POLICE BHAVAN KALABURAGI

POLICE BHAVAN KALABURAGI

19 November 2012

GULBARGA DISTRICT


ಗುಲಬರ್ಗಾ ಜಿಲ್ಲಾ ವಿಶೇಷ ಘಟಕ ಮತ್ತು ಚೌಕ ಪೊಲೀಸ್ ಠಾಣಾಧಿಕಾರಿಗಳಿಂದ ಜೂಜಾಟ ಆಡುತ್ತಿರುವ ಆರೋಪಿಗಳ ಬಂದನ, ರೂ. 25,550/- ರೂಪಾಯಿಗಳು ಜಪ್ತಿ.
ಮಾನ್ಯ ಎಸ್.ಪಿ. ಸಾಹೇಬರ ಮತ್ತು ಅಪರ ಎಸ್.ಪಿ. ಸಾಹೇಬರ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿ.ಎಸ್.ಪಿ. (ಬಿ) ಉಪ-ವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ ದಿನಾಂಕ:18-11-2012 ರಂದು ರಾತ್ರಿ 9-30 ಗಂಟೆಗೆ ಚೌಕ ಪೊಲೀಸ ಠಾಣೆಯ ವ್ಯಾಪ್ತಿಯ ಚನ್ನಮಲ್ಲೇಶ್ವರ ನಗರದ ವಿಶಾಲ ಚವ್ಹಾಣ ಇವರ ಮನೆಯ ಮುಂದೆ ಇರುವ ಲೈಟಿನ ಕಂಬದ ಕೆಳಗಡೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಚೌಕ ಪೊಲೀಸ ಠಾಣೆಯ ಸಿಬ್ಬಂದಿ ಮತ್ತು ಪಿಐ ಡಿಸಿಐಬಿ ಘಟಕ ರವರು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿರುವ 1) ಶಿವಾಜಿ ತಂದೆ ಅಣ್ಣಾರಾಯ ನಿಕ್ಕಮ ಸಾ: ಅಯ್ಯರವಾಡಿ ಗುಲಬರ್ಗಾ 2) ರವೀಂದ್ರ ತಂದೆ ಶಿವರಾಯ ಕಲ್ಲಾ ಸಾ: ಅಯ್ಯರವಾಡಿ ಗುಲಬರ್ಗಾ 3) ಸುರೇಂದ್ರ ತಂದೆ ವೆಂಕಾಜಿರಾವ ಜಗತಾಪ ಸಾ: ಕಾವೇರಿ ನಗರ ಗುಲಬರ್ಗಾ 4) ಲಕ್ಷ್ಮಣ ತಂದೆ ವಾಮನರಾವ ಪವಾರ ಸಾ: ಅಯ್ಯರವಾಡಿ ಗುಲಬರ್ಗಾ 5) ಸಿದ್ದಾರಾಮ ತಂದೆ ಪಂಡಿತರಾಯ ಕಲಶೆಟ್ಟಿ ಸಾ: ಅಯ್ಯರವಾಡಿ ಗುಲಬರ್ಗಾ 6) ಕಿಶೋರ ತಂದೆ ಪ್ರಕಾಶ ವಾಚಾಳಿ ಸಾ: ಗಾಂಧಿ ನಗರ ಗುಲಬರ್ಗಾ 7) ಶರಣು @ ಶರಣಬಸಪ್ಪ ತಂದೆ ಸಿದ್ದಣ್ಣಾ ಪೂಜಾರಿ ಸಾ: ಕಬಾಡಗಲ್ಲಿ ಶಹಾಬಜಾರ ಗುಲಬರ್ಗಾ 8) ಕಿಶೋರಕುಮಾರ ತಂದೆ ವಿದ್ಯಾಸಾಗರ ಅಂಬಿಗಾ ಸಾ: ಕಬಾಡಗಲ್ಲಿ ಶಹಾಬಜಾರ ಗುಲಬರ್ಗಾ 9) ಭೀಮಾರಡ್ಡಿ ತಂದೆ ವೆಂಕಟರಡ್ಡಿ ಸಾ: ಮುಧೋಳ ತಾ: ಸೇಡಂ ಹಾ:ವ: ಮಹಾದೇವನಗರ ಶಹಾಬಜಾರ ಗುಲಬರ್ಗಾ 10) ಶಿವಾಜಿ ತಂದೆ ಕೇಶವರಾವ ಮೋರೆ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ 11) ರಾಜು ತಂದೆ ಕರಬಸಪ್ಪ ಒಗದಳ್ಳಿ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ 12) ಶಾಮರಾವ ತಂದೆ ಮಾಣಿಕರಾವ ಜಗತಾಪ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ 13) ಮಲ್ಲಿಕಾರ್ಜುನ ತಂದೆ ಚಂದ್ರಶೇಖರ ಮಹಾಗಾಂವ ಸಾ: ರಾಮನಗರ ಹುಮನಾಬಾದ ರೋಡ ಗುಲಬರ್ಗಾ 14) ಸಂತೋಷ ತಂದೆ ಗೋವಿಂದರಾವ ಚವ್ಹಾಣ ಸಾ: ಅಯ್ಯರವಾಡಿ ಮರಗಮ್ಮ ಗುಡಿಯ ಹತ್ತಿರ ಗುಲಬರ್ಗಾ 15) ಕೃಷ್ಣ ತಂದೆ ದೊಂಡಿಬಾ ಜಾಧವ ಸಾ: ಅಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ರವರ ಮೇಲೆ ದಾಳಿ ಮಾಡಿ ಅವರಿಂದ ನಗದು ಹಣ 25,550/- ರೂ.ಗಳು  ಜಪ್ತಿ ಮಾಡಿಕೊಂಡು ಶ್ರೀ ಎಸ್. ಎಸ್. ಹುಲ್ಲೂರ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:194/2012 87 ಕೆಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.



GULBARGA DISTRICT REPORTED CRIMES


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅಂಬರಾಯ ತಂದೆ ಗುಂಡಪ್ಪಾ ಗೋಳಾ ಸಾ||ಕೆರಿಬೋಸಗಾ  ಗ್ರಾಮ ತಾ||ಜಿ||ಗುಲಬರ್ಗಾ ರವರು ನಾನು  ದಿನಾಂಕ. 18-11-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮನೆಯಲ್ಲಿ ಇದ್ದಾಗ ದನ ಕಾಯುವ ಹುಡುಗರು ನಾನು ಪಾಲಿಗೆ ಮಾಡಿರುವ ಸುಧಾಕರ ಜೋಶಿ ಇವರ ಹೊಲದ ಬಂದಾರಿಯಲ್ಲಿ ಒಂದು ಗಂಡು ಮನುಷ್ಯನ ಹೇಣ ಬಿದ್ದಿರುತ್ತದೆ ಅಂತಾ ತಿಳಿದುಕೊಂಡು ನಾನು ಪಾಲಿಗೆ ಮಾಡಿರುವ ಸುಧಾಕರ ಜ್ಯೋಶಿ ಇವರ ಹೊಲಕ್ಕೆ ಬಂದು ನೋಡಲು ಹೊಲದ ಪೂರ್ವದ ಬಂದಾರಿಗೆ ಹೊಂದಿ ಒಬ್ಬ ಅಪರಿಚಿತ ಗಂಡು ಮನುಷ್ಯನ ಹೆಣವು ಅಂಗಾತವಾಗಿ ಬಿದಿದ್ದು ನೋಡಲಾಗಿ ಅಂದಾಜು 40- 50 ವರ್ಷದವನಿದ್ದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದರಿಂದ ತಲೆಯ ಮೇಲೆ ಭಾರಿ ರಕ್ತಗಾಯ ವಾಗಿದ್ದು,ಮುಖ ಚಪ್ಪಟೆಯಾಗಿರುತ್ತದೆ ,ಮೂಗಿನಿಂದ,ಕಿವಿಯಿಂದ ರಕ್ತಸ್ರಾವವಾಗಿರುತ್ತದೆ,ಕುತ್ತಿಗೆಯ ಸುತ್ತಲು ಉರುಲು ಹಾಕಿದಂತೆ ಕಂದು ಕಟ್ಟಿದ್ದ ಗಾಯಗಳು ಕಂಡು ಬರುತ್ತವೆ.