POLICE BHAVAN KALABURAGI

POLICE BHAVAN KALABURAGI

25 November 2011

Gulbarga Dist Reported Crime

ಹಲ್ಲೆ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಕಾಂತಾಬಾಯಿ ಗಂಡ ಗೌರಿಶಂಕರ ದೇಶಟ್ಟಿ ಸಾ|| ದೇವಂತಗಿ ರವರು ನಮ್ಮ ಮನೆಗೆ ಪಕ್ಕದಲ್ಲಿ ಶರಣಬಸಪ್ಪ ತಂದೆ ತಿಪ್ಪಣ್ಣಾ ದೇಶಟ್ಟಿ ಮನೆ ಇದ್ದು ಇಬ್ಬರೂ ಅಣ್ಣತಮ್ಮಂದಿರಾಗಬೇಕು ಮನೆಯ ಮುಂದಿನ ಕಟ್ಟೆಯು ಇಬ್ಬರ ಮಧ್ಯದಲ್ಲಿದ್ದು ಮಹಾದೇವಿ ಗಂಡ ತಿಪ್ಪಣ್ಣಾ ಇವಳು ಬಟ್ಟೆ ಒಗೆದ ನೀರು ಕಟ್ಟೆಯ ಮೇಲೆ ಚೆಲ್ಲಿದ್ದು, ಚೆಲ್ಲಿದ್ದ ನೀರು ನಮ್ಮ ಮನೆಯ ಒಳಗೆ ಹೋಗಿದ್ದರಿಂದ ಕೇಳಿದ್ದಕ್ಕೆ ಶರಣಬಸಪ್ಪನು ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಬಲಗೈ ಹಸ್ತದ ಹತ್ತಿರ, ಮುಂಗೈ ಹತ್ತಿರ ಮತ್ತು ಬಲಗೈ ಮುಂಡೆಗೆ ಹೊಡೆದು ಸಾದಾ ಮತ್ತು ಭಾರಿ ಗುಪ್ತ ಗಾಯಪಡಿಸಿದ್ದು ಮತ್ತು ಮಾನ ಭಂಗ ಮಾಡುವ ಉದ್ದೇಶದಿಂದ ಅವರ ತಲೆಯ ಕೂಡಲು ಹಿಡಿದ್ದು ಬಗ್ಗಿಸಿ ಬೆನ್ನ ಮೇಲೆ ಹೊಡೆದಿದ್ದು, ಮತ್ತು ಮಹಾದೇವಿ ಇವಳು ಸಹ ಹೊಡೆದು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 123/2011 ಕಲಂ.323, 324,354, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Gulbarga Dist Reported Crime

ಮಟಕಾ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 24/11/2011 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಮಟಕಾ ಆಡಿರಿ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಜೂಜಾಟ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಜೋತೆ ಪಿ.ಎಸ.ಐ ಶ್ರೀ ಎಸ್.ಎಸ್ ದೊಡ್ಡಮನಿ ಮತ್ತು ಠಾಣೆಯ ಸಿಬ್ಬಂದಿಯರಾದ ದೇವಿಂದ್ರಪ್ಪ ಎ.ಎಸ್.ಐ. ನಿಸಾರ ಅಹಮದ ಸಿಪಿಸಿ, ಶಿವರಾಯ ಸಿಪಿಸಿ ರವರು ಕುಡಿಕೊಂಡು ಮಟಾಕಾ ಬರೆಡುಕೊಳ್ಳುತ್ತಿದ್ದ ಶ್ರೀ ರಾಜಶೇಖರ ತಂದೆ ಶಂಕರ ಹೊನಗುಂಡ ಸಾ|| ನಿಂಬರ್ಗಾ ಮತ್ತು ಶ್ರೀ ಬಸವರಾಜ ತಂದೆ ನಾಗಪ್ಪ ಕೋರೆ ಸಾ|| ನಿಂಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 570/- ರೂ, ಪೆನ್ನು, ಹಾಗೂ ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಅಲ್ಲದೇ ಮಟಕಾ ಚೀಟಿ ತೆಗೆದುಕೊಳ್ಳುವರಾದ ರಪೀಕ ಸಾ|| ಬೈರಾಮಡಗಿ ಮತ್ತು ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇವರ ಮೇಲೆ ಕ್ರಮ ಕೈಕೊಳ್ಳುವ ಕುರಿತು ಠಾಣೆ ಗುನ್ನೆ ನಂ. 122/2011 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

24 November 2011

GULBARGA DIST REPORTED CRIMES

ಅಂತ್ಯ ಸಂಸ್ಕಾರ ಮುಗಿಸಕೊಂಡು ಬರುತ್ತಿರುವಾಗ ಅಪಘಾತ ಒಂದು ಸಾವು:

ಸೇಡಂ ಪೊಲೀಸ ಠಾಣೆ: ಶ್ರೀ ಭೀಮಬಾಯಿ ತಂದೆ ಶರಣಪ್ಪ ಭೀಮನಳ್ಳಿ ಸಾ: ಕುರಕುಂಟಾ ತಾ: ಸೇಡಂ ರವರು ನಾನು ಮತ್ತು ನಮ್ಮ ತಾಯಿ ಮಹಾದೇವಮ್ಮ, ನಮ್ಮ ಅಣ್ಣ ಮತ್ತು ನಮ್ಮೂರಿನ ಇತರೆ ಜನರು ಕೂಡಿಕೊಂಡು ನಮ್ಮ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಭೀಮನಳ್ಳಿಯಿಂದ ಮರಳಿ ನಮ್ಮೂರಿಗೆ ಜೀಪ ನಂ-ಎಮ್ಎಚ್‌-02, ಜೆ-5753 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ನಾಮವಾರ ಕ್ರಾಸ ಹತ್ತಿರ ಕೊಡ್ಲಾ ಕಡೆಯಿಂದ ಟಾಟಾ ಸುಮೋ ನಂ-ಕೆಎ-05,ಸಿ-6208 ನೇದ್ದರ ಚಾಲಕ ತನ್ನ ಟಾಟಾ ಸುಮೋವನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಜೀಪಿನ ಮದ್ಯದ ಸೀಟಿನ ಬಲಗಡೆ ಕೊನೆಯಲ್ಲಿ ಕುಳಿತಿದ್ದ ತಾಯಿ ಮಹಾದೇವಮ್ಮ ಇವಳಿಗೆ ಟಾಟಾ ಸುಮೋ ಚಾಲಕ ಜೀಪಿಗೆ ಅಫಗಾತ ಪಡಿಸಿದ್ದರಿಂದ ನನ್ನ ತಾಯಿಯ ಬಲಗಾಲಿಗೆ, ಟೊಂಕಕ್ಕೆ ಭಾರಿ ರಕ್ತಗಾಯವಾಗಿ ಬಲಗೈಗೆ ತರಚಿದ ಹಾಗು ಗುಪ್ತ ಗಾಯವಾಗಿರುತ್ತದೆ ಟಾಟಾ ಸುಮೋ ಚಾಲಕ ಅಫಗಾತ ಪಡಿಸಿ ವಾಹನ ಸ್ಳಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಚಾಲಕನ ಹೆಸರು ಅಕ್ಬರ ತಂದೆ ಹುಸೇನಸಾಬ ಸಾ|| ಕೊಡ್ಲಾ ಅಂತಾ ಗೊತ್ತಾಗಿರುತ್ತದೆ, ನಮ್ಮ ತಾಯಿಗೆ ಉಪಚಾರ ಕುರಿತು ಸೇಡಂದ ಸರಕಾರಿ ಅಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಹೆಚ್ಚಿನ ಉಪಚಾರ ಕುರಿತು ಗುಲ್ಬರ್ಗಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 207/2011 ಕಲಂ-279,338 ಐಪಿಸಿ ಸಂ,187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ. ಇಂದುಮತಿ ಗಂಡ ಚಂದ್ರಕಾಂತ ಮಾಳಗೆ ಸಾ:ವರನಾಳ ಗ್ರಾಮ ತಾ||ಜಿ|| ಗುಲಬರ್ಗಾ ವರು ನಾನು ಕೂಲಿ ಕೆಲಸಕ್ಕೆಂದು ಬೆಳೆಗ್ಗೆ ಹೋಗಿ ರಾತ್ರಿ ಮನೆಗೆ ಬಂದು ಮನೆಯಲ್ಲಿ ಅಡುಗೆ ಮಾಡಿ ಮಕ್ಕಳೊಂದಿಗೆ ಊಟ ಮಾಡಿಕೊಂಡು ಎರಡೂ ಕೋಣೆಗಳಿದ್ದ ಮನೆಗೆ ಕೀಲಿ ಹಾಕಿ ನಾವೇಲ್ಲರೂ ಇನ್ನೊಂದು ಮನೆಯ ಮಲಗಿಕೊಂಡಿದ್ದು ದಿನಾಂಕ; 23/11/2011 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯ ಕೀಲಿ ಕೈ ಮುರಿದು ಬಂಗಾರದ ಆಭರಣಗಳು ಮತ್ತು ನಗದು ಹಣ ಹಾಗು ಸೀರೆಗಳು ಹೀಗೆ ಒಟ್ಟು 10500/- ರೂಪಾಯಿ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದಠಾಣೆ ಗುನ್ನೆ ನಂ; 144/2011 ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಹರಣ ಮತ್ತು ನಿಂದನೆ ಪ್ರಕರಣ:

