POLICE BHAVAN KALABURAGI

POLICE BHAVAN KALABURAGI

10 November 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸಿದ್ದಾಜಿ ತಂದೆ ಶ್ರೀಮಂತರಾವ ಪಾಟೀಲ್ ವಯ|| 35 ವರ್ಷ ಸಾಃ ಭಾರತನಗರ ಗಂಜ್ ಗುಲಬರ್ಗಾ ರವರು ನಾನು ಕೋರ್ಟಗೆ ಹೋಗುವ ಕುರಿತು ಗಂಜ್ ರೋಡಿನ ಗಾಂಧಿ ನಗರ ಕ್ರಾಸ್ ಹತ್ತಿರ ಆಟೋರಿಕ್ಷಾ ಹತ್ತುವ ಕುರಿತು ಎಡಬದಿಗೆ ಕಾಯುತ್ತಾ ನಿಂತಾಗ ಗಂಜ್ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆಎ 32 ಯಾವ್ 1182 ಸವಾರನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲೆ ಠಾಣೆ ಗುನ್ನೆ ನಂ: 69/2011 ಕಲಂ 279, 337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಬಾನು ಬೇಗಂ ಗಂಡ ಸೈಯದ ಅಮೀರ ವ; 40 ವರ್ಷ ಉ; ಮನೆ ಕೆಲಸ ಸಾ; ಕೆ.ಇ.ಬಿ.ಆಫೀಸ್ ಎದುರು ಯತೀಮಖಾನ ಗುಲಬರ್ಗಾ ರವರು ನಾನು ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ನಿಧಿಶಾ ಕಾಂಪ್ಲೇಕ್ಸ ಎದುರು ರೋಡಿನ ಮೇಲೆ ಬರುತ್ತಿರುವಾಗ ಅಟೋರೀಕ್ಷಾ ನಂ::ಕೆಎ 32 ಬಿ 3962 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ್ಟ ಹೊಡೆದು ಅಟೋರೀಕ್ಷಾ ಪಲ್ಟಿಮಾಡಿದ್ದರಿಂದ ಅಟೋರೀಕ್ಷಾದಲ್ಲಿ ಕುಳಿತಿದ್ದ ನನಗೆ ಮತ್ತು ಇನ್ನು ಒಬ್ಬ ಪ್ರಯಾಣಿಕನಿಗು ಭಾರಿಗಾಯ ಅಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲೆ ಠಾಣೆ ಗುನ್ನೆ ನಂ: 143/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಶಂಕರ ತಂದೆ ಡೊಂಡಿಬಾ ಭೋಯಿ ಸಾ: ಬಂದರವಾಡ ತಾ: ಅಫಜಲಪೂರ ಜಿ: ಗುಲಬರ್ಗಾ ರವರು ನಾನು ಮತ್ತು ಕಿಶನ್ ಭೋವಿ ದಿನಾಂಕ:8/11/2011 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಹತಗುಂದಾ ಗ್ರಾಮದ ಕೇರೆಯಲ್ಲಿ ಮೀನು ಹಿಡಿಯುತ್ತುರುವಾಗ ಸೂರ್ಯಕಾಂತ @ ಸುರೇಶ ತಂದೆ ಬಸವಂತರಾಯ ವಗ್ಗೆ ಸಾ:ಇನ್ನೂ 6 ಜನರು ಹತಗುಂದಾ ಗ್ರಾಮದವರು ಕೂಡಿ ಕೊಂಡು ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಆಶದ ಮೇಲಿಂದ ಠಾಣೆ ಗುನ್ನೆ ನಂ: 330/11 ಕಲಂ 143, 147, 341, 323, 504 , 506 ಸಂ/ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

09 November 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮೌಲಾಲಿ ಕಿರಿಯ ಅಬಿಯಂತರರು ಶಾಖಾಧಿಕಾರಿಗಳು ಹಡಗಿಲ ಹಾರುತಿ ಗ್ರಾಮೀಣ ವಿಭಾಗ ಗುಲಬರ್ಗಾ ರವರು ದಿನಾಂಕ:08/11/2011 ರಂದು ಮುಂಜಾನೆ ಬಬಲಾದ (ಎಸ್) ಗ್ರಾಮದಲ್ಲಿ N.E.R.T.C ಬಸ್ಸು ಸಂಖ್ಯೆ K.A 32 F-941 ವಿದ್ಯುತ ಸರಬರಾಜು ಮಾಡುವ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 2 ವಿದ್ಯುತ್ತ ಕಂಬಗಳು ಮುರಿದು ವಿದ್ಯುತ್ತ ವ್ಯವಸ್ದೆ ಸಹ ನಿಂತು ಹೋಗಿದ್ದು ಅಲ್ಲದೆ ಊರಿನ ಜನರಿಗೆ ವಿದ್ಯುತ್ತ ತೊಂದರೆಯಾಗಿರುತ್ತದೆ. ಕಾರಣ ಗುಲಬರ್ಗಾ ವಿದ್ಯುತ್ ಸರಭರಾಜು ಕಂಪನಿಗೆ ಸುಮರು 13000/- ಹಾನಿ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 329/2011 ಕಲಂ 279 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಜೇವರ್ಗಿ ಪೋಲಿಸ ಠಾಣೆ :
ಶ್ರೀಮತಿ ಮಲ್ಕಮ್ಮ ಗಂಡ ಶರಣಪ್ಪ ರವರು ನಾನು ದಿನಾಂಕ 08-11-2011 ರಂದು ರಾತ್ರಿ 8-30 ಗಂಟೆಗೆ ಅಖಂಡೇಶ್ವರ ಮಾರ್ಗವಾಗಿ ಬಜಾರ ಮಾಡಲು ಹೊಗುತ್ತಿರುವಾಗ ಕೆ.ಎ.32-6548 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ವಾಹನದೊಂದಿಗೆ ಹಾಗೆ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 192/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಕು|| ಮಹ್ಮದ ಸಲ್ಮಾನ ತಂದೆ ಮಕ್ಮದ ಸಲೀಮ ವ: 15 ವರ್ಷ ಉ; ವಿದ್ಯಾರ್ಧಿ ಸಾ; ಮನೆ ನಂ 11-1041/ಇಬಿ2 ಎಕ್ಬಾಲ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 06.11.2011 ರಂದು ಸಾಯಂಕಾಲ್ 7-00 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಂ:ಕೆಎ 32 ಎಫ್ 1562 ನೇದ್ದರ ಬಸ್ಸನಿಂದ ಕೇಂದ್ರ ಬಸ್ ನಿಲ್ದಾಣದ ಎದುರು ಇಳಿಯತ್ತಿರುವಾಗ ಬಸ್ಸ ಚಾಲಕನು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದು ಹೋಗಿದ್ದರಿಂದ ನಾನು ಬಾಗಿಲನಿಂದ ಕೆಳಗೆ ಬಿದ್ದು ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ ಅತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 142/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ :
ರೋಜಾ ಠಾಣೆ :
ಶ್ರೀ ಅಬ್ದುಲ ಬಾಕಿ ತಂದೆ ಅಬ್ದುಲ ರಹೀಮ ಸಾ:ಹಾಗರಗಾ ಕ್ರಾಸ್ ಹತ್ತಿರ ನೂರಾನಿ ಮೊಹಲ್ಲಾ ಗುಲಬರ್ಗಾರವರು ದಿನಾಂಕ:08/11/2011 ರಂದು 3:30 ಪಿಎಮ್ ದಿಂದ 7:00 ಪಿಎಮ್ ದ ನಡುವಿನ ಅವಧಿಯಲ್ಲಿ ನೂರಾನಿ ಮೊಹಲ್ಲಾ ಬಡಾವಣೆಯಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ರೂಮದಲ್ಲಿದ್ದ 10 ಗ್ರಾಮದ ಮಂಗಳಸೂತ್ರ ಅ.ಕಿ.10500/-ರೂ. ಮತ್ತು 9 ಗ್ರಾಮದ ಒಂದು ಜೊತೆ ಇಯರಿಂಗ್ ಅ.ಕಿ.9500/-ರೂ. ಹೀಗೆ ಒಟ್ಟು 20000/-ರೂ. ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.105/2011 ಕಲಂ.454,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

08 November 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶಿವರುದ್ರಪ್ಪಾ ತಂದೆ ಈರಣ್ಣಾ ನೆಲೋಗಿ ಸಾ:ಹಳೆ ಶಹಾಬಾದ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆಂದರೆ ನನ್ನ ಹೆಂಡತಿ ಚಂದ್ರಕಲಾ ಇವಳು ಟ್ರಾಕ್ಟರ ನಂ. ಕೆಎ-32 ಟಿಎ-2295/96 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ಟ್ಟ್ರಾಕ್ಟರ ಚಾಲಕನಾದ ಅಂಬಾರಾಯ ತಂದೆ ಶಿವಶರಣಪ್ಪಾ ಸರಡಗಿ ಇತನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ ಮಾಡಿದ್ದರಿಂದ ಟ್ರಾಕ್ಟರ ಪಲ್ಟಿಯಾಗಿದ್ದರಿಂದ ನನ್ನ ಹೆಂಡತಿಗೆ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ 168/11 ಕಲಂ 279, 304(ಎ) ಐಪಿಸಿ ಸಂ:187 ಐಎಮ್‌ವಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ರಟಕಲ ಪೊಲೀಸ ಠಾಣೆ
: ಶ್ರೀಮತಿ ಲಾಲಾಬಾಯಿ ಗಂಡ ಮೋತಿರಾಮ ಪವಾರ ಸಾ||ಚೆಂಗಟಾ ರವರು ನಾನು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಅಂಬಾರಾಯ ತಂದೆ ಶಂಕ್ರೆಪ್ಪಾ ಕಣ್ಣಿ ಇತನು ನಾನು ನಿನ್ನೆ ನಿಮ್ಮ ತಾಂಡಾಕ್ಕೆ ಬಂದಾಗ ಕಲ್ಲಿನಿಂದ ಹೊಡೆದಿದ್ದಿ ಅಂತಾ ಅವಾಚ್ಯವಾಗಿ ಬೈಯ್ದು ಮಾನ ಭಂಗಮಾಡುವ ಉದ್ದೇಶದಿಂದ ಕೈಹಿಡಿದು ಎಳೆದು ಅವಮಾನ ಮಾಡಿ ಕೈಯಿಂದ ಹೊಡೆದು ಗುಪ್ತ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/2011 ಕಲಂ341,504,323,354,506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ .

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀಮತಿ ಅನ್ನಪೂರ್ಣ ಗಂಡ ಅಂಬಾರಾಯ ಕಲಾಮೂರ್ತಿ ಸಾಃ ಕಾಳಮಂದರಗಿ ರವರು ನಾನು ದಿನಾಂಕ: 07/11/2011 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನನ್ನ ಮನೆಯಲ್ಲಿದ್ದಾಗ ನನ್ನ ಮೈದುನ ಸತೀಷ ತಂದೆ ಲಿಂಗಪ್ಪಾ ವಯ: 28 ವರ್ಷ ಈತನು ನನಗೆ ನೋಡಿ, ವಿನಾಃಕಾರಣ ಅವಾಚ್ಯವಾಗಿ ಬೈದು ನನ್ನ ಹೆಂಡತಿ ತೀರಿಕೊಂಡಿದ್ದು. ನಾನು ಇನ್ನೊಂದು ಮದುವೆ ಮಾಡಿಕೊಳ್ಳಬೇಕು ಅಂತಾ ನಾನು, ನೋಡಿರುವ ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಬೇಡಿ ಅಂತಾ ನನ್ನ ನೆಂಟಸ್ತನ ಮುರಿದಿದ್ದಿ ಎಂದು ನಿನಗೆ ಒಂದು ಕೈ ನೋಡುತ್ತೇನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕಲ್ಲು ಎತ್ತಿ ನನ್ನ ಬಲಗಾಲ ಮೇಲೆ ಹಾಕಿದ್ದರಿಂದ ನನ್ನ ಬಲಗಾಲಿನ ಹೆಬ್ಬಟ್ಟು, ಕಿರುಬರೆಳಿಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2011 ಕಲಂ. 323, 324, 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.