ನು ಹಿಡಿದು ಲಾರಿಯಲ್ಲಿದ್ದಂತಹ ಅಕ್ರಮವಾಗಿ ಸಾಗುತ್ತಿದ್ದ ಪಡಿತರ ಅಕ್ಕಿ ಸುಮಾರು 680 ಚೀಲಗಳಲ್ಲಿ ಸುಮಾರು 17 ಟನ್ ಅದರ ಅಂದಾಜು ಕಿಮ್ಮತ್ತು ರೂ. 3,35,750/- ಹಾಗೂ ಲಾರಿ ಅಂದಾಜು ಕಿಮ್ಮತ್ತು 12 ಲಕ್ಷ ರೂಪಾಯಿ ಹೀಗೆ ಒಟ್ಟು ಸುಮಾರು ರೂ. 17,35,750/- ಮಾಲನ್ನು ಜಪ್ತಿಪಡಿಸಿಕೊಂಡು, ಲಾರಿ ಚಾಲಕ ಜಯತೀರ್ಥ ಈತನ ಹೇಳಿಕೆಯಂತೆ ಗುರಮಿಟಕಲ್ ಪಟ್ಟಣದ ಲಕ್ಷ್ಮಿ ತಮ್ಮಪ್ಪ ಸ್ವಾಮಿ ಟ್ರೇಡಿಂಗ್  ಇದರ ಮಾಲಿಕರಾದ ನರೇಂದ್ರ ರಾಠೋಡ ಇವರ ಗೋದಾಮಿಗೆ ಹೋಗಿ ಅಲ್ಲಿ ಅಪಾರ ಪ್ರಮಾಣದ ಸರಕಾರಿ ಸರಬರಾಜಿನಿಂದ ಬಂದಂತಹ ಅಕ್ಕಿಯನ್ನು ಖಾಸಗಿ ಟ್ರೇಡಿಂಗ್ ಗಳಾದ ಡೀರ್ ಹಾಗೂ ಅನ್ನಪೂರ್ಣ ಕಂಪನಿಯ ಬ್ಯಾಗ್ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದನ್ನು ಗಮನಿಸಿ, ಸದರ್ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅಕ್ಕಿ ಹಾಗೂ ಆರೋಪಿತರನ್ನು ದಸ್ತಗಿರಿ ಮಾಡುತ್ತಿದ್ದಾಗ ನರೇಂದ್ರ ರಾಠೋಡ್ ಹಾಗೂ ಸಾಯಬಣ್ಣಾ ವಕೀಲ ಇವರ ಪ್ರಚೋದನೆಯ ಮೇರೆಗೆ 100-150 ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ಬಂಧಿತ ಆರೋಪಿತರಾದ ರಾಜು ರಾಠೋಡ ಹಾಗೂ ಚನ್ನಬಸಯ್ಯಾ ಇವರುಗಳನ್ನು ಪೊಲೀಸರ ವಶದಿಂದ ಬಲಪ್ರದರ್ಶಿಸಿ ಬಿಡಿಸಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿಯನ್ನು ಜಪ್ತಿಪಡಿಸಿಕೊಳ್ಳಲು ಅಡ್ಡಿಯುಂಟು ಮಾಡಿರುತ್ತಾರೆ. ಈ ಕುರಿತು ಗುರಮಿಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪುನಃ ಹೆಚ್ಚಿನ ಸಿಬ್ಬಂದಿಯೊಂದಿಗೆ ನರೇಂದ್ರ ರಾಠೋಡ್‌ರವರಿಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಂತಹ ಮಯೂರ ಬ್ರಾಂಡ್ ಬೆಸ್ಟ್ ಕ್ವಾಲಿಟಿ ಹಾಗೂ ಡೀರ್ ಬ್ರಾಂಡ್ ಬೆಸ್ಟ ಕ್ವಾಲಿಟಿಯ ಸುಮಾರು 74 ಟನ್ ಪಡಿತರ ಅಕ್ಕಿಯನ್ನು ಜಪ್ತಿಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ. 22,20,000/- ಹೀಗೆ ಒಟ್ಟು ಸುಮಾರು ರೂ. 25,55,000/- ಮೌಲ್ಯದ ಪಡಿತರ ಅಕ್ಕಿ ಹಾಗೂ ರೂ. 12 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಹಾಗೂ ಈ ಮೊದಲು ಅನಧೀಕೃತವಾಗಿ ಸಾಗಿಸಿದ ಪಡಿತರ ಅಕ್ಕಿಯ ದಾಖಲಾತಿಗಳನ್ನು ಹಾಗೂ ಚೀಲ ಹೊಲಿಯುವ ಮಶೀನ್ ಮತ್ತು ತೂಕದ ಯಂತ್ರವನ್ನು ಕೂಡಾ ಜಪ್ತಿಪಡಿಸಿಕೊಳ್ಳಲಾಗಿದೆ.   
