POLICE BHAVAN KALABURAGI

POLICE BHAVAN KALABURAGI

16 October 2011

GULBARGA DIST REPORTED CRIMES

ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ

ದೇವಲಗಾಣಗಾಪುರ ಠಾಣೆ : ಶ್ರೀ ಬಾಬಾಸಾಹೇಬ ತಂದೆ ಮನೋಹರ ತಾಂಬಡೆ ಸಾ|| ಪಿಟ್ಟೆಗಾಡ ಮಾಹಾರಾಷ್ಟ್ರ ರಾಜ್ಯ ರವರು ನನ್ನ ತಮ್ಮ ವಚಿಷ್ಟ ಇತನು ದಿನಾಂಕ:8-10-2011 ರಂದು ದತ್ತ ಮಂದಿರ ದೇವಲಗಾಣಗಾಪುರ ಗ್ರಾಮದಿಂದ ಹೊರಡಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2011 ಕಲಂ. ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯು.ಡಿ.ಅರ್. ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀ ಮಾಹಾಂತಪ್ಪ ತಂದೆ ವೀರಭದ್ರಪ್ಪ ಭುವನಕ್ಕ ಸಾ|| ಚೀಣಮಗೇರಾ ತಾ|| ಅಫಜಲಪೂರ   ರವರು  ನನ್ನ ಹೆಂಡತಿ ಮಲ್ಲಮ್ಮ ಇವಳಿಗೆ 4-5 ವರ್ಷಗಳಿಂದ ತೆಲೆ ಸರಿ ಇರಲಿಲ್ಲಾ. ನಾನು ಎಲ್ಲಾ ಕಡೆ ದವಾಖಾನಿಗೆ ತೋರಿಸಿದ್ದರೂ ಸರಿ ಅಗಿರಲಿಲ್ಲಾ. ದಿನಾಂಕ:13-10-2011 ರಂದು 8-30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಮಲ್ಲಮ್ಮ ಬಟ್ಟೆ ಒಗೆಯಲಿಕ್ಕೆ ಮನೆಯಿಂದ ಹೋದಳು ಸ್ವಲ್ಪ ಹೊತ್ತಾದರೂ ಮನೆಗೆ ಬರದೆ ಇದ್ದುದ್ದರಿಂದ ನಾನು ನನ್ನ ಹೆಂಡತಿ ನಮ್ಮ ಹೊಲಕ್ಕೆ ಹೋಗಿರಬಹುದು ನಮ್ಮ ಹೊಲಕ್ಕೆ ಬಂದು ನೋಡಲು ನಮ್ಮ ಹೊಲದ ಬಾವಿಯ ದಂಡೆಯ ಮೇಲೆ ನನ್ನ ಹೆಂಡತಿಯ ಬಟ್ಟೆ ಮತ್ತು ಚಪ್ಪಲಿಗಳಿದ್ದವು. ನಾನು ಬಾವಿಯಲ್ಲಿ ಬಿದ್ದಿರಬಹುದೆಂದು ಊರಲ್ಲಿ ತಿಳಿಸಲು ಊರ ಜನರು ಬಂದು ಮುಳ್ಳ ಅಂಡ ಹಾಕಿ ಹುಡುಕಾಡಿದರೂ ಸಿಗಲಿಲ್ಲಾ. ನಾವು ನಮ್ಮ ಬಾವಿಯ ನೀರನ್ನು ಇಂಜನ ಹಚ್ಚಿ ತೆಗೆದಾಗ ಇಂದು ದಿನಾಂಕ:15/10/2011 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಹೆಣ ಬಾವಿಯಲ್ಲಿ ಸಿಕ್ಕಿರುತ್ತದೆ. ಅವಳಿಗೆ ಇಜಾಡಲು ಬರುತಿತ್ತು ಬಹುಶ ಕಲ್ಲು ಕಟ್ಟಿಕೊಂಡು ಬಾವಿಯಲ್ಲಿ ಹಾರಿರಬಹುದು. ಅವಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ. ಠಾಣೆ ಯು.ಡಿ.ಆರ್..ನಂ.12/2011 ಕಲಂ.174 ಸಿ ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಲಲಾಗಿದೆ.  

ಅಳಿಯನಿಂದ ನಿಂದನೆ :
ಬ್ರಹ್ಮಪೂರ ಠಾಣೆ
:ಶ್ರೀ.ಪೀರಪ್ಪ ತಂದೆ ರುಕ್ಕಪ್ಪ ಅಜಾದಪೂರ ವಯ||  75 ವರ್ಷ, ಸಾ|| ಸುಂದರ ನಗರ ಗುಲಬರ್ಗಾ ರವರು ನನ್ನ ಮಗಳಾದ ಕಿರಣ ಇವಳಿಗೆ 11 ವರ್ಷಗಳ ಹಿಂದೆ ಬೀದರ ನಗರದ ಅಶೋಕ ತಂದೆ ಲಾಲಪ್ಪ ಗಾಯಕವಾಡ ಇವನೊಂದಿಗೆ ಕೊಟ್ಟು ಮದುವೆ ಮಾಡಿದ್ದು, ಅಶೋಕನು ಇತನು ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರಿಂದ ಬೀದರ ಗಾಂಧಿ ಗಂಜ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಉದ್ದೇಶದಿಂದ ನನ್ನ ಅಳಿಯ ಅಶೋಕನು ದಿನಾಂಕ: 14/10/2011 ರಂದು ಸಾಯಂಕಾಲ್ ಸುಮಾರಿಗೆ ನನ್ನ ಮನೆಯ ಪೋನ ನಂಬರಾದ 08472-244997 ನೇದ್ದಕ್ಕೆ ಪೋನ ಮಾಡಿ ನನಗೆ ಮತ್ತು ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನಗೆ ಶೂಟ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪುರ ಪೊಲೀಸ ಠಾಣೆ ಗುನ್ನೆ ನಂ: 194/11 ಕಲಂ: 504, 506 ಐ.ಪಿ.ಸಿ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  

ಕಳವು ಪ್ರಕರಣ:
ಬ್ರಹ್ಮಪೂರ ಠಾಣೆ
ಶ್ರೀ.ನಾಗರಾಜ ತಂದೆ ವಿಜಯಕುಮಾರ ಬಿರಾದಾರ, ಸಾ|| ಗಂಜ ಬ್ಯಾಂಕ ಕಾಲೋನಿ ಗುಲಬರ್ಗಾ ರವರು ನನ್ನ ಮೋಟರ ಸೈಕಲ ನಂ: ಕೆಎ 32 ಆರ್ ನೇದ್ದನ್ನು ದಿನಾಂಕ: 03/09/2011 ರಂದು ಮಧ್ಯಾಹ್ನ ಸುಮಾರಿಗೆ ಶರಣಬಸವೇಶ್ವರ ಕೆರೆ ಗಾರ್ಡನ ಎದುರುಗಡೆ ನಿಲ್ಲಿಸಿ ಉದ್ಯಾನವನದಲ್ಲಿ ತನ್ನ ಖಾಸಗಿ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ್ ಠಾಣೆ ಗುನ್ನೆ ನಂ 195/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

