POLICE BHAVAN KALABURAGI

POLICE BHAVAN KALABURAGI

08 October 2012

GULBARGA DISTRICT REPORTED CRIME


ದರೋಡೆ ಪ್ರಕರಣ:
ಶಹಾಬಾದ ನಗರ ಠಾಣೆ  ನಗರ ಠಾಣೆ: ಶ್ರೀ ಆನಂದ ಕುಮಾರ ತಂದೆ ಕೆರೆಪ್ಪಾ ಧನ್ನಾ ವ:39 ಜಾ:ಹರಿಜನ ಉ:ಪೋರಮ್ಯಾನ ಸಾ:ಭಂಕೂರ ರವರು ನಾನು ದಿನಾಂಕ:06-10-2012 ರಂದು ಸಾಯಂಕಾಲ ನನ್ನ ಮೋಟಾರ ಸೈಕಲ ನಂ: ಕೆಎ 32 ಡಬ್ಲೂ 7238 ನೇದ್ದರ ಮೇಲೆ ಗುಲಬರ್ಗಾಕ್ಕೆ ಹೋಗಿ ವಾಪಸ್ ಭಂಕೂರಕ್ಕೆ ರಾತ್ರಿ 10-30 ಗಂಟೆ ಸುಮಾರಿಗೆ ದೇವನ ತೆಗನೂರ ಇಳಿಜಾರ ರೋಡಿನ ಮೇಲೆ ಬರುತ್ತಿರುವಾಗ ಹಿಂದುಗಡೆಯಿಂದ ಇಬ್ಬರೂ ಮೋಟಾ ಸೈಕಲ ಮೇಲೆ ಬಂದವರೆ ನನ್ನ ಮೋಟಾರ ಸೈಕಲ್ ಗೆ ಸೈಡ ಹೊಡೆದು ಮುಂದೆ ಬಂದು ಅಡ್ಡ ನಿಲ್ಲಿಸಿ, ಅದರಲ್ಲಿ ಒಬ್ಬನು ಚಾಕು ತೆಗೆದು ತೊರಿಸಿ ಮಾಲ ನಿಕ್ಕಾಲ್ ಮಗನೇ ಅಂತಾ ಅಂದು ಇನ್ನೊಬ್ಬನು ಅವನ ಕೈಯಲ್ಲಿ ಉಂಗುರ ಇದೆ ಕಸಿದುಕೊ ಅಂತಾ ಇಬ್ಬರೂ ಜಬರ ದಸ್ತಿಯಿಂದ ನನ್ನ ಕೈಯಲ್ಲಿದ್ದ ಬಂಗಾರದ ½ ಅರ್ದ ತೊಲೆಯ ಉಂಗುರ ಅ.ಕಿ.:15,000/-,ಅಲಿಜಂಟ ಕೈ ಗಡಿಯಾರ ಅ.ಕಿ 1000/-, ನೋಕೀಯಾ ಕಂಪನಿಯ 6300  ಮೋಬೈಲ ಅ.ಕಿ 4,000/- ನಗದು ಹಣ 1,800/- ರೂ ಮತ್ತು ಮೋಟರ ಸೈಕಲ ನಂ   ನಂ ಕೆಎ-32 ಡಬ್ಲೂ-7238  ಅ.ಕಿ. 40,000/- ನೇದ್ದವುಗಳು ಹೀಗೆ  ಒಟ್ಟು 61,800/- ಮೌಲ್ಯದ್ದು ಕಸಿದುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

07 October 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀನಿವಾಸ   ತಂದೆ ಚಂದಪ್ಪ ಸಿಂಗೆ   ಉ: ನಿವೃತ ಪೊಲೀಸ್ ಅಧೀಕಾರಿ ಸಾ:ಅಕ್ಕ ಮಹಾದೇವಿ ನಗರ ಹೈ ಕೋರ್ಟ ಹತ್ತಿರ ಗುಲಬರ್ಗಾ     ರವರು ನಾನು ದಿನಾಂಕ: 05-10-2012 ರಂದು  ಸಾಯಂಕಾಲ   5=30 ಗಂಟೆ ಸುಮಾರಿಗೆ ನನ್ನ ಎಮ್ 80 ಮೋಟಾರ ಸೈಕಲ್  ನಂ: ಕೆಎ-32 ಜೆ-2178 ನೇದ್ದರ ಮೇಲೆ ಕೋರ್ಟ ಕ್ರಾಸ್ ದಿಂದ ಕೇಂದ್ರ ಬಸ್ ನಿಲ್ದಾಣದಕ್ಕೆ ಹೋಗುವ ನೋಬೆಲ್ ಶಾಲೆಯ ಕ್ರಾಸ್ ಹತ್ತಿರ ನನ್ನ  ಮೋಟಾರ ಸೈಕಲ್  ತಿರುಗಿಸಿ ಕೇಂದ್ರ ಬಸ್ ನಿಲ್ದಾಣ ರೋಡ ಕಡೆ ಹೋಗುತ್ತಿದ್ದಾಗ  ಮೋಟಾರ ಸೈಕಲ್ ನಂ: ಕೆಎ-32 ಯು-1436 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ್ ಸಮೇತ  ಹೊರಟು ಹೋಗಿರುತ್ತಾನೆ. .ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 103/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಾತಿ ನಿಂದನೆ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ಯೋಗೇಶ ತಂದೆ ಸದಾಶಿವ ಜಗದಾಳೆ ವಯ:32 ವರ್ಷ ಜಾತಿ||ಢೋರ  ಸಾ||ಗೊಬ್ಬುರ (ಬಿ) ತಾ||ಅಫಜಲಪೂರ ರವರು ನಮ್ಮ ಮನೆಗೆ ದಿನಾಂಕ: 24-05-2012 ರಂದು  5-6  ಜನರು ಕೂಡಿಕೊಂಡು ಬಂದು  ನನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು,  ನಾವು ಪೊಲೀಸ್ ರು  ಇದ್ದೇವೆ ಮನೆ ಚೆಕ್ ಮಾಡುತ್ತೆವೆ ಅಂತಾ ಹೇಳಿ  ನನ್ನ  ತಾಯಿಗೆ ಹೊಡೆ-ಬಡೆ ಮಾಡಿ ಮನೆಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ಹಣವನ್ನು ದೋಚಿರುತ್ತಾರೆ. ನನ್ನ ತಾಯಿಗೆ ದಿನಾಂಕ: 24-05-2012 ರಿಂದ 26-05-2012 ರವರೆಗೆ ಆಸ್ಪತ್ರೆಯಲ್ಲಿ ಉಪಚಾರ ಪಡೆದಿರುತ್ತಾಳೆ. ಹೊಡೆ ಬಡೆ ಮಾಡಿದ 5-6 ಜನರಾದ ಶಿವಾನಂದ ಕಲಶೆಟ್ಟಿ,ಮಹಿಬೂಬ ಅವರಳ್ಳಿ, ಜಗಪ್ಪ ಸಂಗಡ ಇತರರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 121/2012 ಕಲಂ, 323, 504, 395, ಐಪಿಸಿ ಮತ್ತು ಕಲಂ. 3 (11) ಎಸ.ಸಿ/ಎಸ.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ: 06-10-2012 ರಂದು  ಮಧ್ಯಾಹ್ನ 1-00 ಗಂಟೆ ಸುಮಾರಿಗೆ ತಾವರಗೇರಾ ಕ್ರಾಸಿನಲ್ಲಿ ಹುಮನಾಬಾದ ರಿಂಗ ರೋಡ ಕಡೆಯಿಂದ ಕೆಎ48, 1786 ನೇದ್ದರ ಕೃಷರ ಚಾಲಕ ಟಾಪ ಮೇಲೆ ಮತ್ತು ಒಳಗೆ ಜನರನ್ನು ತುಂಬಿ ಹಾಗೂ ಹಿಂದಿನ ಬಾಗಿಲು ಮುಚ್ಚದೇ  ಅದರ ಮೇಲು  4  ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಮಾನವನ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ  ನಡೆಸುತ್ತಾ ಹೊರಟಿದ್ದನ್ನು ಗಮನಿಸಿ ಕೈ ಸನ್ನೆ ಮಾಡಿದರೂ ಹಾಗೇ ಓಡಿಸುತ್ತಿದ್ದರಿಂದ, ಹುಮನಾಬಾದ ರಿಂಗ ರೋಡಿನ ಬಜಾಜ ಅರ್ಥ ಮೋವರ್ಸ ಎದುರುಗಡೆ ತಡೆದು ನಿಲ್ಲಿಸಿದ್ದು ಆತನ ಹೆಸರು  ಶಿವಾನಂದ ತಂದೆ ಅಂಬಣ್ಣಾ  ಹಲಗಿ  ವ:23 ವರ್ಷ ಸಾ: ಅಣಕಲ್ಲ್ ಗ್ರಾಮ ತಾ: ಚಿತ್ತಾಪುರ ಇದ್ದು, ಸದರಿಯವನ ಮೇಲೆ ಪಿ.ಎಸ.ಐ ರವರು ಸರ್ಕಾರಿ ತರ್ಪೆಯಾಗಿ ಠಾಣೆ ಗುನ್ನೆ ನಂ: 318/2012 ಕಲಂ, 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:06-10-2012 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಮಸಾಪ್ತಿ  ದರ್ಗಾ ರೋಡಿನ ಎದುರುಗಡೆ ಹುಮನಾಬಾದ ರಿಂಗ ರೋಡ ಕಡೆಯಿಂದ ಕೆ-37 3785 ನೇದ್ದರ ಕೃಷರ ಚಾಲಕ ವಾಹನದ ಟಾಪ ಮೇಲೆ ಮತ್ತು ಒಳಗೆ ಜನರನ್ನು ತುಂಬಿ ಹಾಗೂ ಹಿಂದಿನ ಬಾಗಿಲು ಮುಚ್ಚದೇ  ಫೂಟ್ಟ್ ರೆಸ್ಟ ಮೇಲೆ 4  ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಮಾನವನ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ  ನಡೆಸುತ್ತಾ ಹೊರಟಿದ್ದನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದರು ಹಾಗೆ ಮುಂದೆ ಹೋಗಿದು, ಆತನನ್ನ ಬೇನ್ನಟಿ ಹಿಡಿದು ಆತನ ಹೆಸರು ವಿಚಾರಿಸಲಾಗಿ ಕಲ್ಯಾಣರಾವ ತಂದೆ ಶಂಕರ ಭಂಕೂರ   ವ:23 ವರ್ಷ ಸಾ: ಮುತ್ತ್ಯಾನ ಬಬಲಾದ ಗ್ರಾಮ ತಾ:ಜಿ: ಗುಲಬರ್ಗಾ ಇತನ ಮೇಲೆ ಸರಕಾರಿ ತರ್ಫೇ ಯಾಗಿ ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 319/2012 ಕಲಂ, 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ:ಡಿ.ಕೇಶವಲು ತಂದೆ ಡೀ.ಧರ್ಮಯ್ಯಾ ಉ: ಗುತ್ತೆದಾರ ಸಾ: ಕವಗುಂಟ್ಲಾ ಮಂಡಲ ದೇವರ ಕದ್ರಾ ಜಿ:ಮೈಹುಬೂಬ ನಗರ ಆಂದ್ರ ಪ್ರದೇಶ ಹಾ.ವ. ಕೆ.ಎಚ್.ಬಿ. ಕ್ಯಾಂಪ ಕಾಳನೂರ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ 06-10-2012 ರಂದು ಸಾಯಾಂಕಾಲ 7-00 ಗಂಟೆ ಸುಮಾರಿಗೆ ಕೆ.