          ನರೇಂದ್ರ ರಾಠೋಡ್ ಈತನು ಸರ್ಕಾರಿ ಪಡಿತರ ಅಕ್ಕಿಯನ್ನು ಗುರಮಿಟಕಲ್ ಪಟ್ಟಣದ ತನ್ನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಪಡಿತರ ಅಕ್ಕಿ ಅಂತಾ ಗುರುತು ಸಿಗದ ಹಾಗೆ ಮಯೂರಾ ಬ್ರಾಂಡ್, ಅನ್ನಪೂರ್ಣ ಬ್ರಾಂಡ್, ಡೀರ್ ಬ್ರಾಂಡ್‌ಗಳ 25 ಹಾಗೂ 50 ಕೆ.ಜಿ. ಬ್ಯಾಗ್‌ಗಳಲ್ಲಿ ತುಂಬಿಸಿ ಅಕ್ರಮವಾಗಿ ಮುಂಬೈ ಹಾಗೂ ಇತರೆ ಕಡೆಗಳಲ್ಲಿ ಸಾಗಿಸಿರುವುದು ತನಿಖೆಯ ಕಾಲಕ್ಕೆ ವಶಪಡಿಸಿಕೊಂಡ ದಾಖಲಾತಿಗಳಿಂದ ತಿಳಿದು ಬಂದಿರುತ್ತದೆ.  
          ಈ ತನಿಖಾ ತಂಡದ ಪತ್ತೇಕಾರ್ಯವನ್ನು ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.  

ಗುಲಬರ್ಗಾ  ಜಿಲ್ಲಾ ಪೊಲೀಸ್ ರ ಕಾರ್ಯಚರಣೆ
2 ಜನ ಸರಗಳ್ಳರ ಬಂಧನ, 1.65 ಲಕ್ಷ ಮೌಲ್ಯದ ಬಂಗಾರದ ಸರ ಮತ್ತು ಮೋಟಾರ ಸೈಕಲ್ ಜಪ್ತಿ.
 ಗುಲಬರ್ಗಾ ನಗರದಲ್ಲಿ ಇತ್ತಿಚಿಗೆ ಮನೆಗಳ್ಳತನ ಹಾಗು ಮಹಿಳೆಯರ ಸರಗಳ್ಳತನದಿಂದ ಗುಲಬರ್ಗಾ ನಾಗರೀಕರಲ್ಲಿ ಆತಂಕ ಉಂಟಾಗಿದ್ದರಿಂದ ಈ ವಿಷಯದ ಕುರಿತು ಬೆಳಗಾಂ ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆಯಾಗಿತ್ತು, ಈ ಕುರಿತು ಮಾನ್ಯ ಶ್ರೀ ಎ.ಎಮ್. ಪ್ರಸಾದ ಐ.ಪಿ.ಎಸ್,. ಹೆಚ್ಚುವರಿ ಪೊಲೀಸ್ ಮಹಾ ನಿರ್ದೆಶಕರು (ಅಪರಾಧ) ಬೆಂಗಳೂರು ರವರ ನಿರ್ದೇಶನದ ಮೇರೆಗೆ ಮಾನ್ಯ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮದ ವಜೀರ ಅಹಮದ ಐ.ಪಿ.ಎಸ್., ಪೊಲೀಸ್ ಮಹಾ ನಿರೀಕ್ಷಕರು, (ಈವ) ಗುಲಬರ್ಗಾ ಇವರು ಒಂದು ವಿಶೇಷ ತಂಡವನ್ನು ರಚಿಸಿ ಅವರ ಮಾರ್ಗದರ್ಶನದಲ್ಲಿ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ನೇತ್ರತ್ವದಲ್ಲಿ ಸಿಪಿಐ ಶ್ರೀ ಎಸ್. ಅಸ್ಲಾಂ ಬಾಷ ಪ್ರಭಾರಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀಮಂತ ಇಲ್ಲಾಳ ಪಿ.ಎಸ್.ಐ, ತಿಮ್ಮಣ್ಣ ಎಸ್ ಚಾಮನೂರ ಪಿ.ಎಸ್.ಐ (ಅ.ವಿ) ಹಾಗು ಸಿಬ್ಬಂದಿಯವರಾದ ಪ್ರಭಾಕರ್, ವೇದರತ್ನಂ, ಅಶೋಕ, ಮಾಶಕ, ಮಲ್ಲಿಕಾರ್ಜುನ, ಅಣ್ಣಪ್ಪಾ, ಗಂಗಾಧರ, ಶ್ರೀನಿವಾಸರೆಡ್ಡಿ, ಮಸೂದ ಅಹ್ಮದ, ಸಿದ್ರಾಮಯ್ಯ ಸ್ವಾಮಿ ರವರುಗಳು ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳಾದ ರಾಜಕುಮಾರ ತಂದೆ ಹಣಮಂತ ಗಡದಳ್ಳಿ ವಯಃ25 ವರ್ಷ, ಭೀಮಾಶಂಕರ ತಂದೆ ಮರೆಪ್ಪಾ ಹಿಟ್ಟಲಗೇರ್ ವಯಃ24 ವರ್ಷ ಇಬ್ಬರು ವಾಸಃಭೂಪಾಲ್ ತೆಗನೂರು ತಾಃಜಿಃ ಗುಲಬರ್ಗಾ, ಈ ಆರೋಪಿಗಳು  3  ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಂದ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ  3 ಬಂಗಾರದ ಚೈನ್  36 ಗ್ರಾಂ ಅಃಕಿಃ 1,15.000/-  ರೂ. ಹಾಗು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲ್ ಅಃಕಿಃ  50,000/- ರೂ. ಹೀಗೆ ಒಟ್ಟು  1, 65, 000/- ರೂ. ಬೆಲೆ ಬಾಳುವುದನ್ನು ಜಪ್ತಿ ಮಾಡಿರುತ್ತಾರೆ.ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.