POLICE BHAVAN KALABURAGI

POLICE BHAVAN KALABURAGI

07 September 2011

GULBARGA DIST REPORTED CRIMES

ಕಳವು ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ರಾಜಕುಮಾರ ತಂದೆ ಸಿದ್ರಾಮಪ್ಪ ಸಾ|| ಮನೆ ನಂ 9-96 ಶಹಬಜಾರ ಗುಲಬರ್ಗಾರವರು, ದಿ: 06.09.11 ರಂದು ನಾನು ಕೊರಂಟಿ ಹನುಮಾನ ಗುಡಿಯ ಸಮೀಪ ನನ್ನ ವಾಹನ ಹಿರೊ ಹೊಂಡಾ ಸ್ಪೆಲೆಂಡರ್ ನಂ ಕೆ ಎ 32 ಎಸ್ 8184 ಅಂದಾಜು 30000/- ರೂ. ಮೌಲ್ಯದ್ದನ್ನು ನಿಲ್ಲಿಸಿ ದೇವಸ್ಥಾನದ ಒಳಗೆ ಹೋಗಿ ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ವಾಹನವನ್ನು ಪತ್ತೆ ಮಾಡಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಹರಿಶಕುಮಾರ ತಂದೆ ಮಚ್ಛೇಂದ್ರರಾವ್ ಪೊದ್ದಾರ || ಡಿಸಿ ಆಫಿಸಿನ ಆಹಾರ ಶಾಖೆಯಲ್ಲಿ ಕಂಪ್ಯೂಟರ್ ಕೆಲಸ ಸಾ|| ಮಿನಿ ವಿಧಾನ ಸೌದ ಗುಲಬರ್ಗಾರವರು ನಾನು ಬೆಳಗ್ಗೆ 10.30 ಗಂಟೆಗೆ ಪ್ರತಿ ದಿವಸದಂತೆ ಕೆಲಸದ ನಿಮಿತ್ಯ ಮಿನಿ ವಿಧಾನ ಸೌದದಲ್ಲಿ ನನ್ನ ಹೀರೊ ಹೊಂಡಾ ಪ್ಯಾಶನ ನಂ ಕೆ.ಎ 39 ಜೆ 1981 ನಿಲ್ಲಿಸಿ ನನ್ನ ಕರ್ತವ್ಯ ಮುಗಿಸಿಕೊಂಡು ಸಾಯಂಕಾಲ 6.30 ಗಂಟೆಗೆ ಬಂದು ನೋಡಲು ನನ್ನ ವಾಹನ ಇರಲಿಲ್ಲಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ. ಶ್ರೀ ಅನುಸೂಯ ಗಂಡ ಧರ್ಮವೀರ ವಣಕೆ ಸಾ; ಖಂಡ್ರೆ ಗಲ್ಲಿ ಬಾಲ್ಕಿ ತಾಃಜಿಃ ಬೀದರ ರವರು ನಾನು ಮತ್ತು ನನ್ನ ಅಕ್ಕ ಸುಜಾತಾ ಇಬ್ಬರೂ ಕೂಡಿಕೊಂಡು ತಮ್ಮ ತಂಗಿ ಸಿದ್ದೇಶ್ವರಿ ಇವಳನ್ನು ಮಾತನಾಡಲು ನಡೆದುಕೊಂಡು ಹೋಗುತ್ತಿರುವಾಗ ಶ್ರೀ ಶಿವಶರಣಪ್ಪ ಸಾವಳಗಿ ಇವರ ಮನೆಯ ಮುಂದೆ ಹೋಗುವ ರಸ್ತೆಯಲ್ಲಿ ಹಿಂದಿನಿಂದ ಇಬ್ಬರೂ ಪಲ್ಸರ್ ಮೋಟಾರ ಸೈಕಲ ಚಲಾಯಿಸಿಕೊಂಡು ಬಂದು ನನ್ನ ಕೊರಳಲ್ಲಿದ್ದ 4 ತೊಲೆ ಬಂಗಾರದ ಮಂಗಳ ಸೂತ್ರ ಅಃಕಿಃ 1,15,000/- ರೂ. ನೇದ್ದನ್ನು ಹರಿದುಕೊಂಡು ವೇಗವಾಗಿ ಶಿವಮಂದಿರದ ಕಡೆಗೆ ಹೋದರು. ಕತ್ತಲಲ್ಲಿ ಮೋಟಾರ ಸೈಕಲ ನಂಬರ ನೋಡಲಿಲ್ಲ. ಅದರಲ್ಲಿ ಒಬ್ಬನು ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದು ಇಬ್ಬರೂ ಅಂದಾಜು 22-25 ವಯಸ್ಸಿನವರು ಇರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀಮತಿ ಸಹನಾ ಗಂಡ ಜೂಜು ಕಾಳೆ ಸಾ|| ಝಳಕಿ (ಕೆ) ಪಾರದಿ ತಾಂಡ ರವರು ನನ್ನ ಗಂಡ ಜೂಜು ಕಾಳೆ ತನಗೆ ಇದ್ದ ಹೊಟ್ಟೆ ನೋವು ತಾಳಲಾರದೇ ಮನಯೆ ಮುಂದನ ಬೇವಿನ ಗಿಡಕ್ಕೆ ಉರಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಯು.ಡಿ,.ಅರ್. ಪ್ರಕರಣ ದಾಖಲಾಗಿದೆ.