ಎಚ್.ಬಿ ಕ್ಯಾಂಪಗೆ ಹೋಗುವಾಗ ನ್ನ ಸಂಗಡ ಕೆಲಸ ಮಾಡುವ ಆನಂದ ತಂದೆ ಮಲ್ಲಪ್ಪಾ ಸಾ: ಕವಲಗಾ ಇವರು ಕೂಡಾ ತಮ್ಮ ಮೋಟಾರ ಸೈಕಲ ಹಿಂದೆ ಬರುತ್ತಿದ್ದರು ಕುಸನೂರ ದಾಟಿ ಬುದ್ದ ಮಂದಿರ ಕ್ರಾಸ ನಾಲಾದ ಹತ್ತಿರ ಆನಂದ ಇವರ ಮೋಟಾರ ಸೈಕಲದಲ್ಲಿಯ ಪೆಟ್ರೊಲ ಖಾಲಿಯಾಗಿ ಬಂದ ಮೋಟಾರ ಸೈಕಲ್ ಬಂದ ಆಗಿದ್ದರಿಂದ  ನಾನು ನನ್ನ ಮೊಟಾರ ಸೈಕಲನಿಂದ ಪೆಟ್ರೊಲ ತಗೆದು ಅವರ ಗಾಡಿಗೆ ಹಾಕಿ ಮೊಟಾರ ಸೈಕಲ ತಗೆದುಕೊಂಡು ಮುಂದೆ ಹೋಗುವಾಗ ಕುಸನೂರ ತಾಂಡಾ ಕ್ರಾಸ ದಾಟಿ ಮುಂದೆ ಹೋಗುವಾಗ ರೋಡಿನ ಮೇಲೆ 4 ಜನರು ಸೈಡಿಗೆ ತಮ್ಮ 4 ಮೋಟಾರ ಸೈಕಲಗಳು ನಿಲ್ಲಿಸಿ ನನಗೆ ತಡೆದು  ನಿಲ್ಲಿಸಿ 4 ಜನರಲ್ಲಿಯ ಇಬ್ಬರೂ ತವಾರ ತಗೆದುಕೊಂಡು ಇಬ್ಬರೂ ಬಡಿಗೆಗಳು ಹಿಡಿದುಕೊಂಡು ಅದರಲ್ಲಿ ಒಬ್ಬನು ನನಗೆ ಎಡ ಹುಬ್ಬಿಗೆ,ಇನ್ನೊಬ್ಬ ಕೈಯಿಂದ ಬಡಿಗೆಯಿಂದ,ಬಲಗೈ ಮುಂಗೈ ಮೇಲೆ ಹೊಡೆದು ಕೆಳಗೆ ಬಿಳಿಸಿ ಕೊರಳಲ್ಲಿಯ 15 ಗ್ರಾಂ ಬಂಗಾರದ ಲಾಕೆಟ ಅ.ಕಿ.38,000/ರೂಪಾಯಿಗಳದ್ದು. ಇನ್ನೊಬ್ಬ ನನ್ನ ಜೇಬಿನಲ್ಲಿ ಕೈ ಹಾಕಿ 5000/- ರೂ ಹಣ ಕಿತ್ತುಕೊಂಡು ಟೊಂಕದಲ್ಲಿ ಬೆಲ್ಟಗೆ ಹಾಕಿದ ಮೊಬೈಲ ಕವರನಲ್ಲಿದ್ದ ಒಂದು ನೋಕಿಯಾ ಮೋಬೈಲ ಅ.ಕಿ.3000/ರೂ ಮತ್ತು ಕೈಯಲ್ಲಿದ್ದ್ ಕೈ ಗಡಿಯಾರ ಕಸಿದುಕೊಂಡಿದ್ದು ಅದರ ಅ.ಕಿ.3000/ರೂ ಹೀಗೆ ಒಟ್ಟು 49,000/ರೂ ಕಿಮ್ಮತ್ತಿನ ಮೌಲ್ಯದ್ದು 4 ಜನರು ಹೊಡೆ ಬಡಿಮಾಡಿ ಕಸಿದು ಕೊಂಡಿರುತ್ತಾರೆ. ನನ್ನ ಹಿಂದೆ ಬರುತ್ತಿದ್ದ ಆನಂದ ಇವರನ್ನು ನೋಡಿ 4 ಜನರು ತಮ್ಮ ಮೋಟಾರ ಸೈಕಲಗಳನ್ನು ಚಾಲು ಮಾಡಿಕೊಂಡು ಓಡಿ ಹೋಗುವಾಗ ಅದರಲ್ಲಿ  ಒಂದು ಮೊಟಾರ ಸೈಕಲ ನಂಬರ ನೋಡಲಾಗಿ ಕೆಎ-32 ಕ್ಯೂ-42 ಇರುತ್ತದೆ. ಅಂತಾ ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:233/2012 ಕಲಂ 394 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

06 October 2012