15 October 2011

GULBARGA DIST REPORTED CRIMES

ಕಳ್ಳತನ ಪ್ರಕರಣ :
ಶಹಾಬಾದ ಠಾಣೆ
: ಶ್ರೀ ಅಣವೀರಪ್ಪಾ ತಂದೆ ಬಸವರಾಜ ಪಾಟೀಲ ವ:38 ವರ್ಷ ಜಾ:ಲಿಂಗಾಯತ ಉ:ಔಷದ ವ್ಯಾಪಾರ ಸಾ: ಲಕ್ಷ್ಮಿಗಂಜ್ ಶಹಾಬಾದ ರವರು ನಾನು ಕ್ರಿಮಿನಾಶಕ ಔಷದ ಇದ್ದು ಅದನ್ನು ದಿನಾಂಕ:14/10/2011 ರಂದು ರಾತ್ರಿ ವ್ಯಾಪಾರ ಮುಗಿಸಿಕೊಂಡು ಲಾಕ ಮಾಡಿಕೊಂಡು ಮನೆಗೆ ಬಂದಿದ್ದು ದಿನಾಂಕ;15/10/2011 ರಂದು ಬೆಳಿಗ್ಗೆ ಬಂದು ಅಂಗಡಿ ತೆರೆಯಲು ಅಂಗಡಿಯ ಬೀಗ ಮುರಿದಿದ್ದು ಗಾಬರಿಯಾಗಿ ನಮ್ಮ ಪಾರ್ಟನರ್ ಅಪ್ಪರಾವ ಗುಂಡಪ್ಪಾರವರಿಗೆ ಪೋನ ಮಾಡಿ ತಿಳಿಸಿ ತೊಗರಿಗೆ ಹೊಡೆಯುವ ಕ್ರಿಮಿನಾಶಕ ಔಷದ ಪ್ರೊಕ್ಲೈಮ್ ಎಂಬ 28 ಕೆ.ಜಿ ಕ್ರಿಮಿನಾಶಕ ಔಷಧ ಬಾಟಲಿಗಳು ಅ.ಕಿ. 1,75,000/- ರೂ. ಮತ್ತು ಗಲ್ಲಾದಲ್ಲಿದ್ದ 1,280/- ರೂ. ನಗದು ಹಣ ಯಾರೋ ಕಳ್ಳರು ಅಂಗಡಿಯ ಬಾಗಿಲದ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 157/2011 ಕಲಂ:457 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ
ಗುಲಬರ್ಗಾ ಗ್ರಾಮೀಣ ಠಾಣೆ
: ಶ್ರೀ ಯಲ್ಲಯ್ಯ ತಂದೆ ಗುಂಡಯ್ಯ ಗುತ್ತೇದಾರ ಸಾ: ನಂದಿಕೂರ ಗ್ರಾಮ ತಾ: ಜಿ: ಗುಲಬರ್ಗಾರವರು ನನ್ನ ಅತ್ತೆ ಅಂಬುಬಾಯಿ ತಿರಿಕೊಂಡಿದ್ದರಿಂದ ನನ್ನ ತಮ್ಮ ಮಲ್ಲಯ್ಯ ಮತ್ತು ಅಕ್ಕನ ಮಗ ಉದಯ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ 32 ಎಕ್ಸ್‌ 9456 ನೇದ್ದರ ಮೇಲೆ ಡಬರಾಬಾದ ಗ್ರಾಮಕ್ಕೆ ಹೊರಟಿದ್ದು ಅವರ ಹಿಂದೆ ನಾನು ಕೂಡ ಹೊರಟು ರಿಂಗ ರೋಡ ರಾಮ ಮಂದಿರ ಕ್ರಾಸದಲ್ಲಿ ಚಹಾ ಕೂಡಿಯಲು ನಿಂತಿದ್ದು, ಅದೇ ಸಮಯಕ್ಕೆ ನಂದಿಕೂರಿನ ಶ್ರೀಕಾಂತ ಗುಳ್ಳೇನವರ ಇತನು ನನಗೆ ಪೋನ ಮಾಡಿ ಉದನೂರ ಕ್ರಾಸದಲ್ಲಿ ಲಾರಿ ನಂ ಕೆಎ 32 ಎ- 0942 ನೇದ್ದರ ಚಾಲಕನು ಲಾರಿಯಲ್ಲಿ ಉಸುಕು ತುಂಬಿ ಕೊಂಡು ನಿಂತಿದ್ದ ಲಾರಿ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ಲಾರಿಯನ್ನು ಅಲಕ್ಷತನದಿಂದ ಹಿಂದೆ ತೆಗೆದು ಕೊಂಡಿದ್ದರಿಂದ ಹಿಂದೆ ಜೇವರ್ಗಿ ರಿಂಗ ರೋಡ ಕಡೆಯಿಂದ ಹೊರಟ ನಿಮ್ಮ ತಮ್ಮ ಮಲ್ಲಯ್ಯನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಲಾರಿಯ ಹಿಂದಿನ ಗಾಲಿಯಲ್ಲಿ ಸಿಕ್ಕಿ ಬಿದಿದ್ದರಿಂದ ಲಾರಿ ಹಿಂದಿನ ಬಾಡಿ ಮಲ್ಲಯ್ಯನ ತಲೆಗೆ (ಹಣೆಗೆ) ಬಡೆದಿದ್ದು & ಲಾರಿಯ ಟೈಯರ ಮಲ್ಲಯ್ಯ ಮತ್ತು ಉದಯನ ಮೈಮೇಲಿಂದ ಹೋಗಿದ್ದರಿಂದ ಇಬ್ಬರಿಗೂ ಬಾರಿ ರಕ್ತಗಾಯಗಳಾಗಿ ಮಲ್ಲಯ್ಯ ಸ್ಥಳದಲ್ಲಿ ಮೃತಪಟ್ಟಿದ್ದು ಎಂದು ತಿಳಿಸಿದನು ಗಾಯ ಗೊಂಡಿದ್ದ ಉದಯನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿದ್ದು. ತನ್ನ ತಮ್ಮನ ಶವ ಅಲ್ಲಿಯೇ ಬಿಟ್ಟು ಸರಕಾರಿ ಆಸ್ಪತ್ರೆಗೆ ಬಂದು ಉದಯನಿಗೆ ನೋಡಲಾಗಿ ಅವನು ಮೃತ್ತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.301/2011 ಕಲಂ 279,304(ಎ) ಐಪಿಸಿ ಸಂ/ 187 ಐಎಂವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಯಲ್ಲಯ್ಯ ತಂದೆ ಗುಂಡಯ್ಯ ಗುತ್ತೇದಾರ ವ:32 ವರ್ಷ ಉ: ಸಮಾದಾನ ಹೊಟೇಲದಲ್ಲಿ ಕುಕ್ಕರ ಕೆಲಸ ಜಾ: ಇಲಿಗೇರ ಸಾ: ನಂದಿಕೂರ ಗ್ರಾಮ ತಾ: ಜಿ: ಗುಲಬರ್ಗಾ ರವರು ಡಬರಾಬಾದ ಗ್ರಾಮದಲ್ಲಿ ನನ್ನ ಅತ್ತೆ ಅಂಬುಬಾಯಿ ಇವರು ತೀರಿಕೊಂಡಿದ್ದರಿಂದ ಅವರ ಅಂತ್ಯಕ್ರೀಯೆ ಕುರಿತು, ನನ್ನ ತಮ್ಮ ಮಲ್ಲಯ್ಯ ಹಾಗೂ ಅಕ್ಕನ ಮಗ ಉದಯ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ 32 ಎಕ್ಸ್‌ 9456 ನೇದ್ದರ ಮೇಲೆ ಡಬರಾಬಾದ ಗ್ರಾಮಕ್ಕೆ ಹೊರಟಿದ್ದು ಅವರ ಹಿಂದೆ ನಾನು ಹಿಂದೆ ಹೊರಟು ರಿಂಗ ರೋಡ ರಾಮ ಮಂದಿರ ಕ್ರಾಸದಲ್ಲಿ ಚಹಾ ಕೂಡಿಯಲು ನಿಂತಿದ್ದು, ಅದೇ ಸಮಯಕ್ಕೆ ನಂದಿಕೂರಿನ ಶ್ರೀಕಾಂತ ಗುಳ್ಳೇನವರ ಇತನು ನನಗೆ ಪೋನ ಮಾಡಿ ಉದನೂರ ಕ್ರಾಸದಲ್ಲಿ ಲಾರಿ ನಂ ಕೆಎ 32 ಎ- 0942 ನೇದ್ದರ ಚಾಲಕನು ಲಾರಿಯಲ್ಲಿ ಉಸುಕು ತುಂಬಿ ಕೊಂಡು ನಿಂತಿದ್ದ ಲಾರಿ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ಲಾರಿಯನ್ನು ಅಲಕ್ಷತನದಿಂದ ಒಮ್ಮೇಲೆ ವೇಗದಲ್ಲಿ ಹಿಂದೆ ತೆಗೆದು ಕೊಂಡಿದ್ದರಿಂದ ನಿಮ್ಮ ತಮ್ಮ ಮಲ್ಲಯ್ಯನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಲಾರಿಯ ಹಿಂದಿನ ಗಾಲಿಯಲ್ಲಿ ಸಿಕ್ಕಿಬಿದಿದ್ದರಿಂದ ಲಾರಿ ಹಿಂದಿನ ಬಾಡಿ ಮಲ್ಲಯ್ಯನ ತಲೆಗೆ (ಹಣೆಗೆ) ಬಡೆದಿದ್ದು & ಲಾರಿಯ ಟೈಯರ ಮಲ್ಲಯ್ಯ ಮತ್ತು ಉದಯನ ಮೈಮೇಲಿಂದ ಹೋಗಿದ್ದರಿಂದ ಇಬ್ಬರಿಗೂ ಬಾರಿ ರಕ್ತಗಾಯಗಳಾಗಿ ಮಲ್ಲಯ್ಯ ಸ್ಥಳದಲ್ಲಿ ಮೃತಪಟ್ಟಿದ್ದು ಎಂದು ತಿಳಿಸಿದನು ಗಾಯ ಗೊಂಡಿದ್ದ ಉದಯನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿದ್ದು. ಆಸ್ಪತ್ರೆಗೆ ಬಂದು ಉದಯನಿಗೆ ನೋಡಲಾಗಿ ಅವನು ಮದ್ಯಾಹ್ನ ಮೃತ್ತಪಟ್ಟಿರುತ್ತಾನೆ ಎಂದು ಗೋತ್ತಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.301/2011 ಕಲಂ 279,304(ಎ) ಐಪಿಸಿ ಸಂ/ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.

