POLICE BHAVAN KALABURAGI

POLICE BHAVAN KALABURAGI

19 April 2012

GULBARGA DIST REPORTED CRIME

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಕು||ಗುರುಬಾಯಿ ತಂದೆ ವಿರೂಪಾಕ್ಷ ಹೀರೆಮಂಠ ಸಾ|| ಹಳೆ ರೇಡಿಯೂ ಸ್ಟೇಷನ ಹಿಂದುಗಡೆ ಸಂಗಮೇಶ್ವರ ಲೇಔಟ ಗುಲಬರ್ಗಾರವರು ದಿನಾಂಕ:18-04-2012 ರಂದು ಮಧ್ಯಾಹ್ನ 1-30 ಗಂಟೆಗೆ ಮನೆಯಿಂದ ರಾಷ್ಟ್ರಪತಿ ಸರ್ಕಲದಿಂದ ರಾಮಮಂದಿರ ರೋಡ ಮಧ್ಯದಲ್ಲಿರುವ ಶ್ರೀಹರಿ ನಗರದ ಕೃಷ್ಣಾ ಗ್ರಾಮಿಣ ಬ್ಯಾಂಕ್ ಬ್ಯಾಂಕಿಗೆ ಹಣ ಕಟ್ಟಿ ವಾಪಸ್ಸು ರಸ್ತೆ ದಾಟಿ ಬರುತ್ತಿರುವಾಗ ಕೃಷ್ಣಾ ಗ್ರಾಮಿಣ ಬ್ಯಾಂಕ್ ಸಮೀಪ ರೋಡ್ ಮೇಲೆ ಮೋಟಾರ ಸೈಕಲ ನಂ ಕೆಎ-32 9936 ನೇದ್ದರ ಚಾಲಕ ದೊಂಡಿರಾಮ ತಂದೆ ಲಕ್ಷ್ಮಣ ಇಂಗಳೆ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

18 April 2012

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಸಂಜಿವಕುಮಾರ ತಂದೆ ಸಿದ್ರಾಮ ಉ|| ಚರ್ಚನಲ್ಲಿ ಫಾಸ್ಟರ್ ಸಾ|| ಮನೆ ನಂ 1-949/2/585 ಜಿಡಿಎ ಲೇಔಟ ಕೊರಂಟಿ ಹನುಮಾನ ಗುಡಿ ಹತ್ತಿರ ಗುಲಬರ್ಗಾರವರು ನಾವು ದಿನಾಂಕ:16-04-2012 ರಂದು ರಾತ್ರಿ 8-00 ಗಂಟೆಗೆ ಮನೆ ಕೀಲಿ ಹಾಕಿಕೊಂಡು ನಮ್ಮ ಅಣ್ಣನ ಮನೆಗೆ ಹೋಗಿದ್ದು ದಿನಾಂಕ: 17-04-2012 ರಂದು ಬೆಳಗ್ಗೆ 7-00 ಗಂಟೆಗೆ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರದಿದ್ದು ಒಳಗೆ ಹೋಗಿ ನೋಡಲಾಗಿ ಗೃಹ ಉಪಯೋಗ ಸಾಮನುಗಳು ಒಟ್ಟು ಅಕಿ 24500/- ರೂ ಮೌಲ್ಯದ ಸಾಮಾನುಗಳು ಕಳ್ಳತನವಾಗಿದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 53/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ : ಶ್ರೀ ಭಿಮರಾವ ಮಾಲಿ ಸಾ|| ಗಾಜಿಪೂರ ಗುಲಬರ್ಗಾರವರು ನಾನು ದಿನಾಂಕ:17-04-2012 ರಂದು ಸಾಯಂಕಾಲ 6-00 ಗಂಟೆಗೆ ರೈಲ್ವೆ ಸ್ಟೇಷನ ಹತ್ತಿರ ಇರುವ ಜಿ-ಶಾನ ಹೋಟೆಲ್ ದಲ್ಲಿ ಚಹಾ ಕುಡಿದು ಬರುವಾಗ ಪ್ಯಾಂಟಿನ ಜೇಬಿನಲ್ಲಿದ್ದ ಆಪ್ಯಾಲ್ ಐ ಫೊನ ಸೆಲ್ ನಂ 9008609888 ಐ.ಎಮ್.ಇ.ಐ ನಂ 013029004344614 ಅಕಿ 44000/- ರೂ ನೇದ್ದನ್ನು ಯಾರೋ ಕಳ್ಳರೂ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಜಹಾಂಗೀರ ತಂದೆ ರಹಮಾನ ಸಾಬ ಸಾ:ಶಾಸ್ತ್ರಿಚೌಕ ಲೋಹಾರ ಗಲ್ಲಿ ಶಹಾಬಾದ ರವರು ನನಗೆ ದಿನಾಂಕ 10/02/2011 ಮತ್ತು 30/03/2012 ರಂದು ಭರತ ಪವಾರ ಸಂಗಡ ಇನ್ನೂ 4 ಜನರು ಕೂಡಿಕೊಂಡು ನಾನು ತೆಗೆದುಕೊಂಡ ಸಾಲವನ್ನು ಕೊಡಬೇಕಾದ ಅವಧಿಯೊಳಗೆ ಕೊಡಲಾರದಕ್ಕೆ ಭರತ ಪವಾರ ಸಂಗಡ 4 ಜನರು ಅವಾಚ್ಯ ಶಬ್ದಗಳಿಂದ ಬೈದು ಎತ್ತಿಕೊಂಡು ಹೋಗಿ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:39/2012 ಕಲಂ 144, 420, 344, 504, 506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ 5 ಜನ ಕೊಲೆ ಆರೋಪಿತರ ಬಂದನ:

ದಿನಾಂಕ:14/04/2012 ರಂದು ಡಾ||ಬಾಬಾ ಸಾಬ ಅಂಬೇಡ್ಕರ ರವರ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಕಾಲಕ್ಕೆ ಸಚಿನ ಇತನೊಂದಿಗೆ ರಾತ್ರಿ ಚೌಕ್ ಸರ್ಕಲ್ ನಲ್ಲಿ ಸೂರ್ಯಕಾಂತ ಭೀಮನಗರ, ಮಲ್ಲು ಮತ್ತು ರಾಜು ತೆಲ್ಲೂರ ಸಾ:ಆದರ್ಶ ನಗರ ಕಾಲೋನಿ ಇವರು ವಿನಾಃಕಾರಣ ಜಗಳ ತೆಗೆದು ಹೊಡೆಬಡೆ ಮಾಡಿದ್ದರು ಮತ್ತೆ ಅದೇ ವೈಮನಸ್ಸಿನಿಂದ ದಿನಾಂಕ:16/04/2012 ರಂದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ರಾಮಜಿ ನಗರ ರಸ್ತೆಯ ಮೇಲೆ ಸಚಿನ, ಇತನು ಕಿರಣ & ವಿಜಯ ಕುಮಾರ ಸಂಗಡ ನಿಂತಾಗ ಮಲ್ಲು ಕ್ಯಾಂಟಿನ ಹಾಗು ಇನ್ನು 4 ಜನರೊಂದಿಗೆ ಅಟೋರಿಕ್ಷಾದಲ್ಲಿ ಬಂದು ಸಚೀನ ತಂದೆ ಅರ್ಜುನ ಸಿಂದಗಿ ವಯ:18 ವರ್ಷ, ಸಾ||ರಾಮಜೀ ನಗರ ಇತನನ್ನು ಒಂದು ಆಟೋ ರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಅಪಹರಿಸಿಕೊಂಡ ಹೋದ ಸಚೀನ ಇತನಿಗೆ ಇಟಗಾ ಗ್ರಾಮದ ಸೀಮಾಂತರದಲ್ಲಿರುವ ಹಳ್ಳದ ನೀರಿನಲ್ಲಿ ಮುಳುಗಿಸಿ, ಕೆಸರಿನಲ್ಲಿ ತುಳಿದು, ಉಸಿರುಗಟ್ಟಿಸಿ ಕೊಲೆಮಾಡಿರುತ್ತಾರೆ.ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿರುತ್ತದೆ.

ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಅಪಹರಣನಾದ ಸಚಿನ ಇತನ ಪತ್ತೆ ಮಾಡಲು ಮತ್ತು ಆರೋಪಿತರನ್ನು ದಸ್ತಗಿರಿ ಮಾಡಲು ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಶ್ರೀ ಎ.ಡಿ ಬಸಣ್ಣನವರ ಡಿಎಸಪಿ (ಬಿ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಈ ತನಿಖಾ ತಂಡಗಳ ನೇತ್ರತ್ವವನ್ನು ಶ್ರೀ ಡಿ.ಜಿ ರಾಜಣ್ಣ ಪೊಲೀಸ್ ಇನ್ಸಪೇಕ್ಟರ ಮತ್ತು ಶ್ರೀ ಬಿ.ಪಿ.ಚಂದ್ರಶೇಖರ ವೃತ್ತ ನಿರೀಕ್ಷಕರು ಮಹಾತ್ಮ ಬಸವೇಶ್ವರ ನಗರ ರವರು ಹಾಗು ಅವರ ಸಿಬ್ಬಂದಿಯವರಿಗೆ ವಹಿಸಿದ್ದು, ಈ ತನಿಖಾ ತಂಡದವರು ದಿನಾಂಕ: 18-04-2012 ರಂದು ಹುಮನಬಾದ ಮತ್ತು ಸೋಲಾಪೂರದಲ್ಲಿ ಕಾರ್ಯಚರಣೆ ನಡೆಸಿ 5 ಆರೋಪಿತರನ್ನು ಬಂದಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ತಲೆ ಮರೆಸಿಕೊಂಡಿರುವ ಆರೋಪಿಯ ಬಂದನಕ್ಕೆ ವ್ಯಾಪಕ ಜಾಲ ಬಿಸಿ ಕಾರ್ಯಚರಣೆ ಜಾರಿಯಲ್ಲಿರುತ್ತದೆ. ದಸ್ತಗಿರಿಯಾದ ಆರೋಪಿತರ ವಿವರ ಈ ಕೆಳಕಂಡಂತೆ ಇರುತ್ತದೆ.1) ಮಲ್ಲು @ ಮಲ್ಲಿಕಾರ್ಜುನ ತಂದೆ ಹುಸನಪ್ಪಾ ಬೆಣ್ಣೂರ,2) ದಿನೇಶ ತಂದೆ ಬಾಬುರಾವ ಟೆಂಗೆ,3) ಯಶ್ವಂತ ತಂದೆ ಶಿವಶರಣಪ್ಪಾ ಬಪ್ಪನ,4) ಸಚಿನ ತಂದೆ ಪ್ರಕಾಶ ರಾಜನಾಳ,5) ಮಲ್ಲಿಕಾರ್ಜುನ ತಂದೆ ಜಗನಾಥ ನಿಂಬರ್ಗಾ ಎಲ್ಲರೂ ಸಾ|| ಭಿಮನಗರ ಗುಲಬರ್ಗಾ .