POLICE BHAVAN KALABURAGI

POLICE BHAVAN KALABURAGI

05 June 2012

GULBARGA DIST REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ: 4/06/2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಶಂಕರವಾಡಿ ಗ್ರಾಮದ ದಸ್ತಗಿರ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಆಡುತ್ತಿದ್ದಾರೆ, ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶರಣಪ್ಪಾ ಹಿಪ್ಪರಗಿ  ಪಿ.ಐ  ಶಹಾಬಾದ ರವರು ತಮ್ಮ ಸಿಬ್ಭಂದಿಯವರಾದ ಗುಂಡಪ್ಪಾ, ಪರಶುರಾಮ,ಬಸವರಾಜ,ಮತ್ತು ಜೀಪ ಚಾಲಕ ಹಣಮಂತರಾಯ ಎಹಚ.ಸಿ ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಸಂಜು ತಂದೆ ಶಿವಯೋಗಿ ಬಾಗೋಡಿ ಸಾ: ಶಂಕರವಾಡಿ. ರಾಜು ತಂದೆ ಶರಣಪ್ಪಾ ಪರೀಟ ಸಾ: ಶಂಕರವಾಡಿ,ಶಂಕರ ತಂದೆ ಸಿದ್ದಣ್ಣಾ ಉಡಗಿ ಸಾ: ಶಂಕರವಾಡಿ,ನಾಗರಾಜ ತಂದೆ ಬಸಣ್ಣಾ ಚಿತ್ತಾಫೂರ ಸಾ: ಶಂಕರವಾಡಿ, ರವರಿಂದ  ಒಟ್ಟು 530/-ರೂ ನಗದು ಹಣ  ಮತ್ತು ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 78/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ಶಂಕರರಾವ ಮಾಲಿ ಪಾಟೀಲ್  ಸಾ: ಹೇರೂರ ತಾ:ಚಿತ್ತಾಪೂರ ಜಿ: ಗುಲಬರ್ಗಾರವರು ದಿನಾಂಕ: 04-06-2012 ರಂದು 1-00 ಗಂಟೆಗೆ ಹುಮನಾಬಾದ ರೋಡ ತಾವರಗೇರಾ ಕ್ರಾಸ ಹತ್ತಿರ  ಜೀಪ ನಂ.ಕೆ.ಎ.21 ಎಂ. 1028 ನೇದ್ದರ ಚಾಲಕ ತನ್ನ ಜೀಪನ್ನು ಅತೀವೇಗ ಮತ್ತು ನಿಸ್ಕಾಳಜಿತನ ದಿಂದ ನಡೆಯಿಸಿ ಎದುರಿನಿಂದ ಬರುತ್ತಿದ್ದ ಮಾರುತಿ ಸುಜುಕಿ ಎಸ್.ಎಕ್ಸ 4 ನಂ ಕೆ.ಎ.38 ಎಂ.7111 ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಾರನಲ್ಲಿದ ಒಬ್ಬನಿಗೆ ಹಾಗೂ ಜೀಪಿನಲ್ಲಿದ್ದ 7-8 ಜನರಿಗೆ ಸಾದಾ ಹಾಗೂ ಭಾರಿಗಾಯಗಳಾಗಿರುತ್ತವೆ ಜೀಪ ಚಾಲಕ ತನ್ನ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 183/12 ಕಲಂ 279,337,338,ಐಪಿಸಿ ಸಂಗಡ 187 ಐಎಂವಿ ಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ದಿ:04/06/2012 ರಂದು ಮಧ್ಯಾಹ್ನ 12-30 ಗಂಟೆಗೆ ದಮ್ಮೂರ ಕ್ರಾಸ ಹತ್ತಿರ ರಸ್ತೆಯ ಮೇಲೆ ಶರಣಪ್ಪ ತಂದೆ ಚಂದ್ರಪ್ಪ ಪೂಜಾರಿ ಇತನು ಆರಫಾದಿನ ಟಂ ಟಂ ನಂಬರ ಕೆಎ 32 ಎ 8970 ನೇದ್ದರಲ್ಲಿ ಕಳಿತುಕೊಂಡು ಹೋಗುತ್ತಿರುವಾಗ ದಮ್ಮೂರ ಕ್ರಾಸ ಹತ್ತಿರ ಟಂ ಟಂ ಚಾಲಕ ಹಣಮಂತ ಇತನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿದ್ದರಿಂದ ಟಂಟಂ ಪಲ್ಟಿಯಾಗಿ ಬಿದ್ದಿದ್ದರಿಂದ ಭಾರಿಗಾಯವಾಗಿರುತ್ತವೆ ಅಂತಾ ಶ್ರೀ ರಮೇಶ ತಂದೆ ಮಾಣಿಕಪ್ಪ ಪೂಜಾರಿ ಸಾ:ದಮ್ಮೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