Gulbarga District Reported Crimes



ಜಾತಿ ನಿಂದನೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ : ಶ್ರೀ ಸುಭಾಸ ತಂದೆ ಬಂಡೆಪ್ಪ ವ|| 22 ವರ್ಷ, ಜಾ|| ಎಸ್.ಸಿ ಸಾ|| ಭೂಸನೂರ ರವರು ಐ.ಟಿ.ಐ ಮತ್ತು ಡಿಪ್ಲೊಮಾ ವಿಧ್ಯಾಭ್ಯಾಸ ಮುಗಿಸಿಕೊಂಡಿದ್ದು ಸುಮಾರು 1 ತಿಂಗಳ ಹಿಂದೆ ಎನ.ಎಸ್.ಎಲ ಸುಗರ್ಸ ಭೂಸನೂರ ಇವರು ತಮ್ಮ ಪ್ಯಾಕ್ಟರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರಿಂದ ಫಿರ್ಯಾದಿದಾರರು ದಿನಾಂಕ 05/10/2012 ರಂದು ಮುಂಜಾನೆ ಫ್ಯಾಕ್ಟರಿಗೆ ಇಂಟರವೀವ ಕೊಡಲು ಹೋಗಿದ್ದು ಅಲ್ಲಿ ಹೆಚ.ಆರ್ ವಿಭಾಗದ ಮ್ಯಾನೇಜರ ಆದ ರಾಜೆಂದ್ರಸಿಂಗ ಇವರ ಆಫೀಸನಲ್ಲಿ ಹೋಗಿ ತನ್ನ  ವಿಧ್ಯಾಭ್ಯಾಸದ ಕಾಗದ ಪತ್ರಗಳನ್ನು ತೋರಿಸಿದ್ದು ಕಾಗದ ಪತ್ರ ಪರಿಶೀಲಿಸಿದ ನಂತರ ಜಾತಿಯ ಬಗ್ಗೆ ವಿಚಾರಿಸಿ ನಂತರ ಎಸ.ಸಿ ಕಾಸ್ಟ ಇದ್ದು ಅದರಲ್ಲಿ ಹೊಲೆಯ ಎಂಬ ಜಾತಿಗೆ ಸೇರಿದವರು ಅಂತ ತಿಳಿಸಿದ ಮೇರೆಗೆ ಅಂತಹ ಜಾತಿಯವರಿಗೆ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಅಂತ ಮ್ಯಾನೇಜರ ರವರು ಜಾತಿ ನಿಂದನೆ ಮಾಡಿದ್ದು ಮತ್ತು ಅವರ ಮುಂದೆ ಕುಳಿತಿದ್ದ ಅಧಿಕಾರಿಗಳಾದ ಶಿವಯೋಗಿ ಮತ್ತು ಜಗದೀಶ ಇವರಿಬ್ಬರೂ ನಿಮ್ಮೂರ ಹೊಲೆಯರಿಗೆ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಹೇಳಿದ್ದು ಆಗ ಹಾಗೆಲ್ಲಾ ಹೇಳಬೇಡಿ ಸರ ಎಂದು ಕೇಳಿಕೊಂಡಾಗ ಮ್ಯಾನೇಜರ ರಾಜೆಂದ್ರಸಿಂಗ ರವರು ಹೊಲೆ ಸೂಳೆ ಮಕ್ಕಳಿಗೆ ಹೊರಗೆ ಹಾಕಿ ಅಂತ ಹಿಂದಿ ಭಾಷೆಯಲ್ಲಿ ಹೇಳಿದರು ಯಾಕೆ ಸರ ಅಂತ ಕೇಳಿದಾಗ ಗೆಟ ಔಟ ಅಂತ ಕುತ್ತಿಗೆ ಹಿಡಿದು ಹೊರಗೆ ನೂಕಿದ್ದರಿಂದ ಹಣೆಗೆ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ  ದೂರಿನ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 87/2012 ಕಲಂ 323, 324, 504 ಸಂ. 34 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಳ್ಳಲಾಗಿದೆ.     
ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ : ಶ್ರೀ ರಾಜೆಂದ್ರಸಿಂಗ ತಂದೆ ಹೋರಿ ಸಿಂಗ ವ|| 56 ವರ್ಷ, ಜಾ|| ಜಾಡ, || ಮ್ಯಾನೇಜರ (ಹೆಚ್.ಆರ್ & ಎ.ಡಿ.ಎಮ) ಎನ.ಎಸ್.ಎಲ. ಸುಗರ್ಸ ಲಿಮಿಟೇಡ ಘಟಕ – 02 ಭೂಸನೂರ, ಸಾ|| ಭಾರತೀಯ ಗ್ರಾಮ, ಪೋಸ್ಟ || ಗಜುರಲ್ಲಾ, ತಾ|| ಹಸನಪೂರ, ಜಿ|| ಅಮರೋಹಾ ( ಜ್ಯೋತಿಬಾ ಫುಲೇ ನಗರ ) ರಾಜ್ಯ|| ಉತ್ತರ ಪ್ರದೇಶ, ಹಾ||ವಾ|| ಎನ.ಎಸ್.ಎಲ. ಸುಗರ್ಸ ಲಿಮಿಟೇಡ ಘಟಕ – 02 ಭೂಸನೂರ ಇವರು ದಿನಾಂಕ 05/10/2012 ರಂದು ತಮ್ಮ ಆಫೀಸನಲ್ಲಿದ್ದಾಗ ಸುಭಾಸ ಈತನು ಬಂದು ಫ್ಯಾಕ್ಟರಿಯಲ್ಲಿ ನೌಕರಿ ಸಲುವಾಗಿ ಕೇಳಿದ್ದು ಈಗ ಫ್ಯಾಕ್ಟರಿಯಲ್ಲಿ ಯಾವುದೆ ಖಾಲಿ ಹುದ್ದೆ ಇರುವದಿಲ್ಲ ಮತ್ತು ಯಾವುದೆ ಇಂಟರವೀವ ಇರುವದಿಲ್ಲ ಹಾಗೂ ಫ್ಯಾಕ್ಟರಿಯಲ್ಲಿ ಇಂಟರವೀವ ಇದ್ದಾಗ ಬಂದು ಹಾಜರಾಗಲು ತಿಳಿಸಿದ್ದು, ಆಗ ಸುಭಾಸ ಈತನು ಟೇಬಲ ಮೇಲಿದ್ದ ಪೇಪರ ವೇಟನ್ನು ತೆಗೆದುಕೊಂಡು ಫಿರ್ಯಾದಿಯ ಮುಖಕ್ಕೆ ಮತ್ತು ಮೂಗಿಗೆ ಹೊಡೆದಿದ್ದರಿಂದ ರಕ್ತ ಮತ್ತು ಗುಪ್ತಗಾಯವಾಗಿದ್ದು, ಮತ್ತು ಬಲಗಣ್ಣಿಗೆ ಹೊಡೆದಿದ್ದರಿಂದ ಕನ್ನಡಕ ಒಡೆದು ಮೂಗಿಗೆ ಚುಚ್ಚಿ ರಕ್ತಗಾಯವಾಗಿರುತ್ತದೆ. ಆಗ ಆರೋಪಿತನು ನಾನು ಎಸ್.ಸಿ ಕಾಸ್ಟದವನಿದ್ದು ನಿಮ್ಮ ಮೇಲೆ ಅಟ್ರಾಸಿಟಿ ಕಾಯ್ದೆಯಲ್ಲಿ ಕೇಸು ಮಾಡಿಸುತ್ತೇನೆ ಅಂತಾ ಅನ್ನುತ್ತಾ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 86/2012 ಕಲಂ 341, 323, 324 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪ್ರವೀಣಕುಮಾರ ತಂದೆ ಶಿವರಾಯ ತಳವಾರ  