POLICE BHAVAN KALABURAGI

POLICE BHAVAN KALABURAGI

03 June 2012

GULBARGA DIST REPORTED CRIMES


Jai Bhavani Internet Café ರವರು On-Line ಮುಖಾಂತರ ನಾಗರೀಕರ ಪಡಿತರ ಚೀಟಿಯಲ್ಲಿ ವಂಚನೆ ಮಾಡಿದ ಬಗ್ಗೆ:
ರೋಜಾ ಪೊಲೀಸ್ ಠಾಣೆ: ಗುಲಬರ್ಗಾ ನಗರದಲ್ಲಿ ಆನಲೈನ್ ಮುಖಾಂತರ ಪಡಿತರ ಚೀಟಿ ವಿತರಣೆ ನೀಡುವದಕ್ಕೆ ಪಡಿತರ ಚೀಟಿಗೆ ಅವಶ್ಯಕತೆ ಇರುವ ಭಾವಚಿತ್ರ ಮತ್ತು ಜೀವ ಮಾಪಕ ಸೆರೆ ಹಿಡಿಯುವದಕ್ಕಾಗಿ ಗುಲಬರ್ಗಾ ನಗರದ ವಾರ್ಡ ನಂ.5 ರಿಂದ ವಾರ್ಡ ನಂ 8 ರಲ್ಲಿ ವಾಸವಾಗಿರುವ ನಾಗರೀಕರ ಪಡಿತರ ಚೀಟಿ ಭಾವಚಿತ್ರ ಹಾಗೂ ಜೀವ ಮಾಪಕ ಸೆರೆ ಹಿಡಿಯುವುದಕ್ಕಾಗಿ ಶ್ರೀ ಆನಂದ ಪೂಜಾರಿ ಜೈಭವಾನಿ ಇಂಟರನೆಟ್ ಕೆಫೆ ಗುಲಬರ್ಗಾ ರವರಿಗೆ ಹಕ್ಕನ್ನು [ಪ್ರಾಂಚೈಸಿ] ಕೊಡಲಾಗಿತ್ತು. ಶ್ರೀ ಸೈಯ್ಯದ ಮುಸ್ತಖ ಪಾರೂಕ ಸಾ:ಮಹಡಿ ಮೊಹಲ್ಲಾ ಮೋಮಿನಪೂರ ಗುಲಬರ್ಗಾ ಇತನು ಆನ್ ಲೈನ್ ಮುಖಾಂತರ ಪಡಿತರ ಚೀಟಿಗಾಗಿ ಅರ್ಜಿ ಸಂ.164008 ದಿನಾಂಕ:22/11/2011 ರ ಪ್ರಕಾರ ಸಲ್ಲಿಸಿದ ಆನ ಲೈನ್ ಅರ್ಜಿಯ ಮೇಲೆ ತಿದ್ದುಪಡಿ ಮಾಡಿ ಡಾ:ಅಜೀತಸಿಂಗ ಠಾಕೂರ ಸಾ:ಮಕ್ತಾಂಪೂರ ಗುಲಬರ್ಗಾ ರವರಿಂದ ಹೆಚ್ಚಿನ ಹಣ ಪಡೆದು, ಅವರ ಕುಟುಂಬದವರ ವಿವರಗಳನ್ನು ನಮೂದಿಸಿ ಅವರುಗಳ ಭಾವ ಚಿತ್ರ ತೆಗೆದಿರುತ್ತಾರೆ. ಶ್ರೀ ಆನಂದ ಪೂಜಾರಿ ಮಾಲೀಕರು ಶ್ರೀ ಜೈ ಭವಾನಿ ಇಂಟರನೆಟ್ ಕೆಫೆ ನೇಹರು ಗಂಜ ಗುಲಬರ್ಗಾ ರವರು ಸರಕಾರಕ್ಕೂ ಮತ್ತು ಸೈಯ್ಯದ ಮುಸ್ತಫಾ ಫಾರೂಕ ಇವರಿಗೆ  ವಂಚನೆ ಮಾಡಿ ಸೈಬರ ಅಪರಾಧ ಮಾಡಿರುತ್ತಾರೆ.  ಸದರಿಯವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು  ಅರ್ಜಿ ಸಂ.164008 ಸೈಯ್ಯದ ಮುಸ್ತಖ ಫಾರೂಕ ಸಾ:ಮಹಡಿ ಮೊಹಲ್ಲಾ ಗುಲಬರ್ಗಾ ರವರು ಸದರಿ ಅರ್ಜಿ ಸಂಖ್ಯೆ ಮೇಲೆ ಡಾ:ಅಜೀತಸಿಂಗ ಠಾಕೂರ ಇವರ ಹೆಸರು ಸೇರಿಸಿದ ದಾಖಲೆಯ ಪ್ರತಿಗಳು ಹಾಗೂ ಶ್ರೀ ಆನಂದ ಪೂಜಾರಿಯವರಿಗೆ ಆನಲೈನ್ ಮುಖಾಂತರ ಪಡಿತರ ಚೀಟಿ ಭಾವಚಿತ್ರ ಸೆರೆ ಹಿಡಿಯಲು ನೀಡಲಾದ ಹಕ್ಕಿನ ಆದೇಶದ ಪ್ರತಿ ಇದರೊಂದಿಗೆ ಲಗತ್ತಿಟ್ಟು ಶ್ರೀಮತಿ ಪ್ರೇಮಿಲಾಬಾಯಿ ಗಂಡ ದಿ:ಲಕ್ಷ್ಮಣ  ಗುಜ್ಜಾರಿ ಆಹಾರ ನೀರಿಕ್ಷಕರು ವಾರ್ಡ ನಂ.5 ರಿಂದ 8 ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂ:50/2012 ಕಲಂ.420,468,ಐಪಿಸಿ ಮತ್ತು ಕಲಂ.66, 66[ಡಿ] IT Act 2000 ನೇದ್ದರ ಪ್ರಕಾರ ಪ್ರಕರಣ ದಾಖಲ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಸೂರ್ಯಕಾಂತ ತಂದೆ ಲಕ್ಷ್ಮಣ ಕಟಬಾ ಉ|| ಸರ್ಕಾರಿ ನೌಕರ, ಸಾ|| ದೇವಿ ನಗರ ಅಳಂದ ರೋಡ ಗುಲಬರ್ಗಾ ರವರು ನನ್ನ ಹೀರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ ಕೆಎ-32/ವಾಯ್-3880 ನೇದ್ದನ್ನು ಖರೀದಿಸಿದ್ದು, ದಿನಾಂಕ 31-05-2012 ರಂದು ನನ್ನ ಕರ್ತವ್ಯ ಮುಗಿಸಿಕೊಂಡು ರಾತ್ರಿ 9-00  ಗಂಟೆಗೆ ಮನೆಗೆ ಬಂದು ಮೊಟಾರ್ ಸೈಕಲ್ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ 01-06-2012 ರಂದು ಬೆಳಿಗ್ಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ ಮೊಟಾರ್ ಸೈಕಲ್ ಇರಲಿಲ್ಲಾ,  ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 38/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ನಾಗೇಶ ತಂದೆ ಗುಂಡಪ್ಪ ನಾಟಿಕರ ಸಾ|| ತರನಳ್ಳಿ ರವರು  ನಾನು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ:01/06/2012 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಕ್ರಿಕೇಟ ಆಟ ಆಡುತ್ತಿದ್ದೇವು ನಾನು ಬಾಲಿಂಗ್ ಮಾಡುತ್ತಿದ್ದೆ,  ಮಶಾಕ ಇತನು ಬ್ಯಾಟಿಂಗ ಮಾಡುತ್ತಿದ್ದ ಆಗ ನಾನು ಔಟ ಅಂದೆನು ಅದಕ್ಕೆ ಅವನು ಬಂದವನೆ ಬ್ಯಾಟನಿಂದ ನನ್ನ ಎಡಕಿವಿಯ ಮೇಲೆ ಹೊಡೆದನುದರಿಂದ ನನ್ನ ಎಡ ಕಿವಿಯಲ್ಲಿ ರಕ್ತ ಬರಹತ್ತಿತ್ತು ಮತ್ತು ತಲೆಗೆ ಒಳ ಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 77/2012 ಕಲಂ 324 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ರಾಮಪ್ಪ ಮಾನಕರ ಸಾ|| ಅಫಜಲಪೂರರವರು ನನ್ನ ಮಗನು ಅಫಜಲಪೂರ ಪಟ್ಟಣದ ಶೇಳ್ಳಗಿ ಮನೆ ಹತ್ತಿರ ಮನೆ ಭಾಡಿಗೆ ಹಿಡಿದು ಕಂಪ್ಯೂಟರ ತರಬೇತಿ ಕೇಂದ್ರ ಇರುತ್ತದೆ. ತರಬೇತಿ ಕೇಂದ್ರದ ಮುಂದೆ ನಿಲ್ಲಿಸಿರುವ ಮೊಟಾರ ಸೈಕಲ ನಂ ಕೆಎ 32 ಅರ್-4962 ನೇದ್ದು  ದಿನಾಂಕ: 27-04-2012 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 98/12 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

02 June 2012

GULBARGA DIST REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ರೋಜಾ ಪೊಲೀಸ್ ಠಾಣೆ : ಶ್ರೀ ಸುನೀಲ ಕುಮಾರ ತಂದೆ ಲಕ್ಕಪ್ಪಾ ಗೋಳಾ ಉ:ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಅಕೌಂಟೆಂಟ ಕೆಲಸ ಜಾ:ಪರಿಶಿಷ್ಟ ಜಾತಿ ಸಾ: ಮನೆ ನಂ.2-506 ಜಗತ್ ಭೀಮ ನಗರ ಗುಲಬರ್ಗಾರವರು ನಮ್ಮ ಸಂಸ್ಥೇಯ ಅಧ್ಯಕ್ಷಕರು ಡಾ:ವಿಜಯಕುಮಾರ ಕಲಮಳಕರ್,ಉಪಾಧ್ಯಕ್ಷರು ಶ್ರೀ ಹೊನ್ನಶೆಟ್ಟೆಪ್ಪಾ ಶಿವಮೂರ್ತಿ ಅಂತಾ ಇರುತ್ತಾರೆ ನಮ್ಮ ಶಿಕ್ಷಣ ಸಂಸ್ಥೆಯು ಹೌಸಿಂಗ ಬೋರ್ಡ ಗಂಜ ಕಾಲೋನಿಯಲ್ಲಿ ಇದೆ, ದಿನಾಂಕ:02/06/2012 ರಂದು ಬೆಳಿಗ್ಗೆ ಆದರ್ಶ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹೊನಶೆಟ್ಟೆಪ್ಪಾ ಶಿವಮೂರ್ತಿ ಉಪಾಧ್ಯಕ್ಷರು ಇವರು ನಮ್ಮ ಸಂಸ್ಥೆಯ ಅಧ್ಯಕ್ಷರ ಚೇಂಬರದಲ್ಲಿ ಕುಳಿತುಕೊಂಡು, ನನಗೆ ಅವರ ಚೆಂಬರಕ್ಕೆ ಕರೆದು ಅವಾಚ್ಯವಾಗಿ ನೀನು ಅಡ್ಮಿಶನ ಮಾಡಿದ ಲೆಕ್ಕ ಪತ್ರ ತೆಗೆದುಕೊಂಡು ಬಾರಲೇ ಅಂತಾ ನನಗೆ ಏಕವಚನದಲ್ಲಿ ಕರೆದಿದ್ದು, ನಾನು ಮರ್ಯಾದಿ ಪೂರ್ವಕವಾಗಿ ಮಾತನಾಡಿ ಸಾಹೇಬರೆ ನನ್ನ ಹತ್ತಿರ ಲೆಕ್ಕ ಪತ್ರ ಸರಿಯಾಗಿ ಬರೆದಿಲ್ಲಾ ಕಚ್ಚಾದಲ್ಲಿ ಬರೆದಿಟ್ಟಿರುತ್ತೇನೆ, ನಿಮಗೆ ಸರಿಯಾಗಿ ಲೆಕ್ಕಪತ್ರ ಬೇಕಾದರೆ ಮೇಡಂ ಹತ್ತಿರ ಇರುತ್ತದೆ ಅಂತಾ ಹೇಳಿದೆನು. ಅದಕ್ಕೆ ಅವರು ನನ್ನ ಮೇಲೆ ಕೋಪ ಮಾಡಿಕೊಂಡು  ಜಾತಿ ಎತ್ತಿ ಬೈದು  ಕೈಯಿಂದ ಕಪಾಳದ ಮೇಲೆ ಮತ್ತು ಎದೆಯ ಮೇಲೆ ಜೋರಾಗಿ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ರೋಜಾ ಠಾಣಾ ಗುನ್ನೆ ನಂ:49/2012 ಕಲಂ: 323, 504  ಐ.ಪಿ,ಸಿ  ಮತ್ತು 3 [1], [10]  SC / ST [ PREVENTION OF ATROCITIES ]  ACT 1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಕು:ಮಂದಿರಾ ತಂದೆ ದತ್ತು ಮಾಲೀಪಾಟೀಲ ಸಾ:ಪ್ಲಾಟ ನಂ 183  ಜನತಾ ಲೇಔಟ ಕರುಣೇಶ್ವರ ನಗರ ಗುಲಬರ್ಗಾರವರು ನಾನು ದಿನಾಂಕ 02-06-2012 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಆರ್.ಪಿ ಸರ್ಕಲ ಹತ್ತಿರ ಬರುವ ಡಾ: ವಿಜಯ ಮೋಹನ ಕ್ಲೀನಿಕ ಎದುರುಗಡೆ ರೋಡಿನ ಮೇಲೆ ಅಟೋರಿಕ್ಷಾ ನಂ ಕೆಎ-32 ಬಿ-3794 ನೇದ್ದರಲ್ಲಿ ಪ್ರಯಾಣಿಸುತ್ತಿದಾಗ ಅಟೋರಿಕ್ಷಾ ಚಾಲಕನು ತನ್ನ ಅಟೋರಿಕ್ಷಾವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಬರುತ್ತಿರುವ ಮೋಟಾರ ಸೈಕಲ ನಂ ಕೆಎ-32 ವಾಯ್-2350 ನೇದ್ದರ ಸವಾರನಿಗೆ ಮುಖಾಮುಖಿ ಡಿಕ್ಕಿ ಪಡಿಸಿದರಿಂದ ನನಗೆ ಮತ್ತು ಇನ್ನೂ 2 ಜನ ಜನರಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2012  ಕಲಂ: 279, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.