04 June 2012

GULBARGA DIST REPORTED CRIMES


ಕೊಲೆ ಪ್ರಕರಣದ ಪ್ರಮುಖ ಆರೋಪಿ ನ್ಯಾಯವಾದಿ  ಸೈಯದ ಮಜರ ಹುಸೇನ ಬಂಧನ, ಕೊಲೆ ಕೃತ್ಯಕ್ಕೆ ಬಳಸಿದ ಕಾರ, ಮಾರಕಾಸ್ತ್ರ ಜಪ್ತಿ .   
ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಅಪರ್ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಗ್ರಾಮಾಂತರ ಉಪ-ವಿಭಾಗದ ಉಪಾಧೀಕ್ಷರಾದ  ಹೆಚ. ತಿಮ್ಮಪ್ಪ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಯಾದ ಶ್ರೀ ಚಂದ್ರಶೇಖರ ಬಿಪಿ ವೃತ್ತ ನಿರೀಕ್ಷಕರು ಎಂ.ಬಿ.ನಗರ ಮತ್ತು ಪಂಡಿತ ಸಗರ ಪೊಲೀಸ್ ಸಬ್- ಇನ್ಸಪೇಕ್ಟರ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ, ಸಂಜೀವಕುಮಾರ ಪಿ.ಎಸ.ಐ ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಶಂಕರ, ಚಂದ್ರಕಾಂತ, ಪ್ರಭಾಕರ, ಅಶೋಕ, ಕಮಲರಾಯ, ಅರ್ಜುನ ರವರು ಕೂಡಿಕೊಂಡು ದಿನಾಂಕ: 03-06-2012 ರಂದು ಸೇಡಂ ಬಸ್ಸ ನಿಲ್ದಾಣದ ಹತ್ತಿರ ಕೊಲೆ ಮಾಡಿದ ಆರೋಪಿಯ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಮಾಲಗತ್ತಿ ಸಿಮಾಂತರದ ಸರ್ವೆ ನಂ: 45, ರಲ್ಲಿ 1 ಎಕರೆ 45 ಗುಂಟೆ ಜಮಿನಿನ ವಿಷಯದಲ್ಲಿ ಮಹದಮ ಹಾರೂನ ತಂದೆ ಜಾನಿಮಿಯ್ಯಾ ಸಾ|| ನೂರಾನಿ ಮೋಹಲ್ಲಾ ಗುಲಬರ್ಗಾ ಇತನನ್ನು ಕೊಲೆ ಮಾಡಿದ ಸೈಯದ ಮಹರ ಹುಸೇನ ತಂದೆ ಸೈಯದ ಇಸ್ಮಾಯಿಲ್ ವ|| 36 ವರ್ಷ ಸಾ|| ನೂರಾನಿ ಮೋಹಲ್ಲಾ ಹಾಗರಗಾ ರೋಡ ಗುಲಬರ್ಗಾ ಇತನನ್ನು ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿ ವಿಚಾರಣೆ ಮಾಡಲಾಗಿ ದಿನಾಂಕ: 14-03-2012 ರಂದು ಮಹಮದ ಹಾರೂನ ಇತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ್ದು, ಕೊಲೆ ಮಾಡಲು ಉಪಯೋಗಿಸಿದ ಮಾರಕಾಸ್ತ್ರಗಳು, ಕಾರು ಆರೋಪಿತನಿಂದ ಜಪ್ತಿ ಮಾಡಕೊಂಡಿರುತ್ತಾರೆ.ಅತ್ಯಂತ ಸೂಕ್ಷ್ಮ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಸೈಯದ ಮಜರ ಹುಸೇನ ವಕೀಲ ಇತನನ್ನು  ನಿನ್ನೆ ರಾತ್ರಿ ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರು  ಪ್ರಶಂಶಸಿ  ಬಹುಮಾನ ಘೋಷಣೆ ಮಾಡಿರುತ್ತಾರೆ 
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ಅಂಬರಾಯ ನಾಟೀಕಾರ ಗುಲಬರ್ಗಾ ಸಾ|| ಎಸ್.ಎಮ್. ಕೃಷ್ಣಾ ಕಾಲೋನಿ ಡಬರಾಬಾದ್ ಗುಲಬರ್ಗಾರವರು ನ್ನ ಆಟೋರಿಕ್ಷಾ ನಂ.ಕೆ.ಎ-32 4648 ನೇದನ್ನು ಕಳೆದ 7 ತಿಂಗಳ ಹಿಂದೆ ಗುಲಬರ್ಗಾ ನಗರದ ಬ್ರಹ್ಮಪುರ ಬಡಾವಣೆಯ ಕಲ್ಯಾಣಿ ಬಾಳಿಕಾಯಿ ಈತನಿಗೆ 25,000/- ರೂ.ಗಳಿಗೆ ಮಾರಾಟ ಮಾಡಿದ್ದು, ಅದರಲ್ಲಿ 10,000/- ನಗದು ಕೊಟ್ಟಿದ್ದು, ಉಳಿದ ಹಣ ಸದರಿ ಆಟೋ ಮೇಲೆ ಪೈನಾನ್ಸ್ ಇದ್ದುದರಿಂದ ಕಲ್ಯಾಣಿ ಈತನೆ ಕಟ್ಟಿಕೊಳ್ಳಬೇಕೆಂದು ಮಾತುಕತೆ ಆಗಿರುತ್ತದೆ.  ಕಲ್ಯಾಣಿ ಈತನು ಪೈನಾನ್ಸ್ ಹಣ ಕೊಡದೇ ಇರುವದರಿಂದ ನನಗೆ ಪೈನಾನ್ಸ್ ದವರು ಕೇಳುತ್ತಿದ್ದರು, ಕಾರಣ ಕಲ್ಯಾಣಿ ಈತನಿಗೆ ಪೈನಾನ್ಸ್ ಹಣ ಏಕೆ ಕಟ್ಟಿರುವದಿಲ್ಲಾ ಅಂತಾ ಕೇಳಿದಕ್ಕೆ, ದಿನಾಂಕ 03-06-2012 ರಂದು ರಾತ್ರಿ 8 ಗಂಟೆ ಸುಮಾರಿಗೆ ಬ್ರಹ್ಮಪುರ ಬಡಾವಣೆಯ ಲಾಲಗೇರಿ ಕ್ರಾಸ್ ಹತ್ತಿರ ಕಲ್ಯಾಣಿ ಇತನು ನನಗೆ ಹೊಡೆದು ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 39/12 ಕಲಂ 341, 323, 504  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ; ಶ್ರೀ ಚಂದ್ರಕಾಂತ ತಂದೆ ಶರಣಪ್ಪಾ ತಾಂಡೂರ ಸಾ:ಮನೆ ನಂ.1545/86 ಶಿವಾಜಿ ನಗರ ಗುಲಬರ್ಗಾ ವರು ನನ್ನ ಹಿರೋ ಹೊಂಡಾ ಪ್ಯಾಶನ ಪ್ಲಸ ಕಪ್ಪು ಬಣ್ಣ ಮೋಟಾರ ಸೈಕಲ ನಂ: ಕೆಎ 32 ಕ್ಯೂ-5042 ನೇದ್ದು, ದಿನಾಂಕ:05/05/2012 ರಂದು ರಾತ್ರಿ 8:00 ಗಂಟೆಗೆ ಗಂಜ ಕಾಲೋನಿಯ ಡಾ||ಮಂದಕನಳ್ಳಿಯವರ ಆಸ್ಪತ್ರೆಯ ಎದುರುಗಡೆ ನಿಲ್ಲಿಸಿದ್ದಿ,  ನನ್ನ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾಗಿರುವ ಮೋಟಾರ ಸೈಕಲ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ ನಂ.51/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME



ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ : ಶ್ರೀ.ಅಲಮ್ ತಂದೆ ಇಬ್ರಾಹಿಂ ಶೇಖ ಉ: ಮ್ಯಾನೇಂಜರ್  ಹಟಕೇಶ್ವರ್  ಟ್ರಾನ್ಸ್ ಪೋರ್ಟ   ಸಾ||ಮೂಡನಿಂಬಾ ತಾ|| ಮಾಢಾ  ಜಿಲ್ಲಾ ಸೊಲಾಪೂರ ರಾಜ್ಯ;ಮಹಾರಾಷ್ಟ ರವರು ನಾನು ದಿನಾಂಕ  02/06/2012 ರಂದು ಬೆಳಿಗ್ಗೆ ಮನೆಯಲ್ಲಿದ್ದಾಗ   ನನ್ನ ಟ್ಯಾಂಕರ  ಲಾರಿ ನಂ ಎಮ್,ಹೆಚ್,-12 ಹೆಚ್,ಡಿ-1205 ನೇದ್ದರ ಚಾಲಕನಾದ ಮುಬಾರಕ್ ತಂದೆ  ಮೈನೋದ್ದಿನ ಪಠಾಣ ಇತನು ನಾನು ಸೇಡಂ ದಿಂದ ಲಾರಿಯಲ್ಲಿ ಸಿಮೇಂಟ ಲೋಡ ಮಾಡಿಕೊಂಡು  ಪೂನಾಕ್ಕೆ  ಹೊರಟಾಗ  ಹಿರೋಳ್ಳಿ  ಗ್ರಾಮದ ಅಶೋಕ ದೇಶಮುಖ ಇವರ ಹೋಲದ ಹತ್ತಿರ ಲಾರಿಯನ್ನು ಆಯ ತಪ್ಪಿ ರೋಡಿನ ಎಡಗಡೆ ಪಲ್ಟಿಯಾಗಿರುತ್ತದೆ ಅಂತಾ ತಿಳಿಸಿದ್ದರಿಂದನಾನು    ಸ್ಥಳಕ್ಕೆ  ಬಂದು  ನೂಡಲಾಗಿನಮ್ಮ  ಸದರಿ ಟ್ಯಾಂಕರ  ಲಾರಿಯು  ಪಲ್ಟಿಯಾಗಿರುತ್ತದೆ.  ಲಾರಿ ಚಾಲಕನ ಅಲಕ್ಷತನದಿಂದ ಲಾರಿ ಪಲ್ಟಿಯಾಗಿದ್ದರಿಂದ ಕಾನೂನು ಕ್ರಮ ಕೈಕೊಳ್ಳಿ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ: 25/2012 ಕಲಂ 279 ಐಪಿಸಿ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.