ತೆಳ್ಳನೆಯ ಮೈಕಟ್ಟು ಇದ್ದು,ಬಲಗೈ ಮೋಳಕೈ ಮೇಲೆ ರಾಜಕುಮಾರ ಅಂತಾ ಕನ್ನಡದಲ್ಲಿ ಬರೆದ ಹಚ್ಚೆ ಗುರುತು ಇರುತ್ತದೆ.  ಎತ್ತರ 5 5’’ ಇದ್ದು ಅವನ ಮೈಮೇಲೆ ಒಂದು ನೀಲಿ ಬಣ್ಣದ ಕಂಪನಿಯ ಶ್ಯಾಂಡೋ ಬನಿಯನ ಮತ್ತು ಒಂದು ಕಪ್ಪು ಕಲರ ಅದರಲ್ಲಿ ಗುಲಾಬಿ ಪ್ರಿಂಟೆಡ್ ಜ್ಯಾಂಗಾ ಇರುತ್ತದೆ.ಸದರಿ ಅಪರಿಚಿತ ವ್ಯಕ್ತಿಗೆ ದಿನಾಂಕ.17-11-2012 ರಂದು ಸಂಜೆ 6-00 ರಿಂದ ದಿನಾಂಕ:18-11-2012 ರಂದು ಮಧ್ಯಾಹ್ನ 4-00 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು,ಯಾವುದೋ ಕಾರಣಕ್ಕಾಗಿ ಯಾವೂದೋ ದುರುದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಸುಧಾಕರ ಜ್ಯೋಶಿ ಇವರ ಹೊಲದ ಬಂದಾರಿಯಲ್ಲಿ ಬಿಸಾಕಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ತಲೆಗೆ,ಮುಖಕ್ಕೆ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:375/2012 ಕಲಂ.302,201  ಐಪಿಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ: 19/11/12 ರಂದು ಗುಲಬರ್ಗಾ ಹುಮನಾಬಾದ ಮುಖ್ಯ ರಸ್ತೆಯ ಬಿರಾದಾರ ಪೆಟ್ರೋಲ ಪಂಪ ಎದರು ಕೆಲವು ಜನರು ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಮಾನ್ಯ ಎಸ್‌ಪಿ ಸಾಹೇಬರು ಗುಲಬರ್ಗಾ ಮತ್ತು ಮಾನ್ಯ ಹೆಚ್ಚುವರಿ ಎಸ್‌ಪಿ ಸಾಹೇಬರು ಗುಲಬರ್ಗಾಹಾಗೂ ಮಾನ್ಯ ಡಿಎಸ್‌ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರುಗಳ ಮಾರ್ಗದಶನದಲ್ಲಿ ಶ್ರೀ ಎಸ್‌,ಎಸ್‌,ಹುಲ್ಲೂರ ಪಿಐ ಡಿಎಸ್‌ಬಿ ಡಿಪಿಒ ಗುಲಬರ್ಗಾ ರವರು, ಮತ್ತು ಅವರ ಸಿಬ್ಬಂದಿಯವರು ಹಾಗೂ ಸಿಪಿಐ ಗ್ರಾಮೀಣ ವೃತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಎಸ್‌ಐ (ಕಾ&ಸು) ಗ್ರಾಮೀಣ ಠಾಣೆ ಗುಲ್ಬರ್ಗಾ ಮತ್ತು ಸಿಬ್ಬಂದಿಯವರುಗಳು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅಂದರ ಬಾಹರ ಎಂಬ ದೈವದ ಜೂಜಾಟವಾಡುತ್ತಿದ್ದ 1) ಕಲ್ಲಪ್ಪಾ ತಂದೆ ರಾಮ ಮಾನೇ ವಯಾ:30 ವರ್ಷ ಸಾ|| ರಾಮ ನಗರ ಗುಲಬರ್ಗಾ,2) ರಮೇಶ ತಂದೆ ಹಣಮಂತ ಪೂಜಾರಿ ವಯಾ:27 ವರ್ಷ ಸಾ||ವೆಂಕಟೇಶ ನಗರ ಗುಲಬರ್ಗಾ,3) ಅರವಿಂದ ತಂದೆ ಈರಣ್ಣಾ ತಳವಾರ ಸಾ||ಹನುಮಾನ ನಗರ ಗುಲಬರ್ಗಾ,4) ಶಿವಾ ತಂದೆ ದಶರಥ ತಳವಾರ  ಸಾ|| ಗಂಗಾ ನಗರ ಗುಲಬರ್ಗಾ,5) ಅಂಬರೀಷ ತಂದೆ ನಾಗಣ್ಣಾ ಪೂಜಾರಿ ಸಾ||ಖಾದ್ರಿ ಚೌಕ ಗುಲಬರ್ಗಾ,6)ವಿಜಯಕುಮಾರ ತಂದೆ ಕಲ್ಯಾಣ ಮಡಿವಾಳ ಸಾ|| ಸುಲ್ತಾನಪೂರ ರೋಡ ಕಮಲ ನಗರ ಗುಲಬರ್ಗಾ,7)ರಾಕೇಶ ತಂದೆ ಬಸವರಾಜ ನರಬೋಳ ಸಾ|| ಸೈಯದ ಚಿಂಚೋಳಿ,8) ಕುಮಾರ ತಂದೆ ಕಾಶಿನಾಥ ಪಾಟೀಲ ಸಾ|ಬ್ರಹ್ಮಪೂರ ಗುಲಬರ್ಗಾ.9) ಮಾಣಿಕ ತಂದೆ ರಾಜಶೇಖರ ಪಾಟೀಲ ಸಾ|ಉಪಳಾಂವ ಗುಲಬರ್ಗಾ,10)ರಮೇಶ ತಂದೆ ಬಂಡೆಪ್ಪಾ ಯರಗೋಳ ಸಾ||ಖಾದ್ರಿ ಚೌಕ ಗುಲಬರ್ಗಾ,11) ಲಕ್ಷ್ಮಿಕಾಂತ ತಂದೆ ಸಾಯಿನಾಥ ಪಾಟೀಲ ಸಾ|ಖಾದ್ರಿ ಚೌಕ ಗುಲಬರ್ಗಾ,12) ಸುರೇಶ ತಂದೆ ಶಂಕರ ಕಂಠಿ ಸಾ ಶಹಾಬಜಾರ ಗುಲಬರ್ಗಾ,13) ರಮೇಶ ತಂದೆ ಶಂಕರೆಪ್ಪಾ ನಾಟೀಕಾರ ಸಾ||ದರ್ಮವಾಡಿ ತಾ|ಆಳಂದ ಜಿ||ಗುಲಬರ್ಗಾ.14) ರಾಮಚಂದ್ರ ತಂದೆ ಗುರಲಿಂಗಪ್ಪಾ ವಠಾರ ಸಾ||ದರ್ಮವಾಡಿ ತಾ|| ಆಳಂದ ಜಿ||ಗುಲಬರ್ಗಾ,15) ರಾಮರಾವ ತಂದೆ ಮಾಧವರಾವ ಸಿಂದೇ ಬೀದರ,16) ಪ್ರಭು ತಂದೆ ಬಾಬುರಾವ ಪಾಟೀಲ ಸಾ||ಕಣ್ಣೂರ ಗುಲಬರ್ಗಾ,17) ವಿಜಯಕುಮಾರ ತಂದೆ ಕಲ್ಯಾಣಿ ಗೊಂಡಾ ಸಾ||ಮಚಳಂಬಾ,18) ಶಂಕರ ತಂದೆ ಶರಣು ಪಾಟೀಲ ಸಾ|| ಶಿವಾಜಿ ನಗರ ಗುಲಬರ್ಗಾ,19) ಬಂಡೆಪ್ಪಾ ತಂದೆ ವೀರಭದ್ರಪ್ಪಾ ಬಿಜಾಪುರ ಸಾ|| ಶಹಾಬಜಾರ,20) ಸಿದ್ದು ತಂದೆ ರಾಜಸೇಖರ ಪಾಟೀಲ ಸಾ|ಚನ್ನವೀರ ನಗರ ಗುಲಬರ್ಗಾ,21) ಶರಣು ತಂದೆ ಸಿದ್ದರೂಡ ಆಲೂರ ಸಾ||ಆಲೂರ ತಾ||ಆಳಂದ,22) ರೇವಣಸಿದ್ದಯ್ಯಾ ತಂದೆ ಸೂಲಯ್ಯಾ ಹಿರೇಮಠ ಸಾ|| ಮಕ್ತಂಪೂರ ಗುಲಬರ್ಗಾ,23) ಸುನೀಲ ತಂದೆ ಕಾಶಿನಾಥ ಪಾಟೀಲ ಸಾ|ಕೇರೂರ,24)ಉಮೇಶ ತಂದೆ ಚಂದ್ರಶೇಖರ ಪಾಟೀಲ ಸಾ|ರೋಜಾ ಗುಲಬರ್ಗಾ,25) ಕಲ್ಯಾಣರಾವ ತಂದೆ ಶರಣಪ್ಪಾ ಪಾಟೀಲ ಸಾ|| ಸಿದ್ದೇಶ್ವರ ಕಾಲೋನಿ ಗುಲಬರ್ಗಾ,26) ನಿತ್ಯಾನಂದ ತಂದೆ ಬಸವರಾಜ ರಟಕಲ್ ಸಾ|ಗಾಜಿಪೂರ ಗುಲಬರ್ಗಾ,27) ಅಫರೋಜ ತಂದೆ ನಜಿರಮಿಯ್ಯಾ ಪಟೇಲ ಸಾ||ಇಸ್ಲಾಮಬಾದ ಕಾಲೋನಿ ಗುಲಬರ್ಗಾ,28) ಅನೀಲಕುಮಾರ ತಂದೆ ಸಿದ್ದಣ್ಣ ಪಾಟೀಲ ಸಾ|ಖಾದ್ರಿ ಚೌಕ ಗುಲಬರ್ಗಾ,29) ಫಸಿಯೋದ್ದಿನ ತಂದೆ ಮಯನೋದ್ದಿನ ಪಟೇಲ ಸಾ|| ಜಿಲಾನಬಾದ ಗುಲಬರ್ಗಾ,30) ರೇವಣಸಿದ್ದಪ್ಪಾ ತಂದೆ ವೀರಭದ್ರಪ್ಪಾ ಪಾಟೀಲ ಸಾ||ಮಕ್ತಂಪೂರ ಗುಲಬರ್ಗಾ,31) ರಾಜೇಶ ತಂದೆ ಸೋಮಶೇಖರ ಮಠಪತಿ ಸಾ|ಭವಾನಿ ನಗರ ಗುಲಬರ್ಗಾ,32) ರಮೇಶ ತಂದೆ ಬಸಣ್ಣಾ ಗೋವರೇ ಸಾ|| ರೇವಣಸಿದ್ದೇಶ್ವರ ಕಾಲೋನಿ ,33) ರಾಜು ತಂದೆ ಪೆರಮಾಲಸ್ವಾಮಿ ತೋವಾರ ಸಾ|| ಖಾದ್ರಿ ಚೌಕ ಗುಲಬರ್ಗಾ,34) ವಿನಯ ತಂದೆ ಶ್ರೀಮಂತ ಮುಕರಂಬಿ ಸಾ|ಅವರಾದ (ಬಿ),35) ರಾಜು ತಂದೆ ಮಲ್ಲೇಶಪ್ಪಾ ತಳವಾರ ಸಾ|| ಬಿದನೂರ ತಾ|ಅಪಜಲಪೂರ,36) ಅಜೇಯಕುಮಾರ ತಂದೆ ಮಲ್ಲಪ್ಪಾ ಪಾಟೀಲ ಸಾ||ವಿದ್ಯಾನಗರ ಗುಲಬರ್ಗಾ,37) ಸೋಮು ತಂದೆ ಅಂಬಾರಾಯ ಬಿರಾದಾರ ಸಾ|| ಉಪಳಾಂವ,38) ಕಾಶಿನಾಥ ತಂದೆ ಶರಣಪ್ಪಾ ಪಾಟೀಲ ಸಾ|| ಸಿದ್ದೇಶ್ವರ ಕಾಲೋನಿ ಗುಲಬರ್ಗಾ,39) ವಿರೇಶ ತಂದೆ ರಾಮಣ್ಣ ದೋರೆ ಸಾ||ಬಸವೇಶ್ವರ ಕಾಲೋನಿ ಗುಲಬರ್ಗಾ,40) ರಮೇಶ ತಂದೆ ರಾಮಣ್ಣಾ ಪಾಟೀಲ ಸಾ|ಕಪನೂರ,41) ಪುಟ್ಟು ತಂದೆ ಚೆನ್ನಪ್ಪಾ ಗೌಡಗೌಂವ ಸಾ|ಮಕ್ತಂಪೂರ,42) ವಿನೋದ ತಂದ ನಾಗಣ್ಣ ಹಿರೇಮಠ ಸಾ|ಬ್ಯಾಂಕ ಕಾಲೋನಿ ಗುಲಬರ್ಗಾ,43) ಪ್ರೇಮಕುಮಾರ ತಂದೆ ರಾಮಲಿಂಗಪ್ಪಾ ಬಿರಾದಾರ ಸಾ|ಉಪಳಾಂವ,44) ಆನಂದ ತಂದೆ ವೀರಣ್ಣಾ ವಾರದ ಸಾ|| ಮಕ್ತಂಪೂರ,45) ಶಿವಕುಮಾರ ತಂದೆ ಕಲ್ಯಾಣರಾವ ಸಾ|ಗಾಂಧಿ ನಗರ,46) ನಾಗರಾಜ ತಂದೆ ಬಾಬುರಾವ ಲಾಡೆ ಸಾ||ಮಕ್ತಂಪೂರ,47) ಬಸಣ್ಣಾ ತಂದೆ ಮಲ್ಲಣ್ಣ ಚಿಂಚೋಳಿ ಸಾ||ಗಾಂಧಿ ನಗರ,48) ಬಾಬಣ್ಣ ತಂದೆ ಬಸವರಾಜ ಹೆಂಟೆ ಸಾ||ಸಂಜೀವ ನಗರ ಗುಲಬರ್ಗಾ ಇವರೆಲ್ಲರ ಮೇಲೆ  ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೇಟ ಎಲೆಗಳು ಮತ್ತು ನಗದು ಹಣ 1,18,350/- ರೂಪಾಯಿಗಳನ್ನು ಜಪ್ತಿ ಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 376/2012 ನೇದ್ದರಲ್ಲಿ ಪ್ರಕರಣ ದಾಖಲಲಾಗಿರುತ್ತದೆ.  


