POLICE BHAVAN KALABURAGI

POLICE BHAVAN KALABURAGI

01 December 2012

GULBARGA DISTRICT REPORTED CRIMES


ಕಾರು ಕಳ್ಳತನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ. ಮಲ್ಲಪ್ಪಾ ತಂದೆ ವೀರಸಂಗಪ್ಪಾ ಭೀಮನಳ್ಳಿ  ಸಾ|| ರಘೋಜಿ ಲೇಔಟ   ಹುಮಾನಾಬಾದ ರೋಡ  ರೇವಣಸಿದ್ದೇಶ್ವರ ಕಾಲೂನಿ ಗುಲಬರ್ಗಾ ರವರು ನಾನು  ದಿನಾಂಕ. 27-11-2012 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಕೆಲಸದಿಂದ ಮರಳಿ ಮನೆಗೆ ಬಂದಾಗ ಮನೆಯ ಎದರುಗಡೆ ರೋಡ ಮತ್ತು ನಾಲಿ ಕೆಲಸ ನಡೆದಿದ್ದ ಪ್ರಯುಕ್ತ  ನನ್ನ ಟಾಟಾ ಇಂಡಿಕಾ ಡಿ.ಎಲ್.ಎಸ್.  ಕಾರ ನಂ.ಕೆ.ಎ.32 ಎಂ.  5797  ನೇದ್ದು, ಆಕಾಶ ನೀಲಿ,  ಅಕಿ. 1,75,000/- ರೂ ಬೆಲೆ ಬಾಳುವದು ಮನೆಯ ಎದರುಗಡೆ  ಇರುವ ರೋಡ ಬದಿಗೆ ಲಾಕ್ ಮಾಡಿ ಮನೆಗೆ ಹೋಗಿದ್ದು, ದಿನಾಂಕ:28-11-2012 ರಂದು ಬೆಳಗ್ಗೆ 7-00 ಗಂಟೆಗೆ ಎದ್ದು ನೋಡಲಾಗಿ ಮನೆ ಎದರುಗಡೆ ರೋಡಿನ ಬದಿಗೆ ನಿಲ್ಲಿಸಿದ  ನನ್ನ ಕಾರು ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗೆಳೆಯರು ಕೂಡಿಕೊಂಡು  ಎಲ್ಲಾ ಕಡೆಗೂ ಹುಡುಕಾಡಲಾಗಿ  ಸಿಕ್ಕಿರುವದಿಲ್ಲ ಕಾರಣ ಕಾರು ಪತ್ತೆ ಮಾಡಿಕೊಡಬೇಕಾಗಿ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:399/2012 ಕಲಂ.  379  ಐಪಿಸಿ ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾರು ಕಳ್ಳತನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಶಿವಶರಣಪ್ಪ ತಂದೆ ಮ್ಲಲೇಶಪ್ಪ ಹೊನಗುಂಟಾ ಸಾ: ಶಹಾಬಜಾರ ಗುಲ್ಬರ್ಗಾರವರು ನಾನು ದಿನಾಂಕ:30/11/2012 ರಂದು ಮುಂಜಾನೆ ನನ್ನ ಮೋ ಸೈಕಲನಂ ಕೆಎ 32 ಎಕ್ಸ್‌‌ 6744 ನೇದ್ದರ ಮೇಲೆ ಶಿವಾಜಿ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ದೇವಕಮ್ಮ ಇವಳನ್ನು ಕೂಡಿಸಿಕೊಂಡು  ಆರ್‌ಎಸ್ ಕಾಲೋನಿಯಿಂದ ಮುಖ್ಯ ರಸ್ತೆಗೆ ಬಂದು, ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕ್ರೋಜರ ಜೀಪ  ಕೆಎ 32 ಎ- 5405 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೋಡಿದಿದ್ದರಿಂದ ಕೆಳಗೆ ಬಿದ್ದು ನನಗೆ ರಕ್ತಗಾಯವಾಗಿದ್ದು ಮತ್ತು ಹಿಂದೆ ಕುಳಿತ ದೇವಕಮ್ಮ ಇವಳಿಗೆ ತಲೆಗೆ ಹಿಂದುಗಡೆ ಗಾಯವಾಗಿದ್ದು ಮತ್ತು ಅಲಲ್ಲಿ ತರಚಿದ ಗಾಯವಾಗಿರುತ್ತವೆ ಜೀಪ ಚಾಲಕ ತನ್ನ ವಾಹನವನ್ನುಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 398/2012 ಕಲಂ, 279, 338 ಐಪಿಸಿ ಸಂಗಡ 187 ಐ.,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಲಕ್ಷತನದಿಂದ ಬಿ.ಎಸ್.ಎನ್.ಎಲ್. ಕೇಬಲ್ ಗೆ ಕಟ್ಟ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಗುಂಡೆರಾವ ತಂದೆ ನರಹರರಾವ ಕುಲಕರ್ಣಿ || ಬಿ.ಎಸ್.ಎನ್.ಎಲ್ ಉಪ-ವಿಭಾಗದ ಅಧಿಕಾರಿ ಆಳಂದ, ಸಾ||ವಿನಾಯಕ ಕಾಲೋನಿ ಕರುಣೆಶ್ವರ ನಗರ ಜೇವರ್ಗಿ ರೋಡ ಗುಲಬರ್ಗಾ ಹಾ|| || ಬಿ.ಎಸ್.ಎನ್.ಎಲ್ ವಸತಿ ಗೃಹ ಆಳಂದ ರವರು ಆಳಂದ ತಾಲೂಕಿನ ಎಲ್ಲಾ ಬಿ.ಎಸ್.ಎನ್.ಎಲ್ ಎಕ್ಸೆಂಜಗಳು ತಮ್ಮ ಉಪ ವಿಭಾಗದ ವ್ಯಾಪ್ತಿಗೆ ಬರುತ್ತಿದ್ದು, ದಿನಾಂಕ:28-11-2012 ರಂದು ನಾನು  ಆಫೀಸ ಕೆಲಸದ ನಿಮಿತ್ಯವಾಗಿ ಕಡಗಂಚಿಗೆ ಹೋದಾಗ ತಮ್ಮ ಮೋಬೈಲ ನಂ.9449799967 ಕ್ಕೆ ಎಸ್.ಎಮ.ಎಸ್ ಮೂಲಕ ಮಾಡಿಯಾಳ, ಅರ್ಜುಣಗಿ, ನಿಂಬಾಳ ಮತ್ತು ಮಾದನ ಹಿಪ್ಪರಗಾ ಟವರ್ ಫೇಲಾಗಿದ್ದ ಬಗ್ಗೆ ಮೆಸೇಜ ಬಂದಿದ್ದು, ನಾನು ಆ ಏರಿಯಾದ ಲೈನಮ್ಯಾನ ಲಕ್ಷ್ಮಣ ತಂದೆ ಶ್ರೀಪತಿ ಛತ್ರಿ ಸಾ|| ಹಿತ್ತಲ ಶಿರೂರ ಇವರಿಗೆ ಫೋನ ಮಾಡಿ ಟವರ್ ಫೇಲ ಆದ ವಿಚಾರಿಸಲು ಆತನು ಲೈನ ಚೆಕ್ಕ ಮಾಡಿ ನಿಂಬರ್ಗಾದಿಂದ ಮಾಡಿಯಾಳಕ್ಕೆ ಹೋಗುವ ಲೈನಿನ ಮಧ್ಯದಲ್ಲಿ ಅಂದರೆ ನಿಂಬರ್ಗಾದ ನಿಲಂಕರ ಗುಡ್ಡದ ಹತ್ತಿರ ಓ.ಎಫ.ಸಿ ಕೇಬಲ ಕಟ್ ಮಾಡಿದ ಬಗ್ಗೆ ತಿಳಿಸಿದ್ದು, ನಾನು ಸ್ಥಳಕ್ಕೆ ಭೇಟ್ಟಿ ನೀಡಿ ಪರಿಶೀಲಿಸಿ ಮತ್ತು ನನ್ನ ಜೊತೆಗೆ ಹಾಜರಿದ್ದ ಲಕ್ಷ್ಮಣ ಲೈನಮನ ಇವರನ್ನು ವಿಚಾರಿಸಲಾಗಿ ಕೆ.ಇ.ಬಿ ಇಲಾಖೆಯ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿ ಅಡಿಯಲ್ಲಿ ವಿಧ್ಯುತ ಕಂಬಗಳನ್ನು ಹೂಳುವ ಸಲುವಾಗಿ ಗುತ್ತಿಗೆ ಹಿಡಿದಿರುವ ಜೈನ ಎಲೆಕ್ಟ್ರಿಕಲ್ ಕಂಪನಿಯ ಮಾಲೀಕರಾದ ಅನಂತ ಜೈನ ಇವರ ಅಧೀನದಲ್ಲಿ ಕೆಲಸ ಮಾಡುವ ಸೈಟ ಸೂಪರ ವೈಜರ ಆದ ಶರಣಯ್ಯ ತಂದೆ ಶಿವರಾಚಯ್ಯಾ ಸ್ವಾಮಿ ಸಾ|| ಆಲೂರ (ಬಿ) ಇತನು ದೇವೆಂದ್ರ ಇವನು ಚಲಾಯಿಸುತ್ತಿರುವ  ಜೆ.