ರವರು  ದಿನಾಂಕ: 05-10-2012 ರಂದು ಬೆಳಗ್ಗೆ   ತನ್ನ ಮೊ/ಸೈಕಲ್  ನಂ: ಕೆಎ 32 ಎಲ್ 9246 ನೆದ್ದರ ಮೇಲೆ ಹರೀಶ ಈತನಿಗೆ ಕೂಡಿಸಿಕೊಂಡು ದೇವಿ ನಗರ ಕಾಸ್ ಧಾಟಿ ಹೋಗಿ ಪೆಟ್ರೋಲ್ ಪಂಪ ಹತ್ತಿರ ಹರೀಶ ಈತನಿಗೆ ಬಿಟ್ಟು ರೋಡ ದಾಟುತ್ತಿದ್ದಾಗ ಶಾಹಾಬಜಾರ ನಾಕಾ ಕಡೆಯಿಂದ ಟಿ.ವಿ.ಎಸ್.ಎಕ್ಸ.ಎಲ್. ಮೋ/ಸೈಕಲ್ ನಂ: ಕೆಎ 32 ಕ್ಯೂ 524 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಸವಾರ ಹೊರಟು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ ಗುನ್ನೆ ನಂ 102/12  ಕಲಂ: 279,338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಾಂತಪ್ಪ ತಂದೆ ಸಿದ್ದಪ್ಪಾ ನೀಲಿ, ವಯ; 62 ವರ್ಷ, ಉ: ಒಕ್ಕಲುತನ , ಸಾ: ತಾಜಸುಲ್ತಾನಪೂರ  ರವರ ಸೇವಕರಾದ  ಪೂಜಾರಿ ಬಸಣ್ಣ ಮತ್ತು ಅಮೃತ, ನಾಗಣ್ಣ ಇವರು ತಮ್ಮ ಹೋರಿಯನ್ನು ದಿನಾಂಕ 27-09-2012 ರಂದು ಕೊಟ್ಟಿಗೆಯಲ್ಲಿ ಕಟ್ಟಿ ಊಟಕ್ಕೆ ಹೋಗಿದ್ದು ಅಂದು ಊರಲ್ಲಿ ಗಣೇಶ ಉತ್ಸವವಿದ್ದ ಪ್ರಯುಕ್ತ ಮರುದಿವಸ ಬೆಳಗ್ಗೆ ಬಂದು ನೋಡಲು ಹೋರಿ ಇರಲಿಲ್ಲ  ನನಗೆ ಪೋನ ಮುಖಾಂತರ ತಿಳಿಸಿದ್ದು ನಾನು ಹೋಗಿ ನೋಡಲಾಗಿ ಕಪ್ಪು ಬಿಳಿ ಚುಕ್ಕಿಯ ಬಣ್ಣದ ಹೊರಿ ಸುಮಾರು 3 ವರ್ಷದ ಹೋರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಕಿಮ್ಮತ್ತು 45,000/- ರೂ ಗಳಿದ್ದು ನನ್ನ ಹೋರಿಯನ್ನು ಹುಡುಕಿಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ  316/12 ಕಲಂ 379  ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.