18 November 2012

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:17/11/2012 ರಂದು 3-30 ಪಿ.ಎಂಕ್ಕೆ ಎಸ್.ಪಿ ಕಾರ್ಯಲಯದಲ್ಲಿರುವಾಗ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಬಸ್ ನಿಲ್ದಾಣ ಹತ್ತಿರದ ಮಮತಾ ಲಾಡ್ಜ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಅಂದರ/ಬಾಹರ ಇಸ್ಪಿಟ್ ಜೂಜಾಟ ನಡೆಯುತ್ತಿದೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಶ್ರೀ ಎಸ್.ಎಸ್ ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ಮತ್ತು ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ,ಶಿವಯೋಗಿ ಹೆಚ್.ಸಿ,ಅಣ್ಣಪ್ಪ ಹೆಚ್.ಸಿ,ವಿಜಯಕುಮಾರ ಹೆಚ್.ಸಿ,ಬಸವರಾಜ ಹೆಚ್.ಸಿ,ಪ್ರಕಾಶ ಹೆಚ್.ಸಿ, ಹಾಗೂ ನನ್ನ ಪೊಲೀಸ್ ಜೀಪ್ ನಂ:ಕೆಎ-32 ಜಿ-456 ರ ಚಾಲಕನಾದ ವೀರಣ್ಣ ಎ.ಪಿ.ಸಿ ರವರೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬಂದು ಶ್ರೀ ಟಿ.ಹೆಚ್. ಕರೀಕಲ್ ಪಿ.ಐ ಅಶೋಕ ನಗರ ರವರ ಸಂಗಡ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಮಮತಾ ಲಾಡ್ಜ ಎದುರುಗಡೆ ಕೇಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ/ಬಾಹರ ಇಸ್ಪಿಟ್ ಜೂಜಾಟ  ಆಡುತ್ತಿರುವರ ಮೇಲೆ ದಾಳಿ ಮಾಡಿ ಹಿಡಿದು 5 ಜನ ಜೂಜುಕೊರರಾದ ಅಶೋಕ ತಂದೆ ಗುರುಲಿಂಗಪ್ಪ ಜಮಾದಾರ ಸಾ|| ಕುರಿಕೋಟಾ ಹಾ.ವ|| ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ,ಕಾಶಿನಾಥ ತಂದೆ ಶಂಕರ ಶೇರಿಕಾರ ಸಾ|| ಸಿರಸಗಿ ಮಡ್ಡಿ,ಶಿವಾನಂದ ತಂದೆ ಸುಭಾಸ ಭೀಮಳ್ಳಿ ಸಾ|| ಕಪನೂರ ಬೆಲೂರ ಕ್ರಾಸ ಗುಲಬರ್ಗಾ, ಸಿದ್ರಾಮಪ್ಪ ತಂದೆ ಶೀವಶರಣಪ್ಪ ಪಾಟೀಲ ಸಾ|| ಹಾರತಿಹಡಗಿಲ ಮತ್ತು ಶಿವಯೋಗಿ ತಂದೆ ಸಿದ್ದಪ್ಪ ಸುಭೆದಾರ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದ ನಗದು ಹಣ 2960/- ನಾಲ್ಕು ಮೊಬೈಲಗಳು ಅ.