ಸಿ.ಬಿ ಯಿಂದ ದಿನಾಂಕ:28-11-2012 ಸಾಯಂಕಾಲ 5-30 ಗಂಟೆಗೆ ತಗ್ಗು ತೋಡಿಸುವಾಗ ಓ.ಎಫ.ಸಿ ಕೇಬಲನ್ನು ಕಟ ಮಾಡಿರುವ ಬಗ್ಗೆ ಗೊತ್ತಾಗಿರುತ್ತದೆ. ಈ ಕಟ್ಟಾಗಿರುವ ಓ.ಎಫ.ಸಿ ಕೇಬಲನಿಂದ ನಮ್ಮ ಇಲಾಖೆಗೆ ಅಂದಾಜು1,50,000/- (ಒಂದು ಲಕ್ಷ ಐವತ್ತು ಸಾವಿರ) ರೂಪಾಯಿಗಳಷ್ಟು ಹಾನಿಯಾಗಿರುತ್ತದೆ. ಸಾರ್ವಜನಿಕ ಸೇವೆಗಾಗಿ ಹಾಕಿರುವ ಓ.ಎಫ.ಸಿ ಕೇಬಲನ್ನು ಕಟ್ ಮಾಡಿ ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿರುವ ಜೈನ ಎಲೆಕ್ಟ್ರಿಕಲ ಗುಲಬರ್ಗಾದ ಮಾಲೀಕರಾದ ಅನಂತ ಜೈನ, ಸೂಪರ ವೈಜರನಾದ ಶರಣಯ್ಯ ಸ್ವಾಮಿ ಮತ್ತು ಜೆ.ಸಿ.ಬಿ ಚಾಲಕನಾದ ದೇವಿಂದ್ರ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2012 ಕಲಂ427 ಸಂ. 34 ಐಪಿಸಿ ಮತ್ತು 2(ಎ) ಪ್ರವೇನಶನ  ಆಫ ಡಿಸ್ಟ್ರಕ್ಷನ ಆ್ಯಂಡ ಲಾಸ ಆಫ ಪ್ರಾಪರ್ಟಿ ಆಕ್ಟ 1981. ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ ಶರೀಫ   ತಂದೆ ಮಹಿಮೂದ ಅಲಿ    ಸಾ: ನಿಮರಾ ಮಜೀದ ಹತ್ತಿರ ಅಂಬಿಕಾ ನಗರ  ಗುಲಬರ್ಗಾ  ರವರು   ನಾನು ದಿನಾಂಕ:29-11-2012 ರಂದು ರಾತ್ರಿ  10-10- ನಮ್ಮ ಓಣಿಯ ಶಮೀಮ ಅಹ್ಮದ ತಂದೆ ಲಾಡ್ಲೆ ಸಾಬ ಮುಲ್ಲಾ ಇವರ ಮೋಟಾರ ಸೈಕಲ್ ನಂ:ಕೆಎ 32 ಎಕ್ಸ 2256 ನೇದ್ದರ ಮೇಲೆ ರೈಲ್ವೆ ಸ್ಟೆಶನ ಕಡೆಗೆ ಬರುವ ಕುರಿತು ನಾನು ಆತನ ಮೋಟಾರ ಸೈಕಲ್ ಹಿಂದೆ ಕುಳಿತು ಅಂಬಿಕಾ ನಗರ ದಿಂದ ಹಳೆ ಜೇವರ್ಗಿ ರೋಡ ಕಡೆಗೆ ಹೋಗುತ್ತಿದ್ದಾಗ ಪಿ  & ಟಿ ಕಾಲೋನಿ ಎದುರು ರೋಡಿನ ಮೇಲೆ ಶಮೀಮ ಅಹಮದ ಇನು ತನ್ನ ಮೋಟಾರ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಕಟ್ ಹೊಡೆದು ಬ್ರೇಕ್ ಹಾಕಿದಾಗ ನಾನು ಮೋಟಾರ ಸೈಕಲ್ ಮೇಲಿಂದ ಪುಟಿದು ಕೆಳಗೆ ಬಿದ್ದು ಬಾರಿ ಗಾಯ ಹೊಂದಿರುತ್ತೇನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 117/2012 ಕಲಂ, 279,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 November 2012

GULBARGA DISTRICT REPORTED CRIMES


ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 7 ದ್ವಿ-ಚಕ್ರ ವಾಹನಗಳು ಜಪ್ತಿ, ಎರಡು ಜನ ಆರೋಪಿತರ ಬಂಧನ.