06 September 2011

GULBARGA DIST REPORTED CRIMES

ಕೊಲೆ ಪ್ರಕರಣ:

ಮಾದನ ಹಿಪ್ಪರಗಾ ಠಾಣೆ : ಶ್ರೀ ಕಲ್ಲಪ್ಪ ತಂದೆ ನಿಂಗಪ್ಪ ಕೆರೂರ್ ವಯಾ 28 ವರ್ಷ ಉ : ಒಕ್ಕಲುತನ ಸಾ: ಮಾದನ ಹಿಪ್ಪರಗಾ ರವರು ನಾನು ನನ್ನ ಅಣ್ಣ ಗುಂಡಪ್ಪ ಕೂಡಿ ದಿನಾಂಕ;05/09/2011 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ಹೊಲಕ್ಕೆ ಹಾಲು ಹಿಂಡಿಕೊಂಡು ಬರಲು ಹೊದೆವು ಹಾಲು ಹಿಂಡಿದ ನಂತರ ಅಂದಾಜು 6:30 ಸುಮಾರಿಗೆ ನನ್ನ ಅಣ್ಣ ಸೈಕಲ್ ಮೇಲೆ ಮುಂದೆ ಮುಂದೆ ಹೊರಟನು ನಾನು ಹಿಂದೆ ಹಿಂದೆ 20 ರಿಂದ 30 ಮಾರು ಅಂತರದಲ್ಲಿ ಹಿಂದೆ ಬರುತ್ತಿದ್ದೆನು. ಅಷ್ಷರಲ್ಲಿ ಮಲ್ಕಾಜೆಪ್ಪ ಕಲಶೇಟ್ಟಿ ಬಂದಾರಿಯ ಕಾಲು ರಸ್ತೆಯಲ್ಲಿ ಹೊಗುವಾಗ ನನ್ನ ಅಣ್ಣ ಚಿರಿದ ಸಪ್ಪಳ ಕೇಳಿಸಿತು. ನಾನು ಎನು ಅಂತಾ ನೊಡುವಾಗ ಶಿವಪುತ್ರಪ್ಪ ತನ್ನ ಕೈಯಲ್ಲಿದ್ದ ಕೊಡೆಲೆಯಿಂದ ನನ್ನ ಅಣ್ಣನ ತಲೆಗೆ ಹೊಡೆದೆನು ಹೊಡೆಯ ಬೇಡಿರಿ ಅಂತಾ ನಾನು ಚಿರಿದೆನು ಅಷ್ಷರಲ್ಲಿ ಅಲ್ಲಯೇ ಜೊತೆಗೆ ಇದ್ದ ಮಾಳಪ್ಪ ಇವನು ಕೂಡಾ ತನ್ನ ಕೈಯಲ್ಲಿರುವ ಕೊಡಲಿಯಿಂದ ಗುಂಡಪ್ಪನಿಗೆ ಹೊಡೆದನು ಆಗ ಅಲ್ಲಯೆ ಇದ್ದ ಮಹಾದೇವ ತಂದೆ ಶರಣಪ್ಪ, ಬೀರಪ್ಪ ತಂದೆ ಸಿದ್ದಪ್ಪ , ಶರಣಪ್ಪ ತಂಧೆ ಬೀರಪ್ಪ ಶಿಲಿಂಗಪ್ಪ ತಂಧೆ ಬೀರಪ್ಪ ಶಾಂತಪ್ಪ ತಂದೆ ಬೀರಪ್ಪ ಈರಣ್ಣಾ ತಂದೆ ಶರಣಪ್ಪ ಬಸಪ್ಪ ತಂದೆ ಮಾಹಾದೇವ ಸಾ|| ಎಲ್ಲರೂ ಮದಾನ ಹಿಪಪರಗಾ ಇವರೆಲ್ಲರೂ ಕೂಡಿ ಹೊಡಿ ಸೂಳಿಮಗನಿಗೆ ಹೊಡೆಯಿರಿ ಮುಗಿಸಿಬಿಡರಿ ಅಂತಾ ಚಿರಾಡುತ್ತಿದ್ದರು ಸಮೀಪ ಬಂದರೆ ನಿನ್ನನ್ನು ಮುಗಿಸುವದಾಗಿ ಹೆದರಿಸಿದರು ನಾನು ಚಿರಾಡಿಲಿಕ್ಕೆ ಹತ್ತಿದಾಗ ನಂತರು ಈವರೆಲ್ಲರೂ ಒಡಿಹೊದರು ನಂತರ ನನ್ನಅಣ್ಣನಹತ್ತಿರ ನೊಡಲಾಗಿ ಬಲಗಡೆ ತಲೆಗೆ ಕಪಾಳಕ್ಕೆ ಬಲಗೈಹೆಬ್ಬರಳಿಗೆ ಕುತ್ತಿಗೆಗೆ ಹೊಡೆದು ಕೊಲೆಮಾಡಿದ್ದು ಇರುತ್ತದೆ. ನಮ್ಮಅಣ್ಣ ಬರುವ.ದಾರಿಗೆ ಗಿಡಕಂಟಿಯ ಮರೆಯಾಗಿ ಅಡಗಿ ಕುಳಿತು ಎಲ್ಲಾ ಒಂಬತ್ತು ಜನರು ಹಿಂದೆ ನಮ್ಮಗೂ ಅವರಿಗೆ ಆದ ಜಮಿನು ತಂಟೆ ವಿಷಯದಿಂದ ಹೊಡೆದು ಕೊಲೆ ಮಾಡಿರುತ್ತಾರೆ .ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಸಂಚಾರಿ ಪೊಲೀಸ್ ಠಾಣೆ :
ದೇವಿಂದ್ರಕುಮಾರ ತಂದೆ ಪರಶುರಾಮ ನಡವಿನ ಮನಿ ಸಾ: ರಾಜಾಪೂರ ಏರಿಯಾ ಶಹಾಬಜಾರ ರೋಡ ಗುಲಬರ್ಗಾ ರವರು ನಾನು ನಿನ್ನೆ ನನ್ನ ಮೋಟಾರ ಸೈಕಲ ನಂ: ಕೆಎ.32 ಡಬ್ಲ್ಯೂ 3707 ನೇದ್ದರ ಮೇಲೆ ಕುಳಿತು ಸವೇರಾ ಹೋಟೆಲ ಮುಂದೆ ಬರುತ್ತಿರುವಾಗ ಹಿಂದಿನಿಂದ ಕಾರ ನಂ : ಎಮ್.ಹೆಚ. 04 ಎ.ಪಿ 6530 ನೇದ್ದರ ಚಾಲಕ ತನ್ನ ವಾಹನ ಅತೀವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಮೋಟರ ಸೈಕಲಗೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.