POLICE BHAVAN KALABURAGI

POLICE BHAVAN KALABURAGI

22 November 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ : ಶ್ರೀ ಪ್ರೀತಮ ಮೇಹತಾ ಸಾ|| ಎಸ್.ಆರ್.ಎನ್ ಮೇಹತಾ ಸ್ಕೂಲ ಮೇಹತಾ ಕಂಪೌಂಡ ಗುಲಬರ್ಗಾ ರವರು ಎಸ್.ಆರ್.ಎನ್ ಮೇಹತಾ ಸ್ಕೂಲದಲ್ಲಿ ದಿನಾಂಕ 21.11.2011 ರಂದು ಮಕ್ಕಳ ಶಾಲೆ ಪೀಸನ್ನು ತುಂಬಿಸಿಕೊಂಡಿದ್ದ ರೂ. 1,70000/-ರೂ ಗಳು ನನ್ನ ಟೇಬಲ್ ಡ್ರಾದಲ್ಲಿಟ್ಟು ಕೀಲಿ ಹಾಕಿ ರೂಮಿನ ಕೀಲಿ ಹಾಕಿಕೊಂಡು ಮನೆಗೆ ಹೋಗಿರುತ್ತೆನೆ. ಬೆಳಗಿನ ಜಾವ 4-30 ಗಂಟೆಗೆ ಎದ್ದು ನೋಡಲಾಗಿ ಯಾರೋ ಕಳ್ಳರೂ ರೂಮಿನ ಕಿಲಿ ಮುರಿದು ಟೇಬಲ ಡ್ರಾದಲ್ಲಿಟ್ಟದ್ದ 1,70,000-00 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 200/11 ಕಲಂ 457,380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಆಳಂದ ಪೊಲೀಸ ಠಾಣೆ: ಮಕಬೂಲ್ ತಂದೆ ನದೀಮ ಸಾಬ ಭಾಗವಾನ್ ಸಾ: ರೇವಣಸಿದ್ದೇಶ್ವರ ಕಾಲೋನಿ ಆಳಂದ ರವರು ನಾನು ಮತ್ತು ನನ್ನ ಹೆಂಡತಿ ಮಕ್ಕಳಿಗೆ ಶಾಲೆಗೆ ಕಳುಹಿಸಿ ದಿನಾಲು ಇಬ್ಬರು ಕೂಡಿ ಬಂಡಿಗಳ ಮೇಲೆ ಬಾಳೆ ಹಣ್ಣಿನ ವ್ಯಾಪಾರ ಮಾಡಿ ಮದ್ಯಾಹ್ನ ಮನೆಗೆ ಬರುತ್ತಿದ್ದೆವು.ನಿನ್ನೆ ದಿನಾಂಕ 21/11/2011 ರಂದು ಬೆಳಿಗ್ಗೆ 10-00 ಗಂಟೆಗೆ 2 ಬಂಡಿಗಳ ಮೇಲೆ ಬಾಳೆ ಹಣ್ಣು ಹಾಕಿಕೊಂಡು ಬಸ್ಸಸ್ಟಾಂಡ ಹತ್ತಿರ ವ್ಯಾಪಾರ ಮಾಡಿಕೊಂಡು ಮದ್ಯಾಹ್ನ ಇಬ್ಬರು ಮನೆಗೆ ಊಟ ಮಾಡಲು ಹೋದಾಗ ಯಾರೋ ಕಳ್ಳರು ಮನೆಯ ಬೀಗ್ ಮುರಿದು ಟಿವಿ ಅ||ಕಿ|| 3000=00 ಮತ್ತು ಡಿವಿಡಿ ಅ||ಕಿ|| 1000=00 ರೂ ಳದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 274/2011 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ
: ಶ್ರೀ ಸುಬಾಷ ತಂದೆ ಸಂಗಣ್ಣಾ ಸೂಗಮೊಳೆ ಸಾ: ನಿಂಗದಳ್ಳಿ ರವರು ನಾನು ನಮ್ಮ ಹೊಲದಲ್ಲಿ ಉಳ್ಳಾಗಡ್ಡಿ ಬೆಳೆಗೆ ನೀರು ಬಿಡಲು ಹೊಗಿ ಮೋಟಾರು ಚಾಲು ಮಾಡಿದ್ದು ಆ ಸಮಯಕ್ಕೆ ಬಸವಂತರಾಯನ ಮಗನಾದ ಸುಧಾಕರನು ಬಂದು ನಮ್ಮ ಹೊಲದಲ್ಲಿನ ಬಾವಿ ನೀರು ನೀನು ತಗೆದುಕೊಳ್ಳಬೇಡ ಅಂತಾ ನನ್ನೊಂದಿಗೆ ತಕರಾರು ಮಾಡಿ ಕರೆಂಟ ಮೋಟಾರು ಬಂದ ಮಾಡಿ ಹೊಲಕ್ಕೆ ನೀರು ಬಿಡಲು ನನಗೆ ಅಡ್ಡಿ ಮಾಡಿರುತ್ತಾನೆ. ನಾನು ಅಲ್ಲಿಂದ ಬಂದು ಅಣ್ಣ ಅಪ್ಪಾರಾವನಿಗೆ ಮತ್ತು ಶ್ರೀಮಂತರಾಯನಿಗೆ ಮತ್ತು ಶಿವಶರಣಪ್ಪ ಇವರಿಗೆ ವಿಷಯ ತಿಳಿಸುವಾಗ ದಯಾನಂದ ತಂದೆ ಬಸವಂತಪ್ಪ, ಸುಧಾಕರ ತಂದೆ ಬಸವಂತಪ್ಪ, ಹಣಮಂತ ತಂದೆ ಬಸವಂತಪ್ಪ ಸೂಗಮೊಳೆ ಸಾ: ಎಲ್ಲರೂ ನಿಂಗದಳ್ಳಿ ಎಲ್ಲರೂ ಕೊಡಿ ಅವಾಚ್ಯವಾಗಿ ಬೈದು ಬಡಿಗೆಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2011 ಕಲಂ 323, 324, 341. 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ:
ಶ್ರೀ ಹಣಮಂತರಾಯ ತಂದೆ ಬಸವಂತಪ್ಪ ಸೂಗಮೂಳೆ ತನ ಸಾ; ನಿಂಗದಳ್ಳಿ ರವರು ನಮ್ಮ ಹೊಲದಲ್ಲಿ ಹಿರಿಯರ ತೋಡಿದ ಒಂದು ಬಾವಿ ಆ ಬಾವಿಯ ನೀರು ನಾನು ಮತ್ತು ನಮ್ಮ ಅಣ್ಣ ತಮ್ಮಂದಿರು ಪಾಳಿಯ ಪ್ರಕಾರ ಉಪಯೋಗಿಸಿಕೊಳ್ಳುತ್ತವೆ. ಬಾವಿಯ ನೀರಿನ ಅಣ್ಣತಮ್ಮ ಸಂಗಣ್ಣನ ಮಕ್ಕಳು ನನ್ನೂಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ . ದಿನಾಂಕ 21/11/2011 ರಂದು ಬೇಳಿಗ್ಗೆ ನಮ್ಮ ಹೊಲದಲ್ಲಿ ಕಬ್ಬಿನ ಬೆಳೆಗೆ ನೀರು ಬಿಡಲು ನಾನು ಮತ್ತು ನನ್ನ ತಮ್ಮಂದಿರಾದ ಸುಧಾಕರ ,ದಯಾನಂದ ಹೊಲಕ್ಕೆ ಹೊಗಿದ್ದೆವು ಸುಭಾಷ ಸುಗುಮೂಳೆ ಇತನು ತನ್ನ ಹೊಲಕ್ಕೆ ಬಾವಿಯ ನೀರು ಬಿಟ್ಟುಕೊಳ್ಳಲು ಬಂದು ಕರೇಂಟ ಮೋಟರ್ ಚಾಲು ಮಾಡಿದನು ಆಗ ನನ್ನ ತಮ್ಮನಾದ ದಯಾನಂದನು ಇವತ್ತು ನಮ್ಮ ಪಾಳೆ ಬರುತ್ತದೆ. ಅಂತ ಹೇಳಿ ಕರೆಂಟ ಮೋಟರ್ ಬಂದ ಮಾಡಿದಾಗ ಇಬ್ಬರಲ್ಲಿ ಕತರಾರು ಆಗಿರುತ್ತದೆ, ಅವಾಚ್ಯವಾಗಿ ಬೈದು ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 70/2011 ಕಲಂ 323,324,341, 504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಫರಹತಾಬಾದ ಠಾಣೆ :