ನಗರದಲ್ಲಿ ನಡೆಯುತ್ತಿರುವ ದ್ವಿ-ಚಕ್ರ ವಾಹನಗಳ ಕಳ್ಳತನದ ಪತ್ತೆ ಕುರಿತು ಮಾನ್ಯ ಶ್ರೀ.ಕಾಶಿನಾಥ ಹೆಚ್ಚುವರಿ ಎಸ್.ಪಿ ಗುಲಬರ್ಗಾ, ಶ್ರೀ.ಭೂಷಣ ಜಿ ಬೋರಸೆ ಐ.ಪಿ.ಎಸ್., ಸಹಾಯಕ ಪೊಲೀಸ ಅಧೀಕ್ಷಕರು (ಎ) ಉಪ-ವಿಭಾಗ ಗುಲಬರ್ಗಾ, ಶ್ರೀ.ಹೆಚ್. ತಿಮ್ಮಪ್ಪ ಡಿ.ವೈಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶ್ರೀ.ಶರಣಬಸವೇಶ್ವರ ಭಜಂತ್ರಿ ಪೊಲೀಸ್ ಇನ್ಸಪೇಕ್ಟರ, ಶ್ರೀ.ಸತ್ಯನಾರಾಯಣ ಪಿ.ಎಸ್.ಐ,,ಮಾರುತಿ ಎ.ಎಸ್.ಐ., ಪ್ರಕಾಶ, ಮಹಾಂತೇಶ, ಅಶೋಕ ಹಾಗೂ (ಎ) ಉಪ-ವಿಬಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಮಹ್ಮದ ರಫೀಕ, ರಾಮು ಪವಾರಶಿವಪ್ರಕಾಶ, ದೇವಿಂದ್ರ ರವರು ರಾಜಕುಮಾರ@ಚನ್ನಪ್ಪ ತಂದೆ ವಕೀಲರಾಯ ಮಾಲಿ ಬಿರಾದಾರ@ಆಲೂರೆ, ವಯ|| 26 ವರ್ಷ, || ಖಾಸಗಿ ಕೆಲಸ, ಸಾ|| ತೋರಿವಾಡಿ@ವಳವಂಡವಾಡಿ ತಾ||ಆಳಂದ, ಹಾ||||ಲಾಲ ಹನುಮಾನ ಗುಡಿಯ ಹತ್ತಿರ ಶಹಾಬಜಾರ. ಸಂತೋಷಕುಮಾರ ತಂದೆ ಸುಬಾಶ್ಚಂದ್ರ ರಂಗೋಜಿ, ವಯ|| 32 ವರ್ಷ, || ಟ್ರ್ಯಾಕ್ಟರ ಡ್ರೈವ್ಹರ, ಸಾ|| ದೇಗಾಂವ ತಾ|| ಆಳಂದ, ಹಾ|||| ಮಲಂಗ ಹೊಟೇಲ ಶಿವಾಜಿ ಖಾನಾವಳಿ ಮನೆಯ ಹತ್ತಿರ ಶಹಾಬಜಾರ ಗುಲಬರ್ಗಾ,ರವರನ್ನು ಬಂಧಿಸಿ ಅವರಿಂದ ನಗರದ ಸಂಗಮ ಥೇಟರದಿಂದ, ಕೋಠಾರಿ ಭವನದಿಂದ, ಸರಾಫ ಬಜಾರದಿಂದ, ಸುಪರ ಮಾರ್ಕೆಟದಿಂದ ಕಳ್ಳತನ ಮಾಡಿದ ವಿವಿಧ ಏಳು (7) ಮೋಟರ ಸೈಕಲಗಳು ಅ||ಕಿ||2,35,000/- ರೂಪಾಯಿಗಳ ಬೆಲೆಬಾಳುವದ್ದು ಜಪ್ತ ಮಾಡಿಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ ಶಾಹೀನ ಅಂಜುಮ್  ಗಂಡ ತೌಸೀಫ್ ಅಹ್ಮದ ಸಾ: ಬಾಂಬೆ ಹೋಟೆಲ್ ಬಿಲಾಲಾಬಾದ ಬ್ಯಾಂಕ ಕಾಲೋನಿ ಗುಲಬರ್ಗಾರವರು ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳುವಂತೆ ಆದೇಶಿದ ಪ್ರಕಾರ ಮತ್ತು ಅದರ ಸಾರಂಶವೇನೆಂದರೆ, ಶಾಹೀನ ಅಂಜುಮ್ ಲಗ್ನವು ದಿನಾಂಕ:06.10.2008 ರಂದು ತೌಸೀಫ್ ಅಹ್ಮದ ದಿ|| ಹಾಜಿ ಅಬ್ದಲ್ ರಸೂಲ್ ಬಾಂಬೆ ಇತನೊಂದಿಗೆ ಆಗಿದ್ದು. ಮದುವೆ ಕಾಲಕ್ಕೆ  2 ½  ತೊಲೆ ಬಂಗಾರ ಕೊಟ್ಟಿದ್ದು.