ಕಿ 2000/- ಹಾಗೂ ಒಂದು ಕ್ಯಾಲ್ಕುಲೇಟರ್ ನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಳ್ಳಲಾಗಿದೆ. ಜಪ್ತಿ ಪಂಚನಾಮೆ ಮತ್ತು 5 ಜನ ಆಪಾಧಿತರು ಹಾಗೂ ಮುದ್ದೆಮಾಲನ್ನು ತಂದು ಶ್ರೀ ಎಸ್.ಎಸ್ ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವ ರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:102/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ವೈಶ್ಯವಾಟಿಕೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:17/11/2012 ರಂದು ಸಾಯಂಕಾಲ 6-00 ಗಂಟೆಗೆ ಮಮತಾ ಲಾಡ್ಜಿನ ಅಂಡರ ಗ್ರೌಡ ರೂಮಿನಲ್ಲಿ ಲಾಡ್ಜಿನ ಮ್ಯಾನೇಜರ ಹಾಗು ಮಾಲಿಕರವರು ವೈಶ್ಯಾ ವಾಟಿಕೆ ದಂಧೆ ನಡೆಸುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಶ್ರೀ ಎಸ್.ಎಸ್ ಹುಲ್ಲುರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಡಿ.ಎಸ್.ಪಿ ಗ್ರಾಮೀಣ ಪ್ರಭಾರಿ (ಎ) ಉಪ ವಿಭಾಗ ರವರ ಅನುಮತಿ ಪಡೆದುಕೊಂಡು ಶ್ರೀ ಟಿ.ಹೆಚ.ಕರೀಕಲ್ ಪಿ.ಐ ಅಶೋಕ ನಗರ ಮತ್ತು ನಮ್ಮ ಡಿ.ಸಿ.ಐ.ಬಿ ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ, ಬಸವರಾಜ ಹೆಚ್.,ಪ್ರಕಾಶ ಹೆಚ್.ಸಿ. 151, ಹಾಗು ಪ್ರಿಯಂಕಾ ಮಪಿಸಿ ರವರೊಂದಿಗೆ ಮಮತಾ ಲಾಡ್ಜ ಅಂಡರ ಗ್ರೌಡ ಒಳಗೆ ಹೋಗಿ ರೂಮಿನ ಬಾಗಿಲು ಬಡೆದು ಬಾಗಿಲು ತೆರೆಯುವಂತೆ ಹೇಳಿದಾಗ ರೂಮಿನಲ್ಲಿದ್ದ ಒಬ್ಬ ವ್ಯಕ್ತಿ ಬಾಗಿಲು ತೆರೆದಾಗ ಪಂಚರ ಸಮಕ್ಷಮದಲ್ಲಿ ರೂಮಿನ ಒಳಗಡೆ ಹೋಗಿ ಪರಿಶೀಲಿಸಲು ಬೆಡಿನ ಮೇಲೆ ಒಬ್ಬ ಹೆಣ್ಣು ಮಗಳು ಅರೆ ಬತ್ತಲೆ ಸ್ಥಿತಿಯಲ್ಲಿದ್ದು ಮತ್ತು ರೂಮಿನಲ್ಲಿ  ಕಂಡೋಮ್ಸ್ ಪ್ಯಾಕೇಟ ಬಿದ್ದಿದ್ದು ಆ ಹೆಣ್ಣು ಮಗಳಿಗೆ ವಿಚಾರಿಸಿದಾಗ ಮಾಣಿಕೇಶ್ವರಿ ಕಾಲೋನಿಯ ಚಂದ್ರಕಾಂತ ತಂದೆ ಮಾಹಾತೇಶ ಜಮಾದಾರ ರವರು ತನಗೆ ನೌಕರಿ ಕೊಡಿಸುವುದಾಗಿ ಮತ್ತು ದುಡ್ಡು ಕುಡಿಸುದಾಗಿ ಸುಳ್ಳು ಹೇಳಿ ಮಮತಾ ಲಾಡ್ಜಿಗೆ ಕರೆದುಕೊಂಡು ಬೇರೆ ಗಂಡಸರಿಂದ ಹಣ ತೆಗೆದುಕೊಂಡು ರೂಮಿನ ಒಳಗೆ ಕಳುಹಿಸಿ ವ್ಯಭಿಚಾರ ಮಾಡಿಸುತ್ತಿದ್ದಾನೆ. ಮತ್ತು ಈ ಕೆಲಸಕ್ಕೆ ಮಮತಾ ಲಾಡ್ಜ ಮ್ಯಾನೇಜರ ವಿನಾಯಕ ತಂದೆ ಶೇಖ ಮಹಿಬೂಬ ಮತ್ತು ಲಾಡ್ಜಿನ ಮಾಲಿಕರವರು ಕೂಡಿಕೊಂಡು ಗಿರಾಕಿಗಳಿಂದ ಹಣ ತೆಗೆದು ಲೈಂಗಿಕ ಕ್ರಿಯೆ ಮಾಡಲು ರೂಮಿನಲ್ಲಿ ಕಳುಹಿಸುತ್ತಾರೆ. ಅಂತಾ ತನ್ನ ಅಸಹಾಯಕತೆ ತೋರಿಸಿದ್ದರಿಂದ ವೈಶ್ಯಾವಾಟಿಕೆಗೆ ಕರೆದುಕೊಂಡು ಬಂದಿದ್ದ ಚಂದ್ರಕಾಂತ ತಂದೆ ಮಾಹಾತೇಶ ಜಮಾದಾರ ಸಾ:ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ಇತನಿಗೆ ಪರಿಶೀಲಿಸಿದಾಗ ವೈಶ್ಯಾ ವಾಟಿಕೆಯಿಂದ ಗಳಿಸಿದ ಹಣ 4200/- ರೂ ಮತ್ತು ಒಂದು ಕಾರ್ಬನ ಮೋಬಾಯಿಲ್, ಲಾವಾ ಮೋಬೈಲಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಲಾಡ್ಜ ಕೌಂಟರ ಹತ್ತಿರ ಮ್ಯಾನೇಜರ ಇನಾಯಿತ ತಂದೆ ಶೇಖ ಮಹಿಬೂಬ ಸಾ:ಭಗವತಿ ನಗರ ಇತನನ್ನು ಪರಿಶೀಲಿಸಿದಾಗ ವೈಶ್ಯಾ ವಾಟಿಕೆಯಿಂದ ಕೂಡಿದ 4500/- ರೂ ಮತ್ತು ಲಾಡ್ಜಿನ ಹಾಜರಾತಿ ಪುಸ್ತಕವನ್ನು ವಶಪಡಿಸಿಕೊಳ್ಳಲಾಯಿತು. ಲಾಡ್ಜಿನ ಮಾಲಿಕನ ಹೆಸರು ವಿಚಾರಿಸಿದಾಗ ಬಂದೇಲಿ ನಿವೃತ್ತ ಎಸ್.ಟಿ.ಓ ಅಂತಾ ಹೆಳಿದನು.  ಕಾರಣ ವೈಶ್ಯಾ ವಾಟಿಕೆಯನ್ನು ನಡೆಸಲು ಕರೆದುಕೊಂಡು ಬಂದ ಚಂದ್ರಕಾಂತ ಮತ್ತು ಲಾಡ್ಜಿನ ಮ್ಯಾನೇಜರ ರವರಿಗೆ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲಿನೊಂದಿಗೆ ಮುಂದಿನ ಕ್ರಮ ಕುರಿತು ಶ್ರೀ ಎಸ್.ಎಸ್ ಹುಲ್ಲುರ ಪಿ.ಐ ಡಿ.ಸಿ.ಐ.ಬಿ ಘಟಕ ಎಸ್.ಪಿ ಆಫೀಸ್ ಗುಲಬರ್ಗಾ ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 103/2012 ಕಲಂ. 3,4,5,6, ಪ್ರಿವೇಷನ್ ಆಫ್ ಇಮ್ಮೋರಲ್ ಟ್ರಾಫೀಕ್ ಆಕ್ಟ್ ( ಪಿ.ಐ.ಟಿ ಆಕ್ಟ) ಪ್ರಕಾರ ಕ್ರಮ ಜರೂಗಿಸಲಾಗಿದೆ.