ಶ್ರೀಮತಿ ಶಿವಲಿಂಗಮ್ಮ ಗಂಡ ಕರಿಬಸಪ್ಪಾ ರವರು ನನ್ನ ಗಂಡನಾದ ಕರಿಬಸಪ್ಪಾ ಇತನು ದಿ:21/11/2011 ರಂದು ಬೆಳ್ಳಿಗೆ 11:00 ಗಂಟೆಯ ಸುಮಾರಿಗೆ ರೋಟಿ ಬುತ್ತಿ ಕಟ್ಟಿಕೊಂಡು ನಮ್ಮ ಮನೆಯ ಹೋಲಕ್ಕೆ ಹೊಗಿ ಬರುತ್ತೆನೆ ಅಂತಾ ಮನೆಯಿಂದ ಹೋದರು.ಮದ್ಯಾಹ್ನ 13:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದಾಗ ನನ್ನ ಅಣ್ಣ ತಮ್ಮಕಿಯ ಪೈಕಿ ಅರುಣಕುಮಾರ ಕುಂಬಾರ ಇತನು ಪಾರ್ವತಿ ಇವಳ ಹೋಲಕ್ಕೆ ಹೋಗುವಾಗ ದಾರಿಯಲ್ಲಿ ಶವವನ್ನು ಕಂಡು ಫೋನ ಮಾಡಿ ನಿನ್ನ ಗಂಡನಾದ ಕರಿಬಸಪ್ಪಾ ಇತನಿಗೆ ನಮ್ಮೂರಿನ ಬಸಣ್ಣ ಗೌವಳಿ ಇವರ ಹೋಲದ ಬಂದಾರಿನಲ್ಲಿ ಕೊಲೆಯಾಗಿ ಬಿದ್ದಿರುತ್ತಾನೆ ಅಂತಾ ತಿಳಿಸಿದ್ದು ನಾನು ಮತ್ತು ನಮ್ಮ ಮಕ್ಕಳ್ಳು ಹುಣಚಪ್ಪಾ ಪಡಶೇಟ್ಟಿ .ಶರಣಪ್ಪಾ ಕಣ್ಣೂರ ಮತ್ತು ಇತರರೊಂದಿಗೆ ಹೋಲಕ್ಕೆ ಬಂದು ನೋಡಲಾಗಿ ನನ್ನ ಗಂಡ ಕರಿಬಸಪ್ಪನು ಕೊಲೆಯಾಗಿ ಬಿದ್ದಿರುತ್ತದೆ. ಅವನಿಗೆ ತಲೆಯ ಹಿಂಭಾಗದಲ್ಲಿ ಹರಿತವಾದ ಆಯುಧ್ಧದಿಂದ ಹೋಡೆದು ಭಾರಿ ರಕ್ತಗಾಯ ಗೊಳಿಸಿದ್ದು ಅಲ್ಲದೆ ತಲೆಗೆ ದೊಡ್ಡ ಗಾತ್ರದ ಕಲ್ಲಿನಿಂದ ಎತ್ತಿ ಹಾಕಿ ಯಾರೊ ಯಾವುದೋ ಉದ್ದೇಶಕ್ಕಾಗಿ ಹರಿತವಾದ ಆಯುಧ್ಧ ಕಲ್ಲಿನಿಂದ ತಲೆಗೆ ಹೋಡೆದು ಭಾರಿ ರಕ್ತಗಾಯ ಗೋಳಿಸಿ ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 209/2011 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ :
ಶ್ರೀಮತಿ ಮಲ್ಲಮ್ಮಾ ಗಂಡ ಬಾಬು ಹಳ್ಳಿ ರವರು ನಾನು ಮತ್ತು ನನ್ನ ಮಕ್ಕಳಾದ ಶಿವಯೋಗಿ, ಮಲ್ಲಿಕಾರ್ಜುನ, ಮತ್ತು ಮಗಳಾದ ನೀಲಮ್ಮ ಅಳಿಯ ಅಮೋಗಿ ಕೂಡಿ ತೊನಸಳ್ಳಿ [ಎಸ್‌] ಗ್ರಾಮಕ್ಕೆ ಹೋಗುವಾಗ ನನ್ನ ಇನ್ನೊಬ್ಬ ಮಗ ಪ್ರಭು ತಂದೆ ಬಾಬುಹಳ್ಳಿ ಇವನು ಬಂದು ಮನೆಯಲ್ಲಿ ಪಾಲು ಕೊಡು ಅಂತಾ ನನ್ನ ಸಂಗಡ ಜಗಳ ತೆಗೆದು ತಕರಾರು ಮಾಡುವಾಗ ನನ್ನ ಮಗ ಶಿವಯೋಗಿ ಹಾಗೂ ನೀಲಮ್ಮಾ ಇವರು ಬಿಡಿಸಲು ಬಂದಾಗ ಪ್ರಭು ಇತನು ಶಿವಯೋಗಿಗೆ ನೀನು ಯಾಕೆ ಅಡ್ಡ ಬರುತ್ತಿ ಅಂತಾ ಒದ್ದು ಒಳಪೆಟ್ಟು ಪಡಿಸಿದನು.. ನಿಲಮ್ಮ ಇವಳಿಗೆ ಕಲ್ಲಿನಿಂದ ಎಡ ಭುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿ ತ್ತು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 176/2011 ಕಲಂ ನಂ: 323 324 504 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ :
ಶ್ರೀ ಪ್ರಭು ತಂದೆ ಬಾಬು ಹಳ್ಳಿ ವ:32 ಜಾ:ಹರಿಜನ ಉ:ಕೂಲಿಕೆಲಸ ಸಾ:ತೊನಸಳ್ಳಿ [ಎಸ್‌] ರವರು ನಾನು ದಿ:21/11/11 ರಂದು 7.30 ಪಿಎಂ ಸುಮಾರಿಗೆ ಮರಗೋಳ ಕ್ರಾಸ ಹತ್ತಿ ನನ್ನ ತಾಯಿ ಮಲ್ಲಮ್ಮಾ ಇವಳಿಗೆ ಮನೆಯ ಜಾಗದಲ್ಲಿ ಪಾಲುಕೊಡು ಅಂತಾ ಕೇಳಿದಾಗ ನನ್ನ ತಾಯಿ ಹಾಗೂ ಅಣ್ಣ ಮಲ್ಲಿಕಾರ್ಜುನ ತಮ್ಮ ಶಿವಯೋಗಿ ತಂಗಿ ನೀಲಮ್ಮಾ ರವರು ಕೂಡಿ ‘ಅವಾಚ್ಯವಾಗಿ ಬೈದು ಕಲ್ಲಿನಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 177/2011 ಕಲಂ:323 324 504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

21 November 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ:
ಶ್ರೀ ಶರಣಪ್ಪಾ ತಂದೆ ಮಲ್ಲಪ್ಪಾ ಗಾಣಗೇರ್ ಸಾ: ರಾಜೋಳ ತಾ: ಚಿತ್ತಾಪೂರ ರವರು ನಾನು ದಿನಾಂಕ: 19/11/2011 ರಂದು ಸಾಯಂಕಾಲ ಶಂಕ್ರವಾಡಿ ಗ್ರಾಮಕ್ಕೆ ನನ್ನ ಮಗನಾದ ಶ್ರೀಕಾತನಿಗೆ ಮಾತಾಡಿಸಲು ಬಂದಾಗ ರಾತ್ರಿ 10 ಗಂಟೆ ಸುಮಾರಿಗೆ ಸಾಬಣ್ಣಾ ತಂದೆ ಗುಂಡಪ್ಪಾ ಉಡಗಿ ಸಂಗಡ ಇನ್ನೂ ಇಬ್ಬರೂ ಅವ್ಯಾಚವಾಗಿ ಬೈದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 173/2011 ಕಲಂ:341 323 324 504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದ ಪ್ರಕರಣ:
ಶಹಾಬಾದ ನಗರ ಠಾಣೆ :
ಶ್ರೀ ಶರಣಪ್ಪಾ ಹಿಪ್ಪರಗಿ ಪಿ.ಐ ಶಹಾಬಾದ ನಗರ ಠಾಣೆ ರವರು ದಿನಾಂಕ: 20/11/2011 ರಂದು ಸಾಯಂಕಾಲ ಠಾಣೆಯ ಸಿಬ್ಬಂದಿಯರೊಂದಿಗೆ ಪೆಟ್ರೊಲಿಂಗ ಕುರಿತು ಭಂಕೂರ ಕ್ರಾಸ ಹತ್ತಿರ ಹೊರಟಾಗ ಗುಲ್ಬರ್ಗಾ ಕಡೆಯಿಂದ ಒಂದು ಕೃಷರ್ ಜೀಪ ನಂ: ಕೆ.ಎ-32/ಬಿ-4808 ನೇದ್ದು ಅತೀವೇಗ ಮತ್ತು ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸಾರ್ವಜನಿಕ ರೋಡಿನ ಎರಡೂ ಬದಿಗೆ ಆಕಡೆ ಒಮ್ಮೇ ಈ ಕಡೆ ಒಮ್ಮೆ ಚಲಾಯಿಸುತ್ತ ಬರುವದನ್ನು ನೋಡಿ ಪಿಐ ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಜೀಪ ಚೆಕ್ ಮಾಡಲಾಗಿ ವಾಹನ ಚಾಲಕನ ಹೆಸರು ಸಂಜಯಕುಮಾರ ತಂದೆ ವೀರಣ್ಣಾ ದೆಸಣಗಿ ಸಾ: ದೇವನ ತೇಗನೂರ ಅಂತಾ ಹೇಳಿದನು. ಸದರಿಯವನಿಗೆ ನೋಡಲಾಗಿ ಕುಡಿದ ಅಮಲಿನಲಿದ್ದು ಆತನ ವಿರುದ್ದ ಠಾಣೆ ಗುನ್ನೆ ನಂ: 174/2011 ಕಲಂ:279 510 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಠಾಣೆ
:ದಿನಾಂಕ: 21/11/2011 ರಂದು ಪೊಲೀಸ್ ಇನ್ಸಪೇಕ್ಟರ ರವರು ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಇಸ್ಮಾಯಿಲ್ ಲಾಲ ಖಾನ ರವರ ಪಾಲೀಸ ಮಸೀನ್ ದ ಎದರುಗಡೆ ಖುಲ್ಲಾ ಜಾಗೆಯ ಮೇಲೆ ಕೆಲವು ಜನರು ಕುಳಿತು ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಆ ಸ್ಥಳಕ್ಕೆ ಹೋಗಿ ನೋಡಿ ಪಣಕ್ಕೆ ಹಣ ಹಚ್ಚಿ ಅಂದರ ಭಾಹರ ಎಂಬು ಇಸ್ಟೀಟ್ ಜೂಟಾಟ ಆಡುತ್ತಿರುವ ಅನೀಲ ತಂದೆ ಬಸವರಾಜ ಕೊಬಾಳ ಸಂಗಡ 5 ಜನರು ಸಾ: ಎಲ್ಲರೂ ಶಹಬಾದ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಒಟ್ಟು 5750/- ರೂಪಾಯಿ ಹಾಗೂ ಮೊಬೈಲ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 175/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.