ಮದುವೆಯಾದ ನಂತರ ನನ್ನ ಗಂಡನ ಮನೆಯಾದ ಬಾಂಬೆಗೆ ಹೋಗಿದ್ದು ತನ್ನ ಗಂಡ, ತೌಸೀಫ್ ಅತ್ತೆ ಅಬೇದಾ, ಮೈದುನ  ರೀಜ್ವಾನ, ನಾದಿನಿ ಶಾಹಜೀಯಾ  ಇವರು 3 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೇ ನಿನಗೆ ತಲಾಖ್ ಕೊಡುತ್ತೇವೆ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದು ನನ್ನ ತಂದೆ ತಾಯಿಯವರು ಬಡವರಿದ್ದಾರೆ ಅಂತಾ ತನ್ನ ಗಂಡ , ಅತ್ತೆ, ಮೈದುನ, ಮತ್ತು ನಾದಿನಿ ಇವರಿಗೆ ಹಣ ಕೊಡುವುದು ಆಗುವುದಿಲ್ಲಾ ಅಂತಾ ಹೇಳಿದರು ಕೂಡ ಎಲ್ಲರು ಕೂಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ 3 ತಿಂಗಳ ನಂತರ ನನ್ನ ತವರು ಮನೆಯಾದ ಗುಲಬರ್ಗಾಕ್ಕೆ ತಂದು ಬಿಟ್ಟಿರುತ್ತಾರೆ.2010 ರಲ್ಲಿ  ನನ್ನ ಗಂಡ ,ಅತ್ತೆ, ಮೈದುನ, ನಾದಿನಿ ಇವರೆಲ್ಲರು ಕೂಡಿ ಗುಲಬರ್ಗಾದ ಮೋಮಿನಪೂರಕ್ಕೆ ಬಂದಾಗ ನಾನು ಮತ್ತು ನನ್ನ ತಂದೆ ಕೂಡಿ ಆ ನಾಲ್ಕು ಜನರಿಗೆ  ನಮ್ಮಗೆ 3 ಲಕ್ಷ ರೂಪಾಯಿ ಕೊಡುವುದು ಆಗುವುದಿಲ್ಲಾ. ಅಂತಾ ವಿನಂತಿಸಿಕೊಂಡರು ಕೂಡ ನನಗೆ ಕರೆದುಕೊಂಡು ಹೋಗದೇ ಇಲ್ಲೇ ಬಿಟ್ಟು ಹೋಗಿರುತ್ತಾರೆ. ಮತ್ತೆ ಸ್ವಲ್ಪ ದಿವಸದ ನಂತರ ನನ್ನ ತಂದೆ ನನಗೆ ಗಂಡನ ಮನೆಯಾದ ಬಾಂಬೆಯಲ್ಲಿ ಬಿಟ್ಟು ಬಂದರು ಮತ್ತೇ ನಾಲ್ಕು ತಿಂಗಳ ನಂತರ 3 ಲಕ್ಷ  ರೂಪಾಯಿ ತಂದ್ದರೇ ಮಾತ್ರ ನಮ್ಮ ಮನೆಯಲ್ಲಿ ಇರು ಅಂತಾ  ಹೊಡೆ ಬಡೆ ಮಾಡಿ  ಮನೆಯಿಂದ ಹೊರ ಹಾಕಿದ್ದು. ಬಾಂಬೆಯಲ್ಲಿ ಪಂಚಾಯಿತ ಮಾಡಿದರು ಕೂಡ ಯಾರ ಮಾತು ಕೇಳದೇ ಹೊಡೆ ಬಡೆ ಮಾಡುತ್ತಿದ್ದರಿಂದ. ನನ್ನ ತವರು ಮನೆಗೆ ಬಂದು ಉಳಿದುಕೊಂಡಿರುತ್ತೇನೆ.ದಿನಾಂಕ: 18.03.2012 ರಂದು ನನ್ನ ಗಂಡ ಗುಲಬರ್ಗಾದ  ಬಡಿ ಮಜೀದ  ಹತ್ತಿರವಿರುವ ಮನೆಗೆ ಬಂದಾಗ ನಾನು ಮತ್ತು ನನ್ನ ತಂದೆ ಹೋಗಿ ಸರಿಯಾಗಿ ಇಟ್ಟುಕೊಳ್ಳು ಬಾಂಬೆಗೆ ಕರೆದುಕೊಂಡು ಹೋಗು ಅಂತಾ ವಿನಂತಿಸಿಕೊಂಡರು ಕೂಡ ತವರು ಮನೆಯಲ್ಲಿಯೇ ಬೀಟ್ಟು  ಹೋಗಿರುತ್ತೇನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:83/2012 ಕಲಂ 498(ಎ) ಐ.ಪಿ.ಸಿ 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ, ದೇವಿಂದ್ರ ತಂದೆ ಶಿವಪ್ಪ ಸಿನ್ನೂರ ರವರು ನಾನು ದಿನಾಂಕ 29/11/2012 ರಂದು ಸಾಯಂಕಾಲ 4-00  ಗಂಟೆ ಸುಮಾರಿಗೆ ನನ್ನ ಅಣ್ಣನ ಹೆಂಡತಿಯಾದ ಕೊಮಲ ಗಂಡ ರಾಜೇಂದ್ರ ಸಿನ್ನೂರ ಇವರು ಸಂಜಯಕುಮಾರ ತಂದೆ ಅಂಬಾಜಿ ಅಟ್ಟೂರ ಇವರ ಮನೆಯ ಹತ್ತಿರ ಹೋಗಿ ನನ್ನ ಮಗಳಾದ ಪೂಜಾ ಇವಳ ಮೋಬೈಲ ನೇದ್ದಕ್ಕೆ ನಿನ್ನ ಮೋ.ನಂಬರಿನಿಂದ ಯಾಕೆ ಕಾಲ್ ಮಾಡುತ್ತಿದ್ದಿ ಅಂತಾ ಕೇಳಿದಕ್ಕೆ ಸಂಜುಕುಮಾರನ ಅಕ್ಕ ಜಯಶ್ರೀ ಇವಳು ಪೋನ ಬಂದಿರಬೇಕು, ಮಾತಾಡಿರಬೇಕು ಈಗ ಏನ್ ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ  ಬೈಯುತ್ತಿದ್ದು ಆ ವೇಳೆಗೆ ರಮಾಬಾಯಿ, ರತ್ನಾಬಾಯಿ, ಸಂಜುಕುಮಾರ ಮತ್ತು ವಿಜಯಕುಮಾರ ಮನೆಯಿಂದ ಬಂದು ನನಗೆ ಹೊಡೆಯ ಹತ್ತಿದರು. ನನ್ನ ಅತ್ತಿಗೆ ಚಿರಾಡುತ್ತಿದ್ದಾಗ ನಾನು ಮತ್ತು ನನ್ನ ಅಣ್ಣನ ಮಕ್ಕಳಾದ ಶಿವರಾಜ, ಆಕಾಶ, ಮೂರು ಜನ ಕೂಡಿ ಯಾಕೆ ಹೊಡೆಯುತಿದ್ದರಿ ಅಂತಾ ಕೇಳುತ್ತಿದ್ದಾಗ ನೀವು ಬಂದ್ರಿ ಸೂಳಿ ಮಕ್ಕಳೆ ಅಂತಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ . ಕಾರಣ ಸಂಜುಕುಮಾರ ತಂದೆ ಅಂಬಾಜಿ ಅಟ್ಟೂರ,ವಿಜಯಕುಮಾರ ತಂದೆ ಅಂಬಾಜಿ ಅಟ್ಟೂರ,ಜಯಶ್ರೀ ಗಂಡ ಶಾಮರಾವ, ರಮಾಬಾಯಿ ಗಂಡ ಮನೋಹರ ಕಂಠಿ,ರತ್ನಾಬಾಯಿ ಗಂಡ ಅಂಬಾಜಿ ಇವರೆಲ್ಲರೂ ಕೂಡಿ ಕೈಯಿಂದ ಹೊಡೆದು ಗುಪ್ತಗಾಯ ಮಾಡಿ ಹೆಣ್ಣು ಮಕ್ಕಳಿಗೆ ಕೈಹಿಡಿದು ಜಗ್ಗಾಡಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.111/2012 ಕಲಂ. 147, 323, 354, 504 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ: 29-11-2012 ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಪಿ.ಎಸ.ಐ ಆನಂದರಾವ ರವರು ಬೇಲೂರ (ಜೆ) ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಕತ್ತಲಿನಲ್ಲಿ  ಮೇಲಾರಿ ತಂದೆ ಚಿಂತಾಮಣಿ ಬುಳ್ಳಾ ಸಾ|| ಆದರ್ಶ ನಗರ ಗುಲಬರ್ಗಾ, ಅಬ್ದುಲ ನಸೀರ ತಂದೆ ಹಬೀಬಸಾಬ ಅಂಡೆನವರ ಸಾ|| ಎಸ.ಎಮ್. ಕೃಷ್ಣಾ ಕಾಲೋನಿ ಗುಲಬರ್ಗಾ, ಮಾಣಿಕ ತಂದೆ ಜೆಟೆಪ್ಪಾ ಮಾವಿನಕರ ಸಾ|| ಪೀಲ್ಟರಬೇಡ ಆಶ್ರಯ ಕಾಲೋನಿ ಗುಲಬರ್ಗಾ ಇವರು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಅವರ ಇವರುವಿಕೆ ಬಗ್ಗೆ ವಿಚಾರಿಸಲಾಗಿ ಸರಿಯಾದ ಉತ್ತರ ಕೊಡಲಿಲ್ಲ . ಸದರಿಯವರನ್ನು ಹಾಗೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾದ ಮಾಡಬಹುದೆಂಬ ಬಲವಾದ ಸಂಶಯದಿಂದ ಠಾಣೆ ಗುನ್ನೆ ನಂ: 395/2012 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ: ಶ್ರೀ ಗೋಪಾಲರಾವ ತಂದೆ ಚಂದಪ್ಪಾ ಬಿಳಂಕರ ಸಾ:ಮನೆ ನಂ:8-1545:81 ಡಿ, ಶಿವಾಜಿ ನಗರ, ಗುಲಬರ್ಗಾ ನಾನು ದಿನಾಂಕಃ16.11.2012 ರಂದು  ಕೆಲಸದ ನಿಮಿತ್ಯ ಹಿರೋಹೊಂಡಾ ಕೆಎ 32 ಎಲ್ 3496 ನೇದ್ದನ್ನು ಮಧ್ಯಾಹ್ನ 3-30 ಗಂಟೆಗೆ ಸುಮಾರಿಗೆ ನಿಲ್ಲಿಸಿ ಕಿರಾಣಬಜಾರದಲ್ಲಿ ಹೋಗಿರುತ್ತೆನೆ. ಕೆಲಸ ಮುಗಿಸಿಕೊಂಡು ಪುನಃ 4.30 ಗಂಟೆಗೆ ಬಂದು ನನ್ನ ವಾಹನ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಅಲ್ಲಿ ನಾನು ನಿಲ್ಲಿಸಿದ ವಾಹನ ಇರಲಿಲ್ಲ ಹಾಗೂ ಅಲ್ಲಿ ಅಕ್ಕಪಕ್ಕದವರಿಗೆ ವಿಚಾರಿಸಲಾಗಿ ದ್ವಿ-ಚಕ್ರ ವಾಹನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಕಾರಣ ಯಾರೋ ಕಳ್ಳರು ನಮ್ಮ ಮೋಟಾರ ಸೈಕಲ್ ನಂ:ಕೆಎ 32 ಎಲ್ 3496 ಹಿರೋಹೊಂಡಾ ಸ್ಪೆಲೆಂಡರ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:199/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.