POLICE BHAVAN KALABURAGI

POLICE BHAVAN KALABURAGI

06 July 2012

GULBARGA DIST REPORTED CRIMES


ವೈರ್ ಕಳ್ಳತನ :
ಶಹಾಬಾದ ನಗರ ಪೊಲೀಸ ಠಾಣೆ : ಶ್ರೀ ಬಾಲಗೊವಿಂದ ತಂದೆ ಹಣಮಜಿ ಕುಸಾಳೆ ಸಾ: ವಡ್ಡರ ಸ|| ಶಹಾಬಾದ ರವರು ದಿನಾಂಕ: 12/06/2012 ರಂದು ತರನಳ್ಳಿ ಗ್ರಾಮದ  ಹೊಲ ಸರ್ವೇ ನಂಬರ 11/2 ನೇದ್ದರಲ್ಲಿ ಸಾಯಾಂಕಾಲ 7 ಗಂಟೆಯವರೆಗೆ ಕ್ವಾರಿ ಕಟಿಂಗ ಮಾಡಿ ಮಷಿನ ಬಂದ ಮಾಡಿಕೊಂಡು ಮನೆಗೆ ಹೋಗಿದ್ದು , ದಿನಾಂಕ:13/06/2012 ರಂದು ಮುಂಜಾನೆ 7-00  ಗಂಟೆಗೆ ಕ್ವಾರಿ ಕಟಿಂಗ ಮಾಡುವ ಸಲುವಾಗಿ ಕೆಲಸಗಾರರೊಂದಿಗೆ ಬಂದು ನೋಡಲಾಗಿ ಕರೆಂಟ ಮೋಟಾರಗೆ ಜೊಡಿಸಿದ ಕೇಬಲ ವೈರನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕೇಬಲ ವೈರ್ 120 ಪೀಟ ಇದ್ದು ಅ.ಕಿ.12000/- ರೂಪಾಯಿದ್ದು ಆಗುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 91/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸದಾಶಿವ ತಂದೆ ತಿಪ್ಪಣ್ಣಾ ಸಿಂಗೆ ಸಾ|| ಮಾಲಗತ್ತಿ ರವರು ನಾನು ದಿನಾಂಕ: 31/05/2012 ರಂದು ರಾತ್ರಿ 8-00  ಗಂಟೆಯವರೆಗೆ ಖಣಿಯಲ್ಲಿಯ ಕಲ್ಲುಗಳು ಕತ್ತರಿಸುವ ಕೆಲಸ ಮುಗಿಸಿ ಕ್ವಾರಿಕಟಿಂಗ ಮಶಿನ್ ಬಂದ ಮಾಡಿ ಮನೆಗೆ ಬಂದಿರುತ್ತೆನೆ. ದಿನಾಂಕ: 01/06/2012 ರಂದು ಬೆಳ್ಳಿಗ್ಗೆ ಬಂದು ನೋಡಲು ಖಣಿಯಲ್ಲಿಯ ಕಲ್ಲುಗಳ ಕತ್ತರಿಸುವ ಕ್ವಾರಿ ಕಟ್ಟಿಂಗ ಮಶೀನಗೆ ಜೊಡಿಸಿದ ಕೇಬಲ ವೈರ್ ವಾಯರ 120 ಪೀಟ ಅ.ಕಿ. 12000/- ರೂಪಾಯಿಗಳದ್ದು,  ಯಾರೊ ಕಳ್ಳರು ಕತ್ತಿರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 90/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ  ಶಿವಾನಂದ ತಂದೆ ನೀಲಕಂಠ ಹವಿಲೇ ಉ: ಜೀಪ ಚಾಲಕ  ಸಾ; ಬಾಹರಪೇಟ ಆಳಂದ ರವರು ನಾನು ದಿನಾಂಕ:05-07-2012 ರಂದು ಮಧ್ಯಾಹ್ನ2-00 ಗಂಟೆಗೆ ನನ್ನ ಬುಲೇರೋ ಜೀಪ ನಂಬರ ಕೆಎ-32 ಎಮ್-8566 ನೇದ್ದನ್ನು ಎಸ್.ವಿ.