ವಂಚನೆ ಪ್ರಕರಣ :

ಸ್ಟೇಷನ ಬಜಾರ ಪೊಲೀಸ ಠಾಣೆ : ಶ್ರೀ ಉದಯ ಶಂಕರ ತಂದೆ ಸುಭಾಷಚಂದ್ರ ಶೆಟ್ಟಿ ಸಾ|| ಇಂಟರ ನ್ಯಾಷನಲ್ ಹೋಟೇಲ ಹತ್ತಿರ ಭಾಗ್ಯವಂತಿ ನಗರ ಗುಲಬರ್ಗಾ ರವರು ನಾನು ಆಳಂದ ರಸ್ತೆಯಲ್ಲಿರಯವ ಶೆಟ್ಟಿ ಕನಸ್ಟ್ರಕ್ಷನ ಕಂಪನಿಯಲ್ಲಿ ಪಾಲುದಾರನಾಗಿದ್ದು ಮಲ್ಟಿ ಪ್ಲೆಕ್ಸ ಸಿನೆಮಾ ಚಿತ್ರ ಮಂದಿರವಿದೆ. ಇದನ್ನು ಫನ್ ಮಲ್ಟಿ ಪ್ಲೆಕ್ ಫೆಕ್ಸ ಮುಂಬಯಿ ಎಂಬ ಚಲನಚಿತ್ರ ನಡೆಸುವ ಕಂಪನಿಗೆ ನವೆಂಬರ 2006 ರಲ್ಲಿ 5 ವರ್ಷಗಳ ಅವಧಿಗೆ ಬಾಡಿಗೆ ನೀಡಿದ್ದು, ಕರ್ನಾಟಕ ಮನೊರಂಜನಾ ತೆರಿಗೆ ಚಿತ್ರ ಮಂದಿರದ ಮಾಲಿಕರಿಗೆ ವಿನಾಯಿತಿ ಇರುತ್ತದೆ. ಈ ಸೌವಲತ್ತು ಆರ್ಥಿಕ ಸಹಾಯವಾಗುತ್ತಿದ್ದು ಇದು ಚಿತ್ರ ಮಂದಿರದ ಮಾಲೀಕರಿಗೆ ಮಾತ್ರ ಇರುತ್ತದೆ. ಆದರೆ ಬಾಡಿಗೆದಾರರಿಗೆ ಸಿಗುವುದಿಲ್ಲ. ದಿ:04/10/2006 ರಂದು ಮನೋರಂಜನಾ ತೆರಿಗೆ ಕಛೇರಿ ಗುಲಬರ್ಗಾದಲ್ಲಿ ಚಲನಚಿತ್ರ ನಡೆಸಲು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದು ನಾನು ಸಲ್ಲಿಸಿದ ಅರ್ಜಿಯನ್ನು ತಾವೆ ಸ್ವಂತ ಸಲ್ಲಿಸಿರುವುದಾಗಿ ನಾನೇ ಅವರು ಎಂಬಂತೆ ತೋರಿಸಿ ಅರ್ಜಿಯ ಮೇಲೆ ಅನುಪ್ ಇವರು ತಮ್ಮ ಬಾವ ಚಿತ್ರವನ್ನು ಅಂಟಿಸಿ ಮೋಸ ಮಾಡಿದ್ದು ದಿ : 17/11/2006 ರಂದು ಹಿಂದಿನ ದಿನಾಂಕ : 15/11/2006 ಅಂತಾ ಹಾಕಿ ಪರವಾನಿಗೆ ಪಡೆದಿರುವರು. ಹೀಗಾಗಿ ಸರಕಾರದಿಂದ ಸಿಗಬೇಕಾದ ತೆರಿಗೆ ವಿನಾಯಿತಿಯನ್ನು ನನ್ನ ಬಾಡಿಗೆದಾರರು ಸ್ವಂತ ಪಡೆಯುವ ದುರುದ್ದೇಶದಿಂದ ಹಾಗೂ ತಾವೇ ಸ್ವಂತ ನಮ್ಮ ಚಲನಚಿತ್ರ ಮಾಲೀಕರೆಂದು ಬಾಸವಾಗುವಂತೆ ವರ್ತಿಸಿ. ಮೋಸ ಮಾಡಿದ ಅನುಪ್ ಉಪಾಧ್ಯಕ್ಷರು ಫನ್ ಮಲ್ಟಿ ಪ್ಲೆಕ್ಸ ಹಾಗೂ ವಿಶಾಲ ಆನಂದ ಸಿ.ಓ.ಓ. ಫನ್ ಮಲ್ಟಿ ಫೆಕ್ಸ ಹಾಗೂ ಅತುಲ್ ಗೋಯಲ್ ಸಿ.ಇ.ಓ. ಫನ್ ಮಲ್ಟಿ ಫೆಕ್ಸ ಇವರ ವಿರುದ್ಧ ವಂಚನೆ ದಾಖಲಾತಿ ಸೃಷ್ಠಿ ಮತ್ತು ವ್ಯಕ್ತಿ ಸುಳ್ಳಾಗಿ ಪ್ರತಿನಿಧಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 183/11 ಕಲಂ 419, 420, 468, 471, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :

ಜೇವರ್ಗಿ ಪೊಲೀಸ್ ಠಾಣೆ: ಸೂರ್ಯಕಾಂತ ತಂದೆ ಶರಣಪ್ಪ ಅವರಾದಿ ಸಾ: ಬಿದನೂರ ತಾ: ಅಫಜಲಪೂರ ರವರು ನಾವು ನಿನ್ನೆ ದಿನಾಂಕ: 14/10/2011ರಂದು ತಮ್ಮ ಓಣಿಯ ಶರಣಮ್ಮ ಮ್ಯಾಕೇರಿ ಇವರ ತಂಗಿಯ ಮಗ ಯಾದಗಿರಿಯಲ್ಲಿ ತೀರಿಕೊಂಡಿದ್ದರಿಂದ ಗ್ರಾಮದ ಪರಮೇಶ್ವರನ ಕ್ರೋಜರ ವಾಹನ ನಂಬರ ಕೆಎ.22 ಎಮ್.ಬಿ 5656 ನೇದ್ದರಲ್ಲಿ ನಾನು ಮತ್ತು ಓಣಿಯ 20 ಜನರು ಶವ ಸಂಸ್ಕಾರ ಮುಗಿಸಿಕೊಂಡು ವಾಪಸ ಯಾದಗಿರಿಯಿಂದ ಶಹಾಪೂರ - ಜೇವರ್ಗಿ ಮಾರ್ಗವಾಗಿ ಬರುತ್ತಿದ್ದಾಗ ದಿನಾಂಕ: 14-15/10/2011 ರಂದು ಮಧ್ಯರಾತ್ರಿ 00-30 ಗಂಟೆಗೆ ಕ್ರೋಜರ ವಾಹನದ ಎಡ ಭಾಗದ ಹಿಂದಿನ ಟೈಯರ ಪಂಚ್ಚರ ಆಗಿದ್ದರಿಂದ ಕ್ರೋಜರನ್ನು ಶಹಾಫೂರ - ಜೇವರ್ಗಿ ಮೇನ ರೋಡಿನ ಅವರಾಧ ಕ್ರಾಸ ಇನ್ನೂ ಒಂದು ಕೀ,ಮಿ . ಅಂತರದಲ್ಲಿದ್ದಾಗ ರೋಡಿನ ಸೈಡಿಗೆ ನಿಲ್ಲಿಸಿ ಕ್ರೋಜರ ಚಾಲಕನು ಟೈಯರ ಪಂಚ್ಚರ ತೆಗೆಯಿಸಿಕೊಳ್ಳಲು ಸಂಗಡ ತಿಪ್ಪಣ್ಣ ತಳ್ಳಕೇರಿ ಇತನನ್ನು ಕರೆದುಕೊಂಡು ಹೋದಾಗ ಕ್ರೋಜರನಲ್ಲಿ ಇದ್ದ ನಮ್ಮೂರ ಪ್ರಯಾಣಿಕರು ಕೆಲವು ಜನರು ಕ್ರೋಜರನಲ್ಲಿ ಕುಳಿತ್ತಿದ್ದರೂ , ಕೆಲವು ಜನರು ಕ್ರೋಜರನಿಂದ ಕೆಳಗೆ ಇಳಿದು ಕ್ರೋಜರ ಮುಂದುಗಡೆ ರೋಡಿನಲ್ಲಿ ಕುಳಿತು ಮಾತಾನಾಡುತ್ತಾ ಇದ್ದಾಗ ಮಧ್ಯ ರಾತ್ರಿ 01-00 ಗಂಟೆಗೆ ಶಹಾಪೂರ ಕಡೆಯಿಂದ ಒಂದು ಲಾರಿ ನಂಬರ ಕೆಎ. 25 ಬಿ 2295 ನೇದ್ದರ ಚಾಲಕನು ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನಾವು ಕುಳಿತುಕೊಂಡಿದ್ದ ಕ್ರೋಜರಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಡಿಕ್ಕಿ ಪಡಿಸಿದ ಪರಿಣಾಮ ಸುಭದ್ರಬಾಯಿ ಗಂಡ ಶಿವಪ್ಪ ಪಾಳೆದ , ವ: 60 ವರ್ಷ, ಸಾಬವ್ವ ಗಂಡ ಚಂದ್ರಶ್ಯಾ ನಡಗಟ್ಟಿ, ವ: 45 ವರ್ಷ, ಮರೆಮ್ಮ ಗಂಡ ಸೈದಪ್ಪ ಹಳ್ಳಿ, ವ: 50 ವರ್ಷ, ಮರೆಮ್ಮ ಗಂಡ ಮರೆಪ್ಪ ಹಳ್ಳಿ, ವ: 40 ವರ್ಷ, ರತ್ನಾಬಾಯಿ ಗಂಡ ದೇವಪ್ಪ ಹೇರೂರ, 50 ವರ್ಷ, ಶರಣಮ್ಮ ಗಂಡ ಸೈದಪ್ಪ ಮ್ಯಾಕೇರಿ, ವ: 40 ವರ್ಷ, ಹಣಮಂತ ತಂದೆ ಬಸಪ್ಪ ಹಳ್ಳಿ, ವ: 50 ವರ್ಷ, ಶರಣಮ್ಮ ಗಂಡ ಹಾಜಪ್ಪ ಮ್ಯಾಕೇರಿ ವ: 30 ವರ್ಷ, ಸಾ: ಎಲ್ಲಾರೂ ಬಿದನೂರ ಗ್ರಾಮ ತಾ: ಅಫಜಲಪೂರ ರವರು 8 ಜನ ಸ್ಥಳದಲ್ಲಿ ಸತ್ತು , 9 ಜನರಿಗೆ ಗಾಯಾಗಳಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 180/2011 ಕಲಂ 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.


GULBARGA DIST REPORTED CRIMES

ಹೊಟ್ಟೆ ಬೇನೆ ತಾಳಲಾರದೆ ತನ್ನ 8 ತಿಂಗಳ ಹಸುಳೆಯನ್ನು ಬಾವಿಯಲ್ಲಿ ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ :
ಮುಧೋಳ ಪೊಲೀಸ್ ಠಾಣೆ:
ಶ್ರೀ ಮನೋಹರ ತಂದೆ ರಾಬರ್ಟ ಸಾ|| ಬುರುಗಪಲ್ಲಿ ರವರು ನನ್ನ ಮದುವೆ ಸಂತೋಷಮ್ಮಾ ಇವಳೊಂದಿಗೆ 8 ವರ್ಷದ ಹಿಂದೆ ಆಗಿದ್ದು ನನಗೆ ಇಬ್ಬರು ಗಂಡು ಮಕ್ಕಳಾಗಿದ್ದು ನನ್ನ ಹೆಂಡತಿಯಾದ ಸಂತೋಷಮ್ಮಾ ಇವಳಿಗೆ ಹೊಟ್ಟೆಬೇನೆ ಇದ್ದು ಆಸ್ಪತ್ರೆಗೆ ತೋರಿಸಿದರೂ ಆರಾಮಾಗಿರುವುದಿಲ್ಲಾ. ದಿನಾಂಕ: 12-10-2011 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದೆವು ಮಧ್ಯ ರಾತ್ರಿ ದಿನಾಂಕ: 13-10-2011 ರಂದು 01-00 ಗಂಟೆಯ ಸುಮಾರಿಗೆ ನಾನು ಎದ್ದು ನೋಡಿದಾಗ ನನ್ನ ಹೆಂಡತಿ ಸಂತೋಷಮ್ಮಾ ಹಾಗೂ ನನ್ನ ಮಗ ನವಿನ ಕುಮಾರ 8 ತಿಂಗಳು ಮಗು ಮನೆಯಲ್ಲಿ ಇರಲಿಲ್ಲಾ. ನಾನು ರಾತ್ರಿ ಹುಡುಕಾಡಲಾಗಿ ಇಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನಮ್ಮ ಹೊಲದ ಬಾವಿಯಲ್ಲಿ ನನ್ನ ಮಗ ನವೀನ ಕುಮಾರ ಈತನ ಮೃತದೇಹ ನೀರಿನಲ್ಲಿ ತೇಲಿದ್ದು ಗೊತ್ತಾಗಿ ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಹೆಂಡತಿ ಹಾಗೂ ನನ್ನ ಮಗನ ಮೃತದೇಹ ನೀರಿನಲ್ಲಿದ್ದು ನನ್ನ ಹೆಂಡತಿಯಾದ ಸಂತೋಷಮ್ಮಾ ಇವಳ ಹೊಟ್ಟೆಯ ಬೇನೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ನನ್ನ ಮಗ ನವೀನ ಕುಮಾರ ಈತನಿಗೆ ಬಾವಿಯಲ್ಲಿ ಹಾಕಿ ತಾನು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 99/2011 ಕಲಂ: 302 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ .

ಅಪಘಾತ ಪ್ರಕರಣ ಒಂದು ಸಾವು :

ಮಳಖೇಡ ಪೊಲೀಸ ಠಾಣೆ : ನಾಗಪ್ಪ ತಂದೆ ಸಿದ್ದಪ್ಪ ಪುಜಾರಿ ಸಾ|| ತುಮಕುಂಟಾ ರವರು ನಾನು ಮತ್ತು ಮಲ್ಲಿನಾಥ ತಂದೆ ನಾಗಣ್ಣ ಪುಜಾರಿ ಇಬ್ಬರು ಕುಡಿಕೊಂಡು ಮಲ್ಲಿನಾಥನ ಅತ್ತಿಗೆ ಶರಣಮ್ಮ ಇವಳ ಊರಾದ ರಿಬ್ಬನಪಲ್ಲಿ ಗ್ರಾಮಕ್ಕೆ ಹೋಗಿ ಭೆಟ್ಟಿ ನೀಡಿ ವಾಪಸ್ಸು ಬರುವಾಗ ಮೋಟಾರ ಸೈಕಲ್ ನಂ: ಕೆ.ಎ 33 ಈ-2546 ನಡೆಸುತ್ತ ಸೇಡಂ ಗುಲಬರ್ಗಾ ರೋಡಿನ ಮೇಲೆ ಹುಡಾ (ಕೆ) ಗೇಟಿನ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಂದು ಜೀಪ ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಜೀಪ ಅನ್ನು ನಡೆಸುತ್ತ ಬಂದು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದನು . ನಾನು ಮತ್ತು ಮಲ್ಲಿನಾಥನು ಸ್ಥಳದಲ್ಲಿ ಕೆಳಗೆ ಬಿದ್ದೆವು . ಮಲ್ಲಿನಾಥನು ಸ್ಥಳದಲ್ಲಿಯೆ ಭಾರಿ ಗಾಯ ಹೊಂದಿ ಮೃತಪಟ್ಟಿದ್ದು ನನಗೆ ಅಲ್ಲಲ್ಲಿ ತರಚಿದ ಗಾಯ ಮತ್ತು ಗುಪ್ತ ಪೆಟ್ಟಾಗಿದ್ದು ಸಕಾರಿ ಆಸ್ಪತ್ರೆ ಮಳಖೇಡ ಬಂದು ಉಪಚಾರ ಪಡೆಯುತ್ತಿದ್ದೆನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 94/2011 ಕಲಂ 279.337.304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ಶ್ರೀಮತಿ ಅನ್ನಪೂರ್ಣ @ ಅನೀತಾ ಗಂಡ  ಶಿವಶರಣ ಸಿಂಗೆ ಸಾ|| ದರ್ಗಾಶಿರೂರ್ ರವರು ನಾನು   ದಿನಾಂಕ 11/10/2011 ರಂದು  ಸಾಯಂಕಾಲ 5 ಗಂಟೆ  ಸುಮಾರಿಗೆ   ಮನೆಯಲ್ಲಿದ್ದಾಗ  ನಮ್ಮ ಮನೆ ಮುಂದಿನ  ಅಂಗಳದಲ್ಲಿ  ಬಂದು ದಿನೇಶ  ತಂದೆ  ಶಿವಲಿಂಗಪ್ಪ ಸಿಂಗೆ ರವರು ಬಂದು  ನನಗೆ   ನಮ್ಮ ತಾಯಿಯ  ಸಂಗಡ   ಜಗಳ ತಗೆಯುತ್ತಿದ್ದಿ  ಅತಾ ಅವಾಚ್ಯವಾಗಿ ಬೈದು ನನಗೆ ಯಾಕೆ ಬೈಯುತ್ತಿ  ಅಂತಾ  ಅಂದಿದಕ್ಕೆ ನಿನ್ನದು  ಬಹಳ ಆಗಿದೆ  ಅನ್ನುತ್ತಾ  ಕೈಯಿಂದ ಎಡಗಡೆ  ಕಪಾಳಕ್ಕೆ  ಎದೆಯ ಮೇಲೆ  ಹೊಟ್ಟೆಯ ಮೇಲೆ  ತೆಲೆಯ ಮೇಲೆ  ಕಿವಿಯ  ಮೇಲೆ ಹೊಡೆದು  ಸೀರಿ  ಹಿಡಿದು  ಏಳೆದಾಡಿರುತ್ತಾನೆ   ಅವರ  ತಾಯಿಯಾದ  ಇಮಲಾಬಾಯಿಯಸಹ  ಹೊಲದ ವಿಷಯದ ಬಗ್ಗೆ  ಜಗಳ   ತಗೆಯುತ್ತಿರುತ್ತಾಳೆ ಅಂತಾ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 64/2011  ಕಲಂ 323,324,354,504,506  ಸಂಗಡ   34  ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ ..