POLICE BHAVAN KALABURAGI

POLICE BHAVAN KALABURAGI

24 June 2012

GULBARGA DIST REPORTED CRIME

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಹಸೀಬ ತಂದೆ ಖದೀರ  ಸಾ: ಬಾರೇ ಹಿಲ್ಸ ಗುಲಬರ್ಗಾ ರವರು ನನ್ನ ಗೆಳೆಯರಾದ ಜಾಹೀದ ತಂದೆ ಭಾಷಾಸಾಬ,ತೌಷೀಫ್ ತಂದೆ ಸಾದೀಕಸಾಬ,ನಿಯಾಜ ತಂದೆ ರಿಯಾಜ ರವರು ಬಳ್ಳಾರಿಯಿಂದ ಗುಲಬರ್ಗಾಕ್ಕೆ ದರ್ಗಾ ದರ್ಶನಕ್ಕೆ ಕುರಿತು ಸ್ಕಾರ್ಪಿಯೋ ನಂ: ಕೆಎ 34- ಟಿಅರ್-1937 ನೇದ್ದರಲ್ಲಿ ಗುಲಬರ್ಗಾಕ್ಕೆ  ಬರುತ್ತಿದೆವೆ ಅಂತಾ ಹೇಳಿದ್ದರು, ಬರುತ್ತಿವ ಬಳ್ಳಾರಿ ಬಿಟ್ಟ ನಂತರ ಅವರು ನನ್ನ ಜೋತೆ ಪೋನ ಸಂಪರ್ಕದದಲ್ಲಿದ್ದರು, ದಾರಿ ಮಧ್ಯ ದಿನಾಂಕ:23/06/2012 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಜಾಹೀದ ಇತನು ಜೇವರ್ಗಿ – ಶಹಾಪೂರದ ರೋಡಿನ ಮುದಬಾಳ (ಬಿ) ಕ್ರಾಸ್ ಹತ್ತಿರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಬ್ರೀಡ್ಜ ಕೆಳಗೆ ಪಲ್ಟಿ ಮಾಡಿದ್ದರಿಂದ,ನಿಯಾಜ ಇತನು ಸ್ಥಳದಲ್ಲಿಯೇ ಸತ್ತಿರುತ್ತಾನೆ. ತೌಸಿಫ ಮತ್ತು ಜಾಹೀದ ಇವರಿಗೆ ಸಣ್ಣ ಮತ್ತು ಭಾರಿಗಾಯಗಳಾಗಿರುತ್ತವೆ. ನಾನು ಅವರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆನೆ. ಜಾಹೀದ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ: 95/2012 ಕಲಂ.279.337.338. 304 (ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 


23 June 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ: ಶ್ರೀ ಪರುಶುರಾಮ ತಂದೆ ಚಂದ್ರಪ್ಪ ಮರಪಳ್ಳಿ ಸಾಃ ಹೂವಿನ ಬಾವಿ ತಾಃ ಚಿಂಚೋಳಿ ರವರು ನಾನು  ದಿನಾಂಕಃ18/09/2011 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಟುಶ್ಯನ್ ಗೆ ಹೋಗುತ್ತಿರುವಾಗ ನಮ್ಮೂರಿನ ಬಾಶಾ ಸಾಬ ತಂದೆ ಹುಸೇನ ಸಾಬ ಸವಾರಿಮಹಬೂಬ ತಂದೆ ಬಾಶಾ ಸಾಬ  ಸವಾರಿ, ಚಿನ್ನು ಸಾಬ ತಂದೆ ಬಾಶಾ ಸಾಬ  ಸವಾರಿನಸೀಮಾ ಬೇಗಂ ಗಂಡ ಬಾಶಾ ಸಾಬ  ಸವಾರಿ ಇವರೆಲ್ಲರೂ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿಗಿಡಕ್ಕೆ ಕಟ್ಟಿ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 62/2012 ಕಲಂ. 341504323324506 ಸಂ. 34 ಐಪಿಸಿ ಕಲಂ. 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಯಪ್ಪ ತಂದೆ ಲಕ್ಷ್ಮಣ ಮಲ್ಲರ   ವ:75  ಉ: ಹಿರಿಯ ನಾಗರೀಕ ಸಾ|| ಸರಕಾರಿ ಗ್ರಂಥಾಲಯ ಹಿಂದುಗಡೆ  ಅಶೋಕ ನಗರ ಗುಲಬರ್ಗಾರವರು ನಾನು ದಿನಾಂಕ 23-06-12 ರಂದು ಬೆಳಿಗ್ಗೆ  7-00 ಗಂಟೆಯ ಸುಮಾರಿಗೆ ಕಣ್ಣಿ ಮಾರ್ಕೇಟ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಸುರೇಶ ಗಣಜಲಖೇಡ ಇವರ ಮನೆಯ  ಎದುರುಗಡೆ ರೋಡಿನ ಮೇಲೆ  ಮೋಟಾರ ಸೈಕಲ ನಂ:ಕೆಎ 32 ಇಬಿ 3226 ನೇದ್ದನ್ನು ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು   ಹೋಗಿರುತ್ತಾನೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 67/2012  ಕಲಂ: 279,338 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ವಿಶ್ವರಾಧ್ಯ ತಂದೆ ಮಲ್ಲಿಕಾರ್ಜುನ ಸ್ವಾಮಿ    ಸಾ; ಸಂಗಮೇಶ್ವರ ನಗರ ಗುಲಬರ್ಗಾರವರು ನಾನು ದಿನಾಂಕ 22-06-12 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನನ್ನ ಸೈಕಲ ಮೇಲೆ ಐವಾಹ-ಶಾಯಿ ರೋಡನಿಂದ ಲಾಹೋಟಿ ಕ್ರಾಸ್ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ  ಮೋಟಾರ ಸೈಕಲ ನಂ:ಕೆಎ 32 ಆರ್ 6739 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು  ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 66/2012  ಕಲಂ: 279,337 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.