ಪಿ ಸರ್ಕಲದಿಂದ ಜಗತ ಸರ್ಕಲ  ರೋಡ ಮುಖಾಂತರ ಹೋಗುವಾಗ ಅನ್ನಪೂರ್ಣ ಕ್ರಾಸ್ ಹತ್ತಿರ ಕಾರ ನಂ ಕೆಎ-38 ಎಫ-777 ನೆದ್ದನ್ನು   ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಹಿಂದಿನಿಂದ ನನ್ನ ಕಾರಿಗೆ ಡಿಕ್ಕಿ ಪಡಿಸಿ ಕಾರ ಜಕಮ್ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:73/2012 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಮುಧೋಳ ಪೊಲೀಸ್ ಠಾಣೆ: ಶ್ರೀಮತಿ ರಜಿಯಾ ಬೇಗಂ ಗಂಡ ಖಾಸಿಂಸಾಬ ಶೇಖ ಸಾ|| ಹುಡಾ ಗ್ರಾಮ ರವರು  ನನ್ನ ಗಂಡನಾದ ಖಾಸಿಂಸಾಬ ತಂದೆ ಮೊದಿನಸಾಬ ವ|| 38 ವರ್ಷ ಈತನು ದಿನಾಂಕ: 05-07-2012 ರಂದು ಮಧ್ಯರಾತ್ರಿ 00-30 ಗಂಟೆಯ ಸುಮಾರಿಗೆ ಹುಡಾ ಗ್ರಾಮದ ಹತ್ತಿರ ಮುಧೋಳ ಸೇಡಂ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಕಾಲಕ್ಕೆ ಯಾವುದೋ ಒಂದು ವಾಹನದ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿ ನನ್ನ ಗಂಡನಾದ ಖಾಸಿಂಸಾಬ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಈ ಅಪಘಾತದಲ್ಲಿ ನನ್ನ ಗಂಡನಿಗೆ ಭಾರೀ ಗಾಯಗಳಾಗಿ ಮೃತಪಟ್ಟಿದ್ದು ವಾಹನದ ಚಾಲಕನು ಹಾಗೇ ಓಡಿಸಿಕೊಂಡು ಹೋಗಿದ್ದು ನನ್ನ ಗಂಡನಿ ಅಪಘಾತ ಪಡಿಸಿ ಓಡಿಸಿಕೊಂಡು ಹೋದ ವಾಹನವನ್ನು ಪತ್ತೆಮಾಡಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 79/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಆಕ್ರಮವಾಗಿ ಸೀಮೆ ಎಣ್ಣೆ ಸರಬರಾಜು ಮಾಡಿದ ಬಗ್ಗೆ:

ರೋಜಾ ಪೊಲೀಸ್ ಠಾಣೆ:ಪ್ರೇಮಿಲಾಬಾಯಿ ಆಹಾರ ನಿರೀಕ್ಷಕರು ವಾರ್ಡ ನಂ.5-8 ಉಪ-ನಿರ್ದೇಶಕರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಗುಲಬರ್ಗಾ ರವರು ರೋಜಾ ಬಡಾವಣೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 170 ರ ಸೀಮೆಎಣ್ಣೆ ಕಿರುಕುಳ ಡೀಲರರಾದ ಶ್ರೀ ವಿಶ್ವನಾಥ ಜಾಧವ [ಲೈಸೆನ್ಸ ಸಂಕ್ಯೆ.24/2011-12] ಇವರು 2012 ನೇ ಜೂನ ತಿಂಗಳಿಗೆ ಹಂಚಿಕೆಯಾದ ಸೀಮೆ ಎಣ್ಣೆ ವಿತರಣೆ ಮಾಡಿರುವುದಿಲ್ಲವೆಂದು  ನನಗೆ ದೂರವಾಣಿ ಮುಖಾಂತರ ಕಾರ್ಡುದಾರರು ತಿಳಿಸಿದ ಮೇರೆಗೆ ದಿನಾಂಕ:04/07/2012 ರಂದು ಸ್ಥಳಕ್ಕೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ  ಜೂನ 2012 ನೇ ತಿಂಗಳಿನಲ್ಲಿ ಸೀಮೆ ಎಣ್ಣೆ ವಿತರಣೆ ಮಾಡಿದ ಬಗ್ಗೆ ನಮೂದಿಸಿರುವುದಿಲ್ಲ ಹಾಗೂ ಸೀಮೆ ಎಣ್ಣೆ ವಿತರಣೆ ಮಾಡಿರುವುದಿಲ್ಲ. ಸೀಮೆ ಎಣ್ಣೆ ಕಿರುಕುಳ ವರ್ತಕರಾದ ಶ್ರೀ ವಿಶ್ವನಾಥ ಜಾಧವನವರು ದಿನಾಂಕ:16/06/2012 ರಂದು ಸಗಟು ಸೀಮೆಎಣ್ಣೆ ವರ್ತಕರಾದ ಮೆ|| ಆರ್.ಎಸ್. ರಘೋಜಿ ಇವರ ಸಗಟು ಮಳಿಗೆಯಿಂದ 894 ಲೀಟರ್ ಸೀಮೆ ಎಣ್ಣೆ ಎತ್ತುವಳಿ ಮಾಡಿದನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡದೇ ಅವ್ಯವಹಾರ ಮಾಡಿರುವುದು ಕಂಡು ಸದರಿ ಡೀಲರರ ವಿರುದ್ದ ಅವಶ್ಯಕ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2012 ಕಲಂ. 406 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಸುಹಾಸ ತಂದೆ ದತ್ತೂಪಂತ ಎಲ್.ಶೆಟ್ಟಿ ಯೋಜನೆ ನಿದೇರ್ಶಕರು ಕೃಷ್ಣಿ ಸಂಶೋಧನಾ ಕೇಂದ್ರ ಆಳಂದ ರಸ್ತೆ ಗುಲಬರ್ಗಾ ರವರು ರೈತರ ವಿಕ್ಷಣೆಗಾಗಿ 6 ಆಡು,  1 ಹೊತಗಳನ್ನು  ತಂದು ಇಟ್ಟಿದ್ದು  ಆದರ  ಕಾವಲಿಗಾಗಿ  ಮಲ್ಲಪ್ಪ ಪೂಜಾರಿ ರವರಿಗೆ ನೇಮಿಸಿರುತ್ತೆವೆ. ಸದರಿಯವರು  ದಿನಾಂಕ 05/07/2012  ರಂದು ಸಂಜೆ 6-00 ಗಂಟೆಗೆ  ಕೋಣೆಯಲ್ಲಿ ಹಾಕಿ  ಕೀಲಿ ಹಾಕಿದ್ದು  ಮುಂಜಾನೆ 7-00 ಗಂಟೆಗೆ ನೋಡಿದಾಗ   ಬಾಗಿಲಿನ  ಕೀಲಿ ಮುರಿದು  ಒಂದು ಕೇಂಪು ಬಣ್ಣದ ಹೊತವನ್ನು  ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ   ಕಳವು ಮಾಡಿಕೊಂಡು  ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:224/2012  ಕಲಂ 457 380  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

05 July 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀ ವಿನಾಯಕ ತಂದೆ ಮಲ್ಲಿಕಾರ್ಜುನ ಕಂಬಳಿ ವಿದ್ಯಾರ್ಥಿ ಸಾ||ವಿಶ್ವ ವಿದ್ಯಾಲಯ ವಸತಿ ಗೃಹ ಡಿ-7 ಗುಲಬರ್ಗಾ ವಿಶ್ವ ವಿದ್ಯಾಲಯ ಗುಲಬರ್ಗಾರವರು ನಾನು ದಿನಾಂಕ 04-07-2012 ರಂದು ರಾತ್ರಿ 