ಸೇಡಂ ಪೊಲೀಸ ಠಾಣೆ: ಶ್ರೀ ಲಾಲಪ್ಪ ತಂದೆ ನಾಗಪ್ಪ ಮದನಾ ಸಾ||ತುನ್ನೂರ, ತಾ|| ಸೇಡಂ. ರವರು ನಾನು ದುಗನೂರ ಗ್ರಾಮ ಪಂಚಾಯತದಿಂದ ಕಾಂಗ್ರೆಸ ಪಕ್ಷದಿಂದ ಆಯ್ಕೆಯಾಗಿ ಗ್ರಾಮ ಪಂಚಾಯತ ಅಧ್ಯಕ್ಷನಾಗಿದ್ದು ಉಪಾಧ್ಯಕ್ಷರಾಗಿ ಮಹಿಳಾ ಅಭ್ಯರ್ತಿ ಪಾರ್ವತಮ್ಮ ತಿಪ್ಪರೆಡ್ಡಿಕರ್ ಇದ್ದು ನಮ್ಮ ಪಂಚಾಯತ ಕೆಲಸ ಕಾರ್ಯಗಳನ್ನು ಅಲ್ಲದೇ ಯೋಜನೆ ಕಾಮಗಾರಿಗಳನ್ನು ಸುಗಮವಾಗಿ ಮಾಡಿಕೊಂಡು ಬಂದಿರುತ್ತೇವೆ. ನಮ್ಮ ಪಂಚಾಯತ ಕಾರ್ಯಾಲಯದ ಸದಸ್ಯನಾಗಿದ್ದ ಮಹಾದೇವಪ್ಪ ದುಗನೂರ ಹಾಗೂ ವೆಂಕಟಯ್ಯ ದೇವನೂರ ಇವರು ನನಗೆ ಗ್ರಾಮ ಪಂಚಾಯತ ಅಧ್ಯಕ್ಷ ನಾಗುವ ಕಾಲಕ್ಕೆ 15 ತಿಂಗಳು ನನಗೆ ಅಧ್ಯಕ್ಷಸ್ಥಾನ ಮಾಡಿಕೊಂಡು ನಂತರ 15 ತಿಂಗಳ ಅವಧಿ ಬೇರೆಯವರಿಗೆ ಬಿಟ್ಟು ಕೊಡಲು ಕರಾರು ಮಾಡಿಕೊಂಡಿದ್ದು ಇತ್ತು. ನಂತರ 15 ತಿಂಗಳ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದರಿಂದ ಹಣ ಖರ್ಚ ಆಗಿದ್ದು ಸದರಿ ಹಣ ಕೊಡು ನಾನು ರಾಜಿನಾಮೆ ಮಾಡುತ್ತೇನೆ ಅಂತ ಹೇಳಿದ್ದರಿಂದ ಅವರು ನನ್ನ ಮೇಲೆ ವೈಮಸ್ಸು ಮಾಡಿಕೊಂಡಿದ್ದು ಇತ್ತು ದಿ:23-11-2011 ರಂದು ಬೆಳಗ್ಗೆ ದುಗನೂರ ಪಂಚಾಯತ ಬಾಡಿ ಮೀಟಿಂಗ್ ನಡೆಯುತ್ತಿದ್ದಾಗ ಮದ್ಯಾಹ್ನ ಮಹಾದೇವಪ್ಪ ಕೊಂಡಮ್, ನಾಗರೆಡ್ಡಿ ತಿಪ್ಪರೆಡ್ಡಿಕರ ರವರು ಒತ್ತಾಯ ಪೂರ್ವಕವಾಗಿ ಸಭೆಯಿಂದ ಕಾಲರ ಹಿಡಿದುಕೊಂಡು ಎಳೆದುಕೊಂಡು ಹೊರಗೆ ತಂದು ನಾಗರೆಡ್ಡಿ ತಿಪ್ಪರೆಡ್ಡಿಕರ್ ರವರ ಮೋಟಾರು ಸೈಕಲ್ ಮೇಲೆ ಯಾದಗಿರಿ ವರೆಗೆ ಮೋಟಾರು ಸೈಕಲ್ ಮೇಲೆ ಓಯ್ದು ಬೈದು ಯಾದಗಿರಿಯಲ್ಲಿ ಬಿಟ್ಟು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ.208/2011 ಕಲಂ. 365, 511 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕಳ್ಳಲಾಗಿದೆ.