10-15 ಗಂಟೆ  ಸುಮಾರಿಗೆ ನನ್ನ ಗೆಳೆಯರು ಕೂಡಿಕೊಂಡು ಜಗದೀಶ ವೈನ ಶಾಪ ಬಾಜು ಇರುವ ಮೊಬೈಲ ರಿಚಾರ್ಜ ಮಾಡುವ ಅಂಗಡಿಯ ಮುಂದೆ ಮಾತಾಡುತ್ತಾ ನಿಂತಾಗ ಪ್ರವೀಣ ತಂದೆ ಅಂಬದಾಸ ಮತ್ತು ಹರ್ಷವರ್ಧನ ತಂದೆ ಮಲ್ಲೇಶಪ್ಪ ಬಸವರಾಜ ತಂದೆ ಸಿದ್ದಣ್ಣ ತೋಂಟಿ ಸಾ: ರಾಜಾಪೂರ ಗುಲಬರ್ಗಾ ಸಂಗಡ ಇತರರು ಕೂಡಿಕೊಂಡು ಬಂದವರೆ  ಇಲ್ಲಿ ಏಕೆ ನಿಂತಿದಿರಿ ಅಂತ ಅವ್ಯಾಚ ಶಬ್ದಗಳಿಂದ ಬೈದು ಪ್ರವೀಣ ಮತ್ತು ಬಸವರಾಜ ಮತ್ತು ಇತರರು ಕೂಡಿ ನನಗೆ ಬಡಿಗೆಯಿಂದ ತೆಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ.152/2012 ಕಲಂ 341.324,504.307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ, ಜಾತಿ ನಿಂದನೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಸಿದ್ದಣ್ಣ ತೊಂಟಿ ಸಾ:ಸರ್ವೋದಯ ನಗರ ಶಹಬಾದ ರೋಡ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಪ್ರವೀಣ ತಂದೆ ಅಂಬಾದಾಸ ರಾಠೋಡ ಸಾ||ಸರ್ವೋದಯ ನಗರ,ಹರ್ಷವರ್ಧನ ತಂದೆ ಮಲ್ಲೇಶಪ್ಪ ತಳವಾರ ಸಾ: ಶಕ್ತಿ ನಗರ 3 ಜನರು ಕೂಡಿಕೊಂಡು ರಾಜಾಪೂರ ಮಹಾಂತೇಶ ಇವರ ಶಿವ ಹೋಟೆಲದ ಎದುರಿನ ಬಯಲು ಜಾಗದಲ್ಲಿ ದಿನಾಂಕ:04-07-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಮಾತನಾಡುತ್ತಾ ನಿಂತಾಗ ರಾಹುಲ ತಂದೆ ಅಶೋಕ ಹೊನ್ನಳ್ಳಿ ಸಂಗಡ ಅವನ ಗೆಳೆಯರು  ನಮ್ಮ ಹತ್ತಿರ ಬಂದು ರಾಹುಲ ಇತನು ನನ್ನ ಗೆಳೆಯ ವಿನಾಯಕನಿಗೆ ಎಕೆ ಹೋಡೆದಿದ್ದಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಈ ಏರಿಯಾದ ಪುಡಾರಿ ಇದ್ದಿನಿ ಅಂತಾ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ನನಗೆ ಮತ್ತು ನನ್ನ ಗೆಳೆಯ ಪ್ರವೀಣ ಮತ್ತು ಹರೀಶ ಇವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಂಶ ಮೇಲಿಂದ ಠಾಣೆ ಗುನ್ನೆ ನಂ 151/2012 ಕಲಂ, 147, 148, 307, 324, 504 ಸಂಗಡ  3 (1) (10) ಎಸ.ಸಿ/ಎಸಟಿ ಪಿ.ಎ. ಆಕ್ಟ 1989 ನೇದ್ದರ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES

ಕೊಲೆಗೆ ಪ್ರಯತ್ನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಮತಿ ವಿಜಯಲಕ್ಷ್ಮಿ ಗಂಡ ಸೋಮಶೇಖರ ತಳವಾರ ಸಾ: ಟೀಚರ ಕಾಲೋನಿ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ನನ್ನ ಗಂಡನಾದ ಸೋಮಶೇಕರ ಇತನು ದಿನ ನಿತ್ಯ ಸರಾಯಿ ಕುಡಿಯುವದು ಮತ್ತು ಜೂಜಾಟ ಆಡುವ ಚಟ್ಟದವನಿದ್ದು. ನನ್ನ ಶೀಲದ ಬಗ್ಗೆ ಸಂಶಯ ಪಟ್ಟಿರುತ್ತಾನೆ. ದಿನಾಂಕ:01-07-2012 ರಂದು ರಾತ್ರಿ 11-00 ಗಂಟೆಗೆ ಸುಮಾರಿಗೆ ನಾನು ಮತ್ತು ನನ್ನ ಮಗಳು ಸ್ನೇಹಾ ಇಬ್ಬರು ಮನೆಯಲ್ಲಿ ಮಲಗಿಕೊಂಡಾಗ ಗಂಡನಾದ ಸೋಮಶೇಖರ ಇತನು ಸರಾಯಿ ಕುಡಿದು ಮನೆಗೆ ಬಂದು ನಮ್ಮ ಅಣ್ಣ ಅತ್ತಿಗೆ ನನಗೆ ಇನ್ನೋಂದು ಮದುವೆ ಮಾಡುತ್ತೇವೆ ಅಂತಾ ಹೇಳಿದ್ದಾರೆ, ನಿನಗೆ ಬಿಡುವದಿಲ್ಲಾ ಅಂತ ಕೈಯಿಂದ ಮುಖದ ಮೇಲೆ ಹೊಡೆದು ಹೊಟ್ಟೆಯ ಮೇಲೆ ಒದ್ದಿರುತ್ತಾನೆ .ಕೊಲೆ ಮಾಡುವ ಉದ್ದೇಶದಿಂದ ಅವನು ತನ್ನ ಕಿಸೇಯಲ್ಲಿದ್ದ ಪ್ಲಾಸ್ಟಿಕ ವೈರದಿಂದ ನನ್ನ ಕೊರಳಿಗೆ ಬಿಗಿದು ಕೊಲೆಗೆ ಪ್ರಯತ್ನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:99/2012 ಕಲಂ 109 323 504 307 ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ದಿನಾಂಕ: 04-07-2012 ರಂದು ರಾತ್ರಿ 8-30 ಗಂಟೆಗೆ ದೀಪಕ ಚೌವ್ವಾಣ ತಂದೆ ಭಾಸ್ಕರ ಚೌವ್ವಾಣ ಉ: ಸೆನಟರಿ ಇನ್ಸಪೆಕ್ಟರ್  ಸಾ: ಮುನೀಮ ಸಂಗ ನೆಹಗು ಗಂಜ ಗುಲಬರ್ಗಾ ರವರು ನಾನು ಮಹಾನಗರ ಪಾಲಿಕೆ ಗುಲಬರ್ಗಾದಲ್ಲಿ ಸೆನಟರಿ ಇನ್ಸಪೆಕ್ಟರ ಇದ್ದು ವಲಯ ಕಛೇರಿ 3 ರಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ.ನಯಾಮೊಹಲ್ಲಾ ಮಿಜಗುರಿಯಲ್ಲಿ ಒಂದು ಕಛೇರಿ ಇಟ್ಟಿಕೊಂಡಿರುತ್ತೇವೆ. ಪ್ರತಿ ದಿವಸ ಬೆಳಿಗ್ಗೆ 6:00 ಎಎಮ್ ದಿಂದ 2:00 ಪಿಎಮ್ ವರೆಗೆ ಈ ಕಛೇರಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತೇವೆ ನಮ್ಮ ಕಛೇರಿಯ ಎದುರುಗಡೆ ಬಡಾವಣೆಯ ಸಾರ್ವಜನಿಕರ ಮನೆ ಮನೆಗಳಿಂದ ಕಸಗಳನ್ನು ಸಂಗ್ರಹಿಸುವ ಕುರಿತು 4 ಟ್ರೈ ಸೈಕಲ್ ಗಳನ್ನು ಇಟ್ಟುಕೊಂಡಿದ್ದು, ನಮ್ಮ ಕೆಲಸಗಾರರೂ ಬೆಳಿಗ್ಗೆ 6:00 ರಿಂದ ಮಧ್ಯಾನ 2:00 ಗಂಟೆಯ ವರೆಗೆ ಕೆಲಸ ಮಾಡಿ ಆ ಟ್ರೈ ಸೈಕಲ್ ಗಳನ್ನು ಕಛೇರಿಯ ಎದುರುಗಡೆ ನಿಲ್ಲಿಸಿ ಹೋಗುತ್ತಾರೆ .ದಿನಾಂಕ:04/07/2012 ರಂದು ನಮ್ಮ ಕಚೇರಿಯ ಟ್ರೈ ಸೈಕಲ್ ನಡೆಸುವ ಕೆಲಸಗಾರರೂ ತಮ್ಮ ಟ್ರೈ ಸೈಕಲ್ ಕೆಲಸಗಳನ್ನು ಮುಗಿಸಿ ಮಧ್ಯಾನ 2:00 ಗಂಟೆಗೆ ನಮ್ಮ ಆಫೀಸ ಮುಂದೆ 4 ಟ್ರೈ ಸೈಕಲ್ ಗಳನ್ನು ನಿಲ್ಲಿಸಿ ಹೋಗಿದ್ದು, ನಾವು ಮಧ್ಯಾನ ಊಟ ಮುಗಿಸಿಕೊಂಡು ಸಾಯಂಕಾಲ 6:00 ಗಂಟೆಗೆ ಬಂದು ನೋಡಲು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:59/2012 ಕಲಂ. 379  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಗ್ರಾಮಿಣ ಪೊಲೀಸ್ ಠಾಣೆ: ಶ್ರೀ ಷಣ್ಮುಖ ತಂದೆ ಹಣಮಂತ ವಗ್ಗೆ ಸಾ: ಪಟ್ಟಣ ಗ್ರಾಮ ತಾ:ಜಿ: ಗುಲಬರ್ಗಾ ರವರು ನನ್ನ ಮಗ ರಾಕೇಶ ಮತ್ತು ಆತನ ಗೆಳೆಯ ಮರೆಪ್ಪ ಇಬ್ಬರು ಪಟ್ಟಣ ಗ್ರಾಮದಲ್ಲಿರುವ ಗುಂಡಪ್ಪ  ಹೋಟಲ ಪಕ್ಕದಲ್ಲಿರುವ ಅಂಗಡಿಗೆ ಶೇಂಗಾ ಖರೀದಿ ಮಾಡಲು ಹೋದಾಗ ಮಲ್ಲಿಕಾರ್ಜುನ ಬಿಸಗೊಂಡ, ಬಾಬು ಮುತ್ತಿಮೊಡ, ಶಾಂತಪ್ಪ ರಾಯಗೊಂಡ ಇವರು ಬಂದು ಮಲ್ಲಿಕಾರ್ಜುನ ಈತನು ರಾಕೇಶನಿಗೆ ಡಿಕ್ಕಿ ಹೊಡೆದಿದ್ದರಿಂದ ನೋಡಿ, ಶೇಂಗಾ ಖರೀದಿ ಮಾಡಲಿಕ್ಕೆ ಬರುವುದಿಲ್ಲಾ ಎಂದು ಕೇಳಿದ್ದಕ್ಕೆ ಈ ಮೊವರು ಜನರು  ಹೊಲೆಯ ಸೂಳೆ ಮಕ್ಕಳೇ ಅಗಸಿಯಲ್ಲಿ ನಿಮ್ಮದು ಎನು ಕೆಲಸ ಬೈಯ್ಯುತ್ತಾ ಹೊಡೆ ಬಡೆ ಮಾಡಿರುತ್ತಾರೆ. ಯಾಕೆ ಅಂತಾ ಕೇಳಲು ನಾನು ಮತ್ತು ಸಾಗರ ಇವರೊಂದಿಗೆ ಗುಂಡಪ್ಪ ಹೋಟಲ ಹತ್ತಿರ ಸಂಜೆ 7-00 ಗಂಟೆ ಸುಮಾರಿಗೆ ಹೋಗಿ ಮಲ್ಲಿಕಾರ್ಜುನ ಈತನಿಗೆ ಇವರಿಗೆ ಯಾಕೇ ಗ್ರೌಡರೇ ನನ್ನ ಮಗನಿಗೆ ಹೊಡೆದಿದ್ದಿರೀ ಎಂದು ಕೇಳಿದ್ದಕ್ಕೆ ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ ಜಾತಿ ಎತ್ತಿ ಬೈಉದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ. ಗುನ್ನೆ ನಂ. 222/12 ಕಲಂ 504,324, 323 ಸಂ. 34 ಐಪಿಸಿ ಮತ್ತು 3(i), (x) SC/ST P.A. Act 1989  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.